Police Bhavan Kalaburagi

Police Bhavan Kalaburagi

Friday, July 27, 2018

KALABURAGI DISTRICT REPORTED CRIMES

ದರೋಡೆ ಮಾಡಲು ಹೊಂಚು ಹಾಕಿ ಕುಳಿತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 25.07.2018 ರಂದು 23;15 ಗಂಟೆಯಿಂದ ಪಿ>ಎದ್.ಐ. ರಾಘವೇಂದ್ರ ನಗರ ಠಾಣೆ  ಮತ್ತು  ಸಿಬ್ಬಂದಿಯವರಾದ ನಾನು ಹಾಗು ಶ್ರೀ ಶಿವಯೋಗಿ ಎಎಸ್ಐ ಶ್ರೀ ಶಿವಲಿಂಗಪ್ಪ ಹೆಚ್.ಸಿ 06, ಶ್ರೀ ಶಿವಲಿಂಗ ಪಿಸಿ 1241 ಮತ್ತು ಶ್ರೀ ಗಂಗಾಧರ ಪಿಸಿ 642 ರವರನ್ನು ಸಂಗಡ ಕರೆದುಕೊಂಡು ಠಾಣಾ ವ್ಯಾಪ್ತಿಯಲ್ಲಿ  ಸ್ವತ್ತಿನ ಗುನ್ನೆಗಳನ್ನು ತಡೆಗಟ್ಟು ಸಂಬಂದ ರಾತ್ರಿ ವೇಳೆಯಲ್ಲಿ ವಿಶೇಷ ಗಸ್ತು ಚೆಕ್ಕಿಂಗ್ ಕರ್ತವ್ಯ ನಿರ್ವಹಿಸುತ್ತಾ ದಿನಾಂಕ; 26/07/2018 ರಂದು ಬೆಳ್ಳಿಗ್ಗೆ 3:30 ಗಂಟೆಗೆ ಠಾಣಾ ವ್ಯಾಪ್ತಿಯ ಬಾಳೆ ಲೇಔಟದಲ್ಲಿ ಹೋದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ, ಠಾಣಾ ವ್ಯಾಪ್ತಿಯ  ಪ್ರಭುದೇವ್ ನಗರದ ಹತ್ತಿರ ರಸ್ತೆಯ ಪಕ್ಕದಲ್ಲಿ ಕೆಲವು ಜನರು ದರೋಡೆ ಮಾಡಲು ಹೊಂಚ್ಚು ಹಾಕಿ ಕೂಳಿತಿರುವ ಬಗ್ಗೆ ಖಚಿತ ಬಾತ್ಮಿ ಬಂದಿದ್ದು ಬಾತ್ಮಿಯಂತೆ ನಾನು, ಪಂಚರು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ನಿಧಾನವಾಗಿ ನಡೆಯುತ್ತಾ ಇದಗಾ ಮೈದಾನದ ಪಕ್ಕದಲ್ಲಿ ಇರುವ ರಸ್ತೆಯ ಮೇಲೆ ಬೆಳ್ಳಿಗ್ಗೆ 4:00 ಗಂಟೆಗೆ ಹೋಗುತ್ತಿದ್ದಂತೆ ನಮ್ಮಿಂದ ಸ್ವಲ್ಪ ದೂರದ ರಸ್ತೆಯ ಪಕ್ಕದಲ್ಲಿ ಕೆಲವು ಜನರು ಗುಸು ಗುಸು ಮಾತನಾಡುವ ಶಬ್ದ ಕೇಳಿ ಬರುತ್ತಿದ್ದು ಅವರಿಗೆ ಗೊತ್ತಾಗದ ಹಾಗೆ ನಾವು ಅವರ ಹತ್ತಿರ ಹೋಗಿ ನೋಡಲು 6 ಜನರು ಗುಂಪಾಗಿ ಕುಳಿತುಕೊಂಡು ದರೋಡೆ ಮಾಡುವ ಕುರಿತು ತಮ್ಮ ತಮ್ಮಲ್ಲಿ ಮಾತನಾಡುತ್ತಿದ್ದು ಆಗ ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಪಂಚರ ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿದಾಗ ಸದರಿಯವರು ನಮ್ಮನ್ನು ನೋಡಿ ಓಡಿ ಹೋಗುತ್ತಿದ್ದು ಆಗ ನಾನು ಮತ್ತು ಸಿಬ್ಬಂದಿಯವರು 6 ಜನರಿಗೆ ಹಿಡಿದುಕೊಂಡಿದ್ದು ನಂತರ ಹಿಡಿದುಕೊಂಡ 6 ಜನರಿಗೆ ವಿಚಾರಣೆಗೆ ಒಳಪಡಿಸಿದಾಗ ಸದರಿಯವರು ತಮ್ಮ ಹೆಸರು 1. ಸಾಗರ ತಂದೆ ಪ್ರಕಾಶ ಸಿರಮನೂರ ಸಾ:ಆಶ್ರಯ ಕಾಲೋನಿ ಶಹಾಬಜಾರ ಅಂಬೇಡ್ಕರ ಹಾಸ್ಟೇಲ ಹತ್ತಿರ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ ಒಂದು ಚಾಕು ಮತ್ತು ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕಪ್ಪು ಬಟ್ಟೆ ದೋರೆತಿದ್ದು 2. ಪರಮೇಶ್ವರ ತಂದೆ ದೇವೇಂದ್ರಪ್ಪಾ ಹೊನಗುಂಟಾ ಸಾ: ಬಸವಲಿಂಗ ನಗರ ಶಹಾಬಜಾರ  ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಹತ್ತಿರ ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕಪ್ಪು ಬಟ್ಟೆ ಮತ್ತು ಒಂದು ಬಡಿಗೆ ದೋರೆತಿದ್ದು 3. ಸತೀಶ ತಂದೆ  ಟಿಪ್ಪು ರಾಠೋಡ  ಸಾ: ಶಹಾಬಜಾರ  ಕಲಬುರಗಿ. ಇವನ ಹತ್ತಿರ ಕಾಗದದಲ್ಲಿ ಖಾರದ ಪುಡಿ ಚೀಟ .ಮುಖಕ್ಕೆ ಕಟ್ಟಿಕೊಳ್ಳು ದಸ್ತಿ ದೊರೆತಿದ್ದು ಇರುತ್ತದೆ. 4. ಶರಣಬಸಪ್ಪಾ ತಂದೆ ಯಲ್ಲಪ್ಪಾ ಕಾಂಬಳೆ ಸಾ: ನಿರಗುಡಿ ತಾ;ಆಳಂದ  ಇವನ ಹತ್ತಿರ ಒಂದು ದಸ್ತಿ 5. ಜೈ ಭೀಮ ತಂದೆ ಲಾಲಪ್ಪಾ ಕಮಲಾಪೂರ ಸಾ: ಬಸವಲಿಂಗ ನಗರ ಹರಿಜನ ವಾಡ ಶಹಾಬಜಾರ ಕಲಬುರಗಿ ಇವನ ಹತ್ತಿರ ಒಂದು ದಸ್ತಿ,ಮತ್ತು ಒಂದು ಹಗ್ಗ ದೋರೆತ್ತಿದ್ದು 6. ನಿತೀನ ತಂದೆ ಶಿವಾಜಿ ಸೂರ್ಯವಂಶಿ ಸಾ:ಬಸವಲಿಂಗ ನಗರ ಹರಿಜನ ವಾಡಿ ಶಹಾಬಜಾರ ಇವನ ಹತ್ತಿರ ಒಂದು ದಸ್ತಿ ದೊರೆತ್ತಿದ್ದು. ಸದರಿಯವರಿಗೆ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಸದರಿಯವರು ತಿಳಿಸಿದ್ದೆನೆಂದರೆ, ಒಂಟಿಯಾಗಿ ಬರುವ ಜನರ ಮೇಲೆ ದಾಳಿ ಮಾಡಿ ಅವರಿಗೆ ಹೆದರಿಸಿ ಬೇದರಿಸಿ ಅವರಲ್ಲಿದ್ದ ಹಣ, ಬಂಗಾರ ಮತ್ತು ಬೆಲೆಬಾಳುವ ವಸ್ತುಗಳನ್ನು ಕಿತ್ತಿಕೊಳ್ಳುವ ಸಂಬಂದ ಹೊಂಚ್ಚುಹಾಕಿ ಕುಳಿತಿರುತ್ತೆವೆ ಅಂತ ತಮ್ಮ ಸ್ವ-ಖುಷಿ ಹೇಳಿಕೆ ನೀಡಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ನಿಂದನೆ ಮಾಡಿದ ಪ್ರಕರಣ :
ನರೋಣಾ ಠಾಣೆ : ಶ್ರೀ ಚಂದ್ರಕಾಂತ ತಂದೆ ದೇವಿಂದ್ರಪ್ಪ ಮೆಲ್ಕೇರಿ ಸಾ:ಬಸವನಸಂಗೋಳಗಿ ರವರು ಈಗ 3-4 ದಿವಸಗಳ ಹಿಂದೆ ನಮ್ಮೂರಿನ ಪಮ್ಮಾಲಿ ತಂದೆ ನಾಗಮೂರ್ತಿ ಸುತ್ತಾರ ಈತನು ಸರಾಯಿ ಕುಡಿದ ಅಮಲಿನಲ್ಲಿ ನನ್ನೊಂದಿಗೆ ತಕರಾರು ಮಾಡಿದ್ದು ಅದೇ ವಿಷಯದ ಬಗ್ಗೆ ನಿನ್ನೆ ದಿನಾಂಕ:25/07/2018 ರಂದು ಸಂಜೆ 7-30 ಗಂಟೆಯ ಸುಮಾರಿಗೆ ನಾನು ನಮ್ಮೂರಿನ ಶಾಂತಯ್ಯ ಸ್ವಾಮಿ ಇವರ ಹಿಟ್ಟಿನ ಗಿರಣಿಯ ಹತ್ತಿರ ಸದರಿ ಪಮ್ಮಾಲಿ ಈತನಿಗೆ ವಿಚಾರಿಸುವಾಗ ಸದರಿಯವನು ನನಗೆ ಏ ಹೊಲೆಯಾ ಸೂಳೆಮಗನೆ ಆವತ್ತ ಆಗಿದ್ದ ತಕರಾರು ಬಗ್ಗೆ ಇವತ್ತೇನು ಕೇಳ್ತಿ ಅಲೇ ಎಂದು ನನಗೆ ಜಾತಿ ಎತ್ತಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಅಲ್ಲಿಯೇ ಬಿದಿದ್ದ ಕಬ್ಬಿಣದ ರಾಡಿನಿಂದ ನನ್ನ ತಲೆಯ ಎಡಗಡೆಗೆ ಹೊಡೆದಿದ್ದರಿಂದ ರಕ್ತಗಾಯವಾಗಿರುತ್ತದೆ. ಅಲ್ಲದೇ ನನಗೆ ನೆಲಕ್ಕೆ ಕೆಡವಿ ಕಾಲಿನಿಂದ ಒದ್ದಿದ್ದರಿಂದ ಒಳಪೆಟ್ಟಾಗಿರುತ್ತದೆ. ಅಷ್ಟರಲ್ಲಿಯೇ ಅಲ್ಲಿಯೇ ಇದ್ದ ನಮ್ಮೂರಿನ ವಿಠಲ್ ಅಯ್ಯಪ್ಪಗೋಳ ಹಾಗೂ ಇನ್ನು 3-4 ಜನ ಅಲ್ಲಿದ್ದ ಹೆಣ್ಣುಮಕ್ಕಳು ಸೇರಿ ಜಗಳ ಬಿಡಿಸಿರುತ್ತಾರೆ. ಅಷ್ಟೊತ್ತಿಗೆ ನಾನು ನಿಶಕ್ತಿಗಾಗಿ ಕೆಳಗೆ ಬಿದ್ದಿದ್ದು ನನ್ನ ಹೆಂಡಿತಿಯಾದ ಅನುಸೂಯಾ ಇವಳಿಗೆ ವಿಷಯ ಗೊತ್ತಾಗಿ ಬಂದು ಒಂದು ಖಾಸಗಿ ಜೀಪಿ ತರಿಸಿ ಅದರಲ್ಲಿ ನನ್ನನ್ನು ಹಾಕಿಕೊಂಡು ಉಪಚಾರ ಕುರಿತು ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 22/07/2018 ರಂದು ಬೆಳಿಗ್ಗೆ ನಾನು ನಮ್ಮ ಮನೆಯಲಿದ್ದಾಗ ಮರೇಪ್ಪ ಗುಡಮಿ ಈತನು ನಮ್ಮ ಮೋಬೈಗೆ ಪೊನ್ ಮಾಡಿ ತಿಳಿಸಿದ್ದೆನೆಂದರೆ  ಈಗ ಸ್ವಲ್ಪ ಸಮಯದ ಹಿಂದೆ ನಾವು ಮಾಶಾಳ ದಾಟಿ ನಾನು ಹಾಗು ಪ್ರಕಾಶ ಇಬ್ಬರು ಮೋಟಾರ ಸೈಕಲ ಮೇಲೆ ಹೋಗುತಿದ್ದಾಗ ಸದರಿ ಮೋಟಾರ್ ಸೈಕಲ ನಾನೇ ಚಲಾಯಿಸುತಿದ್ದೆ ಮೋಟಾರ್ ಸೈಕಲ್ ಸ್ಕೀಡ್ ಆಗಿ ಮೋಟಾರ್ ಸೈಕಲ್ ಸಮೇತ ಬಿದ್ದಿರುತೇವೆ.ಸದರಿ ಘಟನೆಯಲ್ಲಿ ಪ್ರಕಾಶನಿಗೆ ತಲೆಗೆ ಭಾರಿ ಗುಪ್ತಗಾಯ ಹಾಗು ಎಡಗಾಲಿಗೆ ಗುಪ್ತಗಾಯವಾಗಿ ಕಾಲು ಮುರಿದಿರುತ್ತದೆ ನನಗೆ ಯಾವುದೇ ಗಾಯಗಳಾಗಿರುವುದಿಲ್ಲ  ನೀವು ಬನ್ನಿ ಅಂತ ತಿಳಿಸಿದನು ವಿಷಯ ಗೊತ್ತಾದ ಕೂಡಲೆ ನಾನು ಹಾಗು ರೋಹಿತ ತಂದೆ ಬಸವರಾಜ ಬಿರುಣಗಿ, ಮಹೇಶ ತಂದೆ ಭಿರಣ್ಣ ಅಗರಖೇಡ ದತ್ತಾತ್ರೇಯ ತಂದೆ ಪರಸಪ್ಪ ಹಡಲಸಂಗ ರವರೇಲ್ಲರು ಕೂಡಿ ಒಂದು ಖಾಸಗಿ ವಾಹನದಲ್ಲಿ ಘಟನೆಯ ಸ್ಥಳಕ್ಕೆ ಬಂದು ನೋಡಿದ್ದು ನನ್ನ ಗಂಡನಿಗೆ ತಲೆಗೆ ಭಾರಿ ಗುಪ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲಾ ಎಡಗಾಲಿಗೆ ಭಾರಿ ಗುಪ್ತಗಾಯವಾಗಿ  ಕಾಲು ಮುರಿದಿರುತ್ತದೆ ನಾವು ತಗೆದುಕೊಂಡು ಹೋಗಿದ್ದ ವಾಹನದಲ್ಲಿ ನನ್ನ ಗಂಡನಿಗೆ ಕರೆದುಕೊಂಡು ವಿಜಯಪೂರ ಯಶೋಧರಾ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕುರಿತು ಸೇರಿಕೆ ಮಾಡಿರುತ್ತೇವೆ ದಿನಾಂಕ 22/07/2018 ರಂದು ಬೆಳಿಗ್ಗೆ 11.00 ಗಂಟೆ ಸುಮಾರಿಗೆ ಮಾಶಾಳ ದಾಟಿ 2 ಕೀ ಮೀಟರ್ ಅಂತರದಲ್ಲಿ ರೋಡಿನ  ಮೇಲೆ  ಮೋಟಾರ್ ಸೈಕಲ್ ನಂ ಕೆಎ-28 ಯು-0573 ನೇದ್ದರ ಸವಾರನಾದ ಮರೇಪ್ಪ ತಂದೆ ರಾಚಪ್ಪ ಗುಡಮಿ ಈತನು ಸದರಿ ಮೋಟಾರ ಸೈಕಲನ್ನು  ಅತಿವೇಗವಾಗಿ  ಮತ್ತು ನಿಸ್ಕಾಳಜಿತನದಿಂದ ನಡೆಸಿದ್ದರಿಂದ ಸದರಿ ಮೋಟಾರ್ ಸೈಕಲ್ ಸ್ಕೀಟ್ ಆಗಿ ಬಿದಿದ್ದರಿಂದ ಹಿಂದೆ ಕುಳಿತಿದ್ದ ನನ್ನ ಗಂಡನ ತಲೆಗೆ ಭಾರಿ ಗುಪ್ತಗಾಯ ಹಾಗು ಎಡಗಾಲಿಗೆ ಭಾರಿ ಗುಪ್ತಗಾಯವಾಗಿ ಮುರಿದಿದ್ದು ಸದರಿ ಮೋಟಾರ ಸೈಲಕ ಸವಾರನಾದ ಮರೇಪ್ಪನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಶ್ರೀಮತಿ ಜಗದೇವಿ ಗಂಡ ಪ್ರಕಾಶ ಭಕ್ತೆ ಸಾ||ಡಾ|| ಬಾಬಾ ಸಾಹೇಬ ಅಂಬೇಡ್ಕರ ನಗರ ಇಂಡಿರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಅವಿನಾಶ ತಂದೆ ಅಂಬಾದಾಸ ಸೂರ್ಯವಂಶಿ ಸಾ||ದೇವಣಗಾಂವ ಹಾ||||ಸಮತಾ ನಗರ ಕಲಬುರಗಿ ರವರ ತಂದೆಯವರು ನಮ್ಮ ಮೋಟಾರ್ ಸೈಕಲ್ ನಂ ಕೆಎ-32 ಇಎಫ್ 5955 ನೇದ್ದರ ಮೇಲೆ ದೇವಣಗಾಂವಕ್ಕೆ  ಹೋಗಿ ಬರುತ್ತೇನೆ ಅಂತ ಹೇಳಿ ಮನೆಯಿಂದ ಹೋಗಿದ್ದು  ದಿನಾಂಕ 25/07/2018 ರಂದು ಮದ್ಯಾಹ್ನ 3.50 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಲಿದ್ದಾಗ ಮಾತೋಳಿ ಗ್ರಾಮದ ನಮ್ಮ ಸಂಬಂಧಿಕರಾದ ಅವಿನಾಶ ತಂದೆ ಮಾರುತಿ ಮೋರೆ ರವರು ನನ್ನ ಮೋಬೈಗೆ ಪೊನ್ ಮಾಡಿ ತಿಳಿಸಿದ್ದೆನೆಂದರೆ  ಈಗ ಸ್ವಲ್ಪ ಸಮಯದ ಹಿಂದೆ ನಾನು ನಮ್ಮ ಮೋಟಾರ್ ಸೈಕಲ್ ಮೇಲೆ ಚವಡಾಪೂರದಿಂದ ಮಾತೋಳಿಗೆ ಹೋಗುತಿದ್ದಾಗ ನನ್ನ ಮುಂದೆ ನಿಮ್ಮ ತಂದೆ ಅಂಬಾದಾಸ ರವರು ಮೋಟಾರ ಸೈಕಲ್ ನಂ ಕೆಎ-32 ಇಎಫ್ 5955 ನೇದ್ದರ ಮೇಲೆ ಅಫಜಲಪೂರ ಕಡೆ ಹೋಗುತಿದ್ದರು ಮಲ್ಲಾಬಾದ ಸಿಮಾಂತರ ಮಲ್ಲಾಬಾದ ಗ್ರಾಮದ ಶರಣಪ್ಪ ತಂದೆ ಸಿದ್ರಾಮಪ್ಪ ಕಲ್ಲೂರ ರವರ ಹೊಲದ ಹತ್ತಿರ ಮುಖ್ಯ ರಸ್ತೆ  ಮೇಲೆ ಹಿಂದಿನಿಂದ Mahindra TUV 300 ನೇದ್ದರ ಚಾಲಕ  ಸದರಿ ವಾಹನವನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮುಂದೆ ಹೋಗುತಿದ್ದ ನಿಮ್ಮ ತಂದೆಯ ಮೋಟಾರ ಸೈಕಲ್ ಗೆ ಡಿಕ್ಕಿ ಪಡಿಸಿದ್ದರಿಂದ ನಿಮ್ಮ ತಂದೆ ಮೋಟಾರ ಸೈಕಲ್ ಸಮೇತ ರೋಡಿನ ಮೇಲೆ ಬಿದ್ದು ತಲೆಗೆ ಭಾರಿ ರಕ್ತ ಗಾಯ ವಾಗಿರುತ್ತದೆ. ಸದರಿ ವಾಹನ ಚಾಲಕನು ತನ್ನ ವಾಹನವನ್ನು ರೋಡಿನ ಮೇಲೆ ಪಲ್ಟಿ ಮಾಡಿ ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿರುತ್ತಾನೆ ನಾನು 108 ಅಂಬ್ಯೂಲೆನ್ಸಕ್ಕೆ ಕಾಲ್ ಮಾಡಿ ಅಲ್ಲಿಂದ ಹೋಗುತಿದ್ದ ಪ್ರಯಾಣಿಕರ ಸಹಾಯದಿಂದ ನಿಮ್ಮ ತಂದೆಗೆ 108 ಅಂಬ್ಯೂಲೆನ್ಸದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬಸವೇಶ್ಚರ ಆಸ್ಪತ್ರೆ ಕಲಬುರಗಿಗೆ ಬರುತಿದ್ದೇನೆ ನೀವು ಬನ್ನಿ ಅಂತ ತಿಳಿಸಿದ ಬಳಿಕ ನಾನು ಹಾಗು ನಮ್ಮ ಮಾವನಾದ ಹುಲಿರಾಯ ತಂದೆ ಶಂಕರರಾವ ಕಾಜಲೆ ಇಬ್ಬರು ಬಸವೇಶ್ವರ ಆಸ್ಪತ್ರೆಗೆ ಹೋಗಿ ನಮ್ಮ ತಂದೆಗೆ ನೋಡಲಾಗಿ ನಮ್ಮ ತಂದೆಯ ತಲೆಗೆ ಭಾರಿ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ  ಎರಡು ಕಾಲುಗಳಿಗೆ ಎರಡು ಕೈಗಳಿಗೆ ಬೆನ್ನಿನ ಮೇಲೆ ತರಚಿದ ರಕ್ತಗಾಯಗಳಾಗಿರುತ್ತವೆ  ಕಾರಣ Mahindra TUV 300 ನೇದ್ದರ ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗು ನಿಸ್ಕಾಳಜಿತನದಿಂದ  ಚಲಾಯಿಸಿ ನಮ್ಮ ತಂದೆ ಚಲಾಯಿಸುತಿದ್ದ  ಮೋಟಾರ್ ಸೈಕಲಗೆ ಡಿಕ್ಕಿ ಪಡಿಸಿ ಭಾರಿ ರಕ್ತಗಾಯ ಪಡಿಸಿದ ಚಾಲಕನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

BIDAR DISTRICT DAILY CRIME UPDATE 27-07-2018

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 27-07-2018

ಚಿಟಗುಪ್ಪಾ ಪೊಲೀಸ್ ಠಾಣೆ ಅಪರಾಧ ಸಂ. 136/18, ಕಲಂ 302 ಐಪಿಸಿ :-
ಫಿರ್ಯಾದಿ ಮನೋಹರ ತಂದೆ ರಾಮಣ್ಣಾ ಕಾಡವಾದೆ, ವಯ: 60 ವರ್ಷ, ಜಾತಿ: ಲಿಂಗಾಯತ, ಸಾ: ಸಿಂಧನಕೇರಾ ರವರ ಮಗನಾದ ಪ್ರಕಾಶ ವಯ: 26 ವರ್ಷ ಇತನು ಜೂಜಾಟ ಡು ಸ್ವಭಾವ ಹೊಂದಿದ್ದು, ದಿನನಿತ್ಯದಂತೆ ಫಿರ್ಯಾದಿಯು ಮನೆಯಲ್ಲಿ ಮಲಗಿಕೊಂಡಾಗ 0130 ಗಂಟೆ ಸುಮಾರಿಗೆ ಗ್ರಾಮದ ರವಿ ಪಾಟೀಲ ಹಾಗು ಗುರುನಾಥ ಮರಕಲ ರವರು ಮನೆಗೆ ಬಂದು ಫಿರ್ಯಾದಿ ಮಗ ಪ್ರಕಾಶ ತನು ಬಸ ನಿಲ್ದಾಣ ಹತ್ತಿರ ಮೋಟರ ಸೈಕಲ ಮೇಲಿಂದ ಬಿದ್ದು ಗಾಯಗೊಂಡ ಬಗ್ಗೆ ತಿಳಿಸಿದ ಕೂಡಲೇ ಫಿರ್ಯಾದಿ ಹಾಗು ಮಕ್ಕಳಾದ ಆಕಾಶ, ಲಕ್ಷ್ಮಣ, ಣ್ಣ ಶಿವರಾಜ ಹಾಗು ಇತರರು ಹೋಗಿ ನೋಡಿ ವಿಚಾರಿಸಲು ತಿಳಿದು ಬಂದಿದ್ದೆನೆಂದರೆ  ದಿನಾಂಕ 26-07-2018 ರಂದು 1800 ಗಂಟೆ ಸುಮಾರಿಗೆ ಪ್ರಕಾಶ ಇತನು ಮನೆ ಗಿಲಾವಕ್ಕೆಂದು ತಂದಿಟ್ಟಿದ್ದ 1.5 ಲಕ್ಷ ರೂಪಾಯಿ ತೆಗೆದುಕೊಂಡು ಅವನ ಗೆಳೆಯರಾದ ರವಿ ಪಾಟೀಲ, ನಾಗೇಶ ತೇಲಂಗ ಹಾಗು ಗುರುನಾಥ ಮರಕಲ ಹಾಗು ಇತತರೊಂದಿಗೆ ಕೂಡಿಕೊಂಡು ಗ್ರಾಮದ ಶಿವಾರದಲ್ಲಿರುವ ಹುಮನಾಬಾದ ಪುರಸಭೆ ಕಸರಾಶಿ ಜಾಗೆಯಲ್ಲಿರುವ ಕೊಣೆಯೊಂದರಲ್ಲಿ ಜೂಜಾಟ ಆಡಿ, ಸರಾಯಿ ಕುಡಿದಿದ್ದು, ರಾತ್ರಿ 1200 ಗಂಟೆಯಿಂದ 0100 ಗಂಟೆ ಅವಧಿಯಲ್ಲಿ ಯಾವುದೋ ಒಂದು ಕಾರಣಕ್ಕಾಗಿ ಅವರ ಮದ್ಯೆ ಜಗಳವಾಗಿ ಫಿರ್ಯಾದಿ ಮಗನಿಗೆ ಆರೋಪಿತರಾದ ರವಿ ಪಾಟೀಲ, ನಾಗೇಶ ತೇಲಂಗ ಹಾಗು ಗುರುನಾಥ ಮರಕಲ ಹಾಗು ಇತರರು ಪ್ರಕಾಶನಿಗೆ ರಾಡ ಹಾಗು ಕಲ್ಲುಗಳಿಂದ ಹೊಡೆದು ಕೊಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ದಿನಾಂಕ 27-07-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 182/2018, ಕಲಂ. 457, 380 ಐಪಿಸಿ :-
ದಿನಾಂಕ 25-07-2018 ರಂದು 2300 ಗಂಟೆಯಿಂದ ದಿನಾಂಕ 26-07-2018 ರಂದು 0400 ಗಂಟೆಯ ಮದ್ಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಗೊಪು ತಂದೆ ವೇಣು ಅಡೆ ವಯ: 50 ವರ್ಷ, ಜಾತಿ:  ಲಮಾಣಿ, ಸಾ: ಖಾನಾಪೂರ ರವರು ಮಲಗಿದ ಕೊಣೆಗೆ ಕೊಂಡಿ ಹಾಕಿ ಪಕ್ಕದ ಕೊಣೆಯ ಬಾಗಿಲ ಕೀಲಿ ಮುರಿದು ಅಲಮಾರದಲ್ಲಿಟ್ಟಿದ ನಗದು ಹಣ 79,000/- ಸಾವಿರ ರೂ., 5 ತೊಲಿ ಬಂಗಾರ ಅ.ಕಿ 1 ಲಕ್ಷ ರೂಪಾಯಿ ಮತ್ತು 20 ತೊಲಿ ಬೆಳ್ಳಿ ಅ.ಕಿ 6000/- ಸಾವಿರ ರೂಪಾಯಿ ಹೀಗೆ ಒಟ್ಟು ಅ.ಕಿ 1,85,000/- ರೂ. ನೇದವುಗಳನ್ನು ಕಳವು ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 26-07-2018ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.