Police Bhavan Kalaburagi

Police Bhavan Kalaburagi

Thursday, July 26, 2018

Yadgir District Reported Crimes Updated on 26-07-2018


                                      Yadgir District Reported Crimes
ಶಹಾಪುರ ಪೊಲೀಸ್ ಠಾಣೆ ಗುನ್ನೆ ನಂ ;- 357/2018 ಕಲಂ 143, 147, 148, 323, 324, 504, 506, 392 ಸಂಗಡ 149 ಐಪಿಸಿ;- ದಿನಾಂಕ: 25/04/2018 ರಂದು ಸಾಯಂಕಾಲ 5.30 ಪಿ.ಎಂ.ಕ್ಕೆ ಶ್ರೀ ಹುಲಿಗೆಪ್ಪ ಪಿಸಿ-344 ಶಹಾಪುರ ಪೊಲೀಸ್ ಠಾಣೆ ರವರು ರಾಯಚೂರು ಜಿಲ್ಲೆಯ ದೇವದುರ್ಗ ಪೊಲೀಸ್ ಠಾಣೆಯಿಂದ ಹದ್ದಿಯ ಆಧಾರದ ಮೇಲೆ ವಗರ್ಾವಣೆಯಾಗಿ ಬಂದ ದೇವದುರ್ಗ ಪೊಲೀಸ್ ಠಾಣೆ ಗುನ್ನೆ.ನಂ.283/2018 ಕಲಂ 143 147 148 323 324 504 506 392 ಸಂಗಡ 149 ಐಪಿಸಿ ನೇದ್ದರ ಕಡತವನ್ನು ಡಿ.ಸಿ.ಆರ್.ಬಿ ಘಟಕ ಯಾದಗಿರಿ ಇಂದ ಮುಂದಿನ ಕ್ರಮ ಕುರಿತು ತಂದು ಹಾಜರಪಡಿಸಿದ್ದು ಪರಿಶೀಲಿಸಲಾಗಿ ದಿನಾಂಕ: 31/05/2018 ರಂದು ಸಾಯಂಕಾಲ 4.30 ಪಿ.ಎಂ ಸುಮಾರಿಗೆ ಫಿಯರ್ಾದಿಯು ಮನೆಯಲ್ಲಿದ್ದಾಗ ಕೋಳೂರು ಗ್ರಾಮದ ಕೃಷ್ಣಾನದಿ ತೀರದ ಹತ್ತಿರ ಸಾಕಷ್ಟು ಟ್ರಾಕ್ಟರಗಳು ಬಂದು ಅಕ್ರಮವಾಗಿ ಮರಳನ್ನು ತುಂಬಿಕೊಂಡು ಸಾಗಾಟ ಮಾಡುತ್ತಿದ್ದಾರೆ ಅಂತ ಮಾಹಿತಿ ಬಂದಾಗ ಫಿಯರ್ಾದಿಯು 5.00 ಪಿ.ಎಂ.ಕ್ಕೆ ಕೃಷ್ಣಾ ನದಿ ತೀರಕ್ಕೆ ಹೋದಾಗ ಅಲ್ಲಿ ಸುಮಾರು ಟ್ರಾಕ್ಟರಗಳು ಮರಳನ್ನು ತುಂಬುತ್ತಿದ್ದು, ಅವರ ಹತ್ತಿರ ಹೋಗಿ ಮರಳು ತುಂಬುವ ಬಗ್ಗೆ ಅಧಿಕೃತ ದಾಖಲೆಗಳು ಹಾಗೂ ಟೆಂಡರ್ ಬಗ್ಗೆ ವಿಚಾರಿಸಿದ್ದು, ಅವರು ಏನೂ ಇಲ್ಲಾ ಅಂತಾ ಹೇಳಿದ್ದು, ಅವು ಪುನಃ ಟ್ರಾಕ್ಟರ್ಗಳಲ್ಲಿ ಮರಳು ತುಂಬುತ್ತಿದ್ದು, ಫಿಯರ್ಾದಿಯು ತನ್ನ ಜೆಬಿನಿಂದ ಮೊಬೈಲ್ ತೆಗೆದು ವಿಡಿಯೋ ಮಾಡುತ್ತಿದ್ದುದನ್ನು ಅಲ್ಲಿದ್ದ ಅವಾಚ್ಯ ಶಬ್ದಗಳಿಂದ ಬೈದು, ಮರಿಯಪ್ಪ ಹಾಗೂ ಇತರೆ ಸುಮಾರು 20 ಜನರು ಕೈಯಿಂದ ಮೈಗೆ ಹೊಡೆದು ಕಾಲಿನಿಂದ ಒದ್ದು, ಕಟ್ಟಿಗೆಯಿಂದ ಮೈಗೆ ಹೊಡೆದು ಒಳಪೆಟ್ಟುಗೊಳಿಸಿ ವಿಡೀಯೊ ಮಾಡುತ್ತಿದ್ದ ಮೊಬೈಲ್ ಕಸಿದುಕೊಂಡು ಹೋಗಿರುತ್ತಾನೆ ಅಂತಾ ಇತ್ಯಾದಿ ಫಿಯರ್ಾದಿ ಸಾರಾಂಶ ಇದ್ದು, ಸದರ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ.ನಂ.357/2018 ಕಲಂ 143 147 148 323 324 504 506 392 ಸಂಗಡ 149 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ ;- 286/2018 ಕಲಂ: 457,380 ಐ.ಪಿ.ಸಿ;- ದಿನಾಂಕಃ 25-07-2018 ರಂದು 1-30 ಪಿ.ಎಮ್ ಕ್ಕೆ ಫಿಯರ್ಾಧಿ ಶ್ರೀಮತಿ ಸಾಲಿಹಾ ಪವರ್ಿನ್ ಗಂಡ ಮಹ್ಮದ ಇಬ್ರಾಹಿಂ ನಾಸಿ ಸಾ: ಕಂಚಗಾರ ಮೊಹಲ್ಲಾ ರಂಗಂಪೇಟ ಸುರಪೂರ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನನ್ನ ಗಂಡನು ಕಳೆದ 2 ತಿಂಗಳ ಹಿಂದೆ ಕೂಲಿಕೆಲಸಕ್ಕಾಗಿ ಹೈದ್ರಾಬಾದಗೆ ಹೋಗಿದ್ದು, ಮನೆಯಲ್ಲಿ ನಾನು ಮತ್ತು ನನ್ನ ಮಗಳು ಇಬ್ಬರೇ ಇರುತ್ತೇವೆ. ನಿನ್ನೆ ದಿನಾಂಕ: 24-07-2018 ರಂದು ರಾತ್ರಿ ನಾನು ಮತ್ತು ನನ್ನ ಮಗಳಾದ ಮುಸ್ಕಾನ ಅಂಜುಮ್ ಇಬ್ಬರೂ ಮನೆಯಲ್ಲಿ ಊಟ ಮಾಡಿದ ಬಳಿಕ ಮನೆಯ ಬಾಗಿಲಿಗೆ ಬೀಗವನ್ನು ಹಾಕಿ 9-00 ಗಂಟೆಯ ಸುಮಾರಿಗೆ ಮನೆಯ ಮೇಲಿನ ಮಹಡಿಯಲ್ಲಿರುವ ಕೋಣೆಯಲ್ಲಿ ಹೋಗಿ ಮಲಗಿರುತ್ತೇವೆ. ನಂತರ ಇಂದು ಮುಂಜಾನೆ 5-00 ಗಂಟೆಗೆ ನಾವು ತಾಯಿ ಮಗಳು ಎದ್ದು ಕೆಳಗಡೆ ಇಳಿದು ಬಂದು ನೋಡಲಾಗಿ ನಮ್ಮ ಮನೆಯ ಬಾಗಿಲು ತೆರೆದಿದ್ದು, ಬಾಗಿಲಿಗೆ ಹಾಕಿದ ಬೀಗ ಮುರಿದು ನೆಲಕ್ಕೆ ಬಿದ್ದಿತ್ತು. ಗಾಬರಿಯಾಗಿ ಒಳಗಡೆ ನೋಡಲಾಗಿ ಮನೆಯಲ್ಲಿದ್ದ ಅಲಮಾರಿಯ ಬಾಗಿಲು ಹಾಗು ಒಳಗಡೆಯ ಲಾಕ್ ತೆರೆದಿದ್ದು ಎಲ್ಲಾ ವಸ್ತುಗಳ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಪರಿಶೀಲಿಸಲಾಗಿ ಅಲಮಾರಿಯಲ್ಲಿರುವ ಕಪ್ಪುಬಣ್ಣದ ಬ್ಯಾಗಿನಲ್ಲಿ ಹಾಕಿದ್ದ 1) 6 ಗ್ರಾಂ. ಬಂಗಾರದ ಜುಮಕಿ (ಕಿವಿಯೋಲೆ) ಅ||ಕಿ|| 18,000/- ರೂ.ಗಳು, 2) 15 ಗ್ರಾಂ. ಬಂಗಾರದ ನೆಕ್ ಲೇಸ್, ಅ||ಕಿ|| 45,000/- ರೂ.ಗಳು, 3) 10 ಗ್ರಾಂ. ಬಂಗಾರದ ಜೀರಾಮಣಿ ಅ||ಕಿ|| 30,000/- ರೂ.ಗಳು, 4) 130 ಗ್ರಾಂ. ಬೆಳ್ಳಿಯ ಒಂದು ಜೊತೆ ಕಾಲು ಚೈನುಗಳು ಅ||ಕಿ|| 3900/- ರೂ.ಗಳು, ಹಾಗು 5) ನಗದು ಹಣ 2,000/- ರೂ.ಗಳು ಇರುವದಿಲ್ಲ. ಹೀಗೆ ಒಟ್ಟು 98,900/-ರೂ.ಗಳು ಕಿಮ್ಮತ್ತಿನ ವಸ್ತುಗಳನ್ನು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ವಗೈರೆ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 286/2018 ಕಲಂ: 457, 380 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ ;- 166/2018 ಕಲಂ: 379 ಐಪಿಸಿ;- ದಿನಾಂಕ: 26/07/2018 ರಂದು ಶ್ರೀ ಅಂಬಾರಾಯ ಕಮಾನಮನಿ ಪಿ.ಐ ಜಿಲ್ಲಾ ಅಪರಾಧ ವಿಭಾಗ, ವಿಶೇಷ ಪೊಲೀಸ್ ಠಾಣೆ ಯಾದಗಿರಿ ಇವರು ವಡಗೇರಾ ಪೊಲೀಸ್ ಠಾಣೆಗೆ ಹಾಜರಾಗಿ ಒಂದು ಜೆ.ಸಿ.ಬಿ, ಇಬ್ಬರೂ ಆರೋಪಿತರನ್ನು ಒಪ್ಪಿಸಿ, ವರದಿ ಕೊಟ್ಟಿದ್ದರ ಸಾರಾಂಶವೇನಂದರೆ ಇಂದು ದಿನಾಂಕ: 26/07/2018 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಕಛೇರಿಯಲ್ಲಿದ್ದಾಗ ನಮ್ಮ ಸಿಬ್ಬಂದಿಯಾದ ಈರಣ್ಣ ಹೆಚ್.ಸಿ 144 ರವರಿಗೆ ದೂರವಾಣಿ ಮುಖಾಂತರ ಬಾತ್ಮಿ ಬಂದಿದ್ದೇನಂದರೆ ವಡಗೇರಾ ತಾಲ್ಲೂಕಿನ ಚನ್ನೂರೂ ಗ್ರಾಮದ ಹೊರವಲಯದ ದೇವಪ್ಪ ಮಡಿವಾಳ ಇವರ ಮನೆ ಹತ್ತಿರ ಖುಲ್ಲಾ ಜಾಗೆಯಲ್ಲಿ ಕೃಷ್ಣಾ ನದಿಯಿಂದ ಅಕ್ರಮ ಮರಳು ಟ್ರ್ಯಾಕ್ಟರಗಳ ಮುಖಾಂತರ ಸಂಗ್ರಹಿಸಿ ಟಿಪ್ಪರಗಳಲ್ಲಿ ಮರಳು ಸಾಗಿಸುತ್ತಿರುವುದಾಗಿ ತಿಳಿದು ಬಂದ ಬಾತ್ಮಿಯನ್ನು ನನಗೆ ತಿಳಿಸಿದಾಗ ನಾನು ನಮ್ಮ ಸಿಬ್ಬಂದಿಯವರಾದ 1) ಈರಣ್ಣ ಹೆಚ್.ಸಿ 144, 2) ಗುಂಡಪ್ಪ ಹೆಚ್.ಸಿ 115, 3) ಹರಿನಾಥ ರೆಡ್ಡಿ ಪಿ.ಸಿ 267 ಮತ್ತು ಜೀಪ ಚಾಲಕ 4) ರಾಮಲಿಂಗ ಎಪಿಸಿ 112 ರವರೊಂದಿಗೆ 11-15 ಎಎಮ್ ಕ್ಕೆ ಯಾದಗಿರಿಯಿಂದ ಸರಕಾರಿ ಜೀಪ ನಂ. ಕೆಎ 33 ಜಿ 0065 ನೇದ್ದರಲ್ಲಿ ಹೊರಟು ಚನ್ನೂರು ಗ್ರಾಮದ ಹೊರ ವಲಯದಲ್ಲಿ ಚನ್ನೂರೂ ರೋಡಿನಿಂದ 200 ಮೀಟರ ದೂರದಲ್ಲಿ ದೇವಪ್ಪ ಮಡಿವಾಳ ಇವರ ಮನೆ ಹತ್ತಿರ ಇರುವ ಖಾಲಿ ನಿವೇಶನದಲ್ಲಿ ಅಕ್ರಮ ಮರಳು ಸಂಗ್ರಹಿಸಿದ್ದು, ಸದರಿ ಮರಳನ್ನು ಟ್ರ್ಯಾಕ್ಟರ/ಟಿಪ್ಪರಗಳಿಗೆ ತುಂಬಲು ಜೆ.ಸಿ.ಬಿಯನ್ನು ಸಿದ್ದಮಾಡಿ ನಿಲ್ಲಿಸಿದ್ದು ಕಂಡು ಬಂತು. ಆಗ ಸಮಯ 12-30 ಪಿಎಮ್ ಸುಮಾರಿಗೆ ನಾನು ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಜೆ.ಸಿ.ಬಿ ಆಪರೇಟರ ವಿನೋದ ತಂದೆ ಕೋಮಣ್ಣ ವ:19, ಜಾ:ಲಮ್ಮಾಣಿ ಸಾ:ಅರಕೇರಾ (ಕೆ) ಮತ್ತು ಜೆ.ಸಿ.ಬಿ ಹೆಲ್ಪರ ಕುಮಾರ ತಂದೆ ಹೂನ್ಯಾ ರಾಠೋಡ, ವ:21, ಜಾ:ಲಮ್ಮಾಣಿ ಸಾ:ಮುದ್ನಾಳ ತಾಂಡ ಇವರಿಗೆ ವಶಕ್ಕೆ ಪಡೆದುಕೊಂಡು ಸದರಿ ಅಕ್ರಮ ಮರಳು ಸಂಗ್ರಹಿಸಿರುವ ಜಾಗೆ ಯಾರದೂ ಮತ್ತು ಮರಳು ಯಾರಿಗೆ ಸೇರಿರುತ್ತದೆ ಎಂದು ವಿಚಾರಿಸಲಾಗಿ ಸದರಿ ಜಾಗವು ಬಸಣ್ಣಗೌಡ ತಂದೆ ಮಲ್ಲಣ್ಣಗೌಡ ಪೊಲೀಸ್ ಪಾಟಿಲ್ ಸಾ:ಚನ್ನೂರು ಇವರಿಗೆ ಸೇರಿದ್ದು, ಸದರಿ ಬಸಣ್ಣಗೌಡ ಮತ್ತು ಶರಣಗೌಡ ಪೊಲೀಸ್ ಪಾಟಿಲ್ ಸಾ:ಚನ್ನೂರು ಎಂಬ ಇಬ್ಬರೂ ಸೇರಿ ಅಕ್ರಮ ಮರಳು ಸಂಗ್ರಹಿಸಿರುತ್ತಾರೆ ಎಂದು ಹೇಳಿದರು. ಸದರಿ ಸಂಗ್ರಹಿಸಿರುವ ಮರಳು ಪರಿಶೀಲಿಸಿ ನೋಡಲಾಗಿ ಅಂದಾಜು 6 ಟಿಪ್ಪರನಷ್ಟು ಮರಳು ಸಂಗ್ರಹಿಸಿದ್ದು, ಅಂದಾಜು ಬೆಲೆ 24,000=00 ರೂ. ಆಗಬಹುದು ಜೆ.ಸಿ.ಬಿ ನೋಡಲಾಗಿ ನಂ. ಕೆಎ 33 ಎ 6037 ಇದ್ದು, ಮಾಲಿಕನ ಹೆಸರು ಕೇಳಲಾಗಿ ವಿನೋದ ರಾಠೋಡ ಸಾ:ಮುದ್ನಾಳ ತಾಂಡಾ ಎಂದು ಹೇಳಿದರು. ಸದರಿ ಜೆ.ಸಿ.ಬಿ ಯನ್ನು ತಾಬಕ್ಕೆ ಪಡೆದುಕೊಂಡೆನು. ಅಕ್ರಮ ಮರಳು ಸಂಗ್ರಹಿಸಿದ್ದನ್ನು ಕಾವಲು ಕಾಯುವ ಕುರಿತು ವಡಗೇರಾ ಠಾಣೆಯ ಹಣಮಂತ ಹೆಚ್.ಜಿ 279 ರವರಿಗೆ ನೇಮಕ ಮಾಡಿದ್ದು ಇರುತ್ತದೆ. ಕಾರಣ ಅಕ್ರಮ ಮರಳು ಸಂಗ್ರಹಣೆ/ಸಾಗಾಣಿಕೆಯಲ್ಲಿ ಭಾಗಿದಾರರಾಗಿರುವ ಜೆ.ಸಿ.ಬಿ ಆಪರೇಟರ ವಿನೋದ ತಂದೆ ಕೋಮಣ್ಣ ವ:19, ಜಾ:ಲಮ್ಮಾಣಿ ಸಾ:ಅರಕೇರಾ (ಕೆ) ಮತ್ತು ಜೆ.ಸಿ.ಬಿ ಹೆಲ್ಪರ ಕುಮಾರ ತಂದೆ ಹೂನ್ಯಾ ರಾಠೋಡ, ವ:21, ಜಾ:ಲಮ್ಮಾಣಿ ಸಾ:ಮುದ್ನಾಳ ತಾಂಡ ಇವರಿಗೆ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ವಡಗೇರಾ ಪೊಲೀಸ್ ಠಾಣೆಗೆ ಬಂದು ಸಮಯ 1-45 ಪಿಎಮ್ ಕ್ಕೆ ಠಾಣಾಧಿಕಾರಿಗಳಿಗೆ ಜೆ.ಸಿ.ಬಿ, ಇಬ್ಬರೂ ಆರೋಪಿತರನ್ನು ಈ ವರದಿಯೊಂದಿಗೆ ಒಪ್ಪಿಸಿದ್ದು, ಅಕ್ರಮ ಮರಳು ಸಂಗ್ರಹಿಸಿರುವ ಬಸಣ್ಣಗೌಡ, ಶರಣಗೌಡ, ಜೆ.ಸಿ.ಬಿ ಮಾಲಿಕ ವಿನೋದ ಮತ್ತು ಆಪರೇಟರ ವಿನೋದ ಹಾಗೂ ಜೆ.ಸ.ಬಿ ಹೆಲ್ಪರ ಕುಮಾರ ಇವರುಗಳ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 166/2018 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ ;- 168/2018  ಕಲಂ 379 ಐ.ಪಿ.ಸಿ;- ದಿನಾಂಕ 25-07-2018 ರಂದು 12-30 ಪಿ.ಎಮ್ ಕ್ಕೆ ಶ್ರೀ ಎನ್.ವೈ ಗುಂಡುರಾವ ಪಿ.ಎಸ್.ಐ (ಕಾಸು) ಯಾದಗಿರಿ ಗ್ರಾಮೀಣ ಠಾಣೆರವರು ಠಾಣೆಗೆ ಹಾಜರಾಗಿ ಮುದ್ದೆಮಾಲನ್ನು ಜಪ್ತಿ ಪಂಚನಾಮೆಯೊಂದಿಗೆ ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 25-07-2018 ರಂದು ಬೆಳಗ್ಗೆ 10 ಎ.ಎಮ್ ಸುಮಾರಿಗೆ ತಮಗೆ ಭಾತ್ಮೀ ಬಂದಿದ್ದೆನೆಂದರೆ ಕೊಯಿಲೂರ ಗ್ರಾಮದ ಕಡೆಯಿಂದ ಯಾರೋ ಟ್ರಾಕ್ಟರದಲ್ಲಿ ಅನಧೀಕೃತವಾಗಿ ಕಳ್ಳತನದಿಂದ ಉಸುಕು ಕಳುವು ಮಾಡಿಕೊಂಡು ಯಾದಗಿರಿ ಕಡೆಗೆ ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದಿದ್ದು ಅಲ್ಲಿಗೆ ಹೋಗಿ ದಾಳಿ ಮಾಡುವ ಸಲುವಾಗಿ ತಮ್ಮ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಾದ ಕುಮಾರಿ ಜೈಶ್ರೀ ಪಿ.ಎಸ್.ಐ ಪ್ರೊಬೇಷನರಿ, ಶ್ರೀ ಜಗನ್ನಾಥರೆಡ್ಡಿ ಪಿಸಿ-114 ಹಾಗೂ ಶ್ರೀ ಅಬ್ದುಲ ಬಾಷಾ ಪಿಸಿ-237 ಎಲ್ಲರನ್ನು ಸಂಗಡ ಕರೆದುಕೊಂಡು ಠಾಣೆಯ ಸರಕಾರಿ ಜೀಪಿನಲ್ಲಿ ಠಾಣೆಯಿಂದ 10-30 ಗಂಟೆಗೆ ಮಾಹಿತಿ ಬಂದ ಕಡೆಗೆ ಹೊರಟು ಎಮ್ ಹೋಸಳ್ಳಿ ಗ್ರಾಮ ದಾಟಿ ಎಮ್ ಹೊಸಳ್ಳಿ ತಾಂಡಾ ಕ್ರಾಸ ಹತ್ತಿರ ಮರೆಯಲ್ಲಿ ನಿಂತು ಕೊಯಿಲೂರು ಗ್ರಾಮದ ಕಡೆಯಿಂದ ಬರುವ ವಾಹನಗಳನ್ನು  ಗಮನಿಸುತ್ತಾ ನಿಂತಾಗ ಬೆಳಗ್ಗೆ 11 ಗಂಟೆ ಸುಮಾರಿಗೆ ಕೋಯಿಲೂರು ಗ್ರಾಮದ ಕಡೆಯಿಂದ ಒಂದು ಟ್ರ್ಯಾಕ್ಟರ ಬಂದಿದ್ದು ತಮಗೆ ಆ ವಾಹನದ ಮೇಲೆ ಸಂಶಯ ಬಂದಾಗ ಪೋಲಿಸರೆಲ್ಲರೂ ಸದರಿ ವಾಹನಕ್ಕೆ ಕೈ ಮಾಡಿ ನಿಲ್ಲಿಸಲು ಹೇಳಿದಾಗ ಅದರ ಚಾಲಕನು ಟ್ರ್ಯಾಕ್ಟ್ಪರನ್ನು ಅಲ್ಲಿಯೇ ನಿಲ್ಲಿಸಿ ತಾನು ವಾಹನದಿಂದ ಇಳಿದು ನಮ್ಮಿಂದ ತಪ್ಪಿಸಿಕೊಂಡು ಅಲ್ಲಿಂದ ಓಡಿ ಹೋದನು. ಓಡಿ ಹೋದವನು ಚಾಲಕ ಮತ್ತು ಅದರ ಮಾಲೀಕನಿದ್ದು ಅವನ ಹೆಸರು ಗುಂಡಪ್ಪಾ ತಂದೆ ಸಾಬಣ್ಣಾ ಸಾ: ಡೋಣಗಾಂವ ತಾ:ಚಿತಾಪೂರ ಅಂತಾ ಗೊತ್ತಾಯಿತು. ನಂತರ ಸದರಿ ಟ್ರ್ಯಾಕ್ಟರ ನಂಬರ ಪರಿಶೀಲಿಸಲಾಗಿ ಅದರ ನಂಬರ ಕೆ.ಎ-32/ಟಿ.ಬಿ-0603 ಮತ್ತು ಟ್ರಾಯಲಿ ನಂ: ಕೆ.ಎ-32/ಟಿ.ಬಿ-0604 ಅಂತಾ ಇದ್ದು ಟ್ರಾಯಲಿಯಲ್ಲಿ ಉಸುಕು ತುಂಬಿದ್ದು ಸದರಿ ಉಸುಕಿನ ಅಂದಾಜ ಕಿಮ್ಮತ್ತು 600 ರೂಪಾಯಿ ಆಗಬಹುದು. ಮತ್ತು ಸದರಿ ಉಸುಕಿನಲ್ಲಿ ಶ್ಯಾಂಪಲಿಗಾಗಿ 2 ಕೆ.ಜಿ ಯಷ್ಟು ಉಸುಕನ್ನು ಪ್ರತ್ಯೇಕವಾಗಿ ಜಪ್ತಿಪಡಿಸಿಕೊಂಡರು. ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟ್ಪರದಲ್ಲಿ ಮರಳು ಸಾಗಾಣಿಕೆ ಮಾಡಲು ಸಕರ್ಾರದಿಂದ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಮರಳನ್ನು ಕದ್ದು, ಸಕರ್ಾರಕ್ಕೆ ಯಾವುದೇ ರಾಜ ಧನವನ್ನು ಪಾವತಿಸದೇ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಟ್ರ್ಯಾಕ್ಟರದಲ್ಲಿ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಖಚಿತ ಪಡಿಸಿಕೊಳ್ಳಲಾಯಿತು. ಸದರಿ ಪಂಚನಾಮೆಯನ್ನು ಇಂದು ದಿನಾಂಕ 25-07-2018 ರಂದು ಬೆಳಗ್ಗೆ 11 ಗಂಟೆಯಿಂದ ಮದ್ಯಾಹ್ನ 12 ಗಂಟೆಯವರೆಗೆ ಸ್ಥಳದಲ್ಲಿಯೇ ಕುಳಿತು ಬರೆದು ಮುಗಿಸಿ ಮುಂದಿನ ಕ್ರಮಕ್ಕಾಗಿ ಹಾಜುರಪಡಿಸಿದ್ದು ಜಪ್ತಿಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ 168/2018 ಕಲಂ 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
 
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 358/2018.ಕಲಂ. 143. 147. 363(ಎ) 504. 506 ಸಂಗಡ 149 ಐಪಿಸಿ;- ದಿನಾಂಕ 25/07/2018 ರಂದು ರಾತ್ರಿ 9-30 ಪಿ,ಎಂ ಕ್ಕೆ  ಠಾಣೆಗೆ ಪಿಯರ್ಾದಿ ಶ್ರೀ ವೆಂಕಟೇಶ ತಂದೆ ತಿಮ್ಮಣ್ಣ ಮಕಾಶಿ ವಯ|| 45 ವರ್ಷ ಉ|| ಒಕ್ಕಲತನ ಜಾ|| ಬೇಡರ ಸಾ|| ಮರಕಲ ತಾ|| ಶಹಾಪೂರ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ ಮಾಡಸಿದ ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೇಂದರೆ. ನನಗೆ 4 ಜನರು ಗಂಡು ಮಕ್ಕಳು ಒಂದು ಹೆಣ್ಣು ಮಗಳು ಇದ್ದು ಅದರಲ್ಲಿ ಲಕ್ಷ್ಮಿ ಹಿರಿಯವಳು ಸರಕಾರಿ ಹಿರಿಯ ಪ್ರೌಢ ಶಾಲೆ ಕೊಳ್ಳುರ ಎಂ 10 ನೇ ತರಗತಿಯಲ್ಲಿ ವ್ಯಾಸಾಂಗ ಮಡುತ್ತಿದ್ದು ವಯಸ್ಸು 16 ಇದ್ದು ನಮ್ಮೂರು ಆದ ಮರಕಲ ಗ್ರಾಮದಿಂದ ಕೊಳ್ಳುರ ಎಂ ಸರಾಸರಿ 3 ಕೀ,ಮಿ ಇದ್ದು ನನ್ನ ಮಗಳು ದಿನಾಲು ಶಾಲೆಗೆ ನಡೆದುಕೊಂಡು ಹೋಗಿ ಬರುತ್ತಾಳೆ. ಕಾರಣ ಶಾಲೆಗೆ ಹೋಗುವಾಗ ಬರುವಾಗ ಆರೋಪಿ ಚಿದಾನಂದ ಯಂಕಣ್ಣ ದೋರಿ ಈತನು ನನ್ನ ಮಗಳಿಗೆ ಪ್ರಿತಿ ಮಾಡು ನಿನಗೆ ನಾನು ಮದುವೆ ಆಗುತ್ತೆನೆ ಎಂದು ಪಿಡಿಸುತ್ತಾನೆ. ನನ್ನ ಮಗಳು ನನ್ನ ತಂದೆ-ತಾಯಿಗೆ ಹೇಳುತ್ತೆನೆಂದು ಹೇಳಿದಾಗ ನನಗೆ ಯಾರ ಭಯವಿಲ್ಲ ಎಂದು ಹೇಳುತ್ತಾನೆ, ನಿನ್ನ ಮನೆಯವರು ನನಗ ೆಏನು ಮಾಡುವದಿಲ್ಲ ಎಂದು ತೊಂದರೆ ಕೊಡುತ್ತಿದ್ದನು
       ಸದರಿ ವಿಷಯವು ನನ್ನ ಮಗಳು ನನ್ನ ಕುಟುಂಬಕ್ಕೆ ತಿಳಿಸಿದಳು ಈ ವಿಷಯದ ಬಗ್ಗೆ ನಾವು ಎಲ್ಲರೂ ಕೂಡಿ ಕೊಂಡು ಹೋಗಿ ಚಿದಾನಂದನ ಹತ್ತಿರ ಹೋಗಿ ಇತರಹ ಮಾಡುವದು ಸರಿ ಅಲ್ಲ ಒಂದೆ ಊರಿನವರು ಸಹೋದರರಂತೆ ಇರಬೇಕೆಂದು ಬುದ್ದಿ ಮಾತು ಹೇಳಿದೆವು. ದಿನಾಂಕ: 22/07/2018 ರಂದು ಬೆಳಗ್ಗೆ 5 ಗಂಟೆಗೆ ನೋಡಿದಾಗ ನನ್ನ ಮಗಳು ಕಾಣಲಿಲ್ಲ. ಮನೆಯಲ್ಲಿ ವಿಚಾರಿಸಿದಾಗ ಹೊರಗಡೆ ಶೌಚಾಲಯಕ್ಕೆ ಹೋಗಿರ ಬಹುದೆಂದು ತಿಳಿಸಿದರು ನಾನು ಊರಿನ ಮದ್ಯದಲ್ಲಿರುವ ಹೋಟೆಲನಲ್ಲಿ ಚಹಾ ಕುಡಿಯುತ್ತಿರುವಾಗ ನನ್ನ ಅಣ್ಣನ ಮಗನಾದ ತಿಮ್ಮಣ್ಣ ಬಂದು ನನ್ನ ತಂಗಿಯನ್ನು ಇದೆ ಊರಿನವನಾದ ಆರೋಪಿ ಚಿದಾನಂದ ಮತ್ತು ಆತನ ತಮ್ಮ ತಿರುಪತಿ ಇಬ್ಬ್ರೂ ಕೂಡಿ ಸಂಚು ಹಾಕಿ ನನ್ನ ಮಗಳು ಲಕ್ಷ್ಮೀನನ್ನು ಬಲವಂತವಾಗಿ ಮೋಟಾರ ಸೈಕಲ ಮೇಲೆ ಕರೆದುಕೊಂಡು ಹೊಗುವದನ್ನು ತಿಮ್ಮಣ್ಣ ನೊಡುತ್ತಿರುವಾಗ ಲಕ್ಷ್ಮಿ ನನ್ನ ಕಡೆ ಕೈ ಸನ್ನೆ ಮಾಡಿದಳು ನಾನು ಅವರ ಹತ್ತಿರ ಹೊಗುವಾಗ ಆರೋಪಿ ಅತೀ ವೇಗವಾಗಿ ಮೋಟಾರ ಸೈಕಲ ಚಲಿಸಿಕೊಂಡು ಹೊದನು. ಎಂದು ಹೇಳಿದನು.
     ಸದರಿ ವಿಷಯ ತಿಳಿದು ನಾವು ನಮ್ಮ ಕುಟುಂಬದವರು ಎಲ್ಲರೂ ಸೇರಿ ಅವರ ಮನೆಗೆ ಹೊಗಿ ಕೇಳಿದಾಗ ಆರೋಪಿ ತಂದೆ ತಾಯಿ ಮತ್ತು ಅಣ್ಣ ತವ್ಮ್ಮಂದಿರು ಸೇರಿ ನಮ್ಮ ಮೇಲೆ ಬಡಿಗೆಯಿಂದ ಹಲ್ಲೆ ಮಾಡಲು ಬಂದರು ಅದೇ ಸಮಯಕ್ಕೆ ಊರಿನ ಹಿರಿಯರು ಬಂದು ಜಗಳವನ್ನು ಬಿಡಿಸಿದರು ಹಾಗೂ ಊರಿನ ಹಿರಿಯರ ಸಮ್ಮೂಖದಲ್ಲಿ ಯಂಕಣ್ಣ ತಂದೆ ಹಣಮಣ್ಣ ದೋರಿ, ಶರಮ್ಮ ಗಂಡ ಯಂಕಣ್ಣ , ಶಂಕರಗುರು ತಂದೆ ಯಂಕಣ್ಣ , ಹಣಮಣ್ಣ ತಂದೆ ಯಂಕಣ್ಣ, ಹಾಗೂ ಗೊಂದಪ್ಪ ತಂದೆ ಹಣಮಣ್ಣ ಇವರು ಎಲ್ಲರೂ ಸೇರಿ ನಮಗೆ ಅವಮಾನ ಮಾಡಿ ನಿಮಗೆ ಜೀವ ಸಹಿತ ಸುಟ್ಟು ಹಾಕುತ್ತೆವೆ ಎಂದು ಬೆದರಿಸಿದರು. ಸದರಿ ವಿಷಯದ ಬಗ್ಗೆ ಸಮಜಾದ ಹಿರಿಯರು ಮೂರು ನಾಲ್ಕು ದಿವಸದಲ್ಲಿ ಸಮಸ್ಯೆಯನ್ನು ಬಗೆ ಹರಿಸುತ್ತೆವೆ ಎಂದು ಹೇಳಿದರು. ದಿನಾಂಕ: 25/07/2018 ಆರೋಪಿ ಮನೆಯವರಿಗೆ ಕೇಳಿದಾಗ ನೀವು ಏನು ಮಾಡಕೊತಿರಿ ಮಾಡಕೊಳಿ ಎಂದು ಬೆದರಿಕೆ ಹಾಕಿದರು ಮನ್ಯ ಪೊಲೀಸ್ ಅಧಿಕಾರಿಳು ಕಾನೂನು ಕ್ರಮ ತೆಗೆದುಕೊಂಡು ನಾಯ್ಯ ಒದಗಿಸಿ ಕೊಡಬೇಕಾಗಿ ತಮ್ಮಲ್ಲಿ ವಿನಂತಿ ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 358/2018 ಕಲಂ 143. 147. 363(ಎ) 504. 506 ಸಂಗಡ 149 ಐಪಿಸಿ ರಿತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡೆನು.
 


BIDAR DISTRICT DAILY CRIME UPDATE 26-07-2018



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 26-07-2018

ಚಿಟಗುಪ್ಪಾ ಪೊಲೀಸ ಠಾಣೆ ಅಪರಾಧ ಸಂ. 134/2018, ಕಲಂ. 376, 506 ಐಪಿಸಿ ಮತ್ತು ಕಲಂ. 3(1) (ಆರ್) (ಎಸ್) ಎಸ್.ಸಿ/ಎಸ್.ಟಿ ಕಾಯ್ದೆ 1989 & 2015 :-
ಆರೋಪಿ ರವಿ ತಂದೆ ವೀರಶೆಟ್ಟಿ ಕಾಳಗಿ ವಯ: 25 ವರ್ಷ, ಜಾತಿ: ಲಿಂಗಾಯತ, ಸಾ: ಮುಸ್ತರಿ, ತಾ: ಹುಮನಾಬಾದ ಇತನು ಫಿರ್ಯಾದಿಗೆ ಮದುವೆಯಾಗುತ್ತೇನೆಂದು ನಂಬಿಸಿ ಫಿರ್ಯಾದಿಯು ಕೆಲಸ ಮಾಡುವ ಕಬ್ಬಿನ ಹೊಲದಲ್ಲಿ ದಿನಾಂಕ 22-07-2018 ರಂದು ದೈಹಿಕ ಸಂಭೋಗ ಮಾಡಿರುತ್ತಾನೆ, ಅದೇ ರೀತಿ ಮೊದಲು ಸಹ ದೈಹಿಕ ಸಂಪರ್ಕ ಮಾಡಿರುತ್ತಾನೆ, ನಂತರ ದಿನಾಂಕ 23-07-2018 ರಂದು ಆರೋಪಿಯು ಫಿರ್ಯಾದಿಗೆ ಕರೆ ಮಾಡಿ ಕರೆದಾಗ ಫಿರ್ಯಾದಿಯು ಆರೋಪಿಯ ಮನೆ ಹತ್ತಿರ ಹೋದಾಗ ಅವನು ಒಂದು ಮೋಟರ ಸೈಕಲ ಮೇಲೆ ಫಿರ್ಯಾದಿಗೆ ಕೂಡಿಸಿಕೊಂಡು ಚಿಮ್ಮನಚೋಡ ಗ್ರಾಮದಲ್ಲಿ ಬಿಟ್ಟು ಒಂದು ಸಾವಿರ ಹಣ ನೀಡಿ ಬಟ್ಟೆ ಖರೀದಿ ಮಾಡು ಅಂತಾ ಹೇಳಿ ಹೋಗಿರುತ್ತಾನೆ, ನಂತರ ಫಿರ್ಯಾದಿಯು ರವಿ ಬರುತ್ತಾನೆಂದು ದಾರಿ ಕಾಯ್ದು ಅವನಿಗೆ ಕರೆ ಮಾಡಿದರೂ ಹತ್ತದಿದ್ದಾಗ ನಂತರ ಅಲ್ಲಿಯೇ ಮಠದಲ್ಲಿ ಮಲಗಿಕೊಂಡು ಮರುದಿನ ದಿನಾಂಕ 24-07-2018 ರಂದು ಹುಮನಾಬಾದನಮ್ಮ ಗೆಳತಿಯ ಮನೆಗೆ ಹೋಗಿ ರವಿಗೆ ಕರೆ ಮಾಡಿ ಮದುವೆ ಮಾಡಿಕೊ ಎಂದು ಕೇಳಿಕೊಂಡರೆ ಆತನು ಫಿರ್ಯಾದಿಗೆ ನಾನು ಮೇಲಜಾತಿಯ ಹುಡುಗ ನಿನ್ನಂಥಹ ಕೆಳಜಾತಿಯ ಹುಡುಗಿಯನ್ನು ಮದೆವೆಯಾಗುವುದಿಲ್ಲ ಅವಾಚ್ಯವಾಗಿ ಬೈದು ನಿರಾಕರಿಸಿರುತ್ತಿದ್ದಾನೆ ಮತ್ತು ಬಗ್ಗೆ ಯಾರ ಹತ್ತಿರ ಕೂಡ ಹೇಳಬಾರದು ಎಷ್ಟೆ ಹಣ ಕೇಳು ಕೊಡುತ್ತೇನೆ, ಆದರೆ ಮದುವೆಯಾಗುವದಿಲ್ಲ, ಹೇಳಿದರೆ ನಿನಗೆ ಬಿಡಲ್ಲ ಅಂತಾ ಜೀವ ಬೇದರಿಕೆ ಹಾಕಿರುತ್ತಾನೆಂದು ಕೊಟ್ಟ ಫಿರ್ಯಾದು  ಅರ್ಜಿ ಸಾರಾಂಶದ ಮೇರೆಗೆ ದಿನಾಂಕ 25-07-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.                                  


KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಮುಧೋಳ ಠಾಣೆ : ದಿನಾಂಕ: 25-07-2018 ರಂದು ಬೆಳಗ್ಗೆ 0930 ಗಂಟೆ ಸುಮಾರಿಗೆ ನಮ್ಮೂರ ನಮ್ಮ ಮನೆಯ ಹತ್ತಿರ ರುವ ಖಾಸೀಮ್ ಸಾಬ ತಂದೆ ಹಸೇನಸಾಬ ಪಿಂಜಾರ ಇತನು ನಮ್ಮ ಮನೆಗೆ ಬಂದು ನನ್ನ ಮಗವಾಸಿಮ್ ಇತನಿಗೆ ಆರಾಮ ಇರುವದಿಲ್ಲಾ ಇತನಿಗೆ ನಮ್ಮ ಮೊ/ಸೈ ಮೇಲೆ ಗುರುಮಠಕಲಗೆ ಕರೆದುಕೊಂಡು ಹೋಗಿ ದಾವಾಖಾನೆಗೆ ಹೋಗಿ ತೊರಿಸಿಕೊಂಡು ಬರೋಣಾ ಬಾ ಅಂತಾ ಹೇಳಿ ತನ್ನ ಸಂಗಡ ನನ್ನ ಮಗ ರಾಜಶೇಖರ ಇತನಿಗೆ ಮನೆಯಿಂದ ಕರೆದುಕೊಂಡು ಹೋದನು. ನಂತರ ಬೆಳಗ್ಗೆ 1140 ಗಂಟೆ ಸುಮಾರಿಗೆ ನಾನು ಹಾಗು ನನ್ನ ಗಂಡ ಸಿದ್ದಲಿಂಗಪ್ಪ ಇಬ್ಬರು ಮನೆಯಲ್ಲಿದ್ಧಾಗ ನಮ್ಮೂರ ವೆಂಕಟರೆಡ್ಡಿಯ ಮಗನಾದ ಚಿನ್ನಾ ಇತನು ನಮ್ಮ ಮನೆಗೆ ಬಂದು ತಿಳಿಸಿದೆನೆಂದರೆ, ಈಗ 1130 ಗಂಟೆ ಸುಮಾರಿಗೆ ನಿಮ್ಮ ಮಗ ರಾಜಶೇಖರ ಇತನು ಖಾಸಿಮ ಸಾಬ ಇತನ ಮೊ/ಸೈ ಮೇಲೆ ಕುಳಿತು ಗುರುಮಠಕಲದಿಂದ ಊರಿಗೆ ಬರುವಾಗ ಇಟ್ಕಲ್ ಕ್ರಾಸ ಹತ್ತಿರ ರಸ್ತೆಯಲ್ಲಿ ಒಬ್ಬ ಬಸ್ಸನ ಚಾಕಲನು ಮೊ/ಸೈಗೆ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದರಿಂದ ರಾಜಶೇಖರ ಮತ್ತು ಖಾಸಿಂ ಸಾಬ ಇಬ್ಬರು ಸ್ಥಳದಲ್ಲಿಯೇ ಸತ್ತಿರುತ್ತಾರೆ ಅಂತಾ ನನಗೆ ಗೊತ್ತಾಗಿದೆ ಅಂತಾ ತಿಳಿಸಿದ್ದು, ತಕ್ಷಣ ನಾನು ನನ್ನ ಗಂಡ ಸಿದ್ದಲಿಂಗಪ್ಪ ಹಾಗು ನಮ್ಮ ಮನೆಯ ಹತ್ತಿರದ ಖಾಸಿಂ ಸಾಬ ಇತನ ಹೆಂಡತಿಯಾದ ಶಬನಾಬೇಗಂ ಇತರರು ಕೂಡಿಕೊಂಡು ಇಂದು ಮದ್ಯಾಹ್ನ ಗುರುಮಠಕಲ ದಿಂದ ಇಟ್ಕಲ ಕಡೆಗೆ ಬರುವ ಮುಖ್ಯ ರಸ್ತೆಯಲ್ಲಿ ಭೀಮರೆಡ್ಡಿ ಇವರ ಹೊಲದ ಹತ್ತಿರ ಹೋಗಿ ನೋಡಲಾಗಿ ರಸ್ತೆಯ ಮೇಲೆ ನನ್ನ ಮಗ ರಾಜಶೇಖರ @ ಶೇಖರ ಹಾಗು ಸದರಿ ಮೊ/ಸೈ ಚಾಲಕ ಖಾಸಿಂ ಸಾಬ ತಂದೆ ಹಸನ ಸಾಬ ಪಿಂಜಾರ ಇಬ್ಬರು ಸ್ಥಳದಲ್ಲಿಯೇ ಸತ್ತುಬಿದಿದ್ದು, ನನ್ನ ಮಗನ ಹಣೆಗೆ ಭಾರಿ ರಕ್ತಗಾಯವಾಗಿದ್ದು, ಹಾಗು ಕೈಕಾಲುಗಳಿಗೆ ತರುಚಿದ ರಕ್ತಗಾಯಗಳಾಗಿದ್ದು ಹಾಗು ಸದರಿ ಖಾಸಿಂಸಾಬ ಇತನಿಗೆ ತಲೆಗೆ ಹಾಗು ಇತರೆ ಕಡೆಗೆ ಭಾರಿರಕ್ತಗಾಯಗಳಾಗಿದ್ದು, ಸದರಿ ಖಾಸಿಂ ಸಾಬ ಇತನ ತಲೆಗೆ ಹಾಗು ಇತರೆ ಕಡೆ ಭಾರಿರಕ್ತಗಾಯಗಳಾಗಿದ್ದು ಸದರಿ ಖಾಸಿಂ ಸಾಬ ಇತನ ಮಗನಾದ ವಾಸಿಮ್ 04 ವರ್ಷ ಇತನಿಗೆ ಭಾರಿರಕ್ತಗಾಯಗಳಾಗಿದ್ದರಿಂದ ಅವನಿಗೆ ಉಪಚಾರಕುರಿತು ಗುರುಮಠಕಲ ಸರಕಾರಿ ದವಾಖಾನೆಗೆ ತೆಗೆದುಕೊಂಡು ಹೋಗಿದ್ದು ಇರುತ್ತದೆ. ಅಲ್ಲಿ ರಸ್ತೆಯ ಪಕ್ಕದಲ್ಲಿ ಸದರಿ ಖಾಸಿಂ ಸಾಬ ಇತನ ಮೊ/ಸೈ ನಂ ಕೆಎ32ಈಸಿ5279 ನೇದ್ದು ಬಿದಿದ್ದು ಹಾಗು ಸ್ವಲ್ಪ ಮುಂದುಗಡೆ ಗುರುಮಠಕಲ್ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಒಂದು ಕೆ.ಎಸ್.ಆರ್ ಟಿ.ಸಿ ಬಸ್ಸ ನಂ ಕೆಎ33/ಎಫ-0186 ನೇದ್ದು ನಿಂತಿದ್ದು ಇರುತ್ತದೆ. ಅಂತಾ ಶ್ರೀಮತಿ ಪಾರ್ವತಮ್ಮ ಗಂಡ ಸಿದ್ದಲಿಂಗಪ್ಪ ನಕ್ಕಲಗಡ್ಡಾ ಸಾ: ಗಾಡದಾನ ಗ್ರಾಮ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಗ್ರಾಮೀಣ ಠಾಣೆ : ಶ್ರೀ. ಶ್ರೀಮಂತ ತಂದೆ ಬಸವಣ್ಣ ಬೇಲಸೂರೇ ಸಾ:ಮುನ್ನೋಳ್ಳಿ ತಾ:ಆಳಂದ ಜಿ:ಕಲಬುರಗಿ ಹಾವ: ಇಂಡಸ್ರ್ಟೀಯಲ್ ಏರಿಯಾ ಕಪನೂರ ರವರ ಮಗ ವಿಜಯಕುಮಾರ  ಬೆಲಸೂರೆ ಇತನು ದಿನಾಂಕ. 24-7-2018 ರಂದು 4-30 ಪಿ.ಎಂ.ಕ್ಕೆ. ತನ್ನ ಬಜಾಜ ಪಲ್ಸರ ಮೋಟಾರ ಸೈಕಲ್ ನಂ KA-37 W-6001 ಮೋಟಾರ ಸೈಕಲ್ ನ್ನು ತೆಗೆದುಕೊಂಡು ತನ್ನ ಯಾವುದೋ ಕೆಲಸ ಆಳಂದ ರೋಡಿನ ಕಡೆಗೆ ಹೋಗಿ ಮರಳಿ ಕಲಬುರಗಿ ಕಡೆಗೆ ಬರುತ್ತಿರುವಾಗ ತನ್ನ ಮೋಟಾರ ಸೈಕಲ್ ಅತೀವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸುತ್ತಾ ತನ್ನ ಮುಂದುಗಡೆ ಹೋಗುತ್ತಿದ್ದ ಕೆ.ಎಸ್.ಆರ್.ಟಿಸಿ ಬಸಗೆ ಓವರ ಟೇಕ್ ಮಾಡಲು ಹೋಗಿ ಮೋಟಾರ ಸೈಕಲ ವೇಗದ ನಿಯಂತ್ರಣ ತಪ್ಪಿ ರೇಲ್ವೆ ಬ್ರಿಜಗೆ ಇರುವ ಕಬ್ಬಿಣದ ಪಟ್ಟಿಗೆ  ಅಪಘಾತಪಡಿಸಿದ್ದರಿಂದ್ದ ಆತನ ತಲೆಗೆ ಹಾಗು ಇತರೇ ಭಾಗಕ್ಕೆ ಭಾರಿ ರಕ್ತಗಾಯ ಹಾಗು ಗುಪ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಮಾಡಿ ನಿಂದನೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ  ವಾಲು ತಂದೆ ಚೋಕಲು ರಾಠೋಡ ಸಾ|| ಕೊಣ್ಣೂರ ತಾಂಡಾ ತಾ|| ಜೇವರ್ಗಿ ರವರು ತಮ್ಮೂರ ಸೀಮಾಂತರದಲ್ಲಿ ಸರ್ವೆ ನಂ 1 ನೇದ್ದರಲ್ಲಿ  2 ಎಕರೆ 38 ಗುಂಟೆ, ಮತ್ತು ಸರ್ವೆ ನಂ 2 ನೇದ್ದರಲ್ಲಿ 7 ಎಕರೆ 33 ಗುಂಟೆ ಜಮೀನು ನಾವು ಸುಮಾರು 60 ವರ್ಷಗಳಿಂದ ಕಬ್ಜೆಯಲ್ಲಿದ್ದು, ಇಲ್ಲಿಯವರೆಗೆ ನಾವೇ ಸಾಗುವಳಿ ಮಾಡುತ್ತಾ ಬಂದಿರುತ್ತೇವೆ, ಈ ಹೊಲಗಳ ಬಗ್ಗೆ ಸುರಪುರ ತಾಲೂಕಿನ ಪರಸನಳ್ಳಿ ಗ್ರಾಮದ ಶಿವರಾಜ ತಂದೆ ರಾಯಪ್ಪ ದೊಡಮನಿ ಇವರು ಸುಮಾರು ವರ್ಷಗಳಿಂದ ತಕರಾರು ಮಾಡಿಕೊಂಳ್ಳುತ್ತಾ ಬಂದಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ದಾವೇ ಹುಡಿದ್ದು ದಿನಾಂಕ 23-07-2018 ರಂದು 2;00 ಪಿ.ಎಂ ಸುಮಾರಿಗೆ ನಾನು ಮತ್ತು ನನ್ನ ಮಗ ಬದ್ದು, ನನ್ನ ಸೊಸೆ ಸೋನಾಬಾಯಿ, ರಾಣಿಬಾಯಿ ರವರು ಕೂಡಿ ನಮ್ಮ ಹೊಲ ಸರ್ವೆ ನಂ 1 ನೇದ್ದರಲ್ಲಿ ಕೆಲಸ ಮಾಡುತ್ತಿದ್ದೇವು, ಅದೇ ಸಮಯಕ್ಕೆ 1] ಶಿವರಾಜ ತಂದೆ ರಾಯಪ್ಪ ದೊಡಮನಿ ಮತ್ತು ಅವರ ಸಂಬಂಧಿಕರಾದ 2] ಶರಣಪ್ಪ ತಂದೆ ಶಂಕ್ರೆಪ್ಪ ಪೂಜಾರಿ ಸಾ|| ಪರಸನಳ್ಳಿ, 3] ಮಾನಯ್ಯಾ ತಂದೆ ಮಲ್ಲಯ್ಯಾ ಗೊಟ್ರಾಳ ಸಾ|| ವಶಿಕೇರಾ ತಾ|| ಸುರಪೂರ  ಹಾಗು ಅವರೊಂದಿಗೆ 15 ರಿಂದ 20 ಜನರು ಕೂಡಿಕೊಂಡು ನಮ್ಮ ಹತ್ತಿರ ಬಂದರು, ಅವರಲ್ಲಿ ಶಿವರಾಜ ಇವನು  ನಮಗೆ ಏ ಸುಳಿ ಮಕ್ಕಳ್ಯಾ ಲಾಮಾಣ್ಯಾರ್ಯಾ, ನಿಮಗ ಬಹಳ ಸೊಕ್ಕು ಬಂದಿದೆ, ನಮ್ಮ ಹೊಲ ನಮಗೆ ಬಿಟ್ಟು ಕೊಡುವುದು ಬಿಟ್ಟು, ಹೊಲ ಸಾಗುವಳಿ ಮಾಡುತ್ತಿದ್ದಿರಿ ಇವತ್ತ ನಿಮಗ ಖಲಾಸೆ ಮಾಡುತ್ತೇವೆ ಅಂತಾ ಅಂದನು, ಆಗ ನಾನು ಈ ಬಗ್ಗೆ  ಕೋರ್ಟಲ್ಲಿ ಕೇಸ ನಡೆದಿದೆ, ಕೋರ್ಟ ಆದೇಶ ಆದರೆ ನಿಮ್ಮ ಹೊಲ ನಿಮಗ ಬಿಟ್ಟು ಕೊಡುತ್ತೇನೆ ಅಂತಾ ಅಂದಾಗ ಶಿವರಾಜ ಇವನು ಈ ಸೂಳಿ ಮಗನಿಗೆ ಬಿಡಲ್ಲಾ ಅಂತಾ ಅಂದು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಹಣೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿದನು, ಆಗ ನನ್ನ ಮಗ ಬಿಡಿಸಲು ಬಂದಾಗ ಶರಣಪ್ಪ ಇವನು ಕಲ್ಲಿನಿಂದ ನನ್ನ ಮಗನ  ಹಣೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು, ಮಾನಯ್ಯ ಈತನು ನನ್ನ ಸೊಸೆಯಂದಿರಾದ ಸೋನಾಬಾಯಿ, ರಾಣಿಬಾಯಿಗೆ ಕೈಯಿಂದ ಮೈಕೈಗೆ ತಲೆಗೆ ಹೊಡೆದಿರುತ್ತಾನೆ, ನಂತರ ಶಿವರಾಜನೊಂದಿಗೆ ಬಂದವರೆಲ್ಲರೂ ಈ ಸುಳಿ ಮಕ್ಕಳಿಗೆ ಹೊಡದು ಖಲಾಸೆ ಮಾಡೋಣಾ ಅಂತಾ ಅನ್ನುತ್ತಾ ಹೊಡೆಯಲು ಬಂದಾಗ ಅಲ್ಲೆ ಬಾಜು ಹೊಲದಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ತಾಂಡಾದ ಲಕ್ಷ್ಮೀಬಾಯಿ ಗಂಡ ಧನಸಿಂಗ್ ರಾಠೊಡ, ಶಾಂತಿಲಾಲ ತಂದೆ ರತ್ನು ರಾಠೋಡ ರವರು ಬಂದು ಬಿಡಿಸಿಕೊಂಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನರೋಣಾ ಠಾಣೆ : ಶ್ರೀ ಉಸ್ಮಾನಸಾಬ ತಂದೆ ಮಹೇಬೂಬಸಾಬ ಮುಲ್ಲಾ ಸಾ:ಕೊಟ್ಟರಗಾ ರವರದು ಚಿಂಚನಸೂರ ಗ್ರಾಮದ ಸೀಮಾಂತರ ಸರ್ವೆೇ ನಂ 327 ರಲ್ಲಿ ನನಗೆ 5ಎಕರೆ ಜಮೀನು ಇದ್ದು, ಸದರಿ ಜಮೀನಿಗೆ ಹೋಗಿ ಬರಲು ನಮ್ಮೂರಿನ ವಿಜಯಕುಮಾರ ತಂದೆ ಸೋಮಶೇಖರ ಪಾಟೀಲ್ ಇವರು ಹೊಲದಾಗಿನಿಂದಲೆ ಬಹಳ ವರ್ಷಗಳಿಂದ ರಸ್ತೆ ಇರುತ್ತದೆ. ಆದರೆ ಇತ್ತಿತ್ತಲಾಗಿ ಸದರಿ ವಿಜಯಕುಮಾರ ಇವರು ನನಗೆ ಮತ್ತು ಮೆಲಿನ ಹೊಲದವರಿಗೆ ಅವರ ಹೊಲದಾಗಿನಿಂದ ಹೋಗಬಾರದು ಮತ್ತು ಎತ್ತು ಹಾಗೂ ಬಂಡಿ ಹೊಡೆದುಕೊಂಡು ಹೊಗಬಾರದೆಂದು ನನ್ನೊಂದಿಗೆ ಆಗಾಗ ತಕರಾರು ಮಾಡುತ್ತಾ ಬಂದಿರುತ್ತಾನೆ.  ದಿನಾಂಕ:24/07/2018 ರಂದು ಮುಂಜಾನೆ 11-00 ಗಂಟೆಯ ಸುಮಾರಿಗೆ ನಾನು ಪ್ರತಿದಿನದಂತೆ ನಮ್ಮ ಚಿಂಚನಸೂರ ಸೀಮೆಯ ಹೊಲಕ್ಕೆ ಎತ್ತಿನ ಬಂಡಿ ಹೊಡದುಕೊಂಡು ಸದರಿ ವಿಜಯಕುಮಾರ ಇವರ ಹೊಲದಾಗಿನಿಂದ ಇರುವ ಬಂಡಿ ದಾರಿಯ ಮೇಲಿಂದಾ ಹೋಗುತ್ತಿರುವಾಗ 1)ವಿಜಯಕುಮಾರ ತಂದೆ ಸೋಮಶೇಖ ಪಾಟೀಲ್, 2)ಜಗನ್ನಾಥ ತಂದೆ ಸೋಮಶೇಕರ ಪಾಟೀಲ್, 3)ಶೆಸುಬಾಯಿ ಗಂಡ ಸೋಮಶೇಖರ ಪಾಟೀಲ್, 4)ತಾರಾಬಾಯಿ ಗಂಡ ಸೋಮಶೇಖರ ಪಾಟೀಲ್ ರವರುಗಳು ಕೂಡಿ ನನಗೆ ತಡೆದು ನಿಲ್ಲಿಸಿ ವಿಜಯಕುಮಾರನು ಏ ಭೋಸಡಿ ಮಗನೆ ನಮ್ಮ ಹೊಲದಾಗಿನಿಂದ ಹೋಗಬೇಡವೆಂದರೂ ಕೂಡ ಏಕೆ ಇಲ್ಲಿಂದ ಹೊಗುತ್ತಿದ್ದಿಯಾ ಎಂದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ತನ್ನ ಕೈಯಲ್ಲಿದ್ದ ಕಬ್ಬಿಣದ ಬದ್ದ್ಡಿಯಿಂದ ನನ್ನ ಹಣೆಯ ಮೇಲೆ ಹೊಡೆದ್ದರಿಂದ ಕಂದುಗಟ್ಟಿದಂತೆ ಆಗಿ ಬಾವು ಬಂದಿರುತ್ತದೆ. ಅಸ್ಟರಲ್ಲಿಯೇ ಅವರ ತಮ್ಮನಾದ ಜಗನ್ನಾಥ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬೆನ್ನಿನ ಮೇಲೆ ಮೇಲಿಂದ ಮೇಲೆ ಹೊಡೆದಿದ್ದರಿಂದ ಧರಿ ಬಂದಂತೆ ಆಗಿ ಉಬ್ಬಿದ್ದು ಅಲ್ಲದೇ ಭಾರಿ ಒಳಪೆಟ್ಟಾಗಿ ನನಗೆ ಉಸಿರಾಡಲು ತೊಂದರೆಯಾಗುತ್ತಿದೆ. ಅಲ್ಲದೆ ಶೇಸುಬಾಯಿ ಮತ್ತು ತಾರಾಬಾಯಿ ಇವರುಗಳು ಸಹ ಬಡಿಗೆಗಳಿಂದ ನನ್ನ ಕಾಲುಗಳ ಮೇಲ ಹೊಡೆಯುತ್ತಿರುವಾಗ ಅಲ್ಲಿಯೇ ಇದ್ದ ನಮ್ಮೂರಿನ ಶಾಂತಪ್ಪಾ ತಂದೆ ಈರಣ್ಣಾ ಜಮಾದಾರ ಅಂಬಾರಾಯ ತಂದೆ ದೇವಿಂದ್ರಪ್ಪಾ ಮಾವಿನೂರ ಹಾಗೂ ಶಿವಕುಮಾರ ತಂದೆ ಪೀರಪ್ಪಾ ಜಮಾದಾರ ರವರುಗಳು ಜಗಳಾ ನೋಡಿ ಬಿಡಿಸಿರುತ್ತಾರೆ. ನಂತರ 4ಜನರು ಸೇರಿ ನನಗೆ ಇನ್ನು ಮುಂದೆ ನಿನೇದಾರು ಈ ಹೊಲದಾಗಿನಿಂದ ಹೊದರೆ ನಿನಗೆ ಜೀವಸಹಿತ ಬಿಡುವುದಿಲ್ಲಾ ಎಂದು ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.