Police Bhavan Kalaburagi

Police Bhavan Kalaburagi

Friday, August 13, 2021

BIDAR DISTRICT DAILY CRIME UPDATE 13-08-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 13-08-2021

 

ಚಿಟಗುಪ್ಪಾ ಪೊಲೀಸ ಠಾಣೆ ಯು.ಡಿ.ಆರ್ ಸಂ. 11/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಶಾಂತಾಬಾಯಿ ಗಂಡ ಮಾರುತಿ ಮೇತ್ರೆ ವಯ: 45 ವರ್ಷಜಾತಿ: ಕುರುಬ, ಸಾ: ಹಣಕುಣಿ ರವರ ಮಗನಾದ ಕಾಶಿನಾಥ ತಂದೆ ಮಾರುತಿ ಮೇತ್ರೆ ವಯ: 22 ವರ್ಷ ಇತನು ಸರಾಯಿ ಕುಡಿಯುವ ಚಟದವನಿದ್ದು, ಸರಾಯಿ ಕುಡಿದು ಬಂದು ಫಿರ್ಯಾದಿಯೊಂದಿಗೆ ಹಣ ಕೊಡುವಂತೆ ತಕರಾರು ಮಾಡುತ್ತಿದ್ದನು, ಹೀಗಿರುವಾಗ ದಿನಾಂಕ 10-08-2021 ರಂದು 1900 ಗಂಟೆಯಿಂದ ದಿನಾಂಕ 12-08-2021 ರಂದು 0700 ಗಂಟೆಯ ಮಧ್ಯಾವಧಿಯಲ್ಲಿ ಕುಡಿದ ಅಮಲಿನಲ್ಲಿ ಮನೆಯಲ್ಲಿ ತಗಡದ ಕೆಳಗಿನ ಕಟ್ಟಿಗೆ ದಂಟಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ, ತನ್ನ ಮಗನ ಸಾವಿನ ಬಗ್ಗೆ ಯಾರ ಮೇಲೂ ಯಾವುದೇ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಔರಾದ(ಬಿ) ಪೊಲೀಸ್ ಠಾಣೆ ಯು.ಡಿ.ಆರ್ ನಂ. 13/2021, ಕಲಂ. 174 ಸಿ.ಆರ್.ಪಿ.ಸಿ :-

ದಿನಾಂಕ 12-08-2021 ರಂದು ಫಿರ್ಯಾದಿ ಬಸಯ್ಯ ತಂದೆ ಸಂಗಯ್ಯಾ ಮಠ ವಯ: 60 ವರ್ಷ, ಜಾತಿ: ಸ್ವಾಮಿ, ಸಾ: ಮಮದಾಪುರ ರವರ ಮಗನಾದ ಪ್ರಶಾಂತ ಇತನು ಸುಮಾರು ನಾಲ್ಕು ವರ್ಷದಿಂದ ಸರಾಯಿ ಕುಡಿಯುತ್ತಿದ್ದನು, ಹೀಗಿರುವಾಗ ದಿನಾಂಕ 10-08-2021 ರಂದು ಸರಾಯಿ ಜಾಸ್ತಿ ಕುಡಿದು ಮನೆಗೆ ಬಂದು ಮನೆಯಲ್ಲಿಟ್ಟಿದ್ದ ಬೇಳೆಗೆ ಹೊಡೆಯುವ ಕ್ರೀಮಿನಾಶಕ ಔಷಧವನ್ನು ನಶೆಯಲ್ಲಿ ಕುಡಿದಿರುವ ಪ್ರಯುಕ್ತ ಆತನಿಗೆ ಚಿಕಿತ್ಸೆ ಕುರಿತು ಔರಾದ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ಪ್ರಶಾಂತ ಇತನು ದಿನಾಂಕ 12-08-2021 ರಂದು ಸರಕಾರಿ ಆಸ್ಪತ್ರೆಯಲ್ಲಿ ಮರಣ ಹೊಂದಿರುತ್ತಾನೆಂದು, ತನ ಮರಣದ ಬಗ್ಗೆ ಯಾರ ಮೇಲೆ ಯಾವುದೆ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 54/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 12-08-2021 ರಂದು ಜನವಾಡಾ ಗ್ರಾಮದ ಮಹಾದೇವ ಮಂದಿರದ ಮುಂದೆ ಸಾರ್ವಜನಿಕ ಖುಲ್ಲಾ ಜಾಗದಲ್ಲಿ ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರೆಂದು ಶಿವರಾಜ್ ಪಾಟೀಲ್ ಪಿಎಸ್ಐ(ಕಾಸು) ಜನವಾಡಾ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಜನವಾಡಾ ಗ್ರಾಮದ ಮಹಾದೇವ ಮಂದಿರದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1) ಶಿವಕುಮಾರ ತಂದೆ ರಾಜಪ್ಪಾ ದಾಬಕೆ ವಯ: 31 ವರ್ಷ, ಜಾತಿ: ಲಿಂಗಾಯತ ಹಾಗೂ 2) ಸಾಗರ ತಂದೆ ಧನರಾಜ ದೆಶೇಟ್ಟಿ ವಯ: 25 ವರ್ಷ, ಜಾತಿ: ಲಿಂಗಾಯತ, ಇಬ್ಬರು ಸಾ: ಜೋನ್ನೆಕೇರಿ ಗ್ರಾಮ ಇವರಿಬ್ಬರು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಅಂಕೆ ಸಂಖ್ಯೆವುಳ್ಳ ಚೀಟಿ ಬರೆದುಕೊಡುತ್ತ 1/- ರೂಪಾಯಿಗೆ 80/- ರೂ. ಹಾಗೂ 10/- ರೂಪಾಯಿಗೆ 800/- ರೂ ಕೊಡುತ್ತೆನೆ ಅಂತಾ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಅವರ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರಿಂದ 1950/- ರೂ. ನಗದು ಹಣ, 2 ಬಾಲ ಪೆನ್ನು ಹಾಗೂ ಅಂಕಿ ಸಂಖ್ಯೆ ಬರೆದ 2 ಮಟಕಾ ಚೀಟಿಗಳು ನೇದವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ 73/2021, ಕಲಂ.  279, 337, 338 ಐಪಿಸಿ :-

ದಿನಾಂಕ 12-08-2021 ರಂದು ಫಿರ್ಯಾದಿ ಮಹೆಬೂಬ ತಂದೆ ನಬೀಸಾಬ ಮುಲ್ಲಾ ಸಾ: ಹೊಡಲ್, ತಾ: ಕಮಲಾಪುರ, ಜಿಲ್ಲೆ: ಕಲಬುರಗಿ ರವರು ಘೋಡವಾಡಿ ಇಸ್ಮಾಯಿಲ್ ಖಾದ್ರಿ ಪೀರಗೆ ಕಂದರಿ ಮಾಡಲು ದಿನಾಂಕ 11-08-2021 ರಂದು ಕಲಬುರ್ಗಿಯಿಂದ ಘೋಡವಾಡಿಗೆ ಬಂದು ಕಂದರಿ ಮುಗಿಸಿಕೊಂಡು ದಿನಾಂಕ 12-08-2021 ರಂದು ತಮ್ಮ ಸಬಂಧಿಕರಾದ ಇಸ್ಮಾಯಿಲ್ ತಂದೆ ಅಬ್ದುಲ್ ಖಾದರ ಸಾ: ಕುಂಸಿ, ಸದ್ಯ: ಮುಸ್ಲಿಂ ಸಂಘ ಕಲಬುರ್ಗಿ ಇವರ  ಬೋಲೆರೋ ವಾಹನ ಸಂ. ಕೆ.ಎ-32/ಡಿ-3940 ನೇದರಲ್ಲಿ ಫಿರ್ಯಾದಿ ಹಾಗೂ ರುಹಾನ, ಗೌಸ್ ಪಟೇಲ್, ಶಬಾನಬೆಗಂ ಎಲ್ಲರೂ ಕುಳಿತುಕೊಂಡು ಇಸ್ಮಾಯಿಲ್ ಇವರು ವಾಹನ ಚಲಾಯಿಸುತ್ತಿದ್ದು, ಎಲ್ಲರೂ ಘೋಡವಾಡಿಯಿಂದ ಕಲಬುರ್ಗಿಗೆ ಹೋರಟು ರಾಜೋಳಾ ಹುಮನಾಬಾದ ಹುಣಸಗೇರಾ ಬ್ರೀಡ್ಜ ಹತ್ತಿರ ಹೋಗುತ್ತಿರುವಾಗ ಹಿಂದೆಯಿಂದ ಒಂದು ಮಹಿಂದ್ರಾ ಬೋಲೇರೋ ವಾಹನ ಸಂ. ಕೆ.ಎ-39/ಎ-1309 ನೇದರ ಚಾಲಕನಾದ ಆರೋಪಿ ಲೋಕೆಶ ತಂದೆ ವಿಠಲ್ ವಯ: 25 ವರ್ಷ, ಜಾತಿ: ಕುರುಬ, ಸಾ: ಹುಣಸಗೇರಾ, ತಾ: ಹುಮನಾಬಾದ ಇತನು ತನ್ನ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಪ್ರಯಾಣಿಸುತ್ತಿರುವ ಬೋಲೆರೋ ವಾಹನಕ್ಕೆ ಹಿಂದುಗಡೆಯಿಂದ ಅಪಘಾತ ಪಡಿಸಿರುತ್ತಾನೆ, ಸದರಿ ಅಪಘಾತದಿಂದ ವಾಹನದಲ್ಲಿದ್ದ ಫಿರ್ಯಾದಿಯ ಎಡಗಣ್ಣಿನ ಕೆಳಗೆ ಭಾರಿ ರಕ್ತಗಾಯ, ಎಡ ಕಿವಿಯ ಹಾಗೂ ಕಿವಿಯ ಹಿಂದುಗಡೆ, ಬಲಗೈಗಳಿಗೆ ತರಚಿದ ಗಾಯವಾಗಿರುತ್ತದೆ, ರುಹಾನ ಇತನ ತಲೆಯ ಎಡಭಾಗಕ್ಕೆ ಭಾರಿ ರಕ್ತಗಾಯ, ಬಲಗಾಲಿಗೆ ಗುಪ್ತಗಾಯ ಮತ್ತು ಎರಡು ಕೈಗಳಿಗೆ ತರಚಿದ ಗಾಯ, ಗೌಸ್ ಪಟೇಲ್ ರವರ ಎಡಗಣ್ಣಿನ ಮೇಲೆ ಹಣೆಗೆ ತರಚಿದ ಗಾಯ, ಗಟಾಯಿಗೆ, ಎಡ ಮತ್ತು ಬಲಗೈಗೆ ಭಾರಿ ರಕ್ತಗಾಯ, ಮೊಣಕಾಲಿಗೆ ರಕ್ತಗಾಯ, ಇಮ್ರಾನ ರವರ ಕೈಗಳಿಗೆ ರಕ್ತಗಾಯವಾಗಿರುತ್ತದೆ, ನಂತರ ಎಲ್ಲರೂ ಪಲ್ಟಿಯಾದ ವಾಹನದಿಂದ ಹೊರಗೆ ಬಂದು  ಒಂದು ಖಾಸಗಿ ವಾಹನದಲ್ಲಿ ಹುಮನಾಬಾದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಕುರಿತು ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.