Police Bhavan Kalaburagi

Police Bhavan Kalaburagi

Thursday, August 10, 2017

BIDAR DISTRICT DAILY CRIME UPDATE 10-08-2017¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 10-08-2017

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 215/2017, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 09-08-2017 ರಂದು ಮಾಸಿಮಾಡ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಬಾಂಬೆ ಮಟಕಾ ಚೀಟಿ ಬರೆದು ಕೊಡುತ್ತಾ 1 ರೂ. ಗೆ 80/- ರೂ. ಅಂತಾ ಹೇಳಿ ಸಾರ್ವಜನಿಕರಿಗೆ ಆಕರ್ಷಣೆ ಮಾಡಿ ಹಣ ಪಡೆಯುತ್ತಿದ್ದಾನೆ ಅಂತಾ ವಿಜಯಕುಮಾರ ಪಿ.ಎಸ್.ಐ ಧನ್ನೂರಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಪಡೆದು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮಾಸಿಮಾಡ ಗ್ರಾಮದ ಬಸವರಾಜ ಮುದಾಳೆ ರವರ ಹೊಲದ ಹತ್ತಿರ ಮರೆಯಾಗಿ ನಿಂತು ನೋಡಲು ಮಾಸಿಮಾಡ ಗ್ರಾಮದ ಬೀರಲಿಂಗೇಶ್ವರ ಗುಡಿಯ ಹತ್ತಿರ ಆರೋಪಿ ದಿಗಂಬರ ತಂದೆ ಬೀರಪ್ಪಾ ಬೆನಚಿಂಚೊಳಿ ವಯ: 30 ವರ್ಷ, ಜಾತಿ: ಕುರುಬರು, ಸಾ: ಮಾಸಿಮಾಡ, ತಾ: ಭಾಲ್ಕಿ, ಜಿ: ಬೀದರ ಇತನು ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂಪಾಯಿಗಳು ಕೊಡುತ್ತೆನೆ ಅಂತಾ ಬಾಂಬೆ ಮಟಕಾ ಚೀಟಿ ಬರೆದು ಕೊಡುತ್ತಾ ಹಣ ಪಡೆದು ಜನರಿಗೆ ಆಕರ್ಷಣೆ ಮಾಡಿ ಅಕ್ರಮವಾಗಿ ಹಣ ಪಡೆದು ಬಾಂಬೆ ಮಟಕಾ ಚೀಟಿ ಬರೆದು ಕೊಡುತ್ತಿರುವುದನ್ನು ಖಚಿತ ಪಡೆಸಿಕೊಂಡು ಸಮವಸ್ತ್ರದಲ್ಲಿದ್ದ ಪೊಲೀಸರು ಹಠಾತ್ತನೆ ದಾಳಿ ಮಾಡಿದಾಗ ಮಟಕಾ ಬರೆಸಿಕೊಳ್ಳುತ್ತಿದ್ದ ಜನರು ಪೊಲೀಸರನ್ನು ನೋಡಿ ಓಡಿ ಹೋಗಿರುತ್ತಾರೆ, ನಂತರ ಆರೋಪಿಗೆ ಹಿಡಿದು ಆತನ ಅಂಗ ಝಡ್ತಿ ಮಾಡಲಾಗಿ ಆತನ ಹತ್ತಿರದಿಂದ 1) ಮಟಕಾ ಅಂಕೆ ಸಂಖ್ಯೆವುಳ್ಳ 2 ಚೀಟಿಗಳು, 2) ನಗದು ಹಣ 980/- ರೂ., 3) 1 ಸ್ಯಾಮಸಂಗ್ ಕಂಪನಿಯ ಹಳೆಯ ಮೊಬೈಲ್ ಅ.ಕಿ. 500/- ರೂ. ಹಾಗೂ 1 ಬಾಲ ಪೆನ್ ದೊರೆತವು,  ಸದರಿಯವಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ದಿನಾಂಕ 10-08-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: