Police Bhavan Kalaburagi

Police Bhavan Kalaburagi

Friday, January 5, 2018

Yadgir District Reported Crimes Updated on 05-01-2018


                                         Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ.  02/2018 ಕಲಂ:324, 376, 506 ಸಂ.34 ಐಪಿಸಿ;- ದಿನಾಂಕ.04/01/2018 ರಂದು 11 ಎಎಂಕ್ಕೆ ದುಖಃಪಾತಳಾದ ಶ್ರೀಮತಿ ತಿಮ್ಮವ್ವ ಗಂ. ಮಲ್ಲಯ್ಯ ಹುಲಕಲ್ ವಃ 40 ಜಾಃ ಬೇಡರು ಉಃ ಕೂಲಿ ಕೆಲಸ ಸಾಃ ವರ್ಕನಳ್ಳಿ ತಾಃ ಯಾದಗಿರಿ ಇವರ ಒಂದು ಲಿಖಿತ ಅಜರ್ಿ ವಸೂಲಾಗಿದ್ದು  ಸಾರಾಂಶವೆನೆಂದರೆ  ನನ್ನ ಗಂಡನು ಸುಮಾರು 10 ವರ್ಷಗಳ ಹಿಂದೆ ನನ್ನ ಬಿಟ್ಟು ಬೇರೆಯವಳೊಂದಿಗೆ ಮದುವೆಯಾಗಿರುತ್ತಾನೆ. ನಾನು ದನಗಳು ಕಾಯುವ ಸಮಯದಲ್ಲಿ ನನಗೆ ಪಕ್ಕದ ಊರಿನವನಾದ ದೇವಪ್ಪ ತಂ. ಭಿಮರಾಯ ಬಳಿಚಕ್ರ ಸಾಃಕೊಯಿಲೂರ ಈತನು ಕೂಡಾ ದನಗಳನ್ನು ಕಾಯಲೂ ಬರುತ್ತಿದ್ದರಿಂದ ಆತನಿಗೆ ನನಗೂ ಪರಿಚಯವಾಯಿತು ಆತನಿಗೂ ನನಗೂ ಸುಮಾರು ದಿವಸಗಳಿಂದ ಪರಿಚಯವಾಗಿ ಸಲುಗೆಯಿಂದ ಇದ್ದಾಗ ಆತನು ನನಗೆ ಮದುವೆಯಾಗುವುದಾಗಿ ಹೇಳಿದನು. ಆಗ ನಾನು ನನಗೆ ಈಗಾಗಲೇ ಮದುವೆಯಾಗಿದೆ ಮತ್ತು ಒಬ್ಬ ಗಂಡು ಮಗ ಇರುತ್ತಾನೆ. ಅಂತಾ ಹೇಳಿದೆನು. ಆಗ ಅವನು ನೀನು ಇನ್ನೂ ಚಿಕ್ಕವಳಿದ್ದಿ ನನಗೂ ಕೂಡಾ ಇನ್ನೂ ಮದುವೆ ಆಗಿಲ್ಲಾ ನಿನಗೆ ನಿನಗೆ ಒಳ್ಳೆಯ ಬಾಳ್ವೆ ಕೊಡುತ್ತೇನೆ ಅಂತಾ ಹೇಳಿದಾಗ ನಾನು ಅದಕ್ಕೆ ಒಪ್ಪಿಕೊಂಡಿದ್ದೆನು.  ಈಗ ಒಂದು ತಿಂಗಳಹಿಂದೆ ಅಂದರೆ ಎಳ್ಳ ಅಮವಾಸ್ಯೆಯ ಪೂರ್ವದಲ್ಲಿ ನಾವು ಇಬ್ಬರೂ ದನ ಕಾಯುತ್ತಿದ್ದಾಗ ನೀನು ರಾತ್ರಿ 8 ಗಮಟೆ ಸುಮಾರಿಗೆ ಯಾದಗಿರಿ ರೈಲ್ವೇ ಸ್ಟೇಷನಗೆ ಬಾ ನಾವು ಇಬ್ಬರೂ ಬೆಂಗಳುರಿಗೆ ಹೋಗಿ ಬೆಂಗಳುರಿನಲ್ಲಿ ನಮ್ಮ ತಂದೆ ತಾಯಿಗೆ ಹೇಳಿ ಮದುವೆಯಾಗಿ ಅಲ್ಲಿಯೆ ಸುಖವಾಗಿರೋಣ ಅಂತಾ ಹೇಳಿದಾಗ ನಾನು ಸ್ವ-ಇಚ್ಚೇಯಿಂದ ಮನೆಯಲ್ಲಿ ಯಾರಿಗೂ ಹೇಳದೆ ರಾತ್ರಿ  ಯಾದಗಿರಿ ರೈಲ್ವೇ ಸ್ಟೇಷನಗೆ ಬಂದೆನು, ಅಲ್ಲಿ ದೇವಪ್ಪ ಈತನು ಇದ್ದು ಇಬ್ಬರೂ ಕೂಡಿ ರೈಲ್ವೇ ಮುಖಾಂತರ ಬೆಂಗಳುರಿಗೆ ಹೋದೆವು. ಅಲ್ಲಿಗೆ ಹೋದ ನಂತರ ಕಂಟ್ರಿ ಮಂಟ್ರಿ ಏರಿಯಾದಲ್ಲಿದ್ದ ದೇವಪ್ಪನ, ತಂದೆ, ತಾಯಿಗೆ ಬೇಟಿಯಾಗಿ ಅವರ ಮುಂದೆ ನಾವು ಮದುವೆಯಾಗುವ ವಿಷಯ ತಿಳಿಸಿದಾಗ ಅವರು  ಅದಕ್ಕೆ ಅವರು ಒಪ್ಪಲಿಲ್ಲಾ ಆಮೇಲೆ ದೇವಪ್ಪನು ಅಲ್ಲಿಯೆ ಸಮೀಪ ಒಂದು ಜೋಪಡಿ ಮಾಡಿ ಅಲ್ಲಿಯೇ ಇಟ್ಟನು. ಇಬ್ಬರೂ ಕೂಡಿ ಕೂಲಿ,ನಾಲಿ ಮಾಡುತ್ತಾ ಇದ್ದೇವು. ಆ ಸಮಯದಲ್ಲಿ ದೇವಪ್ಪ ನಾನು ಬೇಡವೆಂದರು ಕೂಡಾ ಬಲವಂತವಾಗಿ ಹಲವಾರು ಬಾರಿ ನನಗೆ ಲೈಂಗಿಕ ಸಂಭೋಗ ಮಾಡಿರುತ್ತಾನೆ. ನಾನು ಅವನಿಗೆ ನೀನು ನನಗೆ ಇಲ್ಲಿಗೆ ಕರೆದುಕೊಂಡು ಬಂದು ಮದುವೆ ಮಾಡಿಕೊಳ್ಳುವದಾಗಿ ಹೇಳಿ ಬಲವಂತವಾಗಿ ಲೈಂಗಿಕ ಸಂಭೋಗ ಮಾಡಿದ್ದಿ ನಾನು ಇಲ್ಲಿಗೆ ಬರಬೇಕಾದರೆ ಮನೆಯಲ್ಲಿ ಯಾರಿಗೂ ಹೇಳಿಯೂ ಕೂಡಾ ಬಂದಿಲ್ಲಾ ಅಂತಾ ಅಂದಾಗ ನಾನು ಅದಕ್ಕೆ ನಿರಾಕರಿಸುತ್ತಾ ಬಂದಿದ್ದು ಇರುತ್ತದೆ. ದಿನಾಂಕ.02/01/2018 ರಂದು ಮಂಗಳವಾರ ರಾತ್ರಿ 11-30 ಗಂಟೆ ಸುಮಾರಿಗೆ ದೇವ್ಪಪ್ಪನು ತನ್ನ ಅಳಿಯನಾದ ಮರೆಪ್ಪ ಈತನೊಂದಿಗೆ  ಮನೆಗೆ ಬಂದು ಊರಿಗೆ ಹೋಗಲು ಹೇಳಿದ್ದೆನು ಅಂದಿದ್ದಕ್ಕೆ ನಾನು ನಿರಾಕರಿಸಿದ್ದಕ್ಕೆ ದೇವಪ್ಪನು ಕಬ್ಬಿಣದ ರಾಡಿನಿಂದ ನನ್ನ ತೊಡೆಗೆ ಹೊಡೆದನು. ಮತ್ತು ಅದೇ ರಾಡಿನಿಂದ ಮರೆಪ್ಪನು ಕೂಡಾ ಹೊಡೆದನು. ಮತ್ತು ಇಬ್ಬರೂ ಕೂಡಿ ನೀನು ಇಲ್ಲಿಂದ ಹೋಗದಿದ್ದರೇ ನಿನಗೆ ಇಲ್ಲಿಯೆ ಖಲಾಸ ಮಾಡುತ್ತೇವೆ ಅಂತಾ ಮನೆಯಿಂದ ಹೊರಗೆ ಹಾಕಿದರು. ಆಮೇಲೆ ಬೆಂಗಳುರಿನಲ್ಲಿ ಇದ್ದ ನನ್ನ ತಮ್ಮನಾದ ಶಿವಪ್ಪ ತಂ.ನರಸಪ್ಪ ಈತನಿಗೆ ಪೋನ ಮಾಡಿ ನಿಮ್ಮೆ ಅಕ್ಕಳಿಗೆ ಬಂದು ಕರೆದುಕೊಂಡು ಹೋಗು ಅಂತಾ ಹೇಳಿದರು.ಆಗ ನಾನು ಎಲ್ಲಿಗೂ ಹೋಗಲ್ಲಾ ಇಲ್ಲಿಯೆ ಇರುತ್ತೇನೆ. ಅಂತಾ ಅಂದಾಗ ದೇವಪ್ಪನು ಕಾಯ್ದ ರಾಡಿನಿಂದ ನನ್ನ ತೊಡೆಗೆ ಮತ್ತು ಕುಂಡಿಗೆ ಚಪ್ಪೇಗೆ ಬರೆ ಹಾಕಿ ಸುಟ್ಟನು. ಮರುದಿವಸ ನನ್ನ ತಮ್ಮನಾದ ಶಿವಪ್ಪ ನನ್ನ ಹತ್ತಿರ ಬಂದಾಗ ಆತನಿಗೆ ಎಲ್ಲಾ ವಿಷಯವನ್ನು ತಿಳಿಸಿದೆನು. ಆಗಾ ಅಲ್ಲಿ ನಮಗೆ ಏನು ಗೊತ್ತಾಗದ ಕಾರಣ ಗಾಬರಿಯಲ್ಲಿ ನನ್ನ ತಮ್ಮ ಇಂದು ಬೆಳಿಗ್ಗೆ ಯಾದಗಿರಿಗೆ ಕರೆದುಕೊಂಡು ಬಂದು ನನಗೆ ಬಹಳ ನೋವು ಆಗುತ್ತಿದ್ದರಿಂದ ನನ್ನ ತಮ್ಮನು ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆ ಮಾಡಿದ್ದು ಇರುತ್ತದೆ. ಈ ರೀತಿಯಾಗಿ ನನಗೆ ದೇವಪ್ಪನು ಮದುವೆಯಾದಗುವುದಾಗಿ ಹೇಳಿದಾಗ ನನ್ನ ಸ್ವ ಇಚ್ಚೇಯಿಂದ ಬೆಂಗಳೂರಿಗೆ ಹೋದಾಗ ಅಲ್ಲಿ ದೇವಪ್ಪನು ನನಗೆ ನಿರಂತರವಾಗಿ ಬಲವಂತವಾಗಿ ಲೈಂಗಿಕ ಸಂಭೋಗ ಮಾಡಿ ಮದುವೆಯಾಗದೇ ರಾಡಿನಿಂದ ಸುಟ್ಟು ಜೀವದ ಬೆದರಿಕೆ ಹಾಕಿದ ದೇವಪ್ಪ ಮತ್ತು ಆತನ ಅಳಿಯ ಮರೆಪ್ಪ ತಂ. ದಂಡಪ್ಪ ಕುರಿಹಾಳ ಇವರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಿರಿ ಅಂತಾ  ಹಾಜರಪಡಿಸಿದ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.02/2018 ಕಲಂ.324, 376, 506 ಸಂ. 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 03/2018  ಕಲಂ 295 ಐಪಿಸಿ;- ದಿನಾಂಕ 04/01/2018 ರಮದು ಸಾಯಂಕಾಲ 7-00 ಪಿ.ಎಂ. ಕ್ಕೆ ಫಿರ್ಯಾಧಿದಾರನಾದ ಶ್ರೀ ಸಾಬಣ್ಣ ತಂದೆ ಪಾಪಣ್ಣ ನಾಯಕೊಡಿ ಸಾಃ ಎಸ್. ಹೊಸಳ್ಳಿ ಇವರು ಟಾಣೆಗೆ ಬಂದು ಒಂದು ಕನ್ನಡದಲ್ಲಿ ಬರೆದ ಅಜರ್ಿ ಸಲ್ಲಿಸಿದ ಸಾರಾಂಶವೆನೆಂದರೆ ಯಾದಗಿರಿ ತಾಲೂಕಿನ ಎಸ್. ಹೊಸಳ್ಳಿ ಗ್ರಾಮದ ಸಾಬಣ್ಣ ತಂದೆ ಪಾಪಣ್ಣ ನಾಯಕೊಡಿ ವಯಾಃ 55 ವರ್ಷ ಆದ ನಾನು ಎಸ್.ಹೊಸಳ್ಳಿ ಗ್ರಾಮದಲ್ಲಿ ಕಳೆದ ನೂರಾರು ವರ್ಷಗಳಿಂದ ಇರುವ ಗ್ರಾಮದೇವತೆಯ ದೇವಸ್ಥಾನವಾದ ಗುಡ್ಡೇರ, ದೇವಸ್ತಾನ ಹಾಗೂ ದೇವಸ್ಥಾನದಲ್ಲಿರುವ ನಾಲ್ಕು ಮೂತರ್ಿಗಳನ್ನು ಕಳೆದ ರಾತ್ರಿ ಅಂದರೆ ದಿನಾಂಕ 03/01/2018 ರಂದು ಮಧ್ಯರಾತ್ರಿ 12 ರಿಂದ 1-00 ಗಂಟೆಗೆ ಧ್ವಂಸ ಮಾಡಿ ದೇವಸ್ಥಾನವನ್ನು ಕೆಡವಿರುತ್ತಾರೆ,  ಕಳೆದ 50 ವರ್ಷಗಳಿಂದಲೂ ಹಿಂದಿನಿಂದಲೂ ಗ್ರಾಮಸ್ಥರಾದ ನಾವು ಈ ದೇವಸ್ತಾನವನ್ನು ನೋಡಿದ್ದು ಇರುತ್ತದೆ, ಈ ದೇವಸ್ತಾನವು ಸರಕಾರಿ ಜಮೀನಿನಲ್ಲಿದ್ದರೂ ಸಹ ಈ ಜಾಗೆಯ ಪಕ್ಕದಲ್ಲಿರುವ ಸವರ್ೆ ನಂ 71 ರಲ್ಲಿರುವ ಮಸಿದಿಯ ಜಮೀನಿನ ಕಬ್ಜೆ ಮಾಡಿಕೊಮಡಿರುವ ಎರಡು ಕುಟುಂಬದ ಮುಸ್ಲಿಮ್ ಜನಾಂಗಕ್ಕೆ ಸೇರಿದ ವ್ಯಕ್ತಿಗಳು ಈ ದುಷ್ಕೃತ್ಯ ಏಸಗಿರುತ್ತಾರೆ, 14 ಜನ ದುಷ್ಕಮರ್ಿಗಳು ಈ ಕೃತ್ಯ ಏಸಗಿ ನಮ್ಮ ಹಿಂದುಗಳ ಭಾವನೆಗಳಿಗೆ ತಿವೃ ಧಕ್ಕೆ ಉಂಟು ಮಾಡಿ ನೋವುಂಟು ಮಾಡಿರುತ್ತಾರೆ,  1)ಶಬ್ಬೀರ ಪಟೇಲ್ ತಂದೆ ನಬಿ ಪಟೇಲ್ ವಯಾಃ 50 2)ರಫೀಕ್ ತಂದೆ ಶಬ್ಬೀರ್ ಪಟೇಲ್ ವಯಾಃ 22 3)ಮಖ್ಬುಲ್ ಪಟೇಲ್ ತಂದೆ ಉಸ್ಮಾನ್ ಪಟೇಲ್ ವಯಾಃ 45 4)ಹುಸೇನ ಪಟೇಲ್ ತಂದೆ ಮಹ್ಮದಸಾಬ ವಯಾಃ 35 5)ಚಾಂದಪಾಷಾ ತಂದೆ ಮಹ್ಮಸಾಬ ವಯಾಃ 26 6)ಮಹೆಮೂದ್ ತಂದೆ ಮಹ್ಮದಸಾಬ ವಯಾಃ 24 7)ಶಮಿ ತಂದೆ ಮಹ್ಮದಸಾಬ ವಯಾಃ 22 8)ಗೌಸ್ ಪಟೇಲ್ ತಂದೆ ಮಹೆಮೂದ ಸಾಬ ವಯಾಃ 45 9)ಸದ್ದಾಂ ತಂದೆ ಗೌಸ್ ಪಟೇಲ್ ವಯಾಃ 23 10)ಸಿಕಂದರ ತಂದೆ ಗೌಸ್ ಪಟೇಲ್ ವಯಾಃ 21 11)ನಬಿ ಪಟೇಲ್ ತಂದೆ ಸಿಕಂದರ ಪಟೇಲ್ ವಯಾಃ 65 12)ರೈಮಾನ್ ಸಾಬ ತಂದೆ ಉಸ್ಮಾನಸಾಬ ಕಾಕಲವಾರ ವಯಾಃ 40 13)ಯುಸೂಫ್ ಸಾಬ ತಂದೆ ಉಸ್ಮಾನಸಾಬ ವಯಾಃ 42 ಮತ್ತು 14)ತಾಜುದ್ದಿನ ತಂದೆ ಉಸ್ಮಾನಸಾಬ ವಯಾಃ 30 ಇವರೆಲ್ಲರೂ ಸೇರಿಕೊಂಡು ಕಳೆದ ರಾತ್ರಿ ನಮ್ಮ ದೇವಸ್ಥಾನಕ್ಕೆ ನುಗ್ಗಿ ಕೆಡವಿದ್ದಲ್ಲದೇ ದೇವಸ್ತಾನದಲ್ಲಿರುವ ನಾಲ್ಕು ಮೂತರ್ಿಗಳನ್ನು ಧ್ವಂಸಗೊಳಿಸಿ ನಮ್ಮ ನಮ್ಮ ಧಾಮರ್ಿಕ ಭಾವನೆಗಳನ್ನು ಘಾಸಿಕೊಳಿಸಿರುತ್ತಾರೆ, ಈಗಾಗಲೇ ಅವರು ಮಸೀದಿಯ ಜಾಗೆಯನ್ನು ಅತಿಕ್ರಮವಾಗಿ ಕಬ್ಜೆಗೊಳಿಸಿಕೊಂಡು ನಮ್ಮ ದೇವಸ್ಥಾನದ ಪಕ್ಕದಲ್ಲಿಯೇ ಇದ್ದ ಖಬ್ರಸ್ಥಾನವನ್ನು ಸಹ ಅಕ್ರಮವಾಗಿ ಮಾರಿಕೊಂಡು ತಿಂದು ತೆಗಿದ್ದಲ್ಲದೇ ಈದಿಗ ತಮ್ಮ ದುನರ್ಿಯತನ್ನು ತೊರಿಸಿ ನಮ್ಮ ಹಿಂದುಗಳ ದೇವಸ್ತಾನವನ್ನು ಸಹ ಅತಿಕ್ರಿಸುವ ದುರುದ್ದೇಶದಿಂದ ದೇವಸ್ಥಾನವನ್ನು ಬಿಳಿಸಿದ್ದಲ್ಲದೇ 4 ದೇವರ ಮೂತರ್ಿಗಳನ್ನು ಧ್ವಂಸ ಗೊಳಿಸಿರುತ್ತಾರೆ, ತಮ್ಮ ಕೋಮಿನ ಜಮೀನು ನುಂಗಿ ನೀರು ತಾವು ತಕ್ಕ ಪಾಠ ಕಲಿಸದಿದ್ದರೆ ನಾವುಗಳು ಮುಂದೆ ಅನಿವಾರ್ಯವಾಗಿ ತಮ್ಮ ಧಾಮರ್ಿಕ ಭಾವನೆಗಳಿಗೆ ನೋವುಂಟು ಮಾಡಿದ ದುಷ್ಕಮರ್ಿಗಳ ವಿರುಧ ಹಂತ ಹಂತವಾಗಿ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ತಿಳಿಯ ಬಯಸುತ್ತೆವೆ, ತ್ವರಿತವಾಗಿ ಈ ಒಂದು ಅಕ್ಷಮ್ಯ ಅಪರಾಧ ವೆಸಗಿದ 14 ಜನರ ವಿರುಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅವರೆಲ್ಲರನ್ನು ಬಂದಿಸಿ 24 ಗಂಟೆಗಳಲ್ಲಿ ಕ್ರಮ ಜರುಗಿಸಬೇಕೆಂದು ಹಕ್ಕೊತ್ತಾಯ ಮಾಡುತ್ತೆವೆ, ಇಲ್ಲವಾದಲ್ಲಿ ಮುಂದಾಗುವ ಘಟನೆಗಳಿಗೆ ಜಿಲ್ಲಾಡಳಿತ ಹೊಣೆಯಾಗಲಿದೆ ಎಂದು ಎಚ್ಚರಿಕೆ ನಿಡ ಬಯಸುತ್ತೆವೆ, ಅಂತಾ ಅಜರ್ಿ ಸಾರಾಂಸ ಮೇಲಿಂದ ಠಾಣೆ ಗುನ್ನೆ ನಂ 03/2018 ಕಲಂ 295 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.    
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 01/2018 ಕಲಂ 279 ????? ???? 192(?), 190(2), 196, 3/181, 185 ಐಎಂವಿ ಆಕ್ಟ್;- ದಿನಾಂಕ 04/01/2018  ರಂದು ಬೆಳಿಗ್ಗೆ 12-45 ಪಿ.ಎಂ.ಕ್ಕೆ ಮಾನ್ಯ ಪಿ.ಎಸ್. ಸಾಹೇಬರು ಠಾಣೆಗೆ ಬಂದು ತಮ್ಮದೊಂದು ಲಿಖಿತ ವರದಿ ಸಲ್ಲಿಸಿದ್ದರ ಸಾರಾಂಶವೇನೆಂದರೆ ನಾನು ಸುಖದೇವ್ ಪಿ.ಎಸ್. ಸಂಚಾರಿ ಪೊಲೀಸ ಠಾಣೆ ಯಾದಗಿರಿ ತಮಗೆ ವರದಿ ಮೂಲಕ ಸೂಚಿಸುವುದೆನೆಂದರೆ ಇಂದು ದಿನಾಂಕ: 04/01/2018 ರಂದು ಬೆಳಿಗ್ಗೆ 11-45 .ಎಂ.ಸುಮಾರಿಗೆ ನಾನು ಯಾದಗಿರಿ ನಗರದ ಸಂಚಾರಿ ಕರ್ತವ್ಯ ಕುರಿತು ನಾನು ಮತ್ತು ಸಿಬ್ಬಂದಿಯವರೊಂದಿಗೆ ಕೂಡಿಕೊಂಡು ಯಾದಗಿರಿ ನಗರದ ಸುಭಾಷ್ ಸರ್ಕಲ್ ಹತ್ತಿರ ಕರ್ತವ್ಯದ ಮೇಲಿರುವಾಗ  ಯಾದಗಿರ ಹಳೆ ಬಸ್ ನಿಲ್ದಾಣದ ಕಡೆಯಿಂದ ಒಂದು ಆಟೋ ಟಂ,ಟಂ ನಂಬರ ಕೆ,,33, 8305 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷಿತನದಿಂದ ನಡೆಸಿಕೊಂಡು ಬರುತ್ತಿರುವದನ್ನು ಕಂಡು ಸದರಿ ವಾಹನಕ್ಕೆ ಕೈ ಮಾಡಿ ನಿಲ್ಲಿಸಿ ನೋಡಲು ಆಟೋದಲ್ಲಿ ಸುಮಾರು  15 ಜನರು ಇದ್ದು ತನ್ನ ಪರಮಿಟ್ ಉಲ್ಲಂಘನೆ ಮಾಡಿ ಹೆಚ್ಚಿನ ಜನರನ್ನು ಹಾಕಿಕೊಂಡು ಹೊರಟಿದ್ದು, ಜೀಪ್ ವಾಹನ ಚಾಲಕನ ಹೆಸರು ವಿಚಾರಿಸಲು ಅವನು ತನ್ನ ಹೆಸರು ಕುಮಾರ ತಂದೆ ಪುರಂದರಾವ್ ಚವ್ಹಾನ ವಯ;20 ವರ್ಷ, ಜಾ;ಲಂಬಾಣಿ, ;ಆಟೋ ನಂ.ಕೆಎ-33, 8305 ನೇದ್ದರ ಚಾಲಕ, ಸಾ;ಕನ್ಯಾಕೊಳ್ಳುರ ತಾ;ಶಹಾಪುರ ಅಂತಾ ತಿಳಿಸಿದ್ದು, ಚಾಲಕನು ಮದ್ಯಪಾನ ಮಾಡಿದ್ದು ಕಂಡು ಬಂದಿದ್ದರಿಂದ ಆತನಿಗೆ ನಮ್ಮ ಹತ್ತಿರವಿದ್ದ ಬ್ರೀತ್ ಎನಲೇಜರ್ (ಆಲ್ಕೋಹಾಲ್ ) ಯಂತ್ರದ ಸಹಾಯದಿಂದ ಕುಡಿತದ ಬಗ್ಗೆ ಪರೀಕ್ಷಿಸಿದ್ದು ಚಾಲಕನು ಮದ್ಯಪಾನ ಸೇವನೆ ಮಾಡಿದ್ದರ ಬಗ್ಗೆ ಸಾಬೀತಾಗಿದ್ದು ಇರುತ್ತದೆಸದರಿ ಆಟೋದ ದಾಖಲಾತಿಗಳನ್ನು ಹಾಜರುಪಡಿಸಲು ಚಾಲಕನಿಗೆ ಸೂಚಿಸಿದಾಗ ಆಟೋದ ಇನ್ಸುರೆನ್ಸ್, ಆಟೋ ಚಾಲನ ಪರವಾನಿಗೆ ಪ್ರಮಾಣ ಪತ್ರ, ವಾಯು ಮಾಲಿನ್ಯ ಪ್ರಮಾನ ಪತ್ರ, ಇರುವುದಿಲ್ಲ ಅಂತಾ ತಿಳಿಸಿರುತ್ತಾನೆ. ಸದರಿ ವಾಹನವನ್ನು ಚಾಲಕನ ಸಮೇತ ಮತ್ತು ಬ್ರೀತ್ ಎನಲೇಜರ್ ನಿಂದ ಪರೀಕ್ಷಿಸಿದ ರಸೀದಿ ಮೂಲ ಪ್ರತಿಯೊಂದಿಗೆ ಮುಂದಿನ ಕ್ರಮ ಕುರಿತು ತಮ್ಮ ಮುಂದೆ  ಹಾಜರು ಪಡಿಸಿದ್ದು ಇರುತ್ತದೆಸದರಿ ಆಟೋ ಟಂ,ಟಂ ನಂ.ಕೆಎ-33, 8605 ನೆದ್ದರ ಚಾಲಕನ ಮೇಲೆ ಮುಂದಿನ ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ಕೊಟ್ಟ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 01/2018 ಕಲಂ 279 ಐಪಿಸಿ ಸಂಗಡ 192(), 190(2), 196, 3/181, 185 ಐಎಂವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 02/2018 ಕಲಂ, 279,337,338 ಐಪಿಸಿ;- ದಿನಾಂಕ:04/01/2018 ರಂದು ಯುನಿಟೆಡ್ ಆಸಪತ್ರೆ ಕಲಬುಗರ್ಿಯಿಂದ ಆರ್.ಟಿ.ಎ ಎಂ.ಎಲ್.ಸಿ ಮಾಹಿತಿ ಬಂದ ಮೇರೆಗೆ ಶ್ರೀ ಶರಣಪ್ಪ ಹೆಚ್.ಸಿ 15 ರವರು ಕಲಬುಗರ್ಿ ಯುನಿಟೈಡ್ ಆಸ್ಪತ್ರೆಗೆ ಬೇಟಿ ಮಾಡಿ ಗಾಯಾಳು ಪಿಯರ್ಾದಿದಾರರಾದ ಶ್ರೀ ಭೀಮರೆಡ್ಡಿ ತಂದೆ ಭೀಮಣ್ಣ ಹಲಗಿ ವಯಾ: 20 ವರ್ಷ ಉ: ವಿಧ್ಯಾಥರ್ಿ ಜಾ: ಮಾದಿಗ ಸಾ: ಮದ್ರಿಕಿ ತಾ: ಶಹಾಪೂರ ರವರ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 08:30 ಪಿಎಂಕ್ಕೆ ಬಂದು ಹಾಜರ ಪಡೆಸಿದ್ದು ಸದರಿ ಪಿಯರ್ಾದಿ ಹೇಳಿಕೆ ಸಾರಾಂಶವೆನೆಂದರೆ ದಿನಾಂಕ;03/01/2018 ರಂದು 03:30 ಪಿಎಂ ಸುಮಾರಿಗೆ ಆರೋಪಿತರಿಬ್ಬರೂ ತಮ್ಮ ತಮ್ಮ ಮೋಟಾರ್ ಸೈಕಲ್ಗಳನ್ನು ಅತೀ ವೇಗ ಹಾಗೂ ಅಲಕ್ಷ ತನದಿಂದ ನಡೆಸಿ ಸಿಂಗನಳ್ಳಿ ಸರಕಾರಿ ಹಳ್ಳದ ಹತ್ತೀರ ಮುಖಾಮುಖಿ ಡಿಕ್ಕಿ ಪಡೆಸಿದ ಪರಿಣಾಮ ಪಿಯರ್ಾದಿ, ಆರೋಪಿತರಿಗೆ ಸಾದಾ ಮತ್ತು ಭಾರಿ ಗಾಯಗಳಾಗಿರುತ್ತವೆ ಅಂತಾ ಸಾರಾಂಶದ ಮೇಲಿಂದ 08:30 ಪಿಎಂಕ್ಕೆ ಠಾಣೆ ಗುನ್ನೆ ನಂ, 02/2018 ಕಲಂ 279,337,338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 
  
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 01/2018 ಕಲ 143, 147, 323, 324, 504, 506 ಸಂ. 149 ಐಪಿಸಿ;- ದಿನಾಂಕ 02.01.2018 ರಂದು ಪಿರ್ಯಾಧಿಯ ಮನೆಯಲ್ಲಿ ದೇವರ ಕಾಯರ್ಾಕ್ರಮ ಇದ್ದುದ್ದರಿಂದ ಆರೋಪಿತರು ದೇವರ ಕಾಯರ್ಾ ಕ್ರಮಕ್ಕೆ ಬಂದು ಪಿರ್ಯಾಧಿ ಮತ್ತು ಆರೋಪಿತರು ಮಾತಾಡುತ್ತ ಸಾಯಂಕಾಲ 7.30 ಪಿ.ಎಂ ಕ್ಕೆ ಪಿರ್ಯಾಧಿ ಮನೆಯಲ್ಲಿ ಕುಳಿತಾಗ ಪಿರ್ಯಾಧಿ ತನ್ನ ಸೊಸೆ ಶಾಂತಿಬಾಯಿಗೆ ಪೆಟ್ಟಿಗೆ ತೆರೆಯಬೇಡ ಅಂತಾ ಅಂದಿದ್ದಕ್ಕೆ ಆಕೆಯ ತಂದೆ ಹಾಗು ಚಿಕ್ಕಪ್ಪ ಎಲ್ಲರೂ ಕೂಡಿಕೊಂಡು ಅಕ್ರಮಕೂಟ ರಚಿಸಿಕೊಂಡು ಪಿರ್ಯಾದಿ ದಾರರಿಗೆ ಅವಾಚ್ಯವಾಗಿ ಬೈದು ಮಣ್ಣಿನ ಹಂಚಿನಿಂದ ತೆಲೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿ ಕೈಯಿಂದ, ಬಡಿಗೆಯಿಂದ ಕಲ್ಲಿನಿಂದ ಹೊಡೆದು ಗುಪ್ತಪೆಟ್ಟು ಮಾಡಿ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ

No comments: