Police Bhavan Kalaburagi

Police Bhavan Kalaburagi

Friday, January 3, 2020

BIDAR DISTRICT DAILY CRIME UPDATE 03-01-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 03-01-2020

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಯು.ಡಿ.ಆರ್ ನಂ. 01/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 31-12-2019 ರಂದು ಮುಂಜಾನೆಯಿಂದ ದಿನಾಂಕ 02-01-2020 ರಂದು 0600 ಗಂಟೆಯ ಮದ್ಯಾವಧಿಯಲ್ಲಿ ಫಿರ್ಯಾದಿ ಭಕ್ತಿ ಗಂಡ ಶಿವಕುಮಾರ ಹುಡಗಿ ಸಾ: ದುಬಲಗುಂಡಿ ರವರ ಗಂಡನಾದ ಶಿವಕುಮರ ತಂದೆ ಚಂದ್ರಕಾಂತ ಇತನು ಸರಾಯಿ ಕೂಡಿದ ನಶೆಯಲ್ಲಿ ತಮ್ಮೂರ ವೈಜಿನಾಥ ಕಾಡವಾದಿ ರವರ ಹೊಲದಲ್ಲಿರುವ ಬಾವಿಯಲ್ಲಿ ಬಿದು್ದ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ತನ್ನ ಗಂಡನ ಸಾವಿನ ಬಗ್ಗೆ ಯಾರ ಮೇಲು ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಖಟಕಚಿಂಚೋಳಿ ಪೊಲೀಸ್ ಠಾಣೆ ಯು.ಡಿ.ಆರ್ ನಂ. 01/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 02-01-2019 ರಂದು ಫಿರ್ಯಾದಿ ನೀಲಮ್ಮಾ ಗಂಡ ಹಣಮಂತ ಕಮಲಾಪೂರೆ ವಯ: 45 ವರ್ಷ, ಜಾತಿ: ಎಸ್.ಸಿ (ಮಾದಿಗ), ಸಾ: ಖಟಕ ಚಿಂಚೋಳಿ ರವರ ಗಂಡ ತನ್ನ ಹೆಣ್ಣು ಮಕ್ಕಳ ಮದುವೆ ಮಾಡುವ ಸಲುವಾಗಿ ಖಾಸಗಿಯಾಗಿ ಬೇಕಾದವರ ಹತ್ತಿರ 2 ಲಕ್ಷ ರೂಪಾಯಿ ಸಾಲ ಮಾಡಿದ್ದು, ಸದರಿ ಸಾಲವನ್ನು ತಿರಿಸಲಾಗದೇ  ಗ್ರಾಮದ ಕಲ್ಲಪ್ಪಾ ತಲಾಟೆ ರವರ ಹೊಲದಲ್ಲಿ ಆರಿ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ, ಇದರ ಬಗ್ಗೆ ಯಾರ ಮೇಲೆ ಯಾವುದೆ ತರಹದ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 01/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 02-01-2020 ರಂದು ಬೀದರ ನಗರದ ಉಸ್ಮಾನ ಗಂಜನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಹೊಗಿ ಬರುವ ಜನರಿಗೆ ಕರೆದು ತನ್ನ ಹತ್ತಿರ ಮಟಕಾ ಜೂಜಾಟ ಆಡಿದರೆ 1/- ರೂ. ಗೆ 80/- ರೂ ಕೊಡುತ್ತೇನೆ ಅಂತ ಕರೆದು ಜನರಿಂದ ಹಣ ಪಡೆದು ಅಂಕಿ ಸಂಖ್ಯೆ ಬರೆದ ಚೀಟಿ ಬರೆದುಕೊಡುತ್ತಿದ್ದಾನೆ ಅಂತ ರಾಜಪ್ಪಾ ಎ.ಎಸ್.ಐ ಬೀದರ ನಗರ ಪೊಲೀಸ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾನೆಯ ಸಿಬ್ಬಂದಿಯವರೊಡನೆ ಉಸ್ಮಾನ ಗಂಜಗೆ ಹೋಗಿ ಮರೆಯಲ್ಲಿ ನಿಂತು ನೋಡಲು ಅಲ್ಲಿ ಆರೋಪಿ  ಶೇಖ ಅಬ್ದುಲ್ಲಾ ತಂದೆ ಅಹ್ಮದ ಹುಸೇನ್ ವಯ: 50 ವರ್ಷ, ಜಾತಿ: ಮುಸ್ಲಿಂ, ಸಾ: ದರ್ಗಾಪೂರಾ, ಬೀದರ ಇತನು ಸಾರ್ವಜನಿಕ ಸ್ಥಳದಲ್ಲಿ ನಿಂತು ಜನರಿಂದ ಹಣ ಪಡೆದು ಅಂಕಿ ಸಂಖ್ಯೆ ಬರೆದ ಚೀಟಿ ಬರೆದು ಕೊಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನಿಗೆ ಹಿಡಿದು ಅವನಿಂದ ನಗದು ಹಣ 430/- ರೂ., ಒಂದು ಬಾಲ ಪೆನ್ನು ಹಾಗು ಒಂದು ಮಟಕಾ ಚೀಟಿ ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಲಸೂರ ಪೊಲೀಸ್ ಠಾಣೆ ಅಪರಾಧ ಸಂ. 01/2020, ಕಲಂ. 15(ಎ), 32(3) ಕೆ.ಇ ಕಾಯ್ದೆ :-
ದಿನಾಂಕ 02-01-2020 ರಂದು ಗೌರ ತಾಂಡಾದ ಬಸ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ವಿಸ್ಕಿ ಸರಾಯಿ ಸೇವನೆ ಮಾಡುವವರಿಗೆ ಚಿಲ್ಲರೆಯಾಗಿ ಮಾರಾಟ ಮಾಡಿ ಕುಡಿಯಲು ಅನುವು ಮಾಡಿಕೊಡುತ್ತಿದ್ದಾನೆಂದು ಗೌತಮ ಪಿ.ಎಸ್. ಹುಲಸೂರ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಗೌರ ಗ್ರಾಮದಿಂದ ಹೊರಟು ಗೌರ ತಾಂಡಾದ ಸ್ವಲ್ಪ ದೂರ  ಮರೆಯಾಗಿ ನಿಂತು ನೋಡಲು ಗೌರ ತಾಂಡಾದ ಬಸ ನಿಲ್ದಾಣದ ಹತ್ತಿರ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ರಾಜು @ ಅಶೋಕ ತಂದೆ ರಾಮಸಿಂಗ ರಾಠೋಡ, ವಯ 21 ವರ್ಷ, ಜಾತಿ: ಲಂಬಾಣಿ, ಸಾ: ಗೌರ ತಾಂಡಾ ಇತನು ತನ್ನ ಅಧಿನದಲ್ಲಿ ವಿಸ್ಕಿ ಟೆಟ್ರಾ ಪ್ಯಾಕವುಳ್ಳ ಪಾಕೇಟಗಳು ಇಟ್ಟುಕೊಂಡು ನಿಂತಿರುವುದನ್ನು ಕಂಡು ಅವನ ಮೇಲೆ ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಹಿಡಿದು ಆತನ ವಶದಲ್ಲಿದ್ದ ಒಂದು ಪ್ಲಾಸ್ಟಿಕ್ ಗ್ಲಾ¸ï ಮತ್ತು ಎರಡು 180 ಎಮ್.ಎಲ್ ಓಟಿ ವಿಸ್ಕಿ ಟೆಟ್ರಾ ಪ್ಯಾಕವುಳ್ಳ ಪಾಕೇಟಗಳಿದ್ದು ರಲ್ಲಿ ಒಂದು ಒಡೆದಿದ್ದು .ಕಿ 100/- ಇರುತ್ತದೆ, ನಂತರ ಆತನಿಗೆ ಮಾರಾಟ ಮಾಡಲು ಅನುಮತಿ /ಅಂಗಡಿಯ ರಶೀದಿ ಕೇಳಲಾಗಿ ತನ್ನ ಹತ್ತಿರ ಸರಾಯಿ ಮಾರಲು ಲೈಸನ್ಸ್ಇಲ್ಲದೆ ಚಿಲ್ಲರೆಯಾಗಿ ಮಾರಾಟ ಮಾಡಿ ಕುಡಿಯಲು ಅನುವು ಮಾಡುತ್ತಿರುವದಾಗಿ ಒಪ್ಪಿಕೊಂಡನು, ನಂತರ ಪಂಚರ ಸಮಕ್ಷಮದಲ್ಲಿ ದೊರೆತ ಎರಡು 180 ಎಮ್.ಎಲ್ ಓಟಿ ವಿಸ್ಕಿ ಅದರಲ್ಲಿ ಒಂದು ಒಡೆದಿದ್ದು ಮತ್ತು 1 ಪ್ಲಾಸ್ಟಿಕ್ ಗ್ಲಾಸ್ ಪಂಚರ ಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 03/2020, ಕಲಂ. 379 ಐಪಿಸಿ :-
ದಿನಾಂಕ 28-12-2019 ರಂದು 1800 ಗಂಟೆಗೆ ವಿಜಯಕುಮಾರ ತಂದೆ ಕರಬಸಪ್ಪಾ ವಾಲಿ, ವಯ: 47 ವರ್ಷ, ಜಾತಿ: ಲಿಂಗಾಯತ, ಸಾ: ನೆಹೆರು ಚೌಕ ಚಿಟಗುಪ್ಪಾ ರವರು ತನ್ನ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನಂ. ಕೆಎ-39/ಆರ್-1263 ಅ.ಕಿ 40,000/- ರೂ. ನೇದನ್ನು ಚಿಟಗುಪ್ಪಾ ಪಟ್ಟಣದ ಗಾಂಧಿ ಚೌಕ ಆರ್ಯ ಸಮಾಜ ರೋಡಿನ ಮೇಲೆಮ್ಮ ಸ್ವೀಟ್ ಹೌಸ ಎದುರಿಗೆ ನಿಲ್ಲಿಸಿದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಅದನ್ನು ಇಲ್ಲಿಯವರೆಗೆ ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 02-01-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 02/2020, ಕಲಂ. 279, 337, 338 ಐಪಿಸಿ :-
ದಿನಾಂಕ 02-01-2020 ರಂದು ಫಿರ್ಯಾದಿ ಸಂತೋಷಸಿಂಗ ತಂದೆ ಶಿವಲಾಲಸಿಂಗ ಠಾಕೂರ ಸಾ:  ವರವಟ್ಟಿ (ಕೆ) ತಾ: ಹುಮನಾಬಾದ ರವರಿ ತನ್ನ ಖಾಸಗಿ ಕೆಲಸದ ಪ್ರಯುಕ್ತ ಹುಮನಾಬಾದಗೆ ಬರುವ ಸಲುವಾಗಿ ವರವಟ್ಟಿ (ಕೆ) ಗ್ರಾಮದ ಬಸ್ ನಿಲ್ದಾಣದ ಹತ್ತಿರ ಬಂದು ಬಸ್ಸಿನ ದಾರಿ ಕಾಯುತ್ತಾ ನಿಂತ್ತು ಕೊಂಡಾಗ ತಮ್ಮೂರ ವಿನೋದ ತಂದೆ ರಮೇಶ ಶಿಲಮೂರ್ತಿ ಇವನು ಸಹ ಹುಮನಾಬಾದಗೆ ಬರುವ ಪ್ರಯುಕ್ತ ಬಸ್ ನಿಲ್ದಾಣದ ಹತ್ತಿರ ಬಂದಾಗ ಅದೇ ಸಮಯಕ್ಕೆ ಮ್ಮೂರ ಅಶೋಕ ತಂದೆ ಗುಂಡೆರಾವ ಬಿರಾದಾರ ಇವನು ತನ್ನ ಲಾರಿ ಸಂ. ಕೆಎ-56/3268  ನೇದನ್ನು ಚಲಾಯಿಸಿಕೊಂಡು ಫಿರ್ಯಾದಿಯವರ ಹತ್ತಿರ ಬಂದು ನಾನು ಹುಮನಾಬಾದಕ್ಕೆ ಹೋಗುತ್ತಿದ್ದೇನೆ ಬಾ ನನ್ನ ಲಾರಿಯಲ್ಲಿ ಕುಳಿತುಕೊಳ್ಳಿ ಅಂತ ಹೇಳಿದಾಗ ಫಿರ್ಯಾದಿ ಮತ್ತು ವಿನೋದ ಇಬ್ಬರೂ ಅಶೋಕ ಇವನಿಗೆ ನೀನು ಹೋಗು ನಾವು ಬಸ್ಸಿಗೆ ಬರುತ್ತೇವೆ ಅಂತ ಹೇಳಿದರೂ ಸಹ ಇಬ್ಬರಿಗೂ ತನ್ನ ಲಾರಿಯಲ್ಲಿ ಕೂಡಿಸಿಕೊಂಡು ವರವಟ್ಟಿ(ಕೆ) ಗ್ರಾಮದಿಂದ  ಹುಮನಾಬಾದಕ್ಕೆ ಬರುತ್ತಿದ್ದಾಗ ತನ್ನ ಲಾರಿಯನ್ನು ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಹುಮನಾಬಾದ ಹೊರ ವಲಯದ ಬ್ರಿಡ್ಜ್ ಹತ್ತಿರ ಬಂದು ತನ್ನಿಂದ ತಾನೆ ತನ್ನ ಲಾರಿಯನ್ನು ರೋಡಿನ ಬದಿಯಲ್ಲಿ ಪಲ್ಟಿ ಮಾಡಿರುತ್ತಾನೆ, ಸದರಿ ಅಪಘಾತದಿಂದ ಲಾರಿಯಲ್ಲಿ ಕುಳಿತ ಫಿರ್ಯಾದಿಗೆ ಎಡಗೈ ಮೊಣಕೈಗೆ ತೀವ್ರ ಗುಪ್ತಗಾಯ ಆಗಿರುತ್ತದೆ,  ವಿನೋದ ಇವನಿಗೆ ನೋಡಲಾಗಿ ಎಡ ರಟ್ಟೆಗೆ ತರಚಿದ ಗಾಯಗಳು ಆಗಿರುತ್ತವೆ, ಹಿಂದೆ ಮೋಟಾರ್ ಸೈಕಲ್ ಮೇಲ್ ಬರುತ್ತಿದ್ದ ಮ್ಮೂರ ನೀಲಕಂಠ ತಂದೆ ಮಾಪಣ್ಣಾ ಶೆಟ್ಟೆ ರವರು ಇಬ್ಬರಿಗೂ 108 ಅಂಬುಲೇನ್ಸ್ನಲ್ಲಿ ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 01/2020, ಕಲಂ. 363 ಐಪಿಸಿ :-
ದಿನಾಂಕ 02-01-2020 ರಂದು ಫಿರ್ಯಾದಿ ಮಂಗಲಾಬಾಯಿ ಗಂಡ ವೈಜಿನಾಥ ಕಾಂಬ್ಳೆ ವಯ: 40 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಬಿ.ಎಸ್.ಎಸ್.ಕೆ ಹಳ್ಳಿಖೇಡ (ಬಿ) ರವರ ಮಗನಾದ ರಾಜಕುಮಾರ ವಯ: 16 ವರ್ಷ ಇವನು ಹಳ್ಳಿಖೇಡ[ಬಿ] ಪಟ್ಟಣದ ಭಾಯಿ ಬನ್ಸಿಲಾಲ ಪ್ರೌಢ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ಹೀಗಿರುವಾಗ ದಿನಾಂಕ 29-12-2019 ರಂದು ರಾಜಕುಮಾತ ಇತನ ಶಾಲೆಗೆ ರಜೆ ಇದ್ದುದರಿಂದ 1700 ಗಂಟೆಯ ಸುಮಾರಿಗೆ ಫಿರ್ಯದಿಯು ಕೆಲಸ ಮಾಡುವ ಹೋಟೇಲಗೆ ಬಂದು ಕ್ಯಾನ ಕೊಟ್ಟು ಮನೆಗೆ ಹೋಗುತ್ತೇನೆಂದು ಹೇಳಿ ಹೋದವನು ಮನೆಗೆ ಬಂದಿರುವುದಿಲಲ, ಕಾಣೆಯಾಗಿರುತ್ತಾನೆ, ಎಲ್ಲಾ ಕಡೆ ಹುಡುಕಾಡಿ ನೋಡಲು ಆತನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ, ಮಗನಾದ ರಾಜುಮಾರ ಕಾಂಬ್ಳೆ ಇತನಿಗೆ ದಿನಾಂಕ 29-12-2019 ರಂದು 1700 ಗಂಟೆಯಿಂದ 2100 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಯಾವುದೊ ಉದ್ದೇಶದಿಂದ ಅವನನ್ನು ಅಪಹರಣ ಮಾಡಿಕೊಂಡು ಹೋಗಿರುವ ಬಗ್ಗೆ ಸಂಶಯ ಇರುತ್ತದೆ, ಅವನ ಚಹರೆ ಪಟ್ಟಿ ದುಂಡು ಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ಕಪ್ಪನೆ ಕೂದಲು, ನೇರವಾದ ಮೂಗು ಅವನ ಮೈ ಮೇಲೆ ಒಂದು ಕಪ್ಪು ಬಣ್ಣದ ನೈಟ ಪ್ಯಾಂಟ, ಒಂದು ಕೆಂಪು ಬಣ್ಣದ ಟಿಶರ್ಟ ಮತ್ತು ಒಂದು ನಾಸಿ ಬಣ್ಣದ ಸ್ವೇಟರ್ ಇರುತ್ತವೆ, ಅವನು ಕನ್ನಡ, ಮರಾಠಿ ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆಂದು ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.