Police Bhavan Kalaburagi

Police Bhavan Kalaburagi

Monday, August 13, 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 11-08-2018 ರಂದು ಬೆಳಿಗ್ಗೆ ನನ್ನ ಮಗಳು ಮಹಾನಂದಾ ಇವಳು ಬೈಹಿರದೇಸೆಗೆ ಹೋಗುತ್ತೇನೆ ಅಂತಾ ಹೇಳಿ ಮನೆಯಿಂದ ಹೋದಳು ಸ್ವಲ್ಪ ಹೊತ್ತಾದನಂತರ ನನ್ನ ಮಗಳಿಗೆ ಅಪಘಾತವಾಗಿರುತ್ತದೆ ಅಂತಾ ವಿಷಯ ಗೊತ್ತಾಗಿ ನಾನು ನನ್ನ ಗಂಡ ಕೂಡಿ ಸ್ಥಳಕ್ಕೆ ಹೋಗಿ ನೋಡಿದಾಗ ನನ್ನ ಮಗಳ ಬೆನ್ನಿನ ಮೇಲೆ, ಎಡಭುಜಕ್ಕೆ, ಎಡಹಣೆಗೆ, ತರಚಿದ ಗಾಯವಾಗಿದ್ದು, ಟೊಂಕಿಗೆ ಭಾರಿ ಒಳಪೆಟ್ಟಾಗಿ, ಎಡ ಹಿಂಬಡಿ ಹತ್ತಿರ ಮತ್ತು ಎಡಗಾಲ ಕಿರುಬೆಳಿಗೆ ರಕ್ತಗಾಯವಾಗಿರುತ್ತದೆ, ನಂತರ ಮೋಟರ ಸೈಕಲ್ ಸವಾರನಿಗೆ ನೋಡಲಾಗಿ, ಅವನು ನಮ್ಮೂರ ಪರುತರೆಡ್ಡಿ ರವರ ಅಕ್ಕನ ಮಗನಾದ ಬಸನಗೌಡ ತಂದೆ ಈರಣಗೌಡ ಪಾಟೀಲ ಸಾ|| ಚಿಂಚೋಳಿ ತಾ|| ಸುರಪೂರ ಎಂಬುವನಿರುತ್ತಾನೆ, ಅವನ ಮೋಟರ ಸೈಕಲ್ ನೋಡಲಾಗಿ ಹೋಂಡಾ ಶೈನ ನಂ ಕೆ.ಎ-33/ಎಸ್-0452 ನೇದ್ದು ಇರುತ್ತದೆ, ಅವನಿಗೆ ಒಳಪೆಟ್ಟಾಗಿದ್ದು, ಸ್ಥಳದಲ್ಲೆ ಬಿದ್ದಿದ್ದನು, ನಂತರ ಸ್ಥಳದಲ್ಲಿ ಇದ್ದ ನಮ್ಮೂರ ಜೀಲಾನಿ ತಂದೆ ಮಹಿಬೂಬ ಮುಲ್ಲಾ ರವರು ನಮಗೆ ಹೇಳಿದ್ದೇನೆಂದರೆ, ನಾನು ಮತ್ತು ಬೈಲಪ್ಪ ತಂದೆ ರುದ್ರಪ್ಪ ಮೈನಾಳ ರವರು ಕೂಡಿ ನಮ್ಮೂರ ಅಗಸಿ ಹತ್ತಿ ರೋಡಿನ ಮೇಲೆ ಮಾತಾಡುತ್ತಾ ನಿಂತಾದ ನಮ್ಮ ಹತ್ತಿರ ದಿಂದ ಬಸನಗೌಡ ತಂದೆ ಈರಣಗೌಡ ಪಾಟೀಲ ಈತನು ತನ್ನ ಮೋಟರ ಸೈಕಲ ಮೇಲೆ ಜೋರಾಗಿ ಮತ್ತು ಅಲಕ್ಷತನದಿಂದ ಹೋದನು, ಅಲ್ಲೆ ಸ್ವಲ್ಪ ದುರದಲ್ಲಿ  ರೋಡಿನ ಎಡಗಡೆ ಬೈಹಿರದೇಸೆಗೆ ಕುಳಿತ ನಿಮ್ಮ ಮಗಳಿಗೆ ಒಮ್ಮೇಲೆ ಡಿಕ್ಕಿ ಹೊಡೆದು ಮುಂದೆ ಮೋಟರ ಸೈಕಲ್ ಸಮೇತ ಹೋಗಿ ತಾನು ರೋಡಿನ ಎಡಗಡೆ ಹೊಲದಲ್ಲಿ ಬಿದ್ದನು, ಬಸನಗೌಡ ಈತನು ಎದ್ದು ನಿಂತು 4 ಹೆಜ್ಜಿ ಮುಂದೆ ಬಂದು ಒಮ್ಮೇಲೆ ಕೆಳಗೆ ಬಿದ್ದನು, ನಂತರ ನಾವು ಹೋಗಿ ಅವನನ್ನು ಎಬ್ಬಿಸುವಷ್ಟರಲ್ಲಿ ಸ್ಥಳದಲ್ಲೆ ಮೃತ ಪಟ್ಟಿದ್ದನು, ಅಂತಾ ತಿಳಿಸಿದರು. ನಂತರ ನನ್ನ ಮಗಳಿಗೆ ಉಪಚಾರ ಕುರಿತು ಒಂದು ಟಂಟಂನಲ್ಲಿ ಹಾಕಿಕೊಂಡು ಇಲ್ಲಿಗೆ ತಂದು ಸೇರಿಕೆ ಮಾಡಿರುತ್ತೇವೆ, ಬಸನಗೌಡ ತಂದೆ ಈರಣಗೌಡ ಪಾಟೀಲ ಈತನು ತನ್ನ ಮೋಟರ ಸೈಕಲ್ ನಂ ಕೆ.ಎ-33/ಎಸ್-0452 ನೇದ್ದನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿ ನಮ್ಮೂರ ಜಗದೀಶ ಇನಾಮದಾರ ರವರ ಹೊಲದ ಹತ್ತಿರ ರೋಡಿನ ದಂಡೆಯಲ್ಲಿ ಕುಳಿತ ನಮ್ಮ ಮಗಳಿಗೆ ಡಿಕ್ಕಿ ಹೊಡೆದು ನಂತರ ತಾನು ನಿಯಂತ್ರಣ ತಪ್ಪಿ ತನ್ನ ಮೋಟರ ಸೈಕಲ್ ಸಮೇತ ರೋಡಿನ ಎಡಗಡೆ ಹೊಲದಲ್ಲಿ ಬಿದ್ದು ಮೃತ ಪಟ್ಟಿರುತ್ತಾನೆ, ಅಂತಾ ಶ್ರೀಮತಿ ತಾಯಮ್ಮ ಗಂಡ ಮಲ್ಲಪ್ಪ ಮಾದರ ಸಾ|| ದುಮ್ಮದ್ರಿ ತಾ|| ಜೇವರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ನರೋಣಾ ಠಾಣೆ : ದಿನಾಂಕ:09/08/2018 ರಂದು 07-00 ಎ.ಎಂಕ್ಕೆ ನನ್ನ ಮೈಧುನನಾದ ಪ್ರಕಾಶನ ಗಂಡುಮಕ್ಕಳಾದ ಯಶ್ ಹಾಗೂ ಆಯುಷ್ ಇವರ ಜವಳ ತಗೆಯುವ ಕಾರ್ಯಕ್ರಮದ ಪ್ರಯುಕ್ತ ಆಳಂದ ತಾಲ್ಲೂಕಿನ ದಣ್ಣೂರ ಗ್ರಾಮದ ಹರಜತ್ ದೌವಲ್ ಮಲಿಕ್ ದರ್ಗಾಕ್ಕೆ ಬಂದಿದೇವು. ಅಲ್ಲಿ ಅಡುಗೆ ಕಾರ್ಯಕ್ರಮ ಮುಗಿದ ನಂತರ ನನ್ನ ಗಂಡನು ಅಶಕ್ತನಾಗಿ ಕುಸಿದು ಬಿದ್ದದ್ದರಿಂದ ನಾನು ಹಾಗೂ ನನ್ನ ಮೈಧುನನಾದ ಪ್ರಕಾಶ ತಂದೆ ಭೋಗಪ್ಪ ತಳವಾರ ಹಾಗೂ ನನ್ನ ಮಾವನಾದ ಭೋಗಪ್ಪಾ ಸೇರಿಕೊಂಡು ಒಂದು ಖಾಸಗಿ ವಾಹನದಲ್ಲಿ ಬಸವೇಶ್ವರ ಆಸ್ಪತ್ರೆ ಕಲಬುರಿಗೆ ತಂದು ಸೇರಿಕೆ ಮಾಡಿ ನಂತರ ದಿನಾಂಕ:11/08/2018 ರಂದು ಸರಕಾರಿ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ ಮಾಡಿರುತ್ತೇವೆ. ದಿನಾಂಕ:12/08/2018 ರಂದು ಬೆಳಿಗ್ಗೆ 09-30 ಗಂಟೆ ಸುಮಾರಿಗೆ ನನ್ನ ಗಂಡನಾದ ಸಂಗಪ್ಪನು ಉಪಚಾರ ಫಲಕಾರಿಯಾಗದೆ ಆಕಸ್ಮಿಕವಾಗಿ ಮೃತಪಟ್ಟಿರುತ್ತಾನೆ. ನನ್ನ ಗಂಡನ ಸಾವಿನಲ್ಲಿ ಯಾರ ಮೇಲೆ ಸಂಶಯ ವಗೈರೆ ಇರುವುದಿಲ್ಲ ಅಂತಾ ಅಂಬಿಕಾ ಗಂಡ ಸಂಗಪ್ಪಾ ತಳವಾರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.