Police Bhavan Kalaburagi

Police Bhavan Kalaburagi

Wednesday, September 19, 2018

BIDAR DISTRICT DAILY CRIME UPDATE 19-09-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 19-09-2018

ªÀÄAoÁ¼À ¥ÉưøÀ oÁuÉ C¥ÀgÁzsÀ ¸ÀA. 82/2018, PÀ®A. 504, 323, 324, 506, 498(J), 307 eÉÆvÉ 34 L¦¹ ªÀÄvÀÄÛ r¦ PÁAiÉÄÝ 1961 :-
ಫಿರ್ಯಾದಿ ಸಾವಿತ್ರಾ ಗಂಡ ತಾನಾಜಿ ಪಾಟೀಲ ಸಾ: ಸೀರೂರಿ, ಸದ್ಯ: ರಾಮತೀರ್ಥ (ಡಿ) ರವರ ಮದುವೆ ದಿನಾಂಕ 19-12-2011 ರಂದು ಸಿರೂರಿ ಗ್ರಾಮದ ಸೋದರಮಾವ ತಾನಾಜಿ ತಂದೆ ಬಾಜಿರಾವ ಪಾಟೀಲ ಇವನ ಜೊತೆ ಹಿಂದೂ ಸಂಪ್ರದಾಯದ ಪ್ರಕಾರ ಆಗಿದ್ದು ಇರುತ್ತದೆ, ಮದುವೆಯಾದ ನಂತರ ಫಿರ್ಯಾದಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗಳು ಜನಿಸಿದ್ದು, ಗಂಡು ಮಗನಿಗೆ ಭಾವ ರಮೇಶ ಇವರಿಗೆ ಮಕ್ಕಳು ಜನಿಸದ ಕಾರಣ ಅವರಿಗೆ ದತ್ತಕ್ಕೆ ನೀಡಿದ್ದು, ಮದುವೆಯಾದ 4-5 ವರ್ಷಗಳವರೆಗೆ ಗಂಡ ತಾನಾಜಿ ತಂದೆ ಬಾಜಿರಾವ ಪಾಟೀಲ ಮತ್ತು ಅತ್ತೆ ಇಂದ್ರಾಬಾಯಿ ಗಂಡ ಬಾಜಿರಾವ ಪಾಟೀಲ, ಭಾವ ರಮೇಶ ತಂದೆ ಬಾಜಿರಾವ ಪಾಟೀಲ ಹಾಗು ನೇಗೆಣಿ ಮಂಗಲಾಬಾಯಿ ಗಂಡ ರಮೇಶ ಪಾಟೀಲ ಇವರು ಫಿರ್ಯಾದಿಗೆ ವಿನಾಃ ಕಾರಣ ಮನೆಯಲ್ಲಿನ ಕೆಲಸದಲ್ಲಿ ಏನಾದರು ಒಂದು ತಪ್ಪು ಹಚ್ಚಿ ಜಗಳ ಮಾಡುವುದು, ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಡಲು ಪ್ರಾರಂಭಿಸಿದರು, ವಿಷಯ ಫಿರ್ಯಾದಿಯು ತಮ್ಮ ತಂದೆ ತಾಯಿಗೆ ತಿಳಿಸಿದಾಗ ಅವರು ಗಂಡನ ಮನೆಗೆ ಬಂದು ಗಂಡ ಮನೆಯವರಿಗೆಲ್ಲ ತಿಳಿಸಿ ಹೇಳಿ ರೀತಿ ವಿನಾಃ ಕಾರಣ ನಮ್ಮ ಮಗಳಿಗೆ ತೊಂದರೆ ಕೊಡಬೇಡಿ ಎಂದು ಹೇಳಿದಾಗ ಅವರೆಲ್ಲರೂ ಕೆಲವು ದಿವಸ ಏನು ಅನ್ನದೆ ಸುಮ್ಮನೆ ಕುಳಿತರು, ನಂತರ ಆರೋಪಿತರಾದ ಗಂಡ, ಅತ್ತೆ, ಭಾವ, ನೇಗೆಣಿ ಇವರೆಲ್ಲರೂ ಕೂಡು ನಿನ್ನ ತವರು ಮನೆವರು ನಮಗೆ ಹೆಚ್ಚಿನ ವರದಕ್ಷಿಣೆ ಕೊಟ್ಟಿಲ್ಲ ಬೇರೆ ಹುಡುಗಿಗೆ ಮದುವೆ ಮಾಡಿಕೊಂಡರೆ ಇನ್ನೂ ಹೆಚ್ಚಿಗೆ ಹಣ ರುತ್ತಿತ್ತು, ಆದ್ದರಿಂದ ನೀನು ಇವಾಗ ನಿನ್ನ ತವರು ಮನೆಯಿಂದ 2,00,000/- ರೂಪಾಯಿ ತೆಗೆದುಕೊಂಡು ಬಾ ಇಲ್ಲದಿದ್ದರೆ ನೀನು ಇಲ್ಲಿ ಇರಬೇಡ ನಿನ್ನ ತವರು ಮನೆಗೆ ಹೋಗು ಇಲ್ಲಾ ಅಂದರೆ ನಿನಗೆ ಕೊಲೆ ಮಾಡುತ್ತೇವೆದು ಹೇದರಿಸಿದಾಗ ಫಿರ್ಯಾದಿಯು ಅವರಿಗೆ ಹೇದರಿಕೊಂಡು 2015 ನೇ ಸಾಲಿನಲ್ಲಿ ರಾಮತೀರ್ಥ(ಡಿ) ಗ್ರಾಮದಲ್ಲಿರುವ ಮ್ಮ ತಂದೆ ತಾಯಿಯ ಮನೆಗೆ ಬಂದು ಅವರ ಜೊತೆ ವಾಸವಾಗಿದ್ದು, ನಂತರ ದಿನಾಂಕ 30-11-2017 ರಂದು ಸದರಿ ಆರೋಪಿತರು ರಾಮತೀರ್ಥ(ಡಿ) ಗ್ರಾಮಕ್ಕೆ ಬಂದು ನಿನಗೆ ನಿನ್ನ ತವರು ಮನೆಯಿಂದ 2 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಎಂದು ಹೇಳಿ ಕಳುಹಿಸಿದರೆ ನೀನು ಇಲ್ಲಿಗೆ ಬಂದು ಆರಾಮವಾಗಿ ನಿನ್ನ ತವರು ಮನೆಯಲ್ಲಿ ಉಳಿದಕೊಂಡಿದ್ದಿಯಾ ಅಂತ ಅಂದಾಗ ಫಿರ್ಯಾದಿಯು ಅವರಿಗೆ ನಮ್ಮ ತಂದೆ ತಾಯಿಯ ಹತ್ತಿರ ಹಣವಿಲ್ಲ ಮದುವೆಯಲ್ಲಿ ಮಾತಾಡಿದ ಪ್ರಕಾರ ಹಣ ಕೊಟ್ಟಿದ್ದಾರೆ ಇವಾಗ ಅವರ ಹತ್ತಿರ ಹಣವಿಲ್ಲ ಎಂದು ಹೇಳಿದಾಗ ನಮಗೆ ಎದರು ಮಾತನಾಡುತ್ತಿ ನೀನು ಹಣ ತೆಗೆದುಕೊಂಡು ನಮ್ಮ ಮನೆಗೆ ಬಾ ಇಲ್ಲ ಅಂದರೆ ಬೇಡ ಅಂತಅ ಅತ್ತೆ ಹೇಳಿದ್ದು, ನಂತರ ಸದರಿ ಆರೋಪಿತರೆಲ್ಲರೂ ಕೂಡು ತಮ್ಮ ತಮ್ಮ ಕೈಯಿಂದ ಫಿರ್ಯಾದಿಗೆ ಮೈಯಲ್ಲಾ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ, ಆಗ ಅಲ್ಲೆ ಹಾಜರಿದ್ದ ರಾಮತೀರ್ಥ(ಡಿ) ಗ್ರಾಮದ ರವೀಂದ್ರ ತಂದೆ ಶಿವಾಜಿ ಕಾರಬಾರಿ ಮತ್ತು ಮಾಹಾದೇವ ತಂದೆ ಗುಂಡಪ್ಪಾ ಚಪಡೆ ಇವರು ಜಗಳ ಬಿಡಿಸಿ ಸದರಿ ಆರೋಪಿತರಿಗೆ ತಿಳಿ ಹೇಳಿ ಅಲ್ಲಿಂದ ಕಳುಹಿಸಿದರು, ಅವರು ಅಲ್ಲಿಂದ ಹೋಗುವಾಗ ನೀನು ನಿನ್ನ ತವರು ಮನೆಯಿಂದ ಹಣ ತರದಿದ್ದರೆ ನಿನಗೆ ಜೀವ ಸಹಿತ ಬೀಡುವುದಿಲ್ಲ ಅಂತ ಜೀವ ಬೇದರಿಕೆ ಹಾಕಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ದಿನಾಂಕ 18-09-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 124/2018, ಕಲಂ. 457, 380 ಐಪಿಸಿ :-
ಫಿರ್ಯಾದಿ ಪ್ರಕಾಶ ತಂದೆ ಗಣಪತರಾವ ಉಚ್ಚೆ ಸಾ: ಔರಾದ(ಬಿ) ರವರು ಔರಾದ ಪಟ್ಟಣದಲ್ಲಿ ಎಪಿಎಂಸಿ ಯಾರ್ಡನಲ್ಲಿ ಅಂಗಡಿ ಸಂ. 12 ನೇದರಲ್ಲಿ ದವಸ ಧಾನ್ಯಗಳ ಖರೀದಿ ಅಂಗಡಿ ಇಟ್ಟುಕೊಂಡು  ವ್ಯಾಪಾರ ಮಾಡಿಕೊಂಡಿದ್ದು, ಹೀಗಿರುವಾಗ ದಿನಾಂಕ 17-09-2018 ರಂದು ಫಿರ್ಯಾದಿಯು ತನ್ನ ಅಂಗಡಿ ತೆರೆದಿದ್ದು ನರಸಿಂಗಪೂರ ತಾಂಡಾದ ಸೊಪಾನರಾವ ತಂದೆ ಜೈಸಿಂಗ ಇತನು ತನ್ನ ಹೊಲದಲ್ಲಿ ಬೆಳೆದಿರುವ ಹೆಸರು ಧಾನ್ಯ ಅಂದಾಜು 50 ಕೆ.ಜಿ ಯ ಒಟ್ಟು 13 ಚೀಲಗಳನ್ನು ತಂದು ಅಂಗಡಿಯಲ್ಲಿ ಮಾರಾಟಕ್ಕಾಗಿ ಇಟ್ಟಿರುತ್ತಾನೆ, ಫಿರ್ಯಾದಿಯು ಅಂಗಡಿಯನ್ನು 2100 ಗಂಟೆಗೆ ಮುಚ್ಚಿಕೊಂಡು ಮನೆಗೆ ಬಂದಿದ್ದು, ನಂತರ ದಿನಾಂಕ 18-09-2018 ರಂದು 0930 ಗಂಟೆಗೆ ತಮ್ಮ ಅಂಗಡಿಗೆ ಹೋಗಿ ನೋಡಲು ಸದರಿ ಅಂಗಡಿಯ ಚನಲ (ಜಾಲಿ) ಗೇಟನ ಕೀಲಿ ಮುರಿದಿದ್ದು ಇದ್ದು ಗೇಟ ಮುಚ್ಚಿದ್ದು ಇರುತ್ತದೆ, ನಂತರ ಫಿರ್ಯಾದಿಯು ಒಳಗೆ ಹೋಗಿ ನೋಡಲು ಒಳಗಡೆ ಇದ್ದ ಹೆಸರು ಧಾನ್ಯದ ಅಂದಾಜು 50 ಕೆಜಿ ಯ ಒಟ್ಟು 13 ಚೀಲಗಳಲ್ಲಿ 3 ಚೀಲಗಳು ಇದ್ದಿರುವುದಿಲ್ಲ, ಅಂದರೆ ಒಟ್ಟು ಅಂದಾಜು 150 ಕೆಜಿ ಹೆಸರು ಧಾನ್ಯ ಅ.ಕಿ 7500/- ರೂ ಬೆಲೆಯ ಹೆಸರು ಧಾನ್ಯದ ಚೀಲಗಳು ಕಳುವು ಮಾಡಿಕೊಂಡು ಹೋದಂತೆ ಕಂಡು ಬಂದಿರುತ್ತದೆ, ಈ ಘಟನೆಯನ್ನು ಪಕ್ಕದ ಅಂಗಡಿಯವರಾದ ಸಂಗಪ್ಪಾ ತಂದೆ ಶರಣಪ್ಪಾ ಘಾಟೆ ಸಾ: ಕರಂಜಿ, ಸದ್ಯ ಔರಾದ(ಬಿ) ರವರು ಸಹ ಬಂದು ನೋಡಿರುತ್ತಾರೆ, ಆದ್ದರಿಂದ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿಯು ತಮ್ಮ ಅಂಗಡಿಯನ್ನು ಮುಚ್ಚಿಕೊಂಡು ಮನೆಗೆ ಹೋದ ನಂತರ ಬೆಳಗ್ಗೆ ಅಂಗಡಿಗೆ ಬರುವ ಮಧ್ಯದಲ್ಲಿ ಅಂಗಡಿಯಲ್ಲಿದ್ದ ಹೆಸರು ಧಾನ್ಯದ ಚೀಲಗಳು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 18-09-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.