Police Bhavan Kalaburagi

Police Bhavan Kalaburagi

Monday, April 30, 2018

KALABURAGI DISTRICT REPORTED CRIMES

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ಜಪ್ತಿ :
ರಾಘವೇಂದ್ರ ನಗರ ಠಾಣೆ : ದಿನಾಂಕ 28-04-2018 ರಂದು  ಶ್ರೀ ಎನ್, ಚೊಕ್ಕಾರೆಡ್ಡಿ ಭೂ , ವಿಜ್ಞನಿಗಳು ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಲಬುರಗಿ  ರವರು ಕಲಬುರಗಿ ನಗರದ ಎಮ್.ಎಸ್.ಕೆ.ಮೀಲ್ ವ್ಯಾಪ್ತಿಯ ಮಹ್ಮದ ಚೌಕ ಹತ್ತಿರ ಟಿಪ್ಪರ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆ ಅಂತ ಮಾಹಿತಿ ಇದ್ದು. ಮಾಹಿತಿಯಂತೆ ಅಕ್ರಮ ಮರಳು ಸಾಗಾಟ ಮಾಡುವವರ ವಿರುದ್ದ ಕ್ರಮ ಕೈಕೊಳ್ಳುವ ಕುರಿತು ಇಂದು ಬೆಳ್ಳಿಗೆ 10:45 ಗಂಟೆಗೆ ತಮ್ಮ ಠಾಣೆಗೆ ಹಾಜರಾಗಿ ತಮ್ಮ ಸಹಾಯದೊಂದಿಗೆ ಪಂಚರನ್ನು ಕರೆದುಕೊಂಡು ಮಹ್ಮದ ಚೌಕ ಹತ್ತಿರ ಹೋಗಿ ವಾಹಗಳನ್ನು ಪರಿಶಿಲನೆ ಮಾಡುತ್ತಿದ್ದಾಗ ಬೆಳ್ಳಿಗ್ಗೆ 11:15 ಗಂಟೆಗೆ ಸುರಮಾರಿಗೆ ಒಂದು ಟಿಪ್ಪರ ಲಾರಿ ಬರುತ್ತಿದ್ದು ನಾನು ಮತ್ತು ಪಿ.ಎಸ್.ಐ. ಸಾಹೇಬರು ಸಿಬ್ಬಂದಿಯವರು ರಸ್ತೆಯ ಮೇಲೆ ಸದರಿ ಟಿಪ್ಪರ ಚಾಲಕನಿಗೆ ಟಿಪ್ಪರ ನಿಲ್ಲಿಸುವಂತೆ ಸೂಚಿಸಿದ್ದು ಸದರಿ ಟಿಪ್ಪರ ಚಾಲಕನು ತನ್ನ ಟಿಪ್ಪರನ್ನು ರಸ್ತೆ ಬದಿಗೆ ತೆಗೆದುಕೊಂಡು ಟಿಪ್ಪರ ನಿಲ್ಲಿಸಿ ಒಮ್ಮಲೆ ಅಲ್ಲಿಂದ ಓಡಿ ಹೋಗಿದ್ದು ಟಿಪ್ಪರ ಹತ್ತಿರ ಹೋಗಿ ನೋಡಲು ಸದರಿ ಟಿಪ್ಪರ ನಂ ಓಆರ್ 19 ಬಿ 1110 ಅಂತ ಇದ್ದು, ಸದರಿ ಟಿಪ್ಪರನ್ನು ಪರಿಶೀಲಿಸಿ ನೋಡಲು ಅದರಲ್ಲಿ ಅಂದಾಜು 6 ಬ್ರಾಸ ಮರಳು ಇದ್ದು ಸದರಿ ಟಿಪ್ಪರ ಕ್ಯಾಬಿನ ಒಳಗೆ ಹೋಗಿ ಕ್ಯಾಬಿನ ಪರಿಸಿಲಿಸಿ ನೋಡಲು ಮರಳು ಸಾಗಾಟ ಮಾಡುತ್ತಿದ್ದ ಬಗ್ಗೆ ಯಾವುದೆ ಮರಳು ಸಾಗಾಣಿಕೆ ಪರವಾನಿಗೆ ಲಭ್ಯವಾಗಿರುವುದಿಲ್ಲ. ಸದರಿ ಟಿಪ್ಪರ ಚಾಲಕ ಮತ್ತು ಟಿಪ್ಪರ ಮಾಲೀಕ ಕೂಡಿಕೊಂಡು ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಪಿ.ಎಸ್.ಐ. ಸಾಹೇಬರ ಸಹಾಯದೊಂದಿಗೆ ಸದರಿ ಟಿಪ್ಪರ ನಂ ಓಆರ್ 19 ಬಿ 1110 ನೇದ್ದು ಅ:ಕಿ: 3 ಲಕ್ಷ ರೂ ಟಿಪ್ಪರದಲಿದ್ದ ಅಂದಾಜ 6 ಬ್ರಾಸ ಮರಳು ಅ:ಕಿ: 12,000/- ರೂ ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 27.04.2018 ರಂದು ಸಾಯಂಕಾಲ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಗಂಗಾ ನಗರ ನಾಗರ ಕಟ್ಟಾ ಗುಡಿಯ ಮುಂದೆ ರಸ್ತೆಯ ಪಕ್ಕದಲ್ಲಿ ಮೂರು ಜನ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೊಡುತ್ತಿದ್ದಾರೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಗಂಗಾ ನಗರ ನಾಗರ ಕಟ್ಟಾ ಗುಡಿಯ ಹತ್ತಿರ ಹೋಗಿ ಜೀಪ ನಿಲ್ಲಿಸಿ ನಾವು ಜೀಪಿನಿಂದ ಇಳಿದು ಸ್ವಲ್ಪ ಮುಂದೆ ಹೋಗ ಮರೆಯಲ್ಲಿ ನಿಂತುಕೊಂಡು ನಾಗರ ಕಟ್ಟಾ ಗುಡಿಯ ಮುಂದೆ ರಸ್ತೆಯ ಪಕ್ಕದಲ್ಲಿ ಮೂರು ಜನ ವ್ಯಕ್ತಿಗಳು ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಬಾಂಬೆ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಡುತ್ತಿದ್ದವರನ್ನು ನಾನು ಮತ್ತು ಸಿಬ್ಬಂದಿಯವರು ಕೂಡಿಕೊಂಡು ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲು ಸದರಿಯವರು ತಮ್ಮ ಹೆಸರು 1. ಶರಣಪ್ಪ @ ಬಾಂಬೆ ಶರಣ್ಯ ತಂದೆ ಗುಂಡಪ್ಪ ಕೂಡಿ ಸಾ: ಯಲ್ಲಮ್ಮ ಗುಡಿ ಹತ್ತಿರ ಗಂಗಾನಗರ ಕಲಬುರಗಿ 2. ಬಾಬುರಾವ ತಂದೆ ಚಂದ್ರಶ್ಯಾ ಡಿಗ್ಗಿ ಸಾ: ನಾಗರಕಟ್ಟಾ ಹತ್ತಿರ ಗಂಗಾನಗರ ಕಲಬುರಗಿ 3. ಸೈಯದ ಖಾದ್ರಿ ತಂದೆ ಸೈಯದ ಮಿನಲ್ಲಾ ಹುಸೇನಿ ಸಾ: ಅಬುಬಕರ ಮಜ್ಜಿದ ಹತ್ತಿರ ನ್ಯೂ ರಾಘವೇಂದ್ರ ಕಾಲೋನಿ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 2710/- ರೂ 5 ಮಟಕಾ ಚೀಟಿಗಳು ಮತ್ತು 3 ಬಾಲ ಪೇನಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 23-04-2018 ರಂದು ಮುಂಜಾನೆ ನನ್ನ ಮಗ ದೇವಾ ಈತನು ನಮ್ಮೂರ ಆದಿತ್ಯ ಈತನಿಗೆ ತುಕರಾಮ  ಇವರ ಹೊಂಡಾ ಎಕ್ಟಿವ್ ಮೋ.ಸೈಕಲ್ ನಂ ಕೆಎ-20-ಎಕ್ಸ್-0128 ನೇದ್ದನ್ನು ನಡೆಸಿಕೊಂಡು ಜೀವಣಗಿ ಗೋಗಿ ರೋಡಿನ ಲಕ್ಷ್ಮಿ ಗುಡಿಯ  ಮುಂದುಗಡೆ ರೋಡಿನ ಮೇಲೆ ಹೋಗುವಾಗ ನಮ್ಮೂರಿನ ಕ್ರೋಜರ ಜೀಪ್ ನಂ ಕೆಎ-39-ಎಮ್-1438 ನೇದ್ದರ ಚಾಲಕನು ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡಿಸಿ ನನ್ನ ಮಗ ದೇವಾ ಈತನಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿ ಓಡಿ ಹೋದ ಬಗ್ಗೆ ನನ್ನ ಹೇಳಿಕೆಯನ್ನು ನೀಡಿ ಕೇಸ ಮಾಡಿದ್ದು ಅಲ್ಲದೆ ಗಾಬರಿಯಲ್ಲಿ ನನ್ನ ಮಗ ದೇವಾನ ಇಂದು ದಿನಾಂಕ 29-4-2018 ರಂದು ಮುಂಜಾನೆ 11-00 ಗಂಟೆಗೆ ನನ್ನ ಮಗ ದೇವಾ ಈತನಿಗೆ ಅಪಘಾತವಾದ ವಿಷಯದಲ್ಲಿ ಮುಂದುವರೆದು ಹೇಳುವುದೇನೆಂದರೆ ಅಪಘಾತದಲ್ಲಿ ದೇವಾ 16 ವರ್ಷ ಈತನ ಬಲ ಮೆಲಕಿಗೆ ಭಾರಿ ರಕ್ತಗಾಯ ಹಾಗೂ ಅಲಲ್ಲಿ ರಕ್ತ ಗುಪ್ತಗಾಯಗಳು ಹೊಂದಿ ಕಾಮರೆಡ್ಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದಾಗ ದೇವಾನಿಗೆ ಉಪಚಾರ ಕೊಡಿಸುವ ಖರ್ಚು  ಜಾಸ್ತಿ ಬರುತ್ತಿದ್ದು ನನಗೆ ಹಣದ ತೊಂದರೆ ಇದ್ದುರಿಂದ ದಿನಾಂಕ 27-04-2018 ರಂದು ಸಾಯಂಕಾಲದ ವೇಳೆಯಲ್ಲಿ ನನ್ನ ಮಗ ದೇವಾ ಈತನಿಗೆ ಕಾಮರೆಡ್ಡಿ ಆಸ್ಪತ್ರೆಯಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇನೆ.  ಇಂದು ದಿನಾಂಕ 29-4-2018 ರಂದು ಮುಂಜಾನೆ 10-15 ಗಂಟೆಗೆ ನನ್ನ ಮಗ ದೇವಾ ವಯ 16 ವರ್ಷ ಈತನ ಉಪಚಾರದಲ್ಲಿ ಉಪಚಾರ ಫಲಕಾರಿ ಆಗದೆ ಜಿಲ್ಲಾ ಸರ್ಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ಶ್ರೀಮತಿ ಶಾರದಾಬಾಯಿ ಗಂಡ ಸುರೇಶ ಮರಗುತ್ತಿ ಸಾ: ಜೀವಣಗಿ ಗ್ರಾಮ ತಾ.ಜಿ ಕಲಬುರಗಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.