Police Bhavan Kalaburagi

Police Bhavan Kalaburagi

Wednesday, August 9, 2017

Yadgir District Reported Crimes


                                   Yadgir District Reported Crimes
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 126/2017 ಕಲಂ, 143, 147, 148, 323, 324, 504, 506 ಸಂಗಡ 149 ಐಪಿಸಿ;- ದಿನಾಂಕ: 09/08/2017 ರಂದು 02.30 ಪಿಎಂ ಕ್ಕೆ ಪಿಯರ್ಾದಿ ಶ್ರೀಮತಿ. ದೇವಿಬಾಯ ಗಂಡ ಶಂಕರ ರಾಠೋಡ ವಯಾ: 60 ವರ್ಷ ಜಾ: ಲಂಬಾಣಿ ಉ: ಮನೆಗೆಲಸ ಸಾ: ಗಂಗೂನಾಯಕ ತಾಂಡಾ ಗೋಗಿ ತಾ|| ಶಹಾಪೂರ ರವರು ಠಾಣೆಗೆ ಹಾಜರಾಗಿ ಪಿಯರ್ಾದಿ ಅಜರ್ಿ ನೀಡಿದ್ದು, ಅದರ ಸಾರಂಶವೇನಂದರೆ, ದಿನಾಂಕ: 05/08/2017 ರಂದು ರಾತ್ರಿ 11.10 ಪಿಎಂಕ್ಕೆ 12 ಜನ ಆರೋಪಿತರೆಲ್ಲರೂ ಕೂಡಿ ಬಂದು, ಬಂದವರೆ, ಎಲೆ ಸೂಳೆ ಮಕ್ಕಳೆ ನಿಮ್ಮದು ಬಹಳ ಸೊಕ್ಕು ಆಗಿದೆ ನಿಮ್ಮ ಸೀತಾಬಾಯಿಗೆ ಮುಂದಮಾಡಿ ಜಗಳಾ ಮಾಡುತ್ತೀರಿ ಅಂತಾ ಅವಾಶ್ಚವಾಗಿ ಬೈಯುತ್ತಾ ಇದ್ದಾಗ, ಶಿವಾಜಿ ತಂದೆ ಪಾಪ ರಾಠೋಡ ಈತನು ನನ್ನ ಮಗ ಬಸವರಾಜ ಈತನಿಗೆ ಕಲ್ಲಿನಿಂದ ಎಡಗಣ್ಣಿನ ಮೇಲೆ ಹೊಡೆದು ಗಾಯ ಮಾಡಿದನು. ಆಗ ನನ್ನ ಇನ್ನೊಬ್ಬ ಮಗ ಕೃಷ್ಣಾ ಈತನಿಗೆ ಮನ್ನು ತಂದೆ ಶಂಕರ ರಾಠೋಡ ಮತ್ತು ತಿಪ್ಪಣ್ಣ ತಂದೆ ಸೋಮ್ಲು ಚವ್ಹಾಣ ಇವರು ಕುತ್ತಿಗೆಗೆ ಮತ್ತು ಬೆನ್ನಿಗೆ ಕೈಯಿಂದ ಹೊಡೆದಿರುತ್ತಾರೆ. ಆಗ ರಾಜು ಈತನು ನನ್ನ ಗಂಡನಿಗೆ ಕೈಯಿಂದ ಎದೆಗೆ ಹೊಡೆದಿರುತ್ತಾನೆ. ತಾರಿಬಾಯಿ ಇವಳು ಕೈಯಿಂದ ನನ್ನ ಬೆನ್ನಿಗೆ ಹೊಡೆದಿರುತ್ತಾಳೆ. ಉಳಿದವರು ಹೋಡಿರಿ ಇವರಿಗೆ ತಾಂಡಾದಲ್ಲಿ ಇವರದು ಬಹಳ ಆಗಿದೆ ಅಂತಾ ಬೈಯುತ್ತಾ ನಮಗೆ ಜಗ್ಗಾಡಿ ಕೈಯಿಂದ ನಮ್ಮೆಲ್ಲರಿಗೂ ಹೊಡೆದಿರುತ್ತಾರೆ. ಆಗ ಗೋವಿಂದ ತಂದೆ ಬಾಬು ಮತ್ತು ಶಾಂತಿಬಾಯಿ ಗಂಡ ಲೋಕು ಇವರು ನಮಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ಆಗ ಮೇಲಿನವರೆಲ್ಲರೂ ಸೂಳೇ ಮಕ್ಕಳೇ ಇವತ್ತು ಉಳಿದಿರಿ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೇ ನಿಮಗೆ ಖಲಾಸ್ ಮಾಡುತ್ತೇವೆಂದು ಜೀವ ಭಯ ಹಾಕಿರುತ್ತಾರೆ. ನನ್ನ ಇಬ್ಬರು ಮಕ್ಕಳಾದ ಬಸವರಾಜ ಮತ್ತು ಕೃಷ್ಣಾ ಇವರಿಗೆ ಶಹಾಪೂರ ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಮಾಡಿಸಿದ್ದೇವೆ. ನಮಗೆ ಹೊಡೆ ಬಡೆ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಅಜರ್ಿ ನೀಡಿದ್ದರ ಸಾರಂಶದ ಮೇಲಿಂದ ಮೇಲಿಂದ ಠಾಣೆ ಗುನ್ನೆ ನಂ: 126/2017 ಕಲಂ, 143, 147, 148, 323, 324, 504, 506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಕೋಡೆಕಲ ಪೊಲೀಸ್ ಠಾಣೆ ಗುನ್ನೆ ನಂ. 73/2017  ಕಲಂ:279, 304(ಎ) ಐಪಿಸಿ & 187 ಐ.ಎಮ್.ವಿ. ಆಕ್ಟ್ ;- ದಿನಾಂಕ 09.08.2017 ರಂದು 8-30 ಗಂಟೆಗೆ ಪಿಯರ್ಾದಿ ಶ್ರೀ ತಿರುಪತಿ ತಂದೆ ಹರಿಸಿಂಗ ರಾಠೋಡ ವ:35 ವರ್ಷ ಉ:ಚಾಲಕ ಜಾ:ಹಿಂದು ಲಮಾಣಿ ಸಾ:ಮಾರನಾಳ ದೊಡ್ಡತಾಂಡಾ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ಲಿಖಿತ ಪಿಯರ್ಾದಿ ಅಜರ್ಿಯನ್ನು ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 09.08.2017 ರಂದು ಬೆಳಿಗ್ಗೆ 6-00 ಗಂಟೆಯ ಸುಮಾರಿಗೆ ನನ್ನಕಾಕ ಬಾಳರಾಮ ರವರ ಹೆಂಡತಿ ನನ್ನ ಚಿಗವ್ವ ತಾರಾಬಾಯಿ ರವರಿಗೆ ಮೈಯಲ್ಲಿ ಆರಾಮ ಇಲ್ಲದ್ದರಿಂದ ಉಪಚಾರಕ್ಕಾಗಿ ಅವರ ಮಗ ಗೋಪಾಲ @ ಗೋಪಿಲಾಲ ಈತನು ಮೋಟರ ಸೈಕಲ ನಂ ಕೆ ಎ 33.ಯು-5198 ರ ಮೇಲೆ ಕೂಡಿಸಿಕೊಂಡು ಕೊಡೆಕಲ್ಲ ದವಾಖಾನೆಗೆ ಹೋಗಿದ್ದು ನಾನುಮತ್ತು ಜಾಲಿಗಿಡಿದ ತಾಂಡಾದ ಚಂದ್ರಶೇಖರ ತಂದೆ ಹರಿಸಿಂಗ ಚವ್ಹಾಣ ಇಬ್ಬರು ನನ್ನಮೋಟರ ಸೈಕಲ ಮೇಲೆ ಚಿಗವ್ವ ತಾರಾಬಾಯಿ ಹತ್ತಿರ ಕೊಡೆಕಲ್ಲಗೆ ಹೋಗಿದ್ದು ನಂತರ ನನ್ನ ಚಿಗವ್ವ ತಾರಾಬಾಯಿಯವರನ್ನು ಅಲ್ಲಿಯೇ ಬಿಟ್ಟುಅವರ ಮಗ ಗೋಪಾಲನು ತನ್ನ ಮೋಟರ ಸೈಕಲ ಮೇಲೆ ಹಾಗೂ ನಾನುಮತ್ತು ಚಂದ್ರಶೇಖರ ರವರು ನನ್ನ ಮೋಟರ ಸೈಕಲ ಮೇಲೆ ನಮ್ಮ ತಾಂಡಾಕ್ಕೆ ಹೋಗಲು ಹುಣಸಗಿ ನಾರಾಯಣಪೂರ ಮುಖ್ಯ ರಸ್ತೆಯಮೇಲೆ ಬರದೇವನಾಳ ಸೀಮಾಂತರದ ದೇವಮ್ಮ ಗಂಡ ಬಸಪ್ಪ ನಾಗೂರ ರವರ ಹೊಲದಲ್ಲಿಯ ರಸ್ತೆಯ ಮೇಲೆಕರವಿಂಗದಲ್ಲಿ ಬೆಳಿಗ್ಗೆ 7-00 ಗಂಟೆಯ ಸುಮಾರಿಗೆ ಹೋಗುತ್ತಿರುವಾಗ ತಮ್ಮ ಗೋಪಾಲ ಈತನು ನನ್ನ ಮೋಟರ ಸೈಕಲದ ಮುಂದುಗಡೆ ಸ್ವಲ್ಪ ದೂರದಲ್ಲಿ ಮುಂದೆ ಇದ್ದು ಅವನಿಗಿಂತಲೂ ನನ್ನ ಮೋಟರ ಸೈಕಲ ಸ್ವಲ್ಪಹಿಂದೆ ಇದ್ದು ಅದೇ ವೇಳೆಗೆ ನಾರಾಯಣಪೂರಕಡೆಯಿಂದ ಒಬ್ಬ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನು ತನ್ನ ಬಸನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ನಡೆಯಿಸಿಕೊಂಡು ಬಂದವನೇ ನಮ್ಮಮುಂದೆಗಡೆ ರಸ್ತೆಯ ಎಡಮಗ್ಗಲಾಗಿ ಮೋಟರ ಸೈಕಲ ನಂ ಕೆ ಎ 33. ಯು 5198 ರ ಮೇಲೆ ಹೋಗುತ್ತಿದ್ದ ನನ್ನ ತಮ್ಮ ಗೋಪಾಲನಿಗೆ ಡಿಕ್ಕಿಪಡಿಸಿ ಸ್ವಲ್ಪ ಮುಂದೆ ಹೋಗಿ ಬಸ್ಸನ್ನು ನಿಲ್ಲಿಸಿದ್ದು ನಾನು ಗಾಬರಿಯಾಗಿ ನನ್ನ ಮೋಟರ ಸೈಕಲ್ಲನ್ನು ಪಕ್ಕದಲ್ಲಿ ನಿಲ್ಲಿಸಿ ನಾನುಮತ್ತು ಚಂದ್ರಶೇಖರ ಚವ್ಹಾಣ ಇಬ್ಬರು ಕೂಡಿ ನೋಡಲಾಗಿ ನನ್ನ ತಮ್ಮ ಗೋಪಾಲನಿಗೆ ಬಸ್ಸ ಡಿಕ್ಕಿಹೊಡೆದಿದ್ದರಿಂದ ಮೋಟರ ಸೈಕಲ ಸಮೇತ ಬಸ್ಸಿನ ಬಲಗಡೆಯ ಮುಂದಿನ ಗಾಲಿಯಲ್ಲಿ ಸಿಕ್ಕುಬಿದ್ದಿದ್ದು ನೋಡಲಾಗಿ ನನ್ನ ತಮ್ಮನ ತಲೆಯ ಮೇಲ್ಬಾಗದಲ್ಲಿ ಬಾರಿ ರಕ್ತಗಾಯವಾಗಿ ಮಾಂಸಕಂಡ ಹೊರಗೆ ಬಂದಿದ್ದು ಬಲಗಡೆ ಬುಜದ ಮೇಲೆ ಬಾರಿ ರಕ್ತಗಾಯವಾಗಿ ಮಾಂಸಕಂಡ ಹೊರಗೆ ಬಂದಿದ್ದು ಬಲಗಡೆ ಎದೆಯ ಮೇಲೆ ಬಾರಿ ರಕ್ತಗಾಯವಾಗಿದ್ದು ಬಲಗಾಲು ತಡೆಯ ಮೇಲೆ ಮತ್ತು ಮೊಳಕಾಲ ಕೆಳಗಿನ ಬಾಗದಲ್ಲಿ ಬಾರಿ ರಕ್ತಗಾಯವಾಗಿ ಮುರಿದು ಸ್ಥಳದಲ್ಲಿಯೇ ಸತ್ತಿದ್ದು ನನ್ನ ತಮ್ಮ ಗೋಪಾಲನಿಗೆ ಅಪಘಾತ ಪಡಿಸಿದ ಬಸ್ಸನ್ನುನೋಡಲಾಗಿ ಅದು ಕೆಂಪುಬಣ್ಣ ಕೆ ಎಸ್ ಆರ್ ಟಿ ಸಿ ಬಸ್ ನಂ ಕೆ ಎ 33 ಎಫ್-0239 ಇದ್ದು ಬಸ್ಸ ಚಾಲಕ ಹೆಸರು ಮಹ್ಮದ ತಂದೆ ಜಲಾಲಸಾಬ ರಬ್ಬಿ ಬ್ಯಾಡ್ಜ ನಂ 5801 ಅಂತಾ ಗೊತ್ತಾಗಿದ್ದು ಹಾಗೂ ವಿಶ್ರಾಂತಿಯಲ್ಲಿ ಇದ್ದ ಚಾಲಕನ ಬಸವರಾಜ ತಂದೆ ಮಲಕಪ್ಪಬಾಗಲಿ ನಿವರ್ಾಹಕನ ಹೆಸರು ಬಸವರಾಜ ತಳವಾರ ಅಂತಾ ಗೊತ್ತಾಗಿದ್ದು ಬಸ್ ಚಾಲಕ ಮಹ್ಮದ ರಬ್ಬಿ ಈತನು ಅಪಘಾತ ಪಡಿಸಿದ ಕೂಡಲೇ ಬಸ್ಸನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದು ಈ ಅಪಘಾತವು ಬಸ್ ನಂ ಕೆ ಎ 33.ಎಪ್-0239 ರ ಚಾಲಕ ಮಹ್ಮದ ತಂದೆ ಜಲಾಲಸಾಬ ರಬ್ಬಿ ಬ್ಯಾಡ್ಜ ನಂ 5801 ಈತನ ನಿರ್ಲಕ್ಷತನದಿಂದಲೇ ಸಂಭವಿಸಿದ್ದು ಸದರಿಯವನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ನನ್ನ ತಮ್ಮ ಗೋಪಾಲನ ಶವವು ಅಪಘಾತ ಸ್ಥಳದಲ್ಲಿಯೇ ಇದ್ದು ನಮ್ಮ ಸಂಬಂದಿಕರಿಗೆ ಪೋನ ಮಾಡಿ ವಿಷಯ ತಿಳಿಸಿ ಅವರು ಸ್ಥಳಕ್ಕೆ ಬಂದ ನಂತರ ನಾನು ದೂರು ಕೋಡುತ್ತಿದ್ದೆನೆ ಅಂತಾ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 73/2017 ಕಲಂ 279,304(ಎ) ಐಪಿಸಿ ಸಂಗಡ 187 ಐ ಎಂ ವಿ ಆಕ್ಟ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 152/2017 ಕಲಂ: 379 ಐ.ಪಿ.ಸಿ;- ದಿ: 08/08/17 ರಂದು 10.30 ಎಎಮ್‌ಕ್ಕೆ ಶ್ರೀ ಗುತ್ತನಗೌಡ ತಂದೆ ನಾನಾಗೌಡ ಪಾಟೀಲ ಸಾ|| ಯಕ್ತಾಪುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನನ್ನದೊಂದು ಹಿರೋ ಕಂಪನಿಯ ಸ್ಲೆಂಡರ್ ಪ್ಲಸ್ ಸಿಲ್ವರ ಕಲರ್ ಮೋಟಾರ ಸೈಕಲ ನಂ ಕೆಎ-33 ಯು-7642 ನೇದ್ದು ಇದ್ದು ಸದರಿ ಮೋಟಾರ ಸೈಕಲ ಮಾಡಲ್ 2016 ನೇದ್ದು ಇದ್ದು ದಿನಾಂಕ 02/07/2017 ರಂದು ಬೆಳಿಗ್ಗೆ 10 ಗಂಟೆಗೆ ನನ್ನ ಮೋಟರ ಸೈಕಲ್ನೇದ್ದನ್ನು ಸಂಜೀವ ನಗರ ಕ್ರಾಸ್ನ ಸಂಗನಗೌಡ ಅಸಾಂಪುರ ಇವರ ಹೊಟೇಲ ಮುಂದುಗಡೆ ನಿಲ್ಲಿಸಿ ನನ್ನ ಕೆಲಸದ ನಿಮಿತ್ಯ ಕಲಬುರಗಿಗೆ ಹೋಗಿ ಸಾಯಂಕಾಲ ರಾತ್ರಿ 3 ಗಂಟೆ ಸುಮಾರಿಗೆ ನಾನು ಬಂದು ನನ್ನ ಮೋಟರ ಸೈಕಲ್ ನೋಡಲಾಗಿ ಮೋಟರ ಸೈಕಲ್ ಇರಲಿಲ್ಲ ನಂತರ ಕೆಂಭಾವಿ ಪಟ್ಟಣದ ಬಸ್ ನಿಲ್ದಾಣ, ಕೆಂಭಾವಿ ಕ್ರಾಸ್, ಹೇಮರೆಡ್ಡಿ ಮಲ್ಲಮ್ಮ ಗುಡಿ ಎಲ್ಲ ಕಡೆ ಹುಡುಕಾಡಲಾಗಿ ಸದರಿ ನನ್ನ ಮೋಟರ ಸೈಕಲ್ ಸಿಗಲಿಲ್ಲ. ನಂತರ ಕಳುವಾದ ಮೋಟರ ಸೈಕಲ್ ಪತ್ತೆ ಕುರಿತು ಬಿ.ಗುಡಿ, ಶಹಾಪುರ, ಕಲಬುರಗಿ, ಸುರಪುರ, ಹುಣಸಗಿ, ದೇವದುರ್ಗ ಎಲ್ಲ ಕಡೆ ಹೋಗಿ ನನ್ನ ಮೋಟರ್ ಸೈಕಲ್ ಹುಡುಕಾಡಲಾಗಿ ಎಲ್ಲಿಯೂ ಸಿಗಲಿಲ್ಲವಾದ್ದರಿಂದ ಇಂದು ತಡವಾಗಿ ಠಾಣೆಗೆ ಬಂದು ಈ ಫಿಯರ್ಾದಿ ಅಜರ್ಿ ನೀಡಿದ್ದು ಇರುತ್ತದೆ.ಅಂತ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 152/2017 ಕಲಂ: 379 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು. ಸದರಿ ವಾಹನದ ಅಂದಾಜು ಕಿಮ್ಮತ್ತು 40000/- ರೂ ಇರುತ್ತದೆ

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 153/2017 ಕಲಂ: 323,324,354,504,506 ಸಂಗಡ 34 ಐಪಿಸಿ;-ದಿನಾಂಕ 08/08/2017 ರಂದು 03-30 ಪಿ.ಎಂಕ್ಕೆ ಫಿಯರ್ಾದಿ ಅಜರ್ಿದಾರರಾದ ಶಿವಮ್ಮ ಗಂಡ ನಾಗಪ್ಪ ದೊಡ್ಡಮನಿ ವ|| 50 ಜಾ|| ಮಾದರ ಉ|| ಕೂಲಿ ಸಾ|| ಮಲ್ಲಾ [ಬಿ] ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ಇಂದು ದಿನಾಂಕ 08/08/2017 ರಂದು 12-30 ಪಿಎಮ್ ಕ್ಕೆ ನಾನು ಹಾಗು ನನ್ನ ಗಂಡ ನಾಗಪ್ಪ ಇಬ್ಬರು ಕೂಡಿಕೊಂಡು ನಮ್ಮ ಹೊಲದಲ್ಲಿ ಬಿತ್ತನೆ ಮಾಡುತ್ತಿದ್ದೆವು. ಆಗ ನಮಗೆ ಹೊಲ ಮಾರಾಟ ಮಾಡಿದ ಸಿದ್ದಪ್ಪ ಈತನ ಮಗನಾದ ಸುಧಾಕರ ಈತನು ಬಂದು ಹೊಲ ನಮ್ಮದು ಇದೆ ನೀವು ಬಿತ್ತ ಬೇಡರಿ ಅಂತ ಅಂದಾಗ ನಾನು ನಿಮ್ಮ ತಂದೆಗೆ ಹಣ ಕೊಟ್ಟು ಖರೀದಿ ಮಾಡಿದ್ದೇವೆ ಮನೆಗೆ ಹೋಗಿ ಕೆಳೋಣ ಅಂತ ಹೇಳಿ ನಾನು ಹಾಗು ನನ್ನ ಗಂಡ ಇಬ್ಬರು ಕೂಡಿಕೊಂಡು ಊರಿಗೆ 1-30 ಪಿಎಮ್ ಕ್ಕೆ ಬಂದು ನಮ್ಮೂರ ಸಿದ್ದಪ್ಪ ಬಡಿಗೇರ ಈತನ ಮನೆಯ ಮುಂದೆ ನಿಂತು ನಿಮ್ಮ ಮಗ ಸುಧಾಕರ ಈತನಿಗೆ ಹೇಳಿರಿ ನಾವು ನಿಮ್ಮಿಂದ ಖರೀದಿ ಮಾಡಿದ ಹೊಲದಲ್ಲಿ ಬಿತ್ತನೆ ಮಾಡಿಲು ಬಿಡುವದಿಲ್ಲ ಅಂತ ಅನ್ನುತ್ತಿದ್ದಾನೆ ಅಂತ ಅಂದಾಗ ಸದರಿ 1] ಸಿದ್ದಪ್ಪ ತಂದೆ ತಿಪ್ಪಣ್ಣ ಬಡಿಗೇರ 2] ಸುಧಾಕರ ತಂದೆ ಸಿದ್ದಪ್ಪ ಬಡಿಗೇರ 3] ಸುನೀಲ ತಂದೆ ಸಿದ್ದಪ್ಪ ಬಡಿಗೇರ ಈ ಎಲ್ಲಾ ಜನರು ಮನೆಯಿಂದ ಹೊರಗೆ ಬಂದವರೆ ಏನಲೇ ಸೂಳಿ ಶಿವ್ವಿ ನಮ್ಮ ಹೊಲ ಕೇಳಲು ಬಂದಿದಿಯಾ ನಾವು ಯಾರಿಗೂ ಹೊಲ ಮಾರಾಟ ಮಾಡಿರುವದಿಲ್ಲ ಸೂಳಿ ಅಂತ ಅವಾಚ್ಯವಾಗಿ ಬೈಯುತ್ತಿದ್ದಾಗ ಯಾಕೇ ಸುಮ್ಮನೆ ಬೈಯುತ್ತೀರಿ ನಾವು ಹಣ ಕೊಟ್ಟು ನಿಮ್ಮಿಂದ ಹೊಲ ಖರೀದಿ ಮಾಡಿ ಸುಮಾರು ಹದಿನೇಳು ವರ್ಷಗಳಿಂದ ನಾವೇ ಉಳಿಮೆ ಮಾಡುತ್ತಾ ಬಂದಿದ್ದೇವೆ ಅಂತ ಅನ್ನುತ್ತಿದ್ದಾಗ ಅವರಲ್ಲಿಯ ಸುಧಾಕರ ಈತನು ಏನಲೇ ಸೂಳಿ ಅಂತ ಅನ್ನುತ್ತಾ ನನ್ನ ಕೂದಲು ಹಿಡಿದು ಎಳೆದಾಡುತ್ತಾ ಈ ಸೂಳೆಯದು ಬಹಾಳ ಆಗಿದೆ ಅಂತ ಬೈಯುತ್ತಾ ತನ್ನ ಕೈಯಲ್ಲಿದ್ದ ಚಾಕುನಿಂದ ನನ್ನ ಹಣೆಗೆ ಹೊಡೆದು ರಕ್ತಗಾಯ ಪಡಿಸಿದನು. ಆಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ಅಲ್ಲಿಯೇ ಇದ್ದ ನನ್ನ ಗಂಡ ನಾಗಪ್ಪ ತಂದೆ ಭೀಮರಾಯ ಹಾಗು ನನ್ನ ಸೊಸಿಯಾದ ಪಾರ್ವತಿ ಗಂಡ ಶಿವಪುತ್ರಪ್ಪ ಇವರು ಬಂದು ಬಿಡಿಸಿಕೊಂಡರು. ಸದರಿಯವರು ಹೊಡೆದು ಹೋಗುವಾಗ ಇನ್ನು ಮುಂದೆ ನಮ್ಮ ಹೊಲದ ಕಡೆಗೆ ಬಂದರೆ ನಿನ್ನನ್ನು ಜೀವದಿಂದ ಹೊಡೆದು ಖಲಾಸ ಮಾಡುತ್ತೇವೆ ಅಂತ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 153/2017 ಕಲಂ: 323,324,354,504,506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 333/2017.ಕಲಂ 279.338.ಐ.ಪಿ.ಸಿ. 187 ಐ.ಎಂ.ವಿ;- ದಿನಾಂಕ 08/08/2017 ರಂದು ಬೆಳಿಗ್ಗೆ 10-00 ಗಂಟೆಗೆ ಸರಕಾರಿ ಆಸ್ಪತ್ರೆ ಶಹಾಪೂರ ದಿಂದ  ಎಂ.ಎಲ್.ಸಿ. ಇದೆ ಅಂತ ಪೋನ ಮೂಲಕ ಮಾಹಿತಿ ತಿಳಿಸಿದ್ದರಿಂದ ಎಂ.ಎಲ್.ಸಿ. ಕೂರಿತು ಆಸ್ಪತ್ರೆಗೆ 10-10 ಗಂಟೆಗೆ ಬೆಟಿನಿಡಿ ಉಪಚಾರ ಪಡೆಯುತ್ತಿದ್ದ ಗಾಯಾಳು ಶ್ರೀ ಬಸವರಾಜ ತಂದೆ ದಂಡಪ್ಪ ಹಾದಿಮನಿ ವ|| 26 ಉ|| ಕೂಲಿ ಕೆಲಸ ಜಾ|| ಮಾದಿಗ ಸಾ|| ವಿಬೂತಿಹಳಿ ಇವರ ಹೇಳಿಕೆಯನ್ನು ಪಡೆದುಕೊಂಡು ಠಾಣೆಗೆ 11-30 ಗಂಟೆಗೆ ಬಂದು ಸದರಿ ಹೇಳಿಕೆ ಸಾರಾಂಶ ವೆನೆಂದರೆ ಇಂದು ದಿನಾಂಕ 08/8/2017 ರಂದು ಬೇಳಿಗ್ಗೆ ಸುಮಾರು  8-00 ಗಂಟೆಗೆ ವಾಗಣಗೇರಿಯ ನಮ್ಮ ದೊಡ್ಡಪ್ಪನ ಮನೆಗೆ ಹೋಗಿಬರುಲು ನಾನು ಮತ್ತು ನನ್ನ ಅಣ್ಣ ದೇವಿಂದ್ರಪ್ಪ ತಂದೆ ದಂಡಪ್ಪ ಇಬ್ಬರು ಕೂಡಿಕೋಂಡು ನನ್ನ ಮಾವನ ಹೀರೊ ಕಂಪನಿಯ ಸ್ಪೆಲೆಂಡರ ಪ್ಲಸ್ ಮೋಟರ ಸೈಕಲ್ ಚೆಸ್ಸಿ ನಂ ಒಃಐಊಂಖ086ಊಊಅ46903 ನ್ನೇದ್ದನ್ನು ತೆಗೆದುಕೋಂಡು ವಿಬೂತಿಹಳ್ಳಿಯಿಂದ ವಾಗಣಗೇರಿಗೆ ಹೊರಟೆವು ಸದರಿ ನಮ್ಮ ಮೋಟರ ಸೈಕಲ್ನ್ನು ನಾನು ಚಲಾಯಿಸುತ್ತಿದ್ದೆನು ನನ್ನ ಅಣ್ಣ ನನ್ನ ಮೋಟರ್ ಸೈಕಲ್ ಮೇಲೆ ನನ್ನ ಹಿಂದೆ ಕುಳಿತ್ತಿದ್ದನು. ನಾನು ನನ್ನ ಮೋಟರ್ ಸೈಕಲನ್ನು ಶಹಾಪೂರ - ಸುರಪೂರ ಮುಖೈರಸ್ತೆಯ ಮೇಲೆ ಮಂಡಗಳ್ಳಿ ಕ್ಯಾಂಪ ಮುಂದೆ ಚಲಾಯಿಸಿಕೊಂಡು ಹೊಗುತ್ತಿರುವಾಗ ಸುರಪೂರ ಕಡೆಯಿಂದ ಒಂದು ಲಾರಿ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಕೊಂಡು ಬಂದು ನನ್ನ ಮೋಟರ್ ಸೈಕಲ್ಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನಾನು ನನ್ನ ಅಣ್ಣ ಮತ್ತು ನನ್ನ ಮೋಟರ್ ಸೈಕಲ್ ರಸ್ತೆಯ ಮೇಲೆ ಬಿದ್ದೆವು. ಆಗ ನನ್ನ ಅಣ್ಣ ನನಗೆ ಹೆಬ್ಬಿಸಿ ಕೂಡಿಸಿದನು. ಸದರಿ ಅಪಘಾತದಲ್ಲಿ ನನಗೆ ಬಲಗಾಲಿನ ಪಾದದ ಕಿಲಿಗೆ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ. ಮತ್ತು ನನ್ನ ಅಣ್ಣ ದೇವಿಂದ್ರಪ್ಪನಿಗೆ ಯಾವದೇ ಗಾಯ ವಾಗಿರುವದಿಲ್ಲಾ ನಮಗೆ ಅಪಘಾತ ಮಾಡಿದ ಲಾರಿಗೆ ನೋಡಲಾಗಿ ಲಾರಿ ನಂ ಕೆಎ-36/7013 ನ್ನೆದ್ದು ಇರುತ್ತದೆ. ಲಾರಿ ಚಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ಮಾರ್ತಂಡಪ್ಪ ತಂದೆ ನಿಂಗಪ್ಪ ಸಾ|| ತಿಮ್ಮಾಪೂರ ಸುರಪೂರ  ಅಂತ ತಿಳಿಸಿದನು. ಲಾರಿ ಚಾಲಕನು ಸ್ವಲ್ಪ ಹೊತ್ತು ನಿಂತಹಾಗೆ ಮಾಡಿ ಲಾರಿ ಬಿಟ್ಟು ಓಡಿಹೊದನು ಸದರಿ ಅಪಘಾತದಲ್ಲಿ ನಮ್ಮ ಮೋಟರ್ ಸೈಕಲ್ಜಕಂ ಗೊಂಡಿರುತ್ತದೆ. ನಮಗೆ ಅಪಘಾತವಾದಾಗ ಬೆಳಿಗ್ಗೆ ಸಮಯ ಸುಮಾರು 9-00 ಗಂಟೆಯಾಗಿತ್ತು. ಆಗ ನನ್ನ ಅಣ್ಣ ದೇವಿಂದ್ರಪ್ಪನು. 108 ಕ್ಕೆ ಪೋನ ಮಾಡಿದ್ದರಿಂದ ಅಂಬುಲೆನ್ಸ ಬಂದ ಮೇಲೆ ಅದರಲ್ಲಿ ನನಗೆ ಹಾಕಿಕೊಂಡು ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾನೆೆ. ಅಂತ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 333/2017 ಕಲಂ 279. 338. ಐ.ಪಿ.ಸಿ. ಮತ್ತು 187 ಐ.ಎಂ.ವಿ. ಆ್ಯಕ್ಟ ಪ್ರಕಾರ ಪ್ರಕರಣ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು.
 
 

No comments: