Police Bhavan Kalaburagi

Police Bhavan Kalaburagi

Friday, November 24, 2017

Yadgir District Reported Crimes Updated on 24-11-2017

                                          Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 231/2017 ಕಲಂ 379 ಐಪಿಸಿ ;- ದಿನಾಂಕ.23/11/2017 ರಂದು 7 ಪಿಎಂಕ್ಕೆ ಪಿರ್ಯಾದಿ ಸಂತೋಷ ವಕೀಲರು ಹಾಗೂ ಲಕ್ಷ್ಮೀ ಮತ್ತು ಮಾರುತಿ ದೇವಸ್ಥಾನದ ಅಧ್ಯಕ್ಷರು ಸಾಃ ಯಾದಗಿರಿ ಇದ್ದು ತಮ್ಮಲ್ಲಿ ದೂರು ಕೊಡುವುದೆನೆಂದರೆ ದಿನಾಂಕ 09/11/2017 ರಂದು ಮುಂಜಾನೆ 6-30 ಗಂಟೆಯ ಸುಮಾರಿಗೆ ನಾನು ನನ್ನ ಮನೆಯಲ್ಲಿದ್ದಾಗನಮ್ಮ ಸಮಿತಿಯ ಸದಸ್ಯರಾದ ಶಂಕ್ರೆಪ್ಪಗೌಡ ಬೆಳಗುಂದಿಯವರು ನನಗೆ ಪೋನ ಮುಖಾಂತರ ವಿಷಯ ತಿಳಿಸಿದೆನೆಂದರೆ ನಮ್ಮ ದೇವಸ್ಥಾನದ ಲಕ್ಷ್ಮೀ ಗುಡಿಯ ಮುಂದೆ ಇದ್ದ ಗಲ್ಲೆ ಪೆಟ್ಟಿಗೆಯನ್ನು ಹೊಡೆದು ಅದರಲ್ಲಿ ಇದ್ದ ಎಲ್ಲಾ ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವರೆಂದು ತಿಳಿಸಿದನು. ನಾನು ದೇವಸ್ಥಾನಕ್ಕೆ ಹೋಗಿ ನೋಡಿದಾಗ ಸದರಿ ಗಲ್ಲೆ ಪೆಟ್ಟಿಗೆಯು ಖುಲ್ಲಾ ಇದ್ದು ಅದರಲ್ಲಿ ಯಾವುದೇ ಹಣ ಇರಲಿಲ್ಲಾ ಅದಲ್ಲದೆ ನಮ್ಮ ದೇವಸ್ಥಾನದ ಆವರಣದಲ್ಲಿದ್ದ ಗಣೇಶ ಗುಡಿಯಲ್ಲಿ ಇದ್ದ ಗಲ್ಲೆ ಪೆಟ್ಟಿಗೆ ಸಹ ಹೊಡೆದು ಅದರಲ್ಲಿ ಇದ್ದ ಎಲ್ಲಾ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಂಡು ಬಂತು. ಎಷ್ಟು ಹಣ ಇತ್ತು ಎಂಬ ಬಗ್ಗೆ ನಿಖರವಾದ ಮಾಹಿತಿ ಇರುವುದಿಲ್ಲಾ ಆದರೆ ಅಂದಾಜು 24,000=00 ರೂ.ಗಳು ಇದ್ದಿರಬಹುದು. ದೇವಸ್ಥಾನದ ಗಲ್ಲೆಯ (ಹುಂಡಿ) ಹಣವನ್ನು ದಿನಾಂಕ.08/09/2017 ರಂದು ರಾತ್ರಿ 9-00 ರಿಂದ ದಿನಾಂಕ 09/11/2017 ರ ಬೆಳಿಗ್ಗೆ 6-30 ಎಎಂದ ಮದ್ಯದ ಅವದಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ತಾವುಗಳು ಈ ವಿಷಯದಲ್ಲಿ ಕಾನೂನು ಪ್ರಕಾರ ಕ್ರಮ ಜರುಗಿಸಿ ಕಳ್ಳತನವಾದ ದೇವಸ್ಥಾನದ ಹಣವನ್ನು ಪತ್ತೆ ,ಆಡಿ ನಮಗೆ ನ್ಯಾಯಾದೊರಕಿಸಿ ಕೊಡಬೇಕೆಂದು ಈ ದೂರು ನೀಡಲಾಗಿದೆ ದೇವಸ್ತಾನದ ಸಮಿತಿಯವರೆಲ್ಲರು ವಿಚಾರಣೆ ಮಾಡಿ ಇಂದು ತಡವಾಗಿ ಬಂದು ದೂರು ನೀಡಲಾಗಿದೆ. ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ  ಗುನ್ನೆ ನಂ.231/2017 ಕಲಂ.380 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
  
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 58/2017 ಕಲಂ 279,  338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ ;- ದಿನಾಂಕ 23/11/2017 ರಂದು ಮದ್ಯಾಹ್ನ 12-30 ಪಿ.ಎಂ. ಸುಮಾರಿಗೆ ಫಿಯರ್ಾದಿಯು ತನ್ನ ಮೋಟಾರು ಸೈಕಲ್ ನಂಬರ ಕೆಎ-33, ಕ್ಯೂ-6965 ನೇದ್ದರ ಮೇಲೆ ಯಾದಗಿರಿಯಿಂದ ಮುದ್ನಾಳ ತಾಂಡಾಕ್ಕೆ ಹೋಗುವಾಗ ಮಾರ್ಗ ಮದ್ಯೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಮೇಲೆ ಬರುವ ಮುದ್ನಾಳ ಕ್ರಾಸ್ ಹತ್ತಿರ ಆರೋಪಿತ ಟ್ರ್ಯಾಕ್ಟರ್ ಇಂಜಿನ್ ನಂಬರ  ಕೆಎ-32, ಟಿಎ-188 ನೇದ್ದರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಮೋಟಾರು ಸಐಕಲಗೆ ಡಿಕ್ಕಿ ಪಡಿಸಿ ಅಪಗಾತ ಮಾಡಿದ್ದರಿಂದ ಫಿಯರ್ಾದಿಗೆ ಅಪಘಾತದಲ್ಲಿ ಎಡತೊಡೆಗೆ, ಬಲತೊಡೆಗೆ, ಎದೆಗೆ, ಟೊಂಕಕ್ಕೆ ಭಾರೀ ಗುಪ್ತಗಾಯವಾಗಿರುತ್ತದೆ ಮತ್ತು ಕಾಲುಗಳಿಗೆ ಅಲ್ಲಲ್ಲಿ ತರಚಿದ ರಕ್ತಗಾಯವಾಗಿರುತ್ತವೆ, ಅಪಗಾತಪಡಿಸಿದ ಟ್ರ್ಯಾಕ್ಟ್ರ ಚಾಲಕನು ವಾಹನವನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ ಆತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿರಿ ಅಂತಾ ಫಿಯರ್ಾದಿ ಅದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 455/2017 ಕಲಂ 78[3] ಕೆ.ಪಿ ಆಕ್ಟ ;- ದಿನಾಂಕ 23/11/2017 ರಂದು ಸಾಯಂಕಾಲ 17-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ನಾಗರಾಜ ಜಿ. ಪಿಐ ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಶಹಾಪೂರದ ಗ್ಯಾರೇಜ್ ಲೈನ್ ಏರಿಯಾದಲ್ಲಿ ಬರುವ ಗುರು ಪ್ರಸಾದ ಹೊಟೇಲ್ ಹತ್ತಿರ  ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯ್ತಕಿ ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದಾನೆ ಅಂತ ಸುಧಾರಿತ ಗ್ರಾಮ ಗಸ್ತು ಬೀಟ್ ನಂ 43 ನೇದ್ದರ ಸಿಬ್ಬಂದಿ ಶ್ರೀ ಸಂಗನಬಸಪ್ಪ ಅಕ್ಕಿ ಹೆಚ್.ಸಿ 60 ರವರಿಗೆ ಬಂದ ಮಾಹಿತಿಯನ್ನು ಫಿರ್ಯಾದಿಯವರಿಗೆ ತಿಳಿಸಿದ ಮೇರೆಗೆ ಮಾನ್ಯ ಎ.ಎಸ್.ಪಿ ಸಾಹೇಬರ ಸುರಪೂರ ರವರ  ಮಾರ್ಗದರ್ಶನದಲ್ಲಿ ದಾಳಿ ಕುರಿತು ಹೋಗಿ ಮದ್ಯಾಹ್ನ 15-15 ಗಂಟೆಗೆ ದಾಳಿ ಮಾಡಿ ಸದರಿ ವ್ಯಕ್ತಿಯನ್ನು ಹಿಡಿದು ಆತನಿಂದ ನಗದು ಹಣ 630=00 ರೂ ಮತ್ತು 2 ಮಟಕಾ ಚೀಟಿಗಳು, ಒಂದು ಬಾಲ್ ಪೆನ್ ಮುದ್ದೆಮಾಲನ್ನು ಪಂಚರ ಸಮಕ್ಷಮದಲ್ಲಿ ಮದ್ಯಾಹ್ನ 15-20 ಗಂಟೆಯಿಂದ 16-20 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗದುಕೊಂಡು ಮುಂದಿನ ಕ್ರಮ ಕೈಕೊಳ್ಳಲು ವಿನಂತಿ ಅಂತ ಫಿರ್ಯಾದಿಯವರು ನೀಡಿದ ವರದಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಕೊಂಡು ಸಾಯಂಕಾಲ 17-30 ಗಂಟೆಗೆ ಠಾಣೆ ಗುನ್ನೆ ನಂಬರ 455/2017 ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 456/2017.ಕಲಂ 78(3);- ದಿನಾಂಕ 23/11/2017 ರಂದು ಸಾಯಂಕಾಲ 20-00 ಗಂಟೆಗೆ ಸ||ತ|| ಶ್ರೀ ನಾಗರಾಜ.ಜಿ. ಪಿ.ಐ. ಸಾಹೇಬರು ಠಾಣೆಗೆ ಬಂದು ಇಬ್ಬರು ಆರೋಪಿಗಳು ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಒಂದು ವರದಿಯನ್ನು ಹಾಜರ ಪಡಿಸಿದ್ದು ಸದರಿ ವದರಿಯ ಸಾರಾಂಶ ವೆನೆಂದರೆ. ಇಂದು ದಿನಾಂಕ 23/11/2017 ರಂದು ಸಾಯಂಕಾಲ 17-10 ಗಂಟೆಗೆ  ನಾನು ಠಾಣೆಯಲ್ಲಿದ್ದಾಗ ಸುದಾರಿತ ಗ್ರಾಮ ಗಸ್ತು ಭೀಟ್ ನಂ 46 ರಸಿಬ್ಬಂದಿಯಾದ ಬಾಬು ಹೆಚ್.ಸಿ.162 ರವರು ಮಾಹಿತಿ ತಿಳೀಸಿದ್ದೆನೆಂದರೆ ಶಹಾಪೂರ ನಗರದ ಹಳಿಸಗರದಲ್ಲಿ ಹನುಮಾನ ದೇವರ ಗುಡಿಯ ಮುಂದೆ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾರೆ ಅಂತ ತನಗೆ ಬಂದ ಖಚಿತ ಮಾಹಿತಿಯನ್ನು ತಿಳಿಸಿದಮೇರೆಗೆ ನಾನು ಠಾಣೆಯಲ್ಲಿ ಹಾಜರಿದ್ದ ಜೈಶ್ರೀ ಪ್ರೋಬೇಷನರಿ ಪಿ.ಎಸ್.ಐ. ಮತ್ತು ಠಾಣೆಯ ಸಿಬ್ಬಂದಿಯವರಾದ, ಶರಣಪ್ಪ ಹೆಚ್.ಸಿ. 164, ಹೋನ್ನಪ್ಪ ಹೆಚ್.ಸಿ. 101. ಗಜೇಂದ್ರ ಪಿ.ಸಿ. 313. ಗಣೇಶ ಪಿ.ಸಿ. 294, ಬಸವರಾಜ ಪಿ.ಸಿ. 346. ಅಮಗೊಂಡ ಎ.ಪಿ.ಸಿ. 169, ರವರಿಗೆ ಮಾಹಿತಿ ವಿಷಯ ತಿಳಿಸಿ ಇಬ್ಬರು ಪಂಚರನ್ನು ಕರೆದು ಕೊಂಡು ಬರಲು ಬಾಬು ಹೆಚ್.ಸಿ.162 ಇವರಿಗೆ ತಿಳಿಸಿದ್ದು ಸದರಿಯವರು ಇಬ್ಬರೂ ಪಂಚರಾದ 1] ಶ್ರೀ ಶರಣು ತಂದು ಶಿವಪ್ಪ ಅಂಗಡಿ ವ|| 26 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 48 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರನ್ನು ಕರೆದುಕೊಂಡು ಬಂದು 17-20 ಗಂಟೆಗೆ ಹಾಜರ ಪಡಿಸಿದ್ದು. ಪಂಚರಂತ ಬರಮಾಡಿಕೊಂಡು ಸದರಿಯವರಿಗೆ ಬಾತ್ಮೀ ವಿಷಯ ತಿಳಿಸಿ ದಾಳಿಯ ಕಾಲಕ್ಕೆ ಪಂಚರಾಗಲು ಕೆಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡಿದ್ದು. ಎ.ಎಸ್.ಪಿ.ಸಾಹೇಬರ ಮಾರ್ಗಧರ್ಶನದಲ್ಲಿ ಸದರಿಯವರ ಮೇಲೆ ದಾಳಿ ಮಾಡಲು ನಾನು ಪಂಚರು ಸಿಬ್ಬಂದಿಯವರು ಠಾಣೆಯ ಸರಕಾರಿ ಜೀಪ ನಂ ಕೆಎ-33ಜಿ-0138 ನ್ನೇದ್ದರಲ್ಲ್ಲಿ ಕುಳಿತುಕೊಂಡು, ಠಾಣೆಯಿಂದ ಸಾಯಂಕಾಲ 17-30 ಗಂಟೆಗೆ ಹೊರಟು ಶಹಾಪೂರ ನಗರ ಹಳೀಸಗರದ ಹನುಮಾನ ದೇವರಗುಡಿಯ ಹತ್ತಿರ ಸಾಯಂಕಾಲ 17-40 ಗಂಟೆಗೆ ಹೋಗಿ ಮನೆಗಳ ಮರೆಯಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ ಹನುಮಾನ ದೇವರ ಗುಡಿಯ ಮುಂದೆ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬನು ಇದು ಬಾಂಬೆ ಮಟಕಾ ಒಂದು ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಕೂಗಿ ಹೇಳುತ್ತ ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನು ಬರೆದು ಕೊಳ್ಳೂತ್ತಿದ್ದು ಇನ್ನೋಬ್ಬನು ಸಾರ್ವಜನಿಕರಿಂದ ಹಣಪಡೆದುಕೊಂಡು ಜಮಾಮಾಡಿ ಕೊಳ್ಳುತ್ತಿರುವದು ಖಚಿತ ಪಡಿಸಿ ಕೊಂಡು ಸಾಯಂಕಾಲ 17-50 ಗಂಟೆಗೆ ಸಿಬ್ಬಂದಿಯವರೊಂದಿಗೆ ಸುತ್ತುವರೆದು ದಾಳಿ ಮಾಡಿದಾಗ ಮಟಕಾ ಅಂಕಿ ಸಂಖ್ಯೆಗಳನ್ನು ಬರೆಸಲು ಬಂದ ಜನರು ಓಡಿ ಹೋಗಿದ್ದು ಮತ್ತು ಇದು ಬಾಂಬೆ ಮಟಕಾ ಒಂದು ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಕೂಗಿ ಹೇಳುತ್ತ ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನು ಬರೆದು ಕೊಳ್ಳೂತ್ತಿದ್ದು ಇನ್ನೋಬ್ಬನು ಸಾರ್ವಜನಿಕರಿಂದ ಹಣಪಡೆದುಕೊಂಡು ಜಮಾಮಾಡಿ ಕೊಳ್ಳುತ್ತಿರುವ ವೆಕ್ತಿಗಳು ಸಿಕ್ಕಿಬಿದ್ದಿದ್ದು ಆಗ ನಾನು ಪಂಚರ ಸಮಕ್ಷಮದಲ್ಲಿ ಅವರ ಹೆಸರುಗಳು ವಿಳಾಸ ವಿಚಾರಿಸಲು ಅವರಲ್ಲಿ ಒಬ್ಬನು ಇದು ಬಾಂಬೆ ಮಟಕಾ ಒಂದು ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಕೂಗಿ ಹೇಳುತ್ತ ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನು ಬರೆದು ಕೊಳ್ಳೂತ್ತಿದ್ದ ವ್ಯೆಕ್ತಿ ತನ್ನ ಹೆಸರು ಶರಣಬಸವ ತಂದೆ ಬೇನಕಪ್ಪ ಟಣಕೆದಾರ ವ|| 42 ಜಾ|| ಬೇಡರ ಉ|| ಒಕ್ಕಲುತನ ಸಾ|| ಹಳಿಸಗರ ಶಹಾಪೂರ ಅಂತ ತಿಳಿಸಿದನು  ಅವನ ಹತ್ತಿರ ಮತ್ತು  ಒಂದು ಬಾಲ್ ಪೆನ್, ಎರಡು ಮಟಕಾ ಅಂಕಿ ಸಂಖ್ಯೆಗಳು ಬರೆದುಕೊಂಡ ಚೀಟಿಗಳು ಸಿಕ್ಕವು ಇನ್ನೋಬ್ಬನು ಸಾರ್ವಜನಿಕರಿಂದ ಹಣಪಡೆದುಕೊಂಡು ಜಮಾಮಾಡಿ ಕೊಳ್ಳುತ್ತಿರುವ ವ್ಯೆಕ್ತಿ ತನ್ನ ಹೆಸರು ಚಂದಣ್ಣ ತಂಧೆ ಭೀಮರಾಯ ಟಣಕೆದಾರ ವ|| 52 ಜಾ|| ಬೇಡರ ಉ|| ಕೂಲಿಕೆಲಸ ಸಾ|| ಹಳೀಸಗರ ಶಹಾಪೂರ ಅಂತ ಹೇಳಿದನು ಈತನ ಅಂಗ ಶೋಧನೆ ಮಾಡಿದಾಗ ನಗದು 410=00 ರೂಪಾಯಿ, ಸದರಿ ಮುದ್ದೆಮಾಲನ್ನು ಒಂದು ಲಕೋಟೆಯಲ್ಲಿ ಹಾಕಿಕೊಂಡು ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮದಲ್ಲಿ ಸಾಯಂಕಾಲ 18-00 ಗಂಟೆಯಿಂದ 19-00 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗೆದುಕೊಂಡೆನು. ನಂತರ ದಾಳಿಯಲ್ಲಿ ಸಿಕ್ಕ  ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಂಡ ವ್ಯಕ್ತಿ ಮತ್ತು ಸಾರ್ವಜನಿಕರಿಂದ ಹಣ ಜಮಾ ಮಾಡುತ್ತಿದ್ದ ವ್ಯೇಕ್ತಿ ಗಳೋಂದಿಗೆೆ ಎಲ್ಲರೂ ಕೂಡಿ ಮರಳಿ ಠಾಣೆಗೆ ಸಾಯಂಕಾಲ  19-20 ಗಂಟೆಗೆ ಬಂದು ವರದಿ ತಯ್ಯಾರಿಸಿ ಎರಡು ಜನ ಆರೋಪಿಗಳು ಮತ್ತು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಸರಕಾರದ ಪರವಾಗಿ 20-00 ಗಂಟೆಗೆ ಮುಂದಿನ ಕ್ರಮಕೈಕೊಳ್ಳಲು ವರದಿ ಸಲ್ಲಿಸಿದ್ದು. ಸದರಿ ಸಾರಾಂಶವು ಅಸಂಜ್ಞಯ ಅಪರಾದ ವಾಗಿದ್ದರಿಂದ ಕಲಂ 78 (3) ಕೆ.ಪಿ. ಯಾಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ನ್ಯಾಯಾಲಯದಿಂದ ಪಿ.ಸಿ. 256 ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು 20-30 ಗಂಟೆಗೆ ಬಂದು ಹಾಜರ ಪಡಿಸಿದ್ದರ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 456/2017 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
 

KALABURAGI DISTRICT PRESS NOTE

ಪತ್ರಿಕಾ ಪ್ರಕಟಣೆ
       ದಿನಾಂಕ 22-11-2017 ರಂದು ಕಲಬುರಗಿ ನಗರದಲ್ಲಿ ಪದ್ಮಾವತಿ ಚಲನಚಿತ್ರದ ಬಿಡುಗಡೆಯನ್ನು ವಿರೋದಿಸಿ ಒಂದು ಸಮುದಾಯದ ಜನಾಂಗದವರು ಪರವಾನಿಗೆ ಇಲ್ಲದೆ ಪ್ರತಿಭಟನಾ ಮೇರವಣೀಗೆಯನ್ನು ಶಹಾಬಜಾರ ಕಟಗರಪೂರದ ಬಾಲಾಜಿ ಮಂದಿರದಿಂದ ಪ್ರಾರಂಭಿಸಿ ಶಹಾಬಜಾರ ನಾಕಾ, ಪ್ರಕಾಶ ಟಾಕೀಜ, ಚೌಕ ಸರ್ಕಲ್, ಸೂಪರ್ ಮಾರ್ಕೆಟ , ಜಗತ್ ವೃತ್ತದ ಮುಖಾಂತರ ಸರ್ದಾರ ವಲ್ಲಾಬಾಯಿ ಪಟೇಲ ವೃತ್ತದಿಂದ ಪ್ರತಿಭಟನೆ ಮಾಡಿ ಪ್ರತಿಭಟನೆಕಾರರು ತಮ್ಮ ಕೈಯಲ್ಲಿ ಕಾನೂನು ಬಾಹಿರವಾಗಿ ಖಡ್ಗ (ತಲವಾರು) ಗಳನ್ನು ಪ್ರದರ್ಶಿಸಿ ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿ ಎದುರಗಡೆ ಬಂದು ಒಂದು ಪ್ರತಿಕೃತಿ ದಹನ ಮಾಡಿರುತ್ತಾರೆ. ಈ ರೀತಿ ಕಾನೂನು ಬಾಹಿರವಾಗಿ ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಒಂದು ಭಯದ ವಾತಾವರಣ ಸೃಷ್ಠಿಸಿರುವುದರಿಂದ ಸದರಿ ಘಟನೆ ಕುರಿತು ನಗರದ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
      ಈ ಕುರಿತಂತೆ ಘಟನೆ ದಿವಸ ಮಾರಕಾಸ್ತ್ರಗಳನ್ನು ಪ್ರದರ್ಶನ ಮಾಡಿದ ಆರೋಪಿಗಳನ್ನು ಪೊಟೋ ಮತ್ತು ವಿಡಿಯೋ ಸಾಕ್ಷಿಯನ್ನಾಗಿ ಇಟ್ಟುಕೊಂಡು ಅವರನ್ನು ಗುರ್ತಿಸಿ ಎಲ್ಲಾ 8 ಜನ ಆರೋಪಿತರನ್ನು ಬಂಧಿಸಿ ಮಾರಕಾಸ್ತ್ರಗಳನ್ನು ವಶಕ್ಕೆ ತೆಗೆದುಕೊಂಡು ಕಾನೂನ ಬಾಹಿರವಾಗಿ ಮಾರಕಾಸ್ತ್ರಗಳನ್ನು ಪ್ರದರ್ಶಿಸಿರುವ ಹಿನ್ನಲೆಯಲ್ಲಿ ನ್ಯಾಯಾಲಯದಲ್ಲಿ ಹಾಜರಪಡಿಸಲಾಗಿದೆ.
     ಈ ಘಟನೆಯಲ್ಲಿ ಬೇಜವಾಬ್ದಾರಿಯನ್ನು ಪ್ರದರ್ಶಿಸಿದ ಇಬ್ಬರೂ ಎಎಸ್ಐ ಗಳನ್ನು ಅಮಾನತ್ತಗೊಳಿಸಲಾಗಿದೆ. ಹಾಗೂ ಸಂಬಂಧಪಟ್ಟ ಚೌಕ, ಬ್ರಹ್ಮಪೂರ ಮತ್ತು ಸ್ಟೇಷನ್ ಬಜಾರ್ ಆರಕ್ಷಕ ನಿರೀಕ್ಷಕರವರ ವಿರುದ್ದ ಭವಿಷ್ಯದಲ್ಲಿ ಇಂತಹ ಘಟನೆ ಮರುಘಟಿಸದಂತೆ ಎಚ್ಚರವಾಗಿ ಕರ್ತವ್ಯ ನಿರ್ವಹಿಸುವಂತೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು.

     ಮುಂಬರುವ ದಿನಗಳಲ್ಲಿ ಪ್ರತಿಭಟನಾಕಾರರು ಮಾರಕಾಸ್ತ್ರಗಳನ್ನು ಹಿಡಿದು ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟು ಮಾಡುವವರ ವಿರುದ್ದ ನಿರ್ಧಾಕ್ಷಿಣ್ಯವಾಗಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಅಂತ ಕಲಬುರಗಿ ಜಿಲ್ಲಾ ಪೊಲೀಸ್ ವತಿಯಿಂದ ತಿಳಿಯಪಡಿಸಲಾಗಿದೆ. 

KALABURAGI DISTRICT REPORTED CRIMES

ಇಸ್ಪೀಟ ಜೂಜಾದಲ್ಲಿ ನಿರತವರ ಬಂಧನ :
ಕಮಲಾಪೂರ ಠಾಣೆ : ದಿನಾಂಕ:23.11.2017 ರಂದು ಗೋಗಿ ಕೆ ಗ್ರಾಮದ ಶರಣಬಸವೇಶ್ವರ ದೆವರ ಗುಡಿಯ ಕಟ್ಟೆಯ ಮುಂದಗಡೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಹಾರವೆಂಬ ಇಸ್ಪೀಟ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತವಾದ ಬಾತ್ಮಿ ಮೇರೆಗೆ ಪಿ.ಎಸ್.ಐ. ಕಮಲಾಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ  ಆರೋಪಿತರಾದ  1. ಬಂಡೇಪ್ಪ ತಂದೆ ಇಂದ್ರಶೆನ ನಾಟಿಕಾರ 2. ಶರಣಯ್ಯ ತಂದೆ ಶಿವಯ್ಯ ಗುತ್ತೇದಾರ 3. ಶರಣಬಸಪ್ಪ ತಂದೆ ಶಿವರಾಮ ಮಾಂಗ 4. ಗುಣಪುತ್ರ ತಂದೆ ಗುರುಪಾದಪ್ಪ ಜಮದಿ 5. ಅನೀಲ ತಂದೆ ಹಣಮಂತ ಮಾಂಗ 6. ಲಕ್ಮ್ಮಿಕಾಂತ ತಂದೆ ಅಂಬಾರಾಯ ಜಮಾದಾರ 7. ನಾಗೇಂದ್ರಪ್ಪ ತಂದೆ ಸಿದ್ರಾಮಪ್ಪ ಬಲಖೇಡ ಸಾ: ಎಲ್ಲರು ಗೋಗಿ ಕೆ ತಾ.ಜಿ:ಕಲಬುರಗಿ ಇವರುಗಳನ್ನು ವಶಕ್ಕೆ ಪಡೆದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 1050 ರೂಪಾಯಿಗಳು ಹಾಗೂ 52 ಇಸ್ಪೀಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ಕಮಲಾಪೂರ ಠಾಣೆಗೆ ಬಂದು  ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣ :
ನೆಲೋಗಿ ಠಾಣೆ : ದಿನಾಂಕ:19-05-2017 ರಂದು ಮುಂಜಾನೆ ನಾನು ಮತ್ತು ನನ್ನ ಹೆಂಡತಿ ಕಮಲಾಬಾಯಿ ಕೂಡಿ ಜೇವರಗಿ ತಾಲೂಕಿನ ಜಮಖಂಡಿ ಗ್ರಾಮಕ್ಕೆ  ದೇವರ ದರ್ಶನಕ್ಕೆ ಹೋಗಿ ಅಂದು ಅಲ್ಲೆ ವಸತಿ ಮಾಡಿ ಮರುದಿನ ದಿನಾಂಕ: 20/05/2017 ರಂದು ಮುಂಜಾನೆ ಒಂದು ಟಂಟಂದಲ್ಲಿ ಹೊರಟು ವಸ್ತಾರಿ ಗ್ರಾಮ್ಕಕೆ 09.30 ಎ ಎಮ್ ಕ್ಕೆ ಬಂದು ಮತ್ತೆ ಮಯೂರ ಗ್ರಾಮಕ್ಕೆ ಹೋಗುಸವ ಸಲುವಾಗಿ ವಸ್ತಾರಿ ಬಸ್ ನಿಲ್ದಾಣದ ಹತ್ತೀರ ನಿಂತಾಗ ಒಂದು ಕುಕನೂರ ಕಡೆಯಿಂದ ಒಂದು ಸೈಕಲ್ ಮೋಟಾರ್ ಬಂದಿತು. ಅದರ ಚಾಲಕನು ತನ್ನ ಸೈಕಲ್ ಮೋಟಾರನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನನ್ನ ಹೆಂಡತಿಗೆ ಢಿಕ್ಕಿ ಹೊಡೆದಾಗ ಅವಳು ಕೆಳಗಡೆ ಬಿದ್ದಳು. ಆಗ ಸಮಯ 10.00 ಎ ಎಮ್ ಆಗಿತ್ತು. ಅವಳ ತಲೆಯ ಹಿಂಭಾಗಕ್ಕೆ ಮತ್ತು ಎಡ ಮುಂಡಿಗೆ, ಬಲಗೈ ಮುಂಡಿಗೆ  ಭಾರೀ ಗುಪ್ತಗಾಯಗಳಾದವು. ನಂತರ ಆ ಸೈಕಲ್ ಮೋಟಾರ್ ನಂ ನೋಡಲಾಗಿ ಕೆಎ-32 ಇಎಮ್-6359 ಅಂತಾ ಇತ್ತು. ನನ್ನ ಹೆಂಡತಿಗೆ ಗಾಯ ಆಗಿದ್ದನ್ನು ನೋಡಿ ನಿಲ್ಲಿಸದೇ ಹಾಗೆ ತೆಗೆದುಕೊಂಡು ಹೋದನು. ನಂತರ ಯಾರೋ ಫೋನ ಮಾಡಿದ್ದರಿಂದ 108 ಅಂಬ್ಯುಲೆನ್ಸ ಅಲಲಿಗೆ ಬಂದಿತು. ನನ್ನ ಹೆಂಡತಿಯನ್ನು ಅದರಲ್ಲಿ ಹಾಕಿಕೊಂಡು ಕಲಬುರಗಿ ಯುನೈಟೆಡ್ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ, ನಂತರ ಸೋಲಾಪೂರ ಮಾರ್ಕಂಡೆ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ, ನಂತರ ಮತ್ತೆ ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ದಿನಾಂಕ: 13/06/2017 ರಂದು ಸೇರಿಕೆ ಮಾಡಿದೇವು. ನನ್ನ ಹೆಂಡತಿ ಹತ್ತೀರ ಯಾರೂ ಇಲ್ಲದ್ದಕ್ಕೆ ನಾನು ಠಾಣೆಗೆ ಬಂದಿರುವದಿಲ್ಲಾ. ದಿನಾಂಕ 22/06/2017 ರಂದು ಶ್ರೀಮತಿ ಕಮಲಾಬಾಯಿ ಗಂಡ ಶಿವಶರಣ ಇವಳು ಸರಕಾರಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತ ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ ನನ್ನ ಹೆಂಡತಿಗೆ ಢಿಕ್ಕಿ ಹೊಡೆದ ಸೈಕಲ್ ಮೋಟಾರ್ ನಂ ಕೆಎ-32 ಇಎಮ್-6359 ನೇದ್ರ ಚಾಲಕನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತ ಶ್ರೀ ಶಿವಶರಣ ತಂದೆ ಹುಸನಪ್ಪ ಜಮಖಂಡಿ ಸಾ|| ಮಯೂರ ತಾ|| ಜೇವರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ನ್ಯಾಲಯದಲ್ಲಿ ಸಾಕ್ಷಿ ನುಡಿದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಮಹಾದೇವಿ ಗಂಡ ಶಂಕರಲಿಂಗ ಪೂಜಾರಿ ಸಾ||ಉಡಚಣಹಟ್ಟಿ ಹಾ||||ನಾಗರಳ್ಳಿ ತಾ||ಜೆವರ್ಗಿ ರವರ ಗಂಡ ಈಗ 4 ವರ್ಷದ ಹಿಂದೆ ಅನಾರೊಗ್ಯದಿಂದ ಮೃತಪಟ್ಟಿದ್ದು ಇರುತ್ತದೆ. ನನಗೆ 3 ಜನ ಹೆಣ್ಣು ಮಕ್ಕಳಿರುತ್ತಾರೆ.ನನ್ನ ಗಂಡನ ಮನೆಯರು ನನ್ನ ಗಂಡನ ಹೆಸರಿನಲ್ಲಿರುವ 2 ಎಕರೆ ಜಮೀನು ನನ್ನ ಉಪಜೀವನಕ್ಕೆ ನೀಡಿರುತ್ತಾರೆ. ನನ್ನ ಗಂಡ ಮೃತ ಪಟ್ಟ ನಂತರ ನನ್ನ ಗಂಡನ ಮನೆಯವರು ನನಗೆ ಕಿರುಕುಳ ನೀಡಿದ್ದರಿಂದ 2014 ನೇ ಸಾಲಿನಲ್ಲಿ ನಮ್ಮ ಭಾವನಾದ ಶರಣಪ್ಪ ತಂದೆ ಕೆಂಚಪ್ಪ ಪೂಜಾರಿ ಹಾಗು ಅವರ ಮನೆಯವರ ಮೇಲೆ ಅಫಜಲಪೂರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ 277/2014 ಕಲಂ 498 (ಎ). 307. 504 ಸಂ 34 ಐಪಿಸಿ ನೇದ್ದರ ಪ್ರಕಾರ ಕೇಸ ದಾಖಲಾಗಿದ್ದು, ಇರುತ್ತದೆ ನಾನು ಸದರಿ ಕೇಸಿನ ಫೀರ್ಯಾದಿದಾರಳಿರುತ್ತೇನೆ. ಸದರಿ ಪ್ರಕರಣದ ಮಾನ್ಯ ನ್ಯಾಯಾಲಯದ ವಿಚಾರಣೆಯಲ್ಲಿರುತ್ತದೆ. ಸಧ್ಯ ನಾನು ನನ್ನ ಮಕ್ಕಳೊಂದಿಗೆ ನನ್ನ ತವರು ಮನೆಯಾದ ಜೇವರ್ಗಿ ತಾಲೂಕಿನ ನಾಗರಳ್ಳಿ ಗ್ರಾಮದ  ನಮ್ಮ ತಂದೆ ತಾಯಿಯೊಂದಿಗೆ ಇರುತ್ತೇನೆ. ನನ್ನ ಗಂಡನ ಹೆಸರಿನಲಿದ್ದ 2 ಎಕರೆ ಹೊಲದಲ್ಲಿ ನಾನು ತೊಗರಿ ಬೇಳೆ ಹಾಕಿದ್ದು ಇರುತ್ತದೆ  ದಿನಾಂಕ 17/11/2017 ರಂದು ನಾನು ನಮ್ಮ ತಂದೆ ತಾಯಿಯೊಂದಿಗೆ ಉಡಚಣ ಹಟ್ಟಿ ಗ್ರಾಮಕ್ಕೆ ಬಂದು ನನ್ನ ಗಂಡನ ಹೆಸರಿನಲ್ಲಿರುವ ಹೊಲ ಸರ್ವೇ ನಂ 361 ನೇದ್ದರಲ್ಲಿ ಹೋಗಿ 1.00 ಪಿಎಮ್ ಸುಮಾರಿಗೆ  ತೊಗರಿ ಬೆಳೆಯಲ್ಲಿ ಕೆಲಸ ಮಾಡುತಿದ್ದಾಗ ನಮ್ಮ ಹೊಲದ ಹತ್ತಿರ ಹೊಲದವರಾದ ಮಲ್ಲಪ್ಪ ತಂದೆ ಭೀರಣ್ಣ ಬಂಡಗಾರ ರವರು ನಾವು ಹೊಲಕ್ಕೆ ಬಂದಿದ್ದು ನೋಡಿ ನಮ್ಮ ಹತ್ತಿರ ಬಂದು ಮಾತನಾಡುತಿದ್ದರು ಅದೇ ಸಮಯಕ್ಕೆ  ನಮ್ಮ ಭಾವನಾದ ಶರಣಪ್ಪ ತಂದೆ ಕೆಂಚಪ್ಪ ಪೂಜಾರಿ ಈತನು ನಮ್ಮ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ನಮ್ಮ ಹತ್ತಿರ ಬಂದು ನನಗೆ ಏ ರಂಡಿ ಬೋಸಡಿ ನಮ್ಮ ಮೇಲೆ ಪೊಲೀಸ್ ಕೇಸ ಮಾಡಿ ಕೊರ್ಟದಾಗ ಸಾಕ್ಷಿ ನುಡಿತಿ ಮುಂದಿನ ದಿನಾಂಕಕ್ಕ ನೀ ಕೊರ್ಟಗೆ ಬಂದು ನಮ್ಮ ವಿರುದ್ದ ಸಾಕ್ಷಿ ಹೇಳ್ದಿ ನಿನ್ನ ಜೀವಾನೆ ತಗಿತಿನಿ ಅಂತ ಬೈಯುತಿದ್ದಾಗ ಅಲ್ಲೆ ಇದ್ದ ನಮ್ಮ ತಂದೆ ತಾಯಿ ಹಾಗು ಮಲ್ಲಪ್ಪ ಬಂಡಗಾರ ರವರು ಸದರಿ ಶರಣಪ್ಪನಿಗೆ  ಬುದ್ದಿ ಹೇಳಿ ಕಳುಯಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿಯರಿಗೆ ಮತ್ತು ವಿದ್ಯಾಥಿನಿಯರಿಗೆ ಚುಡಾಯಿಸಿ ಕಿರುಕಳ ನೀಡುತ್ತಿದ್ದವರ ಬಂಧನ :
ಅಫಜಲಪೂರ ಠಾಣೆ : ಶ್ರೀಮತಿ ಶ್ರೀಧೇವಿ ಮ ಎ.ಎಸ್.ಐ ಅಫಜಲಪೂರ  ಠಾಣೆ ರವರು ದಿನಾಂಕ 23-11-2017 ರಂದು ಮದ್ಯಾಹ್ನ ಅಫಜಲಪೂರ ಪಟ್ಟಣದ ತಹಸಿಲ ಆಫೀಸ್ ಹತ್ತಿರ ಬಂದಾಗ, ತಹಸಿಲ್ ಆಫೀಸ್ ಮುಂದೆ ಎರಡು ಜನರು ನಿಂತುಕೊಂಡು ರಸ್ತೆಗೆ ಹೋಗಿ ಬರುವ ವಿದ್ಯಾರ್ಥಿನಿಯರಿಗೆ /ಯುವತಿಯರಿಗೆ ಚುಡಾಯಿಸುವುದು ಮಾಡುತ್ತಿದ್ದರು., ಆಗ ನಾನು ಸದರಿಯವರನ್ನು ನನ್ನ ಜೋತೆಗೆ ಇದ್ದ ಸುರೇಶ ಹೆಚ್.ಸಿ-394 ರವರ ಸಹಾಯದಿಂದ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತಮ್ಮ ಹೆಸರು 1) ಸಿದ್ದು @ ಸಿದ್ದಪ್ಪ ತಂದೆ ಶಿವಶರಣ ಜಳಕಿ ಸಾ|| ಎಮ್.ಜಿ ನಗರ ಅಫಜಲಪೂರ 2) ಅಬಿ ತಂದೆ ಬಸಪ್ಪ ಲಸ್ಕರ ಸಾ|| ವಡ್ಡರ ಕಾಲೋನಿ ಅಫಜಲಪೂರ ಅಂತ ಏರು ದ್ವನಿಯಲ್ಲಿ ತಿಳಿಸಿದನು. ಸದರಿಯವರು ಕಾಲೇಜ ವಿದ್ಯಾರ್ಥಿನಿಯರಿಗೆ ಹಾಗೂ ಯುವತಿಯರಿಗೆ ಚುಡಾಯಿಸಿ ಅವರಿಗೆ ಅವಮಾನ ಮಾಡುತ್ತಿದ್ದರಿಂದ ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ಶ್ರೀಮತಿ ಶ್ರೀಧೇವಿ ಮ ಎ.ಎಸ್.ಐ ಅಫಜಲಪೂರ  ಠಾಣೆ ರವರು ದಿನಾಂಕ 23-11-2017 ರಂದು ಮದ್ಯಾಹ್ನ  ಅಫಜಲಪೂರ ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಬಂದಾಗ, ಬಸ್ ನಿಲ್ದಾಣದಲ್ಲಿ ಒಬ್ಬ ವ್ಯೆಕ್ತಿ ನಿಂತುಕೊಂಡು ಬಸ್ ನಿಲ್ದಾಣದಲ್ಲಿ ಹೋಗಿ ಬರುವ ವಿದ್ಯಾರ್ಥಿನಿಯರಿಗೆ/ಯುವತಿಯರಿಗೆ ಚುಡಾಯಿಸುವುದು ಮಾಡುತ್ತಿದ್ದನು, ಆಗ ನಾನು ಸದರಿಯವರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಕಿರಣಕುಮಾರ ತಂದೆ ಸಂತೋಬಾ ಕಟ್ಟಿಮನಿ ಸಾ|| ಅಂಬಿಕಗರ ಚೌಡಯ್ಯ ನಗರ ಅಫಜಲಪೂರ ಅಂತ ತಿಳಿಸಿದನು. ಸದರಿಯವನು ಕಾಲೇಜ ವಿದ್ಯಾರ್ಥಿನಿಯರಿಗೆ ಹಾಗೂ ಯುವತಿಯರಿಗೆ ಚುಡಾಯಿಸಿ ಅವರಿಗೆ ಅವಮಾನ ಮಾಡುತ್ತಿದ್ದರಿಂದ ಸದರಿಯವನನ್ನು ಹಿಡಿದುಕೊಂಡು  ಅಫಜಲಪೂರ ಠಾಣೆಗೆ ತಂದು ಪ್ರಕರಣ ದಾಖಲಿಸಲಾಗಿದೆ.
ರಾಘವೇಂದ್ರ ನಗರ ಠಾಣೆ : ಪ್ರಾಂಶುಪಾಲರು  ಶ್ರೀ ಶರಣಬಸವೇಶ್ವರ ಸಯುಕ್ತ ಪದವಿ ಪೂರ್ವ ಮಹಾ ವಿಧ್ಯಾಲಯ ಶರಣ ನಗರ ಕಲಬುರಗಿ ಇವರು ದಿನಾಂಕ 04.11.2017 ರಂದು ಮತ್ತು ದಿನಾಂಕ 15.11.2017 ರಂದು ಠಾಣೆಗೆ ಹಾಜರಾಗಿ ತಮ್ಮ ವಿಧ್ಯಾ ಸಂಸ್ಥೆ ಶ್ರೀ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿದ್ದು ದೇವಸ್ಥಾನ ಆವರಣದಲ್ಲಿ ಬಾಲಕ/ಬಾಲಕೀಯರ ಹೈಸ್ಕೂಲ ಇರುವದಿಂದ ವಿದ್ಯಾರ್ಥಿಗಳು /ವಿದ್ಯಾರ್ಥಿನಿ ಯರಿಗೆ  ಕೆಲವು ಹುಡುಗರು ಚುಡಾಯಿಸುವದು ಕಂಡು ಬಂದಿದ್ದು ವಿದ್ಯಾರ್ಥಿನಿಯರಿಗೆ ತೊಂದರೆ ಮಾಡುವವರ ವಿರುಧ್ದ ಕ್ರಮ ಕೈಕೊಳ್ಳಬೇಕು ಮತ್ತು ಸಿಬ್ಬಂದಿಯವರನ್ನು ನೀಯೊಜನೆ ಮಾಡುವ ಕುರಿತು ಅರ್ಜಿಯನ್ನು ಸಲ್ಲಿಸಿದ್ದು ಸದರಿ ವಸೂಲಾದ ಅರ್ಜಿಯಂತೆ ಶ್ರೀ ಶರಣಬಸವೇಶ್ವರ ಆವರಣದಲ್ಲಿ ವಿದ್ಯಾರ್ಥಿನಿಯರಿಗೆ ತೊಂದರೆ ಯಾಗದಂತೆ ನೋಡಿಕೊಂಡು ಬರಲು ನಮ್ಮ ಠಾಣೆಯ ಶ್ರೀ ಅಂಬಣ್ಣ ಹೆಚ್.ಸಿ 413 ಮತ್ತು ಶ್ರೀ ಶಿವಶರಣಪ್ಪ ಗೊಡಖೆ ಹೆಚ್.ಸಿ 107 ರವರಿಗೆ ನೇಮಕ ಮಾಡಿ ಕಳುಹಿಸಿದ್ದು ಸದರಿಯವರು ಶ್ರೀ ಶರಣಬಸವೇಶ್ವರ ಆವರದಲ್ಲಿ ಕರ್ತವ್ಯ ನಿರ್ವಹಿಸಿಕೊಂಡು ಬಂದಿದ್ದು ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ  ಮತ್ತು ನಮ್ಮ ಠಾಣೆಯ ಶ್ರೀ ಕೀಶೋರ ಪಿಸಿ 1010 ಕೂಡಿಕೊಂಡು ಪೇಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತಾ ಇಂದು ದಿನಾಂಕ 23.11.2017 ರಂದು ಮಧ್ಯಾನ 2 ಗಂಟೆಗೆ ಶ್ರೀ ಶರಣಬಸವೇಶ್ವರ ಗುಡಿಯ ಆವರಣದಲ್ಲಿ ಹೋದಾಗ ಗುಡಿಯ ಆವರಣದ ಉತ್ತರ ದಿಕ್ಕಿನ ಕಡೆಗೆ ಇರುವ ಬಾಗಿಲ ಹತ್ತಿರ ಒಬ್ಬ ನಿಂತುಕೊಂಡು ಬಾಗಿಲದಿಂದ ಗುಡಿ ಒಳಗೆ ಮತ್ತು ಗುಡಿಯಿಂದ ಹೊರಗೆ ಹೊಗಿಬರುವ ಹೆಣ್ಣು ಮಕ್ಕಳಿಗೆ ನೋಡಿ ಕೀಟಲೆ ಮಾಡುವದು ಮತ್ತು ಹೆಣ್ಣು ಮಕ್ಕಳ ಮರ್ಯಾದೆಗೆ ಅಪಮಾನ ವಾಗುವ ರೀತಿಯಲ್ಲಿ ಕೇಕೆ ಹಾಕುತ್ತಾ ಅಸಭ್ಯವಾಗಿ ವರ್ತನೆ ಮಾಡುವದು ಮತ್ತು ಹೆಣ್ಣು ಮಕ್ಕಳು ನಡೆದುಕೊಂಡು ಹೋಗಲು ಅಡತೆಡೆಯನ್ನೂಂಟು ಮಾಡುತ್ತಿರುವದನ್ನು ನೋಡಿ ಸದರಿವನನ್ನು ವಶಕ್ಕೆ ತೆಗೆದುಕೊಂಡು  ಅವನ ಹೆಸರು ವಿಳಾಸ ವಿಚಾರಿಸಲು ಮಲ್ಲಿನಾಥ ತಂದೆ ಬಸವರಾಜ ಹುಗ್ಗಿ ಸಾ: ಸುಭಾಷ ಚೌಕ ಬ್ರಹ್ಮಪೂರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನಿಗೆ ವಶಕ್ಕೆ ಪಡೆದುಕೊಂಡು ಹೆಣ್ಣು ಮಕ್ಕಳಿಗೆ ನೋಡಿ ಕೀಟಲೆ ಮಾಡುವದು ಮತ್ತು ಹೆಣ್ಣು ಮಕ್ಕಳ ಮರ್ಯಾದೆಗೆ ಅಪಮಾನ ವಾಗುವ ರೀತಿಯಲ್ಲಿ ಕೇಕೆ ಹಾಕುತ್ತಾ ಅಸಭ್ಯವಾಗಿ ವರ್ತನೆ ಮಾಡುವದು ಮತ್ತು ಹೆಣ್ಣು ಮಕ್ಕಳು ನಡೆದುಕೊಂಡು ಹೋಗಲು ಅಡತೆಡೆಯನ್ನೂಂಟು ಮಾಡಿದ್ದರಿಂದ ಸದರಿಯವನ ವಿರುಧ್ದ  ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಘವೇಂದ್ರ ನಗರ ಠಾಣೆ : ರಾಂಶವೆನೆಂದರೆ,  ಠಾಣಾ ವ್ಯಾಪ್ತಿಯಲ್ಲಿ ಬರುವ
ಪ್ರಾಂಶುಪಾಲರು ಶ್ರೀ ಶರಣಬಸವೇಶ್ವರ ಸಯುಕ್ತ ಪದವಿ ಪೂರ್ವ ಮಹಾ ವಿಧ್ಯಾಲಯ ಶರಣ ನಗರ ಕಲಬುರಗಿ ಇವರು ದಿನಾಂಕ 04.11.2017 ರಂದು ಮತ್ತು ದಿನಾಂಕ 15.11.2017 ರಂದು ಠಾಣೆಗೆ ಹಾಜರಾಗಿ ತಮ್ಮ ವಿಧ್ಯಾ ಸಂಸ್ಥೆ ಶ್ರೀ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿದ್ದು ದೇವಸ್ಥಾನ ಆವರಣದಲ್ಲಿ ಬಾಲಕ/ಬಾಲಕೀಯರ ಹೈಸ್ಕೂಲ ಇರುವದಿಂದ ವಿದ್ಯಾರ್ಥಿಗಳು/ವಿದ್ಯಾರ್ಥಿನಿಯರಿಗೆ ಕೆಲವು ಹುಡುಗರು ಚುಡಾಯಿಸುವದು ಕಂಡು ಬಂದಿದ್ದು ವಿಧ್ಯಾರ್ಥಿನಿಯರಿಗೆ ತೊಂದರೆ ಮಾಡುವವರ ವಿರುಧ್ದ ಕ್ರಮ ಕೈಕೊಳ್ಳಬೇಕು ಮತ್ತು ಸಿಬ್ಬಂದಿಯವರನ್ನು ನೀಯೊಜನೆ ಮಾಡುವ ಕುರಿತು ಅರ್ಜಿಯನ್ನು ಸಲ್ಲಿಸಿದ್ದು ಸದರಿ ವಸೂಲಾದ ಅರ್ಜಿಯಂತೆ ಶ್ರೀ ಶರಣಬಸವೇಶ್ವರ ಆವರಣದಲ್ಲಿ ವಿಧ್ಯಾರ್ಥಿನಿಯರಿಗೆ ತೊಂದರೆ ಯಾಗುವಂತೆ ನೋಡಿಕೊಂಡು ಬರಲು ನಮ್ಮ ಠಾಣೆಯ ಶ್ರೀ ಪ್ರಮೋದ ಪಿಸಿ 249 ರವರಿಗೆ ನೇಮಕ ಮಾಡಿ ಕಳುಹಿಸಿದ್ದು ಸದರಿಯವರು ಶ್ರೀ ಶರಣಬಸವೇಶ್ವರ ಆವರದಲ್ಲಿ ಕರ್ತವ್ಯ ನಿರ್ವಹಿಸಿಕೊಂಡು ಬಂದಿದ್ದು ಇಂದು ದಿನಾಂಕ 23.11.2017 ರಂದು ಸಾಯಂಕಾಲ 4 ಗಂಟೆಗೆ ನಾನು ನಮ್ಮ ಠಾಣೆಯ ಶ್ರೀ ಶಿವಲಿಂಗಪ್ಪ ಹೆಚ್.ಸಿ 06 ಕೂಡಿಕೊಂಡು ಶ್ರೀ ಶರಣಬಸವೇಶ್ವರ ಗುಡಿಯ ಆವರಣದಲ್ಲಿ ಹೋದಾಗ ಗುಡಿಯ ಆವರಣದ ದಕ್ಷಿಣ ದಿಕ್ಕಿನ ಕಡೆಗೆ ಇರುವ ಬಾಗಿಲ ಹತ್ತಿರ ಒಬ್ಬ ಹುಡುಗ ನಿಂತುಕೊಂಡು ಬಾಗಿಲದಿಂದ ಗುಡಿ ಒಳಗೆ ಮತ್ತು ಗುಡಿಯಿಂದ ಹೊರಗೆ ಹೊಗಿಬರುವ ಹೆಣ್ಣು ಮಕ್ಕಳಿಗೆ ನೋಡಿ ಕೀಟಲೆ ಮಾಡುವದು ಮತ್ತು ಹೆಣ್ಣು ಮಕ್ಕಳ ಮರ್ಯಾದೆಗೆ ಅಪಮಾನ ವಾಗುವ ರೀತಿಯಲ್ಲಿ ಕೇಕೆ ಹಾಕುತ್ತಾ ಅಸಭ್ಯವಾಗಿ ವರ್ತನೆ ಮಾಡುವದು ಮತ್ತು ಹೆಣ್ಣು ಮಕ್ಕಳು ನಡೆದುಕೊಂಡು ಹೋಗಲು ಅಡತೆಡೆಯನ್ನೂಂಟು ಮಾಡುತ್ತಿರುವದನ್ನು ನೋಡಿ ನಾನು, ಶ್ರೀ ಶಿವಲಿಂಗಪ್ಪ ಹೆಚ್.ಸಿ 06 ಮತ್ತು ಶ್ರೀ ಪ್ರಮೋದ ಪಿಸಿ 249 ಕೂಡಿಕೊಂಡು ದಾಳಿ ಮಾಡಿ ಸದರಿ ಹುಡುಗನಿಗೆ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಬಾಬು ತಂದೆ ಲೊಹಿತ ಸರಡಗಿ ಸಾ: ಹೊನ್ನಕಿರಣಗಿ ತಾ:ಜಿ: ಕಲಬುರಗಿ ಅಂತ ತಿಳಿಸಿದ್ದು ಸದರಿಯವನಿಗೆ ವಶಕ್ಕೆ ಪಡೆದುಕೊಂಡು ಸದರಿಯವನು ಹೆಣ್ಣು ಮಕ್ಕಳಿಗೆ ನೋಡಿ ಕೀಟಲೆ ಮಾಡುವದು ಮತ್ತು ಹೆಣ್ಣು ಮಕ್ಕಳ ಮರ್ಯಾದೆಗೆ ಅಪಮಾನ ವಾಗುವ ರೀತಿಯಲ್ಲಿ ಕೇಕೆ ಹಾಕುತ್ತಾ ಅಸಭ್ಯವಾಗಿ ವರ್ತನೆ ಮಾಡುವದು ಮತ್ತು ಹೆಣ್ಣು ಮಕ್ಕಳು ನಡೆದುಕೊಂಡು ಹೋಗಲು ಅಡತೆಡೆಯನ್ನೂಂಟು ಮಾಡಿದ್ದರಿಂದ ಸದರಿಯವನ ವಿರುಧ್ದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಸ್ವಾಭಾವಿಕ ಸಾವು ಪ್ರಕರಣ :
ನೆಲೋಗಿ ಠಾಣೆ : ಶ್ರೀ ಗೊಲ್ಲಾಳಪ್ಪ ತಂದೆ ಭೀಮರಾಯ ದ್ಯಾಮಗೊಂಡ ಸಾ:ಮಂದೇವಾಲ ತಾ|| ಜೇವರ್ಗಿ ಇವರು ದಿನಾಂಕ: 23-11-2017 ರಂದು 3-30 ಪಿ.ಎಮ್ ಕ್ಕೆ ನಮ್ಮೂರ ಇರ್ಷಾದ ಬಾಗವಾನ ಇವನು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ, ದಿನಾಂಕ: 23-11-2017 ರಂದು ಒಬ್ಬ ಅಪರಿಚಿತ ಗಂಡು ಮನುಷ್ಯ ವಯಸ್ಸು ಅಂದಾಜು 40-45 ವರ್ಷ ಇವನು ನಮ್ಮೂರ ಬಸ್ಸ ತಂಗುದಾಣದಲ್ಲಿ ಅವನಿಗೆ ಹಸಿವೆಯಿಂದ, ಅಥವಾ ಯಾವುದೋ ಕಾಯಿಲೆಯಿಂದ ಮೃತಪಟ್ಟಿರುತ್ತಾನೆ  ಅಂತಾ ತಿಳಿಸಿದಾಗ ನಾನು ಮತ್ತು ನಮ್ಮೂರ ಬಸವರಾಜ ಪೊಲೀಸ ಪಾಟೀಲ ಇಬ್ಬರ ಕೂಡಿ ನಮ್ಮೂರ ಬಸ್ಸ ತಂಗುದಾಣಕ್ಕೆ ಬಂದು ನೋಡಲಾಗಿ ತಂಗುದಾಣದ ಕಟ್ಟದ ಒಳಗಡೆ ಒಬ್ಬ ಅಪರಿಚಿತ ಗಂಡು ಮನುಷ್ಯ ವಯಸ್ಸು ಅಂದಾಜು 40-45 ವರ್ಷ ವಯಸ್ಸಿನವನು ಮೃತಪಟ್ಟಿದ್ದು ಮೃತನು ಮಾನಸಿಕ ಅಸ್ವಸ್ಥನಿದ್ದು, ದಿನಾಲು ಅಲ್ಲಿ ಇಲ್ಲಿ ಬಿಕ್ಷೆ ಬೇಡಿ ತಿರುಗಾಡುತ್ತಿದ್ದನು, ಇಂದು ಬಿಸಿಲಿನ ತಾಪಕ್ಕೆ ಹಾಗೂ ಹಸಿವೆಯಿಂದ ಇಲ್ಲವೆ ಯಾವುದೋ ಕಾಯಿಲೆಯಿಂದ ಮೃತಪಟ್ಟಿರಬಹುದು ಮೃತಪಟ್ಟ  ವ್ಯಕ್ತಿಯ ಚಹರೆ, ಕೊಲು ಮುಖ, ಸಾದಾ ಕಪ್ಪು ಬಣ್ಣ ಮುಖದ ಮೇಲೆ ಬಿಳಿ ಮತ್ತು ಕಪು್ಉ ಮಿಶ್ರಿತ ಕೂದಲು, ಸಾದಾರಣ ಮೈಕಟ್ಟು, ಮೈ ಮೇಲೆ ಒಂದು ಕಂದು ಬಣ್ಣದ ನೈಟ ಪ್ಯಾಂಟ ಇರುತ್ತದೆ ಮಾನ್ಯರವರವರು ಈ ಬಗ್ಗೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.