Police Bhavan Kalaburagi

Police Bhavan Kalaburagi

Wednesday, May 4, 2016

Kalaburagi District Reported Crimes

ಅತ್ಯಾಚಾರ ಪ್ರಕರಣ :
ರೇವೂರ ಠಾಣೆ : ದಿನಾಂಕ:01-05-2016 ರಂದು ಬೆಳಿಗ್ಗೆ ನನ್ನ ತಾಯಿ ಮತ್ತು ನನ್ನ ತಮ್ಮಂದಿರರಾದ ದತ್ತು ಮತ್ತು ಶರಣು ಮೂರು ಜನ ಕೂಡಿಕೊಂಡು ನನ್ನ ತಾಯಿಯ ತವರು ಮನೆಯಾದ ಕಲಬುರ್ಗಿಗೆ ಹೋಗಿದ್ದರಿಂದ ನಮ್ಮ ಮನೆಯಲ್ಲಿ ನಾನು ಒಬ್ಬಳೆ ಇದ್ದೆನು.   ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ನಾನು ನಮ್ಮ ಅಡುಗೆ ಕೊಣೆಯಲ್ಲಿ ಕೆಲಸ ಮಾಡುತ್ತಿದ್ದಾಗ ನಮ್ಮ ಗ್ರಾಮದ ರಮೇಶ ತಂದೆ ರಾಮು ಬಿಲ್ಕರ ಈತನು ಯಾರು ಇಲ್ಲದ ಸಮಯ ನೋಡಿ ನಮ್ಮ ಮನೆಯೊಳಗೆ ನಾನು ಒಬ್ಬಳೆ ಇದ್ದಾಗ ನಮ್ಮ ಮನೆಗೆ ಬಂದು ನಾನು ನಿನಗೆ ಪ್ರೀತಿಸುತ್ತಿದ್ದೇನೆ, ನಿನು ಕೂಡ ಗಂಡು ಬಿಟ್ಟಿದ್ದಿಯಾ ಹೀಗೆ ಎಷ್ಟು? ದಿನ ಇರುತ್ತಿ ನಾನು ನಿನ್ನೊಂದಿಗೆ ಮದುವೆ ಮಾಡುಕೊಳ್ಳುತ್ತೇನೆ, ನನ್ನ ಹತ್ತಿರ ಬೇಕಾದಷ್ಟು ಹಣ ಇದೆ ಬೇರೆ ಯಾವುದಾದರೊಂದು ಪಟ್ಟಣ್ಣಕ್ಕೆ ಹೋಗಿ ಮದುವೆ ಮಾಡಿಕೊಂಡು ಸುಖವಾಗಿ ಇರೋಣ ಅಂತ ಹೇಳಿದಾಗ. ನಾನು ಈಗಾಗಲೆ ನನಗೆ ಮದುವೆ ಯಾಗಿದೆ ನನ್ನ ಗಂಡ ಇಂದು ಅಥವಾ ನಾಳೆ ಸರಿಹೋಗಿ ನನಗೆ ಕರೆದುಕೊಂಡು ಹೋಗಬಹುದು ನಾನು ನಿನ್ನ ಪ್ರಿತಿಸುವದಿಲ್ಲ ನಿನ್ನ ಮದುವೆ ಕೂಡ ಮಾಡಿಕೊಳ್ಳುವದಿಲ್ಲ ಮೋದಲು ಇಲ್ಲಿಂದ ಹೋಗು ಅಂತ ಹೇಳಿ ಕೂಗಾಡಲು ಪ್ರಯತ್ನಿಸಿ ಓಡಿ ಹೋಗುವಾಗ ನನ್ನನ್ನು ಕೈ ಹಿಡಿದು ಎಳೆದು, ನಾನು ಹೇಳಿದ ಹಾಗೆ ಕೇಳದಿದ್ದರೆ, ಮತ್ತು ಕೂಗಾಡಿದರೆ ನಿನಗೆ ಇಲ್ಲೆ ಕತ್ತು ಹಿಸುಕಿ ಕೊಲೆ ಮಾಡಿ ಹೋಗುತ್ತೇನೆ ಅಂತ ಜೀವದ ಬೇದರಿಕೆ ಹಾಕಿ ಕಪಾಳಕ್ಕೆ ಕೈಯಿಂದ ಹೋಡೆದನು ಆಗ  ನಾನು ಹೇದರಿ ಸುಮ್ಮನಾದೆನು ಆಗ ಒತ್ತಾಯಪೂರ್ವಕವಾಗಿ ನನಗೆ ಜಬರಿ ಸಂಬೋಗ ಮಾಡಿ ಲೈಂಗಿಕ ದೌರ್ಜನ್ಯ ಎಸಗಿ ಓಡಿ ಹೋಗಿರುತ್ತಾನೆ. ಈ ವಿಷಯದಿಂದ ನನ್ನ ಮರ್ಯಾದಿ ಹೋಗುತ್ತದೆ ಅಂತಾ ತಿಳಿದು ನಾನು ಯಾರಿಗು ಹೇಳದೆ ನಿನ್ನೆ ದಿನಾಂಕ:02-05-2016 ರಂದು ರಾತ್ರಿ ನನ್ನ ತಾಯಿ ಮತ್ತು ತಮ್ಮಂದಿರರು ಮರಳಿ ಕಲಬುರ್ಗಿಯಿಂದ ಮನೆಗೆ ಬಂದಾಗ ನಾನು ಈ ವಿಷಯ ಅವರಿಗೆ ತಿಳಿಸಿದೆನು.,ನನಗೆ ಜೀವದ ಭಯ ಹಾಕಿ ಒತ್ತಾಯ ಪೂರ್ವಕವಾಗಿ ಸಂಭೋಗ ಮಾಡಿ ಲೈಂಗಿಕ  ದೌರ್ಜನ್ಯ ಎಸಗಿದ ರಮೇಶ ತಂದೆ ರಾಮು ಬಿಲ್ಕರ ಸಾ||ನಿಲೂರ ಈತನ ವಿರುದ್ದ ಸೂಕ್ತ ಕಾನೂನಿನ ಕ್ರಮ ಜರುಗಿಸಿ ಅಂತಾ ಶ್ರೀಮತಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೇವೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ನಾನು ನನ್ನ ಹೆಂಡತಿಯಾದ ಸುನೀತಾ ಸಾ|| ನಿಂಬರ್ಗಾ ಇವಳನ್ನು 2012 ನೇ ಸಾಲಿನಲ್ಲಿ ಮದುವೆಯಾಗಿದ್ದು ಗರ್ಭಿಣಿ ಇದ್ದ ಕಾರಣ 08 ತಿಂಗಳ ಹಿಂದೆ ತವರು ಮನೆಗೆ ಕಳುಹಿಸಿ ಕೊಟ್ಟಿದ್ದು ದಿನಾಂಕ 03/05/2016 ರಂದು ಸಾಯಂಕಾಲ 0430 ಪಿ.ಎಮಕ್ಕೆ ಹೆಂಡತಿಗೆ ಕರೆಯಲು ನಿಂಬರ್ಗಾ ಕ್ಕೆ ಬಂದಾಗ ಹೆಂಡತಿಯ ಕಡೆಯವರು ಈರಪ್ಪಾ ಕಡಗಂಚಿ ಸಂಗಡ 3 ಜನರು ಸಾ|| ನಿಂಬರ್ಗಾ. ಇವರು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ಮಾಡಿ ಜೀವ ಭಯಪಡಿಸಿರುತ್ತಾರೆ ಅಂತಾ ಶ್ರೀ ಕಲ್ಯಾಣಿ ತಂದೆ ಸಿದ್ರಾಮಪ್ಪ ಮಾಯಿ ಸಾ|| ಬಳೂರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೋಸ ಮಾಡಿದ ಪ್ರಕರಣ :
ಸೇಡಂ ಠಾಣೆ : ಶ್ರೀ ಗುರುಲಿಂಗಪ್ಪ ತಂದೆ ಬಸವರಾಜ ಕೊದಂಪುರ, ಸಾ:ನೂಲಾಗಲ್ಲಿ, ಸೇಡಂ ರವರು ತಮ್ಮ ಹೆಸರಿನಲ್ಲಿ ಸೇಡಂದ ಕೆನರಾ ಬ್ಯಾಂಕನಲ್ಲಿ ನನ್ನ ಅಕೌಂಟ ನಂಬರ 1072101010856 ನೇದ್ದು ಇದ್ದು  ನಾನು ನನ್ನ ಅಕೌಂಟಗೆ ಮಾಹಿತಿ ನೀಡುವ ಕುರಿತು ನನ್ನ ಮೋಬೈಲ್ ಫೋನ ನಂಬರ 9945250818 ನೇದ್ದನ್ನು ಬ್ಯಾಂಕನವರಿಗೆ ಕೊಟ್ಟಿರುತ್ತೇನೆ. ಆದರೆ ಬ್ಯಾಂಕನವರು ನನ್ನ ಅಕೌಂಟ ನಂಬರಗೆ 9945250810 ಅಂತಾ ನಮೂದಿಸಿರುತ್ತಾರೆ. ನನ್ನ ಅಕೌಂಟನಲ್ಲಿ 19220/- ರೂ.ಗಳು ಇದ್ದವು . ತದ ನಂತರ ದಿನಾಂಕ 28/03/2016 ರಂದು ನನ್ನ ಅಕೌಂಟನಿಂದ ಯಾರೋ 19000/- ರೂ.ಗು ತೆಗೆದುಕೊಂಡಿದ್ದರು. ನಂತರ ನನ್ನ ಅಣ್ಣ ಮಲ್ಲಿಕಾರ್ಜುನ ಇವರು ದಿನಾಂಕ 29/03/2016 ರಂದು 1,00,000/- ರೂ.ಗಳು ಹಾಕಿದರು. ನಂತರ ದಿನಾಂಕ 07/04/2016 ರಂದು ನನ್ನ ಅಣ್ಣ ಪುನಃ 9000/- ರೂ.ಗಳನ್ನು ಹಾಕಿದ ಬಗ್ಗೆ ಫೋನ ಮೂಲಕ ನನಗೆ ತಿಳಿಸಿದರು. ನಂತರ ಅದೇ ದಿವಸ ಅಂದರೆ ದಿನಾಂಕ 07/04/2016 ರಂದು  ನಾನು ಬ್ಯಾಂಕಿನಿಂದ 10,000/- ರೂ.ಗಳನ್ನು ಡ್ರಾ ಮಾಡಲು ವಿಥಡ್ರಾಲ ಸ್ಲಿಪ್ ಕೊಟ್ಟಾಗ ನನಗೆ ಬ್ಯಾಂಕಿನವರು ಹೇಳಿದ್ದೇನೆಂದರೆ ನಿಮ್ಮ ಅಕೌಂಟನಲ್ಲಿ ಬ್ಯಾಲೆನ್ಸ ಇರುವದಿಲ್ಲ ಅಂತಾ ಹೇಳಿದರು. ನಾನು ನನ್ನ ಅಕೌಂಟನಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚಿಗೆ ಹಣ ಇರುತ್ತವೆ ನೀವು ಇಲ್ಲ ಅಂತೀರಿ ಅಂದಾಗ ನನಗೆ ಬ್ಯಾಂಕಿನವರು ನನ್ನ ಅಕೌಂಟ ಸ್ಟೇಟಮೆಂಟನ್ನು ನೀಡಿದರು. ಆಗ ನಾನು ಪರಿಶೀಲಿಸಿ ನೋಡಲಾಗಿ ನನ್ನ ಅಕೌಂಟನಲ್ಲಿ ದಿನಾಂಕ 28/03/2016 ರಿಂದ ದಿನಾಂಕ 07/04/2016 ರವರೆಗೆ ಯಾರೋ ನನ್ನ ಅಕೌಂಟನಿಂದ ಸುಮಾರು 1,19,000/- ರೂ.ಗಳನ್ನು ನನಗೆ ಗೊತ್ತಾಗದೇ ಡ್ರಾ ಮಾಡಿಕೊಂಡಿರುತ್ತಾರೆ.  ಬ್ಯಾಂಕನವರು ನನ್ನ ಅಕೌಂಟಗೆ ನನ್ನ ಮೋಬೈಲ ನಂಬರ 9945250818 ನೇದ್ದರ ಬದಲಿಗೆ ನನ್ನ ಮೋಬೈಲ ನಂಬರ 9945250810 ಅಂತಾ ತಪ್ಪಾಗಿ ನಮೂದಿಸಿದ್ದರಿಂದ ನನಗೆ ಮಾಹಿತಿ ಗೊತ್ತಾಗಿರುವದಿಲ್ಲ. ನನ್ನ ಬ್ಯಾಂಕ ಅಕೌಂಟನಿಂದ ಯಾರೋ ನನಗೆ ತಿಳಿಯದೇ ನನ್ನ ಖಾತೆಯಲ್ಲಿದ್ದ ಸುಮಾರು 1,19,000/- ರೂ.ಗಳನ್ನು ಡ್ರಾ ಮಾಡಿ ನನಗೆ ಮೋಸ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಮಾಡಿ ನಿಂದನೆ ಮಾಡಿದ ಪ್ರಕರಣ :
ಆಳಂದ ಠಾಣೆ  ಶ್ರೀ ಶಿವಶರಣ ತಂದೆ ಮಲ್ಕಪ್ಪಾ ಮೇಲಿನಕೇರಿ ಸಾ:ಕೊಡಲ ಹಂಗರಗಾ ರವರ ಮಗನಾದ ಪ್ರಕಾಶ ತಂದೆ ಶಿವಶರಣಪ್ಪಾ ಇವರು  ವಿದ್ಯಾಭ್ಯಾಸ ಮಾಡಿಕೊಂಡು ಗ್ರಾಮದಲ್ಲಿದ್ದು ನಾಂಕ:01/05/2016 ರಂದು ರಾತ್ರಿ 9:00 ಗಂಟೆ ಸುಮಾರಿಗೆ ನನ್ನ ಮಗ ಪ್ರಕಾಶ ನಮ್ಮ ಓಣಿಯ ಸಂಗಮೇಶ ತಂದೆ ಹುಚ್ಚಪ್ಪಾ, ರಾಜು ತಂದೆ ಸೀಲ್ಡಪ್ಪರವರು ಮಾತನಾಡುತ್ತಾ ಬುದ್ದವಿಹಾರದಲ್ಲಿ ಸುಣ್ಣ ಬಡೆಯುತ್ತಿದ್ದಾಗ ನಮ್ಮ ಗ್ರಾಮದಲ್ಲಿ ಮದುವೆ ಮೇರವಣಿಗೆ ಗ್ರಾಮದಲ್ಲಿ ನಮ್ಮ ಓಣಿಯ ಮುಖಾಂತರ ಬರುವಾಗ ಮದುವೆ ಮೇರವಣಿಗೆಯ ಹಿಂದುಗಡೆ ಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದಾಗ ಪಟಾಕಿ ಬಂದು ಸಿಡಿದು ಕಟ್ಟಿಗೆಗೆ ಹತುತ್ತದೆ ಎಂದು ಕೇಳಿದಾಗ ಎ ನನ್ನ ಮಗನೆ ಯಾರು ನೀ ಪಟಾಕಿ ಹಚ್ಚು ಬೇಡ ಅಂತಾ ಕೇಳುವ ಎಂದು ಆಗ 1) ಶ್ರೀ.ಮಹಲಿಂಗಪ್ಪಾ ತಂದೆ ಗುರುಲಿಂಗಪ್ಪಾ ಪಟ್ಟಣಶೆಟ್ಟಿ, 2) ಶಿವಲಿಂಗಪ್ಪಾ ತಂದೆ ಬಾಬುರಾವ ಪಟ್ಟಣಶೆಟ್ಟಿ 3) ಮಹೇಶ ತಂದೆ ಶಿವಾನಂದ ಕದರಗಿ ರವರು ನಾವೇ ಪಟಾಕಿ ಹಾರಿಸಿದ್ದೇವೆ ಏನು ಕಿತ್ತಕೊಳತ್ತಿರಿ ಎಂದು ಅವಾಚ್ಯ ಶಬ್ಬಗಳಿಂದ ಬೈದು ಹೊಲೆಯ ಸೂಳೆ ಮಕ್ಕಳೆ ಅಂತಾ ಬೈಯುತ್ತಾ ನನ್ನ ಮಗನ ಎದೆಯ ಮೇಲಿನ ಅಂಗಿ ಹಿಡಿದು ಮಹೇಶನು ಜಗ್ಗಾಡಿದಾಗ ಮಹಾಲಿಂಗನು ಕಲ್ಲಿನಿಂದ ನನ್ನ ಮಗನ ಹಣೆಯ ಮೇಲೆ ಹೊಡೆದು ರಕ್ತಗಾಯವಾಗಿದ್ದು ನಂತರ ಶಿವಲಿಂಗಪ್ಪಾನು ಕೈಯಿಂದ ಕಪ್ಪಾಳದ ಮೇಲೆ ಹೊಡೆದು ಗುಪ್ತಗಾಯಗೊಳಿಸಿರುತ್ತಾನೆ. ಆಗ ನನ್ನ ಮಗನೊಂದಿಗೆ ಇದ್ದ ಸಂಗಮೇಶ, ರಾಜು ಬಂದು ಬಿಡಿಸುವಾಗ ಮಕ್ಕಳೇ ಇವತ್ತು ಉಳಿದಿದ್ದಿರಿ ಇನ್ನೊಮೆ ಸಿಕ್ಕರೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಕೊಲೆ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.