Police Bhavan Kalaburagi

Police Bhavan Kalaburagi

Thursday, July 19, 2018

BIDAR DISTRICT DAILY CRIME UPDATE 19-07-2018


                                                                                                                                                                                                                                                
¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 19-07-2018

ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 138/2018, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 18-07-2018 ರಂದು ಫಿರ್ಯಾದಿ ರವಿಕಾಂತ ತಂದೆ ಯಾದವರಾವ ವಯ: 45 ವರ್ಷ, ಜಾತಿ: ಎಸ.ಸಿ ಮಾದಿಗ, ಸಾ: ಲಖಣಗಾವ, ತಾ: ಭಾಲ್ಕಿ ರವರ ಮಗಳಾದ ಶಾಹೂ ತಂದೆ ರವಿಕಾಂತ ವಯ: 10 ವರ್ಷ ಇಕೆಯು ತನ್ನ ಮನೆಯಿಂದ ಶಾಲೆಗೆ ಹೋಗುವಾಗ ದಾರಿಯಲ್ಲಿ ಸುಭಾಷ ಚೌಕ ಹತ್ತಿರ ಆರೋಪಿ ಮಕ್ಬುಲ ತಂದೆ ಇಬ್ರಾಹೀಮ ಸಾ: ಲಖನಗಾವ  ಇತನು ತನ್ನ ಟ್ರ್ಯಾಕ್ಟರನ್ನು ಅತಿವೇಗ ಹಾಗೂ ಅಜಾಗುರುಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಮಗಳಿಗೆ ತಲೆಯಲ್ಲಿ, ಮೋಳಕಾಲ ಹತ್ತಿರ ಭಾರಿ ರಕ್ತಗಾವಾಗಿದ್ದು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ಶಾಹೂ ಇಕೆಯು ಮ್ರತಪಟ್ಟಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಲಿಖಿತ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 92/2018, ಕಲಂ. 324, 504 ಐಪಿಸಿ ಮತ್ತು 3(1) (ಆರ್) (ಎಸ್) ಎಸ್.ಸಿ/ಎಸ್.ಟಿ 2014 ಮತ್ತು 3(10) ಎಸ್.ಸಿ/ಎಸ್.ಟಿ ಪಿಓಎ ಕಾಯ್ದೆ 1989 ಜೊತೆ 34 ಐಪಿಸಿ :-
ದಿನಾಂಕ 18-07-2018 ರಂದು ಫಿರ್ಯಾದಿ ಲಕ್ಷ್ಮಿಕಾಂತ ತಂದೆ ಗೋಪಾಲ ವಾಡೆ ವಯ: 22 ವರ್ಷ, ಜಾತಿ: ಪರಿಶಿಷ್ಟ ಜಾತಿ, ಸಾ: ಮಂಗಲಗಿ, ತಾ: ಹುಮನಾಬಾದ ರವರು ತಿಂಡಿ ತಿನ್ನಲು ಹರೀಶ ತಂದೆ ರಾಮಚಂದ್ರ ಸಾ: ಮಂಗಲಗಿ ಇವರ ಜೊತೆಯಲ್ಲಿ ಖೇಣಿ ರಂಜೋಳ ಕ್ರಾಸ ಹತ್ತಿರ ಇರುವ ಅವಂಟಗೇರ ಇವರ ಹೊಟೇಲದ ಎದುರುಗಡೆ ನಿಲ್ಲುವಷ್ಟರಲ್ಲಿ ಗ್ರಾಮದ ಸಂಜೀವ ತಂದೆ ಮಾಣಿಕರಡ್ಡಿ ಇವರು ಸಹ ಸದರಿ ಹೊಟೇಲದ ಎದುರುಗಡೆ ಬಂದು ನಿಂತಿದ್ದು, ಆ ಸಮಯಕ್ಕೆ ಹರೀಷ ಇತನು ಸಂಜೀವ ಇತನಿಗೆ ನಮಸ್ಕಾರ ಮಾಡಿದ್ದು ಆಗ ಸಂಜೀವ ಇತನು ಫಿರ್ಯಾದಿಗೆ ನಮಸ್ಕಾರ ಮಾಡಲು ಆಗುವುದಿಲ್ಲಾ ಅಂತಾ ಅವಾಚ್ಯವಾಗಿ ಬೈದಾಗ ಹರೀಶ ಇತನು ಈ ರೀತಿ ಬೈಯುವದು ಸರಿಯಿಲ್ಲಾ ಬೈಬೇಡಿರಿ ಅಂತಾ ಅಂದಾಗ ಸಂಜು ಇತನು ಹರೀಷ ಇತನಿಗೆ ನಿನೇನು ಮಹಾ ಅಂತಾ ಅವಾಚ್ಯವಾಗಿ ಬೈದನು, ಆಗ ಫಿರ್ಯಾದಿಯು ಸಂಜು ಇತನಿಗೆ ಹಿಗೆಕೆ ಬೈಯುತ್ತಿದ್ದಿ ಅಂತಾ ಕೇಳಲು ಹೊದಾಗ ನಿನೇನು ಕೇಳುತ್ತಿ ಅಂತಾ ಅವಾಚ್ಯವಾಗಿ ಬೈದು ಅಲ್ಲಿಂದ ಅವನು ಮಂಗಲಗಿ ಗ್ರಾಮಕ್ಕೆ ಹೊಗಿದ್ದು, ಫಿರ್ಯಾದಿಯು ಸಹ ಮಂಗಲಗಿ ಗ್ರಾಮಕ್ಕೆ ಬಂದಿದ್ದು ಇರುತ್ತದೆ, ನಂತರ ಫಿರ್ಯಾದಿಯು ಪುನ: ಖೇಣಿ ರಂಜೋಳ ಕ್ರಾಸ ಹತ್ತಿರ ಇರುವ ಅವಂಟಗೇರ ಇವರ ಹೊಟಲಕ್ಕೆ ಚಹಾ ಕುಡಿಯಲು ಹೊಟೇಲ ಎದರುಗಡೆ ನಿಂತಾಗ ಅಲ್ಲಿ ಸಂಜೀವ ಇತನು ಬಂದು ಲಚ್ಚಾ ನಾನು ನಿನಗೆ ನೋಡಿಕೊಳ್ಳುತ್ತೇನೆ ಅಂತಾ ಅಂದಾಗ ಎನು ನೊಡಿಕೊಳ್ಳುತ್ತಿರಿ ಅಂತಾ ಅಂದು ಕೇಳಿ ಫಿರ್ಯಾದಿಯು ಮಂಗಲಗಿ ಗ್ರಾಮಕ್ಕೆ ಹೊಗುತ್ತಿರುವಾಗ ಮಂಗಲಗಿ ಗ್ರಾಮದ ಅಂಬೆಡ್ಕರ ವೃತ್ತದ ಹತ್ತಿರ ಆರೋಪಿತರಾದ ಸಂಜೀವ ತಂದೆ ಮಾಣಿಕರಡ್ಡಿ ಮತ್ತು ಅವನ ಅಣ್ಣನಾದ ರುಕ್ಮಾರಡ್ಡಿ ಇಬ್ಬರು ಫಿರ್ಯಾದಿಗೆ ಅಕ್ರಮವಾಗಿ ತಡೆದು ಹೊಲ್ಯಾ ನನಗೆ ಎದುರು ಮಾತಾಡುತ್ತಿ ಅಂತಾ ಅಂದು ಸಂಜುರೆಡಿ ಇತನು ಫಿರ್ಯಾದಿಯ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಬಾಯಿ ಮೇಲೆ ಹೊಡೆದು ಮೇಲಿನ ತುಟಿಗೆ ಗುಪ್ತಗಾಯ ಪಡಿಸಿದ್ದು ಮತ್ತು ಅಲ್ಲಿಯೇ ಬಿದ್ದ ಒಂದು ಕೊಡ್ಡಿಯ ಕಾವಿನಿಂದ ಸಂಜುರಡ್ಡಿ ಇತನು ತಲೆಯಲ್ಲಿ ಹೊಡೆದು ರಕ್ತಗಾಯ ಪಡಿಸದ್ದು ಅಲ್ಲದೆ ರುಕ್ಮಾರಡ್ಡಿ ಸಹ ಇತನು ಅದೆ ಕೊಡಲಿಯ ಕಾವಿನಿಂದ ಬಲಗೈ ಮೇಲೆ ಹೊಡೆದು ರಕ್ತಗಾಯ ಪಡಿಸಿದ್ದು ಇರುತ್ತದೆ, ಸದರಿ ಜಗಳವನ್ನು ಗ್ರಾಮದ ಸಂತೋಷರಡ್ಡಿ, ಪ್ರಭುರಡ್ಡಿ, ಸಂಗಪ್ಪಾ ಪಾಟೀಲ ಇವರುಗಳು ನೋಡಿ ಜಗಳ ಬಿಡಿಸಿರುತ್ತಾರೆಂದು ನೀಡಿದ ಫಿರ್ಯಾದು ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 177/2018, ಕಲಂ. 279, 338 ಐಪಿಸಿ :-
ದಿನಾಂಕ 18-07-2018 ರಂದು ಫಿರ್ಯಾದಿ ರವಿ ತಂದೆ ವೈಜಿನಾಥ ನಿಜಾಮಪೂರೆ ವಯ: 34 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಸಿಂದಬಂದಗಿ, ತಾ: ಹುಮನಾಬಾದ ರವರು ತನ್ನ ಮೊಟಾರ ಸೈಕಲ ಮೇಲೆ ಬೀದರಿಂದ ಸಿಂದಬಂದಗಿ ಗ್ರಾಮಕ್ಕೆ ಹೊಗುತ್ತಿರುವಾಗ ಬೀದರ ಹುಮನಾಬಾದ ರಸ್ತೆಯ ಕಟ್ಟಿತುಗಾಂವ ಕ್ರಾಸ ಕೆನಾಲ ಹತ್ತಿರ ಬಂದಾಗ ತಮ್ಮೂರ ಜ್ಞಾನಿ ತಂದೆ ಬಾಬಣ್ಣಾ ಪ್ರಭಾ ಹಾಗು ಆತನ ಅಕ್ಕ ಲಕ್ಷ್ಮೀಬಾಯಿ ಗಂಡ ಶಿವರಾಜ ಬಾಜೆನೊರ ವಯ: 60 ವರ್ಷ, ಸಾ: ಸಿಂದಬಂದಗಿ ಇವರು ತಮ್ಮ ಮೊಟಾರ ಸೈಕಲ ನಂ. ಕೆಎ-35/ಯು-8790 ನೇದರ ಮೇಲೆ ಸಿಂದಬಂದಗಿ ಗ್ರಾಮದಿಂದ ಹುಮನಾಬಾದ ಸಿಂದಬಂದಗಿ ರೋಡ ಹಿಡಿದು ಸಂಗೋಳಗಿ ಗ್ರಾಮದ ಕಡೆಗೆ ಹೊಗುತ್ತಿದ್ದರು ಮೊಟಾರ ಸೈಕಲನ್ನು ಜ್ಞಾನಿ ತಂದೆ ಬಾಬಣ್ಣಾ ಸಾ: ಸಂಗೋಳಗಿ ಈತನು ಚಲಾಯಿಸುತ್ತಿದ್ದನು, ಜ್ಞಾನಿ ಈತನು ತನ್ನ ವಾಹನವನ್ನು ಅತೀ ಜೋರಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿದರಿಂದ ವಾಹನ ಸ್ಕೀಡಾಗಿ ಪಲ್ಟಿ ಆಗಿರುತ್ತದೆ, ಸದರಿ ಅಪಘಾತದಿಂದ ಲಕ್ಷ್ಮೀಬಾಯಿ ಇವಳ ಸೊಂಟದಲ್ಲಿ ಭಾರಿ ಗುಪ್ತಗಾಯವಾಗಿರುತ್ತದೆ ಮತ್ತು  ಮೂಗಿನ ಮೇಲೆ ಗಾಯವಾಗಿ ರಕ್ತಸ್ರಾವ ಆಗಿರುತ್ತದೆ, ಎರಡು ಮೊಳಕೈ ಮೇಲೆ ತರಚಿದ ರಕ್ತಗಾಯ ಹಾಗು ಎರಡು ಮೊಳಕಾಲ ಮೇಲೆ ತರಚಿದ ರಕ್ತಗಾಯ ಆಗಿರುತ್ತದೆ, ಆಗ ಫಿರ್ಯಾದಿ ಮತ್ತು ತಮ್ಮೂರ ನಾಗೇಶ ತಂದೆ ಪಂಡಿತ ಎರಭಾಗ ಕೂಡಿಕೊಂಡು ಲಕ್ಷ್ಮೀಬಾಯಿ ಇವರಿಗೆ ಚಿಕಿತ್ಸೆ ಕುರಿತು ಹಳ್ಳಿಖೇಡ (ಬಿ) ಗ್ರಾಮದ ಸರಕಾರಿ ಆಸ್ಪತ್ರೆಗೆ ತಂದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 128/2018, ಕಲಂ. ಮನುಷ್ಯ ಕಾಣೆ :-
ದಿನಾಂಕ 06-04-2018 ರಂದು 1500 ಗಂಟೆಯ ಸುಮಾರಿಗೆ ಫಿರ್ಯಾದಿ ಧರ್ಮಣ್ಣಾ ತಂದೆ ಶರಣಪ್ಪಾ ಮುಸ್ತರಿ ವಯ: 55 ವರ್ಷ, ಜಾತಿ: ಕುರುಬ, ಸಾ: ಹಣಕುಣಿ ಗ್ರಾಮ ರವರ ಮಗನಾದ ರಾಜಕುಮಾರ ವಯ: 35 ವರ್ಷ ಇತನು ಮನೆಯಲ್ಲಿ ಹೊರಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಸಾಯಂಕಾಲವಾದರು ಮನೆಗೆ ಬರದೆ ಇರುವುದರಿಂದ ಫಿರ್ಯಾದಿಯು ತಮ್ಮ ಮಕ್ಕಳೊಂದಿಗೆ ಮಗನ ಬಗ್ಗೆ ಊರಲ್ಲಿ ಎಲ್ಲಾ ಕಡೆ ಹುಡುಕಿದರು ಸಿಕಿರುವುದಿಲ್ಲಾ, ನಂತರಮ್ಮ ಸಂಬಂಧಿಕರ ಊರುಗಳಾದ ಪೂನಾ, ಮುಂಬೈ, ಸಿಂಧನಕೇರಾ, ಹುಡಗಿ, ಕಲ್ಲೂರ, ವಳಖಿಂಡಿ ಕಡೆಗಳಲ್ಲಿ ಹುಡುಕಿದರು ಮಗನು ಸಿಕಿರುವುದಿಲ್ಲಾ, ಆತನು ಮನೆಯಿಂದ ಹೊರಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಇಲ್ಲಿಯವರೆಗೆ ಮನೆಗೆ ಬರದೆ ಕಾಣೆಯಾಗಿರುತ್ತಾನೆ, ಕಾಣೆಯಾದ ಮಗನ ಚಹರೆ ಪಟ್ಟಿ ವಿವರ :- ಹೆಸರು: ರಾಜಕುಮಾರ ತಂದೆ ಧರ್ಮಣ್ಣಾ ಮುಸ್ತರಿ, ವಯ: 35 ವರ್ಷ, ಜಾತಿ: ಕುರುಬ, ವಿಳಾಸ: ಹಣಕುಣಿ ಗ್ರಾಮ, ತಾ: ಹುಮನಾಬಾದ, ಚಹರೆ ಪಟ್ಟಿ: ಸಾಧರಣ ಮೈಕಟ್ಟು, ಕಪ್ಪು ಬಣ್ಣ , ಬಲಗಲ್ಲದ ಮೇಲೆ ಕಪ್ಪು ಮಂಚೆ,  5.6 ಅಡಿ ಎತ್ತರ, ಧರಿಸಿರುವ ಬಟ್ಟೆಗಳು: ಬಿಳ್ಳಿ ಬಣ್ಣದ ಹಾಫ್ ಶರ್ಟಕಪ್ಪು ಬಣ್ಣದ ಪ್ಯಾಂಟ್, ಮಾತನಾಡುವ ಭಾಷೆ: ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 19-07-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: