Police Bhavan Kalaburagi

Police Bhavan Kalaburagi

Friday, April 27, 2018

KALABURAGI DISTRICT REPORTED CRIMES


ಪತ್ರಿಕಾ ಪ್ರಕಟಣೆ :
ಮಾನ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಒಳಾಡಳಿತ ಇಲಾಖೆ ಬೆಂಗಳೂರು ರವರ ಕಛೇರಿ ಆಧೇಶ ಸಂಖ್ಯೆ ಹೆಚ್.ಡಿ -32/ಎಸ್.ಎಸ್.ಟಿ/201807ದಿನಾಂಕ 07-04-2018 ರ ಆಧೇಶದ ಅನ್ವಯ  ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ – 2018 ರ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಎಲ್ಲಾ ವಿಧಾನ ಸಭಾ ಮತಕ್ಷೆತ್ರಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಯಾವುದಾದರು ದೂರುಗಳು ಇದ್ದಲ್ಲಿ ಪ್ರತ್ಯೇಕವಾಗಿ ಸ್ಥಾಪಿಸಿರುವ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 08472 – 254425 ನೇದ್ದಕ್ಕೆ ದೂರುಗಳನ್ನು ಸಲ್ಲಿಸಬಹುದಾಗಿದೆ.  
                                                                                                        ಸಹಿ/
                                                                                                ಪೊಲೀಸ ಅಧೀಕ್ಷಕರು
                                                                                                       ಕಲಬುರಗಿ
ಅಪಘಾತ ಪ್ರಕರಣ :
ನರೋಣಾ ಠಾಣೆ : ದಿನಾಂಕ:25/04/2018 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ನಾನು ಗೌಡಗಾಂವ ಗ್ರಾಮದಲ್ಲಿ ನಮ್ಮ ಮನೆಯಲ್ಲಿದ್ದಾಗ ಗುಂಜಬಬಲಾದ ಗ್ರಾಮದಿಂದ ನನ್ನ ತಮ್ಮನಾದ ಬಸವರಾಜ ತಂದೆ ಮಾರುತಿ ಖೇತ್ರಿ ಇವರು ಫೋನಮಾಡಿ ಸಚಿನನು ನಮ್ಮ ಟ್ರ್ಯಾಕ್ಟರ್ ನಂ ಕೆಎ32-ಟಿ9834 ನೇದ್ದರ ಮೇಲೆ ಪಂಚರ ಜೋಡಿಸಿಕೊಂಡು ಬರಲು ದೇಗಾಂವ ದಿಂದ ಮುನ್ನಳ್ಳಿ ಗ್ರಾಮಕ್ಕೆ ಹೋಗಿ ಪಂಚರ ಜೋಡಿಸಿಕೊಂಡು ವಾಪಸ್ಸು ದೇಗಾಂವ ಗ್ರಾಮಕ್ಕೆ ಬರುತ್ತಿರುವಾಗ ಟ್ರ್ಯಾಕ್ಟರನ್ನು ಅದರ ಚಾಲಕನಾದ ಸುರೇಶ ತಂದೆ ನಾಗೀಂದ್ರ ಖೇತ್ರಿ ಸಾ||ಬಿಲಗುಂದಾ ಈತನು ಟ್ರ್ಯಾಕ್ಟರನ್ನು ಅತೀವೇಗ ಮತ್ತು ನಿರ್ಲಕ್ಷತನಿಂದ ಚಲಾಯಿಸಿದ್ದರಿಂದ ಟ್ರ್ಯಾಕ್ಟರ್ ಮಡಗಡ ಮೇಲೆ ಕುಳಿತಿದ್ದು ಸಚಿನನು ತೆಳಗೆ ಬಿದ್ದು ಅಲ್ಲದೇ ಅವನ ಮೇಲೆ ಟ್ರ್ಯಾಕ್ಟರನ ದೊಡ್ಡ ಟಯರ್ ಹಾದು ಹೋಗಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ತಿಳಿಸಿದ ಮೇರೆಗೆ ನಾನು ಈ ವಿಷಯವನ್ನು ನಮ್ಮ ಮೈದನು ಹಣಮಂತ ಅತ್ತೆ ಶಿವಕಾಂತಮ್ಮ ರವರುಗಳಿಗೆ ತಿಳಿಸಿ ಅವರು ಮತ್ತು ನಮ್ಮ ಓಣಿಯ ಇನ್ನು ಕೆಲವು ಜನರು ಕೂಡಿಕೊಂಡು ಒಂದು ಕ್ರುಜರ ಜೀಪಿನಲ್ಲಿ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಮಗ ಸಚಿನನ ಎಡಗಡೆ ಕಪಾಳಿಗೆ ಹೊಟ್ಟೆಗೆ ಕಂದು ಗಟ್ಟಿದ ಗಾಯಗಳಾಗಿ ಮೃತಪಟ್ಪಿರುತ್ತಾನೆ ಟ್ರ್ಯಾಕ್ಟರ್ ನಂ ಕೆಎ32-ಟಿ9834 (ಇಂಜಿನ ಮಾತ್ರ) ನೇದ್ದರ ಚಾಲಕನಾದ ಸುರೇಶ ಖೇತ್ರಿ ಸಾ||ಬಿಲಗುಂದಾ ಈತನು ಟ್ರ್ಯಾಕ್ಟರನ್ನು ಅತೀವೇಗ ಮತ್ತು ನಿರ್ಲಕ್ಷತನಿಂದ ಚಾಲಾಯಿಸಿಕೊಂಡು ಮುನ್ನಳ್ಳಿ ಗ್ರಾಮದ ಕಡೆಯಿಂದ ದೇಗಾಂವ ಗ್ರಾಮದ ಕಡೆಗೆ ಬರುವಾಗ ಟ್ರ್ಯಾಕ್ಟರನ ಮಡಗಡ ಮೇಲೆ ಕುಳಿತಿದ್ದ ನನ್ನ ಮಗ ಸಚಿನ ಈತನು ಟ್ರ್ಯಾಕ್ಟರನಿಂದ ಕೆಳಗೆ ಬಿದ್ದು ಅಲ್ಲದೇ ಅವನ ಮೇಲಿಂದ ಟ್ರ್ಯಾಕ್ಟರ್ ಹಾದು ಹೊಗಿದ್ದರಿಂದ ಭಾರಿಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ.  ಅಂತಾ ಶ್ರೀಮತಿ ಸಿದ್ದಮ್ಮ ಗಂಡ ದಿ:ಅರ್ಜುನ ಖೇತ್ರಿ ಸಾ||ಗೌಡಗಾಂವ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ವಿದ್ಯಾಸಾಗರ ತಂದೆ ಶಾಂತಲಿಂಗಪ್ಪ ವಾಡಿ ಸಾ: ಪಟ್ಟಣ ಗ್ರಾಮ ತಾ:ಜಿ: ಕಲಬುರಗಿ ಒಕ್ಕಲುತನ ಕೆಲಸ  ಮಾಡಿಕೊಂಡು ಉಪಜೀವಿಸುತ್ತೇನೆ. ನಾನು ಹೋದ ವರ್ಷ ಯುಗಾದಿಗೆ  ನಮ್ಮ 30 ಎಕರೆ ಜಮೀನು ನಮ್ಮೂರಿನ ಸಂಜುಕುಮಾರ ತಂದೆ ಸೂರ್ಯಕಾಂತ @ ಸುರೇಶ ವಾಗ್ದರಿ  ಇತನಿಗೆ ಅರ್ಧ ಪಾಲಿನಿಂದ ಹಚ್ಚಿದ್ದು, ಈ ವರ್ಷ 2018 ನೇ ಸಾಲಿನ ಯುಗಾದಿ ಅವನಿಗೆ ಪಾಲಿನಿಂದ ಬಿಡಿಸಿ ನಾನೇ ಸಾಗುವಳಿ ಮಾಡುತ್ತಿದ್ದು. ಅದಕ್ಕೆ ಸಂಜುಕುಮಾರ ಮತ್ತು ಅವನ ತಂದೆ ಸೂರ್ಯಕಾಂತ @ ಸುರೇಶ ತಂದೆ ಭೀಮಶ್ಯಾ ವಾಗ್ದರಿ, ಮತ್ತು ಸಂಜಕುಮಾರ ಹಾಗೂ ಹೆಂಡತಿ ಸಂಬಂಧಿಕರಾದ ರೇವಣಸಿದ್ಧಪ್ಪ ತಂದೆ ಶಿವರಾಯ ಮತ್ತಿಮೂಡ, ಶಿವಲಿಂಗಪ್ಪ ತಂದೆ ಬಾಬುರಾವ ಮತ್ತಿಮೂಡ ಇವರು ನನಗೆ  ಈ ವರ್ಷವೂ  ನಮಗೆ ಹೊಲ ಅರ್ಧ ಪಾಲಿನಿಂದ ಹಚ್ಚು ಅಂತಾ ಕೇಳಿದ್ದು ಅದಕ್ಕೆ ನಾನು ನಿರಾಕರಿಸಿದ್ದಕ್ಕೆ  ಅವರೆಲ್ಲರೂ ನನಗೆ ಹೇಗೆ ಅರ್ಧ ಪಾಲಿನಿಂದ ನಮಗೆ ಹಚ್ಚುವುದಿಲ್ಲಾ ಮತ್ತು ನೀನು  ಹೇಗೆ ಹೊಲ ಸಾಗುವಳಿ ಮಾಡುತ್ತೀ ನಿನಗೆ ನೋಡುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ. ಅಲ್ಲದೇ ಈಗ ಒಂದು ತಿಂಗಳ ಹಿಂದೆ ಸಂಜುಕುಮಾರ ಇತನ ಹೆಂಡತಿ ಜಯಶ್ರೀ ಇವಳು ಹೊಲದ ಪಕ್ಕದಲ್ಲಿ ಇರುವ ಶಿವಯ್ಯ ಸ್ವಾಮಿ ಇವರ ಹೊಲ ಪಾಲನಿಂದ ಮಾಡುತ್ತಿದ್ದ ಹೊಲಕ್ಕೆ ಹೋದಾಗ ಅವಳಿಗೆ ನಮ್ಮೂರಿನ ಸಿದ್ಧು ತಂದೆ ಮಾರುತಿ ಮರಾಠಿ ಇತನು ಅವಳೊಂದಿಗೆ ಅಸಭವ್ಯವಾಗಿ ನಡೆದುಕೊಂಡಿರುತ್ತಾನೆಂದು ಅವನಿಗೆ ಸಂಜಕುಮಾರ ಮತ್ತು ಇತರರು ಕೂಡಿ ಹೊಡೆ ಬಡಿ ಮಾಡಿದ್ದು, ಸಿದ್ದು ಇತನು ಸಂಜುಕುಮಾರನಿಗೆ  ನಾನು  ಕೂಡಾ ಜಯಶ್ರೀ ಇವಳೊಂದಿಗೆ ಅಸಭ್ಯವಾಗಿ ನಡೆದುಕೊಂಡಿರುತ್ತೇನೆ ಎಂದು ಹೇಳಿದ್ದರಿಂದ ಈ ಮೇಲಿನ ಎರಡು ವಿಷಯ ಸಂಬಂಧವಾಗಿ ನನ್ನೊಂದಿಗೆ ಆಗ್ಗಾಗೆ ತಕರಾರ ಮಾಡುತ್ತಾ ಹೊರಟಿದ್ದು ,ಈ ವಿಷಯ ಸಂಬಂಧವಾಗಿ ಅವರು  ನನ್ನೊಂದಿಗೆ ದ್ವೇಷ ಮನೋಭಾವ. ಬೆಳಿಸಿಕೊಂಡು ಬಂದಿದ್ದು ದಿನಾಂಕ 24/04/18 ರಂದು ಬೆಳಿಗ್ಗೆ ಮನೆಯಿಂದ ಹಾಲು ತೆಗೆದುಕೊಂಡು ನಮ್ಮೂರಿನ ಅಗಸಿ ಹತ್ತಿರ ಇರುವ ಹಾಲಿನ ಡೈರಿ ಎದುರುಗಡೆ ಹೋದಾಗ ಅಲ್ಲಿಗೆ ನಮ್ಮೂರಿನ  1)ಸಂಜಕುಮಾರ ತಂದೆ  ಸೂರ್ಯಕಾಂತ @ ಸುರೇಶ ವಾಗ್ದರಿ 2)ರೇವಣಸಿದ್ಧಪ್ಪ ತಂದೆ ಶಿವರಾಯ ಮತ್ತಿಮೂಡ 3) ಸೂರ್ಯಕಾಂತ @ ಸುರೇಶ ತಂದೆ ಭೀಮಶ್ಯಾ ವಾಗ್ದರಿ 4) ಶಿವಲಿಂಗಪ್ಪ ತಂದೆ ಬಾಬುರಾವ ಮುತ್ತಿಮೂಡ ಇವರೆಲ್ಲರೂ ನನ್ನ ಹತ್ತಿರ ಬಂದು ನನಗೆ ಭೋಸಡಿ ಮಗನೇ  ಈ ವರ್ಷ ನಿಮ್ಮ  ಹೊಲ ಪಾಲಿನಿಂದ ಕೊಡು ಅಂದರೆ ಕೊಟ್ಟಿರುವುದಿಲ್ಲಾ. ಅಲ್ಲದೇ ನನ್ನ ಹೆಂಡತಿ ಜಯಶ್ರೀ ಇವಳು ಹೊಲಕ್ಕೆ ಬಂದಾಗ ಅವಳೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತೀ ಮಗನೇ ಅಂತಾ ಬೈಯ್ಯುತ್ತಾ ರೇವಣಸಿದ್ಧಪ್ಪ ಮತ್ತು ಸೂರ್ಯಕಾಂತ @ ಸುರೇಶ ಇಬ್ಬರು ನನಗೆ  ಒತ್ತಿಯಾಗಿ ಹಿಡಿದಾಗ  ಸುರೇಶ ಇತನು ನನಗೆ ಕೊಲೆ ಮಾಡುವ ಉದ್ದೇಶದಿಂದ ಬಡಿಗೆಯಿಂದ ನನ್ನ ಬಲಗೈ ಮಣಿಕಟ್ಟಿನ ಮೇಲೆ, ಮುಂಗೈಯ ಮೇಲೆ  ಮತ್ತು ಬಲಭುಜದ ಮೇಲೆ ಹೊಡೆದು ಭಾರಿ ಗುಪ್ತಗಾಯಗೊಳಿಸಿದನು. ಶಿವಲಿಂಗಪ್ಪ ಇತನು ಕೂಡಾ ನನಗೆ ಕೊಲೆ ಮಾಡುವ ಉದ್ದೇಶದಿಂದ ಸೈಕಲ ಚೈನನಿಂದ ನನ್ನ ಬಲಗಾಲ ಮೊಳಕಾಲ ಮೇಲೆ ಮತ್ತು ಎಡಗೈ ಅಂಗೈಯ ಮೇಲೆ ಮತ್ತು ಅಲ್ಲಿಲ್ಲಿ ಹೊಡೆದು ಭಾರಿ ರಕ್ತಗಾಯ ಮತ್ತು ಗುಪ್ತಗಾಯ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.