Police Bhavan Kalaburagi

Police Bhavan Kalaburagi

Sunday, March 18, 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:- 17/03/2018 ರಂದು ಅಮವಾಸ್ಯೆ ಇದ್ದ ಪ್ರಯುಕ್ತ ಶ್ರೀಮತಿ ಮಹಾದೇವಿ ಗಂಡ ಗುರುಲಿಂಗಯ್ಯಾ ಮಠಪತಿ ಸಾ:ಅಂಕಲಗಾ ತಾ:ಜಿ:ಕಲಬುರಗಿ ಹಾವ: ಜಾಧವ ಲೇಔಟ ಬಿದ್ದಾಪೂರ ಕಾಲೋನಿ ಕಲಬುರಗಿ ಮತ್ತು ಗಂಡ  ಇಬ್ಬರು ಕೂಡಿಕೊಂಡು ಮೋಟಾರ ಸೈಕಲ ನಂ ಕೆಎ-32 ಇಇ-0614 ನೇದ್ದರಲ್ಲಿ  ಕಲಬುರಗಿಯಿಂದ ರಟಕಲ್ ರೇವಣಸಿದ್ದೇಶ್ವರ ದೇವರ ಗುಡಿಗೆ ಹೋಗುವ ಕುರಿತು ಮುಂಜಾನೆ 11:15 ಗಂಟೆ ಸುಮಾರಿಗೆ ಎಂ.ಆರ್.ಎಪ್ ಟೈಯರ್ ಕಂಪನಿಯ ಕ್ರಾಸ ಹತ್ತಿರ ಹೋಗುತ್ತಿದ್ದಾಗ ಅದೇ ವೇಳೆಗೆ ಎದರಗಡೆಯಿಂದ ಕಾರ ನಂ ಕೆಎ-56 ಎಂ-432 ನೇದ್ದರ ಚಾಲಕ ಸಿದ್ದಲಿಂಗ ತಂದೆ ರಾಘವೆಂದ್ರ ಪೊಲೀಸ ಪಾಟೀಲ ಇತನು ತನ್ನ ಕಾರನ್ನು ಅತೀವೇಗ ಮತ್ತು ನಿಸ್ಕಾಜಿತನದಿಂದ ನಡೆಸಿಕೊಂಡು ಬಂದು ನಾವು ಹೋಗುತ್ತಿದ್ದ  ಮೋಟಾರ ಸೈಕಲದ ಎದರುನಿಂದ ಜೋರಾಗಿ ಡಿಕ್ಕಿ ಕೊಟ್ಟು ಅಪಘಾತ ಪಡಿಸಿದ್ದರಿಂದ್ದ ನನ್ನ ಗಂಡ ಗುರಲಿಂಗಯ್ಯಾ ಇತನಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಫಿರ್ಯಾದಿ ಮಹಾದೇವಿ ಮತ್ತು ಕಾರ ಚಾಲಕ ಸಿದ್ದಲಿಂಗ ಇಬ್ಬರಿಗೂ ಗಾಯಗಳಾಗಿದ್ದು ಇರುತ್ತದೆ. ಕಾರಣ ಸದರಿ ಈ ಮೇಲ್ಕಂಡ ಕಾರ ನಂ ಕೆಎ-56 ಎಂ-432 ನೇದ್ದರ ಚಾಲಕ ಸಿದ್ದಲಿಂಗ ತಂದೆ ರಾಘವೆಂದ್ರ ಪೊಲೀಸ ಪಾಟೀಲ ಇನತ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಜಾತಿ ನಿಂದನೆ ಪ್ರಕರಣ :
ನರೋಣಾ ಠಾಣೆ :    ಶ್ರೀ.ಕಲ್ಯಾಣರಾವ ತಂದೆ ಮಾರುತಿ ಹಾದಿಮನಿ ಸಾ||ನರೋಣಾ ಗ್ರಾಮ ಇವರು ದಿನಾಂಕ:16-03-2018 ರಂದು ಮಧ್ಯಾಹ್ನ ನಾನು ಮತ್ತು ನಮ್ಮೂರಿನ ಗ್ರಾಮ ಪಂಚಾಯಿತಿಯ ಸದಸ್ಯರಾದ ಪ್ರಭುಲಿಂಗ ವ್ಹಿ.ಹೀರಾ ಹಾಗೂ ಸ್ನೇಹಿತರಾದ ರಾಜಕುಮಾರ ತಂದೆ ಭೀಮಶ್ಯಾ ರಾಗಿರಾಜಕುಮಾರ ತಂದೆ ಮಲ್ಲೇಶಿ ಕಡ್ಡಿ ಅವರು ಕೂಡಿಕೊಂಡು ನನ್ನ ವಾಸಸ್ಥಳ ತರಬೇಕೆಂದು ನಮ್ಮೂರಿನ ಗ್ರಾಮ ಪಂಚಾಯಿತಿಯ ಕಾರ್ಯಲಯಕ್ಕೆ ಹೋದಾಗ ಅಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಇರಲಿಲ್ಲ ಮನೆಯಲ್ಲಿರುವುದಾಗಿ ತಿಳಿದುಕೊಂಡು ಮನೆಗೆ ಹೋಗಿ ವಾಸಸ್ಥಳ ಬೇಕೆಂದು ವಿನಂತಿಸಿಕೊಂಡೇವು ಅದಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ನಿಮಗೆ ಯಾರು ಸಹಿಮಾಡಲ್ಲ ಇಡಿ ನಿಮ್ಮ ಹೊಲಗೇರಿಗೆ ನಾನು ಸಹಿ ಮಾಡುತ್ತೇನೆಂದ ಜಾತಿ ನಿಂದನೆ ಮತ್ತು ನನ್ನ ಮನಸಿಗೆ ನೊವುಂಟು ಮಾಡಿರುತ್ತಾರೆ. ಆದ್ದರಿಂದ ಗ್ರಾಮ ಪಂಚಾಯಿತ ಅಧ್ಯಕ್ಷರಾದ ಶ್ರೀಮತಿ.ಶರಣಮ್ಮ ಗಂಡ ರಾಚಯ್ಯ ಬಾಳಿ ಸಾ||ನರೋಣಾ ಇವರ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಚಂದ್ರಶೇಖರ ತಂದೆ ನಿಂಗಪ್ಪ ದಿಗ್ಗಾಂವಿ ಸಾ|| ಪಡದಳ್ಳಿ ತಾ|| ಜೇವರ್ಗಿ ರವರಿಗೆ ತಮ್ಮೂರ ಸಿಮಾಂತರದಲ್ಲಿ ನಮ್ಮದೊಂದು ಹೊಲ ಇದ್ದು ಅದರ ಸರ್ವೆ ನಂ 85/4 ನೇದ್ದರಲ್ಲಿ 2 ಎಕರೆ 5 ಗುಂಟೆ ಜಮೀನು ಇದ್ದು ಅದು ನಮ್ಮ ತಂದೆಯವರಾದ ನಿಂಗಪ್ಪ ತಂ ಚಂದಪ್ಪ ದಿಗ್ಗಾವಿ ರವರ ಹೆಸರಿಗೆ ಇರುತ್ತದೆಹೊಲದ ಸಲುವಾಗಿ ನಮ್ಮ ತಂದೆಯವರು ಬಳಬಟ್ಟಿ ಸೊಸೈಟಿಯಲ್ಲಿ 50,000/- ರೂಪಾಯಿ ಹಾಗೂ ಖಾಸಗಿಯಾಗಿ 4 ಲಕ್ಷ ಸಾಲ ಮಾಡಿಕೊಂಡಿದ್ದರುನಮ್ಮ ತಂದೆಯವರು ಆಗಾಗ ನಮ್ಮ ಮುಂದೆ ನಮಗೆ ಸಾಲ ಬಹಳಾಗಿದೆ ಊರಲ್ಲಿ ನಾನು ಮುಖ ಎತ್ತಿ ತಿರುಗಾಡಲು ಆಗುತ್ತಿಲ್ಲಾನಾನು ಸತ್ತರೆ ಎಲ್ಲಾ ಸರಿಹೋಗುತ್ತದೆ ಅಂತಾ ಅನ್ನುತ್ತಿದ್ದರು ಆಗ ನಾವು ಅವರಿಗೆ ಸಮಾಧಾನ ಹೇಳುತ್ತಾ ಬಂದಿರುತ್ತೇವೆ. ದಿನಾಂಕ; 16-03-2018 ರಂದು ರಾತ್ರಿ 9;00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಂದೆ ಹಾಗು ತಾಯಿ ಮಲ್ಲಮ್ಮ ಹಾಗು ತಮ್ಮ ಮೌನೇಶ ರವರು ಊಟ ಮಾಡಿಕೊಂಡು ನಂತರ ನಾನು ನಮ್ಮ ತಾಯಿ ಮತ್ತು ತಮ್ಮ ಕೂಡಿ ಮನೆ ಹೊರಗೆ ಮಲಗಿಕೊಂಡೆವುನಮ್ಮ ತಂದೆಯವರು ಮನೆ ಒಳಗೆ ಮಲಗಿಕೊಂಡಿದ್ದರು, 10;30 ಪಿ.ಎಂ ಸುಮಾರಿಗೆ ನಮ್ಮ ತಂದೆ ಚೀರಾಡುವ ಸಪ್ಪಳ ಕೇಳಿ ನಾವೆಲ್ಲರು ಮನೆ ಒಳಗೆ ಹೋಗಿ ನೋಡಿದಾಗ ನಮ್ಮ ತಂದೆಯವರು ವಾಂತಿ ಮಾಡಿಕೊಳ್ಳುತ್ತಾ ನಾನು ವಿಷ ಸೇವನೆ ಮಾಡಿರುತ್ತೇನೆ ಅಂತಾ ಅಂದರುನಂತರ ನಮ್ಮ ತಂದೆಯವರಿಗೆ ಉಪಚಾರ ಕುರಿತು  ನಾವು ಮತ್ತು ನಮ್ಮ ಸಂಬಂಧಿಕನಾದ ನಿಂಗಪ್ಪ ತಂದೆ ಯಮನಪ್ಪ ಹಂಗರಗಿ ರವರು ಕೂಡಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಶಹಾಪೂರ ಸರಕಾರಿ ಆಸ್ಪತ್ರೆ ಹೋಗಿ ನಂತರ ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆಇಂದು ದಿನಾಂಕ 17-03-2018 ರಂದು ಬೆಳಗಿನ ಜಾವ ನಮ್ಮ ತಂದೆ ವಿಷದ ಬಾಧೆಯಿಂದ ಆಸ್ಪತ್ರೆಯಲ್ಲಿ ಉಪಚಾರಪಡೆಯುತ್ತಾ ಮೃತ ಪಟ್ಟಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: