ಕಳವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಮುತ್ತಪ್ಪ ತಂದೆ
ನಿಂಗಪ್ಪ ದಿಡ್ಡಿಮನಿ ಸಾ||
ಯಡ್ರಾಮಿ ತಾ|| ಯಡ್ರಾಮಿ ರವರದು ಎರಡು ಮನೆಗಳಿರುತ್ತವೆ
ಅವು ಅಕ್ಕ ಪಕ್ಕ ಇದ್ದು ಹಳೆ ನಮ್ಮ ಮನೆಯ ಟ್ರಂಕಿನಲ್ಲಿ ನಾವು 1] 10 ಗ್ರಾಮಿನ
ಒಂದು ಬಂಗಾರದ ಬೋರಮಾಳ 2] 5 ಗ್ರಾಮಿನ 3 ಬಂಗಾರದ
ಬೋರಮಾಳ 3] 5 ಗ್ರಾಮಿನ
ಒಂದು ಬಂಗಾರದ ಜೀರಾಮನಿ 4] 5 ಗ್ರಾಮಿನ ಒಂದು ಜೊತೆ ಬಂಗಾರದ ಜುಮಕಿ
& ಬೆಂಡೋಲಿ 5] 5 ಗ್ರಾಮಿನ 3 ಸಣ್ಣು ಮಕ್ಕಳ ಬಂಗಾರದ ಉಂಗುರ ಹಾಗೂ 6] ನಗದು ಹಣ
40,000/- ರೂ ಬಂಗಾರ ಸಾಮಾನುಗಳನ್ನು ಹಳೆಯ ಮನೆಯ ಒಳಗಿನ ಕೋಣೆಯಲ್ಲಿಟ್ಟು ಟ್ರಂಕಿಗೆ
ಕೀಲಿ ಹಾಕಿ ಹೊರಗಿನ ಕೋಣೆಯಲ್ಲಿ ನಿನ್ನೆ ದಿನಾಂಕ: 24-09-2019 ರಂದು ರಾತ್ರಿ
10-00 ಗಂಟೆಯ ನಮ್ಮ ತಾಯಿ ಶಾಂತಬಾಯಿ ಮತ್ತು ನಮ್ಮ ಅಕ್ಕ ಇವರು ಮನೆಗೆ ಕೀಲಿ ಹಾಕದೇ
ಮಲಗಿಕೊಂಡಿದರು, ಹೊಸ ಮನೆಯಲ್ಲಿ ನಾನು ನಮ್ಮ ತಮ್ಮಂದಿರರಾದ ಬಸವರಾಜ ಮತ್ತು
ಮಡಿವಾಳಪ್ಪ ರವರು ಕೂಡಿಕೊಂಡು ಮಲಗಿದೇವು, ದಿನಾಂಕ:
25-09-2019 ರಂದು 5-00 ಗಂಟೆಯ ಸುಮಾರಿಗೆ ನಮ್ಮ ತಾಯಿ
ಶಾಂತಬಾಯಿ ಇವರು ಒಮ್ಮೇಲೆ ಚಿರಾಡುತ್ತಾ ಅಳುತ್ತಿದ್ದರು ನಾವು ಗಾಬರಿಗೊಂಡು ಹಳೆಯ ಮನೆಯ ಒಳಗಿನ ಕೋಣೆಗೆ
ನಾನು ತಮ್ಮಂದಿರರಾದ ಬಸವರಾಜ ಮತ್ತು ಮಡಿವಾಳಪ್ಪ ನಮ್ಮ ಅಕ್ಕ ಲಕ್ಕಮ್ಮ ಎಲ್ಲರೂ ಕೂಡಿ ಒಳಗಡೆ ಹೋಗಿ
ನೋಡಲಾಗಿ ಟ್ರಂಕಿನಲ್ಲಿದ ಒಟ್ಟು 1,68,000/- ರೂ ಮೌಲ್ಯ ಬಂಗಾರ ಸಾಮಾನುಗಳು
ಮತ್ತು ನಗದು ಹಣ ನಿನ್ನೆ ದಿನಾಂಕ 24-09-2019 ರಂದು 10-00 ಗಂಟೆಯಿಂದ ದಿನಾಂಕ: 25-09-2019 ರಂದು ಬೆಳಗೆ 5-00
ಎ.ಎಂ ಮದ್ಯದಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಒಳಗಡೆ ಹೋಗಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ,
ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.