Police Bhavan Kalaburagi

Police Bhavan Kalaburagi

Thursday, August 2, 2018

Yadgir District Reported Crimes Updated on 02-08-2018


                                            Yadgir District Reported Crimes

ಬೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ ;- 115/2018 ಕಲಂ 87 ಕೆಪಿ ಯ್ಯಾಕ್ಟ;- ದಿನಾಂಕ 01/08/2018 ರಂದು 4.45 ಪಿಎಮ್ ಕ್ಕೆ ಆರೋಪಿತರೆಲ್ಲರೂ   ಅಣಬಿ ಗ್ರಾಮದ ಮರೆಮ್ಮ ಉಗಡಿಯ ಮುಂದೆ ಅಂಗಳದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದಾಗ ಪಿಎಸ್ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ 7 ಜನ ಆರೋಪಿತರಿಗೆ ಹಿಡಿದು ಅವರಿಂದ ನಗದು ಹಣ 1650/- ರೂ ಹಾಗೂ 52 ಇಸ್ಪೇಟ ಎಲೆಗಳನ್ನು 4.45 ಪಿಎಮ್ ದಿಂದ 5.45 ಪಿಎಮ್ ವರೆಗೆ ಜಪ್ತಿಪಡಿಸಿಕೊಂಡು 6.30 ಪಿಎಮ್ ಕ್ಕೆ ಠಾಣೆಗೆ ಬಂದು ಸೂಕ್ತ ಕ್ರಮಕ್ಕಾಗಿ ವರದಿ ಹಾಗೂ ಜಪ್ತಿ ಪಂಚನಾಮೆ ಸಲ್ಲಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 7.30 ಪಿಎಮ್.ಕ್ಕೆ ಠಾಣೆ ಗುನ್ನೆ ನಂ: 115/2018 ಕಲಂ 87 ಕೆ ಪಿ ಎಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ ;- 55/2018 ಕಲಂ 279, 338 ಐಪಿಸಿ;-        ದಿನಾಂಕ 01/08/2018 ರಂದು 12-30 ಪಿ.ಎಂ.ಕ್ಕೆ ಯಾದಗಿರಿ-ಹೈದ್ರಾಬಾದ್ ಮುಖ್ಯ ರಸ್ತೆ ಮೇಲೆ ಬರುವ ಗಂಜ್ ಕ್ರಾಸ್ ಹತ್ತಿರ ಮುಖ್ಯ ರಸ್ತೆಯ ಮೇಲೆ ಫಿಯರ್ಾದಿ ಮಾರ್ತಂಢಪ್ಪ  ಈತನು ನಡೆದುಕೊಂಡು ರಸ್ತೆ ಬದಿ ಹೊರಟಿದ್ದಾಗ  ಆರೋಪಿತನು ತನ್ನ ಆಟೋ ನಂಬರ ಕೆಎ-33, ಎ-1314  ನೇದ್ದನ್ನು  ಅತೀವೇಗ ಮತ್ತು ಅಲಕ್ಷ್ಯತನದಿಂದ  ನಡೆಸಿಕೊಂಡು ಬಂದವನೇ ಫಿಯರ್ಾದಿಗೆ ನೇರವಾಗಿ ಡಿಕ್ಕಿ ಪಡಿಸಿದಾಗ ಸದರಿ ಅಪಗಾತದಲ್ಲಿ   ಫಿಯರ್ಾದಿಗೆ  ಬಲಗಾಲಿನ ಹಿಮ್ಮಡಿ ಹತ್ತಿರ  ಬಾರೀ ರಕ್ತಗಾಯ ಆಗಿದ್ದು ಸದರಿ ಅಪಘಾತವು ಆಟೋ ನಂಬರ ಕೆಎ-33, ಎ-1314 ನೇದ್ದರ  ಚಾಲಕ ಹಣಮಂತ ನಿರ್ಲಕ್ಷ್ಯತನದಿಂದ ಜರುಗಿದು ್ದ ಚಾಲಕನ   ಮೇಲೆ ಮುಂದಿನ ಕ್ರಮ ಜರುಗಿಸುವ ಬಗ್ಗೆ  ಮನೆಯ ಹಿರಿಯರಲ್ಲಿ ವಿಚಾರಿಸಿ ಕೇಸು ತಡವಾಗಿ ನೀಡಿದ ಫಿಯರ್ಾದಿ ಇರುತ್ತದೆ.     

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ ;- 171/2018 ಕಲಂ 341, 323, 324, 504, 506 ಸಂ 34
ಐಪಿಸಿ;-
ದಿನಾಂಕ 01/08/2018 ರಂದು ಸಾಯಂಕಾಲ 6-45 ಪಿ.ಎಂ. ಕ್ಕೆ ಜಿಜಿಎಚ್ ಯಾದಗಿರಿಯಿಂದ ಗಾಯಾಳು ಎಂ.ಎಲ್.ಸಿ. ಪೋನ ಮಾಹಿತಿ ಮೇರೆಗೆ ನಾನು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳು ಶ್ರೀ ಮೋನಪ್ಪ ತಂದೆ ನಿಂಗಪ್ಪ ಭೀಮನಳ್ಳಿ ಸಾಃ ಯರಗೋಳ ಇವರ ಹೇಳಿಕೆ ಪಡೆದುಕೊಂಡ ಸಾರಾಂಶವೆನೆಂದರೆ ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು ಒಕ್ಕಲುತನ ಕೆಲಸ ಮಾಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವನ ಮಾಡುತ್ತೆನೆ, ಲಿಂಗಸನಳ್ಳಿ ತಾಂಡಾದ ಸೀಮೆಯಲ್ಲಿ ನಮ್ಮ ಹೊಲ, ನಮ್ಮ ಬೀಗರಾದ ಹಣಮಂತ ತಂದೆ ಲಕ್ಷ್ಮಣ ಜೊಗೇರ ಮತ್ತು ಶರಣಪ್ಪ ತಂದೆ ಮರೆಪ್ಪ ಜೋಗೇರ ಇವರ ಹೊಲಗಳು ಒಂದೇ ಡ್ವಾಣಾಕ್ಕೆ ಹೊಂದಿಕೊಂಡು ಆಜುಬಾಜು ಇದ್ದಿರುತ್ತವೆ, ಈ ಹಿಂದೆ ನಾಲ್ಕು ತಿಂಗಳುಗಳ ಹಿಂದೆ ಶರಣಪ್ಪ ತಂದೆ ಮರೆಪ್ಪ ಜೋಗೇರ ಇತನು ಮತ್ತು ಅವನ ಮನೆಯವರು ಕೂಡಿ ಹಣಮಂತ ತಂದೆ ಲಕ್ಷ್ಮಣ ಜೊಗೇರ ಇತನ ಮನೆಯವರಿಗೆ ಕೊಲೆ ಮಾಡಿರುತ್ತಾರೆ, ಅವರಿಬ್ಬರ ಮನೆಯವರಲ್ಲಿ ವೈಮನಸ್ಸು ಬೆಳೆದಿದ್ದು ಇರುತ್ತದೆ,
      ಹೀಗಿರುವಾಗ ಇಂದು ದಿನಾಂಕ 01/08/2018 ರಂದು ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಅಳಿಯನಾದ ಚನ್ನಬಸಪ್ಪ ತಂದೆ ಶಿವಶರಣಪ್ಪ ಬಡ್ಡೆನೊರ ಇಬ್ಬರೂ ಕೂಡಿಕೊಂಡು ನಮ್ಮ ಹೊಲದಲ್ಲಿಯಿರುವ ಹತ್ತಿ ಬೆಳೆಯಲ್ಲಿ ಗಳೆ ಹೊಡೆಯುವ ಕುರಿತು ನಮ್ಮ ಹೊಲಕ್ಕೆ ಹೋಗಿದ್ದೆವು, ನಂತರ ನನ್ನ ಅಳಿಯನು ನಮ್ಮ ಹೊಲದಲ್ಲಿ ಗಳೆ ಹೊಡೆಯುತ್ತಿದ್ದನು, ನಾನು ಮನೆಗೆ ಬಂದು ಬುತ್ತಿ ತೆಗೆದುಕೊಂಡು ಹೋಗುವ ಕುರಿತು ಮನೆಗೆ ಬಂದು ಬುತ್ತಿ ತೆಗೆದುಕೊಂಡು ಹೊಲಕ್ಕೆ ಹೋಗುತ್ತಿರುವಾಗ ಲಿಂಗಸನಳ್ಳಿ ತಾಂಡಾದಲ್ಲಿ ಕರ್ಣಪ್ಪ ಗುಳೇದ ಇವರ ಮನೆಯ ಹತ್ತಿರ ರೋಡಿನ ಮೇಲೆ ಹೋಗುವಾಗ ನನ್ನ ಬೀಗರಾದ 1)ಹಣಮಂತ ತಂದೆ ಲಕ್ಷ್ಮಣ ಜೊಗೇರ 2)ಲಕ್ಷ್ಮಣ ತಂದೆ ಹಣಮಂತ ಜೊಗೇರ 3)ದೇವಕಿ ಗಂಡ ಹಣಮಂತ ಜೊಗೇರ ಮತ್ತು 4)ನಾಗಮ್ಮ ಗಂಡ ಲಕ್ಷ್ಮಣ ಜೊಗೇರ ಇವರೆಲ್ಲರೂ ಕೂಡಿಕೊಂಡು ಬಂದು ನನ್ನನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಅವರಲ್ಲಿ 1)ಹಣಮಂತ ತಂದೆ ಲಕ್ಷ್ಮಣ ಜೊಗೇರ ಇತನು ಏ ಬೋಸಡಿ ಮಗನೇ ನೀನು ನಮ್ಮ ಮನೆಯವರಿಗೆ ಕೊಲೆ ಮಾಡಿದವರ ಹೊಲ ಸಾಗುವಳಿ ಮಾಡಲು ಬಂದಿದ್ದಿ ಮತ್ತು ಅವರಿಗೆ ಬೆಂಬಲ ನೀಡುತ್ತಿದ್ದಿ ನಿನಗೆ ಬಹಳ ಸೊಕ್ಕುಯಿದೆ ಇವತ್ತು ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಬೈದು ತನ್ನ ಕೈಯಲ್ಲಿಯ ಕೊಡಲಿಯಿಂದ ನನ್ನ ತಲೆಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ, 2)ಲಕ್ಷ್ಮಣ ತಂದೆ ಹಣಮಂತ ಜೊಗೇರ ಇತನು ತನ್ನ ಕೈಯಲ್ಲಿಯ ಬಡಿಗೆಯಿಂದ ನನ್ನ ಬೆನ್ನಿಗೆ ಹೊಡೆದಿರುತ್ತಾನೆ, 3)ದೇವಕಿ ಗಂಡ ಹಣಮಂತ ಜೊಗೇರ ಮತ್ತು 4)ನಾಗಮ್ಮ ಗಂಡ ಲಕ್ಷ್ಮಣ ಜೊಗೇರ ಇವರಿಬ್ಬರೂ ತಮ್ಮ ಕೈಗಳಿಂದ ನನ್ನ ಬೆನ್ನಿಗೆ, ಎದೆಗೆ, ಹೊಟ್ಟೆಗೆ ಹೊಡೆದಿರುತ್ತಾರೆ, ಅವರೆಲ್ಲರೂ ಇನ್ನು ಹೊಡೆಯಲು ಬರುತ್ತಿದ್ದಾಗ ನಾನು ಅಲ್ಲಿಂದ ಓಡಿ ಬಂದಿರುತ್ತೆನೆ, ಈ ಜಗಳವು ಇಂದು ದಿನಾಂಕ 01/08/2018 ರಂದು ಸಾಯಂಕಾಲ 4-00 ಗಂಟೆಗೆ ನಡೆದಿರುತ್ತದೆ, ಈ ಜಗಳವನ್ನು ಲಿಂಗಸನಳ್ಳಿ ತಾಂಡಾದ ದೇವ್ಯಾ ತಂದೆ ದೇಶ್ಯಾ ರಾಠೋಡ ಮತ್ತು ರೂಪ್ಲಿಬಾಯಿ ಗಂಡ ದೇವ್ಯಾ ರಾಠೋಡ ಇವರಿಬ್ಬರೂ ನೋಡಿರುತ್ತಾರೆ, ಅವರ ಮೇಲೆ ಕಾನೂನು ರೀತಿ ಕ್ರಮ ಕೈಕೊಳ್ಳಿರಿ ಅಂತಾ ಹೇಳಿ ಗಣಕೀಕರಿಸಿದ ಹೇಳಿಕೆ ನಿಜವಿರುತ್ತದೆ. ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 171/2018 ಕಲಂ 341, 323, 324, 504, 506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ ;- 175/2018 ಕಲಂ. 279 337 338 ಐಪಿಸಿ;- ದಿನಾಂಕ:01/08/2018 ರಂದು 09.00 ಗಂಟೆಯ ಸುಮಾರಿಗೆ ಪಿಯರ್ಾದಿ ಮತ್ತು ಇತರರೂ ಕೂಡಿ ನಂಬರ ಇಲ್ಲದ ಅಟೋ ನೇದ್ದರಲ್ಲಿ ಕುಳಿತುಕೊಂಡು ಸೊನ್ನಾಪುರ ತಾಂಡಾದಿಂದಾ ಹುಣಸಗಿಗೆ ಕವಳಿಯನ್ನು ನಾಟಿ ಮಾಡಲು ಬುರತ್ತಿದ್ದಾಗ ಆರೋಪಿತನು ಅಟೋವನ್ನು ನಾರಾಯಣಪುರ-ಹುಣಸಗಿ ರೋಡಿನ ಮೇಲೆ ಹುಣಸಗಿ ಸಮೀಪ ಸುರೇಶ ರೆಡ್ಡಿ ಇವರ ಹೊಲದ ಹತ್ತಿರ ಅಟೋವನ್ನು ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಒಮ್ಮೇಲೆ ಕಟ್ ಹೊಡೆದು ಪಲ್ಟಿ ಮಾಡಿ ಕೆಡವಿ ಅಪಘಾತ ಮಾಡಿದ್ದು ಅಪಘಾತದಲ್ಲಿ ಅಟೋದಲ್ಲಿದ್ದವರಿಗೆ ಭಾರಿ ಮತ್ತು ಸಾದಾ ರಕ್ತಗಾಯವಾಗಿದ್ದು ಅಂತಾ ಇತ್ಯಾದಿ ಹೇಳಿಕೆ ಮೇಲಿಂದಾ ಕ್ರಮ ಜರುಗಿಸಲಾಗಿದೆ.   
 
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 176/2018 ಕಲಂ. 279 337 338 ಐಪಿಸಿ;- ದಿನಾಂಕ:01/08/2018 ರಂದು ಮದ್ಯಾಹ್ನ 12.00 ಗಂಟೆಯ ಸುಮಾರಿಗೆ ಪಿಯರ್ಾದಿ ಮಗನಾದ ಪ್ರಧೀಪ ಮತ್ತು ಕುಮಾರ ಇಬ್ಬರೂ ಕೂಡಿ ಸೈಕಲ್ ಮೇಲೆ ಕೋಳಿಹಾಳದಿಂದಾ ಕೋಳಿಹಾಳ ನಡವಿನ ತಾಂಡಾಕ್ಕೆ ನಾವಧಗಿ ರೋಡಿನ ಮೇಲೆ ಹೊರಟಾಗ ಆರೋಪಿತನು ನಾವದಗಿ ಕಡೆಯಿಂದಾ ತನ್ನ ಮೋಟಾರ್ ಸೈಕಲ ಕೆಎ-04 ಇಎಫ್-4876 ನೇದ್ದನ್ನು  ಅತಿವೇಗ ಹಾಗೂ ಅಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಪಿಯರ್ಾದಿ ಮಕ್ಕಳು ನಡೆಯಿಸಿಕೊಂಡ ಹೊರಟ ಸೈಕಲಕ್ಕೆ ಡಿಕ್ಕಿಹೊಡೆದು ಅಪಘಾತ ಮಾಡಿದ್ದು, ಅಪಘಾತದಲ್ಲಿ ಪಿಯರ್ಾದಿ ಮಕ್ಕಳಿಗೆ ಹಾಗೂ ಆರೋಪಿತನಿಗೆ ಭಾರಿ ಮತ್ತು ಸಾದಾ ರಕ್ತಗಾಯವಾಗಿದ್ದು  ಅಂತಾ ಇತ್ಯಾದಿ ಹೇಳಿಕೆ ಮೇಲಿಂದಾ ಕ್ರಮ ಜರುಗಿಸಲಾಗಿದೆ.   
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ 360/2018 ಕಲಂ 323 324 504 506 ಸಂ 34 ಐ.ಪಿ.ಸಿ   ;- ದಿನಾಂಕ  01/08/2018 ರಂದು ಮುಂಜಾನೆ 11-45 ಗಂಟೆಗೆ ಫಿರ್ಯಾದಿ ಶ್ರೀ ಚಾಂದ ಪಾಶಾ ತಂದೆ ಮಹಿಬೂಬ ಅಲಿ ಗಿರಣಿ ವಯ 36 ವರ್ಷ ಜಾತಿ ಮುಸ್ಲಿಂ ಸಾಃ ದೋರನಳ್ಳಿ ತಾಃ ಶಹಾಪೂರ ಜಿಃ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ತನ್ನ ಹೆಂಡತಿಯಾದ ಸುಮಯ್ಯಾ ಆಫ್ರೀನ್ ಇವಳು ಸುಮಾರು 2-3 ವರ್ಷ ಇವಳು  ಮನೆಯ ಎದರುಗಡೆ ಇರುವ ಯೂಸುಪ್ ಇವನು ಸಲುಗೆಯಿಂದ ಮಾತನಾಡುವದರಿಂದ ಮನೆಯ ಮಾಯರ್ಾದೆ ಹಾಳಾಗುತ್ತದೆ ಅಂತ ಬುದ್ದಿವಾದ ಹೇಳಿದ್ದಕ್ಕೆ ನಾನು ಅವನ ಜೊತೆಯಲಿ ಮಾತನಾಡುತ್ತೆನೆ ಯಾರು ಏನು ಅಂದುಕೊಂಡರು ನನಗೇನು ಚಿಂತೆ ಇಲ್ಲ. ನಿನೇ ನೋಡಲಿಕ್ಕೆ ಸರಿಯಾಗಿಲ್ಲ ಕಪ್ಪಗಿದಿಯಾ ನನಗ ಏನ್ ಹೇಳ್ತಿಯಾ ನೀನು,  ನಿನಗೆ ನಾನು ಇಷ್ಟವಿಲ್ಲದಿದ್ದರೆ  ನನಗೆ ಬಿಟ್ಟು ಬಿಡು ನಾನು ಅವನೊಂದಿಗೆ  ಮದುವೆಯಾಗುತ್ತೆನೆ  ಅಂತ ವಾದ ಮಾಡಿ ದಿನಾಂಕ 15/07/2018 ರಂದು ಮದ್ಯಾಹ್ನ 2-00 ಗಂಟೆಗೆ  ಫಿರ್ಯಾದಿಯ ಹೆಂಡತಿ ಸುಮಯ್ಯಾ ಆಫ್ರೀನ್ ಮತ್ತು ಯೂಸುಪ್ ಇಬ್ಬರೂ ಸೇರಿ ಫಿರ್ಯಾದಿಗೆ  ಕೈಯಿಂದ ಕಲ್ಲಿನಿಂದ  ಹೊಡೆ ಬಡೆ ಮಾಡಿ ಜೀವ ಬೇದರಿಕೆ ಹಾಕಿರುತ್ತಾರೆ ಅಂತ ಫಿರ್ಯಾದಿ ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ 360/2018 ಕಲಂ 323 324 504 506 ಸಂ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 361/2018 ಕಲಂ 87  ಕೆ.ಪಿ ಆಕ್ಟ;- ದಿನಾಂಕ 01/08/2018 ರಂದು ಸಾಯಂಕಾಲ 16-30 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ನಾಗರಾಜ .ಜಿ. ಆರಕ್ಷಕ ನಿರೀಕ್ಷಕರು, ಶಹಾಪೂರ ಪೊಲೀಸ್ ಠಾಣೆ ಇವರು 05 ಜನ ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ, ಇಂದು ದಿನಾಂಕ 01/08/2018 ರಂದು ಮದ್ಯಾಹ್ನ 14-00 ಗಂಟೆಗೆ ಠಾಣೆಯಲ್ಲಿದ್ದಾಗ  ಹಳಿ ಸಗರ ಏರಿಯಾದ ಮರೇಮ್ಮ ದೇವಿ ಗುಡಿಯ ಹತ್ತಿರ ಇರುವ ಸಾರ್ವಜನಿಕ ಖುಲ್ಲಾ ಜಾಗೆಯ್ಲಲಿ ಕೆಲವು ಜನರೂ ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ-ಬಾಹರ ಎಂಬ ಜೂಜಾಟ ಆಡುತಿದ್ದಾರೆ ಅಂತ ಸುಧಾರಿತ ಗ್ರಾಮ ಗಸ್ತು ಬೀಟ್ ಸಿಬ್ಬಂದಿ ಶ್ರೀ ಬಾಬು ಹೆಚ್.ಸಿ 162 ರವರು ತನಗೆ ಬಂದ ಮಾಹಿತಿಯನ್ನು ಫಿರ್ಯಾದಿಯವರಿಗೆ ಹೇಳಿದ್ದು, ಫಿರ್ಯಾದಿಯವರು ಠಾಣೆಯ ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಹೋಗಿ ದಾಳಿ ಮಾಡಿ 05 ಜನ ಆಪಾಧಿತರನ್ನು ಹಿಡಿದು ಆಪಾಧಿತರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 1040=00 ರೂಪಾಯಿ ಮತ್ತು 52 ಇಸ್ಪೇಟ್ ಎಲೆಗಳನ್ನು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲಿಸಿದ್ದು, ಸದರಿ ವರದಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣೆಯ ಎನ್.ಸಿ ನಂ 15/2018 ಕಲಂ 87 ಕೆ.ಪಿ ಆಕ್ಟ ಅಡಿಯಲ್ಲಿ ನೊಂದಣಿ ಮಾಡಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ  ಅನುಮತಿ ಪಡೆದುಕೊಂಡು ಸಾಯಂಕಾಲ 17-00 ಪಿ.ಎಮ್.ಕ್ಕೆ  ಫಿರ್ಯಾದಿಯವರ ವರದಿ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 361/2018 ಕಲಂ 87 ಕೆ.ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.                                                                                                             


ಸುರಪೂರ ಪೊಲೀಸ್ ಠಾಣೆ ಗುನ್ನೆ ನಂ. 289/2018 ಕಲಂ: 78(3) ಕನರ್ಾಟಕ ಪೊಲೀಸ್ ಆಕ್ಟ್;- ದಿನಾಂಕ: 01/08/2018 ರಂದು 6-30 ಪಿ.ಎಮ್ ಕ್ಕೆ ಶ್ರೀ ಹರಿಬಾ ಜಮಾದಾರ ಪಿ.ಐ ಸಾಹೇಬರು ಒಬ್ಬ  ಆರೋಪಿ, ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು 4-30 ಪಿ.ಎಮ್ ಕ್ಕೆ ನಾನು ಠಾಣೆಯಲ್ಲಿದ್ದಾಗ ಸುರಪೂರ ನಗರದ ರಂಗಂಪೇಟ ಏರಿಯಾದಲ್ಲಿರುವ ಅಂಬೇಡ್ಕರ ಚೌಕ ಹತ್ತಿರ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತವಾದ ಬಾತ್ಮಿ ಬಂದಿದ್ದರಿಂದ ಠಾಣೆಯ ಹೆಚ್.ಸಿ.105, ಹೆಚ್.ಸಿ-176, ಹೆಚ್.ಸಿ-30, ಪಿ.ಸಿ.129 ಹಾಗು ಇಬ್ಬರೂ ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಸಾರ್ವಜನಿಕರಿಗೆ ಮಟಕಾ ನಂಬರ ಬರೆಸಿರಿ, ಸಿಂಗಲ್ ಅಂಕಿಗೆ 1 ರೂಪಾಯಿಗೆ 8 ರೂಪಾಯಿ, ಜೊಯಿಂಟ್ ಅಂಕಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತ ಹೇಳುತ್ತ ಹಣವನ್ನು ಪಡೆದುಕೊಂಡು ದೈವಿ ಜೂಜಾಟವಾದ ಮಟಕಾ ನಂಬರ ಬರೆದುಕೊಳ್ಳುತ್ತಿದ್ದ ಆರೋಪಿತನಿಗೆ ಹಿಡಿದು, ಸದರಿಯವನಿಂದ ಜೂಜಾಟಕ್ಕೆ ಬಳಿಸಿದ 1) ನಗದು ಹಣ 2100-00 ರೂ.ಗಳು 2) ಒಂದು ಬಾಲ್ ಪೆನ್ನ ಅ||ಕಿ|| 00-00 ರೂ.ಗಳು. 3) ಒಂದು ಮಟಕಾ ನಂಬರ ಬರೆದ ಚೀಟಿ ಅ||ಕಿ|| 00-00, ರೂ.ಗಳು ಇವುಗಳನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರ ಪಡಿಸಿದ್ದರಿಂದ ಠಾಣೆ ಗುನ್ನೆ ನಂಬರ 289/2018 ಕಲಂ. 78(3) ಕೆ.ಪಿ ಆಕ್ಟ್ ನೆದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 290/2018 ಕಲಂ: 302 ಐ.ಪಿ.ಸಿ;- ದಿನಾಂಕಃ 02-08-2018 ರಂದು 1-00 ಎ.ಎಮ್ ಕ್ಕೆ ಫಿಯರ್ಾಧಿ ಶ್ರೀಮತಿ ಭೀಮಬಾಯಿ ಗಂಡ ದೇವಪ್ಪ ಮಕಾಶಿ ಸಾಃ ಜಾಲಿಬೆಂಚಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಫಿಯರ್ಾದಿ ನೀಡಿದ್ದರ ಸಾರಾಂಶವೆನೆಂದರೆ, ನನ್ನ ಗಂಡನಾದ ದೇವಪ್ಪ ತಂದೆ ಶಿವಪ್ಪ ಮಕಾಶಿ ಇತನು ಸುಮಾರು 5 ವರ್ಷಗಳ ಹಿಂದೆ ನಮ್ಮೂರಿನ ಶರಣಪ್ಪ ತಂದೆ ತಿಪ್ಪಣ್ಣ ನಾಗನಟಗಿ ಇವರ ಅಳಿಯನಾದ ನಿಂಗಣ್ಣ ತಂದೆ ಮಲ್ಲಪ್ಪ ಮಂದ್ರಾಳ ಸಾಃ ನಿರಡಗಿ ಇತನಿಗೆ ಲಿಂಗಸೂಗೂರ ತಾಲೂಕಿನ ಹೊನ್ನಳ್ಳಿ ಸಿಮಾಂತರದಲ್ಲಿ ಕೊಲೆ ಮಾಡಿದ ಬಗ್ಗೆ ಕೇಸ್ ದಾಖಲಾಗಿದ್ದು, ಸದರಿ ಕೇಸ್ ಇನ್ನು ರಾಯಚೂರು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ. ಸದರಿ ಕೇಸಿನಲ್ಲಿ ನನ್ನ ಗಂಡನು ಜಾಮೀನು ಪಡೆದುಕೊಂಡು ಜೈಲಿನಿಂದ ಹೊರಗಡೆ ಬಂದ ಬಳಿಕ ಮೃತ ನಿಂಗಣ್ಣ ನಿರಡಗಿ ಇತನ ಕಿರಿಯ ಅಳಿಯನಾದ ಮಾಳಪ್ಪ ತಂದೆ ಶರಣಪ್ಪ ನಾಗನಟಗಿ ಸಾ: ಜಾಲಿಬೆಂಚಿ ಇತನು ನನ್ನ ಗಂಡನಿಗೆ ಊರಲ್ಲಿ ಲೇ ಮಗನೇ ದೇವ್ಯಾ, ನೀನು ನನ್ನ ಅಕ್ಕನ ಗಂಡನಿಗೆ ಕೊಲೆ ಮಾಡಿದ್ದಿ, ನಾನು ನಿನಗೆ ಬಿಡುವದಿಲ್ಲ, ಎಲ್ಲಾದರೂ ಒಬ್ಬನೇ ಸಿಗು ಮಗನೇ, ನಿನಗೂ ಖಲಾಸ ಮಾಡುವ ತನಕ ನನ್ನ ಮನಸ್ಸಿಗೆ ನೆಮ್ಮದಿಯಿಲ್ಲ ಅಂತ ತಕರಾರು ಮಾಡುತ್ತ ಬಂದಿರುತ್ತಾನೆ. ಅದರಂತೆ ನಿನ್ನೆ ದಿನಾಂಕಃ 01-08-2018 ರಂದು ಮುಂಜಾನೆ 8-30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಅತ್ತೆಯಾದ ಸಂಗಮ್ಮ ಗಂಡ ಶಿವಪ್ಪ ಮಕಾಶಿ ಇಬ್ಬರೂ ಕೂಲಿಕೆಲಸಕ್ಕಾಗಿ ಮನೆಯಿಂದ ಹೋಗಿದ್ದೇವು. ಆಗ ಮನೆಯಲ್ಲಿದ್ದ ನನ್ನ ಗಂಡನು ಹುಣಸಗಿಗೆ ಹೋಗಿ ಬರುತ್ತೇನೆಂದು ಹೇಳಿದ್ದನು. ನಾವು ಸಾಯಂಕಾಲ 6 ಗಂಟೆಯ ಸುಮಾರಿಗೆ ಮನೆಗೆ ಬಂದಾಗ ನಮ್ಮ ಮನೆಯ ಹತ್ತಿರ ಬಹಳಷ್ಟು ಜನ ನೆರೆದಿದ್ದು, ಅಲ್ಲಿದ್ದ ಬಸಣ್ಣ ತಂದೆ ಭೀಮಣ್ಣ ಮಕಾಶಿ ಇವರಿಗೆ ವಿಚಾರಿಸಲಾಗಿ ನಿನ್ನ ಗಂಡನಾದ ದೇವಪ್ಪನಿಗೆ ಹಾಳ ಅಮ್ಮಾಪೂರದಿಂದ ಚಿಕ್ಕನಳ್ಳಿ ಕಡೆಗೆ ಬರುವ ರಸ್ತೆಯ ಮೇಲೆ ಬೋನಾಳ ಸಿಮಾಂತರದ ಯಂಕಪ್ಪ ಹಡಪದ ಸಾಃ ಬೋನಾಳ ಇವರ ಹೊಲದ ಹತ್ತಿರ ಯಾರೋ ಕೊಲೆ ಮಾಡಿ ಹೋಗಿದ್ದು, ಹೆಣವು ಅಲ್ಲೆ ರಸ್ತೆಯ ಪಕ್ಕದಲ್ಲಿ ಬಿದ್ದಿರುವ ಬಗ್ಗೆ ಗೊತ್ತಾಗಿರುತ್ತದೆ ಅಂತ ತಿಳಿಸಿದನು. ಆಗ ನಾವು 6-30 ಪಿ.ಎಮ್ ಸುಮಾರಿಗೆ ಸ್ಥಳ್ಕಕೆ ಹೋಗಿ ನೋಡಲು ನನ್ನ ಗಂಡನ ತಲೆಯ ಹಿಂಭಾಗದಲ್ಲಿ ಹರಿತವಾದ ಆಯುಧದಿಂದ ಹೊಡೆದಿದ್ದರಿಂದ ತಲೆಬುರಡೆ ಒಡೆದು ಭಾರಿ ರಕ್ತಗಾಯವಾಗಿದ್ದು, ಎಡಗಾಲಿನ ಪಾದದ ಮೇಲೆ ಹಾಗು ಬಲಮೊಣಕಾಲಿಗೆ ಸಹ ರಕ್ತಗಾಯಗಳಾಗಿರುತ್ತವೆ. ನನ್ನ ಗಂಡನ ಶವದ ಸಮೀಪದಲ್ಲೆ ರಸ್ತೆಯ ಮೇಲೆ ನಮ್ಮ ಮೋ.ಸೈಕಲ್ ಸಹ ಬಿದ್ದಿದ್ದು, ಅದರ ಹಿಂಭಾಗ ಜಖಂಗೊಂಡಿರುತ್ತದೆ. ನೋಡಿದರೆ ನನ್ನ ಗಂಡನಿಗೆ 5-00 ಪಿ.ಎಮ್ ಸುಮಾರಿಗೆ ಹಿಂದಿನಿಂದ ಯಾವುದೋ ವಾಹನದಿಂದ ಡಿಕ್ಕಿ ಹೊಡೆದು ನೆಲಕ್ಕೆ ಬಿದ್ದ ಬಳಿಕ ತಲೆಯ ಹಿಂಭಾಗದಲ್ಲಿ ಹರಿತವಾದ ಆಯುಧದಿಂದ ತಲೆಗೆ ಹೊಡೆದು ಭಾರಿ ರಕ್ತಗಾಯಪಡಿಸಿ ಕೊಲೆ ಮಾಡಿರುವಂತೆ ಕಂಡು ಬರುತ್ತದೆ. ನನ್ನ ಗಂಡನು ದಿನಾಲು ಕೆಲಸದ ನಿಮಿತ್ಯ ಮೋ.ಸೈಕಲ್ ಮೇಲೆ ತಿರುಗಾಡುವಾಗ ಆತನೊಂದಿಗೆ ವೈಮನಸ್ಸು ಹೊಂದಿರುವ ನಮ್ಮೂರಿನ ಮಾಳಪ್ಪ ತಂದೆ ಶರಣಪ್ಪ ನಾಗನಟಗಿ ಇತನು ಕಳೆದ 8-10 ದಿವಸಗಳಿಂದ ತನ್ನ ಕೃಷರ ಜೀಪ ನಂಬರ ಕೆ.ಎ 36 ಎಮ್ 2180 ನೇದ್ದರಲ್ಲಿ ಆತನ ಹಿಂದೆ, ಹಿಂದೆ ವಿನಾಕಾರಣ ಸುತ್ತುತ್ತ ಇರುವ ಬಗ್ಗೆ ನನ್ನ ಗಂಡನು ಮನೆಯಲ್ಲಿ ನಮಗೆ ತಿಳಿಸಿದ್ದು, ಅಲ್ಲದೇ ನಿನ್ನೆ ಸಾಯಂಕಾಲ 5-20 ಗಂಟೆಯ ಸುಮಾರಿಗೆ ಮಾಳಪ್ಪ ತಂದೆ ಶರಣಪ್ಪ ನಾಗನಟಗಿ ಇತನು ತನ್ನ ಕೃಷರ ಜೀಪನ್ನು ಹಾಳ ಅಮ್ಮಾಪೂರ, ಮಂಗಳೂರ, ಅಮ್ಮಾಪೂರ ಕ್ರಾಸ್ ಮಾರ್ಗವಾಗಿ ಟಿ.ಬೊಮ್ಮನಳ್ಳಿ ಕಡೆಗೆ ಅತಿವೇಗವಾಗಿ ಅವಸರದಲ್ಲಿ ಒಬ್ಬನೇ ನಡೆಸಿಕೊಂಡು ಹೋಗಿರುವ ಬಗ್ಗೆ ಜನರಿಂದ ಕೇಳಿ ಗೊತ್ತಾಗಿರುವದರಿಂದ ಆತನೇ ನನ್ನ ಗಂಡನು ಮೋ.ಸೈಕಲ್ ಮೇಲೆ ಬರುವಾಗ ಹಿಂದಿನಿಂದ ಕೃಷರ ವಾಹನ ಡಿಕ್ಕಿ ಹೊಡೆದು ಬಳಿಕ ಹರಿತವಾದ ಆಯುಧದಿಂದ ತಲೆಯ ಹಿಂಭಾಗದಲ್ಲಿ ಹೊಡೆದು ಕೊಲೆ ಮಾಡಿರುತ್ತಾನೆ ಅಂತ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 290/2018 ಕಲಂ: 302 ಐ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
 

No comments: