ಅಪಘಾತ ಪ್ರಕರಣಗಳು :
ಕಮಲಾಪೂರ ಠಾಣೆ : ದಿಲೀಪ್ ತಂದೆ ಸುಭಾಶ ಸಾ; ಭೀಮ ನಗರ ತ್ರಿಪಾಂತ ತಾ:ಬಸವಕಲ್ಯಾಣ ಜಿ: ಬೀದರ 08-10-2011 ರಂದು ಗುಲಬರ್ಗಾಕ್ಕೆ ಬಾಡಿಗೆ ಕುರಿತು ತನ್ನ ವಾಹನ ನಂಬರ್: ಕೆಎ-56-402 ನೇದ್ದನ್ನು ತೆಗೆದುಕೊಂಡು ಬಂದಿದ್ದು, ನಂತರ ಸಾಮಾನುಗಳನ್ನು ಖಾಲಿ ಮಾಡಿ ಮರಳಿ ತಮ್ಮ ಊರಿಗೆ ಹೋಗುವ ಕುರಿತು ಗುಲಬರ್ಗಾದಿಂದ ಹುಮನಾಬಾದ ಕಡೆಗೆ ಹೋಗುತ್ತಿದ್ದಾಗ ಕಮಲಾಪೂರ ದಾಟಿ ಅಂದಾಜು ಮಧ್ಯಾಹ್ನ 02-00 ಗಂಟೆ ಸುಮಾರಿಗೆ ಕಮಲಾಪೂರ ದಾಟಿ ಚಿಂದಿ ಬಸವಣ್ಣನ ಗುಡಿಯ ಹತ್ತಿರ ಹೋಗುತ್ತಿದ್ದಾಗ ನಮ್ಮ ಎದುರುಗಡೆಯಿಂದ ಒಬ್ಬ ಕಾರ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ತನ್ನ ಕಾರನ್ನು ಚಲಾಯಿಸಿಕೊಂಡು ಬಂದು ನನ್ನ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದು, ಆದ್ದರಿಂದ ನನ್ನ ಗೂಡ್ಸ ವಾಹನ ರೋಡಿನ ಎಡಗಡೆ ಪಲ್ಟಿಯಾಗಿ ಬಿದ್ದು ಜಖಂಗೊಂಡಿತ್ತು.ನನಗೆ ತೆಲೆಗೆ , ಎಡಗೈ ಹಸ್ತಕ್ಕೆ , ಬಲಗೈ ಬೆರಳುಗಳಿಗೆ ರಕ್ತಗಾಯವಾಗಿದ್ದವು. ಬೆನ್ನಿಗೆ ಮತ್ತು ಎದೆಗೆ ಗುಪ್ತಗಾಯಗಳಾಗಿದ್ದವು. ಕಾರ ರೋಡಿನ ಎಡಗಡೆ ತಗ್ಗಿನಲ್ಲಿ ಪಲ್ಟಿಯಾಗಿ ಬಿದ್ದಿದ್ದು, ಅದರಲ್ಲಿ ಕುಳಿತ ಮೂರು ಜನ ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮನುಷ್ಯ ಮತ್ತು ಕಾರ ಚಾಲಕನನ್ನು ಕಾರಿನಿಂದ ಹೊರಗೆ ತೆಗೆದು ನೋಡಲಾಗಿ 1,ಸಾಧನಾ ಗಂಡ ನಾಗನಾಥ ಪಾಟೀಲ್ ಇವಳಿಗೆ ಮುಖಕ್ಕೆ ಮತ್ತು ತೆಲೆಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಳು. 2. ರಂಗಮ್ಮ @ ಸರಸ್ವತಿ ಇವಳಿಗೆ ಬಲಗಲ್ಲಕ್ಕೆ ಭಾರಿ ರಕ್ತಗಾಯ, ಕುತ್ತಿಗೆಗೆ ಭಾರಿ ರಕ್ತಗಾಯ ಆಗಿತ್ತು 3. ಸರಸ್ವತಿ ಗಂಡ ಅಣವೀರ ಶೇಟಗಾರ ಇವಳಿಗೆ ಹಣೆಗೆ ರಕ್ತಗಾಯ ಮತ್ತು ಎಡ ತೆಲೆಗೆ ಗುಪ್ತಗಾಯಗಳಾಗಿದ್ದವು. 4. ನಾಗನಾಥ ತಂದೆ ಸುಭಾಶ ಪಾಟೀಲ್ ಈತನಿಗೆ ಗದ್ದಕ್ಕೆ ಭಾರಿ ರಕ್ತಗಾಯವಾಗಿದ್ದು,ಮುಖಕ್ಕೆ ರಕ್ತಗಾಯ ಮತ್ತು ಬಲಗೈ ಮತ್ತು ಎಡಗಾಲಿಗೆ ಗುಪ್ತಗಾಯಗಳಾಗಿದ್ದವು. ಕಾರ ಚಾಲಕ 5. ಸುಭಾಶ ತಂದೆ ಧೂಳಪ್ಪ ಪಾಟೀಲ್ ಈತನಿಗೆ ತೆಲೆಗೆ, ಗದ್ದಕ್ಕೆ , ಮುಖಕ್ಕೆ ರಕ್ತಗಾಯಗಳಾಗಿದ್ದವು. ಕಾರ ನಂಬರ್ ನೋಡಲಾಗಿ ಕೆಎ-56-ಎಂ-60 ನೇದ್ದು ಇದ್ದು, ಸಂಪೂರ್ಣ ಜಖಂಗೊಂಡಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ :ಶ್ರೀ ಸಾಯಿಬಣ್ಣ ತಂದೆ ತಿಪ್ಪಣ ಸಾ: ಗಂವ್ಹಾರ ರವರು ದಿನಾಂಕ 07-10-2011 ರಂದು ತನ್ನ ಗೆಳೆಯ ಖದೀರ ತಂದೆ ಫಕ್ರೋದ್ದಿನ ಇಬ್ಬರೂ ತಮ್ಮ ಮೊಟಾರ ಸೈಕಲ ನಂಬರ ಕೆ.ಎ. 32 ವ್ಹಾಯಿ 4462 ನೇದ್ದರ ಮೇಲೆ ಕುಳಿತುಕೊಂಡು ಗಂವ್ಹಾರ - ಗಂವ್ಹಾರ ಕ್ರಾಸ ರೋಡಿನ ರಾಜ ಪಟೇಲ ಇವರ ಹೊಲದ ಹತ್ತಿರ ರೋಡಿನಲ್ಲಿ ಹೋಗುತ್ತಿದ್ದಾಗ ಅದೆ ವೇಳೆಗೆ ಗಂವ್ಹಾರ ಕ್ರಾಸ ಕಡೆಯಿಂದ ಒಬ್ಬ ಟಂ ಟಂ ವಾಹನ ನಂಬರ ಕೆ.ಎ. 33 - 8709 ನೇದ್ದರ ಚಾಲಕನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಎದರುಗಡೆಯಿಂದ ಪಿರ್ಯಾದಿ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಗಾಯಗೊಳಿಸಿ ಓಡಿ ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲಿಗೆ ಪ್ರಕರಣಗಳು :
ಬ್ರಹ್ಮಪೂರ ಠಾಣೆ :ದಿನಾಂಕ 08-10-2011 ರಂದು ಶ್ರೀ.ಗಣಪತರಾವ ತಂದೆ ಫಿರಾಜಿರಾವ ಮೋರೆ, ಸಾ|| ಮನೆ ನಂ:10-838 ಲಾಲಗೇರಿ ಕ್ರಾಸ ದೇಶಮುಖ ಮನೆಯ ಹತ್ತಿರ ಬ್ರಹ್ಮಪೂರ ಗುಲಬರ್ಗಾ ಇವರು ತಮ್ಮ ಹೆಂಡತಿಗೆ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಟವೇರಾ ವಾಹನ ನಂ: ಕೆಎ 09 ಎನ್ 5895 ನೇದ್ದರಲ್ಲಿ ಕರೆದುಕೊಂಡು ಆಸ್ಪತ್ರೆಯಲ್ಲಿ ಹೆಂಡತಿ ಮತ್ತು ಮಗನಿಗೆ ಬಿಟ್ಟು ನಾನು ಆಸ್ಪತ್ರೆಯಿಂದ ಹೊರಗಡೆ ಬಂದು ರೋಡಿನ ಬದಿಗೆ ಕಾಯುತ್ತಾ ನಿಂತಾಗ ಒಬ್ಬ ಅಪರಿಚಿತ ಮನುಷ್ಯ ಅಂದಾಜು ವಯಸ್ಸು 36 ಈತನು ತನ್ನ ಎಡಗಣ್ಣಿನ ಮೇಲಗಡೆ ಬ್ಯಾಂಡೇಜ ಕಟ್ಟಕೊಂಡು ಬಂದು ನನಗೆ ಆಸ್ಪತ್ರೆಗೆ ತೋರಿಸಲು ಹಣ ಕೊಡಲು ಕೇಳಿದಾಗ ನಾನು ಸರಕಾರಿ ಆಸ್ಪತ್ರೆಗೆ ಹೋಗು ಅಂತಾ ಹೇಳಿದಾಗ ಅವನು ನನ್ನ ಬಲಗಡೆ ಕೈ ಬೆರಳಿನಲ್ಲಿ ಇರುವ ಉಂಗುರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿ ನನ್ನ ಕೈಗೆ ರಕ್ತಗಾಯ ಮಾಡಿ ನಾನು ಕೊಡದೆ ಇದ್ದಾಗ ಕೊರಳಲ್ಲಿ ಇದ್ದ 15 ಗ್ರಾಂ ಅ||ಕಿ| 40,000/- ರೂಪಾಯಿ ಕಿಮ್ಮತ್ತಿನ ಬಂಗಾರದ ಚೈನ ಕಿತ್ತುಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಟೇಷನ ಬಜಾರ ಠಾಣೆ :ಶ್ರೀ ರಾಜು ತಂದೆ ರಾಮಚಂದ್ರಪ್ಪ ವಾಡೇಡಕರ್ ಸಾ: ಬುದ್ದನಗರ ಗುಲಬರ್ಗಾ ಇವರು ದಿನಾಂಕ 02-10-2011 ರಂದು ರಾತ್ರಿ 09-30 ಪಿ.ಎಮ್. ಸುಮಾರಿಗೆ ಎನ್.ಜಿ.ಓ ಕಾಲೋನಿ ದೇವಿ ಕಾರ್ಯಕ್ರಮದಲ್ಲಿ ಗೆಸ್ಟಾಗಿ ಹೋಗಿದ್ದಾಗ ಹಮೀದ ಎನ್ನುವವರು ಪೋನ್ ಮಾಡಿ ಬಾಲರಾಜ ಎಂಬುವವನು ಮುನ್ಸಿಪಾಲ್ಟಿ ರೋಡ ಅಗೇದ ಜಾಗದಲ್ಲಿ ಮೋಟರ್ ಸೈಕಲ್ ಮೆಲೆ ಬಂದು ಬಿದ್ದು ನಿಶೆಯಲ್ಲಿದ್ದರು ಅವಾಚ್ಯವಾಗಿ ಬೈದಾಡುತ್ತಿದ್ದಾನೆ ಬರಬೇಕು ಅಂತಾ ತಿಳಿಸಿದ ಮೇರೆಗೆ ಹೋಗಿ ನೋಡಲಾಗಿ ಬಾಲರಾಜನು ಕುಡಿದ ನಶೆಯಲ್ಲಿದ್ದು ನನ್ನನ್ನು ನೋಡಿ ಅವಾಚ್ಯ ಬೈದಾಡುತ್ತಿದ್ದಾಗ ಮನೆಗೆ ಹೋಗು ಅಂತಾ ಹೇಳಿದಕ್ಕೆ ನನಗೆ ಹೊಡೆದು ಅವರ ಕೊರಳಲ್ಲಿದ್ದ ಒಂದು ತೊಲೆ ಬಂಗಾರದ ಲಾಕೇಟ್ (ಸರ) ಹರಿದುಕೊಂಡು ಓಡಿ ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚನೆ ಪ್ರಕರಣ :
ಬ್ರಹ್ಮಪೂರ ಠಾಣೆ :ದಿನಾಂಕ: 08-10-2011 ರಂದು ಬ್ರ್ಯಾಂಚ ಮ್ಯಾನೇಜರ ಕೃಷ್ಣಾ ಗ್ರಾಮೀಣ ಬ್ಯಾಂಕ ಎನ್.ವ್ಹಿ ಲೇಔಟ ಗುಲಬರ್ಗಾ ಇವರು ಬಲಭೀಮ ಆರ್ ರಾಂಪುರೆ ಇವರು ಕೆ.ಜಿ.ಬಿ ಶಾಖೆ ಎನ್.ವ್ಹಿ ಲೇಔಟ ಗುಲಬರ್ಗಾದಲ್ಲಿ ಫೀಲ್ಡ ಆಫೀಸರ ಅಂತಾ ಕೆಲಸ ಮಾಡುತ್ತಿದ್ದು, ತಮ್ಮ ಅಧಿಕಾರ ಅವಧಿಯಾದ ಮೇ-2009 ರಿಂದ ಜುಲೈ -2010 ವರೆಗೆ ಕರ್ನಾಟಕ ಸರಕಾರದ ವಿವಿಧ ಇಲಾಖೆಗಳಿಂದ ಫಲಾನುಭವಿಗಳಿಗೆ ಮಂಜೂರಾದ ಸಹಾಯ ಧನ ಮತ್ತು ಸಬಸಿಡಿ ಹಣವನ್ನು ಫಲಾನುಭವಿಗಳಿಗೆ ವಿತರಿಸದೆ ಇತರ 16 ಜನರ ಜೊತೆ ಸೇರಿಕೊಂಡು ನಮ್ಮ ಬ್ಯಾಂಕಿಗೆ ಮತ್ತು ಸರಕಾರಕ್ಕೆ ಒಟ್ಟು ಮೊತ್ತ ರೂ.36,87,500/- ವಂಚನೆ ಮಾಡಿರುತ್ತಾನೆ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲೆ ಬ್ರಹ್ಮಫೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಸ್ಟೇಷನ ಬಜಾರ ಠಾಣೆ :ಶ್ರೀ ಹೆಚ್.ಬಿ ಬಂಟನೂರು ರೇಷ್ಮೇ ಜಂಟಿ ನಿರ್ದೇಶಕರು ಗುಲಬರ್ಗಾ ಇವರು ದಿನಾಂಕ 05-10-2011 ರಂದು ಸಾರ್ವಜನಿಕ ರಜೆ ಇದ್ದುದರಿಂದ ಕಛೇರಿಯ ಭಿಗ ಹಾಕಿಕೊಂಡು ಹೋಗಿದ್ದು ದಿನಾಂಕ 07-10-2011 ರಂದು ಬೆಳಿಗ್ಗೆ 10.00 ಗಂಟೆಗೆ ಕಛೇರಿಗೆ ಬಂದು ನೋಡಲಾಗಿ ಕಛೇರಿಯ ಬೀಗ ಮುರಿದಿದ್ದು ಕಛೇರಿಯಲ್ಲಿದ್ದ ಯು.ಪಿ.ಎಸ್. ಕಂಪ್ಯೂಟರ್ ಯು.ಪಿ.ಎಸ್. ಹಾಗೂ ಗೋದ್ರೇಜ ಕೀಲಿಗಳನ್ನು ಒಟ್ಟು 8133/-ರೂಪಾಯಿ ಸಾಮಾನುಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ :ಶ್ರೀ ಅಂಬಾರಾಯ ಕಟ್ಟಿಮನಿ ಸಾ:ಮ್ಯಾಗೇರಿ ಸೂರಪೂರ ಇವರ ಮಾಲಿಕರ ಲಾರಿ ನಂಬರ ಕೆ.ಎ. 33 6423 ನೇದ್ದನ್ನು ಅದರ ಚಾಲಕ ಮಾಹಂತೇಶ ಇತನು ದಿನಾಂಕ 06-10-2011 ರಂದು ಗುಲಬರ್ಗಾದಿಂದ ಡೀಜಲ್ ಲೋಡ ಮಾಡಿಕೊಂಡು ಜೇವರ್ಗಿ ಪಟ್ಟಣದ ಗೋಗಿ ಪೆಟ್ರೋಲ್ ಪಂಪದಲ್ಲಿ ಡೀಜಲ್ ಖಾಲಿ ಮಾಡಿ ಲಾರಿಯನ್ನು ಗೋಗಿ ಪೆಟ್ರೋಲ ಪಂಪದ ಮುಂದೆ ನಿಲ್ಲಿಸಿ ಹಬ್ಬಕ್ಕೆ ಊರಿಗೆ ಹೋಗಿದ್ದು ದಿನಾಂಕ 08-10-2011 ರಂದು ಲಾರಿ ಹತ್ತಿರ ಬಂದು ನೊಡಲಾಗಿ ಲಾರಿ ಇರಲಿಲ್ಲಾ, ದಿನಾಂಕ 07-10-2011 ರ ರಾತ್ರಿ ವೇಳೆಗೆಯುಲ್ಲಿ ಯಾರೋ ಕಳ್ಳರು ಸದರಿ ಲಾರಿಯನ್ನು ಕಳವು ಮಾಡಿಕೊಂಡು ಕೊಳಕೂರ ಕ್ರಾಸ ಹತ್ತಿರ ಲಾರಿ ನಿಲ್ಲಿಸಿ ಅದಕ್ಕೆ ಅಳವಡಿಸಿದ 6 ಟೈರಗಳು 6 ಡಿಸ್ಕ ಸಮೇತ ಹಾಗೂ ಲಾರಿಯಲ್ಲಿರುವ ಒಂದು ಬ್ಯಾಟರಿ ಕಳವು ಮಾಡಿಕೊಂಡು ಹೋಗಿ ಲಾರಿ ಅಲ್ಲೆ ಸ್ಥಳದಲ್ಲಿ ಬಿಟ್ಟು ಹೋಗಿರುತ್ತಾರೆ. ಅಂತಾ ಸಲ್ಲಿಸಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.