Police Bhavan Kalaburagi

Police Bhavan Kalaburagi

Thursday, May 25, 2017

BIDAR DISTRICT DAILY CRIME UPDATE 25-05-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 25-05-2017

OgÁzÀ(©) ¥ÉưøÀ oÁuÉ UÀÄ£Éß £ÀA. 83/2017, PÀ®A. 498(J), 323, 504 eÉÆvÉ 34 L¦¹ :-
ದಿನಾಂಕ 22-05-2017 ರಂದು ಫಿರ್ಯಾದಿ ರಾಖಿ ಗಂಡ ಡಾ:ಕುಮಾರಸ್ವಾಮಿ ಘಂಗೊಡೆ ಸಾ: ಕಮಾಲನಗರ, ಸದ್ಯ: ಔರಾದ(ಬಿ) ರವರ ಅತ್ತೆ ಪಾರ್ವತಿ ಗಂಡ ಶ್ರೀಕಾಂತ ಹಾಗೂ ಮಾವ ಶ್ರೀಕಾಂತಸ್ವಾಮಿ ತಂದೆ ಶಂಕ್ರಯ್ಯಾ ಸ್ವಾಮಿ ಇಬ್ಬರೂ ಫಿರ್ಯಾದಿಯ ಮನೆಗೆ ಬಂದಿರುತ್ತಾರೆ ಹಾಗೂ ಫಿರ್ಯಾದಿಗೆ ಅಪರೇಶನ್ ಆಗಿದ್ದರಿಂದ ಫಿರ್ಯಾದಿಯವರ ತಾಯಿ ಸುನಂದಾ ಗಂಡ ರಾಜಶೇಖರ ರವರು ಸಹ ಮನೆಗೆ ಬಂದಿದ್ದು, ರಾತ್ರಿ ಫಿರ್ಯಾದಿಯ ಮಗಳಾದ ವೇದಾ ಇವಳಿಗೆ ಮಲಗಿಕೊಂಡು ನಿದ್ರೆಮಾಡು ಅಂತ ಹೇಳುತ್ತಿದ್ದಾಗ ವೇದಾ ಇವಳು ಮಲಗಿಕೊಳ್ಳದೆ ಆಟ ಮಾಡುತ್ತಿದ್ದರಿಂದ ಫಿರ್ಯಾದಿಯು ಅವಳಿಗೆ ಮಲಗಿಕೊಳ್ಳು ಅಂತ ಒತ್ತಾಯ ಮಾಡುತ್ತಿದ್ದಾಗ  ಆರೋಪಿತರಾದ ಅತ್ತೆ ಪಾರ್ವತಿ, ಮಾವ ಶ್ರೀಕಾಂತ ಹಾಗೂ ಗಂಡ ಕುಮಾರಸ್ವಾಸಿ ಮೂವರು ಸಾ: ಕಮಲನಗರ, ಸದ್ಯ: ಔರಾದ(ಬಿ) ಇವರೆಲ್ಲರೂ ಫಿರ್ಯಾದಿಗೆ ನೀನು ನಿನ್ನ ಮಗಳಿಗೆ ಏಕೆ ಬೈಯುತ್ತಿದ್ದಿ ಅಂತ ಅವಾಚ್ಯವಾಗಿ ಬೈದಾಗ ಫಿರ್ಯಾದಿಯು ಹೀಗೆಕೆ ಬೈಯುತ್ತಿದ್ದಿರಿ ಅಂತ ಅಂದಿದ್ದಕ್ಕೆ ಅತ್ತೆ ಮಾವ ನನ್ನ ಮಗನಿಗೆ ಬೇರೆ ಹೆಣ್ಣಿನೊಂದಿಗೆ ಮದುವೆ ಮಾಡಿಕೊಟ್ಟರೆ ಸರಿಯಾಗಿರುತ್ತಿತ್ತು ನೀನು ಸರಿಯಾಗಿಲ್ಲ ಯಾವಗಲೂ ಜಗಳ ಮಾಡುತ್ತಿ ಈಗ 9 ತಿಂಗಳಿನಿಂದ ನನ್ನ ಮಗನಿಗೆ ನಿನ್ನ ಸಂಬಳದ ಹಣ ಕೊಟ್ಟಿಲ್ಲ ಅದಕ್ಕು ಜಗಳ ಮಾಡಿರುತ್ತಿ ಎಂದು ಬೈಯುತ್ತಿದ್ದಾಗ ಫಿರ್ಯಾದಿಯು ಅವರಿಗೆ ನೀವು ಈ ರೀತಿ ಬೈಯುವುದು ಸರಿಯಿಲ್ಲ ಅಂದಿದ್ದಕ್ಕೆ ಗಂಡ ಫಿರ್ಯಾದಿಗೆ ನಮ್ಮ ತಂದೆ-ತಾಯಿಯವರಿಗೆ ಎದರು ಮಾತನಾಡುತ್ತಿ ಅಂತ ಅಂದು ತನ್ನ ಕೈಯಿಂದ ಕುತ್ತಿಗೆ ಹಿಡಿದು ದಬಾಯಿಸಿರುತ್ತಾನೆ ಹಾಗೂ ತನ್ನ ಕಾಲಿನಿಂದ ಹೊಟ್ಟೆಯಲ್ಲಿ ಒದ್ದಿರುತ್ತಾನೆ ಹಾಗೂ ಅತ್ತೆ ಮಾವ ಈಕೆಯದು ಹೆಚ್ಚಾಗಿದೆ ಎಂದು ಕಪಾಳ ಮೇಲೆ ಹೊಡೆದು ಮಾನಸಿಕವಾಗಿ ದೈಹಿಕವಾಗಿ ತೊಂದರೆ ಮಾಡುತ್ತಿದ್ದಾಗ ಫಿರ್ಯಾದಿಯವರ ತಾಯಿ ಜಗಳ ಬಿಡಿಸಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 23-05-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ಹಳ್ಳಿಖೇಡ (ಬಿ) ಪೊಲೀಸ್ ಠಾಣೆ ಗುನ್ನೆ ನಂ. 69/2017, ಕಲಂ.  450, 436, 354, 323, 324, 504, 506 ಐಪಿಸಿ :-
ದಿನಾಂಕ 24-05-2017 ರಂದು ಫಿರ್ಯಾದಿ ಸರಸ್ವತಿ ಗಂಡ ಬಸಯ್ಯಾ ಮಗಿ ವಯ: 40 ವರ್ಷ, ಜಾತಿ: ಸ್ವಾಮಿ, ಸಾ: ಬೋತಗಿ ರವರ ಮಕ್ಕಳಾದ ನಾಗರಾಜ ಹಾಗೂ ದಯಾನಂದ ಇಬ್ಬರು ಪಕ್ಕದ ಮನೆಯವರಾದ ಕಾವೇರಿ ಮಠಪತಿ ರವರ ಮನೆಯಲ್ಲಿ ಮಲಗಿಕೊಂಡಿದ್ದು, ಫಿರ್ಯಾದಿ ಮತ್ತು ಫಿರ್ಯಾದಿಯವರ ಗಂಡ ಇಬ್ಬರು ಊಟ ಮಾಡಿಕೊಂಡು ತಮ್ಮ ಮನೆಯಲ್ಲಿ ಮಲಗಿಕೊಂಡಿದ್ದು, ರಾತ್ರಿ ಅಂದಾಜು 1000 ಗಂಟೆಗೆ ಮನೆಯ ಮೇನ್ ಡೋರಿಗೆ ಯಾರೋ ಬಡೆಯುವ ಶಬ್ದ ಕೇಳಿ ಬಂದಿದ್ದು, ಗಂಡನಾದ ಬಸಯ್ಯಾ ಇವರು ಹೋಗಿ ಡೋರ ತೆಗೆಯಲು ಊರಿನ ಆಕಾಶ ತಂದೆ ವಿಜಯಕುಮಾರ ರಡ್ಡಿ ಈತನು ಇದ್ದು, ಒಮ್ಮೆಲೆ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿ ಗಂಡನ ಜೊತೆ ಜಗಳಕ್ಕೆ ಬಿದ್ದು ನಿನಗೆ ಮಸ್ತಿ ಹೆಚ್ಚಾಗಿದೆ ನಿನ್ನ ಮಕ್ಕಳು ಎಲ್ಲಿ ಇದ್ದಾರೆ ನನ್ನ ಜೊತೆ ವಿನಾಃ ಕಾರಣ ಜಗಳ ಮಾಡಿರುತ್ತಾರೆ ಇವತ್ತು ಅವರಿಗೆ ಬಿಡುವದಿಲ್ಲಾ ಅಂತ ಬೈಯುತ್ತಾ ಮನೆ ಒಳಗೆ ಬಂದು ಮನೆಯಲ್ಲಿದ್ದ ವಸ್ತುಗಳುನ್ನು ಬೆಂಕಿ ಹಚ್ಚಿ ನಾಶಪಡಿಸುವ ಉದ್ದೇಶದಿಂದ ತನ್ನ ಜೇಬಿನಲ್ಲಿದ್ದ ಲೈಟರದಿಂದ ಮನೆಯಲ್ಲಿದ್ದ ಗಾದಿ ಹಾಗೂ ಎರಡು ಬೈಕುಗಳಿಗೆ ಬೆಂಕಿ ಹಚ್ಚಿ ಹಾನಿ ಮಾಡಿರುತ್ತಾನೆ, ನಂತರ ಫಿರ್ಯಾದಿಯು ನಮ್ಮ ಮನೆಗೆ ಬಂದು ಹೀಗೆಕೆ ಮಾಡುತ್ತಿರಿ ಅಂತ ಕೇಳಲು ಆರೋಪಿತನಾದ ಆಕಾಶ ತಂದೆ ವಿಜಯಕುಮಾರ ರಡ್ಡಿ ತರನಳ್ಳಿ ವಯ: 25 ವರ್ಷ, ಜಾತಿ: ರಡ್ಡಿ, ಸಾ: ಬೋತಗಿ ಇತನು ಫಿರ್ಯಾದಿಗೆ  ಸರಸ್ವತಿ ನಿನೆನು ಕೇಳುತ್ತಿಯಾ ಅಂತ ಅವಾಚ್ಯಾವಾಗಿ ಬೈದು ಕೈ ಹಿಡಿದು ಏಳೆದು ಅವಮಾನ ಪಡಿಸಿ, ಕೈಯಿಂದ ಅಲ್ಲಲ್ಲಿ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ, ನಂತರ ಜಗಳ ಗುಲ್ಲು ಕೇಳಿ ಅಲ್ಲಿಯೆ ಪಕ್ಕದಮನೆಯಲ್ಲಿದ್ದ ಕಾವೇರಿ ಗಂಡ ಶಂಭುಲಿಂಗ ಮಠಪತಿ, ನಾಗಮ್ಮಾ ಗಂಡ ಮಲ್ಲಯ್ಯಾ ಮಠಪತಿ ಹಾಗೂ ಫಿರ್ಯಾದಿಯವರ ಮಕ್ಕಳಾದ ನಾಗರಾಜ ಮತ್ತು ದಯಾನಂದ ರವರು ಬಿಡಿಸಲು ಬಂದಾಗ ಆಕಾಶ ಈತನು ಫಿರ್ಯಾದಿಯ ಮಕ್ಕಳಿಗೆ ಎಲ್ಲಿ ಬಚ್ಚಿಟ್ಟು ಕುಂತಿರಿ ಅಂತ ಅವಾಚ್ಯವಾಗಿ ಬೈದಿರುತ್ತಾನೆ, ಆಗ ಕಾವೇರಿ ಮತ್ತು ನಾಗಮ್ಮಾ ರವರು ಹೀಗೆಕೆ ಬೈಯುತ್ತಿದ್ದಿ ಅಂತ ಕೇಳಲು ಆಕಾಶ ಈತನು ಕಾವೇರಿ ಇವಳಿಗೆ ಕೈಯಿಂದ ಬಲಗೈಗೆ ಭುಜಕ್ಕ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ, ನಾಗಮ್ಮಾ ಇವಳಿಗೆ ಬಡಿಗೆ ತೆಗೆದುಕೊಂಡು ಬಲಗಡೆ ಹಣೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ, ನಂತರ ನಿಮಗೆ ಮುಂದೆ ಇಲ್ಲಿ ಒಂದು ಸಾರಿ ಜೀವ ಸಹಿತ ಬಿಡುವದಿಲ್ಲಾ ಅಂತ ಜೀವದ ಬೆದರಿಕೆ ಹಾಕಿರುತ್ತಾನೆ, ನಂತರ ಜಗಳದ ಗುಲ್ಲು ಕೇಳಿ ಅಲ್ಲಿಯೆ ಬಾಜು ಮನೆಯಲ್ಲಿದ್ದ ಸಿದ್ದಯ್ಯಾ ತಂದೆ ನಾಗಯ್ಯಾ ಸ್ವಾಮಿ ಹಾಗೂ ಬಸಯ್ಯಾ ತಂದೆ ಶಂಕ್ರಯ್ಯಾ ಮಠಪತಿ ರವರು ಜಗಳ ನೋಡಿ ಬಿಡಿಸಿಕೊಂಡಿರುತ್ತಾರೆ, ನಂತರ ಗಾಯಗೊಂಡ ಫಿರ್ಯಾದಿಗೆ ಮತ್ತು ನಾಗಮ್ಮಾ ರವರಿಗೆ ಚಿಕಿತ್ಸೆ ಕುರಿತು ಹಳ್ಳಿಖೇಡ (ಬಿ) ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.