Police Bhavan Kalaburagi

Police Bhavan Kalaburagi

Monday, December 18, 2017

Yadgir District Reported Crimes Updated on 18-12-2017


                                      Yadgir District Reported Crimes 
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 482/2017 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್;- ದಿನಾಂಕ 17/12/2017 ರಂದು ಬೆಳಗಿನ ಜಾವ 05-30 ಗಂಟೆಗೆ  ಸರಕಾರಿ ತಫರ್ೇ ಫಿರ್ಯಾದಿ ಶ್ರೀ ನಾಗರಾಜ ಜಿ. ಆರಕ್ಷಕ ನಿರೀಕ್ಷಕರು ಶಹಾಪೂರ ಪೊಲೀಸ್ ಠಾಣೆ ರವರು, ಅಕ್ರಮವಾಗಿ ಮರಳು ಲೋಡ ಮಾಡಿಕೊಂಡು ಹೋಗುತಿದ್ದ ಒಂದು ಟ್ಯಾಕ್ಟರ ನಂಬರ ಕೆಎ-33-ಟಿಎ-4823  ನೇದ್ದು ಠಾಣೆಗೆ  ತಂದು ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 17/12/2017 ರಂದು  ಬೆಳಗಿನ ಜಾವ 01-45 ಠಾಣೆಯಲ್ಲಿದ್ದಾಗ ಸುಧಾರಿತ ಗ್ರಾಮ ಗಸ್ತು ಬೀಟ್ ನಂಬರ 19 ಹೈಯ್ಯಾಳ[ಬಿ] ಗ್ರಾಮದ ಭೀಟ್ ಸಿಬ್ಬಂದಿ ಶ್ರೀ ವೆಂಕಟೇಶ ಸಿ.ಪಿ.ಸಿ 134 ರವರು ಫಿರ್ಯಾದಿಯವರಿಗೆ ಹೇಳಿದ್ದೆನೆಂದರೆ ತನ್ನ ಏರಿಯಾದಲ್ಲಿ ಬರುವ ಕೃಷ್ಣಾ  ನದಿಯಲ್ಲಿ ಅಕ್ರಮವಾಗಿ ಟ್ಯಾಕ್ಟರದಲ್ಲಿ ಮರಳು ಸಾಗಾಣಿಕೆ ಮಾಡುತಿದ್ದಾರೆ ಅಂತ ಮಾಹಿತಿಯ ಮೇರೆಗೆ ಸದರಿ ಫಿರ್ಯಾದಿಯವರು ಮತ್ತು ಠಾಣಾ ಸಿಬ್ಬಂಧಿಯವರು ಪಂಚರೊಂದಿಗೆ ಸರಕಾರಿ ಜೀಪ್ ನಂಬರ ಕೆಎ-33-ಜಿ-138 ನೇದ್ದರಲ್ಲಿ ಬೆಳಗಿನ ಜಾವ 03-00 ಗಂಟೆಗೆ ಹತ್ತಿಗೂಡುರ -ಯಾದಗಿರಿ ರೋಡಿನ ಮೇಲೆ ಹೈಯ್ಯಾಳ[ಬಿ] ಗ್ರಾಮದ ಕ್ರಾಸ್ ಹತ್ತಿರ ಹೋಗುತಿದ್ದಾಗ ಹೈಯ್ಯಾಳ[ಬಿ] ಗ್ರಾಮದ ಕಡೆಯಿಂದ ಮೇಲೆ ನಮೂದು ಮಾಡಿದ ಟ್ಯಾಕ್ಟರ ಚಾಲಕ ಮತ್ತು ಮಾಲಿಕರಿಬ್ಬರೂ ಸೇರಿ ಸರಕಾರಕ್ಕೆ ಸೇರಿದ ಮರಳನ್ನು ಲೋಡ ಮಾಡಿಕೊಂಡು ಬರುತಿದ್ದಾಗ ಸದರಿಯವನ್ನು ನಿಲ್ಲಿಸಲು ರೋಡಿನ ಮೇಲೆ ಹೋದಾಗ ವಾಹನ ಚಾಲಕ ಮತ್ತು ಮಾಲಿಕ ಇಬ್ಬರೂ ಸೇರಿ ಪಕ್ಕದ ಜೋಳದ ಹೊಲದಲ್ಲಿ ಓಡಿ ಹೋಗಿದ್ದು, ಸದರಿ ಮರಳು ತುಂಬಿದ ವಾಹನವನ್ನು  ಪಂಚರ ಸಮಕ್ಷಮದಲ್ಲಿ ಬೆಳಗಿನ ಜಾವ 03-20 ಗಂಟೆಯಿಂದ 04-20 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ತಾಬೆಗೆ ತೆಗೆದುಕೊಂಡಿರುತ್ತದೆ,. ಓಡಿ ಹೊದ ಟ್ಯಾಕ್ಟರ ಚಾಲಕ ಮತ್ತು ಮಾಲಿಕರ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 482/2017 ಕಲಂ 379 ಮತ್ತು 44[1] ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಪ್ರಕರಣ ದಾಖಲಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 483/2017.ಕಲಂಃ 379.ಐ.ಪಿ.ಸಿ. 44(1) ಕೆ.ಎಂ.ಎಂ.ಸಿ.ಆರ್.;- ದಿನಾಂಕ 17/12/2017 ರಂದು ಬೆಳಿಗ್ಗೆ 8-30 ಗಂಟೆಗೆ ಸ|| ತ|| ಪಿಯರ್ಾದಿ ಶ್ರೀ ನಾಗಾರಾಜ ಜಿ. ಪಿ.ಐ. ಸಾಹೇಬರು ಶಹಾಪೂರ ಪೊಲೀಸ್ ಠಾಣೆ. ಇವರು ಠಾಣೆಗೆ ಹಾಜರಾಗಿ ಒಂದು ಮರಳು ತುಂಬಿದ ಟ್ರ್ಯಾಕ್ಟರ, ಜಪ್ತಿ ಪಂಚನಾಮೆ, ಹಾಜರಪಡಿಸಿ ವರದಿ ಸಲ್ಲಿಸಿದ ಸಾರಾಂಶ ವೆನೆಂದರೆ ಇಂದು ದಿನಾಂಕ 17-12-2017 ರಂದು ಬೆಳಿಗ್ಗೆ 5-40 ಗಂಟೆಗೆ ನಾನು ಠಾಣೆಯಲ್ಲಿ ಸುದಾರಿತ ಹೋಸ ಗಸ್ತು ಬೀಟ್ ನಂ 19 ಹೈಯಾಳ(ಬಿ) ನ್ನೇದ್ದನ್ನು ಹಂಚಿಕೆಯಾದ ವೆಂಕಟೇಶ ಪಿ.ಸಿ.134, ಇವರು ನನಗೆ ತಿಳಿಸಿದ್ದೆನೆಂದರೆ. ಹೈಯಾಳ (ಬಿ) ಕೃಷ್ಣ ನದಿಯಲ್ಲಿ ಒಂದು ಟ್ರ್ಯಾಕ್ಟರನಲ್ಲಿ ಮರಳು ಕಳ್ಳತನದಿಂದ ಅಕ್ರಮವಾಗಿ ಲೋಡಮಾಡಿಕೊಂಡು ಶಹಾಪೂರ ಕಡೆಗೆ ಬರುತ್ತಿದೆ ಅಂತ ಖಚಿತ ಬಾತ್ಮಿ ಬಂದ ವಿಷಯ ತಿಳಿಸಿದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಸೋಮಲಿಂಗಪ್ಪ ಎ.ಎಸ್.ಐ. ಶರಣಪ್ಪ ಹೆಚ್.ಸಿ. 164, ಜೀಪ ಚಾಲಕ ಅಮಗೊಂಡ ಎ.ಪಿ.ಸಿ.169 ರವರಿಗೆ ಮಾಹಿತಿ ವಿಷಯ ತಿಳಿಸಿ. ಮಾನ್ಯ ಎಸ್.ಪಿ. ಸಾಹೇಬರು ಯಾದಗಿರಿ ರವರ ಮಾರ್ಗದರ್ಶನದಲ್ಲಿ ದಾಳಿ ಕುರಿತು ಹೋಗುವ ಸಂಬಂದ ಶರಣಪ್ಪ ಹೆಚ್.ಸಿ.164 ರವರ ಮುಖಾಂತರ ಇಬ್ಬರೂ ಪಂಚರಾದ 1] ಶ್ರೀ ಶರಣು ತಂದು ಶಿವಪ್ಪ ಅಂಗಡಿ ವ|| 26 ಉ|| ಕೂಲಿ ಕೆಲಸ ಜಾ|| ಲಿಂಗಾಯತ ಸಾ|| ಹಳಿಸಗರ ಶಹಾಪೂರ  2] ಅಂಬಲಪ್ಪ ತಂದೆ ಭೀಮಪ್ಪ ಐಕೂರ ವ|| 48 ಉ|| ಕೂಲಿ ಕೆಲಸ ಸಾ|| ದೇವಿನಗರ ಶಹಾಪೂರ ಇವರಿಗೆ ಕರೆದು ಕೊಂಡು ಬಂದು ಬೇಳಿಗ್ಗೆ 5-50 ಗಂಟೆಗೆ ಹಾಜರ ಪಡಿಸಿದ್ದು ಸದರಿಯವರಿಗೆ ಮಾಹಿತಿ ವಿಷಯ ತಿಳಿಸಿ ಸದರಿ ದಾಳಿಯ ಕಾಲಕ್ಕೆ ಪಂಚರಾಗಲು ಕೇಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು.
       ದಾಳಿ ಕುರಿತು ಎಲ್ಲರು ಕೂಡಿ 5-55 ಗಂಟೆಗೆ ಠಾಣೆಯ ಜೀಪ್ ನಂ ಕೆ.ಎ-33-ಜಿ-138 ನ್ನೇದ್ದರಲ್ಲಿ ಹೊರಟು ಶಹಾಪೂರ-ಸುರಪೂರ ಮುಖ್ಯ ರಸ್ತೆಯ ವಿಬೂತಿಹಳ್ಳಿಯಹತ್ತಿರದ ತಿಪನಟಿಗಿ ಕ್ರಾಸ್ ಹತ್ತಿರ ರೋಡಿನ ಮೇಲೆ ನಾನು ಮತ್ತು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ನಿಗಾಮಾಡುತ್ತ ಬೆಳಿಗ್ಗೆ 6-10 ಗಂಟೆಗೆ ನಿಂತಾಗ ಹತ್ತಿಗುಡುರ ಗ್ರಾಮದ ಕಡೆಯಿಂದ ಬೆಳಿಗ್ಗೆ 6-20 ಗಂಟೆಗೆ ಒಂದು ಮರಳು ತುಂಬಿದ ಟ್ರ್ಯಾಕ್ಟರ ರೋಡಿನ ಮೇಲೆ ಬರುತ್ತಿರುವದನ್ನು ನೋಡಿ ಅದನ್ನು ನಾನು ಮತ್ತು ಸಿಬ್ಬಂದಿಯವರೊದಿಗೆ ಕೈಮಾಡಿ ನಿಲ್ಲಿಸಿ ಸದರಿ ಟ್ರ್ಯಾಕ್ಟರ ಚಾಲಕನಿಗೆ ಮರಳು ಎಲ್ಲಿಂದ ತುಂಬಿಕೊಂಡು ಬಂದಿರುವಿ ಎಂದು ಕೇಳಿದಾಗ ಟ್ರ್ಯಾಕ್ಟರ ಚಾಲಕನು ತಮ್ಮ ಮಾಲಿಕರು ಹೈಯಾಳ (ಬಿ) ಕೃಷ್ಣಾ ನದಿಯಲ್ಲಿ ಕಳ್ಳತನದಿಂದ ತುಂಬಿಕೊಂಡು ಶಹಾಪೂರಕ್ಕೆ ತಂದು ಮಾರಾಟ ಮಾಡಲು ತಿಳೀಸಿದರು ಅದರ ಪ್ರಕಾರ ನಾನು ಟ್ರ್ಯಾಕ್ಟರಲ್ಲಿ ಮರಳನ್ನು ತುಂಬಿಕೊಂಡು ಹೋರಟಿರುತ್ತೆನೆ ಅಂತ ತಿಳಿಸಿದನು ಆಗ ನಾನು ಮರಳು ಸಾಗಾಣಿಕೆ ಪರವಾನಗಿ ಪತ್ರ ತೆಗೆದು ಕೊಂಡು ಬರಲು ಹೇಳಿದಾಗ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನಲ್ಲಿ ಮೇಲೆ ಕೇಳಗೆ ನೋಡಿದಹಾಗೆ ಮಾಡಿ ಟ್ರ್ಯಾಕ್ಟರನಿಂದ ಇಳಿದು ವಾಹನ ಬಿಟ್ಟು ಓಡಿ ಹೋದನು ಹಾಗ ನಾವು ಹಿಂದೆ ಬೆನ್ನು ಹತ್ತಿ ಹಿಡಿಯಲು ಪ್ರಯತ್ನಿಸಿದ್ದಾಗ ಸಿಕ್ಕಿರುವದಿಲ್ಲಾ. ಸದರಿ ಟ್ರ್ಯಾಕ್ಟರನ್ನು ಬೆಳಿಗ್ಗೆ 6-30 ಗಂಟೆಗೆ ಪಂಚರ ಸಮಕ್ಷಮ ಪರಿಸಿಲಿಸಿ ನೋಡಲಾಗಿ ಕೆಂಪು ಬಣ್ಣದ ಮಾಸ್ಸಿ ಫರಗುಷನ್ 241 ಡಿ.ಐ. ಕಂಪನಿಯ ಟ್ರ್ಯಾಕ್ಟರ ನಂಬರ ಇರುವದಿಲ್ಲಾ ಅದರ ಚೆಸ್ಸಿ ನಂ 964882-ಎಎಎಟಿ. ಇಂಜಿನ್ ನಂ ಎಸ್325.1 ಎಫ್35332 ಅ:ಕಿ: 100000=00 ರೂ ಸದರಿ ಟ್ರ್ಯಾಕ್ಟರಕ್ಕೆ ಹೊಂಡಿಕೊಂಡು ಒಂದು ಕೆಂಪು ಬಣ್ಣದ ಟ್ರ್ಯಾಲಿ ಇದ್ದು ಅದರ ನಂಬರ ಪ್ಲೆಟ್ ಇರುವದಿಲ್ಲಾ ಅದರ ಅ:ಕಿ: 50000=00 ರೂ ಮತ್ತು ಟ್ರ್ಯಾಲಿಯಲ್ಲಿ ಅಂದಾಜು 1 ಬ್ರಾಸ್ ಮರಳು ಇದ್ದು ಅದರ ಅ:ಕಿ:1500=00 ರೂ ಇರುತ್ತದೆ. ಸದರಿ ಟ್ರ್ಯಾಕ್ಟರ ಚಾಲಕನು ಸರಕಾರದಿಂದ ಮರಳು ಸಾಗಾಣಿಕೆ ಪರವಾನಗಿ ಪತ್ರ ಇಲ್ಲದೆ ಮರಳನ್ನು ಕಳತನದಿಂದ ಅಕ್ರಮವಾಗಿ ತುಂಬಿಕೋಂಡು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಪಟ್ಟಿದ್ದರಿಂದ ಪಂಚರ ಸಮಕ್ಷಮ ಬೆಳಿಗ್ಗೆ 6-30 ಎ.ಎಮ್. ದಿಂದ 7-30 ಎ.ಎಮ್. ವರೆಗೆ ಜಪ್ತಿ ಪಮಂಚನಾಮೆ ಮೂಲಕ ನಾನು  ಜಪ್ತಿ ಪಡಿಸಿಕೊಂಡು ಸದರಿ ಟ್ರ್ಯಾಕ್ಟರನ್ನು ಬೆರೆ ಚಾಲಕನ ಸಹಾಯ ದಿಂದ ಠಾಣೆಗೆ ಬೆಳಿಗ್ಗೆ 8-00 ಎ.ಎಮ್.ಕ್ಕೆ ಬಂದು. ವರದಿಯನ್ನು ತಯ್ಯಾರಿಸಿ ಟ್ರ್ಯಾಕ್ಟರ ಚಾಲಕ ಮತ್ತು ಮಾಲಿಕನ ವಿರುದ್ದ ಮುಂದಿನ ಕ್ರಮ ಕೈಕೋಳ್ಳಲು 8-30 ಎ.ಎಂ.ಕ್ಕೆ ಸ|| ತ|| ಪಿಯರ್ಾದಿದಾರನಾಗಿ ವರದಿ ಸಲ್ಲಿಸಿದ್ದು. ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 483/2017 ಕಲಂ 379. ಐ.ಪಿ.ಸಿ. ಮತ್ತು 44(1) ಕೆ.ಎಂ.ಎಂ.ಸಿ.ಆರ್ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡೆನು.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 297/2017 ಕಲಂ: 143, 147, 148. 323, 324, 504, 506 ಸಂ: 149 ಐಪಿಸಿ;- ದಿನಾಂಕ 17-12-2017 ರಂದು 00-15 ಎ.ಮ್ ಕ್ಕೆ ಯಾದಗಿರಿ ಸಕಾರಿ ಆಸ್ಪತ್ರೆಯಿಂದ ದೂರವಾಣಿ ಮೂಲಕ ಎಮ್.ಎಲ್.ಸಿ ವಸೂಲಾಗಿದ್ದರಿಮದ ಆಸ್ಪತ್ರೆಗೆ ಬೇಟಿ ಕೊಟ್ಟು ಅಲ್ಲಿ ಉಪಚಾರ ಪಡೆಯುತ್ತಿದ್ದ ಶ್ರೀ ಬಸವರಾಜ ತಂದೆ ನರಸಪ್ಪಾ ಹೋನಗೇರಿ ವಯಾ:24 ಜಾ: ಕಬ್ಬೇರ ಉ: ಒಕ್ಕಲುತನ ಸಾ: ಹೋನಗೇರಾ ಹಾ:ವ: ಯರಗೋಳ ಇವರು ಹೇಳಿಕೆ ಫಿರ್ಯಾಧಿ ನೀಡಿದ್ದು ಸಾರಾಂಶವೆನೆಂದರೆ ನಮ್ಮ ಹೊಲಗಳ ಪಕ್ಕದಲ್ಲಿ ಎಸ್.ಕೆ.ಎಸ್ ಹೆಸರಿನ ಕ್ರಷರ್ ಮಶೀನ್ ಇದ್ದು ಈ ಮಷೀನದಲ್ಲಿ ಸುಮಾರು 40 ರಿಂದ 50 ಜನರು ಕೆಲಸ ಮಾಡುತ್ತಾರೆ ಇವರೆಲ್ಲಾ ಆಂದ್ರಪ್ರದೇಶ ಮತ್ತು ಬಿಹಾರ ರಾಜ್ಯದವರಾಗಿರುತ್ತಾರೆ ಇವರೆಲ್ಲರೂ ದಿನಾಲು ರಾತ್ರಿ ಸಮಯದಲ್ಲಿ ಕುಡಿದು ಬಂದು ಹೊಲಸು ಶಬ್ದಗಳಿಂದ ಬೈದಾಡುವುದು ,ಚೀರಾಡುವುದು ಮಾಡುವುದು ಮಾಡುತ್ತಾ ಬಂದಿರುತ್ತಾರೆ. ಆವರಿಗೆ ನಾವು ಈಮೊದಲು ಎರಡು ಸಲ ನಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ದಾರೆ ಈ ರೀತಿ ಹೊಲಸು ಶಬ್ದಗಳು ಬಳಸಿ ಮಾತಾಡುವುದು ಸರಿಯಲ್ಲಾ ಅಂತಾ ಹೇಳುತ್ತಾ ಬಂದಿದ್ದರೂ ಕೂಡಾ ಅವರು ನಮ್ಮ ಮಾತು ಕೇಳದೇ ಅದನ್ನೆ ಮುಂದುವರೆಸಿಕೊಂಡು ಬಂದಿದ್ದರು.
     ಹೀಗಿದ್ದು ನಿನ್ನೆ ದಿನಾಂಕ 16-12-2017 ರಂದು ರಾತ್ರಿ 8-30 ಗಂಟೆ ಸುಮಾರಿಗೆ ನಾನು ಹಾಗೂ ನಮ್ಮ ಅಳಿಯ ಮಲ್ಲಪ್ಪಾ ತಂದೆ ಸಾಬಣ್ಣಾ, ಹಾಗೂ ಪಕ್ಕದ ಹೋಲದವರಾದ ಬಸವರಾಜ ತಂದೆ ಭೀಮರಥ ಭೀಮನಳ್ಳೀ, ನಾಗರಾಜ ತಂದೆ ಸಂಜು ಭೀಮಶ್ಯಾ, ಯಮನಪ್ಪಾ ತಂದೆ ಶರಣಪ್ಪಾ ಬಂದಳ್ಳಿ. ಶಿವಯೋಗಿ ತಂದೆ ಹಣಮಂತ ಜೋಗಿ ಹಾಗೂ ನಿಂಗಪ್ಪಾ ತಂದೆ ಚಂದಪ್ಪಾ ಜೋಗಿ ಎಲ್ಲರೂ ನಮ್ಮ ಹೋಲದಲ್ಲಿರು ಮನೆಯ ಹತ್ತಿರ ಮಾತಾಡುತ್ತಾ ಕುಳಿತ್ತಿದ್ದಾಗ ಅದೇ ವೇಳೆಗೆ ಬೀಹಾರ ರಾಜ್ಯದ ಸುಮಾರು 12 ರಿಂದ 15 ಜನರು ರಾಂಡಕಿ, ಚೀನಾಲಿಕಿ ಚೋದು ಅಂತಾ ಈ ತರಹ ಹೊಲಸು ಬಾಚೆಗಳನ್ನು ಬಳಸಿ ಜೋರಾಗಿ ಚೀರಿ ಮಾತಾಡುತ್ತಿದ್ದರು. ಆಗ ನಾವೇಲ್ಲರೂ ಅಲ್ಲಿಯೇ ಇದ್ದ ಲಖಾನ ಧಮರ್ಾನಾಯಕ ತಾಂಡಾ ಇತನ ಹೊಲದ ಹತ್ತಿರ ಹೋಗಿ ಅವರಿಗೆ ಸಾವಕಾಶ ಮಾತಾಡಿರಿ ನಮ್ಮ ಮನೆಯಲ್ಲಿ ಹೆಣ್ಣುಮಕ್ಕಳಿದ್ದಾರೆ ಕೇಳಲಾರದಂತಹ ಪದಗಳು ಉಪಯೋಗಿಸುತ್ತಿದ್ದಿರಿ ಇದು ಸರಿಯಲ್ಲಾ ಅಂತಾ ಅಂದಾಗ ಆ ಎಲ್ಲಾ 12 ರಿಂದ 15 ಜನರು ಕೈಯ್ಯಲ್ಲಿ ರಾಡು ಹಾಗೂ ಬಡಿಗೆ ಹಿಡಿದುಕೊಂಡು ಬಂದರು ಅವರು ಹೆಸರು ನಮಗೆ ಗೊತ್ತಿಲ್ಲಾ. ಅವರು ಬಂದವರೇ ಏ ಸಾಲೊಂಕೋ ಬಹುತ್ ಹೋಗಯಾ ಇನಕು ಐಸಾ ನಹಿ ಛೋಡೋ ಇಸಿ ಮಾ ಕಾ ಅಂತಾ ಬೈಯ್ಯುತ್ತಾ ಬಂದವರೆ ನನಗೆ ಒಬ್ಬನು ತನ್ನ ಕೈಯ್ಯಲ್ಲಿದ್ದ ಕಬ್ಬಿಣದ ರಾಡಿನಿಂದ ತಲೆಯ ಹಿಂದೆ ಹೊಡೆದು ರಕ್ತಗಾಯ ಮಾಡಿದನು. ಮತ್ತು 3-4 ಜನರು ಕೈಯಿಂದ ಹೊಟ್ಟೆಗೆ ಬೆನ್ನಿಗೆ ಹೊಡದರು. ಆಗ ನನಗೆ ಹೊಡೆಯುವುದನ್ನು ಬಿಡಿಸಲು ನಮ್ಮ ಅಳಿಯ  ಮಲ್ಲಪ್ಪಾ ತಂದೆ ಸಾಬಣ್ಣಾ ಜೋಗಿ ಇತನು ಅಡ್ಡ ಬಂದಾಗ ಅವನಿಗೂ ಯಾರೋ ರಾಡಿನಿಂದ ತಲೆಯ ಹಿಂದೆ ಹೊಡೆದು ರಕ್ತಗಾಯ ಮಾಡಿದನು. ಮತ್ತು ಅವನಿಗೂ 3-4 ಜನರು ಕ್ಯಯಿಂದ ಹೊಟ್ಟೆಗೆ ಕೈಮುಷ್ಟಿ ಮಾಡಿ ಹೊಡೆದರು. ಅಲ್ಲಿಯೇ ಇದ್ದ ಬಸವರಾಜ ತಂದೆ ಬೀಮರಥ ಭೀಮನಳ್ಳಿ ಇತನು ಜಗಳಾ ಬಿಡಿಸುತ್ತಿದ್ದಾಗ ಆತನಿಗೆ ಯಾವನೋ ಒಬ್ಬ ಬಡಿಗೆಯಿಂದ ಎಡಮೊಳಕಾಲು ಮೇಲೆ ಹೊಡೆದು ರಕ್ತಗಾಯ ಮಾಡಿದನು. ಮತ್ತು 2-3 ಜನರು ಕುತ್ತಿಗೆ ಹಿಡಿದು ಕೈಮುಷ್ಟಿ ಮಾಡಿ ಹೊಟ್ಟೆಗೆ ಬೆನ್ನಿಗೆ ಕೈಮುಷ್ಟಿ ಮಾಡಿ ಮನಬಂದಂತೆ ಹೊಡೆದರು. ಆಗ ನಮ್ಮ ಜೊತೆ ಇದ್ದ ನಾಗರಾಜ ತಂದೆ ಸಂಜು ಭೀಮಶ್ಯಾ, ಯಮನಪ್ಪಾ ತಂದೆ ಶರಣಪ್ಪಾ ಬಂದಳ್ಳಿ. ಶಿವಯೋಗಿ ತಂದೆ ಹಣಮಂತ ಜೋಗಿ ಹಾಗೂ ನಿಂಗಪ್ಪಾ ತಂದೆ ಚಂದಪ್ಪಾ ಜೋಗಿ ಎಲ್ಲರೂ ಕೂಡಿ ನಮಗೆ ಹೊಡೆಯುವುದನ್ನು ಬಿಡಿಸಿಕೊಂಡರು. ಆಗ ಅವರು ಔರ ಎಕ ಬಾರ ಮೀಲೋ  ತುಮ್ ಸಬಕೋ ಖಲಾಸ ಕರದುಂಗಾ ಅಂತಾ ನಮಗೆ ಜೀವದ ಬೆದರಿಗೆ ಹಾಕಿ ಅಲ್ಲಿಂದ ಹೋದರು. ಸದರಿ ಘಟನೆ ಅಲ್ಲಿಯೇ ಇದ್ದ ಲೈಟಿನ ಬೇಳಕಿನಲ್ಲಿ ಜರುಗಿದೆ. ನಂತರ ಗಾಯ ಹೊಂದಿದ ನಾವುಗಳು ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೆವೆ. ಈ ರೀತಿಯಾಗಿ ಆಕ್ರಮಕೂಟ ಕಟ್ಟಿಕೊಂಡು ನಮಗೆ ರಾಡು ಬಡಿಗೆಯಿಂದ ಹೊಡೆಬಡಿ ಮಾಡಿ ರಕ್ತಗಾಯಗೊಳಿಸಿ ಜೀವದ ಭಯ ಹಾಕಿದ ಮೇಲ್ಕಂಡ ಸುಮಾರು 12 ರಿಂದ 15 ಜನರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ನಮಗೆ ಹೊಡೆಬಡಿ ಮಾಡಿದವರನ್ನು ನೋಡಿದಲ್ಲಿ ಗುತರ್ಿಸುತ್ತೆನೆ ಅಂತಾ ನೀಡಿದ ಹೇಳಿಕೆ ಫಿರ್ಯಾಧೀಯನ್ನು ಪಡೆದುಕೊಂಡು ಮರಳಿ 1-30 ಎ.ಎಮ್ ಕ್ಕೆ ಠಾಣೆಗೆ ಬಂದು ಫಿರ್ಯಾಧಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 297/2017 ಕಲಂ 143, 147, 148. 323, 324, 504, 506 ಸಂ: 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡನು.
                                                                             ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 298/2017 ಕಲಂ: 279,337,338 ಐಪಿಸಿ;-ದಿನಾಂಕ 17-12-2017 ರಂದು 2-15 ಪಿ.ಎಮ್ ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ದೂರವಾಣಿ ಮೂಲಕ ಎಮ್.ಎಲ್.ಸಿ ವಸೂಲಾಗಿದರಿಂದ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬೇಟಿ ಕೊಟು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಶ್ರೀಮತಿ ಮೋತಿಬಾಯಿ ಗಂಡ ಲಚ್ಚ್ಯಾ ಚವ್ಹಾಣ ವಯಾ: 55 ಜಾ: ಲಂಬಾಣಿ ಉ: ಕೂಲಿಕೆಲಸ ಸಾ: ಥಾನುನಾಯಕ ತಾಂಡಾ ತಾ: ಯಾದಗಿರಿ ಇವರು ಹೇಳಿಕೆ ಫಿರ್ಯಾಧಿ ನೀಡಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 17-12-2017 ರಂದು ನಾಲವಾರ ಗ್ರಾಮದ ಸಂತೆ ಇದ್ದ ಕಾರಣ ಸಂತೆ ಮಾಡಿಕೊಂಡು ಬರುವ ಸಲುವಾಗಿ 1) ನಾನು ಹಾಗೂ ನನ್ನ ಮೊಮ್ಮಗನಾದ 2) ರಾಕೇಶ ತಂದೆ ಶಂಕರ ವಯಾ: 10 ಮತ್ತು ನಮ್ಮ ತಂಡಾದವರಾದ 3) ಬುಡ್ಡಿಬಾಯಿ ಗಂಡ ಜೇಮ್ಲಾ ಚವ್ಹಾಣ, 4) ಕಮಲಿಬಾಯಿ ಗಂಡ ವಾಚು ರಾಠೋಡ 5) ಜನ್ನಿಬಾಯಿ @ ಜನ್ನಿಬಾಯಿ ಗಂಡ ಚಂದ್ರ್ಯಾ ಜಾಧವ 6) ಜಮಲಿಬಾಯಿ @ ಜನ್ನಿ ಗಂಡ ಲಕ್ಷ್ಮಣ ರಾಠೊಡ 7) ವೆಂಕಟೇಶ ತಂದೆ ಹರಿಶ್ಚಂದ್ರ ರಾಠೋಡ ಎಲ್ಲರೂ ಕೂಡಿ ನನ್ನ ಮಗ ಶಂಕರ ಇತನ ಟಂಟಂ ನಂ: ಕೆ.ಎ-33/8778 ನೆದ್ದರಲ್ಲಿ ಕುಳಿತುಕೊಂಡು ನಾವಾರ ಗ್ರಾಮದ ಕಡೆಗೆ ಹೊರಟೇವು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಯರಗೋಳ- ನಾಲವಾರ ರೊಡಿನ ಮೇಲೆ ಹತ್ತಿ ಕಾಟನ ಮಶೀನ ಹತ್ತಿರ ಬಂದಾಗ ಅದೇ ವೇಳಗೆ ಎದುರುಗಡೆಯಿಂದ ಒಂದು ಬುಲೇರೋ ಜೀಪನ್ನು ಅದರ ಚಾಲಕನು ತನ್ನ ಜೀಪನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಬಂದು ತನ್ನ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡು ನಮ್ಮ ಟಂ ಟಂ ಕ್ಕೆ ಜೋರಾಗಿ ಡಿಕ್ಕಿಪಡಿಸಿದನು. ಆಗ ಸ್ವಲ್ಪ ಸುಧಾರಿಸಿಕೊಂಡು ನೋಡಲಾಗಿ 1) ನನಗೆ ಎಡಗಾಲಿ ಮೊಳಕಾಲಿಗೆ, ಬಾಯಿಗೆ ಮತ್ತು ಎಡಕಳಕೈಗೆ ಗುಪ್ತಗಾಯಗಳಾಗಿದ್ದವು. ನನ್ನ ಮೊಮ್ಮಗನಾದ 2) ರಾಕೇಶ ತಂದೆ ಶಂಕರ ಇತನಿಗೆ ಬಲಗೈ ಹಸ್ತಕ್ಕೆ, ತಲೆಗೆ ರಕ್ತಗಾಯ ಮತ್ತು ಎಡಭುಜಕ್ಕೆ ತರಚಿದ ಗಾಯಗಳಾಗಿದ್ದವು.  3) ಬುಡ್ಡಿಬಾಯಿ ಗಂಡ ಜೇಮ್ಲಾ ಚವ್ಹಾಣ, ಇವಳಿಗೆ ಮೂಗಿಗೆ , ಬಲಮೊಳಕಾಲಿಗೆ ಗುಪ್ತಗಾಯಗಳಾಗಿದ್ದವು 4) ಕಮಲಿಬಾಯಿ ಗಂಡ ವಾಚು ರಾಠೋಡ ಇವಳಿಗೆ ಎಡತೊಡಗೆ, ಬಾಯಿಗೆ ತರಚಿದ ಗಾಯಗಳಾಗಿದ್ದವು. 5) ಜಮಲಿಬಾಯಿ @ ಜನ್ನಿಬಾಯಿ ಗಂಡ ಚಂದ್ರ್ಯಾ ಜಾಧವ ಇವಳಿಗೆ ಎಡಪಕ್ಕೆಗೆ ಬೆನ್ನಿಗೆ ತರಚಿದ ಗಾಯವಾಗಿ ಬೆನ್ನಿಗೆ ಎಡಸೊಂಟಕ್ಕೆ ಭಾರಿ ಗುಪ್ತಗಾಯಗಳಾಗಿದ್ದವು. 6) ಜಮಲಿಬಾಯಿ @ ಜನ್ನಿ ಗಂಡ ಲಕ್ಷ್ಮಣ ರಾಠೊಡ ಇವಳಿಗೆ ಗದ್ದಕ್ಕೆ ರಕ್ತಗಾಯ ಮತ್ತು ತಲೆಗೆ ಗುಪ್ತಗಾಯಳಾಗಿದ್ದವು. ಟಂ ಟಂ ನಡೆಸುತ್ತಿದ್ದ ನನ್ನ ಮಗ 7) ವೆಂಕಟೇಶ ತಂದೆ ಹರಿಶ್ಚಂದ್ರ ರಾಠೋಡ ಇತನಿಗೆ ಎಡಗಾಲಿಗೆ ಗುಪ್ತಗಾಐವಾಗಿತ್ತು 8) ಶಂಕರ ತಂದೆ ಲಚ್ಚ್ಯಾ ಚವ್ಹಾಣ ಇತನಿಗೆ ಎರಡೂ ಕಾಲುಗಳಿಗೆ ಮತ್ತು ಎದೆಗೆ ಗುಪ್ತಗಾಯಗಳಾಗಿದ್ದವು. ನಂತರ ನಮಗೆ ಡಿಕ್ಕಿಪಡಿಸಿದ ಬುಲೆರೋ ಜೀಪ ನಂಬರ ನೋಡಲಾಗಿ ಅದರ ನಂ:   ಕೆಎ-32/ಎನ್-1591 ಅಂತಾ ಮತ್ತು ಅದರ ಚಾಲಕನ ಹೆಸರು ಆನಂದ ರಾಠೊಡ ಅಂತಾ ಗೊತ್ತಾಯಿತು.ನಂತರ ಗಾಯಹೊಂದಿದ ನಾವೆಲ್ಲರೂ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಇರುತ್ತದೆ. ಸದರಿ ಘಟನೆ ಬುಲೇರೋ ಜೀಪ ನಂ: ಕೆಎ-32/ಎನ್-1591 ನೇದ್ದರ ಚಾಲಕನಾದ ಆನಂದ ರಾಠೊಡ ಇತನ ನಿರ್ಲಕ್ಯತನದಿಂದ ಜರುಗಿದ್ದು ಆತನ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ನೀಡಿದ ಹೇಳಿಕೆ ಫಿರ್ಯಾಧೀಯನ್ನು ಪಡೆದುಕೊಂಡು ಮರಳಿ 3-30 ಪಿ.ಎಮ್ ಕ್ಕೆ ಠಾಣೆಗೆ ಬಂದು ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 298/2017 ಕಲಂ 279, 337, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 358/2017 ಕಲಂ: 341, 323, 324, 354, 504, 506 ಸಂಗಡ 34 ಐಪಿಸಿ;- ದಿನಾಂಕಃ 17/12/2017 ರಂದು 10-15 ಪಿ.ಎಮ್ ಕ್ಕೆ ಶ್ರೀಮತಿ ಮರೆಮ್ಮ ಗಂಡ ಹೈಯ್ಯಾಳಪ್ಪ ಸಾ: ರತ್ತಾಳ ಇವರು ಠಾಣೆಗೆ ಹಾಜರಾಗಿ ಫಿಯರ್ಾದಿ ಅಜರ್ಿ ಹಾಜರ ಪಡಿಸಿದ್ದರ ಸಾರಾಂಶವೆನೆಂದರೆ, ಇಂದು ನಾನು ಮತ್ತು ನನ್ನ ಅಣ್ಣನ ಹೆಂಡತಿ ರೇಣುಕಾ ಇಬ್ಬರೂ ರಂಗಂಪೇಟದಿಂದ ರತ್ತಾಳ ಗ್ರಾಮಕ್ಕೆ ಹೋಗುವಾಗ ಗೋಣಿ ಭೀಮರಾಯ ಗುಡಿಯ ಹತ್ತಿರ 5-45 ಪಿ.ಎಮ್ ಸುಮಾರಿಗೆ 1) ಯಲ್ಲಪ್ಪ ತಂದೆ ಭೀಮಣ್ಣ ಜ್ವಾಕೆ, 2) ವನಿಕೇರಪ್ಪ @ ಸ್ವಾಮಿ ತಂದೆ ಮಾನಪ್ಪ ಹಾಗು 3) ಹಣಮಂತ ತಂದೆ ಭಾಗಪ್ಪ ಗುಡ್ಡಕಾಯಿ ಮೂವರು ಸಾ: ರತ್ತಾಳ ಇವರು ನಮಗೆ ತಡೆದು ನಿಲ್ಲಿಸಿ ಏ ಸೂಳೆ ನಿನ್ನ ಮೈ ಮೇಲೆ ಇರುವ ಬಂಗಾರ ಕೊಡು, ಇಲ್ಲವೆಂದರೆ ನಿನ್ನನ್ನು ಸಾಯಿಸುತ್ತೇನೆಂದು ಹೇಳುತ್ತ ನನ್ನ ಕಪಾಳಕ್ಕೆ ಹೊಡೆದನು. ನನ್ನ ಅತ್ತಿಗೆ ರೇಣುಕಮ್ಮ ಗಂಡ ಸಾಯಬಣ್ಣ ದೊಡ್ಮನಿ ಇವಳಿಗೂ ಮನಬಂದಂತೆ ಹೊಡೆದರು. ನಾವು ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಹೋದಾಗ 6-15 ಪಿ.ಎಮ್ ಪುನಃ ಮನೆಗೆ ಬಂದು ಏ ಸೂಳೇರೆ ನಮ್ಮ ಕೈಯಿಂದ ತಪ್ಪಿಸಿಕೊಂಡು ಎಲ್ಲಿಗೆ ಓಡಿ ಹೋಗುತ್ತೀರಿ, ಇವತ್ತು ನಿಮ್ಮನ್ನು ಸಾಯಿಸಿ ಬಿಡುತ್ತೇವೆ ಎನ್ನುತ್ತ ಬಡಿಗೆ, ಕಲ್ಲು ತಗೆದುಕೊಂಡು ಹೊಡೆಯಲು ಬಂದರು. ಆ ಸಮಯದಲ್ಲಿ ನನ್ನ ತಂದೆ ತಿಮ್ಮಯ್ಯ ತಂದೆ ದ್ಯಾವಪ್ಪ ದೊಡ್ಮನಿ ಇವರು ಬಂದು ಯಾಕಪ್ಪ ನನ್ನ ಮಗಳು ಮತ್ತು ಸೊಸೆಯನ್ನು ಸಾಯಿಸಲು ಬಂದಿದ್ದೀರಾ ಎಂದು ಕೇಳಿದಾಗ, ನನ್ನ ತಂದೆಯವರಿಗೂ ಸಹ ಬಡಿಗೆ ಹಾಗು ಕಲ್ಲಿನಿಂದ ಹೊಡೆದು ಬೆನ್ನಿಗೆ ಗಾಯಪಡಿಸಿರುತ್ತಾರೆ. ಕಾರಣ ಸದರಿಯವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ವಗೈರೆ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 358/2017 ಕಲಂ. 341, 323, 324, 354, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 

BIDAR DISTRICT DAILY CRIME UPDATE 18-12-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 18-12-2017

ªÉÄúÀPÀgÀ ¥ÉưøÀ oÁuÉ AiÀÄÄ.r.Dgï £ÀA. 12/2017, PÀ®A. 174 ¹.Dgï.¦.¹ :-
ದಿನಾಂಕ 16-12-2017 ರಂದು ಫಿರ್ಯಾದಿ ಅನುಸಯಾ ಗಂಡ ಕಲ್ಲಪ್ಪ ಮೇತ್ರೆ ವಯ: 45 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಸಾಯಗಾಂವ ತಾಂಡಾ ರವರ ಗಂಡನಾದ ಕಲ್ಲಪ್ಪ ತಂದೆ ಮಾರುತಿ ಮೇತ್ರೆ ವಯ: 52 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಸಾಯಗಾಂವ ತಾಂಡಾ ರವರು ದನ ಮೇಯಿಸಲು ಹೋಲಕ್ಕೆ ಹೋಗಿ ದನಗಳು ಮೇಯಿಸಿ, ಹೊಲದಲ್ಲಿ ಮುತ್ತುಗ ಗಿಡಕ್ಕೆ ದನಗಳು ಕಟ್ಟಿ, ನಂತರ ಗೋವಿಂದರಾವ ತಂದೆ ಯಾದವರಾವ ಬಾಬಳಸುರೆ ಸಾ: ಬಸವನವಾಡಿ ರವರ ಹೊಲದಲ್ಲಿರುವ ಬಾವಿಯಲ್ಲಿ ನೀರು ಕುಡಿಯಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ಮೃತಪಟ್ಟಿರುಬಹುದು, ಸದರಿ ಘಟನೆ ಆಕಸ್ಮಿಕವಾಗಿದ್ದು ಯಾರ ಮೇಲೆ ಯಾವದೇ ರೀತಿಯ ಸಂಶಯ ದೂರು ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-12-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.