Police Bhavan Kalaburagi

Police Bhavan Kalaburagi

Wednesday, August 8, 2018

Yadgir District Reported Crimes updated on 08-08-2018


                                        Yadgir District Reported Crimes
ಬೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ ;- 117/2018 ಕಲಂ. 279, 304(ಎ) ಐ.ಪಿ.ಸಿ;- ದಿನಾಂಕ 07/08/2018 ರಂದು 2.45 ಪಿಎಮ್ ಕ್ಕೆ ಫಿಯರ್ಾದಿ ಮಾನಯ್ಯ ತಂದೆ ಮಲ್ಲಯ್ಯ ಗೋಡ್ರಿಹಾಳ ಸಾ:ವನದುರ್ಗ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಅಜರ್ಿ ನೀಡಿದ್ದರ ಸಾರಾಂಶವೇನೆಂದರೆ ಫಿಯರ್ಾದಿಯ ಮಗನಾದ ವಿಶ್ವನಾಥ ತಂದೆ ಮಾನಯ್ಯ ವ:23 ಈತನು ಇಂದು 12 ಪಿಎಮ್ ಕ್ಕೆ ಶಹಾಪೂರಕ್ಕೆ ಹೋಗಿ ಟ್ರ್ಯಾಕ್ಟರ್ ಲೋನ ಕಟ್ಟಿ ಬರುತ್ತೇನೆ ಅಂತ ಮನೆಯಲ್ಲಿ ಹೇಳಿ ಮೋ.ಸೈ ನಂ ಕೆಎ:02 ಹೆಚ್.ಎನ್:6611 ನೇದ್ದನ್ನು ತೆಗೆದುಕೊಂಡು ಹೋಗಿದ್ದು ನಂತರ ಮದ್ಯಾಹ್ನ ನಾಗರಾಗಿವರು ಫಿಯರ್ಾದಿಗೆ ಫೋನ ಮಾಡಿ ನಿಮ್ಮ ಮಗನಾದ ವಿಶ್ವನಾಥ ಈತನು ತನ್ನ ಮೋ/ಸೈ ಮೇಲೆ ಶಹಾಪೂರಕ್ಕೆ ಬರುತ್ತಿದ್ದಾಗ ಭೀ.ಗುಡಿಯ ಬಾಪುಗೌಡ ಚೌಕಿನಲ್ಲಿ ಹೊರಟಾಗ ಮದ್ಯಾಹ್ನ 01-10 ಗಂಟೆಗೆ ಎದುರಿನಿಂದ ಅಂದರೆ ಶಹಾಪೂರ ಕಡೆಯಿಂದ ಒಂದು ಡಿಜಲ್ ಟ್ಯಾಂಕರ್ ನಂ: ಕೆಎ: 34 ಎ- 4505 ನೇದ್ದರ ಚಾಲಕ ಮಲ್ಲಿಕಾಜರ್ುನ ತಂದೆ ರಾಜಪ್ಪ ಸಾ:ಹಳ್ಳಿಖೇಡ (ಬಿ) ಈತನು ತನ್ನ ಟ್ಯಾಂಕರನ್ನು ಅತಿವೇಗ ಮತ್ತು ಅಲಕ್ಷತನದಿಂದಿ ಓಡಿಸಿಕೊಂಡು ಬಂದು ವಿಶ್ವನಾಥ ಈತನು ನಡೆಸಿಕೊಂಡು ಹೋಗುತ್ತಿದ್ದ ಮೋ/ಸೈ ನಂ ಕೆಎ:02 ಹೆಚ್.ಎನ್: 6611 ನೇದ್ದಕ್ಕೆ ಡಿಕ್ಕಿಪಡಿಸಿದ್ದರಿಂದ ವಿಶ್ವನಾಥ ಈತನಿಗೆ ತಲೆಗೆ ಭಾರಿ ರಕ್ತಗಾಯವಾಗಿ ತಲೆ ಒಡೆದು ಮೆದುಳು ಹೊರಗೆ ಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಂತ ತಿಳಿಸಿದ್ದರಿಂದ ನಾವು ಬಂದು ನೋಡಲಾಗಿ ನನ್ನ ಮಗ ಮೃತಪಟ್ಟಿದ್ದನು.  ಸದರಿ ಅಪಘಾತಕ್ಕೆ ಟ್ಯಾಂಕರ್ ಚಾಲಕನ ಅತಿವೇಗ ಮತ್ತು ಅಲಕ್ಷತನದ ಚಾಲನೆಯೇ ಕಾರಣವಿದ್ದು ಸದರಿಯವನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ವಗೈರೆ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:117/2018 ಕಲಂ 279,304(ಎ) ಐಪಿಸಿ ನೇದ್ದರಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ ;- 179/2018 ಕಲಂ78(3)  ಕೆ.ಪಿ ಯಾಕ್ಟ;- ದಿನಾಂಕ:06/08/2018 ರಂದು 19.15 ಗಂಟೆಯ ಸುಮಾರಿಗೆ ಆರೋಪಿತನು ವಜ್ಜಲ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರಿಂದಾ ಹಣ ಪಡೆದು ಇದು ಬಾಂಬೆ ಮಟಕಾ ಜೂಜಾಟ ಒಂದು ರೂಪಾಯಿ ಹಚ್ಚಿದರೆ ಎಂಬತ್ತು ರೂಪಾಯಿ ಬರುತ್ತದೆ ಅದೃಷ್ಟ ಇದ್ದರೆ ನಂಬರ ಹಚ್ಚಿರಿ ಅಂತಾ ಜನರಿಂದಾ ಹಣ ಪಡೆದು ಮಟಕಾ ಚೀಟಿ ಬರೆದು ಕೊಡುವಾಗ ಪಿಯರ್ಾದಿ ಮತ್ತು ಸಿಬ್ಬಂದಿಯವರಾದ ಹೆಚ್.ಸಿ-130, 133 ಪಿಸಿ-233, ರವರೊಂದಿಗೆ ದಾಳಿ ಮಾಡಿ ಹಿಡಿದು ಆರೋಪಿತನಿಂದ 580=00 ರೂ ನಗದು ಹಣ, ಒಂದು ಮಟಕಾ ನಂಬರ ಬರೆದ ಚೀಟ, ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಲು ನ್ಯಾಯಾಲಯದ ಅನುಮತಿಯನ್ನು ಪಡೆದು ಇಂದು ಕ್ರಮ ಜರುಗಿಸಿದ್ದು ಇರುತ್ತದೆ.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ ;- 141/2018 ಕಲಂ 323, 354, 504, 506 ಸಂ: 149 ಐಪಿಸಿ;- ದಿನಾಂಕ 07/08/2018 ರಂದು 04.30 ಪಿ.ಎಂ ಕ್ಕೆ ಶ್ರೀಮತಿ. ಲಲಿತಾಬಾಯಿ ಗಂಡ ಬೋಜುನಾಯ್ಕ ವ: 36 ಉ: ಮನೆಗೆಲಸ ಸಾ: ಹಾರಣಗೇರಾ ತಾಂಡಾ ತಾ: ಶಹಾಪೂರ ಜಿ: ಯಾದಗಿರಿ. ಇವರು ಠಾಣಘೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ ಮಾಡಿಸಿದ ಪಿಯರ್ಾದಿ ಅಜರ್ಿ ಹಾಜರ ಪಡೆಸಿದ್ದು ಸದರಿ ಪಿಯರ್ಾದಿಯ ಸಾರಂಶ ಏನಂದರೆ, ನನ್ನ ಗಂಡನಾದ ಶ್ರೀ. ದಿ: ಬೋಜು ತಂದೆ ರೂಪ್ಲು ರಾಠೋಡ ಇತನ ಹೆಸರಿನಲ್ಲಿರುವ ಹಾರಣಗೇರಾ ಸೀಮಾಂತರದಲ್ಲಿ ಬರುವ ಸ.ನಂ; 45/2 ಕ್ಷೇತ್ರ 2-ಎಕರೆ, 12 ಗುಂಟೆ ಹಾಗೂ ಸ.ನಂ; 14/1 1 ಎಕರೆ, 29 ಗುಂಟೆ ಪಟ್ಟಾ ಇದ್ದು, ಇತನ ಖಾಸ ಹೆಂಡತಿಯಾದ ನಾನು ಸದರಿ ಜಮೀನನ್ನು ನನ್ನ ಹೆಸರಿಗೆ ವಿರಾಸಾತ ವಗರ್ಾವಣೆಗೆ ಅಜರ್ಿ ನೀಡಿ, 3 ತಿಗಳಗಳಾಗಿವೆ. ಇದಕ್ಕೆ ಆರೋಪಿತರು ನನ್ನ ಗಂಡನ ಸಹೋದರರು 1) ದಿಲೀಪ ತಂದೆ ರೂಪ್ಲು 2) ಶಂಕರ ತಂದೆ ರೂಪ್ಲು 3) ಬಸವರಾಜ ತಂದೆ ರೂಪ್ಲು 4) ಕಮಲಾಬಾಯಿ ಗಂಡ ಶಂಕರ 5) ಅವಿನಾಶ ತಂದೆ ಶಂಕರ 6) ಲಕ್ಷ್ಮೀಬಾಯಿ ಗಂಡ ದೀಪ್ಲೂ 7) ಕಮಲಬಾಯಿ ಗಂಡ ಬಸವರಾಜ 8) ಆಕಾಶ ತಂದೆ ಶಂಕರ ಎಲ್ಲರೂ ಸಾ: ಹಾರಣಗೇರಾ ತಾಂಡಾ ತಾ: ಶಹಾಪೂರ. ಇವರು ಅಣ್ಣತಮ್ಮಂದಿರು ಹಾಗು ಅವರ ಹೆಂಡತಿಯರು ಅವರ ಮಕ್ಕಳು ಇರುತ್ತಾರೆ. ಇವರೆಲ್ಲರು ಹಾರಣಗೇರಾ ತಾಂಡಾದವರು, ಇವರೆಲ್ಲರು ನನ್ನ ಗಂಡನ ಸಹೋದರರು ಮತ್ತು ನನ್ನ ಗಂಡನ ಅತ್ತಿಗೆಯರು ಮತ್ತು ನನ್ನ ಗಂಡನ ಅಣ್ಣತಮ್ಮಂದಿರ ಮಕ್ಕಳು ಇದ್ದು, ನನಗೆ ಸದರಿ ಜಮೀನಿನ ಸಲುವಾಗಿ ದಿ: 30/07/2018 ರಂದು ಹಾರಣಗೇರಾ ತಾಂಡದ ಶ್ರೀ ಅಂಬಾಭವಾನಿ ದೇವಸ್ಥಾನದ ಹತ್ತಿರ ಮುಂಜಾನೆ ಸಮಯ 08.30 ನಿಮಿಷಕ್ಕೆ ನನ್ನ ಹೊಲ ನಾನು ಸಾಗುವಳಿ ಮಾಡುತ್ತೇನೆಂದು ಹೇಳಿದ್ದಕ್ಕೆ ಆರೋಪಿತರು 01 ರಿಂದ 08 ರವರು  ಅಜರ್ಿದಾರಳಾದ ನನಗೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು ನನ್ನ ಕೈ ಹಿಡಿದು ಎಳೆದಾಡಿದ್ದರಿಂದ ನನ್ನ ಕೈಯಲ್ಲಿರುವ ಬಳೆಗಳು ಒಡೆದಿದ್ದರಿಂದ, ನನ್ನ ಕೈಗೆ ರಕ್ತವಾಯಿತು. ಅಲ್ಲದೆ ಜಮೀನಿಗೆ ತಂಡೆಗೆ ಬಂದರೆ ಇಲ್ಲೆ ಇದೆ ಜಮೀನಿನಲ್ಲಿ ಜೀವ ಸಹಿತ ನಿನ್ನನ್ನು ಕೊಂಡು ಹಾಕುತ್ತೇವೆಂದು ಜೀವ ಬೆದರಿಕೆ ಹಾಕಿದ್ದು, ನಂತರ ಅಲ್ಲಿದ್ದ ಜನರು ಜಗಲವನ್ನು ಬಿಡಿಸಿದರು. ಜಗಳ ಬಿಡಿಸಿದವರ ಹೆಸರುಗಳು ಈ ಕೆಳಗಿನಂತೆ ಇರುತ್ತವೆ. 1) ತುಳಜಾಬಾಯಿ ರಾಠೋಡ 2) ನಿಂಬೋಜಿ ರಾಠೋಡ 3) ಪಾಂಡು ರಾಠೋಡ ಮತ್ತು ಇತರರು ಕೂಡಿಕೊಂಡು ಜಗಳವನ್ನು ಬಿಡಿಸಿದರು.
      ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ: 141/2018 ಕಲಂ: 323, 354. 504. 506 ಸಂ; 149 ಐಪಿಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.
    
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ ;- 171/2018 ಕಲಂ: 341, 323, 504, 506 ಸಂಗಡ 149 ಐ.ಪಿ.ಸಿ ; ದಿನಾಂಕ:07/08/2018 ರಂದು 6:00 ಪಿ.ಎಮ್. ಕ್ಕೆ ಫಿಯರ್ಾದಿದಾರರಾದ ಶ್ರೀಮತಿ. ಸೌಭಾಗ್ಯಮ್ಮ ಗಂಡ ನಿಂಗಪ್ಪ ವಗ್ಗಾನೋರ್ ವ|| 50 ವರ್ಷ ಉ|| ಮನೆಕೆಲಸ ಸಾ|| ಕುರಕುಂದಿ ಇವರು ಠಾಣೆಗೆ ಹಾಜರಾಗಿ ಕಂಪ್ಯೂಟರ್ನಲ್ಲಿ ಟೈಪ್ ಮಾಡಿಸಿದ ಫಿಯರ್ಾದಿ ಅಜರ್ಿ ಹಾಜರಪಡಿಸಿದ್ದು ಸಾರಾಂಶವೇನೆಂದರೆ, ಕುರಕುಂದಾ ಗ್ರಾಮದಲ್ಲಿ ನನ್ನ ಮಗ ರಾಜಪ್ಪ ಈತನು ನಮ್ಮೂರಿನಲ್ಲಿ ತನ್ನ ಕೈಲಾದಮಟ್ಟಿಗೆ ಬಡಜನರಿಗೆ ಮತ್ತು ಅನಕ್ಷರಸ್ಥರಿಗೆ ಸಹಾಯ ಮಾಡುತ್ತಾ ಸಮಾಜ ಸೇವೆ ಕೆಲಸ ಮಾಡುತ್ತಿದ್ದು ಗ್ರಾಮದಲ್ಲಿ ವಸತಿರಹಿತರಿಗೆ ನೀಡುವ ವಸತಿ ಯೋಜನೆಯಡಿಯಲ್ಲಿ ಅವ್ಯವಹಾರವಾಗಿದ್ದ ಬಗ್ಗೆ ಗ್ರಾಮ ಪಂಚಾಯತಿ ಪಿ.ಡಿ.ಓ ರವರ ವಿರುದ್ಧ ಮೇಲಾಧಿಕಾರಿಗಳಿಗೆ ಅಜರ್ಿ ಕೊಟ್ಟಿದ್ದು ಅದರ ನಿಮಿತ್ಯವಾಗಿ ದಿನಾಂಕ: 03-08-2018 ರಂದು ಮದ್ಯಾಹ್ನ 12 ಗಂಟೆಗೆ ಜಿಲ್ಲಾ ಪಂಚಾಯತಿ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ವಿಚಾರಣೆಗಾಗಿ ನಮ್ಮೂರಿಗೆ ಬಂದಾಗ ನನ್ನ ಮಗನು ಅವರಿಗೆ ಪಂಚಾಯತಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ದಾಖಲಾತಿಗಳನ್ನು ತೋರಿಸಿ ಹೇಳುತ್ತಿರುವಾಗ ಪಿ.ಡಿ.ಓ ಮಲ್ಲಿಕಾಜರ್ುನ, ಪರಶುರಾಮ ತಂದೆ ನಿಂಗಪ್ಪ ಪರಮಣ್ಣೋರ್ ಮತ್ತು ಅಯ್ಯಾಳಪ್ಪ ತಂದೆ ಚನ್ನಪ್ಪ ಮಾದಿಗ ಈ 3 ಜನರು ಕೂಡಿಕೊಂಡು ನನ್ನ ಮಗನಿಗೆ ನೀನೇನು ದಾಖಲಾತಿಗಳನ್ನು ತೋರಿಸುತ್ತೇನಲೆ ಸೂಳೆಮಗನೆ ನಿನ್ನದು ಬಹಾಳವಾಗಿದೆ ಅಂತಾ ಅಂದವರೆ ಪಿ.ಡಿ.ಓ ಮಲ್ಲಿಕಾಜರ್ುನ ಈತನು ನನ್ನ ಮಗನಿಗೆ ಎದೆಯ ಮೇಲಿನ ಅಂಗಿ ಹಿಡಿದು ತಡೆದು ನಿಲ್ಲಿಸಿ ಕೈಯಿಂದ ಕಪಾಳಕ್ಕೆ ಹೊಡೆದನು. ಪರಶುರಾಮ ಇವನು ನನ್ನ ಮಗನಿಗೆ ಕಾಲಿನಿಂದ ಒದೆಯುತ್ತಿದ್ದಾಗ ಅಯ್ಯಾಳಪ್ಪ ತನ್ನ ಕೈಯಿಂದ ಆತನ ಕಪಾಳಕ್ಕೆ ಹೊಡೆದು ಬೆನ್ನಿಗೆ ಗುದ್ದಿದನು. ವಿಚಾರಣೆ ಕಾಲಕ್ಕೆ ಹಾಜರಿದ್ದ ಇನ್ನು ಕೆಲವು ಜನರು ಸದರಿ 3 ಜನರಿಗೆ ಈ ಸೂಳೆಮಗನದು ಊರಲ್ಲಿ ಬಹಾಳವಾಗಿದೆ ಎಲ್ಲದ್ದಕ್ಕೂ ಅಡ್ಡಗಾಲು ಹಾಕುತ್ತಾನೆ ಅಂತಾ ಅನ್ನುತ್ತಿದ್ದರು. ಆ ಕಾಲಕ್ಕೆ ನಾನು ಮತ್ತು ನಮ್ಮ ಪೈಕಿ ಶರಣಪ್ಪ ಮತ್ತು ನಮ್ಮೂರಿನ ಶಿವಪ್ಪ ತಂದೆ ಬಸ್ಸಪ್ಪ ಕಬ್ಬಲಿಗ, ಬಸವರಾಜ ತಂದೆ ಭೀಮಪ್ಪ ಕಬ್ಬಲಿಗ ಮತ್ತು ಸಾಬಣ್ಣ ತಂದೆ ರಾಮಪ್ಪ ಎಸ್.ಸಿ ಕೂಡಿ ಜಗಳ ಬಿಡಿಸಿದೆವು. ಆಗ ಅವರು ನಿಮ್ಮವರೆಲ್ಲ ಬಂದು ಜಗಳ ಬಿಡಿಸಿದರೆಂದು ಉಳಿದುಕೊಂಡಿದ್ದಿ ಇನ್ನೊಂದು ಸಾರಿ ನಮ್ಮ ತಂಟೆಗೆ ಬಂದರೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಅವರು ಕೈಗಳಿಂದ ಹೊಡೆಬಡೆಮಾಡಿ, ಕಾಲಿನಿಂದ ಒದ್ದಿದ್ದರಿಂದ ನನ್ನ ಮಗನು ಅಸ್ವಸ್ಥನಾಗಿ ಬಳಲುತ್ತಿದ್ದರಿಂದ ಆತನನ್ನು ಕೂಡಲೇ ಉಪಚಾರ ಕುರಿತು ಕರೆದುಕೊಂಡು ಹೋಗಿದ್ದು, ನಂತರ ಆತನು ಚೇತರಿಸಿಕೊಂಡಿದ್ದರಿಂದ ಮರಳಿ ಮನೆಗೆ ಬಂದೆವು. ಪಿ.ಡಿ.ಓ ಮಲ್ಲಿಕಾಜರ್ುನ ರವರ ವಿರುದ್ಧ ನನ್ನ ಮಗ ದೂರು ನೀಡಿದ್ದರಿಂದ ಅವರ ಮೇಲಾಧಿಕಾರಿಗಳು ವಿಚಾರಣೆಗೆ ಬಂದಾಗ ಈ ಘಟನೆ ಜರುಗಿದ್ದು ಈ ಬಗ್ಗೆ ದೂರು ನೀಡಲು ಊರಲ್ಲಿ ವಿಚಾರಿಸಿ ದೂರು ನೀಡಬೇಕೆಂದು ಇಲ್ಲಿಯವರೆಗೆ ದೂರು ನೀಡದೆ ಈಗ ಬಂದು ಈ ನನ್ನ ದೂರು ನೀಡುತ್ತಿದ್ದು ಮಾನ್ಯರವರು ನನ್ನ ಮಗನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:171/2018 ಕಲಂ:341, 323, 504, 506 ಸಂಗಡ 149 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
 
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 172/2017 ಕಲಂ: 379 ಐಪಿಸಿ;- ದಿನಾಂಕ: 08/08/2018 ರಂದು 3 ಪಿಎಮ್ ಕ್ಕೆ ಶ್ರೀ ಬಸವರಾಜ ತಂದೆ ಮೈಲಾರಪ್ಪ ಪೂಜಾರಿ, ವ:45, ಜಾ:ಕುರುಬರ, ಉ:ಒಕ್ಕಲುತನ ಸಾ:ಕುರುಕುಂದಿ ತಾ:ವಡಗೇರಾ ಇವರು ವಡಗೇರಾ ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾಧಿ ಕೊಟ್ಟಿದ್ದೇನಂದರೆ ಹೀಗಿದ್ದು, ಕೇವಲ ಒಕ್ಕಲುತನದಲ್ಲಿ ಉಪಜೀವನಕ್ಕೆ ಸಾಕಾಗುತ್ತಿಲ್ಲದ್ದರಿಂದ ಸುಮಾರು 3 ವರ್ಷಗಳ ಹಿಂದೆ ವ್ಯವಸಾಯ ಸೇವಾ ಸಹಕಾರ ಸಂಘ ಶಹಾಪೂರದಲ್ಲಿ ನನ್ನ ಹೊಲ ಸವರ್ೆ ನಂ. 224 ನೇದ್ದನ್ನು ಮಾರ್ಟಗೇಜ್ ಮಾಡಿ ರೂ. 2,00,000=00 (ಎರಡು ಲಕ್ಷ ಮಾತ್ರ) ಸಾಲ ಪಡೆದುಕೊಂಡು ನಾಲ್ಕು (04) ಎಮ್ಮೆಗಳನ್ನು ಖರೀದಿ ಮಾಡಿದ್ದು, ಸದರಿ ಎಮ್ಮೆಗಳಿಗೆ ವ್ಯವಸಾಯ ಸೇವಾ ಸಹಕಾರ ಸಂಘದವರು ಮೂರುವು ಹಾಕಿಸಿದ್ದು, ಅವುಗಳ ಮೂರು ನಂ. 38314, 38315, 38316, 38317 ಈ ರೀತಿಯಾಗಿ ಇರುತ್ತದೆ. ಸದರಿ ಎಮ್ಮೆಗಳನ್ನು ಸಾಕಿಕೊಂಡು ನಾನು ಹಾಲು ಹೈನ ಮಾರಾಟ ಮಾಡುತ್ತಾ ಕುಟುಂಬದೊಂದಿಗೆ ಉಪಜೀವನ ಮಾಡುತ್ತಿದ್ದೇನು. ಹೀಗಿದ್ದು ಹೋದ ಯುಗಾದಿ ಹಬ್ಬದ ಸಮಯದಲ್ಲಿ ಬೇಸಿಗೆ ಇದ್ದುದ್ದರಿಂದ ನಮ್ಮ ಎಮ್ಮೆಗಳನ್ನು ಅಡವಿಗೆ ಮೇಯಲು ಖುಲ್ಲಾ ಹೊಡೆಯುತ್ತಿದ್ದೆವು. ಅವು ಸಾಯಂಕಾಲದ ವರೆಗೆ ಅಡವಿಯಲ್ಲಿ ಮೆಯ್ದು ಸಾಯಂಕಾಲ ಮನೆಗೆ ಮರಳಿ ಬಂದಾಗ ಎಮ್ಮೆಗಳನ್ನು ಕಟ್ಟಿ ಹಾಕುತ್ತಿದ್ದೆವು. ಹೀಗಿದ್ದು ದಿನಾಂಕ: 18/03/2018 ರಂದು ಯುಗಾದಿ ಹಬ್ಬದ ದಿನದಂದು ಸದರಿ ನನ್ನ ನಾಲ್ಕು (04) ಎಮ್ಮೆಗಳನ್ನು ಅಡವಿಗೆ ಮೇಯಲು ಹೊಡೆದು ಕಳುಹಿಸಿದೆವು. ಸಾಯಂಕಾಲ 4 ಗಂಟೆ ಸುಮಾರಿಗೆ ನಮ್ಮ ಹೊಲದ ಕಡೆಗೆ ಹೋದಾಗ ನಮ್ಮ ಎಮ್ಮೆಗಳು ಅಲ್ಲಿಯೇ ಮೇಯುತ್ತಿದ್ದವು. ಸಾಯಂಕಾಲ ಹೇಗಾದರೂ ಮನೆ ಕಡೆ ಬರುತ್ತವೆ ಎಂದು ನಾನು ಮನೆಗೆ ಬಂದಿದ್ದು, ಸಾಯಂಕಾಲವಾದರು ನಮ್ಮ ಎಮ್ಮೆಗಳು ಮನೆಗೆ ಬರಲಿಲ್ಲ. ಆಗ ನಾನು ಅಡವಿಯಲ್ಲಿ ಹೋಗಿ ನಮ್ಮ ಹೊಲ ಮತ್ತು ಇತರೆ ಕಡೆ ಹೋಗಿ ನೋಡಿ ಬಂದೆನು. ಎಮ್ಮೆಗಳು ಎಲ್ಲಿಯು ಸಿಗಲಿಲ್ಲ. ನಂತರ ನಾನು ಮತ್ತು ನನ್ನ ಅಣ್ಣತಮ್ಮಂದಿರಾದ ಮಾಳಪ್ಪ ತಂದೆ ಮೈಲಾರಪ್ಪ ಪೂಜಾರಿ, ಮಲ್ಲಪ್ಪ ತಂದೆ ಮೈಲಾರಪ್ಪ ಪೂಜಾರಿ ಹಾಗೂ ಇತರರು ಸೇರಿ ಕುರುಕುಂದಾ, ಕಾಡಂಗೇರಾ, ಕ್ಯಾತ್ನಾಳ ಮುಂತಾದ ಕಡೆ ಹೋಗಿ ಹುಡುಕಾಡಿದೇವು. ಅಲ್ಲಿಂದ ನಾನು ಮತ್ತು ನಮ್ಮೂರ ಜಯರೆಡ್ಡಿ ತಂದೆ ಪಂಪಣ್ಣ ಪದ್ದಿ ಕೂಡಿ ಕೆಂಭಾವಿ ಹತ್ತಿರದ ಮಳ್ಳಳ್ಳಿ, ದೇವದುರ್ಗ ತಾಲ್ಲೂಕಿನ ಕೊಪ್ಪೂರ ಮುಂತಾದ ಕಡೆ ಹೋಗಿ ಹುಡುಕಾಡಿ ಬಂದರು ಕೂಡಾ ನಮ್ಮ ಎಮ್ಮೆಗಳು ಸಿಕ್ಕಿರುವುದಿಲ್ಲ. ಯಾರೋ ಕಳ್ಳರು ಅಡವಿಯಲ್ಲಿ ಮೇಯಲು ಬಿಟ್ಟ ನನ್ನ ನಾಲ್ಕು (04) ಎಮ್ಮೆಗಳು ಅ:ಕಿ: 2,00,000=00 (ಎರಡು ಲಕ್ಷ ರೂಪಾಯಿ) ನೇದ್ದವುಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ನಾನು ಕಳುವಾದ ನನ್ನ ಎಮ್ಮೆಗಳನ್ನು ಎಲ್ಲಾ ಕಡೆ ಹುಡುಕಾಡಿ ಈಗ ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ನಮ್ಮ ಎಮ್ಮೆಗಳನ್ನು ಕಳುವು ಮಾಡಿಕೊಂಡು ಹೋದ ಕಳ್ಳರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿರಿ ಎಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 172/2018 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
 

No comments: