Police Bhavan Kalaburagi

Police Bhavan Kalaburagi

Saturday, November 16, 2019

BIDAR DISTRICT DAILY CRIME UPDATE 16-11-2019


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 16-11-2019

ಹೊಕ್ರಾಣಾ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 05/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 09-11-2019 ರಂದು ಫಿರ್ಯಾದಿ ಕವಿತಾಬಾಯಿ  ಗಂಡ  ಸಂಜು ಚವ್ಹಾಣ ವಯ: 40 ವರ್ಷ, ಜಾತಿ: ಲಂಬಾಣಿ, ಸಾ: ಮಾಳೆಗಾಂವ ರವರ ಗಂಡನಾದ ಸಂಜು ರವರು ತನ್ನ ಮಗಳ ಮದುವೆಯಲ್ಲಿ  ಆದ ಸಾಲ ಹೇಗೆ ತೀರಿಸಬೇಕೆಂದು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ    ಕ್ರಿಮಿನಾಶಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂರುತ್ತಾರೆ, ಈ ಬಗ್ಗೆ ಯಾರ ಮೇಲೆ ಯಾವುದೇ ರೀತಿಯ ಸಂಶಯ ಇರುವದಿಲ್ಲಾ ಅಂತ ಕೊಟ್ಟ ಫಿರ್ಯಾಧಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 15-11-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಂತಾಕಿ ಪೊಲೀಸ್ ಠಾಣೆ ಯು.ಡಿ.ಆರ್ ನಂ. 08/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 15-11-2019 ರಂದು ಫಿರ್ಯಾದಿ ಸುನೀತಾ ಗಂಡ ಈರೆಡ್ಡಿ ಇಂದುರೆ ವಯ: 36 ವರ್ಷ, ಜಾತಿ: ರೆಡ್ಡಿ, ಸಾ: ಬೆಲ್ದಾಳ ಗ್ರಾಮ, ತಾ: ಔರಾದ(ಬಿ) ರವರ ಗಂಡ ಮತ್ತು ಭಾವ, ಮೈದುನ ಮೂವರು ಕೂಡಿ ಹೊಟ್ಟು ತರಲು ಮನೆಯಿಂದ ಹೋಗಿ ಹೊಟ್ಟು ಅಗೆಯುವಾಗ ಆಕಸ್ಮಿಕವಾಗಿ ಅವರ ಎಡಗಾಲಿನ ಪಿಂಡ್ರಿಗೆ ಹಾವು ಕಚ್ಚಿದ್ದರಿಂದ ಅವರಿಗೆ ಮೊಟಾರ್ ಸೈಕಲ್ ಮೇಲೆ ಚಿಂತಾಕಿ ಆಸ್ಪತ್ರೆಗೆ ತಂದು ವೈದ್ಯರ ಬಳಿ ತೊರಿಸಿದಾಗ ಅವರು ಒಂದು ಸರಕಾರಿ ಅಂಬುಲೆನ್ಸ್‌ ಮಾಡಿ ಹೆಚ್ಚಿನ ಚಿಕಿತ್ಸೆ ಕುರಿತು ಬೀದರಕ್ಕೆ ಕಳುಹಿಸಿರುತ್ತಾರೆ, ಗಂಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ, ಫಿರ್ಯಾದಿಯವರು ಗಾಬರಿಯಾಗಿ ಒಂದು ಅಂಬುಲೆನ್ಸ್‌ ಮಾಡಿ ಹೈದ್ರಾಬಾದಕ್ಕೆ ಮಲ್ಲಾರೆಡ್ಡಿ ಆಸ್ಪತ್ರೆಗೆ ಹೋದಾಗ ಅಲ್ಲಿ ವೈಧ್ಯಾಧಿಕಾರಿಯವರು ಪರೀಕ್ಷಿಸಿ ಗಂಡ ಈರೆಡ್ಡಿ ಇವರು ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೆಯು ಯಾವುದೇ ಸಂಶಯ ಇಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 18/2019, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಯೆಸುದಾಸ ತಂದೆ ಸುಭಾಷ ಹಲಗೆ ವಯ: 22 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಸಿದ್ದೇಶ್ವರ ರವರ ತಂಗಿಯಾದ ರಾಣಿ ಇಕೆಗೆ ಅಂದಾಜು ಒಂದು ವರ್ಷದಿಂದ ಹೊಟ್ಟೆಬೆನೆ ಇದ್ದು ಖಾಸಗಿ ಚಿಕಿತ್ಸೆ ಮಾಡಿಸಿದರೂ ಕಡಿಮೆ ಆಗಲಿಲ್ಲಾ, ಹೀಗಿರುವಾಗ ದಿನಾಂಕ 15-11-2019 ರಂದು ಫಿರ್ಯಾದಿಯವರ ತಂಗಿಯಾದ ರಾಣಿ ಇವಳು ಹೊಟ್ಟೆಬೆನೆ ತಾಳಲಾರದೆ ಜಿವನದಲ್ಲಿ ಜಿಗುಪ್ಸೆಗೊಂಡು ಮನೆಯ ಮುಂದೆ ಇದ್ದ ಹುಣಚೆ ಮರಕ್ಕೆ ನೇಣುಹಾಕಿಕೊಂಡು ಮ್ರತಪಟ್ಟಿರುತ್ತಳೆ, ಅವಳ ಮರಣದ ಬಗ್ಗೆ ಯಾರ ಮೇಲೂ ಯಾವುದೆ ರೀತಿಯ ಅನುಮಾನ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹೊಕ್ರಾಣಾ ಪೊಲೀಸ್ ಠಾಣೆ ಅಪರಾಧ ಸಂ. 58/2019, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 14-11-2019 ರಂದು ಫಿರ್ಯಾದಿ ಛಗುಬಾಯಿ ಗಂಡ ಶಿವರಾಜ ಠಾಕರೆ ವಯ: 38 ವರ್ಷ, ಜಾತಿ: ವಡ್ಡರ್, ಸಾ: ದಾಬಕಾ(ಸಿ) ರವರ ಗಂಡ ತಮ್ಮ ಸಂಬಂಧಿಕರಾದ ಬಾಬು ಇವರ ಮನೆಯಲ್ಲಿ ಜಾವುಳ ಕಾರ್ಯಕ್ರಮ ಇರುವುದರಿಂದ ಗಂಡ ಶಿವರಾಜ ತಂದೆ ಯಲ್ಲಪ್ಪಾ ಠಾಕರೆ ವಯ-40 ವರ್ಷ ರವರು ಗಣೇಶಪೂರ ಕಾರ್ಯಕ್ರಮಕ್ಕೆ ಹೋಗಿ ಬರುತ್ತೆನೆಂದು ತಮ್ಮ ಫ್ಯಾಶನ್ ಫ್ರೋ ಮೋಟಾರ್ ಸೈಕಲ್ ನಂ.  ಎಮ್.ಹೆಚ್-03/ಬಿಎಲ್-0622 ನೇದ್ದರ ಮೇಲೆ ಹೋಗಿ ಮರಳಿ ಬರುವಾಗ ಗಣೇಶಪೂರ ಚಿಕ್ಲಿ(ಯು) ರೋಡಿನ ಮೇಲೆ ಎದುರಿನಿಂದ ಅಂದರೆ ಚಿಕ್ಲಿ(ಯು) ಕ್ರಾಸ್ ಕಡೆಯಿಂದ ಬಿಳಿ ಬಣ್ಣದ ಬುಲೇರೊ ವಾಹನ ಸಂ. ಕೆಎ-38/ಎಮ್-1674 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಹತೋಟಿಯಲ್ಲಿಟ್ಟಿಕೊಳ್ಳದೆ ಅತೀವೇಗ ಹಾಗು ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ಗಂಡನ ಮೋಟಾರ್ ಸೈಕಲಗೆ ಡಿಕ್ಕಿ ಮಾಡಿದ್ದರಿಂದ ಗಂಡನ ಬಲಗಾಲು ಮೊಳಕಾಲು ಕೆಳಗೆ, ಮುಖಕ್ಕೆ ಭಾರಿ ರಕ್ತಗಾಯ ಹಾಗು ಗುಪ್ತಗಾಯವಾಗಿ ರೋಡಿನ ಇಳಿಜಾರಿನಲ್ಲಿ ಬಿದ್ದು ಭಾರಿ ಗಾಯಗೊಂಡು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 15-11-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 46/2019, ಕಲಂ. 498(), 323, 504 ಜೊತೆ 34 ಐಪಿಸಿ ಮತ್ತು 3 & 4 ಡಿಪಿ ಕಾಯ್ದೆ :-
ಫಿರ್ಯಾದಿ ಪ್ರೀಯಂಕಾ ಗಂಡ ಬೆಳ್ಳಿ ಅಯ್ಯಪ್ಪಾ ಘಸ್ತೆ ವಯ: 30 ವರ್ಷ, ಜಾತಿ: ಪರಿಶಿಷ್ಟ ಜಾತಿ, ಸಾ: ಸಂತೋಷ ನಗರ ಹುಬಳ್ಳಿ, ಸದ್ಯ ಮನೆ ನಂ. 19-1-85 ಶಿವನಗರ ದಕ್ಷಿಣ ಬೀದರ ರವರ ಮದುವೆಯು ದಿನಾಂಕ 21-12-2016 ರಂದು ಹುಬಳ್ಳಿಯ ವಿದ್ಯಾಧರ್ ಘಸ್ತೆ ರವರ ಮಗನಾದ ಬೆಳ್ಳಿ ಅಯ್ಯಪ್ಪಾ ಇತನ ಜೊತೆಯಲ್ಲಿ ಹಿಂದು ಧರ್ಮದ ಪ್ರಕಾರ ಬೀದರ ಬೆಲ್ದಾಳೆ ಫಕ್ಷನ್ ಹಾಲಿನಲ್ಲಿ ಆಗಿದ್ದು, ಮದುವೆಯಲ್ಲಿ ವರೋಪಚಾರವಾಗಿ 10 ತೊಲೆ ಬಂಗಾರ, 8 ಲಕ್ಷ ರೂಪಾಯಿ ಮತ್ತು ಮನೆ ಬಳಕೆಯ ಸಾಮಾನುಗಳನ್ನು ಕೊಟ್ಟಿರುತ್ತಾರೆ, ಗಂಡ ಕೆ.ಪಿ.ಟಿ.ಸಿ.ಎಲ್. (ಎಸ್.ಆರ್.) ಹುಬಳ್ಳಿಯಲ್ಲಿ ಇಂಜಿನಿಯರ್ ಅಂತ ಕೆಲಸ ಮಾಡುತಿದ್ದಾರೆ, ಮದುವೆಯಾದ ನಂತರ ಫಿರ್ಯಾದಿಯು ತನ್ನ ಗಂಡ ಹಾಗು ಗಂಡನ ಮನೆಯವರೆಲ್ಲರೂ ಒಟ್ಟಿಗೆಯಾಗಿ ಹುಬಳ್ಳಿಯೇ ಉಳಿದುಕೊಂಡಿದ್ದು, ಸ್ವಲ್ಪ ದಿವಸಗಳ ಕಾಲ ಫಿರ್ಯಾದಿಗೆ ಅವರೆಲ್ಲರೂ ಚೆನ್ನಾಗಿ ನೋಡಿಕೊಂಡಿದ್ದು,   ಸಮಯದಲ್ಲಿ ಫಿರ್ಯಾದಿಯು ಗರ್ಭಿಣಿ ಆಗಿದ್ದು ಇರುತ್ತದೆ, ನಂತರ ಫಿರ್ಯಾದಿಯ ಗಂಡ ಫಿರ್ಯಾದಿಗೆ ನಿನ್ನ ಗುಣ ನಡತೆ ಸರಿಯಾಗಿಲ್ಲ ಮದುವೆಯಾದ ಸ್ವಲ್ಪ ದಿವಸಗಳಲ್ಲಿಯೇ ನೀನು ಗರ್ಭಿಣಿ ಆಗಿದ್ದಿ ಹೇಗೆ ಅಂತ ಸಂಶಯ ಪಡುತ್ತಾ ಬಂದು ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ, ಅತ್ತೆ, ಮಾವ, ಮೈದುನ, ನೆಗೆಣಿ ಮತ್ತು ಗಂಡನ ಸೋದರ ಮಾವನಾದ ವಾಸುದೇವ ಕಾಳೆ ರವರೆಲ್ಲರೂ ಕೂಡಿ ನೀನು ಯಾವನ ಜೊತೆ ಇದ್ದಿ, ನಿನ್ನ ಗುಣ ನಡತೆ ಸರಿಯಾಗಿಲ್ಲ ಅಂತ ಅವಾಚ್ಯವಾಗಿ ಬೈದು ಹಿಯ್ಯಾಳಿಸಿ ಕರೆಯುತ್ತಿದ್ದರು, ಅಲ್ಲದೆ ಗಂಡ ಹಾಗು ಗಂಡನ ಮನೆಯವರು ನಿನ್ನ ತಂದೆಯವರ ಮನೆಯಿಂದ ಇನ್ನು ಹೆಚ್ಚಿನ ವರದಕ್ಷಿಣೆ, ಬಂಗಾರ ತೆಗೆದುಕೊಂಡು ಬಂದರೆ ಮಾತ್ರ ನಿನಗೆ ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ ಇಲ್ಲವಾದರೆ ನಿನಗೆ ಮನೆಯಲ್ಲಿ ಜಾಗ ಇಲ್ಲ ಅಂತ ಮನಸ್ಸಿಗೆ ಹತ್ತುವ ಹಾಗೆ ಮನ ನೊಂದು ಸಾಯುವ ಹಾಗೆ ಮಾತನಾಡುತ್ತಾ ದಿನಾಲು ಚಿತ್ರಹಿಂಸೆ ಕೊಡುತ್ತಾ ಬಂದಿರುತ್ತಾರೆ,  ಅವರು ಕೊಡುವ ತೊಂದರೆ ಬಗ್ಗೆ ತನ್ನ ತಂದೆ, ತಾಯಿ, ಭಾವ ಹಾಗು ತಂದೆಗೆ ಪರಿಚಯ ಇರುವ ಬಾಬುರಾವ ತಂದೆ ತುಳಜಪ್ಪಾ, ಶಿವರಾಜ ತಂದೆ ಕಲ್ಲಪ್ಪಾ ರವರೆಲ್ಲರಿಗೆ ತಿಳಿಸಿದಾಗ ಅವರೆಲ್ಲರೂ ಗಂಡ ಹಾಗು ಗಂಡನ ಮನೆಯವರಿಗೆ ಏಕೆ ಸುಮ್ಮನೆ ಅವಳಿಗೆ ತೊಂದರೆ ಕೊಡುತ್ತಿದ್ದಿರಿ ಅವಳು ಗರ್ಭಿಣಿ ಇದ್ದಾಳೆ ಅವಳಿಗೆ ನೀವು ಮಾನಸಿಕ ಹಾಗು ದೈಹಿಕ ಕಿರುಕುಳ ಕೊಡುವದು ಸರಿ ಇಲ್ಲ ನಿಮಗೆ ಬಂಗಾರ, ಹಣ ಮುಂದೆ ಕೊಡುತ್ತೇವೆ ಅಂತ ಅವರಿಗೆ ಸಮಜಾಯಿಸಿರುತ್ತಾರೆ, ಆದರೆ ಅವರ ಯಾರದೆ ಮಾತು ಕೇಳಿರುವದಿಲ್ಲ, ಗಂಡನ ಮನೆಯವರು ತವರು ಮನೆಗೆ ಹೋಗುವಂತೆ ಒತ್ತಾಯ ಮಾಡಿದ್ದರಿಂದ ದಿನಾಂಕ 01-04-2017 ರಂದು ತನ್ನ ತಂದೆಯವರು ಬಾಣಂತನ ಕೋಸ್ಕರ್ ಬೀದರಕ್ಕೆ ಕರೆದುಕೊಂಡು ಬಂದಾಗ ದಿನಾಂಕ 19-09-2017 ರಂದು ಹೆರಿಗೆಯಾಗಿ ಗಂಡು ಮಗು ಜನಿಸಿರುತ್ತದೆ, ಆದರೆ ಅವರು ಯಾರು ನೋಡಲು ಬಂದಿರುವದಿಲ್ಲ, ಫಿರ್ಯಾದಿಯು ಅವರಿಗೆ ಅನೇಕ ಸಲ ಕರೆದುಕೊಂಡು ಹೋಗಲು ಹೇಳಿದರು ಸಹ ಫಿರ್ಯಾದಿಯ ಅವರು ಬೆಲೆ ಕೊಟ್ಟಿರುವದಿಲ್ಲ, ನಂತರ ದಿನಾಂಕ 21-11-2018 ರಂದು ಆರೊಪಿತರಾದ ಗಂಡ ಹಾಗು ಗಂಡನ ಮನೆಯವರೆಲ್ಲರೂ ಕೂಡಿ ತವರು ಮನೆಗೆ ಬಂದು ನೀನು ಹಣ, ಬಂಗಾರ ತೆಗೆದುಕೊಂಡು ಬಾ ಅಂದರೆ ಇಲ್ಲೆ ಉಳಿದು ಕೊಂಡಿದ್ದಿ ಅಂತ ಜಗಳ ಮಾಡಿ ಅತ್ತೆ ಕೂದಲು ಹಿಡಿದು ಎಳೆದಾಗ ಗಂಡ ಪಾಳದ ಮೇಲೆ ಹೊಡೆದಿರುತ್ತಾನೆ, ಮನೆಯಲ್ಲಿದ್ದ ತಂದೆ, ತಾಯಿ ರವರು ಜಗಳ ಬಿಡಿಸಲು ಬಂದಾಗ ತಂದೆಗೆ ಅವರೆಲ್ಲರೂ ಹಣ ಕೊಟ್ಟು ಕಳಿಸು ಅಂದರೆ ನಿನ್ನ ಮಗಳಿಗೆ ಇಲ್ಲೆ ಇಟ್ಟುಕೊಂಡಿದಿಯ್ಯಾ ಆತನಿಗೆ ಇನ್ನೊಂದು ಮದುವೆ ಮಾಡುತೆ್ತೕವೆ ಅಂತ ಜಗಳ ಮಾಡುತ್ತಿದ್ದಾಗ ಅದೆ ಸಮಯಕ್ಕೆ ಜಗಳದ ಶಬ್ದ ಕೇಳಿ ದಾರಿಯಿಂದ ಹೋಗುತ್ತಿದ್ದ ಅಶೋಕ ಪಾಟಿಲ್ ಅಲಿಯಾಬಾದ, ಶಿವರಾಜ ಕುದರೆ ರವರು ಬಂದು ಜಗಳವನ್ನು ಕಣ್ಣಾರೆ ನೋಡಿ ಅವರಿಗೆ ಸಮಜಾಯಿಸಿ ಕಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ ದಿನಾಂಕ 15-11-2019 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 184/2019, ಕಲಂ. 498(ಎ), 323, 504, 506 ಜೊತೆ 34 ಐಪಿಸಿ ಮತ್ತು 3 & 4 ಡಿಪಿ ಕಾಯ್ದೆ :-
ದಿನಾಂಕ 29-11-2017 ರಂದು ಫಿರ್ಯಾದಿ ಅರ್ಚನಾ ಗಂಡ ರವಿಕುಮಾರ ಹಳ್ಳೆನವರ ವಯ: 28 ವರ್ಷ, ಜಾತಿ: ಲಿಂಗಾಯತ, ಸಾ: ಪಟೋದಾ, ತಾ: ಚಿಂಚೋಳಿ, ಸದ್ಯ: ಜೆವರ್ಗಿ ಕಾಲೋನಿ ಕಲಬುರಗಿ ರವರ ಮದುವೆ ಪಟೋದಾ ಗ್ರಾಮದ ರವಿಕುಮಾರ ತಂದೆ ಮಾಣಿಕರಾವ ಹಳ್ಳೆನವರ ಜೊತೆ ಆಗಿರುತ್ತದೆ, ಮದುವೆಯಲ್ಲಿ ಫಿರ್ಯಾದಿಯವರ ತಂದೆ ತಾಯಿಯವರು ಗಂಡನಿಗೆ ವರೋಪಚಾರವಾಗಿ 40 ತೊಲೆ ಬಂಗಾರ ಹಾಗೂ ಮನೆ ಬಳಕೆ ಸಾಮಾನುಗಳು ಕೊಡುವುದಾಗಿ ಮಾತಾಡಿದ್ದು ಆದರೆ ಲಗ್ನದ ಸಮಯದಲ್ಲಿ ತಂದೆ ತಾಯಿ 29 ತೊಲೆ ಬಂಗಾರ ಮತ್ತು ಮನೆ ಬಳಕೆ ಸಾಮಾನುಗಳು ಕೊಟ್ಟು ಭಾಲ್ಕಿಯಲ್ಲಿ ಮದುವೆ ಮಾಡಿಕೊಟ್ಟಿದ್ದು, ಮದುವೆಯಾದ ನಂತರ ಗಂಡ ರವಿಕುಮಾರ, ಅತ್ತೆ ಕಸ್ತೂರಬಾಯಿ, ಮಾವ ಮಾಣಿಕರಾವ, ನಾದಿನಿ ಉಮಾ ಮತ್ತು ನಾದನಿ ಗಂಡ ಶರಣು ರವರು ಕೂಡಿ ಫಿರ್ಯಾದಿಗೆ ಹುಮನಾಬಾದಕ್ಕೆ ಕರೆದುಕೊಂಡು ಹೋಗಿ ಬಾಡಿಗೆ ಮನೆಯಲ್ಲಿ ಇಟ್ಟಿದ್ದು, ಅಲ್ಲಿ ಸುಮಾರು ಒಂದು ವಾರ ವಾಸವಾಗಿದ್ದು, ಆನಂತರ ಹುಮನಾಬಾದದಿಂದ ಕಲಬುರಗಿಯ ಜೆವರ್ಗಿ ಕಾಲೋನಿಯಲ್ಲಿರುವ ನಾದನಿ ಮನೆಗೆ ಕರೆದುಕೊಂಡು ಹೊಗಿ 1 ತಿಂಗಳು ವಾಸವಾಗಿದ್ದು, ನಂತರ 1 ವರ್ಷ ಅದೆ ಓಣಿಯಲ್ಲಿರುವ ಬಾಡಿಗೆ ಮನೆಯಲ್ಲಿ ಇಟ್ಟಿದ್ದು, ಬಾಡಿಗೆ ಮನೆಯಲ್ಲಿ ಇಟ್ಟಾಗ ಗಂಡ, ಅತ್ತೆ, ಮಾವ, ನಾದನಿ ಮತ್ತು ನಾದನಿ ಗಂಡ ರವರೆಲ್ಲರೂ ಕೂಡಿ ಫಿರ್ಯಾದಿಗೆ ನಿನ್ನ ತಂದೆ ತಾಯಿ ಲಗ್ನದಲ್ಲಿ 40 ತೊಲೆ ಬಂಗಾರ ಮತ್ತು ಮನೆ ಬಳಕೆ ಸಾಮಾನುಗಳು ಕೊಡುತ್ತೆವೆ ಅಂತ ನಿಶ್ಚಿತಾರ್ಥದ ಸಮಯದಲ್ಲಿ ಮಾತಾಡಿದರು ಆದರೆ ಕೇವಲ 29 ತೊಲೆ ಬಂಗಾರ ಮಾತ್ರ ಕೊಟ್ಟಿದ್ದು, ಮನೆ ಬಳಕೆ ಸಾಮಾನು ಕೂಡಾ ನಮಗೆ ತೃಪ್ತಿ ಅಗುವಂತೆ ಕೊಟ್ಟಿರುವುದಿಲ್ಲಾ ಅಂತ ಫಿರ್ಯಾದಿಗೆ ಅವಾಚ್ಯವಾಗಿ ನೀನು ನಮ್ಮ ಮನೆಯಲ್ಲಿ ಇರಬೆಕಾದರೆ ನಿನ್ನ ತಂದೆ ತಾಯಿ ಹತ್ತಿರ ಹೊಗಿ ಉಳಿದ 11 ತೊಲೆ ಬಂಗಾರ ಮತ್ತು ಇನ್ನು ಹೆಚ್ಚಿನ ಮನೆ ಬಳಕೆ ಸಾಮಾನುಗಳು ತೆಗೆದುಕೊಂಡು ಬಾ ಅಂತ ದೈಹಿಕ ಹಾಗು ಮಾನಸಿವಾಗಿ ಕಿರಕುಳ ಕೊಟ್ಟು ಹೊಡೆ ಬಡೆ ಮಾಡುತ್ತಿದಾಗ ವಿಷಯ ನ್ನ ತವರು ಮನೆಯವರಿಗೆ ತಿಳಿಸಿದಾಗ ಫಿರ್ಯಾದಿಯ ತಂದೆ, ತಾಯಿ, ಸೋದರ ಮಾವ, ಸೋದರತ್ತೆ, ಸೋದರತ್ತೆ ಗಂಡ ರವರು 3-4 ಸಲ ಗಂಡನ ಮನೆಗೆ ಬಂದು ಗಂಡ ಹಾಗೂ ಗಂಡನ ಮನೆಯವರಿಗೆ ಮಗಳಿಗೆ ಸರಿಯಾಗಿ ನೊಡಿಕೊಳ್ಳಿರಿ ಸಧ್ಯ ನಮ್ಮ ಹತ್ತಿರ ಹಣ ಇಲ್ಲಾ ಏನಾದರು ಮಾಡಿ ಸ್ವಲ್ಪ ದಿವಸಗಳಲ್ಲಿ ಉಳಿದ ನಿಮ್ಮ 11 ತೊಲೆ ಬಂಗಾರ ಕೊಡುತ್ತೆವೆ ಅಂತ ಬುದ್ದಿವಾದ ಹೆಳುತಿದ್ದರು, ತಂದೆ ತಾಯಿ ಹಾಗು ಸಂಬಂಧಿಕರು ಬಂದು ಹೊದ ನಂತರ ಸ್ವಲ್ಪ ದಿವಸ ಸರಿಯಾಗಿ ಉಳಿದು ನಂತರ ಪುನಃ ಮೊದಲಿನಂತೆ ಕಿರಕುಳ ಕೊಡುತ್ತಿದರು, ನಂತರ ಹೀಗಿರುವಾಗ ದಿನಾಂಕ 24-04-2019 ರಂದು ಆರೋಪಿತರಾದ ಗಂಡ, ಅತ್ತೆ, ಮಾವ ಕೂಡಿ ಕೈಯಿಂದ ಫಿರ್ಯಾದಿಗೆ ಹೊಡೆ ಬಡೆ ಮಾಡಿ ಕೂದಲು ಹಿಡಿದು ಜಿಂಜಾಮುಷ್ಠಿ ಮಾಡಿದ್ದು, ಈ ವಿಷಯ ತನ್ನ ತಂದೆ ತಾಯಿಗೆ ತಿಳಿಸಿದಾಗ ದಿನಾಂಕ 26-04-2019 ರಂದು ತಂದೆ ಕಲಬುರಗಿಗೆ ಬಂದು ಫಿರ್ಯಾದಿಗೆ ಭಾಲ್ಕಿಗೆ ಕರೆದುಕೊಂಡು ಬಂದಿದ್ದು, ಸಧ್ಯ ತವರು ಮನೆಯಲ್ಲಿಯೆ ವಾಸವಾಗಿದ್ದು, ಫಿರ್ಯಾದಿಯು ತವರು ಮನೆಗೆ ಬಂದ ನಂತರ ಸದರಿ ಆರೋಪಿತರು ಆಗಾಗ ಕರೆ ಮಾಡಿ ಬೈಯುತ್ತಿದ್ದರು ಅಂತ ಕೊಟ್ಟ ಫಿರ್ಯಾಧಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 15-11-2019 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.