Police Bhavan Kalaburagi

Police Bhavan Kalaburagi

Tuesday, March 24, 2020

BIDAR DISTRICT DAILY CRIME UPDATE 24-03-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 24-03-2020

ಚಿಟಗುಪ್ಪಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 04/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಸುನೀತಾ ಗಂಡ ಜಗನ್ನಾಥ ಶೇರಿಕಾರ ವಯ: 40 ವರ್ಷ, ಸಾ: ವಳಖಿಂಡಿ, ಸದ್ಯ: ವಿಠಲಪೂರ ರವರ ಗಂಡನಾದ ಜಗನ್ನಾಥ ಶೇರಿಕಾರ ವಯ: 40 ವರ್ಷ, ಸಾ: ವಳಖಿಂಡಿ, ಸದ್ಯ: ವಿಠಲಪೂರ ರವರು ಅತ್ತೆ ಹೇಸರಲ್ಲಿರುವ ಹೊಲದಲ್ಲಿ 2-3 ದಿವಸಗಳ ಹಿಂದೆ ಹೊಲಕ್ಕೆ ಹೋಗಿ ಹೊಲದಲ್ಲಿ ಕೆಲಸ ಮಾಡಿ ಹೊಲದ ಪಕ್ಕದಲ್ಲಿರುವರುವ  ಬಾವಿಯ ನೀರು ಕುಡಿಯಲು ಹೊಗಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ಮೃತಪಟ್ಟಿರುತ್ತಾರೆ, ಬಾವಿಯಲ್ಲಿ ಬಿದ್ದಾಗ ಕ್ರಿಮಿ ಕೀಟಗಳು ತುಟಿ ಹಾಗು ಕಣ್ಣಿನ ರೆಪ್ಪೆ, ಕಿವಿ ತಿಂದಂತೆ ಹಾಗು ನೀರಿನಲ್ಲಿ ನೇನೆದು ಕಾಲಿನ ಚರ್ಮ ಹೋಗಿರುತ್ತದೆ, ಗಂಡ ನೀರು ಕುಡಿಯಲು ಹೋಗಿ ಆಕಸ್ಮಿಕವಾಗಿ  ಕಾಲು ಜಾರಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದು, ತನ್ನ ಗಂಡನ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 20-03-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕುಶನೂರ ಪೊಲೀಸ ಠಾಣೆ ಯು.ಡಿ.ಆರ್ ಸಂ. 06/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 23-03-2020 ರಂದು ಫಿರ್ಯಾದಿ ದಯಾನಂದ ತಂದೆ ಮರೆಪ್ಪಾ ಖಂಡಾರ ವಯ: 55 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಮಹಾಡೊಣಗಾಂವ ರವರ ಮಗನಾದ ಚಂದ್ರಕಾಂತ ತಂದೆ ದಯಾನಂದ ಸಾ: ಮಹಾಡೊಣಗಾಂವ ಇತನು ಸರಾಯಿ ಕುಡಿದ ಅಮಲಿನಲ್ಲಿ ತಮ್ಮ ಮನೆಯಲ್ಲಿದ್ದ ಯಾವುದೋ ಔಷಧ ಕುಡಿದ ಪ್ರಯುಕ್ತ ಆತನಿಗೆ ಔರಾದ ಸರ್ಕಾರಿ ಆಸ್ಪತ್ರೆಗೆ ತಂದು ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ದಯಾನಂದ ಇತನು ಮ್ರತಪಟ್ಟಿರುತ್ತಾನೆ, ಆತನ ಸಾವಿನಲ್ಲಿ ಯಾರ ಮೇಲೆ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 18/2020, ಕಲಂ. 279, 304() ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 23-03-2020 ರಂದು ಗ್ರಾಮೀಣ ಹೈವೈ ಮೊಬೈಲ್ ಕರ್ತವ್ಯಕ್ಕೆ ಫಿರ್ಯಾದಿ ಕಾಶಿನಾಥ ತಂದೆ ಭೀಮಣ್ಣಾ ಗೋರನಾಳಕರ ವಯ: 56 ವರ್ಷ, : .ಎಸ್. ಜನವಾಡಾ ಪೊಲೀಸ ಠಾಣೆ ರವರಿಗೆ ಠಾಣೆಯ ಪಿ.ಎಸ್. ರವರು ನೇಮಕ ಮಾಡಿ ಮುಂಜಾನೆ 0800 ಗಂಟೆಯಿಂದ 1400 ಗಂಟೆವರೆಗೆ ಕರ್ತವ್ಯ ನಿರ್ವಹಿಸಲು ನೇಮಕ ಮಾಡಿ ಬೀದರ ಕಂಟ್ರೋಲ್ ರೂಂಗೆ ಹೋಗಿ ವರದಿ ಮಾಡಿಕೊಳ್ಳುವಂತೆ ಸೂಚಿಸಿ ಕಳುಹಿಸಿದ್ದು, ಫಿರ್ಯಾದಿಯು ಬೀದರ ಕಂಟ್ರೋಲ್ ರೂಂಗೆ ಬಂದು 0800 ಗಂಟೆಗೆ ಹೈವೈ ಮೊಬೈಲ್ ವಾಹನ ಸಂ. ಕೆಎ-38/ಜಿ-2000 ನೇದ್ದು ತೆಗೆದುಕೊಂಡು ಚಾಲಕರಾದ ಸೂರ್ಯಕಾಂತ .ಪಿ.ಸಿ-285 ರವರೊಂದಿಗೆ ಬಿಟ್ಟು ಅಲ್ಲಿಂದ ಬೆನಕನಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿಂದ ಗಾದಗಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿಂದ ಚಿಕಪೇಟ ಮರಕಲ್ ಗ್ರಾಮದ ಕಡೆಗೆ ರಿಂಗ ರೋಡಿನ ಮುಖಾಂತರ ಹೋಗುವಾಗ ಬೆನಕನಳ್ಳಿ ಕ್ರಾಸ ಹತ್ತಿರ ಹೋದಾಗ ಹೋಟಲ್ ಹತ್ತಿರ ಜಾಸ್ತಿ ಜನರು ಒಂದೆ ಕಡೆ ಸೇರಿದ್ದರಿಂದ 10:20 ಗಂಟೆ ಸುಮಾರಿಗೆ ಸದರಿ ವಾಹನವನ್ನು ರೋಡಿನ ಸೈಡಿಗೆ ನಿಲ್ಲಿಸಿ ಜನರಿಗೆ ಕರೋನಾ ವೈರಸ್ ಬಗ್ಗೆ ತಿಳಿಸಿ ಕಳುಹಿಸುವಾಗ ಅದೇ ಸಮಯಕ್ಕೆ ರಿಂಗ ರೋಡಿನಲ್ಲಿ ಜಹೀರಾಬಾದ ಕಡೆಯಿಂದ ಒಂದು ಗೂಡ್ಸ್ ವಾಹನ ನಂ. ಕೆಎ-38/-0652 ನೇದ್ದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ಬೆನಕನಳ್ಳಿ ಕಡೆಯಿಂದ ಜ್ಞಾನಸುಧಾ ಶಾಲೆ ಕಡೆಯಿಂದ ಬೀದರ ಕಡೆಗೆ ಹೋಗುತ್ತಿದ್ದ ಒಂದು ಹೊಂಡಾ ದ್ವಿಚಕ್ರ (ಸ್ಕೊಟಿ) ವಾಹನ ನಂ. ಕೆಎ-38/ಡಬ್ಲೂ-3248 ನೇದ್ದಕ್ಕೆ ಡಿಕ್ಕಿ ಪಡಿಸಿ ವಾಹನ ಸಮೇತ ತನ್ನ ಗೂಡ್ಸ ವಾಹನದಲ್ಲಿ ಸಿಲಿಕಿಕೊಂಡಿದ್ದು ವಾಹನ ಕಂಟ್ರೋಲ್ ಆಗದೆ ರೋಡಿನ ಸೈಡಿಗೆ ನಿಲ್ಲಿಸಿದ ಹೈವೈ ಮೊಬೈಲ್ ವಾಹನದ ಬಲಗಡೆ ಮುಂಭಾಗಕ್ಕೆ ಡಿಕ್ಕಿ ಪಡಿಸಿ ರೋಡಿನ ಬದಿಯಲ್ಲಿ ಕೆ..ಬಿ ಕರೆಂಟ ಕಂಬಕ್ಕೆ ಡಿಕ್ಕಿ ಪಡಿಸಿ ತಗ್ಗಿನಲ್ಲಿ ವಾಹನ ಹೋಗಿ ನಿಂತಾಗ ಗೂಡ್ಸ್ ವಾಹನ ಚಾಲಕನು ತನ್ನ ವಾಹನ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ದ್ವೀಚಕ್ರ ವಾಹನದ ಸವಾರ ಗೂಡ್ಸ ವಾಹನದ ಕೇಳಗೆ ಸಿಲಿಸಿಕೊಂಡು ರೋಡಿನ ಪಕ್ಕದ ತಗ್ಗಿನಲ್ಲಿ ಗಾಯಗೊಂಡು ಬಿದ್ದಿದ್ದ ವ್ಯಕ್ತಿಯನ್ನು ಪರಿಶಿಲಿಸಿ ನೋಡಲು ಅವನ ತಲೆಯ ಬಲಭಾಗದಲ್ಲಿ ಭಾರಿ ರಕ್ತವಾಗಿ ಚರ್ಮ ಹೊರಬಂದು ತಲೆ ಬುರಡೆ ಕಾಣುತ್ತಿದ್ದು ಮತ್ತು ಎಡಗಣ್ಣಿಗೆ ಮೇಲುಕಿಗೆ ಭಾರಿ ರಕ್ತಗಾಯವಾಗಿ ತುಟಿಯ ಬಲಭಾಗದಲ್ಲಿ ರಕ್ತಗಾಯವಾಗಿ ಮೂಗಿನಿಂದ ರಕ್ತ ಹೊರಬಂದಿರುತ್ತದೆ, ಬಲಗಡೆಯ ಟ್ಟೆ ಮುರಿದಿರುತ್ತದೆ, ಎಡಗಾಲು ಮೊಳಕಾಲು, ತೊಡೆ ಮುರಿದಿರುತ್ತದೆ, ಎಡಗಾಲು ಹಿಮ್ಮಡಿ ಒಡೆದು ಮೌಂಸಖಂಡ ಹೊರಬಂದಿರುತ್ತದೆ, ಸೊಂಟದ ಎಡಭಾಗದಲ್ಲಿ ರಕ್ತಗಾಯವಾಗಿದೆ, ಬಲಗಾಲಿನ ತೊಡೆ ಮುರಿದು ಮೌಂಸಖಂಡ ಹೊರಬಂದಿರುತ್ತದೆ, ಬಲಗಣ್ಣಿನ ಕೆಳಗೆ ರಕ್ತಗಾಯವಾಗಿ ವ್ಯಕ್ತಿಯು  ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ನಂತರ ಅವರ ಸಂಬಂಧಿಕರಿಗೆ ಹೊತ್ತಾಗಿ ಅವರು ಬಂದ ನಂತರ ಮೃತ ದೇಹವು ಒಂದು ವಾಹನದಲ್ಲಿ ಹಾಕಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಮೃತನ ಸಂಬಂಧಿಕರಿಂದ ಮೃತನ ಹೆಸರು ಗೊತ್ತಾಗಿದೆನೆಂದರೆ ರಾಮಣ್ಣಾ ತಂದೆ ಲಾಲಪ್ಪಾ ವಯ: 55 ವರ್ಷ, ಜಾತಿ: ಎಸ್.ಸಿ ಮಾದಿಗಾ, ಸಾ: ಕನ್ನಳ್ಳಿ, ತಾ: ಜಿ: ಬೀದರ ಅಂತ ತಿಳಿಯಿತು, ಸದರಿ ಘಟನೆಯಲ್ಲಿ ಹೈವೈ ಮೊಬೈಲ ಬಲಗಡೆ ಮುಂಭಾಗದ ಸೈಡ್ ಗ್ಲಾಸ್, ಬಲಗಡೆ ಹೆಡ್ ಲೈಟ್, ಬಲಗಡೆ ಮುಂಭಾಗದ ಡೊರ್ ಮತ್ತು ಎಡಗಡೆ ಮುಂಭಾಗದ ಟೈರಿನ ಮೇಲಭಾಗಕ್ಕೆ ಡ್ಯಾಮೇಜ್ ಆಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 29/2020, ಕಲಂ. 279, 338 ಐಪಿಸಿ :-
ದಿನಾಂಕ 23-03-2020 ರಂದು ಫಿರ್ಯಾದಿ ರವಿ ತಂದೆ ಪಾಪಣ್ಣಾ ಆರ್ಯ ಸಾ: ಬಾಗವಾನ ಗಲ್ಲಿ, ಹುಮನಾಬಾದ ರವರ ಅಣ್ಣ ಮದನ ಆರ್ಯ ಇವನು ತನ್ನ ಮೋಟಾರ್ ಸೈಕಲ್ ಸಂ. ಕೆಎ-39/ಆರ್-3177 ನೇದನ್ನು ತೆಗೆದುಕೊಂಡು ಮನೆಯಿಂದ ಖಾಜಾ ಕಂಪನಿಗೆ ಹೋಗಿ ಕಂಪನಿಯಲ್ಲಿ ಕೆಲಸವನ್ನು ಮುಗಿಸಿಕೊಂಡು ಮರಳಿ ಮನೆಗೆ ಬರುತ್ತಿರುವಾಗ ತನ್ನ ಮೋಟಾರ್ ಸೈಕಲನ್ನು ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸರ್ಕಾರಿ ಆಸ್ಪತ್ರೆಯ ಶವಗಾರ ಕೋಣೆಯ ಹತ್ತಿರ ಮೋಟಾರ್ ಸೈಕಲ್ ಸಮೇತ ತನ್ನಿಂದ ತಾನೆ ರೋಡಿನ ಮೇಲೆ ಬಿದ್ದಿರುತ್ತಾನೆ, ಕಾರಣ ಸದರಿ ಅಪಘಾತದಿಂದ ಮದನ ಆರ್ಯ ಇವನಿಗೆ ತಲೆಗೆ ತೀವ್ರ ಗುಪ್ತಗಾಯ, ಎರಡು ಭುಜಗಳಿಗೆ ತರಚಿದ ರಕ್ತಗಾಯ ಮತ್ತು ಸೊಂಟಕ್ಕೆ ಗುಪ್ತಗಾಯಗಳು ಆಗಿ ಎಡ ಕೀವಿಯಿಂದ ಮತ್ತು ಮೂಗಿನಿಂದ ರಕ್ತಸ್ರಾವ ಆಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಮೌಖಿಕ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 41/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 23-03-2020 ರಂದು ಬಸವಕಲ್ಯಾಣ ನಗರದ ತ್ರೀಪೂರಾಂತ .ಬಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಗುಂಪಾಗಿ ಕುಳಿತುಕೊಂಡು ಹಣ ಹಚ್ಚಿ ಪಣ ತೋಟ್ಟು ಇಸ್ಪಿಟ್ ಎಲೆಗಳ ಅಂದರ ಬಾಹರ್ ನಸಿಬಿನ ಜೂಜಾಟವನ್ನು ಆಡುತ್ತಿದ್ದಾರೆಂದು ಸುನೀಲಕುಮಾರ ಪಿ.ಎಸ್. (ಕಾ & ಸೂ) ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಕರೆ ಮುಖಾಂತರ ಖಚಿತ ಬಾತ್ಮಿಯನ್ನು ತಿಳಿದು ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಬಸವಕಲ್ಯಾಣ ನಗರದ ತ್ರೀಪೂರಾಂತ .ಬಿ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಬಸವಕಲ್ಯಾಣ ನಗರದ ತ್ರೀಪೂರಾಂತ .ಬಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಪರಮೇಶ್ವರ ತಂದೆ ಬಾಬುರಾವ ಮೇಕಾಲೆ ವಯ: 38 ವರ್ಷ, ಜಾತಿ: ಎಸ್.ಟಿ ಟೋಕರಿ ಕೋಳಿ, ಸಾ: ಭವಾನಿ ಮಂದಿರ ತ್ರೀಪೂರಾಂತ ಬಸವಕಲ್ಯಾಣ, 2) ಕಾಳೋಜಿ ತಂದೆ ಮಾರುತಿ ತ್ರೀಮುಖೆ ವಯ: 37 ವರ್ಷ, ಜಾತಿ: ಎಸ್.ಸಿ ಢೋರ್, ಸಾ: ಸಸ್ತಾಪೂರ, ತಾ: ಬಸವಕಲ್ಯಾಣ, 3) ನಾಗಪ್ಪಾ ತಂದೆ ಗಣಪತಿ ಚಾಮಾಲೆ ವಯ: 40 ವರ್ಷ, ಜಾತಿ: ಕಬ್ಬಲಿಗ, ಸಾ: ವಿಠಲ ಮಂದಿರ ತ್ರೀಪೂರಾಂತ ಬಸವಕಲ್ಯಾಣ, 4) ವಿಜಯಕುಮಾರ ತಂದೆ ಬಾಬುರಾವ ಮಡಿವಾಳ ವಯ: 32 ವರ್ಷ, ಜಾತಿ: ಮಡಿವಾಳ, ಸಾ: ಭವಾನಿ ಮಂದಿರ ತ್ರೀಪೂರಾಂತ ಬಸವಕಲ್ಯಾಣ, 5) ರೇವಣಸಿದ್ಧ ತಂದೆ ರೋಹಿದಾಸ ಬಿರಾದಾರ ವಯ: 38 ವರ್ಷ, ಜಾತಿ: ಲಿಂಗಾಯತ, ಸಾ: ತ್ರೀಪೂರಾಂತ ಬಸವಕಲ್ಯಾಣ ಹಾಗೂ 6) ಲೋಕೆಶ ತಂದೆ ಶಿವಕುಮಾರ ಸ್ವಾಮಿ ವಯ: 35 ವರ್ಷ, ಜಾತಿ: ಸ್ವಾಮಿ, ಸಾ: ತ್ರೀಪೂರಾಂತ ಬಸವಕಲ್ಯಾಣ ಇವರೆಲ್ಲರೂ ಕುಳಿತು ಇಸ್ಪಿಟ ಎಲೆಗಳ ಅಂದರ ಬಾಹರ ನಸೀಬಿನ ಜೂಜಾಟವನ್ನು ಹಣ ಹಚ್ಚಿ ಪಣ ತೊಟ್ಟು ಆಡುತ್ತಿರುವುದನ್ನು ನೋಡಿ ಎಲ್ಲರು ಒಮ್ಮೆಲೆ ದಾಳಿ ಮಾಡಿ ಹಿಡಿದುಕೊಂಡು ಅವರಿಂದ ಒಟ್ಟು ನಗದು ಹಣ 30,330/- ರೂ ಮತ್ತು 52 ಇಸ್ಪೀಟ್ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 51/2020, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 23-03-2020 ರಂದು ಬೀದರ ನಗರ ಸಿ.ಎಮ್.ಸಿ. ಕಾಲೋನಿಯಲ್ಲಿರುವ ಕಾಲಾ ಹನುಮಾನ ಮಂದಿರ ಹತ್ತಿರ ಖುಲ್ಲಾ ಜಾಗೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪಿಟ್ ಜೂಜಾಟ್ ಆಡುತ್ತಿದ್ದಾರೆಂದು ಪಿಎಸ್ಐ (ಕಾಸು) ಗಾಂಧಿಗಂಜ ಪೊಲೀಸ್ ಠಾಣೆ ಬೀದರ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಸಿ.ಎಮ್.ಸಿ ಕಾಲೋನಿಯಲ್ಲಿರುವ ಕಾಲಾ ಹನುಮಾನ ಮಂದಿರ ಹತ್ತಿರ ಬಂದು ಮರೆಯಾಗಿ ನಿಂತು ನೋಡಲು ಆರೋಪಿತರಾದ 1) ಬಾಬು ತಂದೆ ಬಸವರಾಜ ಬಿರಾದಾರ ವಯ: 29 ರ್ಷ, ಸಾ: ಮೈಲೂರ ಬೀದರ, 2) ರಾಜಕುಮಾರ ತಂದೆ ಸುಂದರ ಬೋರಗೆ ವಯ: 32 ವರ್ಷ, ಜಾತಿ: ಕ್ರಿಶ್ಚಿಯನ್,  ಸಾ: ನೌದಗೇರಿ ಬೀದರ ಹಾಗೂ 3) ಆಸೀಪ್ ತಂದೆ ಶೌಕತಲಿ ಸೈಯದ ವಯ: 27 ವರ್ಷ, ಸಾ: ಲಾಡಗೇರಿ ಬೀದರ ಇವರೆಲ್ಲರೂ ರೋಡಿನ ಪಕ್ಕ ಖುಲ್ಲಾ ಜಾಗೆಯಲ್ಲಿ ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ 8700/- ರೂಪಾಯಿ ಹಾಗೂ ಒಟ್ಟು 52 ಇಸ್ಪೀಟ್ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.