Police Bhavan Kalaburagi

Police Bhavan Kalaburagi

Friday, April 23, 2021

BIDAR DISTRICT DAILY CRIME UPDATE 23-04-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 23-04-2021

 

ಮಾರ್ಕೆಟ ಪೊಲೀಸ ಠಾಣೆ ಬೀದರ ಅಪರಾಧ ಸಂ. 18/2021, ಕಲಂ. 379 ಐಪಿಸಿ :-

ಬೀದರ ಜಿಲ್ಲಾಧಿಕಾರಿಗಳ ಕಛೇರಿಯ ಹಿಂದೆ ಆವರಣದಲ್ಲಿರುವ ಕ್ರಿಲೋಸ್ಕರ್ ಕಂಪನಿಯ ಎರಡು ಜನರೇಟರಗಳ ಪೈಕಿ ಒಂದು ಜನರೇಟರನ ಟಾಟಾ ಗ್ರೀನ್ ಕಂಪನಿಯ ಒಂದು ಬ್ಯಾಟರಿ .ಕಿ 5000/- ರೂಪಾಯಿ ನೇದನ್ನು ದಿನಾಂಕ 18-04-2021 ರಂದು 0800 ಗಂಟೆಯಿಂದ 19-04-2021 ರಂದು 1545 ಗಂಟೆಯ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ಪ್ರವೀಣ ದೇಶಪಾಂಡೆ ತಂದೆ ಜನಾರ್ಧನ ದೇಶಪಾಂಡೆ ವಯ: 33 ವರ್ಷ, ಜಾತಿ: ಬ್ರಾಹ್ಮಣ, : ಬೀದರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕೆಸ್ವಾನ ಕಂಟ್ರೋಲ್ ರೋಮನಲ್ಲಿ ನೋಡಲ ಅಧಿಕಾರಿ, ಸಾ: ಮನೆ ನಂ. 11-366/286/ ಪ್ರೀತಿ ನಿವಾಸ ನ್ಯೂ ರಾಘವೇಂದ್ರ ಕಾಲೋನಿ ಕಲಬುರ್ಗಿ, ಸದ್ಯ: 11 ನೇ ಕ್ರಾಸ್ ವಿದ್ಯಾನಗರ ಕಾಲೋನಿ ಬೀದರ ರವರು ನೀಡಿದ ದೂರಿನ ಮೇರೆಗೆ ದಿನಾಂಕ 22-04-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 37/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 22-04-2021 ರಂದು ಭೋಸಗಾ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಮಟಾಕಾ ಎಂಬ ನಸೀಬಿನ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆಂದು ಕು: ಜೈಶ್ರೀ ಪಿ.ಎಸ್. ಮಂಠಾಳ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಭೋಸಗಾ ಗ್ರಾಮಕ್ಕೆ ಹೋಗಿ ಗ್ರಾಮದ ಶಿವಾಜಿ ಚೌಕ ಹತ್ತಿರ ರೋಡಿನ ಪಕ್ಕದಲ್ಲಿರುವ ಮನೆಗಳ ಮರೆಯಾಗಿ ನಿಂತು ನೋಡಲು ಭೋಸಗಾ ಗ್ರಾಮದ ಬಸವೇಶ್ವರ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ರಾಜಕುಮಾರ ತಂದೆ ವಿಶ್ವನಾಥ ಸೋನಾರ ವಯ: 38 ವರ್ಷ, ಜಾತಿ: ಸೋನಾರ, ಸಾ: ಭೋಸಗಾ ಗ್ರಾಮ ಇತನು ಮಟಕಾ ಎಂಬ ಜೂಜಾಟದ ನಂಬರ ಬರೆಯಿಸಿ 01/- ರೂಪಾಯಿಗೆ 80/- ರೂಪಾಯಿ ಪಡೆಯಿರಿ ಅಂತಾ ಚಿರಾಡುತ್ತಾ ಸಾರ್ವಜನಿಕರಿಂದ ಹಣ ಪಡೆದು ನಂಬರ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮದಲ್ಲಿ ಸದರಿ ಆರೋಪಿತನ ಮೇಲೆ ದಾಳಿ ಮಾಡಿ ಹಿಡಿದುಕೊಂಡಾಗ ಮಟಕಾ ನಂಬರ್ ಬರೆಯಿಸುತ್ತಿದ್ದ ಸಾರ್ವಜನಿಕರು ಓಡಿ ಹೋಗಿರುತ್ತಾರೆ, ನಂತರ ಆರೋಪಿಗೆ ಇಲ್ಲಿ ನೀನು ಏನು ಬರೆದುಕೊಳ್ಳುತಿದ್ದಿ ಅಂತಾ ವಿಚಾರಿಸಿದಾಗ ಅವನು ತಿಳಿಸಿದ್ದೇನೆಂದರೆ ನಾನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಎಂಬ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದೆನೆ ಅಂತಾ ತಿಳಿಸಿರುತ್ತಾನೆ, ನಂತರ ಪಂಚರ ಸಮಕ್ಷಮದಲ್ಲಿ ಸದರಿ ಆರೋಪಿತನ ಅಂಗ ಜಡ್ತಿ ಮಾಡಿದಾಗ ಅವನ ಹತ್ತಿರ ಗುನ್ನೆಗೆ ಸಂಬಂಧಿಸಿದ 1) ನಗದು ಹಣ 730/- ರೂಪಾಯಿ, 2) ಎರಡು ಮಟಕಾ ಚೀಟಿಗಳು ಮತ್ತು 3) ಒಂದು ಬಾಲ್ ಪೆನ್ನ ಸಿಕ್ಕಿದ್ದು ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 63/2021, ಕಲಂ. 78(6) ಕೆ.ಪಿ ಕಾಯ್ದೆ :-

ದಿನಾಂಕ 22-04-2021 ರಂದು ಬಸವಕಲ್ಯಾಣ ನಗರದ ಸದಾನಂದ ಮಠ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಐಪಿಎಲ್ ಟೂರ್ನಿಯ ಆರ್.ಸಿ.ಬಿ ಮತ್ತು ರಾಜಸ್ಥಾನ ರಾಯಲ್ಸ್ತಂಡಗಳ ಮೇಲೆ ಗೆಲವು ಮತ್ತು ಸೋಲಿನ ಬಗ್ಗೆ ಸಾರ್ವಜನಿಕರಿಂದ ಹಣ ಪಡೆದು ಬೆಟ್ಟಿಂಗ್ ಟ್ಟಿಕೊಂಡು ಹಣ ಪಡೆಯುತ್ತಿದ್ದಾರೆಂದು ಬಸವರಾಜ ಎಸ್ ಪಿಎಸ್ಐ (ಕಾಸೂ) ಬಸವಕಲ್ಯಾಣ ನಗರ ಪೊಲೀಸ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಸದರಿ ಸದಾನಂದ ಮಠದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿ ಮನೋಜ ತಂದೆ ಮುರಳಿಧರ ಪಂಚಾಳ ವಯ: 26 ವರ್ಷ, ಜಾತಿ: ಪಂಚಾಳ, ಸಾ: ಪೀರಪಾಶಾ ಬಂಗ್ಲಾ ಬಸವಕಲ್ಯಾಣ ಇತನು ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ ನಿಮ್ಮ  ಅದೃಷ್ಟವನ್ನು ಪರೀಕ್ಷಿಸಿಕೊಳ್ಳಿ ಇಂದು ನಡೆಯುತ್ತಿರುವ ಆರ್.ಸಿ.ಬಿ ಮತ್ತು ರಾಜಸ್ಥಾನ ರಾಯಲ್ಸ್ಕ್ರಿಕೇಟ್ ತಂಡಗಳ ಸೋಲು ಗೇಲುವಿನ ಬಗ್ಗೆ ಜನರಿಗೆ ಎರಡು ಕ್ರಿಕೇಟ್ ತಂಡಗಳ ಬೆಟ್ಟಿಂಗ ಕಟ್ಟಿ ಎಂದು ಕೂಗಿ ಹೇಳುತ್ತಾ ಸಾರ್ವಜನಿಕರಿಂದ ಹಣ ಪಡೆದುಕೋಳ್ಳುತ್ತಿರುವುದನ್ನು ನೋಡಿ ಸದರಿ ಆರೋಪಿತನ ಮೇಲೆ ಎಲ್ಲರು ಒಮ್ಮೆಲೆ ದಾಳಿ ಮಾಡಿ ಆತನ ಅಂಗ ಶೋಧನೆ ಮಾಡಲು ಆತನ ಹತ್ತಿರ ನಗದು ಹಣ 6,100/- ರೂಪಾಯಿ ಸಿಕ್ಕಿದ್ದು, ಆವಾಗ ಬೆಟ್ಟಿಂಗ ಹಚ್ಚಿದ ಹಣ ಸಾರ್ವಜನಿಕರಿಂದ ಪಡೆದುಕೊಂಡು ಯಾರಿಗೆ ಕೊಡುತ್ತಿ? ಅಂತಾ ವಿಚಾರಿಸಿದಾಗ ಅವನು ರಾಚಯ್ಯಾ ಸ್ವಾಮಿ ತಂದೆ ವೈಜಿನಾಥಯ್ಯಾ ವಯ: 44 ವರ್ಷ, ಜಾತಿ: ಸ್ವಾಮಿ, ಸಾ: ದೇಶಮುಖ ಗಲ್ಲಿ ಬಸವಕಲ್ಯಾಣ ಇವರಿಗೆ ಕೊಡುತ್ತೆನೆ ಎಂದು ತಿಳಿಸಿದಾಗ, ಮನೋಜ ಇತನ ಅಧಿನದಿಂದ ಸಿಕ್ಕ ಹಣವನ್ನು ಜಪ್ತಿ ಮಾಡಿಕೊಂಡು ಆರೋಪಿತರಾದ 1) ಮನೋಜ ಮತ್ತು 2) ರಾಚಯ್ಯಾ ಇವರಿಬ್ಬರು ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 41/2021, ಕಲಂ. 279, 337, 338 .ಪಿ.ಸಿ ಜೋತೆ 187 ಐಎಂವಿ ಕಾಯ್ದೆ :-

ದಿನಾಂಕ 22-04-2021 ರಂದು ಫಿರ್ಯಾದಿ ಅಫಸರ್ ತಂದೆ ಖಾಜಾಮಿಯ್ಯ ಮುತುವಲ್ಲಿ, ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ಘೋಡವಾಡಿ, ತಾ: ಹುಮನಾಬಾದ ರವರು ತಮ್ಮ ಸಂಬಂಧಿಕರಾದ ಶೇಖ್ ಬಾಲೇಸಾಬ್ ತಂದೆ ಶೇಖ್ ಮೌಲಾನಾ ವಯ: 55 ವರ್ಷ ಇಬ್ಬರೂ ಕೂಡಿ ಮೋಟರ ಸೈಕಲ ನಂ. ಕೆಎ-39/ಎಲ್-2664 ನೇದರ ಮೇಲೆ ಖಾಸಗಿ ಕೆಲಸ ಕುರಿತು ತಮ್ಮ ಗ್ರಾಮದಿಂದ ಬಸವಕಲ್ಯಾಣಕ್ಕೆ ಬಂದು ತಮ್ಮ ಕೆಲಸ ಮುಗಿಸಿಕೊಂಡು ಮರಳಿ ಬಸವಕಲ್ಯಾಣದಿಂದ ರಾಜೋಳಾ ಮಾರ್ಗವಾಗಿ ತಮ್ಮ ಗ್ರಾಮಕ್ಕೆ ಹೋಗುತ್ತಿರುವಾಗ ಮೋಟರ ಸೈಕಲ ಶೇಖ್ ಬಾಲೇಸಾಬ್ ಚಲಾಯಿಸುತ್ತಿದ್ದು, ಇಬ್ಬರು ಬಸವಕಲ್ಯಾಣ ನಾರಾಯಣಪೂರ ರೋಡಿನ ಮೇಲೆ ಎಲ್..ಸಿ ಆಫಿಸ್ ಎದುರಿಗೆ ಹೋಗುತ್ತಿರುವಾಗ ಎದುರಿನಿಂದ ಅಂದರೆ ನಾರಾಯಣಪೂರ ಕಡೆಯಿಂದ ಗೂಡ್ಸ ವಾಹನ ಸಂ. ಕೆಎ-39/7412 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯು ಕುಳಿತ ಮೋಟರ ಸೈಕಲಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಬಲಗಾಲ ಮೊಳಕಾಲಿಗೆ, ಬಲಗೈ ಕಿರುಬೆರಳುಗಳಿಗೆ ರಕ್ತಗಾಯ ಮತ್ತು ತಲೆಗೆ ಗುಪ್ತಗಾಯವಾಗಿರುತ್ತದೆ ಹಾಗೂ ಮೋಟರ ಸೈಕಲ ಚಲಾಯಿಸುತ್ತಿದ್ದ ಶೇಖ್ ಬಾಲೆಸಾಬ್ ಇವರ  ಬಲಗಾಲ ಮೊಳಕಾಲಿಗೆ ಭಾರಿ ರಕ್ತಗಾಯ ಹಾಗೂ ತಲೆಗೆ ರಕ್ತಗಾಯ, ಬಲಗೈ ಮೊಳಕೈ ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ, ಆರೋಪಿಯು ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ, ಆಗ ಅಲ್ಲಿಯೇ ಹೋಟೆಲ್ ಹತ್ತಿರ ನಿಂತಿದ್ದ ಸೈಯದ ಶಾಕೇರ ತಂದೆ ಸೈಯದ ಜಿಲಾನಿ ಸಾ: ಪರ್ತಾಪೂರ ರವರು ಗಾಯಗೊಂಡ ಇಬ್ಬರಿಗೂ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬಸವಕಲ್ಯಾಣ ಸರ್ಕಾರಿ ಆಸ್ಪತ್ರಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

 

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 42/2021, ಕಲಂ. 279, 338 ಐಪಿಸಿ :-

ದಿನಾಂಕ 22-04-2021 ರಂದು ಪಿರ್ಯಾದಿ ಶಿವಕುಮಾರ ತಂದೆ ವಿಠಲರಾವ ವಳಸಂಗೆ ವಯ: 41 ವರ್ಷ, ಜಾತಿ: ಕುರುಬ, ಸಾ: ಅಂಬೆಸಾಂಗವಿ, ತಾ: ಭಾಲ್ಕಿ, ಸದ್ಯ: ಕೆ.ಇ.ಬಿ ವಸತಿ ಗೃಹ ಹುಮನಾಬಾದ ರವರು ತನ್ನ ಕರ್ತವ್ಯವನ್ನು ಮುಗಿಸಿಕೊಂಡು ಮನೆಗೆ ಹೋಗಲು ಹುಮನಾಬಾದ ಕೆ..ಬಿ ಕಛೇರಿಯ ಮುಂದೆ ನಿಂತ್ತುಕೊಂಡಾಗ ಫಿರ್ಯಾದಿಗೆ ಪರಿಚಯಸ್ಥರಾದ ಮಾದಣ್ಣಾ ತಂದೆ ಶಿವಲಿಂಗಪ್ಪಾ ನಿಡಗುಂದಿ ಸಾ: ಕಲ್ಲೂರ, ಸದ್ಯ: ಶಿವನಗರ ಹುಮನಾಬಾದ ರವರು ತನ್ನ ಸ್ಕೂಟಿ ಸಂ. ಕೆಎ-39/ಆರ್-0414 ನೇದರ ಮೇಲೆ ರಾಜೇಂದ್ರ ತಂದೆ ಈಶ್ವರ ಮರೂರ ಸಾ: ಕಲ್ಲೂರ, ಸದ್ಯ: ಕೆ..ಬಿ ವಸತಿ ಗೃಹ ಹುಮನಾಬಾದ ಈತನಿಗೆ ಕೂಡಿಸಿಕೊಂಡು ಕೆ..ಬಿ ಕಛೇರಿಯ ಒಳಗಿನಿಂದ ತನ್ನ ಸ್ಕೂಟಿ ಚಲಾಯಿಸಿಕೊಂಡು ಕೆ..ಬಿ ಕಛೇರಿಯ ಎದುರುಗಡೆ ಬಂದು ಎರಡು ಕಡೆ ನೋಡಿ ಕೈ ಸಂಜ್ಞೆ ಮಾಡಿಕೊಂಡು ರೋಡ ದಾಟುತ್ತಿರುವಾಗ ಹೈವೇ ರೋಡಿನ ಕಡೆಯಿಂದ ಕ್ರೂಸರ್ ಜೀಪ್ ಸಂ. ಕೆಎ-35/ಎ-5607 ನೇದರ ಚಾಲಕನಾದ ಆರೋಪಿಯು ತನ್ನ ಕ್ರೂಸರ್ ಜೀಪನ್ನು ರೋಡಿನ ಮೇಲೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಾದಣ್ಣಾ ಇವರು ಚಲಾಯಿಸುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಸ್ವಲ್ಪ ದೂರದಲ್ಲಿ ಹೋಗಿ ಗಾಯಾಳುಗಳು ತೀವ್ರವಾಗಿ ಗಾಯಗೊಂಡು ಚಿರಾಡುವುದನ್ನು ನೋಡಿ ತನ್ನ ಕ್ರೂಸರ್ ಜೀಪನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ, ನಂತರ ಫಿರ್ಯಾದಿಯು ಓಡುತ್ತ  ಹೋಗಿ ಮಾದಣ್ಣಾ ಇವರಿಗೆ ನೋಡಲಾಗಿ ಅವರ ಬಲಗಾಲ ಪಾದಕ್ಕೆ ಸಾದಾ ರಕ್ತಗಾಯ ಮತ್ತು ಎಡಗಾಲಿಗೆ ತೀವ್ರ ಗುಪ್ತಗಾಯವಾಗಿರುತ್ತದೆ, ರಾಜೇಂದ್ರ ಇವರಿಗೆ ಎಡಗಾಲಿಗೆ ತೀವ್ರ ಗುಪ್ತಗಾಯ,  ಮೂಗಿನ ಮೇಲೆ ಸಾದಾ ರಕ್ತಗಾಯವಾಗಿರುತ್ತದೆ, ನಂತರ ಇಬ್ಬರು ಗಾಯಾಳುಗಳಿಗೆ ಚಿಕಿತ್ಸೆ ಕುರಿತು 108 ಆಂಬುಲೆನ್ಸದಲ್ಲಿ ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಮೌಖಿಕ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 38/2021, ಕಲಂ. 498(), 324, 326, 504 :-

ದಿನಾಂಕ 22-04-2021 ರಂದು ಫಿರ್ಯಾದಿ ಚಂದ್ರಕಲಾ ಗಂಡ ಮಾರುತಿ ಕಾಂಬಳೆ ವಯ: 52 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಜಾಯಗಾಂವ, ಸದ್ಯ: ಭೀಮನಗರ ಕಮಲನಗರ ರವರು ತಮ್ಮ ಮನೆಯಲ್ಲಿರುವಾಗ ಗಂಡ ಮಾರುತಿ ತಂದೆ ನಾಗಪ್ಪಾ ಕಾಂಬಳೆ ಇವರು ಸರಾಯಿ ಕುಡಿದು ಬಂದು ನೀನು ಅಡುಗೆ ಯಾಕೆ ಮಾಡಿಲ್ಲಾ ಅಂತಾ ಬೈದು ಕೈಯಲ್ಲಿ ಫುಕಣಿ ಹಿಡಿದುಕೊಂಡು ಬಂದು ಫಿರ್ಯಾದಿಯ ಕೂದಲು ಹಿಡಿದು ಎಳೆದುಕೊಂಡು ಮನೆಯ ಮುಂದೆ ರೋಡಿಗೆ ತಂದು ಎಡಗೈ ಮೊಳಕೈ ಕೆಳಗೆ ಹೊಡೆದು ಕೈ ಮುರಿದು ಹಾಕಿದ್ದು, ಫೂಕಣಿಯಿಂದ ತಲೆಯ ಎಡಭಾಗಕ್ಕೆ ಹಿಂಬದಿಯಲ್ಲಿ ಹೊಡೆದು ರಕ್ತಗಾಯ ಪಡಿಸಿರುತ್ತಾನೆ, ಕೈಯಿಂದ ಮುಷ್ಠಿ ಮಾಡಿ ಬಾಯಿ ಮೇಲೆ ಹೊಡೆದು ಕೆಳತುಟಿಗೆ ರಕ್ತಗಾಯ ಪಡಿಸಿರುತ್ತಾನೆ, ಸದರಿ ಘಟನೆ ಮಗ ನಂದಲಾಲ ತಂದೆ ಮಾರುತಿ ಕಾಂಬಳೆ ವಯ 17 ವರ್ಷ ಇತನು ಹಾಗು ಉಮಾಕಾಂತ ಗಾಯಕವಾಡ ವಯ: 70 ವರ್ಷ, ರವಿ ಗಾಯಕವಾಡಿ ವಯ: 60 ವರ್ಷ, ಅಮರ ವಾಖೇಡೆ ಇವರು ನೋಡಿ ಬಿಡಿಸಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.