Police Bhavan Kalaburagi

Police Bhavan Kalaburagi

Tuesday, February 2, 2021

BIDAR DISTRICT DAILY CRIME UPDATE 02-02-2021

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 02-02-2021

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 10/2021 ಕಲಂ 379 ಐಪಿಸಿ :-

ದಿನಾಂಕ 01/02/2021 ರಂದು 2030 ಗಂಟೆಗೆ ಫಿರ್ಯಾದಿ ಕಾಳಿದಾಸ ತಂದೆ ಬಾಬುರಾವ ಸಂಭಾಜಿ ವಯ:36 ವರ್ಷ ಜಾತಿ:ಎಸ್.ಟಿ.ಗೊಂಡ ಉ:ಸಹ ಶಿಕ್ಷಕರು ಸಾ/ಕುರುಬಖೇಳಗಿ ತಾ/ಭಾಲ್ಕಿ ಸಧ್ಯ ಶಿವನಗರ(ದ) ಬೀದರ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ  ಫಿರ್ಯಾದಿಯು 2019 ನೇ ಸಾಲಿನಲ್ಲಿ  ಒಂದು ಸಿಲ್ವರ ಬಣ್ಣದ ಒನ ಪ್ಲಸ್ 7 ಟಿ ಮೊಬೈಲ  ಖರೀದಿಸಿದ್ದು ಇರುತ್ತದೆ. ಅದರ ಐ.ಎಮ್.ಇ. ಐ. ಸಂಖ್ಯೆ. 868539048942930  ಮತ್ತು 868539048942922. ಇರುತ್ತದೆ. ಅದರ ಅ.ಕಿ. 37999/- ರೂ. ಆಗಿರುತ್ತದೆ. ದಿನಾಂಕ 17/01/2021  ರಂದು ಸಾಯಂಕಾಲ 9 ಪಿ.ಎಮ್. ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಅಳಿಯ ಲೋಕೇಶ ತಂದೆ ಶರಣಪ್ಪ ಸಾ/ಕನಕಟ್ಟಾ ಇಬ್ಬರೂ  ಕೂಡಿಕೊಂಡು ಬೀದರ ಶೀವನಗರದಲ್ಲಿ ಪಾಪನಾಶ ಗೇಟ  ಕಡೆಯಿಂದ  ನಮ್ಮ ಮನೆಯ ಕಡೆಗೆ ನಡೆದುಕೊಂಡು ಹೋಗುವಾಗ  ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ ಹತ್ತಿರ  ಮೊಟರ ಸೈಕಲ ನಿಲ್ಲಿಸಿದಾಗ ಹಿಂದಿನಿಂದ ಒಬ್ಬ ವ್ಯಕ್ತಿ ಬಂದು  ನನ್ನ ಮೊಟರ ಸೈಕಲ ಮೇಲೆ ಇಟ್ಟಿದ್ದ ಮೊಬೈಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಹಳ್ಳಿಖೇಡ ಪೊಲೀಸ್ ಠಾಣೆ ಯು.ಡಿ.ಆರ್. ಸಂಖ್ಯೆ 02/2021 ಕಲಂ 174 ಸಿಆರ್.ಪಿ.ಸಿ. :-

ದಿನಾಂಕ: 01/02/2021 ರಂದು ಮುಂಜಾನೆ 1100 ಗಂಟೆಗೆ ಬೀದರ ಸರಕಾರಿ ಆಸ್ಪತ್ರೆಯಿಂದ ಮಾಹಿತಿ ಮೇರೆಗೆ   ಸುಂದರ ಎ.ಎಸ್.ಐ ಜೊತೆಯಲ್ಲಿ ಸಿ.ಹೆಚ್.ಸಿ-838 ಮತ್ತು ಸಿಪಿಸಿ-1330 ರವರನ್ನು ಜೊತೆಯಲ್ಲಿ ಕರೆದುಕೊಂಡು ಆಸ್ಪತ್ರೆಗೆ ಭೇಟಿ ನೀಡಿ   ಮೃತದೇಹ ಪರಿಶೀಲಿಸಿ ಅಲ್ಲೆ ಆಸ್ಪತ್ರೆಯಲ್ಲಿ ಹಾಜರಿದ್ದ ಮೃತ ಶಂಕರ ತಂದೆ ಕಲ್ಲಪ್ಪಾ ಬ್ಯಾಲಹಳ್ಳಿ ಸಾ: ಮಲ್ಕಾಪೂರವಾಡಿ ರವರ ಹೆಂಡತಿಯಾದ ಶ್ರೀಮತಿ ಲಕ್ಷ್ಮೀಬಾಯಿ ಬ್ಯಾಲಹಳ್ಳಿ ರವರ ಮೌಖಿಕ ಹೇಳಿಕೆ ಪಡೆದುಕೊಂಡಿದರ ಸಾರಾಂಶವೆನೆಂದ್ದರೆ, ಇವರ ಗಂಡನಾದ ಶಂಕರ ತಂದೆ ಕಲ್ಲಪ್ಪಾ ಬ್ಯಾಲಹಳ್ಳಿ ವಯ: 35 ವರ್ಷ ಇವರು ಕೂಲಿ ಕೆಲಸ ಮಾಡಿಕೊಂಡು ಇದ್ದರು,  ಈಗ 2 ವರ್ಷಗಳಿಂದ   ವೈಜಿನಾಥ ತಂದೆ ಚನ್ನಪ್ಪಾ ಪಾಟೀಲ ರವರ ಹೊಲದಲ್ಲಿ ಕೂಲಿ ಕೆಲಸ ಮಾಡಿಕೊಂಡು ಇದ್ದರು. ಶಂಕರ ಇವರು ಸರಾಯಿ ಕುಡಿಯುವ ಚಟದವರಿದ್ದು, ಆಗಾಗ ಸರಾಯಿ ಕುಡಿದು ಬಂದು ನನ್ನ ಜೊತೆ ಜಗಳ ಮಾಡಿ ಹೊಡೆಬಡೆ ಮಾಡುತ್ತಿದ್ದರು. ದಿನಾಂಕ: 31/01/2021 ರಂದು ಸಾಯಂಕಾಲ 4:00 ಗಂಟೆ ಸುಮಾರಿಗೆ ಫಿರ್ಯಾದಿಯು ಸಂಗೋಳಗಿ ಗ್ರಾಮದಲ್ಲಿದ್ದಾಗ  ಶಂಕರ ಇವರು ಮಧ್ಯಾಹ್ನ 1:00 ಗಂಟೆ ಸುಮಾರಿಗೆ ನಮ್ಮೂರ ವೈಜಿನಾಥ ಪಾಟೀಲ ರವರ ಹೊಲದಲ್ಲಿ ಬೆಳೆಗೆ ಹೊಡೆಯುವ ಕ್ರಿಮಿನಾಶಕ ಔಷದ ಸೇವನೆ ಮಾಡಿದರಿಂದ ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ  ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 01/02/2021 ರಂದು ಮುಂಜಾನೆ 9:50 ಗಂಟೆ ಸುಮಾರಿಗೆ ಬೀದರ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಯು.ಡಿ.ಆರ್. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.