ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 18-05-2021
ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 16/2021, ಕಲಂ. 498(ಎ), 323, 504, 506 ಜೊತೆ 149 ಐಪಿಸಿ :-
ಫಿರ್ಯಾದಿ ಡಾ|| ಸೀಮಾ ಸೋಫಿಯಾ ಗಂಡ ಡಾ|| ಸೊಹೆಲ್ ಅಹ್ಮದ @ ಉಮಾಕಾಂತ ವಯ: 27 ವರ್ಷ, ಜಾತಿ: ಮುಸ್ಲಿಂ, ಸಾ: ಮೊರಖಂಡಿ ಗ್ರಾಮ, ತಾ: ಬಸವಕಲ್ಯಾಣ, ಸದ್ಯ: ಅಗ್ರಿಕಲ್ಚರ್ ಕಾಲೋನಿ ಗುಂಪಾ ಹತ್ತಿರ ಬೀದರ ರವರು ಮತ್ತು ಉಮಾಕಾಂತ @ ಸೊಹೆಲ್ ಅಹ್ಮದ ಇಬ್ಬರು ಪರಸ್ಪರ ಪ್ರೀತಿ ಮಾಡಿ 6 ವರ್ಷಗಳ ಹಿಂದೆ ಮುಸ್ಲಿಂ ಧರ್ಮದ ಪ್ರಕಾರ ಮದುವೆ ಮಾಡಿಕೊಂಡಿದ್ದು, ಮದುವೆಯಾದ ನಂತರ ಇಬ್ಬರು ಶಿವಾಜಿ ನಗರದಲ್ಲಿ ಬಾಡಿಗೆಯಿಂದ ಮನೆ ಮಾಡಿ ವಾಸವಾಗಿದ್ದು, ಗಂಡ ಫಿರ್ಯಾದಿಯ ಜೊತೆಯಲ್ಲಿ 5-6 ತಿಂಗಳು ಮಾತ್ರ ಚೆನ್ನಾಗಿದ್ದು ನಂತರದ ದಿನಗಳಲ್ಲಿ ಗಂಡ ಫಿರ್ಯಾದಿಯ ಜೊತೆಯಲ್ಲಿ ಸಣ್ಣ ಪುಟ್ಟ ವಿಷಯಕ್ಕಾಗಿ ಜಗಳ ಮಾಡುತ್ತಾ ಬಂದು ಅವಾಚ್ಯವಾಗಿ ಬೈಯುತ್ತ ನಿನ್ನ ಜೊತೆಯಲ್ಲಿ ನಾನು ಮದುವೆ ಮಾಡಿಕೊಳ್ಳಬಾರದಿತ್ತು, ಸುಮ್ಮನೆ ಮದುವೆ ಮಾಡಿಕೊಂಡಿರುತ್ತೇನೆ ಅಂತ ಮನಸ್ಸಿಗೆ ನೋವಾಗುವ ಹಾಗೆ ಮಾತನಾಡುತ್ತಾ ಕೈಯಿಂದ ಹೊಡೆ ಬಡೆ ಮಾಡುತ್ತಾ ಮಾನಸಿಕ ಹಾಗು ದೈಹಿಕ ಕಿರುಕುಳ ಕೊಡುತ್ತಾ ಬಂದಿರುತ್ತಾನೆ ಮತ್ತು ಭಾವನಾದ ಆತ್ಮಾರಾಮ, ಮಾವನಾದ ರಾವಣರಾವ, ನೆಗೆಣಿಯಾದ ಸೋನಾಲಿ, ಅತ್ತೆಯಾದ ಕೋಮಲಬಾಯಿ, ನಾದಣಿಯಾದ ಸುನೀತಾ ರವರು ರವರೆಲ್ಲರೂ ಆವಾಗ ಆವಾಗ ಬಂದು ಉಮಾಕಾಂತನಿಗೆ ನೀನು ನಮ್ಮಿಂದ ದೂರ ಮಾಡಿ ಮದುವೆ ಮಾಡಿಕೊಂಡಿರುತ್ತಿ, ನೀನಗೆ ನಾವು ಉಮಾಕಾಂತನ ಹೆಂಡತಿ ಅಂತ ಒಪ್ಪುವುದಿಲ್ಲ, ನೀನಗೆ ಮನೆಗೆ ಕರೆಯುವುದಿಲ್ಲ, ನೀನು ಇಟ್ಟುಕೊಂಡವಳಿದ್ದಿ ಅಂತ ಫಿರ್ಯಾದಿಯ ಜೊತೆಯಲ್ಲಿ ಜಗಳ ಮಾಡುತ್ತಾ ಬಂದು, ಅಲ್ಲದೆ ವಿವಾಹ ವಿಚ್ಛೇದನೆ ಮಾಡಿಸಿ ಉಮಾಕಾಂತನಿಗೆ ಇನ್ನೊಂದು ಮದುವೆ ಮಾಡುತ್ತೇವೆ ಅಂತ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿರುತ್ತಾರೆ, ಮಾವನಾದ ರಾವಣರಾವ ರವರು ನೀನು ನಮ್ಮ ಮನೆಗೆ ಬಂದರೆ ನೀನಗೆ ಜೀವಂತ ಇಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿರುತ್ತಾರೆ, ಹೀಗಿರುವಾಗ ದಿನಾಂಕ 26-01-2020 ರಂದು ಗಂಡ ಫಿರ್ಯಾದಿಯ ಜೊತೆಯಲ್ಲಿ ಜಗಳ ಮಾಡಿ ಅವಚ್ಯವಾಗಿ ಬೈದು ನಿನಗೆ ನಾನು ಮದುವೆ ಮಾಡಿಕೊಂಡು ತಪ್ಪು ಮಾಡಿರುತ್ತೇನೆ ಅಂತ ಕೈಯಿಂದ ಹೊಡೆ ಬಡೆ ಮಾಡಿ ಫಿರ್ಯಾದಿಯ ಬಲಗೈ ಬೆರಳು ತಿರುವಿ ಜಗಳ ಮಾಡಿ ಹೋಗಿರುತ್ತಾನೆ, ಇದರ ಬಗ್ಗೆ ಫಿರ್ಯಾದಿಯು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಇರುತ್ತದೆ, ನಂತರ ತನ್ನ ಗಂಡ ಮನೆಗೆ ಬರದೇ ಇರವುದರಿಂದ ಒಂದು ವರ್ಷದ ಹಿಂದೆ ಶಿವಾಜಿ ನಗರದ ಬಾಡಿಗೆ ಮನೆಯನ್ನು ಖಾಲಿ ಮಾಡಿ ಅಗ್ರಿಕಲ್ಚರ್ ಕಾಲೋನಿಯಲ್ಲಿ ಬಂದು ವಾಸವಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-05-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 88/2021, ಕಲಂ. 323, 324, 498(ಎ), 504 ಐಪಿಸಿ :-
ಫಿರ್ಯಾದಿ ಅನಿತಾ ಗಂಡ ತುಕಾರಾಮ ಪವಾರ ವಯ: 25 ವರ್ಷ, ಜಾತಿ: ಲಂಬಾಣಿ, ಸಾ: ಕಲ್ಲೂರ ತಾಂಡಾ, ಸದ್ಯ: ಕೆ.ಇ.ಬಿ ವಸತಿ ಗ್ರಹ ಹುಮನಾಬಾದ ರವರಿಗೆ 8 ವರ್ಷಗಳ ಹಿಂದೆ ಕಲ್ಲೂರ ತಾಂಡಾದ ಲಕ್ಷ್ಮಣ ಇವರ ಮಗನಾದ ತುಕಾರಾಮ ಇವನಿಗೆ ಕೊಟ್ಟು ಮದುವೆ ಮಾಡಿರುತ್ತಾರೆ, ಗಂಡ ಈ ಮೊದಲು ಬಸವಕಲ್ಯಾಣ ತಾಲ್ಲೂಕಿನ ಲಲಿತಾ ಇವಳ ಜೊತೆ ಮದುವೆಯಾಗಿದ್ದು, ಅವಳಿಗೆ ಮಕ್ಕಳಾಗದ ಕಾರಣ ಫಿರ್ಯಾದಿಯವರ ಜೊತೆ ಮದುವೆ ಮಾಡಿಕೊಂಡಿರುತ್ತಾರೆ, ಫಿರ್ಯಾದಿಗೆ 3 ಜನ ಮಕ್ಕಳಿರುತ್ತಾರೆ, ಗಂಡ ಸರಾಯಿ ಕುಡಿಯುವ ಚಟದವನಾಗಿದ್ದು, ಸರಾಯಿ ಕುಡಿದು ಮನೆಗೆ ಬಂದು ಫಿರ್ಯಾದಿಗೆ ನೀನು ಅವಾರಾ ಇದ್ದಿ, ಹೋಗು ನಿಮ್ಮ ಮನೆಗೆ ಅಂತಾ ಆಗಾಗ, ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಡುತ್ತಾ ಬಂದಿರುತ್ತಾನೆ, ಹೀಗಿರುವಲ್ಲಿ ದಿನಾಂಕ 12-05-2021 ರಂದು 2330 ಗಂಟೆಗೆ ಫಿರ್ಯಾದಿಯು ವಸತಿ ಗ್ರಹದಲ್ಲರುವಾಗ ಗಂಡ ಸರಾಯಿ ಕುಡಿದು ಬಂದು ಎ ಅವಾರಾ ಈ ಮಕ್ಕಳು ನನ್ನವಿಲ್ಲ ಹೋಗು ನಿನ್ನ ತವರು ಮನೆಗೆ ನಿನಗೆ ಡೈವರ್ಸ ಕೊಡುತ್ತೇನೆ ಅಂತಾ ಕೈಯಿಂದ ಕುತ್ತಿಗೆ ಒತ್ತಿ ಎಡಣ್ಣಿನ ಮೇಲೆ ಹೊಡೆದಿರುತ್ತಾನೆ ಮತ್ತು ಬಡಿಗೆಯನ್ನು ತೆಗೆದುಕೊಂಡು ಸೊಂಟದ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ, ಅಷ್ಟರಲ್ಲಿ ಅಲ್ಲೆ ವಸತಿ ಗ್ರಹದಲ್ಲಿದ್ದ ಮನೋಹರ ಪವಾರ ಇವರು ಜಗಳವನ್ನು ನೋಡಿ ಬಿಡಿಸಿಕೊಂಡಿರುತ್ತಾರೆಂದು, ನಂತರ ಫಿರ್ಯಾದಿಯು ತನ್ನ ತಾಯಿಗೆ ಕರೆ ಮಾಡಿ ಸದರಿ ವಿಷಯ ತಿಳಿಸಿದಾಗ ಅವರು ಹೈದ್ರಾಬಾದದಿಂದ ಬಂದು ಫಿರ್ಯಾದಿಗೆ ಚಿಟಗುಪ್ಪಾ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಮಾಡಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 17-05-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 20/2021, ಕಲಂ. ಮನುಷ್ಯ ಕಾಣೆ :-
ಫಿರ್ಯಾದಿ ಜಗಮ್ಮಾ ಗಂಡ ಶಿವಕುಮಾರ ಗೊಲ್ಲಾ ವಯ: 27 ವರ್ಷ, ಜಾತಿ: ಕುರುಬ, ಸಾ: ತಕ್ಕಡಪಲ್ಲಿ, ಮಂಡಲ: ಮುನಪಲ್ಲಿ, ಜಿಲ್ಲೆ: ಸಂಗಾರೆಡ್ಡಿ (ತೆಲಂಗಾಣಾ ರಾಜ್ಯ) ರವರಿಗೆ ಆರೋಗ್ಯ ಸರಿ ಇರಲಾರದ ಕಾರಣ ದಿನಾಂಕ 04-05-2021 ರಂದು ಫಿರ್ಯಾದಿಯವರು ತನ್ನ ಗಂಡ ಶಿವಕುಮಾರ ಮತ್ತು ಮಕ್ಕಳು ಎಲ್ಲರೂ ಸೇರಿಕೊಂಡು ತಕ್ಕಡಪಲ್ಲಿಯಿಂದ ತನ್ನ ತವರು ಮನೆಯಾದ ಪಾತರಪಳ್ಳಿ ಗ್ರಾಮಕ್ಕೆ ಬಂದಿದ್ದು, ನಂತರ ದಿನಾಂಕ 05-05-2021 ರಂದು ಬೀದರನ ಶಿವಶಂಕರ ಭೈರಾಮಡಗಿ ಆಸ್ಪತ್ರೆಗೆ ತನ್ನ ಗಂಡ ಮತ್ತು ತಮ್ಮ ಶಿವರಾಜ ಎಲ್ಲರೂ ಕೂಡಿ ಬಂದು ವೈದ್ಯರ ಹತ್ತಿರ ತೊರಿಸಿಕೊಂಡು ಮತ್ತೆ ಪಾತರಪಳ್ಳಿ ಗ್ರಾಮಕ್ಕೆ ಬಂದಿದ್ದು ಇರುತ್ತದೆ, ನಂತರ ಮರುದಿವಸ ಗಂಡ ನಾನು ತಕ್ಕಡಪಲ್ಲಿ ಗ್ರಾಮಕ್ಕೆ ಹೋಗುತ್ತೆನೆ ಅಂತ ಹೇಳಿದಾಗ ಇವಾಗ ನನಗೆ ಆರಾಮ ಇರುವದಿಲ್ಲಾ ನನಗೆ ಆರಾಮ ಆದ ನಂತರ ನೀವು ಹೋಗಿ ಅಂತ ಹೇಳಿದಾಗ ಮಾವನವರಾದ ಸಂಗಯ್ಯಾ ಇವರಿಗೆ ಆರಾಮ ಇಲ್ಲಾ ನಾನು ತಕ್ಕಡಪಲ್ಲಿಗೆ ಹೋಗುತ್ತೆನೆ, ಹಾಗೆ ಮತ್ತೆ ಬರುವಾಗ ನಿನಗೆ ಆಸ್ಪತ್ರೆಗೆ ತೊರಿಸಿದ ಹಳೆಯ ರಿಪೊರ್ಟಗಳನ್ನು ತೆಗೆದುಕೊಂಡು ಬರುತ್ತೆನೆ ಅಂತಾ ಹೇಳಿ ಪಾತರಪಳ್ಳಿಯಿಂದ ದಿನಾಂಕ 10-05-2021 ರಂದು 0700 ಗಂಟೆಯ ಸುಮಾರಿಗೆ ಗಂಡ ಶಿವಕುಮಾರ ಗೊಲ್ಲಾ ಇವರು ಹೋಗಿರುತ್ತಾರೆ, ನಂತರ ಮರುದಿವಸ ಫಿರ್ಯಾದಿಯು ತಕ್ಕಡಪಲ್ಲಿಗೆ ಕರೆ ಮಾಡಲು ಮೈದುನರಾದ ಬಸವರಾಜ ಗೊಲ್ಲಾ ಇವರು ತಿಳಿಸಿದ್ದೆನಂದರೆ ಶಿವಕುಮಾರ ಮನೆಗೆ ಬಂದಿಲ್ಲಾ ಅಂತಾ ಹೇಳಿದಾಗ ಫಿರ್ಯಾದಿಯವರು ಅವರಿಗೆ ನಿಮ್ಮ ತಂದೆಯವರಿಗೆ ಆರಾಮ ಇಲ್ಲದ ಕಾರಣ ತಕ್ಕಡಪಲ್ಲಿಗೆ ಹೋಗುತ್ತೆನೆ ಅಂತಾ 10-05-2021 ರಂದು 0700 ಮನೆಯಿಂದ ಹೋಗಿರುತ್ತಾರೆ ಅಂತಾ ತಿಳಿಸಿದಾಗ ಫಿರ್ಯಾದಿಯು ಗಾಬರಿಯಿಂದ ನೀವು ಅಲ್ಲಿ ಹುಡುಕಾಡಿ ನಾವು ಸಹ ಇಲ್ಲಿ ಗ್ರಾಮದಲ್ಲಿ ಸಂಭಂದಿಕರ ಹತ್ತಿರ ಹುಡುಕಾಡುತ್ತೆವೆ ಅಂತಾ ತಿಳಿಸಿ ತಮ್ಮ ಶಿವರಾಜ, ಮೈದುನರಾದ ಬಸವರಾಜ ಎಲ್ಲರೂ ಗಂಡನ ಬಗ್ಗೆ ಎಲ್ಲಾ ಕಡೆ ಹುಡುಕಾಡಲಾಗಿ ಗಂಡ ಶಿವಕುಮಾರ ರವರ ಪತ್ತೆಯಾಗಿರುವದಿಲ್ಲ, ಗಂಡ ಕಾಣೆಯಾಗಿರುತ್ತಾರೆ, ಕಾಣೆಯಾದ ತನ್ನ ಗಂಡನ ಚಹರೆ ಪಟ್ಟಿ 1) ಹೆಸರು: ಶಿವಕುಮಾರ, ತಂದೆಯ ಹೆಸರು: ಸಂಗಯ್ಯಾ ಗೊಲ್ಲಾ, ವಯ: 29 ವರ್ಷ, ಜಾತಿ: ಕುರುಬ, 2) ವಿಳಾಸ: ತಕ್ಕಡಪಲ್ಲಿ, ಮಂಡಲ: ಮುನಪಲ್ಲಿ, ಜಿಲ್ಲೆ: ಸಂಗಾರೆಡ್ಡಿ (ತೆಲಂಗಾಣಾ ರಾಜ್ಯ), 3) ಮೈಬಣ್ಣ: ಗೋಧಿ ಮೈಬಣ್ಣ, 4) ಚಹರೆ: ಉದ್ದನೆ ಮುಖ ಸಾಧಾರಣ ಮೈಕಟ್ಟು, ಎತ್ತರ: 5' ಫಿಟ, 5) ಉಡುಪು: ಬಾದಾಮ ಕಲರ ಹೂವಿನ ಚಿತ್ರವುಳ್ಳ ಶರ್ಟ & ಕಪ್ಪು ಕಲರ ಪಟ್ಟಿ ಇರುವ ಪ್ಯಾಂಟ ಧರಿಸಿರುತ್ತಾರೆ ಹಾಗೂ 6) ಭಾಷೆ: ತೆಲಗು, ಕನ್ನಡ ಸ್ವಲ್ಪ ತಿಳಿಯುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-05-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 57/2021, ಕಲಂ. 363 ಐಪಿಸಿ :-
ಈಗ 3-4 ತಿಂಗಳಿಂದ ಬಸವಕಲ್ಯಾಣದ ವಿಜಯ ತಂದೆ ಮನೋಹರ ಜಾಧವ ಎಂಬಾತನು ಫಿರ್ಯಾದಿ ಸೈಯದ ಉಮರ ಅಲಿ ತಂದೆ ರಹಿಮೊದ್ದಿನ ಮೌಜನ ವಯ: 56 ವರ್ಷ, ಜಾತಿ: ಮುಸ್ಲಿಂ, ಸಾ: ಕಿಟ್ಟಾ ರವರ ಮಗಳಾದ ಉಮನ ಫಾತಿಮಾ ಇಕೆಯೊಂದಿಗೆ ಮೋಬೈಲನಲ್ಲಿ ಮಾತನಾಡುವುದು, ಮೇಸೇಜ ಮಾಡುವುದು ಮಾಡುತ್ತಿದ್ದನ್ನು, ಹೀಗಿರುವಾಗ ದಿನಾಂಕ 16-05-2021 ರಂದು ಫಿರ್ಯಾದಿಯು ತನ್ನ ಹೆಂಡತಿ ಮಕ್ಕಳೊಂದಿಗೆ ಊಟ ಮಾಡಿ ಇರುವ ಒಂದು ಕೋಣೆಯಲ್ಲಿಯೇ ಮಲಗಿಕೊಂಡಿದ್ದು, ಕೊನೆಯ ಮಗಳಾದ ಉಮನ ಫಾತಿಮಾ ಹೆಂಡತಿಯ ಪಕ್ಕದಲ್ಲಿ ಮಲಗಿಕೊಂಡಿದ್ದು, ನಂತರ ದಿನಾಂಕ 17-05-2021 ರಂದು ರಾತ್ರಿ 0130 ಗಂಟೆಗೆ ದೊಡ್ಡ ಮಗಳಾದ ಶೈನಾಜ ಬೆಗಂ ಇವಳು ಬಯಲಿಗೆಂದು ಎದ್ದವಳು, ಆತುರವಾಗಿ ಫಿರ್ಯಾದಿಗೆ ಎಬ್ಬಸಿ ಅಮ್ಮನ ಪಕ್ಕದಲ್ಲಿ ಮಲಗಿದ ತಂಗಿ ಉಮನ ಫಾತಿಮಾ ಇವಳು ಕಾಣುತ್ತಿಲ್ಲಾ ಅಂತ ಹೇಳಿದಳು, ನಂತರ ಎಲ್ಲರೂ ಎದ್ದು ನೋಡಲು ಉಮನ ಫಾತಿಮಾ ಕಾಣಲಿಲ್ಲಾ, ಆಕೆಯನ್ನು ಕಿಟ್ಟಾ ಗ್ರಾಮದ ಎಲ್ಲಾ ಕಡೆ ಹುಡುಕಾಡಿ ನಂತರ ಬೆಳಿಗ್ಗೆ ಗೋಕುಳ, ಧನ್ನೂರಾ, ಬಸವಕಲ್ಯಾಣದಲ್ಲಿ ಹುಡುಕಾಡಿದರೂ ಮಗಳು ಸಿಗಲಿಲ್ಲಾ, ಫಿರ್ಯಾದಿಯವರ ಮಗಳಿಗೆ ಆಗಾಗ ಕರೆ, ಮೇಸೆಜ ಮಾಡಿ ಫುಸಲಾಯಿಸುತ್ತಿದ್ದ ವಿಜಯ ಜಾಧವ ತಂದೆ ಮನೋಹರ ಜಾಧವ ಸಾ: ಬಸವಕಲ್ಯಾಣ ಇವನು ಅಪಹರಣ ಮಾಡಿಕೊಂಡು ಹೋಗಿರುತ್ತಾನೆ ಅಂತ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮನ್ನಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 21/2021, ಕಲಂ. 32, 34 ಕೆ.ಇ ಕಾಯ್ದೆ :-
ದಿನಾಂಕ 17-05-2021 ರಂದು ಚಟನಳ್ಳಿ ಗ್ರಾಮದ ಈಶ್ವರ ತಂದೆ ಕಲ್ಲಪ್ಪಾ ಹತ್ತಿ ಇವರು ತನ್ನ ಹೋಟೆಲನ ಹತ್ತಿರ ಹೊರಗಡೆ ಇರುವ ನಿಲಗೀರಿ ಮರದ ಕೆಳಗೆ ಖುಲ್ಲಾ ಜಾಗೆಯಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾನೆಂದು ಕೃಷ್ಣಕುಮಾರ ಪಿಎಸ್ಐ ಮನ್ನಳ್ಳಿ ಪೊಲೀಸ್ ಠಾಣೆ ರರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು ಠಾಣೆಯ ಸಿಬ್ಬಂದಿಯವರೊಡನೆ ಚಟನಳ್ಳಿ ಗ್ರಾಮಕ್ಕೆ ತಲುಪಿ ಈಶ್ವರ ಇತನ ಹೋಟೆಲ ಹತ್ತಿರ ಮರೆಯಾಗಿ ನಿಂತು ನೋಡಲು ಈಶ್ವರ ಇತನ ಹೋಟೆಲ್ ಮುಚ್ಚಿದ್ದು ಅದರ ಪಕ್ಕದಲ್ಲಿರುವ ನಿಲಗೀರಿ ಮರದ ಕೆಳಗೆ ಖುಲ್ಲಾ ಜಾಗೆಯಲ್ಲಿ ಆರೋಪಿ ಈಶ್ವರ ತಂದೆ ಕಲ್ಲಪ್ಪಾ ಹತ್ತಿ ವಯ: 55 ವರ್ಷ, ಜಾತಿ: ಎಸ್.ಸಿ, ಸಾ: ಚಟನಳ್ಳಿ ಇತನು ಒಂದು ಕಾಟೂನ ಇಟ್ಟಿಕೊಂಡಿರುವದನ್ನು ನೋಡಿ ಮಾಹಿತಿಯನ್ನು ಖಚಿತ ಪಡಿಸಿಕೊಂಡು ಅಲ್ಲಿ ಹೋಗಿ ಪಂಚರು ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ಒಮ್ಮೆಲೆ ದಾಳಿ ಮಾಡಿ ಹಿಡಿದು ಅವನ ಹತ್ತಿರವಿದ್ದ ಕಾಟನ ಬಾಕ್ಸ್ ನೋಡಿ ಅದರಲ್ಲಿ ಏನಿದೆ ಅಂತಾ ವಿಚಾರಿಸಲು ಆತನು ಸರಾಯಿ ಇರುತ್ತದೆ ಅಂತಾ ತಿಳಿಸಿದನು, ನಂತರ ಸದರಿ ಕಾಟನ್ ಬಾಕ್ಸ್ ಪರಿಶೀಲಿಸಿ ನೋಡಲಾಗಿ ಅದರಲ್ಲಿ ಓಲ್ಡ ಟಾವರ್ನ 180 ಎಮ್.ಎಲ್ ವುಳ್ಳ 17 ಪ್ಲಾಸ್ಟಿಕ್ ಟೆಟ್ರಾ ಪ್ಯಾಕೆಟಗಳು ಅ.ಕಿ 1530/- ರೂ., ನಂತರ ಸದರಿ ಆರೋಪಿತನಿಗೆ ಸದರಿ ಸರಾಯಿ ಮಾರಾಟ ಮಾಡಲು ಸರಕಾರಿ ಲೈಸನ್ಸ್ ಇದೆಯಾ ಎಂದು ಕೇಳಲು ಆತ ತನ್ನ ಲಾಭಕ್ಕಾಗಿ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದೆನೆ ಅಂತಾ ತಿಳಿಸಿರುತ್ತಾನೆ, ನಂತರ ಸದರಿ ಸರಾಯಿಯನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಲಸೂರ ಪೊಲೀಸ ಠಾಣೆ ಅಪರಾಧ ಸಂ. 37/2021, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 17-05-2021 ರಂದು ಬೇಲೂರ ಗ್ರಾಮದಲ್ಲಿ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕುಳಿತುಕೊಂಡು ಪರೆಲ ಎಂಬ ನಸೀಬಿನ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಗೌತಮ ಪಿ.ಎಸ.ಐ ಹುಲಸೂರ ಪೊಲೀಸ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಬೇಲೂರ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಆರೋಪಿತರಾದ 1) ಸತೀಶ ತಂದೆ ಗುರಪ್ಪಾ ಬಡೂರೆ, ವಯ: 28 ವರ್ಷ, ಜಾತಿ: ಲಿಂಗಾಯತ, 2) ರಾಜೇಶ ತಂದೆ ವಿಶ್ವನಾಥ ಕನಜೆ, ವಯ: 22 ವರ್ಷ, ಜಾತಿ: ಲಿಂಗಾಯತ, 3) ಮಹೇಶ ತಂದೆ ಸುಭಾಷ ಭರಮಣೆ, ವಯ: 30 ವರ್ಷ, ಜಾತಿ: ಲಿಂಗಾಯತ, 4) ಚಂದ್ರಕಾಂತ ತಂದೆ ಓಂಪ್ರಕಾಶ ಬುಡಕೆ, ವಯ: 25 ವರ್ಷ, ಜಾತಿ: ಲಿಂಗಾಯತ, 5) ಶಿವಶಂಕರ ತಂದೆ ಕಂಟೆಪ್ಪಾ ಮೂಲಗೆ, ವಯ: 35 ವರ್ಷ, ಜಾತಿ: ಲಿಂಗಾಯತ, 6) ಶರಣಪ್ಪಾ ತಂದೆ ವೀರಶೆಟ್ಟಿ ಗಡಾದೆ, ವಯ: 30 ವರ್ಷ, ಜಾತಿ: ಲಿಂಗಾಯತ ಹಾಗೂ 7) ಸಂಗಮೇಶ ತಂದೆ ಮಡೋಳಪ್ಪಾ ಹಲಿಂಗೆ, ವಯ: 30 ವರ್ಷ, ಜಾತಿ: ಲಿಂಗಾಯತ, ಎಲ್ಲರೂ ಸಾ: ಬೇಲೂರ ಗ್ರಾಮ ಇವರೆಲ್ಲರೂ ಕುಳಿತುಕೊಂಡು ಇಸ್ಪೀಟ ಜೂಜಾಟ ಆಡುತ್ತಿರುವದನ್ನು ನೋಡಿ ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ 8900/- ರೂ. ಹಾಗೂ 52 ಇಸ್ಪೀಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಆರೋಪಿತರಿಗೆ ವಶಕ್ಕೆ ತೆಗೆದುಕೊಂಡು ಅವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 87/2021, ಕಲಂ. 394 ಐಪಿಸಿ :-
ಫಿರ್ಯಾದಿ ರಾಜೇಶಕುಮಾರ ತಂದೆ ಶಾಮಲಾಲ ಸರೋಜ ಸಾ: ಬಸಹಾ, ಪೋಸ್ಟ ಜಮಾತಾಲಿ, ಜಿಲ್ಲೆ: ಪ್ರತಾಪಘಡ, ಯು.ಪಿ ರಾಜ್ಯ ರವರು ಮುಂಬೈದ
ಪ್ರೀನ್ಸ ಸೇಠ ಇವರ ಲಾರಿ ಟ್ಯಾಂಕರ ನಂ. ಎಂ.ಎಚ-04/ಎಚ.ಎಸ-2177 ನೇದರ ಮೇಲೆ ಚಾಲಕ ಅಂತಾ ಕೆಲಸ ಮಾಡಿಕೊಂಡಿದ್ದು, ಸದರಿ ಲಾರಿ ಮೇಲೆ ತರಸಾಂವ, ಜಿಲ್ಲೆ ಜೋನಪೂರ ಯು.ಪಿ ರಂಜೀತ ಸರೋಜ
ಇವನು ಕ್ಲಿನರ ಅಂತಾ ಕೆಲಸ ಮಾಡಿಕೊಂಡಿರುತ್ತಾನೆ, ಸದರಿ ಲಾರಿ ಮೇಲೆ ಇನ್ನೊಬ್ಬ ಚಾಲಕ ತಮ್ಮೂರ
ಜಗದೀಶನಾಥ ತಂದೆ ಕೈಲಾಸನಾಥ ಸರೋಜ 3 ಜನರು ಕೆಲಸ ಮಾಡಿಕೊಂಡಿದ್ದು, ಕೆಮಿಕಲ್ ಲೋಡ ತುಂಬಿ ಸಾಗಾಣಿಕೆ ಮಾಡುತ್ತಿರುತ್ತಾರೆ,
ಹೀಗಿರುವಲ್ಲಿ ದಿನಾಂಕ 14-05-2021 ರಂದು ಸದರಿ ಲಾರಿಯಲ್ಲಿ ರಾತ್ರಿ ಮುಂಬೈ ಮಾಹುಲ್ ಎಚ.ಬಿ ಕಂಪನಿಯಲ್ಲಿ ಮೀಥಾನಾಯಿಲ
ಕೆಮಿಕಲ ಲೋಡ ತುಂಬಿಕೊಂಡು ಬರುತ್ತಿರುವಾಗ ದಾರಿಮಧ್ಯ ಲಾರಿ ಕೆಟ್ಟಿರುವುದರಿಂದ ಲಾರಿ ರಿಪೇರಿ
ಮಾಡಿಕೊಂಡು ಹೈದ್ರಾಬಾದಗೆ ಹೋಗುತ್ತಿರುವಾಗ ದಿನಾಂಕ 17-05-2021 ರಂದು 00.15 ಗಂಟೆಗೆ ಸುಮಾರಿಗೆ ರಾಜ್ಯ ಹೇದ್ದಾರಿ ನಂ.
65 ರ ಮುಖಾಂತರ ಹುಮನಾಬಾದ ರೈಲ್ವೆ
ಬ್ರೀಡ್ಜ ದಾಟಿ ಶಕುಂತಲಾ ಪಾಟೀಲ ಕಾಲೇಜ ಹತ್ತಿರ ಇರುವ ಕ್ರಾಸ ಹತ್ತಿರ ಹಿಂದುಗಡೆ ಇರುವ ಎರಡು
ಐಚರ ವಾಹನಗಳು ಲಾರಿಗೆ ಓವರ ಟೇಕ ಮಾಡಿ ಒಂದು ವಾಹನ ಬಲಗಡೆಯಿಂದ ಪಾಸಾಗಿ ಹೋಯಿತು ಮತ್ತೊಂದು ವಾಹನ
ಎಡಕಡೆಯಿಂದ ಲಾರಿ ಮುಂದೆ ಬಂದು ಲಾರಿಗೆ ಅಡಗಟ್ಟಿ ನಿಲ್ಲಿಸಿ ಐಚರ ವಾಹನದಿಂದ 4 ಜನ ದರೋಡೆಕೊರರು ಇಳಿದು ಲಾರಿಯಲ್ಲಿ
ಬಂದು ಫಿರ್ಯಾದಿಯ ಸೀಟಿನ ಹಿಂದುಗಡೆ ಬ್ಯಾಗಿನಲ್ಲಿದ್ದ 12,000/- ರೂಪಾಯಿ, ಕ್ಲಿನರ ಹತ್ತಿರವಿದ್ದ ರೇಡಮೀ
ಮೋಬೈಲ ತೆಗೆದುಕೊಂಡು ಎಲ್ಲರಿಗೂ ಕೆಳಗೆ ಇಳಿಸಿ ಸದರಿ ಲಾರಿಯನ್ನು ಸಹ ಹೈದ್ರಾಬಾದ ಕಡೆಗೆ ಓಡಿಸಿಕೊಂಡು
ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.