Police Bhavan Kalaburagi

Police Bhavan Kalaburagi

Monday, June 25, 2018

BIDAR DISTRICT DAILY CRIME UPDATE 25-06-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 25-06-2018

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 167/2018, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 23-06-2018 ರಂದು ಫಿರ್ಯಾದಿ ರಾಜಕುಮಾರ ತಂದೆ ಬಸವರಾಜ ಪಾಟೀಲ ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ಧನ್ನೂರಾ, ತಾ: ಭಾಲ್ಕಿ ರವರು ಹೊಲದಲ್ಲಿ ಕೆಲಸ ಮುಗಿಸಿಕೊಂಡು ಹೊಲದಲ್ಲಿ ಆಕಳು ಮತ್ತು ಎಮ್ಮೆಗಳ ಹಾಲು ಕರೆದು ಡೈರಿಗೆ ಹಾಕಲು ಕ್ಯಾನಿನಲ್ಲಿ ತುಂಬಿಕೊಂಡು ತಮ್ಮೂರ ಹಾಲಿನ ಡೈರಿಗೆ ಹಾಲು ಹಾಕಲು ನಡೆದುಕೊಂಡು ಬರುತ್ತಿದ್ದಾಗ ಖಾನಾಪೂರ - ಧನ್ನೂರಾ ಮಾರ್ಗದ ತಮ್ಮೂರ ಹೈದರನ ಮನೆಯ ಎದುರುಗಡೆ ಬರುತ್ತಿದ್ದಾಗ ಎದುರಿನಿಂದ ಅಂದರೆ ಧನ್ನೂರಾ ಕಡೆಯಿಂದ ಖಾನಾಪೂರ ಕಡೆಗೆ ಹೊಗುವ ಮೊಟಾರ ಸೈಕಲ ನಂ. ಕೆಎ-39/ಜೆ-9550 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿಜೋರಾಗಿ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಮಾಡಿದನು, ಸದರಿ ಅಪಘಾತದಿಂದ ಫಿರ್ಯಾದಿಯ ಬಲಗಾಲ ಮೊಳಕಾಲ ಮೂಳೆ ಮುರಿದಿರುತ್ತದೆ, ಬಲಗಾಲ ತೊಡೆಯ ಮೂಳೆ ಮುರಿದಿರುತ್ತದೆ ಮತ್ತು ಬಲಗೈ ತೊರು ಬೆರಳು, ನಡುವಿನ ಬೆರಳು ಉಂಗುರ ಬೆರಳು ಮೂಳೆ ಮುರಿದಿರುತ್ತದೆ ಮತ್ತು ಬಲಗಲ್ಲದ ಮೇಲೆ ತರಚಿದ ರಕ್ತಗಾಯವಾಗಿರುತ್ತದೆ, ಸದರಿ ಘಟನೆಯನ್ನು ತಮ್ಮೂರ ಬಸವರಾಜ ಖಡ್ಕೆ, ಉಮಾಕಾಂತ ಬಾವಗೆ ಇವರು ನೊಡಿರುತ್ತಾರೆ, ಅಪಘಾತ ಪಡಿಸಿದ ನಂತರ ಆರೋಪಿಯು ತನ್ನ ದ್ವೀಚಕ್ರ ವಾಹನ ನಿಲ್ಲಿಸದೆ ಓಡಿಸಿಕೊಂಡು ಹೊಗಿರುತ್ತಾನೆಂದು ಕೊಟ್ಟ ಫಿರ್ಯಾದು ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 24-06-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: