Police Bhavan Kalaburagi

Police Bhavan Kalaburagi

Friday, December 15, 2017

BIDAR DISTRICT DAILY CRIME UPDATE 15-12-2017

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 15-12-2017

ಧನ್ನೂರಾ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ 290/17 ಕಲಂ  457, 380 ಐಪಿಸಿ

ದಿನಾಂಕ 14/12/2017 ರಂದು 1000 ಗಂಟೆಗೆ ಫಿರ್ಯಾದಿ ಶ್ರೀ ಗುರುನಾಥ ತಂದೆ ಮಲ್ಲಿಕಾರ್ಜುನ ವಯ 30 ವಷಉ. ಒಕ್ಕಲುತನ ಸಾ. ಹಲಬರ್ಗಾ  ರವರು ಠಾಣೆಗೆ ಹಾಜರಾಗಿ  ಲಿಖಿತ ಫಿರ್ಯಾದು ದೂರು  ಸಲ್ಲಿಸಿದರ ಸಾರಾಂಶವೆನೆಂದರೆ ದಿನಾಂಕ 13/12/2017 ರಂದು ರಾತ್ರಿ 2300 ಗಂಟೆಗೆ ಊಟ  ಮಾಡಿಕೊಂಡು ಮಲಗಿಕೊಂಡಿರುತ್ತಾರೆ ದಿನಾಂಕ 14/12/2017 ರಂದು ರಾತ್ರಿ 0300 ಗಂಟೆಗೆ ಎಚ್ಚರವಾಗಿ ನೊಡಲು  ಮನೆಯಲ್ಲಿಯ ಪಕ್ಕದ ಕೊಣೆಯ ಬೀಗ ಮುರಿದಿದ್ದು ಕಾಣಿಸಿತ್ತು ಒಳಗೆ ಹೊಗಿ ನೊಡಲಾಗಿ ಮನೆಯಲ್ಲಿದ್ದ ಎರಡು ಕಬ್ಬಿಣದ ಸಂದುಕಗಳು ಇರಲಿಲ್ಲ ಯಾರೊ ಕಳ್ಳರು ದಿನಾಂಕ 13/12/2017 ರಂದು 2300 ಗಂಟೆಯಿಂದ ದಿನಾಂಕ 14/12/2017 ರಂದು 0300 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೊ ಕಳ್ಳರು ನಮ್ಮ ಮನೆಯ ಬೀಗ ಮುರಿದು ಒಳಗೆ ಪ್ರವೇಶ ಮಾಡಿ ಎರಡು ಕಬ್ಬಿಣದ ಸಂದೂಕುಗಳು ಕಳವು ಮಾಡಿಕೊಂಡು ಹೊಗಿರುತ್ತಾರೆ. ಸದರಿ ಸಂದುಕನಲ್ಲಿದ್ದ 22,300/- ರೂಪಾಯಿ ನಗದು ಹಣ ಮತ್ತು ಬಂಗಾರದ ಆಭರಣಗಳು ಇದ್ದವು ಸದರಿ ಸಂದುಕಗಳು ನಂತರ   ಮನೆಯ ಹಿಂಭಾಗದಲ್ಲಿದ್ದ ತೊಗರಿ ಹೊಲದಲ್ಲಿ ನೊಡಲಾಗಿ ಕಂಡು ಬಂದವು ಅದರಲ್ಲಿ ಮೇಲ್ಕಂಡ ಹಣ ಮತ್ತು ಬಂಗಾರದ ಆಭರಣ ಇರಲಿಲ್ಲ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Yadgir District Reported Crimes Updated on 15-12-2017

Yadgir District Reported Crimes  
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 248/2017 ಕಲಂ 78(3) ಕೆ.ಪಿ ಎಕ್ಟ್ 1963 ;- ದಿನಾಂಕ. 13/12/2017 ರಂದು 6-ಪಿಎಂಕ್ಕೆ  ಶ್ರೀ ಮಹಾಂತೇಶ ಸಜ್ಜನ ಪಿ.ಎಸ್.ಐ (ಕಾ.ಸು) ಯಾದಗಿರಿ ನಗರ ಪೊಲೀಸ್ ಠಾಣೆ ರವರು ಇಂದು ದಿನಾಂಕ. 13/12/2017 ರಂದು 6-00 ಪಿ.ಎಂಕ್ಕೆ ಅರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಬಂದು ವರದಿ ಹಾಗೂ ಜಪ್ತಿ ಪಂಚನಾಮೆಯನ್ನು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದರ ಸಾರಾಂಶವೆನೆಂದರೆ   ದಿನಾಂಕ: 13/12/2017 ರಂದು  4-30 ಪಿಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ  ಯಾದಗಿರಿಯ ಲಾಡೇಜಗಲ್ಲಿಯಲ್ಲಿ ಹಳೆ ತಹಸೀಲ ಆಫೀಸ್ ಹತ್ತಿರ ಇರುವ ಸಂದಿಯಲ್ಲಿ  ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ 1/- ರೂ. ಗೆ 80/- ರೂ. ಗೆಲ್ಲಿರಿ ಮಟ್ಕಾ ನಂಬರಗಳನ್ನು ಬರೆಸಿರಿ ಅಂತಾ ಕರೆದು ಅವರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದನ್ನು ನೋಡಿ ಖಚಿತಪಡಿಸಿಕೊಂಡು ಅವನ ಮೇಲೆ ದಾಳಿ ಮಾಡಿ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಅವರು ತನ್ನ ಹೆಸರು ವಿಶ್ವನಾಥರೆಡ್ಡಿ ತಂ.ಮುಕ್ಕಣ್ಣ ಗೊಂದಳಿ ವಃ23 ಜಾಃ ಗೊಂದಳಿ ಉಃ ಬಾಂಡೆ ವ್ಯಾಪಾರ ಸಾಃ ಲಾಡೇಸಗಲ್ಲಿ ಯಾದಗಿ ಅಂತಾ ತಿಳಿಸಿದನು. ಸದರಿಯವನ ಅಂಗಶೋಧನೆ ಮಾಡಲಾಗಿ ನಗದು ಹಣ. 950=00 ರೂ. ಒಂದು ಕಾರ್ಬನ ಮೊಬೈಲ್ ಅ:ಕಿ: 200=00, ಮಟ್ಕಾ ನಂಬರ ಬರೆದ ಒಂದು ಚೀಟಿ ಮತ್ತು ಒಂದು ಬಾಲ್ ಪೆನ್ ಸಿಕ್ಕಿದ್ದು, ಸದರಿಯವರಿಗೆ ಮಟ್ಕಾ ನಂಬರಗಳನ್ನು ಬರೆದುಕೊಂಡು ಯಾರಿಗೆ ಹೋಗಿ ಕೊಡುತ್ತಿರಿ ಎಂದು ಕೇಳಿದಾಗ ತಾನು ಮಟಕಾ ಪಟ್ಟಿ ಮತ್ತು ಹಣವನ್ನು ತಿಮ್ಮಣ್ಣ ತಂದೆ ಬಸಪ್ಪ ಬಗಲಿ ವಃ 45 ಜಾ: ಬೇಡರು ಉಃ ಮಟಕಾ ದಂಧೆ ಸಾ: ವಾಲ್ಮೀಕಿ ನಗರ ಯಾದಗಿರಿ ಇವನಿಗೆ ಕೊಡುತ್ತೇನೆ ಅವನು  ನನಗೆ ದಿನಾಲು 200-00 ಕೂಲಿ ಕೊಡುತ್ತಾನೆ ಅಂತಾ ತಿಳಿಸಿದನು. ಸದರಿ ಜಪ್ತಿ ಪಂಚನಾಮೆಯನ್ನು 4-30 ಪಿಎಮ್ ದಿಂದ 5-30 ಪಿಎಮ್ ದವರೆಗೆ ವಿವರವಾಗಿ ಜಪ್ತಿ ಪಂಚನಾಮೆ ಕೈಕೊಂಡು ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆಯನ್ನು ಮುಂದಿನ ಸೂಕ್ತ  ಕ್ರಮಕ್ಕಾಗಿ ಒಪ್ಪಿಸಿದ್ದು ಇರುತ್ತದೆ. ಸದರಿ ಅಪರಾಧವು ಅಸಂಜ್ಞೇಯ ಸ್ವರೂಪದ್ದಾಗಿರುವುದರಿಂದ ಈ ಬಗ್ಗೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಅನುಮತಿ ಕುರಿತು ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು ಇಂದು ದಿನಾಂಕ.14/12/2017 ರಂದು 11-30 ಎಎಂಕ್ಕೆ ಪರವಾನಿಗೆ ಪಡೆದುಕೊಂಡು 11-45 ಎಎಮ್ಕ್ಕೆ ತಂದು ಕೋರ್ಟ ಪಿಸಿ-398 ರವರು ತಂದು ಹಾಜರಪಡಿಸಿದ್ದು ಮಾನ್ಯ ನ್ಯಾಯಾಲಯದ ಪರವಾನಿಗೆ ಮೇಲಿಂದ ಠಾಣೆ ಗುನ್ನೆ ನಂ.248/2017 ಕಲಂ.78(3) ಕೆಪಿ ಆಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 249/2017 ಕಲಂ 32, 34 ಕೆ ಇ ಆಕ್ಟ ;- ದಿನಾಂಕ.14/12/2017 ರಂದು 1-45 ಪಿಎಂಕ್ಕೆ ಮಾನ್ಯ ಸಿ.ಪಿ.ಐ ಸಾಹೆಬರು ಯದಗಿರಿ ರವರು ಠಾಣೆಗೆ ಬಂದು ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆಯನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು ಸಾರಾಂಶವೆನೆಮದರೆ ಇಂದು ದಿನಾಂಕ. 14/12/2017 ರಂದು 11-30 ಎಎಂಕ್ಕೆ ನಾನು ನಮ್ಮ ಆಫೀಸಿನಲ್ಲಿದ್ದಾಗ ಕೋಟಗಾರವಾಡಿಯ ಬಸವಣ್ಣ ದೇವರ ಗುಡಿಯ ಹತ್ತಿರ ಒಂದು ಕಿರಾಣಿ ಡಬ್ಬಿ ಮುಂದೆ ಯಾರೋ ಒಬ್ಬನು ಸಕರ್ಾರದ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಸಾರ್ವಜನಿಕರು ತೀರುಗಾಡುವ ರಸ್ತೆಯ ಮೇಲೆ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಭಾತ್ಮೀ ಬಂದಿದ್ದು ದಾಳಿ ಕುರಿತು ಹೋಗಬೆಕು  ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ  ನಮ್ಮ ಆಫೀಸಿನಿಂದ 12-00 ಪಿಎಂಕ್ಕೆ  ಜೀಪ ನಂ.ಕೆಎ-33-ಜಿ-0161 ನೇದ್ದರಲ್ಲಿ ಹೋರಟು 12-15 ಪಿಎಂಕ್ಕೆ ಮೈಲಾಪುರ ಬೇಸ ತಲುಪಿ ಒಂದು ಹೋಟಲ ಹತ್ತಿರ ಜೀಪ ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ಎಲ್ಲರೂ ಮೈಲಾಪೂರ ಬೇಸದಿಂದ ಅಂಬೇಡ್ಕರ ಚೌಕ ಕಡೆಗೆ ಹೋಗುವ ರಸ್ತೆಯ ಮೇಲೆ ನಡೆದುಕೊಂಡು ಹೋರಟು  ನೊಡಲಾಗಿ ಒಬ್ಬನು ಬಸವಣ್ಣ ಗುಡಿ ಹತ್ತಿರ ಇರುವ ಕಿರಾಣಿ ಡಬ್ಬಿಯ ಅಂಗಡಿ ಹತ್ತಿರ ಒಬ್ಬನು ಸಾರ್ವಜನಿಕ ಸ್ಥಳದಲ್ಲಿ ರಸ್ತೆ ಮೇಲೆ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದನ್ನು ಖಚಿತ ಪಡಿಸಿಕೊಂಡು 12-30 ಪಿಎಂಕ್ಕೆ ದಾಳಿ ಮಾಡಿ ಹಿಡಿಯಬೇಕೆನ್ನುವಷ್ಟರಲ್ಲಿ ಅವನು  ನಮ್ಮನ್ನು ನೋಡಿ ಓಡಿ ಹೋದನು. ಆಗ ಸ್ಥಳದಲ್ಲಿ ಒಂದು ಪ್ಲಾಸ್ಟಿಕ ಚೀಲದಲ್ಲಿ ಒಟ್ಟು 61 ಓರಿಜಿನಲ್ ಚಾಯ್ಸ 90 ಎಂಎಲ್ದ ಪೌಚಗಳಿದ್ದು ಒಂದಕ್ಕೆ 28.13 ರೂ.ದಂತೆ ಒಟ್ಟು 1715.93 ರೂ. ಕಿಮತ್ತಿನವುಗಳ ಪೌಚಗಳಿದ್ದು ಸದರಿಯವನು ಓಡಿ ಹೋಗಿದ್ದರಿಂದ ಕ್ವಾರ್ಟರಗಳನ್ನು ಮಾರಾಟ ಮಾಡುವುದಕ್ಕೆ ಯಾವುದೇ ಸಕರ್ಾರದ ಪರವಾನಿಗೆ ಇರುವುದಿಲ್ಲಾ ಅಂತಾ ಖಾತ್ರಿಯಾಯಿತು ನಂತರ 61 ಓರಿಜಿನಲ್ ಚಾಯ್ಸ ವಿಸ್ಕಿ 90 ಎಂಎಲ್. ಪೌಚಗಳಲ್ಲಿ ಶ್ಯಾಂಪಲ್ಗಾಗಿ ಎಫ್.ಎಸ್.ಎಲ್. ಪರೀಕ್ಷೇ ಕುರಿತು ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲಿದು ವೈ.ಟಿ. ಅಂತಾ ಅರಗಿನಿಂದ ಸೀಲು ಮಾಡಿ ಪಂಚರ ಸಹಿವುಳ್ಳ ಚೀಟಿ ಅಂಟಿಸಿ ಪ್ರತ್ಯೇಕವಾಗಿ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ನಂತರ ಓಡಿ ಹೋದವನ ಹೆಸರು ಭಾತ್ಮೀದಾರರಿಂದ ತಿಳಿದುಕೊಳ್ಳಲಾಗಿ  ಅವನ ಶಿವುಕುಮಾರ ತಂ.ಬಸ್ಸಣ್ಣ ಪೂಜಾರಿ ಸಾಃ ಕೋಟಗಾರವಾಡ ಯಾದಗಿರಿ ಅಂತಾ ತಿಳಿಯಿತು. ತದ ನಂತರ ಉಳಿದ ಎಲ್ಲಾ ಮಧ್ಯದ ಪೌಚಗಳನ್ನು ಮುಂದಿನ ಪುರಾವೆ ಕುರಿತು ಪ್ಲಾಸ್ಟಿಕ ಚೀಲದಲ್ಲಿ ಹಾಕಿ ತಾಬೆಗೆ ತೆಗೆದುಕೊಂಡು.  ಸದರಿ ಜಪ್ತಿ ಪಂಚನಾಮೆಯನ್ನು 12-30 ಪಿಎಂ ದಿಂದ 1-30 ಪಿಎಂ ದವರೆಗೆ ಮುಗಿಸಿ ಮುಂದಿನ ಕ್ರಮಕ್ಕಾಗಿ ಮುದ್ದೆ ಮಾಲಿನೊಮದಿಗೆ ಠಾಣೆಗೆ 1-45 ಪಿಎಂಕ್ಕೆ ಬಂದು ಜಪ್ತಿ ಪಂಚನಾಮೆಯೊಂದಿಗೆ ಜ್ಞಾಪನಾ ಪತ್ರವನ್ನು ಒಪ್ಪಿಸುತ್ತಿದ್ದು  ಸದರಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.249/2017 ಕಲಂ.32,34 ಕೆ.ಇ.ಆ್ಯಕ್ಟ   ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 294/2017 ಕಲಂ: 32, 34 ಕೆ.ಎಕ್ಟ;- ದಿನಾಂಕ 14-12-2017 ರಂದು 1-45 ಪಿ.ಎಮ್ ಕ್ಕೆ ಶ್ರೀ ಅರುಣಕುಮಾರ ಪಿ.ಎಸ್.ಐ (ಕಾಸು) ಯಾದಗಿರಿ ಗ್ರಾಮೀಣ ಪೋಲಿಸ್ ಠಾಣೆ ರವರು ಠಾಣೆಗೆ ಮುದ್ದೆಮಾಲನ್ನು ಜಪ್ತಿಪಂಚನಾಮೆಯೊಂದಿಗೆ ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 14-12-2017 ರಂದು 11 ಎ.ಎಂ ಕ್ಕೆ ಯರಗೋಳ ಗ್ರಾಮದಲ್ಲಿ ಯಾರೋ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆೆ ಅಂತಾ ಖಚಿತವಾದ ಬಾತ್ಮಿ ಬಂದಾಗ ಅಲ್ಲಿಗೆ ದಾಳಿ ಮಾಡುವ ಸಲುವಾಗಿ ನಮ್ಮ ಸಿಬ್ಬಂಧಿಯವರಾದ ಶ್ರೀ ಚಿದಾನಂದ ಪಿ.ಎಸ್.ಐ ಪ್ರೋಬೇಷನರಿ, ಅಬ್ದುಲ್ ಬಾಷಾ ಪಿಸಿ-237 ಹಾಗೂ ಜೀಪ ಚಾಲಕರಾದ ಶ್ರೀ ಬಾಪುಗೌಡ ಪಿಸಿ 301 ಮತ್ತು ಇಬ್ಬರು ಪಂಚರು ಎಲ್ಲರು ಜೀಪಿನಲ್ಲಿ ಕುಳಿತು ಠಾಣೆಯಿಂದ  ಬೆಳಿಗ್ಗೆ 11-20 ಎ.ಎಂ. ಕ್ಕೆ ಹೊರಟು ಯರಗೋಳ ಗ್ರಾಮದ ಸಮೀಪ ಊರ ಹೊರಗಡೆ ಜೀಪನ್ನು  ಮರೆಯಲ್ಲಿ ನಿಲ್ಲಿಸಿ ಎಲ್ಲರೂ ಸ್ವಲ್ಪ ದೂರದಲ್ಲಿ ನಡೆದುಕೊಂಡು ಅವಿತುಕೊಂಡು ನೋಡಲಾಗಿ ಬಸನಿಲ್ದಾಣದ ಸಮೀಪ ಒಂದು ಕಿರಾಣಿ ಅಂಗಡಿಯಲ್ಲಿ ಒಬ್ಬನು ಮಧ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಅಲ್ಲಿಗೇ ಹೋಗಿ ದಾಳಿ ಮಾಡುವಷ್ಟರಲ್ಲಿ ಆ ವ್ತಕ್ತಿಯು ಅಲ್ಲಿಂದ ಓಡಿ ಹೋದನು. ಬಾತ್ಮಿದಾರರಿಗೆ ಓಡಿ ಹೊದವನ ಹೆಸರು ವಿಳಾಸ ವಿಚಾರಿಲಾಗಿ ಅವನ ಹೆಸರು ಅಶೋಕ ತಂದೆ ಬಸವರಾಜ ಕಪ್ಪೇರ ವಯಾ:21 ಜಾ: ಕಬ್ಬಲಿಗ ಉ:ಒಕ್ಕಲುತನ ಸಾ:ಯರಗೋಳ ಅಂತಾ ಗೊತ್ತಾಯಿತು. ಸದರಿಯವನು ಮಧ್ಯ ಮಾರಾಟ ಮಾಡಲು ಸರಕಾರದಿಂದ ಯಾವುದೇ ರೀತಿ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಪಡಿಸಿಕೊಂಡಿದ್ದು ಕಿರಾಣಿ ಅಂಗಡಿ ಚೆಕ್ ಮಾಡಿದಾಗ ಕಿರಾಣಿ ಅಂಗಡಿಯ ಅಂಗಡಿಯಲ್ಲಿ ಒಟ್ಟು 650 ಎಮ್.ಎಲ್ ದ 17 ಕೆ.ಎಫ್ ಸ್ತ್ಟಾಂಗ ಕಂಪನಿಯ ಬಿಯರ ಬಾಟಲಿಗಳು ಇದ್ದು ಒಂದು ಬಾಟಲಿಯ ಕಿಮ್ಮತ್ತು 125 ರಂತೆ ಒಟ್ಟು  17 ಬಾಟಲಿಗಳ ಕಿಮ್ಮತ್ತು 2125/- ರೂ ಆಗುತ್ತದೆ. ಮತ್ತು 330 ಎಮ್.ಎಲ್ ದ 7 ಕೆ.ಎಫ್ ಸ್ತ್ಟಾಂಗ ಕಂಪನಿಯ ಬಿಯರ ಬಾಟಲಿಗಳು ಇದ್ದು ಒಂದು ಬಾಟಲಿಯ ಕಿಮ್ಮತ್ತು 68 ರಂತೆ ಒಟ್ಟು  7 ಬಾಟಲಿಗಳ ಕಿಮ್ಮತ್ತು 476/- ರೂ ಆಗುತ್ತದೆ. ಎಲ್ಲವುಗಳ ಒಟ್ಟು ಕಿಮ್ಮತ್ತು 2601-00 ರೂಪಾಯಿ ಆಗುತ್ತದೆ. ಈ  ಎರಡವುಗಳಲ್ಲಿ ತಲಾ ಒಂದನ್ನು ಎಫ್.ಎಸ್.ಎಲ್ ಪರೀಕ್ಷೆ ಕುರಿತು ಒಂದೊಂದು ಬಿಳಿ ಬಟ್ಟೆಯ ಚೀಲದಲ್ಲಿ ಹಾಕಿ ಹೊಲೆದು ಪಿ.ಆರ್.ಎಸ್ ಅಂತಾ ಶೀಲ್ ಮಾಡಿ ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ನಮ್ಮ ತಾಭೆಗೆ ತೆಗೆದುಕೊಂಡು ಸದರಿ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ 14-12-2017 ರಂದು 12-10 ಪಿ.ಎಂ 1-10 ಪಿ.ಎಂ ದವರೆಗೆ ಮಾಡಿ ಮುಗಿಸಿ ಮುದ್ದೆಮಾಲನ್ನು ಜಪ್ತಿಪಂಚನಾಮೆಯೊಂದಿಗೆ ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದು ಜಪ್ತಿ ಪಂಚನಾಮೆ ಆಧಾರದ ಮೇಲಿಂದ ಠಾಣೆ ಗುನ್ನೆ ನಂ: 294/2017 ಕಲಂ 32. 34 ಕೆ.ಇ ಎಕ್ಟ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 66/2017 ಕಲಂ 279, 337, 338 ಐಪಿಸಿ ;- ದಿನಾಂಕ 12/12/2017 ರಂದು 11-30 ಪಿ.ಎಂ.ಕ್ಕೆ ಯಾದಗಿರಿ ನಗರದ ಶಾಸ್ತ್ರಿ ವೃತ್ತದಲ್ಲಿ ಫಿಯರ್ಾದಿಯ ತಾಯಿ ಮತ್ತು ಇತರರು ಕೂಡಿಕೊಂಡು  ರೇಲ್ವೇ  ಸ್ಟೇಷನ್ ನಿಂದ ಅಂಬೇಡ್ಕರ ನಗರಕ್ಕೆ  ಆಟೋ ನಂ.ಕೆಎ-33, ಎ-4425 ನೇದ್ದರಲ್ಲಿ ಬರುವಾಗ ಮಾರ್ಗ ಮದ್ಯೆ ಶಾಸ್ತ್ರಿ ವೃತ್ತದಲ್ಲಿ ಆರೋಪಿತ ಲಾರಿ ಟ್ಯಾಂಕರ್  ಚಾಲಕ ಮರೆಪ್ಪ ಈತನು ತನ್ನ ಲಾರಿ ಟ್ಯಾಂಕರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ತನ್ನ ಚಾಲನಾ ಮೇಲಿನ ನಿಯಂತ್ರಣ ಕಳೆದುಕೊಂಡು ಫಿಯರ್ಾದಿಯವರ ಆಟೋಕ್ಕೆ ಡಿಕ್ಕಿಕೊಟ್ಟಾಗ ಸದರಿ ಅಪಗಾತದಲ್ಲಿ ಆಟೋವು ಡಿಕ್ಕಿಕೊಟ್ಟ ರಭಸಕ್ಕೆ ರಸ್ತೆಯ ಬದಿಯಲ್ಲಿ ಪಲ್ಟಿಯಾಗಿದ್ದು ಆಟೋದಲ್ಲಿದ್ದ ಬೀಮಮ್ಮಗೆ ತಲೆಗೆ, ಎದೆಗೆ, ಎಡಗೈಗೆ ಭಾರೀ ಗುಪ್ತಗಾಯವಾಗಿದ್ದು, ನಾಗಮ್ಮ ಇವರಿಗೆ ಬಲಗಾಲಿನ ಮೊಣಕಾಲು ಕೆಳಗೆ ರಕ್ತಗಾಯ, ಎದೆಗೆ, ಹಣೆಗೆ, ಟೊಂಕಕ್ಕೆ ಭಾರೀ ಗುಪ್ತಗಾಯವಾಗಿರುತ್ತದೆ. ಮಲ್ಲಮ್ಮ ಇವರಿಗೆ ಬಲಗೈ ಅಂಗೈಗೆ ಬಾರೀ ರಕ್ತಗಾಯ, ಎದೆಗೆ, ಎಡಪಕ್ಕಗೆ, ತಲೆಗೆ ಬಾರೀ ಗುಪ್ತಗಾಯವಾಗಿರುತ್ತದೆ ಸದರಿ ಘಟನೆಯು ಲಾರಿ ಚಾಲಕನ ನಿರ್ಲಕ್ಷ್ಯತನದಿಂದ ಜರುಗಿದ್ದು ಆತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿರಿ ಅಂತಾ ತಡವಾಗಿ ಇಂದು ದಿನಾಂಕ 14/12/2017 ರಂದು 12-30 ಪಿ.ಎಂ.ಕ್ಕೆ ಹೇಳಿಕೆ  ಫಿಯರ್ಾದಿ  ನೀಡಿದ್ದರ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.66/2017 ಕಲಂ 279, 337, 338 ಐಪಿಸಿ  ನೇದ್ದರಲ್ಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.  

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 294/2017 ಕಲಂ 323, 354, 504, 506 ಸಂ. 34 ಐಪಿಸಿ ;- ದಿನಾಂಕ 14.12.2017 ರಂದು ಬೆಳಿಗ್ಗೆ 10.15 ಎ.ಎಂ ಸುಮಾರಿಗೆ ಪಿರ್ಯಾಧಿ  ಮನೆಯಲ್ಲಿದ್ದಾಗ ಆರೋಪಿತರು ಮನೆಗೆ ಬಂದು ಏ ಸೂಳಿ ಮಕ್ಕಳೆ ದಿನಾಂಕ 11.12.2017 ರಂದು ಮೋಹನರೆಡ್ಡಿ ತಂದೆ ಅನಂತರೆಡ್ಡಿ ಜಗಳದಲ್ಲಿ ನಮ್ಮ ಹೆಸರು ಪೊಲೀಸ್ ಠಾಣೆಯಲ್ಲಿ ಬರೆಯಿಸಿ ಬಂದಿರಿ ನಿಮಗೆ ಸೊಕ್ಕು ಬಹಳ ಇದೆ ಸುಳ್ಳೆ ನಮ್ಮ ಹೆಸರು ಬರೆಯಿಸಿರಿ ಅಂತಾ ಅವಾಚ್ಯವಾಗಿ ಬೈದು ಪಿರ್ಯಾಧಿಗೆ ಕೈಯಿಂದ ಹೊಡೆದು ಸೀರೆ ಸೇರಗು ಹಿಡಿದು ಜಗ್ಗಿ ಮಾನಭಂಗ ಮಾಡಲು ಪ್ರಯತ್ನಿಸಿ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.
 
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 295/2017 ಕಲಂ 143.,147,323,324, 354, 504, 506 ಸಂ.149 ಐಪಿಸಿ;-ದಿನಾಂಕ 14.12.2017 ರಂದು ಬೆಳಿಗ್ಗೆ 10.20 ಎ.ಎಂ ಸುಮಾರಿಗೆ ಪಿರ್ಯಾಧಿಯ ಗಂಡ ಶಂಕರರೆಡ್ಡಿ ಈತನು ಮೋಹನರೆಡ್ಡಿ ತಂದೆ ಅನಂತರೆಡ್ಡಿ ಈತನಿಗೆ ದಿನಾಂಕ 11.12.2017 ರಂದು ನಡೆದ ಜಗಳದಲ್ಲಿ ನಮ್ಮ ಹೆಸರು ಯಾಕೆ ಬರೆಯಿಸಿದಿ ಅಂತಾ ಕೇಳುತ್ತಿದ್ದಾಗ ಆರೋಪಿ ನರಸರೆಡ್ಡಿ ಈತನು ಏ ಸೂಳಿ ಮಗನೆ ಆತನಿಗೆ ಏನು ಕೇಳುತ್ತಿ ನಾನೆ ಬರೆಯಿಸಿದ್ದು ಏನು ಸೆಂಟ ಕಿತ್ತಕೊತ್ತಿ ಅಂತಾ ಅವಾಚ್ಯವಾಗಿ ಬೈದು ಇಲ್ಲೆ ನಿಲ್ಲು ನಿಮಗೆ ಒಂದು ಗತಿ ಕಾಣಿಸುತ್ತೇನೆ ಅಂತಾ ಅಂದು ಆತನ ಮನೆಯವರಿಗೆ ಹೇಳಿ ಎಲ್ಲರೂ ಅಕ್ರಮಕೂಟ ರಚಿಸಿಕೊಂಡು ಕೈಯಲ್ಲಿ ಬಡಿಗೆ ಹಿಡಿದುಕೊಂಡು ಬಂದು ಪಿರ್ಯಾಧಿ ಸೀರೆ ಹಿಡಿದು ಎಳೆದು ಮಾನಭಂಗ ಮಾಡಲು ಪ್ರಯತ್ನಿಸಿ ಪಿರ್ಯಾಧಿಯ ಗಂಡನಿಗೆ ಕೈಯಿಂಡ ಹೊಡೆದು ಜಗಳ ಬಿಡಿಸಲು ಬಂದ ಭಿಮರೆಡ್ಡಿ ಈತನಿಗೆ ಬಡಿಗೆಯಿಂದ ಹೊಡೆದು ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.
  
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 180/2017 ಕಲಂ: 32,34 ಕೆ.ಇ ಎಕ್ಟ್ 1965;- ದಿನಾಂಕ: 14/12/2017 ರಂದು 9 ಎಎಮ್ ಕ್ಕೆ ಮಾನ್ಯ ಸಿ.ಪಿ.ಐ ಯಾದಗಿರಿ ವೃತ್ತ ರವರು ಪೊಲೀಸ್ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರಪಡಿಸಿ, ವರದಿ ನೀಡಿದ್ದೇನಂದರೆ ಇಂದು ದಿನಾಂಕ: 14/12/2017 ರಂದು ಬೆಳಗ್ಗೆ  ನಾನು ಮತ್ತು ಸಂಗಡ ಸೈಯದ ಅಲಿ ಹೆಚ್.ಸಿ 191, ಸಂಜೀವಕುಮಾರ ಹೆಚ್.ಸಿ, ಅಂಬ್ರೇಶ ಎಪಿಸಿ 114 ರವರೊಂದಿಗೆ ವೃತ್ತ ಕಛೇರಿಯಲ್ಲಿದ್ದಾಗ ವಡಗೇರಾ ಕ್ರಾಸ ಹತ್ತಿರ ನಮ್ಮೂರು ದಾಭಾದ ಹತ್ತಿರ ಯಾರೋ ಒಬ್ಬನು ಹೋಗಿ ಬರುವ ಸಾರ್ವಜನಿಕರಿಗೆ ಅಕ್ರಮವಾಗಿ ಬಿಯರ ಬಾಟ್ಲಿಗಳನ್ನು ಮಾರಾಟ ಮಾಡುತ್ತಿದ್ದಾನೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಇಬ್ಬರು ಪಂಚರನ್ನು ಬರ ಮಾಡಿಕೊಂಡು ಸದರಿ ಪಂಚರಿಗೆ ಮತ್ತು ನಮ್ಮ ಸಿಬ್ಬಂದಿಯವರಿಗೆ ದಾಳಿ ಬಗ್ಗೆ ತಿಳಿಸಿ, ಪಂಚರಿಗೆ ಮತ್ತು ಸಿಬ್ಬಂದಿಯವರಿಗೆ ಸರಕಾರಿ ಜೀಪ ನಂ. ಕೆಎ 33 ಜಿ 0161 ನೇದ್ದರಲ್ಲಿ ಕರೆದುಕೊಂಡು ಹೊರಟು 7-25 ಎಎಮ್ ಕ್ಕೆ ವಡಗೇರಾ ಕ್ರಾಸ ನಮ್ಮೂರು ದಾಭಾದ ಹತ್ತಿರ ಹೋಗಿ ಜೀಪನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿ, ಅಲ್ಲಿಂದ ನಡೆದುಕೊಂಡು ನಮ್ಮೂರು ದಾಭಾದ ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿ ಖಾಲಿ ಸ್ಥಳದಲ್ಲಿ ಒಬ್ಬ ಮನುಷ್ಯನು ಹೋಗಿ ಬರುವ ಸಾರ್ವಜನಿಕರಿಗೆ 150/- ರೂ. ಗೆ ಒಂದು ಬಿಯರ ಕುಡಿಯಿರಿ ಎಂದು ಕೂಗಿ ಕರೆದು ಮಾರಾಟ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ಅವನ ಮೇಲೆ ದಾಳಿ ಮಾಡಿ ಅವನಿಗೆ ಹಿಡಿದುಕೊಳ್ಳಬೇಕು ಎನ್ನುವಷ್ಟರಲ್ಲಿ ಅವನು ಅಲ್ಲಿಂದ ತಪ್ಪಿಸಿಕೊಂಡು ಕವಳೆ ಗದ್ದೆಯಲ್ಲಿಂದ ಓಡಿ ಹೋದನು. ಅಲ್ಲಿದ್ದ ಪೊಲೀಸ್ ಬಾತ್ಮಿದಾರರಿಗೆ ಅವನ ಹೆಸರು ವಿಳಾಸ ಕೇಳಲಾಗಿ ವಿಕಾಸ ಚೌಧರಿ ತಂದೆ ವಿ. ರಾಜು ಯಂಪಾಟಿ, ವ:24, ಜಾ:ಕಮ್ಮಾ, ಉ:ವ್ಯಾಪಾರ, ಸಾ:ಲಿಂಗೇರಿ ತಾ:ಜಿ: ಯಾದಗಿರಿ ಎಂದು ಹೇಳಿದರು. ಅವನು ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿ ನೋಡಲಾಗಿ ಒಂದು ರಟ್ಟಿನ ಕಾಟನ ಬಾಕ್ಸದಲ್ಲಿ ಕಿಂಗಫೀಶಯರ ಬಿಯರ ಬಾಟಲಿಗಳು ಇದ್ದು, ಎಣಿಕೆ ಮಾಡಿ ನೋಡಲಾಗಿ 650 ಎಮ್.ಎಲ್ ದ ಒಟ್ಟು 12 ಬಾಟಲಿಗಳು ಇದ್ದವು. ಒಟ್ಟು ಮದ್ಯ 650*12=7 ಲೀಟರ್ 800 ಎಮ್.ಎಲ್ ಆಗುತ್ತಿದ್ದು, ಸದರಿ ಬಾಟಲಿಗಳ ಮೇಲೆ ಎಮ್.ಆರ್.ಪಿ ಬೆಲೆ 125/- ರೂ.ದಂತೆ ಒಟ್ಟು 1500=00 ರೂ.ಗಳು ಆಗುತ್ತಿದ್ದು, ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ: 14/12/2017 ರಂದು 7-30 ಎಎಮ್ ದಿಂದ 8-30 ಎಎಮ್ ವರೆಗೆ ಜರುಗಿಸಿ, 9 ಎಎಮ್ ಕ್ಕೆ ಮುದ್ದೆಮಾಲಿನೊಂದಿಗೆ ಪೊಲೀಸ ಠಾಣೆಗೆ ಬಂದು ಜಪ್ತಿ ಪಂಚನಾಮೆಯೊಂದಿಗೆ ಈ ವರದಿ ಕೊಡುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 180/2017 ಕಲಂ: 32,34 ಕೆ.ಇ ಎಕ್ಟ್ 1965 ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 354/2017 ಕಲಂ. 153 (ಎ) 504. 505 ಐಪಿಸಿ ;- ದಿನಾಂಕ: 14-12-2017 ರಂದು 12 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀ ರಮೇಶ ದೊರೆ ತಂದೆ ರಾಮಚಂದ್ರಪ್ಪ ದೊರೆ ಆಲ್ದಾಳ ಸುರಪುರ  ಕೆಪಿಸಿಸಿ ಎಸ್.ಟಿ ಘಟಕ ರಾಜ್ಯ ಪ್ರಧಾನ ಕಾರ್ಯದಶರ್ಿಗಳು ಇವರು ಠಾಣೆಗೆ ಬಂದು ಒಂದು ಲಿಖಿತ ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ಕನರ್ಾಟಕ ಸಕರ್ಾರದ ಧಕ್ಷ ಆಡಳಿತಗಾರನಾದ ಹಾಗೂ ಹಿಂದುಳಿದವರ ಹಿತರಕ್ಷಕನಾಗಿ ಸುಭದ್ರ ಸಕರ್ಾರವನ್ನು ನೀಡಿರುವ ರಾಜ್ಯದ ಮುಖ್ಯ ಮಂತ್ರಿಯಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯಾ ಸಾಹೇಬ್ರ ಬಗ್ಗೆ ಅವಹೇಳನಕಾರಿ ಹೇಳಿಕೆ ಹಾಗೂ ಮುಖ್ಯ ಮಂತ್ರಿಗೆ ಚಪ್ಪಲಿ ಹಾರ ಹಾಕಿರುವ ಹಾಗೂ ನಿಧನ ಹೊಂದಿರುವ ಬಗ್ಗೆ ಶ್ರದ್ದಾಂಜಲಿ ಸಲ್ಲಿಸಿರುವ ಭಾವ ಚಿತ್ರವನ್ನು ದಿನಾಂಕ: 13-12-2017 ರಂದು ಸಮಯ 5 ಗಂಟೆ 43 ನಿಮಿಷಕ್ಕೆ ಹಾಗೂ ರಾತ್ರಿ 9.58 ಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಸುರಪುರ ತಾಲೂಕಿನ ಪೇಠ ಅಮ್ಮಾಪುರ ಗ್ರಾಮದ ರೌಡಿ ಶಿಟರ್ ಆಗಿರುವ ಶ್ರೀ ಮಲ್ಲಿಕಾಜರ್ುನ ತಂದೆ ಸುಬಾಸರೆಡ್ಡಿ ಕೋಳಿಹಾಳ (ಎಮ್.ಎಸ್.ರೆಡ್ಡಿ ಅಮ್ಮಾಪುರ) ಇವನು ಮೂಲತ ಸಮಾಜದಲ್ಲಿ ಗೊಂದಲವನ್ನು ಮೂಡಿಸುತ್ತಿದ್ದು, ಹಾಗೂ ರೌಡಿ ಶೀಟರ್ ಆಗಿರುವವನು ಇಂತಹ ಕ್ಷುಲ್ಲಕ ವ್ಯಕ್ತಿಯ ಭಾರತಿಯ ಜನತಾ ಪಕ್ಷದಲ್ಲಿ (ಬಿಜೆಪಿ) ಮನೋವೃತ್ತಿಯನ್ನು ಹೊಂದಿರುವ ಹಾಗೂ ಸಮಾಜದ ಸ್ವಾಸ್ಥವ್ಯನ್ನು ಹಾಳು ಮಾಡುವ ಹಾಗೂ ಸಕರ್ಾರ ಮುಖ್ಯ ಮಂತ್ರಿಗೆ ಚಪ್ಪಲಿಹಾರ ಹಾಕಿ ಮತ್ತು ಜೀವಂತ ಇದ್ದರೂ ನಿಧನ  ಹೊಂದಿದ್ದಾನೆ ಎಂದು ಜಾತಿ ಜಾತಿಗಳ ಮಧ್ಯ ವೈಮನಸ್ಸು, ದ್ವೇಷ ಹುಟ್ಟಿಸುವ ಉದ್ದೇಶದಿಂದ ಶ್ರದ್ದಾಂಜಲಿ ಫೋಟೊವನ್ನು ಹರಿಬಿಟ್ಟು ಸಾಮಾಜಿಕ ಜಾಲ ತಾಣದಲ್ಲಿ ಪ್ರಚಾರ ಮಾಡಿದ್ದು, ತಕ್ಷಣ ಬಂಧಿಸಿ ಅವನನ್ನು ಗಡಿಪಾರು ಮಾಡಬೇಕು ಹಾಗೂ ಅವರ ಹಿಂದೆ ಇರುವ ಪ್ರಚೋಧನಕಾರಿ ವ್ಯಕ್ತಿಗಳನ್ನು ಪತ್ಯೆ ಹಚ್ಚಿ ಸೈಬರ ಕ್ರೈಮ್ ಅಡಿಯಲ್ಲಿ ಪ್ರಕರಣದ ದಾಖಲಿಸಿ ಸುದಿರ್ಘವಾದ ತನಿಖೆ ನಡೆಯಬೇಕು ಮುಂದೆ ಆಗುವ ಅನಾಹುತಗಳನ್ನು ತಡೆಯಬೇಕು ಮತ್ತು ತಾಲೂಕಿನಲ್ಲಿ ಶಾಂತಿಯುತ ವಾತಾವರಣ ಕಲ್ಪಿಸಬೇಕೆಂದು ತಮ್ಮಲ್ಲಿ ಈ ಮನವಿಯ ಮೂಲಕ ವಿನಂತಿಸುತ್ತಾ ತಕ್ಷಣ ಪ್ರಕರಣವನ್ನು ದಾಖಲಿಸಿ ಕಾನೂನಾತ್ಮಕ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೆನೆ ಅಂತಾ ಕೊಟ್ಟ ಲಿಖಿತ ಅಜರ್ಿಯ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 355/2017 ಕಲಂ. 153 (ಎ) 504. 505 ಐಪಿಸಿ ;- ದಿನಾಂಕ: 14-12-2017 ರಂದು 5 ಪಿ.ಎಂ.ಕ್ಕೆ ಠಾಣೆಗೆ ಶ್ರೀ ಬೀಮಣ್ಣ ತಂದೆ ಗೋವಿಂದಪ್ಪ ಬೇವಿನಾಳ ಸಾ:ಮುಲ್ಲಾ ಮೊಹಲಾನ ಸುರಪುರ ಇವರು ಠಾಣೆಗೆ ಬಂದು ಒಂದು ಗಣಕ ಯಂತ್ರದಲ್ಲಿ ಟೈಪ ಮಾಡಿದ ಅಜರ್ಿ ತಂದು ಹಾಜರು ಪಡಿಸಿದ್ದು ಸಾರಾಂಶವೆನೆಂದರೆ ನಾವುಗಳು ರಾಜುಗೌಡರ ಅಭಿಮಾನಿಗಳಾದ ನಾವುಗಳು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೆನೆಂದರೆ, ದಿನಾಂಕ: 14-12-2017 ರಂದು ಬೆಳಿಗೆ 10-30 ಕ್ಕೆ ನಾವು ನೊಡಿದಾಗ ಭಜರಂಗಿ ಎಂಬ ಪೇಸಬುಕ ಅಕೌಂಟಿನಿಂದ ನಮ್ಮ ನಾಯಕರಾದ ಶ್ರೀ ನರಸಿಂಹನಾಯಕ(ರಾಜುಗೌಡ) ಭಾವಚಿತ್ರಕ್ಕೆ ಕೆಲವು ಕಿಡಿಗೇಡಿಗಳು ತಾಲುಕಿನಲ್ಲಿ ಜಾತಿ ಜಾತಿಗಳ ಮಧ್ಯ ವೈಷಮ್ಯ ಮತ್ತು ತಾಲೂಕಿನಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದು, ಕಾರಣ ದಯಾಳುದಳಾದ ತಾವುಗಳು ಶಾಂತಿ ಕದಡಿ ಸುರಪುರ ಅಶಾಂತಿಗೊಳಿಸುತ್ತಿರುವ ಕಿಡಿಗೇಡಿಗಳಾದ ಭಜರಂಗಿ ಎಂಬ ಪೇಸಬುಕ್ಕ ಅಕೌಂಟಿನ ನಂಬರ ಪತ್ತೆ ಹಚ್ಚಿ ನಮ್ಮ ನಾಯಕರಿಗೆ ಅವಮಾನ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೆನೆ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 356/2017 ಕಲಂ: 279,337,338 ಐಪಿಸಿ ಮತ್ತು 187 ಐ.ಎಂ.ವಿ ಕಾಯ್ದೆ ;- ದಿನಾಂಕ: 14-12-2017 ರಂದು 7-30 ಪಿ.ಎಂಕ್ಕೆ ಠಾಣೆಗೆ ಶ್ರೀ ನರಸನಗೌಡ ತಂದೆ ಅಮರೆಗೌಡ ಪೊಲೀಸ ಪಾಟೀಲ  ಸಾ:ಪಟಕನದೊಡ್ಡಿ ತಾ: ಮಾನವಿ ಜಿಲ್ಲಾ: ರಾಯಚೂರ ನನಗೆ ಇಬ್ಬರು ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ. ನನ್ನ ಹಿರಿಯ ಮಗನಾದ ಅಮರೆಗೌಡ ಈತನಿಗೆ ಸುರಪುರ ತಾಲೂಕಿನ ಕೋನಾಳ ಗ್ರಾಮದ ವೀರಣಗೌಡ ಯಾಳವಾರ ಇವರ ಮಗಳಾದ ಸವಿತಾ ಇವಳೊಂದಿಗೆ ಮದುವೆ ಮಾಡಿದ್ದು ಇರುತ್ತದೆ. ಸೊಸೆಯಾದ ಸವಿತಾ ಇವಳು ಗಬರ್ಿಣಿ ಇದ್ದು ತವರು ಮನೆಯಾದ ಕೊನಾಳಕ್ಕೆ ಬಂದಿದ್ದು ಇರುತ್ತದೆ. ಹೀಗಿರುವಾಗ ದಿನಾಂಕ: 06-12-2017 ರಂದು ಮಗನಾದ ಅಮರೇಗೌಡ ಈತನು ನಮ್ಮ ಮೊಟಾರ ಸೈಕಲ್ ನಂಬರ ಕೆಎ-36 ಇಎ-7699 ನೇದ್ದನ್ನು ತಗೆದುಕೊಂಡು ಕೊನಾಳ ಗ್ರಾಮಕ್ಕೆ ಬರುವ ಕುರಿತು ದೇವಾಪೂರ-ಹುಣಸಗಿ ಮುಖ್ಯ ರಸ್ತೆಯ ಹಂದ್ರಾಳ ಹತ್ತಿರ  ಸಾಯಂಕಾಲ 4-30 ಗಂಟೆ ಸುಮಾರಿಗೆ ಕೊನಾಳ ಕಡೆಗೆ ಹೋಗುತ್ತಿರುವಾಗ ಒಂದು ಬುಲೆರೋ ವಾಹನ ನಂಬರ ಕೆಎ-34 ಎಮ್-1364 ನೇದ್ದರ ಚಾಲಕನು ತನ್ನ ಬುಲೆರೊ ವಾಹನವನ್ನು ಅತೀ ವೇಗ ಮತ್ತು ಅಲಕ್ಷಿತನದಿಂದ ನಡೆಸಿಕೊಂಡು ಬಂದು ಮಗ ಅಮರೆಗೌಡ ಈತನ ಮೊಟರ ಸೈಕಲ್ಗೆ ಎದುರಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದು, ಮಗ ಅಮರೆಗೌಡನ ಎಡಗೈ ಮತ್ತು ಎಡಗಾಲ ಮುರಿದಿರುತ್ತವೆ. ಅಂತಾ ನಮ್ಮ ಅಳಿಯನಾದ ಶರಣಗೌಡ ತಂದೆ ಮಲ್ಲಣಗೌಡ ಯಾಳವಾರ ಈತನಿಗೆ ಮಗ ಅಮರೆಗೌಡ ಪೋನ ಮಾಡಿ ವಿಷಯ ತಿಳಿಸಿದಾಗ ಶರಣಗೌಡ ಈತನು ಘಟನಾ ಸ್ಥಳಕ್ಕೆ ಹೋಗಿ ಮಗ ಅಮರೆಗೌಡನನ್ನು ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಲಿಂಗಸುರ ಡಾ: ಹರ್ಷವರ್ದನ ಪಾಟೀಲ ಇವರ ಆಸ್ಪತ್ರೆಗೆ ಸೇರಿಕೆ ಮಾಡಿ ನಮಗೆ ವಿಷಯ ತಿಳಿಸಿದಾಗ ನಾನು ಹೆಂಡತಿಯಾದ ಶ್ರೀಮತಿ ಬಸಮ್ಮ ಇಬ್ಬರು ಆಸ್ಪತ್ರೆಗೆ ಹೋಗಿ ನೋಡಲು ಮಗ ಅಮರೆಗೌಡನಿಗೆ ಮೇಲೆ ಹೇಳಿದಂತೆ ಗಾಯಗಳಾಗಿದ್ದು ನೊಡಿದೆವು. ಬುಲೆರೊ ವಾಹನ ಚಾಲಕ ಅಪಘಾತ ಮಾಡಿ ವಾಹನ ನಿಲ್ಲಿಸಿ ಕೆಳಗೆ ಇಳಿದು ಮಗ ಅಮರೆಗೌಡ ಬಿದ್ದಿದ್ದನ್ನು ನೋಡಿ ಪುನ: ತನ್ನ ಬುಲೆರೊ ವಾಹನ ತಗೆದುಕೊಂಡು ಹೋಗಿರುತ್ತಾನೆ ಅವನನ್ನು ನೋಡಿದರೆ ಗುರುತಿಸುವದಾಗಿ ಮಗ ಅಮರೆಗೌಡ ಈತನಿಂದ ವಿಷಯ ಕೆಳಿ ತಿಳಿದುಕೊಂಡಿದ್ದು ಇರುತ್ತದೆ. ಮಗ ಅಮರೆಗೌಡ ಈತನು ಉಪಚಾರ ಪಡೆಯುತ್ತಿದ್ದು, ಮಗನ ಹತ್ತಿರ ಯಾರೂ ಇರದ ಕಾರಣ ಮಗನಿಗೆ ಉಪಚಾರ ಮಾಡಿಸಿ ಗುಣಮುಖವಾದ ನಂತರ ಠಾಣೆಗೆ ತಡವಾಗಿದ್ದು ಬಂದಿದ್ದು ಇರುತ್ತದೆ. ಬುಲೆರೋ ವಾಹನ ಚಾಲಕನ ಹೆಸರು ವಿಳಾಸ ಗೊತ್ತಾಗಿರುವದಿಲ್ಲ ಬುಲೆರೋ ವಾಹನ ನಂಬರ ಕೆಎ-34 ಎಮ್-1364 ನೇದ್ದರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಅಜರ್ಿಯ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ