Police Bhavan Kalaburagi

Police Bhavan Kalaburagi

Monday, June 18, 2018

BIDAR DISTRICT DAILY CRIME UPDATE 18-06-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 18-06-2018

OgÁzÀ(©) ¥Éưøï oÁuÉ C¥ÀgÁzsÀ ¸ÀA. 92/2018, PÀ®A. 394 L¦¹ :-
ದಿನಾಂಕ 15-06-2018 ರಂದು ಫಿರ್ಯಾದಿ ಸಿದ್ರಾಮ ತಂದೆ ಗುರುನಾಥರಾವ ಬೊರಾಳೆ ಸಾ: ಕರಕ್ಯಾಳ ರವರು ಔರಾದಕ್ಕೆ ಬಂದು ಮರಳಿ ಗ್ರಾಮಕ್ಕೆ ಹೋಗಲು ಔರಾದನಿಂದ ಬಸ್ಸನಲ್ಲಿ ಕುಳಿತು ಡೊಂಗರಗಾಂವ ಪಾಟೀಗೆ ಬಸ್ಸನಿಂದ ಇಳಿದಾಗ ಅಲ್ಲಿ ರೊಡಿನ ಪಕ್ಕದಲ್ಲಿ ಫುಲಿನ ಮೇಲೆ ಉದಗೀರ ಪಟ್ಟಣದಲ್ಲಿರುವ ಪರಿಚಯವರಾದ ತಾಹೇರ ದೇಶಮುಖ ರವರ ಹೆಂಡತಿ ಅಂಕಿತಾ ರವರು ಕುಳಿತಿರುವುದನ್ನು ನೋಡಿ ಫಿರ್ಯಾದಿಯು ಅವರ ಹತ್ತಿರ ಹೋಗಿ ಮಾತನಾಡುತ್ತಿರುವಾಗ ಫಿರ್ಯಾದಿಯವರ ಹತ್ತಿರ ವಸಂತ ತಂದೆ ಚಂದರ ಸಾ: ಬಾಳೂರ, ತಾ: ಭಾಲ್ಕಿ, ಬಾಲಾಜಿ ತಂದೆ ಕೇಶವ ರಾಠೋಡ ಸಾ: ಹುಲ್ಯಾಳ ತಾಂಡಾ ಮತ್ತು ಸಂಜಯ ತಂದೆ ನರಸಿಂಗರಾವ ಟೊಕರೆ ಸಾ: ಡೊಂಗರಗಾಂವ ರವರು ಬಂದು ಫಿರ್ಯಾದಿಗೆ ವಸಂತ ಇತನು ಹೆಣ್ಣು ಮಗಳು ಯಾರು? ಅವಳೊಂದಿಗೆ ಏನ್ ಮಾತಾಡುತ್ತಿದ್ದಿರಿ ನಿಮ್ಮಿಬ್ಬರ ಮದ್ಯ ಏನ್ ನಡೆಯುತ್ತಿದೆ ಎಂದು ಪ್ರಶ್ನೆಗಳನ್ನು ಕೇಳುತ್ತಾ ವಿನಾಃ ಕಾರಣ ಮಾತಿನ ತಕರಾರು ಮಾಡಿರುತ್ತಾರೆ, ನಂತರ ಫಿರ್ಯಾದಿಯು ಅಂಕಿತಾ ಗಂಡ ತಾಹೇರ ದೇಶಮುಖ ರವರಿಗೆ ಅಲ್ಲಿಂದ ಮ್ಮೂರಿಗೆ ಹೋಗೊಣ ನಡೆಯಿರಿ ಎಂದು ತಿಳಿಸಿ ಔರಾದನಿಂದ ಡೊಂಗರಗಾಂವ ಮಾರ್ಗವಾಗಿ ಕಮಲನಗರ ಗ್ರಾಮಕ್ಕೆ ಹೋಗುವ ಪ್ಯಾಸೇಂಜರ ಜೀಪನಲ್ಲಿ ಡೊಂಗರಗಾಂವ ಪಾಟೀಯಿಂದ ಬ್ಬರೂ ಕುಳಿತುಕೊಂಡು ಕರಕ್ಯಾಳ ಕ್ರಾಸವರೆಗೆ ಬಂದು ಇಳಿದು ಬ್ಬರೂ ಕರಕ್ಯಾಳ ಗ್ರಾಮಕ್ಕೆ ರೋಡಿನ ಮೇಲೆ ನಡೆದುಕೊಂಡು ಹೋಗುವಾಗ ಒಂದು ಮೊಟಾರ ಸೈಕಲ್ ಮೇಲೆ ಪುನಃ ವಸಂತ, ಬಾಲಾಜಿ ಹಾಗೂ ಸಂಜಯ ರವರು ಬಂದು ಇಬ್ಬರಿಗೂ ತಡೆದು ನಿಲ್ಲಿಸಿ ನಿಬ್ಬರು ಎಲ್ಲಿಗೆ ಹೋಗುತ್ತಿದ್ದಿರಿ ಎಂದು ಪ್ರಶ್ನೀಸುತ್ತಾ ವಸಂತ ಇತನು ಅಂಕಿತಾ ರವರ ಹತ್ತಿರ ಇದ್ದ ಬ್ಯಾಗನ್ನು ಕಸಿದುಕೊಳ್ಳುತ್ತಿದ್ದಾಗ ಅವರು ತನ್ನ ಬ್ಯಾಗ ಕೊಡದೇ ಇರುವಾಗ ವಸಂತ ಇತನು ತನ್ನ ಕೈಯಿಂದ ಅಂಕಿತಾ ರವರ ಎಡಗಡೆ ಕಪಾಳ ಮೇಲೆ 4-5 ಸಲ ಹೊಡೆದು ತರಚಿದ ರಕ್ತಗಾಯ ಪಡಿಸಿ ಅವರಿಂದ ಬ್ಯಾಗ ಕಸಿದುಕೊಂಡು ಅದರಲ್ಲಿದ್ದ ಹಣ ತೆಗೆದುಕೊಂಡಿರುತ್ತಾನೆ, ಬಾಲಾಜಿ ಮತ್ತು ಸಂಜಯ ವರಿಬ್ಬರೂ ಫಿರ್ಯಾದಿಗೆ ಹಿಡಿದು ಎಳೆದಾಡಿ ತಮ್ಮ ಕೈಗಳಿಂದ ಫಿರ್ಯಾದಿಯ ಬೆನ್ನಿನ ಮೇಲೆ ಹೊಡೆದು ಫಿರ್ಯಾದಿಯ ಹತ್ತಿರ ಇದ್ದ ಹಣ ಕೊಡು ಎಂದು ಹೆದರಿಸಿ ಒತ್ತಿ ಹಿಡಿದು ಅಂಗಿಯ ಜೇಬಿನಲ್ಲಿದ್ದ ನಗದು ಹಣ 8820/- ರೂ ದೊಚಿಕೊಂಡಿರುತ್ತಾರೆ, ಈ ಘಟನೆಯನ್ನು ನೊಡಿದ ಅಲ್ಲೆ ಸಮೀಪದಲ್ಲಿದ್ದ ಮ್ಮೂರ 1) ಓಲೊದ್ದಿನ ತಂದೆ ಮೈನೊದ್ದಿನ ಮುಲ್ಲಾ, 2) ತಾನಾಜಿ ತಂದೆ ಮಾಧವರಾವ, 3) ದಿಲೀಪ ತಂದೆ ಶಂಕ್ರೆಪ್ಪಾ ಖೌಂದೆ, 4) ರಾಹುಲ ತಂದೆ ಧೋಂಡಿಬಾ ಕಾಂಬಳೆ ರವರು ಫಿರ್ಯಾದಿಯ ಕಡೆಗೆ ಬಿಡಿಸಿಕೊಳ್ಳಲು ಬರುವುದನ್ನು ನೋಡಿ ಆರೋಪಿತರಾದ ವಸಂತ, ಬಾಲಾಜಿ ಹಾಗೂ ಸಂಜಯ ಮೂವರು ತಮ್ಮ ಮೊಟಾರ ಸೈಕಲ್ ಮೇಲೆ ಅಲ್ಲಿಂದ ಡೊಂಗರಗಾಂವ ಪಾಟಿ ಕಡೆಗೆ ಓಡಿ ಹೋಗಿರುತ್ತಾರೆ, ಸದರಿ ಆರೋಪಿತರ ಮೊಟಾರ ಸೈಕಲ್ ನಂಬರ ನೋಡಿರುವುದಿಲ್ಲ, ಅಂಕಿತಾ ರವರ ಹತ್ತಿರ ಇದ್ದ ಬ್ಯಾಗನಿಂದ ದೊಚಿಕೊಂಡು ಹೊದ ಹಣ ಒಟ್ಟು 31,150/- ರೂ ಇದ್ದವು ಎಂದು ಅಂಕಿತಾ ರವರು ತಿಳಿಸಿರುತ್ತಾರೆ, ನಂತರ ಇಬ್ಬರು ಅಲ್ಲಿಂದ ನಡೆದುಕೊಂಡು ಗ್ರಾಮದಲ್ಲಿ ಹೋಗಿ ಘಟನೆ ಬಗ್ಗೆ ಅಂಕಿತಾ ರವರ ಗಂಡನಿಗೂ ಕರೆ ಮಾಡಿ ತಿಳಿಸಿದ್ದು ಅಂಕಿತಾ ರವರ ಗಂಡ ತಾಹೇರ ದೇಶಮುಖ ರವರು ಬಂದು ತನ್ನ ಹೆಂಡತಿಯೊಂದಿಗೆ ಹಾಗೂ ಫಿರ್ಯಾದಿಯೊಂದಿಗೆ ಮಾತನಾಡಿ ಚರ್ಚಿಸಿ ರಾತ್ರಿಯಾಗಿದ್ದರಿಂದ ಕರಕ್ಯಾಳ ಗ್ರಾಮದಲ್ಲಿ ಉಳಿದುಕೊಂಡು ನಂತರ ಬಂದು ಫಿರ್ಯಾದಿಯವರು ನೀಡಿದ ದೂರಿನ ಮೇರೆಗೆ ದಿನಾಂಕ 16-06-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.