Police Bhavan Kalaburagi

Police Bhavan Kalaburagi

Friday, January 19, 2018

Yadgir District Reported Crimes Updated on 19-01-2018


                                            Yadgir District Reported Crimes

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 02/2018 ಕಲಂ: 279. 338. ಐಪಿಸಿ;- ದಿನಾಂಕ 18-01-2018 ರಂದು 11-30 ಎ ಎಂ ಕ್ಕೆ ಸರಕಾರಿ ಆಸ್ಪತ್ರೆ ಸೈದಾಪೂರದಿಂದ ಒಂದು ಅಪಘಾತದ ಬಗ್ಗೆ ದೂರವಾಣಿ ಮೂಲಕ ತಿಳಿಸಿದ್ದರಿಂದ ಹೇಳಿಕೆಯನ್ನು ಪಡೆಯಲು ಠಾಣೆಯಿಂದ 11-35 ಎ ಎಂ ಕ್ಕೆ ಹೊರಟು ಸರಕಾರಿ ಆಸ್ಪತ್ರೆಗೆ 11-45 ಬೇಟಿ ನೀಡಿ ಗಾಯಾಳು ನಿಂಗಪ್ಪ ಮಾತನಾಡುವ ಸ್ಥಿತಿಯಲ್ಲಿ ಇರದ ಕಾರಣ ಅವರ ತಾಯಿಯಾದ ನಿಂಗಮ್ಮ ಗಂಡ ಮಾರೆಪ್ಪ ಪುಜಾರಿ ವಯಾ|| 35 ವರ್ಷ ಜಾ|| ಕುರಬ ಉ|| ಕೂಲಿ ಕೆಲಸ ಸಾ|| ಕುಣಚಿ. ತಾ|| ಮಕ್ತಲ್ ಜಿಲ್ಲಾ|| ಮೈಬೂಬನಗರ ಹಾ||ವ|| ಕಡೆಚೂರ ತಾ|| ಜಿಲ್ಲಾ|| ಯಾದಗಿರಿ ಇವರು  ಹೇಳಿಕೆ ಪಿಯರ್ಾದಿಯನ್ನು 11-45 ಎ ಎಂ ದಿಂದ 12-30 ಪಿ ಎಂ ದವರೆಗೆ ಲ್ಯಾಪ್ ಟಾಪದಲ್ಲಿ  ಟೈಪ ಮಾಡಿಕೊಂಡಿದ್ದು .ಅದರ ಸಾರಾಂಶವೇನಂದರೆ. ನಾನು ಈ ಮೇಲ್ಕಂಡ ಹೆಸರು ವಿಳಾಸದ ನಿವಾಸಿತಳಿದ್ದು. ಕೂಲಿ ಕೆಲಸ ಮಾಡಿಕೊಂಡು ಗಂಡ ಮಕ್ಕಳೊಂದಿಗೆ ಇದ್ದು ಉಪಜೀವನ ಸಾಗಿಸುತ್ತೇನೆ. ನನ್ನ ತವರು ಊರು ಕಡೆಚೂರ ಇದ್ದು. ನನಗೆ ಮೂರು ಜನ ಮಕ್ಕಳಿದ್ದು.ಅವರಲ್ಲಿ ಎರಡು ಗಂಡು ಒಂದು ಹೆಣ್ಣು ಮಗು ಇರುತ್ತದೆ.ನಾನು ನನ್ನ ಮಕ್ಕಳೊಂದಿಗೆ ತವರು ಊರಲ್ಲಿ ಬಾಡಿಗೆ ಮನೆಮಾಡಿಕೊಂಡು ಉಪಜೀವನ ಸಾಗಿಸುತ್ತೇನೆ. ನನ್ನ ಗಂಡ ಕಡೆಚೂರದಲ್ಲಿ ಇದ್ದು ಕುರಿಯನ್ನು ಕಾಯ್ದುಕೊಂಡು ಇರುತ್ತಾನೆ. ಇಂದು ದಿನಾಂಕ 18-01-2018 ರಂದು ಬೆಳೆಗ್ಗೆ ನಾನು ನನ್ನ ಮಗ ನಿಂಗಪ್ಪ ತಂದೆ ಮಾರೆಪ್ಪ ವಯಾ|| 8 ವರ್ಷ ಹಾಗೂ ಮಗಳು ಜೋತಿ ಕೂಡಿ ಕುಣಚಿಗೆ ಹೋಗಲು ನಮ್ಮೂರದಿಂದ ನಡೆದುಕೊಂಡು ಹೊರಟಿದ್ದು.ಕಡೆಚೂರ ಕ್ರಾಸದಿಂದ ಸ್ವಲ್ಪ ಮುಂದೆ ರಾಯಚೂರ ಮುಖ್ಯರಸ್ತೆಗೆ ಹೋಗುತ್ತಿದ್ದಾಗ ಇಂದು 10 ಎ ಎಂ ಕ್ಕೆ ಹೋಗುವಾಗ ರಸ್ತೆಯ ತಿರುವುನಲ್ಲಿ  ರಾಯಚೂರ ಕಡೆಯಿಂದ ಒಬ್ಬ ಸೈಕಲ ಮೊಟಾರ ಸವಾರ ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಓಡಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ. ನನ್ನ ಮಗನಿಗೆ ಡಿಕ್ಕಿಪಡಿಸಿದನು.ಆಗ ನನ್ನ ಮಗ ನಿಂಗಪ್ಪ ಕೆಳಗೆ ಬಿದ್ದನು. ಆಗ ನಾನು ನನ್ನ ಮಗಳು ನನ್ನ ಮಗನಿಗೆ ಎಬ್ಬಿಸಿ ನೋಡಲು ಆತನ ತಲೆಯ ಹಿಂದೆ ಬಾರೀ ಗುಪ್ತಗಾಯವಾಗಿದ್ದು. ಮತ್ತು ಬೆನ್ನಿಗೆ ಗುಪ್ತ ಹಾಗೂ ತರಚಿದ ಗಾಯವಾಗಿದೆ ಮತ್ತು ಎರಡು ಮೊಣಕಾಲುಗಳಿಗೆ ತರಚಿದ ಗಾಯಗಳು ಆಗಿವೆ. ನನ್ನ ಮಗ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ.ಕಿವಿಯಿಂದ ಹಾಗೂ ಮೂಗಿನಿಂದ ರಕ್ತಬರುತ್ತಿತ್ತು. ಆಗ ಅಪಘಾತ ಪಡಿಸಿದ ಚಾಲಕ ಸ್ವಲ್ಪ ಮುಂದೆ ಹೋಗಿ ತನ್ನ ಗಾಡಿಯನ್ನು ನಿಲ್ಲಿಸಿ ಬಂದ ನಾನು ಆತನಿಗೆ ಹೆಸರು ವಿಳಾಸ ಕೇಳಲು ಅಲಿಖಾನ ತಂದೆ ಅಮೀರಲಿ ಪುಟಪಾಕ ಸಾ|| ಕೃಷ್ಣ ಅಂತಾ ಹೇಳಿದ ಆತನು ಅಪಘಾತ ಪಡಿಸಿದ ಸೈಕಲ ಮೊಟಾರನ್ನು ನೋಡಲು ಹಿರೋಹೊಂಡ ಸೈನ ನಂ ಎಪಿ-28-ಎವಿ-8542 ಅಂತಾ ಇತ್ತು. ಆಗ ಆತನು ನಾನು ಕೂಡಿ ಅಲಿಖಾನ ಇವರ ಸೈಕಲ ಮೊಟಾರ ಮೇಲೆ ನನ್ನ ಮಗನನ್ನು ನಡುವೆ ಕೂಡಿಸಿಕೊಂಡು ಸೈದಾಪೂರಕ್ಕೆ ಉಪಚಾರಕ್ಕಾಗಿ ಕರೆದುಕೊಂಡು ಬಂದು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು.ನಾನು ಸೈದಾಪೂರಕ್ಕೆ ಬಂದಾಗ ನಮ್ಮ ಸಂಬಂದಿಕ ಮಲ್ಲಿಕಾಜರ್ುನ ತಂದೆ ಮಲ್ಲಪ್ಪ ಪುಜಾರಿ ಸಾ|| ಕಡೆಚೂರ ಇವರು ಆಸ್ಪತ್ರಗೆ ಬಂದು ನೋಡಿದರು. ಇಂದು ದಿನಾಂಕ 18-01-2018 ರಂದು 10 ಎ ಎಂ ಕ್ಕೆ ನಾನು ನನ್ನ ಮಕ್ಕಳು ನಡೆದುಕೊಂಡು ಕಡೆಚೂರದಿಂದ ಕುಣಚಿಗೆ ಹೋಗುವಾಗ ಕಡೆಚೂರ ಕ್ರಾಸದಿಂದ ಮುಂದೆ ಸ್ವಲ್ಪ ದೂರದಲ್ಲಿ ತಿರುವಿನಲ್ಲಿ ಎದುರಿನಿಂದ ಅಲಿಖಾನ ಇವರು ತನ್ನ ಹಿರೋಹೊಂಡ ಸೈನ ಮೋಟರ ಸೈಕಲ ನಂ ಎಪಿ-28-ಎವಿ-8542 ನೇದ್ದನ್ನು ಅತೀ ವೇಗದಿಂದ ಹಾಗೂ ನಿರ್ಲಕ್ಷತನದಿಂದ ಓಡಿಸಿ ಅಪಘಾತ ಪಡಿಸಿದ್ದು. ಚಾಲಕ ಹಾಗೂ ವಾಹನದ ಮೆಲೆ ಕಾನೂನ ಕ್ರಮವನ್ನು ಜರುಗಿಸಬೇಕು ಅಂತಾ ಹೇಳಿ ನೀಡಿದ್ದು ಸದರಿ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ 1 ಪಿ ಎಂ ಕ್ಕೆ ಬಂದು ಹೇಳಿಕೆ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ ಠಾಣೆಯ ಗುನ್ನೆ ನಂ. 02/2018 ಕಲಂ 279.338 ಐ.ಪಿ.ಸಿ. ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 03/2018 ಕಲಂ:279 338 ಐಪಿಸಿ ಸಂಗಡ 187 ಐಎಮ್ವಿ ಕಾಯ್ದೆ ;- ದಿನಾಂಕ:05/01/2018 ಪಿಯರ್ಾದಿ ಅಳಿಯನಾದ ಶರಬಣ್ಣ  ತಂದೆ ಸಾಮಣ್ಣ ಉಪ್ಪೆರಿ ವ:45 ಈತನು ಮೋಟಾರ ಸೈಕಲ್ ನಂ:ಕೆ.ಎ-33 ಎಲ್-9609 ನೇದ್ದರ ಮೇಲೆ ಹಣಮಸಾಗರಕ್ಕೆ ಸಂಬಂಧಿಕರಿಗೆ ಭೇಟಿಯಾಗಲು ಹೋಗಿ ಮರಳಿ ರಾಯನಗೋಳಕ್ಕೆ ಬರುವಾಗ ಜೋಗುಂಡಭಾವಿ ಕಡೆಯಿಂದ ಒಂದು ಮೋಟಾರ ಸೈಕಲ್ ಅತೀ ಜೋರಾಗಿ ತಾತ್ಸಾರತನದಿಂದ ನಡೆಸುಕೊಂಡು ಬಂದವನೆ ಜೋಗುಂಡಭಾವಿ-ಅಮ್ಮಾಪೂರ ರಸ್ತೆಯ ಮೇಲೆ ರಾಯನಗೋಳದ ಹತ್ತಿರ ನನ್ನ ಅಳಿಯ ಹಾಗೂ ಯಮನಪ್ಪ ಹೊರಟ ಮೋಟಾರ ಸೈಕಲ್ಗೆ ಎದುರಿನಿಂದ ಬಂದ ಮೋಟಾರ ಸೈಕಲ್ ನಂ: ಕೆ.ಎ-28 ಎಲ್-7348 ನೇದ್ದರ ಚಾಲಕ ಹಣಮಪ್ಪ ತಂದೆ ಯಲ್ಲಪ್ಪ ಸಾಳಿ ಸಾ:ರಾಯನಗೋಳ  ಇತನು ಡಿಕ್ಕಿ ಪಡೆಸಿ ತನ್ನ ಮೋಟಾರ ಸೈಕಲ್ ನಿಲ್ಲಿಸದೆ ತೆಗೆದುಕೊಂಡು ಹೊಗಿ ಪರಾರಿ ಆಗಿರುತ್ತಾನೆ.  ಪಿಯರ್ಾದಿಯ ಅಳಿಯನು ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದು ಇಂದು ಆಸ್ಪತ್ರೆಯಿಂದ ಬಿಡುವು ಮಾಡಿಕೊಂಡು ತಡವಾಗಿ ಠಾಣೆ ಬಂದು ದೂರು ನಿಡುತ್ತಿದ್ದು ಅಫಘಾತ ಪಡಿಸಿ ತನ್ನ  ಮೋಟಾರ ಸೈಕಲ್ ಸಮೇತ ಪರಾರಿಯಾದ ಚಾಲಕನಾದ ಹಣಮಪ್ಪ ತಂದೆ ಯಲ್ಲಪ್ಪ ಸಾಳಿ ಸಾ:ರಾಯನಗೋಳ ಇವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ಕ್ರಮ ಜರುಗಿಸಲಾಗಿದೆ.
                                                                    
 ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 7/2018 ಕಲಂ 87 ಕೆಪಿ ಯಾಕ್ಟ ;- ದಿನಾಂಕ:-18/01/2018 ರಂದು 17.00 ಗಂಟೆಯ ಸುಮಾರಿಗೆ ಆರೋಪಿತರು  ಯಡಳ್ಳಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ  ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎಂಬ ನಶೀಬದ ಇಸ್ಪೀಟ್ ಜೂಜಾಟ ಆಡುವಾಗ ಪಿಯರ್ಾದಿ ಹಾಗೂ ಪಂಚರು ಮತ್ತು ಸಿಬ್ಬಂದಿಯಾದ ಎ.ಎಸ್.ಐ ಚಂದ್ರನಾಥ ಹೆಚ್.ಸಿ-130 ಪಿಸಿ-399, 288 ರವರೊಂದಿಗೆ ದಾಳಿ ಮಾಡಲ 3 ಜನರು ಸಿಕ್ಕಿದ್ದು, ಇಬ್ಬರೂ ಓಡಿಹೋಗಿದ್ದು, ಸಿಕ್ಕ ಆರೋಪಿತರಿಂದ ಹಾಗು ಖಣದಿಂದ ಪಂಚರ ಸಮಕ್ಷಮದಲ್ಲಿ 780=00 ರೂ. ನಗದು ಹಣ ಮತ್ತು 52 ಇಸ್ಫೀಟ್ ಎಲೆಗಳು ಜಪ್ತಿ ಮಾಡಿದ್ದು ಸೂಕ್ತ ಕ್ರಮ ಜರುಗಿಸಲು ಜ್ಞಾಪನ ಪತ್ರ ನೀಡದ್ದರ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ
 

No comments: