Police Bhavan Kalaburagi

Police Bhavan Kalaburagi

Tuesday, January 1, 2019

BIDAR DISTRICT DAILY CRIME UPDATE 01-01-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 01-01-2019


¸ÀAvÀ¥ÀÆgÀ ¥Éưøï oÁuÉ AiÀÄÄ.r.Dgï £ÀA. 23/2018, PÀ®A. 174 ¹.Dgï.¦.¹ :-
¦üAiÀiÁð¢ gÉÃSÁ UÀAqÀ ¸ÀĨsÁµÀ PÁA§¼É ¸Á: ¨ÁZÉ¥À½î gÀªÀgÀ UÀAqÀ£ÁzÀ ¸ÀĨsÁµÀ vÀAzÉ ¯Á®¥Áà PÁA§¼É ªÀAiÀÄ: 50 ªÀµÀð, eÁw: J¸À.¹ ºÉÆðAiÀiÁ, ¸Á: ¨ÁZÉ¥À½î gÀªÀjUÉ ¸ÀĪÀiÁgÀÄ ªÀµÀðUÀ½AzÀ ºÉÆmÉÖ £ÉÆêÀÅ EzÀÄÝ CªÀjUÉ D¸ÀàvÀæUÉ ºÁUÀÆ SÁ¸ÀV OµÀ¢ü ºÁQ¹zÀgÀÄ ¸ÀºÀ PÀrªÉÄ DVgÀĪÀ¢¯Áè, »ÃVgÀĪÁUÀ ¢£ÁAPÀ 26-12-2018 gÀAzÀÄ UÀAqÀ¤UÉ ºÉÆmÉÖ £ÉÆêÀÅ JzÀÄÝ CªÀjUÉ vÁ¼À¯ÁgÀzÉà £ÉÆêÀÅ PÀrªÉÄ DUÀĪÀ¢¯Áè CAvÀ ªÀÄ£À¹£À ªÉÄÃ¯É ¥ÀjuÁªÀÄ ªÀiÁrPÉÆAqÀÄ ªÀÄ£ÉAiÀÄ°èzÀÝ ¹ªÉÄJuÉÚ ªÉÄʪÉÄÃ¯É ¸ÀÄjzÀÄPÉÆAqÀÄ ¨ÉAQ ºÀaÑPÉÆAqÁUÀ ¦üAiÀiÁ𢠺ÁUÀÆ ¦üAiÀiÁð¢AiÀÄ ªÀÄUÀ E§âgÀÄ 108 JA§Ä¯É£ÀìUÉ PÀgÉ ªÀiÁr PÀgɬĹ CzÀgÀ°è ºÁQPÉÆAqÀÄ ©ÃzÀgÀ ¸ÀgÀPÁj D¸ÀàvÉæAiÀÄ°è zÁR®Ä ªÀiÁrzÁUÀ CªÀjUÉ UÀÄtªÀÄÄRªÁUÀzÉ ¢£ÁAPÀ 30-12-2018 gÀAzÀÄ ªÀÄÈvÀ¥ÀnÖgÀÄvÁÛgÉ, CªÀgÀÄ ªÀÄÈvÀ¥ÀlÖ §UÉÎ AiÀiÁgÀ ªÉÄïÉAiÀÄÄ ¸ÀA±ÀAiÀÄ EgÀĪÀ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 31-12-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 153/2018, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 30-12-2018 ರಂದು ಫಿರ್ಯಾದಿ ಅಭಿಷೇಕ ತಂದೆ ಅಶೋಕ ಕರ್ಸೆ, ವಯ: 22 ವರ್ಷ, ಜಾತಿ: ಲಿಂಗಾಯತ, ಸಾ: ಜೊಜನಾ, ಸದ್ಯ: ಗುಂಪಾ ಬೀದರ ರವರು ತನ್ನ ಗೆಳೆಯ ಸಿದ್ರಾಮೇಶ ತಂದೆ ಶಿವರಾಜ ಅಸ್ಟೂರೆ, ವಯ: 21 ವರ್ಷ, ಸಾ: ಇಸ್ಲಾಂಪೂರ, ಸದ್ಯ ಹೌಸಿಂಗ್ ಬೊರ್ಡ ಕಾಲೋನಿ ಬೀದರ ಇಬ್ಬರು ಕೂಡಿ ಮೊಟಾರ ಸೈಕಲ ನಂ. ಕೆಎ-38/ಎಸ್-8987 ನೇದರ ಮೇಲೆ ಜಿ.ಎನ್.ಡಿ ಕಾಲೇಜದಿಂದ ಗುಂಪಾ ಮೈಲೂರ ರಿಂಗ್ ರೋಡ ಮೂಲಕ ಗುಂಪಾದಲ್ಲಿರುವ ತಮ್ಮ ಮನೆಗೆ ಹೋಗುತ್ತಿರುವಾಗ ಮೌನೆಶ್ವರ ಮಂದಿರ ಹತ್ತಿರ ರಿಂಗ್ ರೋಡಿನಲ್ಲಿ ಬಂದಾಗ ಎದುರಿನಿಂದ ಟ್ರಾಕ್ಟರ್ ನಂ. ಎಪಿ-23/ಎ.ಸಿ-5506 ನೇದ್ದರ ಚಾಲಕನಾದ ಆರೋಪಿಯು ತನ್ನ ಟ್ರಾಕ್ಟರನ್ನು ಅತೀವೇಗ ಹಾಗು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಗುಂಪಾ ಕಡೆಯಿಂದ ಬಂದು ಎದುರಿನಿಂದ ಡಿಕ್ಕಿ ಮಾಡಿ ತನ್ನ ಟ್ರಾಕ್ಟರ್ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಬಲಗಾಲ ಮೊಳಕಾಲ ಕೆಳಗೆ ಭಾರಿ ರಕ್ತ ಗುಪ್ತಗಾಯ, ಎರಡು ಮುಂಗೈಗಳಿಗೆ ತರಚಿದ ರಕ್ತಗಾಯವಾಗಿರುತ್ತದೆ, ಹಿಂದೆ ಕುಳಿತ್ತಿದ್ದ ಸಿದ್ರಾಮೇಶ ಈತನಿಗೆ ಯಾವುದೇ ಗಾಯ ಆಗಿರುವದಿಲ್ಲ, ಆಗ ಸಿದ್ರಾಮೇಶ 108 ಅಂಬುಲೆನ್ಸ ಕರೆಯಿಸಿ ಅದರಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ಮುಧೋಳ ಠಾಣೆ : ಶ್ರೀ ಗಂಗಪ್ಪಾ ತಂದೆ ದೊಡ್ಡತಿಮ್ಮಪ್ಪಾ ಯಾದವ ಸಾ : ಅಪ್ಪೇರೆಡ್ಡಿಪಲ್ಲಿ ತಾ : ನಾರಾಯಣಪೇಟ ಜಿ : ಮಹಿಬೂಬ ನಗರ   ರವರ ಚಿಕ್ಕಪ್ಪನ ಮಗನಾದ ತಿಮಪ್ಪ ತಂದೆ ತಿಮಪ್ಪ ಯಾದವ ಮತ್ತು ಅವರ ಊರಿನವರಾದ ನರಸಿಂಹಲು ತಂದೆ ನರಸಪ್ಪ ಯಾದವ, ಸಾಯಲು, ಮಾಳಪ್ಪ ಹಾಗು ಇತರರು ತಮ್ಮ ತಮ್ಮ ಕುರಿಗಳನ್ನು ಮೇಯಿಸುತ್ತಾ ಊರುರೂ ಅಲೇದಾಡುತ್ತಾ ಈಗಾ 5-6 ದಿನಗಳ ಹಿಂದೆ ಗುರುಮಠಕಲ್ - ಕೊಡಂಗಲ್ ಮುಖ್ಯ ರಸ್ತೆಯ ಇಟ್ಲಾಪೂರ ಕ್ರಾಸ ಮತ್ತು ಹುಲಿಗುಂಡಂ ಕ್ರಾಸ ಮಧ್ಯದ ರಸ್ತೆಯ ಪಕ್ಕದ ಹೊಲದಲ್ಲಿ ತಮ್ಮ ಹಟ್ಟಿ ಹಾಕಿಕೊಂಡಿದ್ದು  ದಿನಾಂಕ: 31-12-2018 ರಂದು ಸಾಯಂಕಾಲ ಅಡುಗೆಯ ಸಾಮಾನುಗಳಾದ ಅಕ್ಕಿ ಬೇಳೆ ಮತ್ತು ಇತರೆ ಸಾಮಾನುಗಳನ್ನು ತೆಗೆದುಕೊಂಡು ಬರುವ ಸಲುವಾಗಿ ಸದರಿ ತಿಮ್ಮಪ್ಪ ಮತ್ತು ನರಸಿಂಹಲು ಇವರುಗಳು ತಾವು ಹಟ್ಟಿ ತಬ್ಬಿದ ಹೊಲದವರ ಮೊ/ಸೈ ತೆಗೆದುಕೊಂಡು ತಮ್ಮ ಊರಿಗೆ ಹೋಗುತ್ತೇವೆ ಅಂತಾ ಹೇಳಿ ಹೊಲದಿಂದ ಮೊ/ಸೈನ್ನು ನಡೆಸಿಕೊಂಡು ಮುಖ್ಯ ರಸ್ತೆಯ ಮೇಲೆ ಹೋಗಿ ಯಾನಾಗುಂದಿಯ ಕಡೆಗೆ ತನ್ನ ಮೊ/ಸೈನ್ನು ತಿರುಗಿಸಿಕೊಂಡು ರಸ್ತೆಯ ಎಡ ಬದಿಯಿಂದ ತಿಮ್ಮಪ್ಪ ಇತನು ಮೊ/ಸೈನ್ನು ನಡೆಯಿಸಿಕೊಂಡು ಹೋಗುತ್ತಿದ್ದಾಗ ಹುಲಿಗುಂಡಮ್ಮ ಕ್ರಾಸ ಸ್ವಲ್ಪ ಮುಂದೆ ಇದ್ದಾಗ ಗುರುಮಠಕಲ್  ಕಡೆಯಿಂದ ಕಾರ ನಂ TS 06 EL 0405 ನೇದ್ದರ ಚಾಲಕನು ತನ್ನ ಕಾರನ್ನು ಅತಿ ವೇಗ ಮತ್ತು  ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ತಿಮ್ಮಪ್ಪ ಇತನ ಮೊ/ಸೈ ಗೆ ಡಿಕ್ಕಿ ಪಡಿಸಿ ತನ್ನ ಕಾರನ್ನು ಅಲ್ಲೆ ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಇರುತ್ತದೆ.  ಸದರಿ ಅಪಘಾತದಲ್ಲಿ ತಿಮ್ಮಪ್ಪ ಇತನಿಗೆ ಬಲಗಡೆ ಹಣೆಯ ಮೇಲೆ ಮತ್ತು ಎಡಗಾಲ ತೋಡೆಯ ಮೇಲೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೇ ಮೃತ ಪಟ್ಟಿದ್ದು ಇರುತ್ತದೆ. ಗಾಯಾಳು ನರಸಿಂಹಲು ಇತನಿಗೆ ತಲೆಗೆ ಗಲ್ಲದ ಕಳಗಡೆ ರಕ್ತ ಗಾಯ ಹಾಗು ಬಲಗೈ ಮೋಣಕೈಗೆ ಮತ್ತು ಬಲಗಡೆ ಸೊಂಟದ ಮೇಲೆ ಭಾರಿ ರಕ್ತಗಾಯವಾಗಿದ್ದು, ಅಲ್ಲೆ ಹಟ್ಟಿಯಲ್ಲಿದ್ದ ಫೀರ್ಯಾದಿ ಮತ್ತು ಸಾಯಿಲು ರಸ್ತೆಯಲ್ಲಿ ಹೋಗಿ ಬರುವ ಜನರು ಸದರಿಯವರಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಗುರುಮಠಕಲನ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಧೋಳ ಠಾಣೆ : ದಿನಾಂಕ:30-12-2018 ರಂದು ಬೆಳಿಗ್ಗೆ  ಶ್ರೀ ನರಸಪ್ಪಾ ತಂದೆ ಶೇಷಣ್ಣ ಯಾದವ ಸಾ : ಜವಹರ ನಗರ ಹೂಡಾ (ಬಿ) ತಾ : ಸೇಡಂ ರವರು ಮತ್ತು ಅಣ್ಣನಾದ ಮೃತ ಮುತ್ತಪ್ಪ ತಂದೆ ಶೇಷಣ್ಣ ಯಾದವ ಮತ್ತು ಊರಿನವರಾದ ನಾಗಭೂಷಣ್ಣ ರೆಡ್ಡಿ, ನಬಿಲಾಲ, ಲಾಲಅಹ್ಮದ ಇತರು ಸೇರಿ ಜವಾಹರ ನಗರ ಹೂಡಾ (ಬಿ) ಗ್ರಾಮದ ನಾಗಭೂಷಣರೆಡ್ಡಿ ಇವರ ಆಫೀಸ್ ಎದುರಿಗೆ ರಸ್ತೆಯ ಪಕ್ಕದಲ್ಲಿ ಚಳಿ ಇದ್ದ ಪ್ರಯುಕ್ತ ಬೆಂಕಿ ಕಾಯಿಸುತ್ತಿದ್ದಾಗ 6:30 ಗಂಟೆ ಸುಮಾರಿಗೆ ಸೇಡಂ-ಕೊಡಂಗಲ್ ಮುಖ್ಯರಸ್ತೆ ಮೇಲೆ ಸೇಡಂ ಕಡೆಯಿಂದ ಸ್ವೀಪ್ಟ್ ಕಾರ ಟಿಎಸ್. 34 ಬಿ  7629 ನೇದ್ದರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ನಿರ್ಲಕ್ಷತನ ನಡೆಸಿ ಕೊಂಡು ಮಹಿಬೂಬ ಸಾಬ ಇವರ ಹೊಟೇಲ್ ಮುಂದೆ ನಿಂತಿದ್ದ ಮೊಟರ್ ನಂ.ಕೆಎ-32 ಇಬಿ 9938 ನೇದ್ದಕ್ಕೆ ಡಿಕ್ಕಿ ಪಡಿಸಿ ಮುಂದೆ ಬಂದು ಬೆಂಕಿ ಕಾಯಿಸುತ್ತಾ ಕುಳಿತ್ತಿದ್ದ ಮುತ್ತಪ್ಪಯಾದವ ಮತ್ತು ನಾಗಭೂಷಣರೆಡ್ಡಿ, ನಬಿಲಾಲ, ಲಾಲಅಹ್ಮದ ಇವರುಗಳಿಗೆ ಡಿಕ್ಕಿ ಪಡಿಸಿ ಮುಂದೆ ಹೋಗಿ ರಸ್ತೆಯ ಪಕ್ಕದಲ್ಲಿ ಕಾರ ನಿಲ್ಲಿಸಿ ಓಡಿ ಹೋಗಿರುತ್ತಾನೆ. ಅಪಘಾತದಲ್ಲಿ ಮುತ್ತಪ್ಪ ತಂದೆ ಶೇಷಣ್ಣಯಾದವ ಈತನು ತಲೆಯ ನೆತ್ತೆಯ ಮೇಲೆ ರಕ್ತಗಾಯವಾಗಿ, ಬಲಪಕ್ಕೆಗೆ ಭಾರಿಗುಪ್ತಗಾಯವಾಗಿ, ಬಲಗೈ ಮುರಿದಿದ್ದು ಎಡ ಬೆನ್ನಿಗೆ ಚುಚ್ಚಿದಗಾಯವಾಗಿ ಬೇಹುಷಾಗಿ ಬಿದ್ದಿದ್ದು, ನಾಗಭೂಷಣರೆಡ್ಡಿ, ನಬಿಲಾಲ, ಲಾಲಅಹ್ಮದ ಇವರಿಗೆ ಮೈಕೈಗೆ ಅಲ್ಲಲ್ಲಿ ತರಚಿದ ರಕ್ತ ಮತ್ತು ಗುಪ್ತ ಗಾಯವಾಗಿರುತ್ತವೆ. ನಂತರ ಎಲ್ಲರಿಗೂ ಉಪಚಾರ ಕುರಿತು 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆ ಸೇಡಂಕ್ಕೆ ಬಂದು ಸೇರಿಕೆ ಮಾಡಿದಾಗ ಮುತ್ತಪ್ಪ ಇತನು ಮೃತಪಟ್ಟಿರುತ್ತಾನೆ. ನಬಿಲಾಲ ಇತನು ಸೇಡಂದಲ್ಲಿ ಉಪಚಾರ ಪಡೆಯುತ್ತಿದ್ದ, ನಾಗಭೂಷರೆಡ್ಡಿ, ಲಾಲಅಹ್ಮದ ಇವರು ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಹೋಗಿರುತ್ತಾರೆ. ಕಾರಣ ಅಪಘಾತ ಮಾಡಿ ಓಡಿ ಹೋದಕಾರ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನರೋಣಾ ಠಾಣೆ : ದಿನಾಂಕ:28/12/2018 ರಂದು ಮಧ್ಯಾಹ್ನ ಶ್ರೀ ಮಹ್ಮದ ಅಬುದ್ದಲ ಲಾಯಕ ತಂದೆ ಮಹ್ಮದ ಅಬ್ದುಲ ವಹೀದ ಸಾ : ಖಾಜಾ ಅಬದ್ದುಲ ಫಯಾಜ ದರ್ಗಾ ಕಾಲೂನಿ ಬೀದರ  ರವರು ಮತ್ತು ನನ್ನ ತಂದೆ ಮಹ್ಮದ್ ಅಬ್ದುಲ್ ವಹೀದ್ ಇವರು ಮನೆಯಲ್ಲಿದ್ದಾಗ ನಮ್ಮ ತಮ್ಮನ ಸ್ನೇಹಿತನಾದ ಯೋಗೇಶ ತಂದೆ ವಾಮನರಾವ ಚಿಮ್ಮಾಜಿ ಸಾ:ಮುಧೋಳ(ಕೆ) ಇವರು ಕಾರ್ ನಂ ಎಂ.ಹೆಚ್42-ಎ.ಹೆಚ್1267 ನೇದ್ದನ್ನು ತಗೆದುಕೊಂಡು ಬಂದು ತನ್ನ ವೈಯಕ್ತಿಕ ಕೆಲಸಕ್ಕಾಗಿ ಗುಲಬರ್ಗಾಕ್ಕೆ  ಹೋಗಿ ಅಲ್ಲಿಯಿಂದ ಅದೇ ಕಾರಿನಲ್ಲಿ ಪುನಾಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದು ನಂತರ ರಾತ್ರಿ 8-30 ಗಂಟೆ ಸುಮಾರಿಗೆ ನನ್ನ ಸ್ನೇಹಿತನಾದ ಶೇಖ ಶಫಿ ತಂದೆ ಖಾಜಾ ಮಿಯಾ ಇವರು ಫೋನಮಾಡಿ ನನ್ನ ತಮ್ಮ ಮಹ್ಮದ್ ಅಬ್ದುಲ್ ಸೈಯದ್ ಈತನು ಈ ಮೇಲೆ ಹೇಳಿದ ಕಾರಿನಲ್ಲಿ ತನ್ನ ಸ್ನೇಹಿತನಾದ ಯೋಗೇಶನೊಂದಿಗೆ ಪುನಾಕ್ಕೆ ಹೋಗುವ ಕುರಿತು ಕಲಬುಗಿಯಿಂದ ಆಳಂದ ಮಾರ್ಗವಾಗಿ ಹೊರಟಿರುವಾಗ ಸಂಜೆ 7-30 ಗಂಟೆ ಸುಮಾರಿಗೆ ಲಾಡಚಿಂಚೋಳಿ ಕ್ರಾಸ್ ದಾಟಿ ಲಾಡಚಿಂಚೋಳಿ ತಾಂಡಾ ಕ್ರಾಸ್ ಹತ್ತಿರ ಯಾವುದೋ ವಾಹನ ಚಾಲಕನು ಅತೀವೇಗ ಮತ್ತು ನಿರ್ಲಕ್ಷತನದಿಂದ ತನ್ನ ಅಧಿನದಲ್ಲಿದ್ದ ವಾಹನವನ್ನು ಚಲಾಯಿಸಿಕೊಂಡು ಬಂದು ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಕಾರು ಚಲಾಯಿಸುತ್ತಿದ್ದ ನನ್ನ ತಮ್ಮ ಮಹ್ಮದ ಅಬ್ದುಲ್ ಸೈಯದ್ ಈತನಿಗೆ ಭಾರಿಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಮತ್ತು ಕಾರಿನಲ್ಲಿ ಕುಳಿತ್ತಿದ್ದ ಯೋಗೇಶನಿಗೆ ಭಾರಿಗಾಯವಾಗಿ ಅಸ್ವಸ್ಥನಾಗಿದ್ದು ನನ್ನ ತಮ್ಮನ ಶವ ಕಲಬುರಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ  ಅಂಬ್ಯೂಲೇನ್ಸಲ್ಲಿ ಕಳುಹಿಸಿ ಕೊಡುತ್ತಿರುವ ಬಗ್ಗೆ ಫೋನಮಾಡಿ ತಿಳಿಸಿದ ಮೇರೆ ನಾನು ಮತ್ತು ನಮ್ಮ ತಂದೆ ಹಾಗೂ ನಮ್ಮ ಸ್ನೇಹತರು ಕೂಡಿಕೊಂಡು ಕಲಬುರಗಿಗೆ ಬಂದು ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ನನ್ನ ತಮ್ಮನ ಶವವು ನೋಡಲಾಗಿ ಬಲಗಣ್ಣಿನ ಮೇಲ್ಭಾಗಕ್ಕೆ, ಬಲಗೈ ಮಣಿಕಟ್ಟಿನ ಹತ್ತಿರ ಎಡಗಾಲು ತೊಡೆಗೆ ಭಾರಿಗಾಯ ಹೊಂದಿ ಮೃತಪಟ್ಟಿದನು. ಯೋಗೇಶನು ಉಪಚಾರ ಕುರಿತು ಯುನೈಟೇಡ್ ಆಸ್ಪತ್ರೆಯಲ್ಲಿ ಸೇರಿಕೆಯಾಗಿರುವ ಬಗ್ಗೆ ಗೊತ್ತಾಗಿರುತ್ತದೆ. ನಂತರ ಅದೇ ರಾತ್ರಿ ನಾನು ಮತ್ತು ನನ್ನ ತಂದೆ ಹಾಗೂ ಸ್ನೇಹಿತರು ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ಲಾಡಚಿಂಚೋಳಿ ತಾಂಡಾ ಕ್ರಾಸ್ ಹತ್ತಿರ ಈ ಮೇಲೆ ಹೇಳಿದ ಕಾರಿನ ಮುಂಭಾಗ ಪೂರ್ತಿ  ಜಖಂಗೊಂಡ ಸ್ಥಿತಿಯಲ್ಲಿ ಇರುವುದನ್ನು ನೋಡಿದೇವು ಅಪಘಾತ ಪಡಿಸಿದ ವಾಹನದ ಬಗ್ಗೆ ಸದ್ಯ ತಿಳಿದು ಬಂದಿರುವುದಿಲ್ಲ ಮತ್ತು ಅದರ ಚಾಲಕನ ಬಗ್ಗೆ ಕೂಡ ಗೊತ್ತಾಗಿರುವುದಿಲ್ಲ. ದಿನಾಂಕ:28/12/2018 ರಂದು ಸಂಜೆ 7-30 ಗಂಟೆ ಸುಮಾರಿಗೆ ನನ್ನ ತಮ್ಮನಾದ ಮಹ್ಮದ್ ಅಬ್ದುಲ್ ಸೈಯದ್ ಈತನು ಕಾರ್ ನಂ: ಎಂ.ಹೆಚ್42-ಎ.ಹೆಚ್1267 ನೇದ್ದರಲ್ಲಿ ತನ್ನ ಸ್ನೇಹಿತನಾದ ಯೋಗೇಶನನ್ನು ಕೂಡಿಸಿಕೊಂಡು ತಾನು ಕಾರ್ ಚಲಾಯಿಸುತ್ತಾ ಕಲಬುರಗಿಯಿಂದ ಆಳಂದ ಮಾರ್ಗವಾಗಿ ಪುನಾಕ್ಕೆ ಹೊರಟಾಗ ಲಾಡಚಿಂಚೋಳಿ ತಾಂಡಾ ಕ್ರಾಸ್ ಹತ್ತಿರ ಯಾವುದೋ ವಾಹನ ಚಾಲಕನು ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕಾರಿಗೆ ಡಿಕ್ಕಿಪಡಿಸಿ ವಾಹನ ಸಮೇತವಾಗಿ ಓಡಿಹೋಗಿರುತ್ತಾನೆ ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 30/12/18  ರಂದು ರಾಷ್ಟ್ರಿಯ ಹೇದ್ದಾರಿ 218ರ ನದಿ ಸಿನ್ನೂರ ಕ್ರಾಸ ಹತ್ತಿರ ಕೆ.ಎಸ್.ಆರ್.ಟಿ.ಸಿ ನಂ ಕೆಎ-32 ಎಫ್-2362 ನೇದ್ದರ ಚಾಲಕ  ತಾನು ಚಲಾಯಿಸುವ  ಬಸನ್ನು ಅತೀ ವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ ಕೊಂಡು ಬಂದು ಶ್ರೀ ಮಹಾದೇವ ತಂದೆ ಸೈಬಣ್ಣ ತಳವಾರ ಸಾಃ ರಾಗಲಪವರ್ವಿ  ತಾಃ ಸಿಂದನೂರ ಜಿಃ ರಾಯಚೂರ ರವರ  ಮಗನಾದ ಕು. ನಾಗರಾಜ ಈತನಿಗೆ ಡಿಕ್ಕಿಪಡಿಸಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 30/12/18 ರಂದು ರಾಷ್ಟ್ರೀ ಹೇದ್ದಾರಿ 218ರ ನದಿ ಸಿನ್ನೂರ ಕ್ರಾಸ ಹತ್ತಿರ ಕೆ.ಎಸ್.ಆರ್.ಟಿ.ಸಿ ನಂ ಕೆಎ-33 ಎಫ್-0271ನೇದ್ದರ ಚಾಲಕ   ಬಸನ್ನು ಅತೀ ವೇಗ ಮತ್ತು ಅಲಕ್ಷ್ಯತ ನದಿಂದ ಚಲಾಯಿಸಿಕೊಂಡು ಬಂದು ರೋಡಿನ ಪಕ್ಕದಲ್ಲಿ ನಿಂತಿದ್ದ ಬಸ ನಂ ಕೆಎ-32 ಎಫ್-2362 ನೇದ್ದಕ್ಕೆ ಡಿಕ್ಕಿಪಡಿ ಸಿದ್ದರಿಂದ ಶ್ರೀ ಮಲ್ಲಿಕಾರ್ಜುನ ತಂದೆ ಸಿದ್ದಪ್ಪ ಲತಿಗಾರ ಸಾಃ ನಾರಾಯಣಪುರ ತಾಃ ಸುರಪೂರ   ಹಾಗೂ ಇತರೆ ಸಹ ಪ್ರಯಾಣಿಕರಿಗೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಫರತಾಬಾದ ಠಾಣೆ : ದಿನಾಂಕ 29/12/18 ರಂದು ಸಪ್ಪಣ್ಣ ತಂದೆ ಮರೆಪ್ಪ ಸಂಗಡ ಇತರರು ಸಾಃ ಎಲ್ಲರೂ ಹೇರೂರು(ಬಿ) ರವರು  ಕೂಡಿಕೊಂಡು ಬಂದು ಶ್ರೀ ಮರೆಪ್ಪ ತಂದೆ ದೌಲಪ್ಪ ಆರಮನ್  ಸಾಃ ಹೇರೂರ(ಬಿ) ತಾ.ಜಿಃ ಕಲಬುರಗಿ  ಮತ್ತು  ಇತರರಿಗೆ ಅವಾಚ್ಯ ಶಬ್ದಗಳಿಂದ ಬೈದು,  ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 29/12/18 ರಂದು  ಮರೆಪ್ಪ ತಂದೆ ದೌಲಪ್ಪ ಆರಮನ್  ಸಾಃ ಹೇರೂರ(ಬಿ) ತಾ.ಜಿಃ ಕಲಬುರಗಿ ಹಾಗು ಇತರರು  ಕೂಡಿಕೊಂಡು ಬಂದು ಶ್ರೀ ಸಪ್ಪಣ್ಣ ತಂದೆ ಮರೆಪ್ಪ ಮಂದರವಾಡ ಸಾಃ ಹೇರೂರ(ಬಿ) ತಾ.ಜಿಃ ಕಲಬುರಗಿ ಮತ್ತು  ಇತರರಿಗೆ ಅವಾಚ್ಯ ಶಬ್ದಗಳಿಂದ ಬೈದು,  ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಯಡ್ರಾಮಿ ಠಾಣೆ : ದಿನಾಂಕ 29-12-2018 ರಂದು ಮದ್ಯಾಹ್ನ 2;00 ಗಂಟೆಯಿಂದ 3;00 ಗಂಟೆಯ ಮದ್ಯದಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲ ಮುರಿದು, ಒಳಗೆ ಪ್ರವೇಶ ಮಾಡಿ ಕಬ್ಬಿಣದ ಪೆಟ್ಟಿಗಿಯ ಕೊಂಡಿಯನ್ನು ಮುರಿದು ಅದರಲ್ಲಿದ್ದ ಒಟ್ಟು 22,000/- ರೂ ಕಿಮ್ಮತ್ತಿನ ಬಂಗಾರದ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಅಂತಾ ಶ್ರೀ ರಾಮಣ್ಣ ತಂದೆ ಲಚ್ಚಪ್ಪ ಬಡಿಗೇರ ಸಾ|| ಐನಾಪೂರ ತಾ|| ಜೇವರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.