ಹುಡುಗ
ಕಾಣೆಯಾದ ಪ್ರಕರಣ :
ಅಶೋಕ ನಗರ ಠಾಣೆ : ದಿನಾಂಕ:12.12.2017
ರಂದು ರಾತ್ರಿ 09:00 ಗಂಟೆ ಸುಮಾರಿಗೆ ನಾನು, ನನ್ನ ಗಂಡ ಮತ್ತು ನನ್ನ ಮಗ ನಾಗಸೇನ್ ಎಲ್ಲರೂ ಮನೆಯಲ್ಲಿದ್ದಾಗ,
ಮಗನು ಹೊರಗಡೆ ಅಂಗಡಿಗೆ ಹೋಗಿ ಬರುತ್ತೇನೆ ಅಂತ ಹೇಳಿ ಮನೆಯಿಂದ ಹೋಗಿರುತ್ತಾನೆ.
ನಂತರ ನಾವು ರಾತ್ರಿ 09:30 ಗಂಟೆಯ ವರೆಗೆ ದಾರಿ ನೋಡಿ ಮಗನು ಬರದೆ ಇದ್ದಾಗ ಅವನ ಮೊಬೈಲ್ ನಂ.
9972860036 ಮತ್ತು 8660177036 ನೇದ್ದವುಗಳಿಗೆ ಕರೆಮಾಡಿದಾಗ ಎರಡು ನಂಬರಗಳು ಸ್ವೀಚ್ ಆಫ್
ಆಗಿರುತ್ತವೆ. ನಂತರ ನಾನು ನನ್ನ ಗಂಡ ತುಕಾರಾಮ ಇಬ್ಬರು ಕೂಡಿ ಎಲ್ಲಾ ಕಡೆಗೆ ಹುಡುಕಾಡಿದರು ನಮ್ಮ
ಮಗನು ಪತ್ತೆಯಾಗಿರುವುದಿಲ್ಲ. ನಾವು ಇಲ್ಲಿಯ ವರೆಗೆ ನಮ್ಮ ಎಲ್ಲಾ ಸಂಬಂಧಿಕರಲ್ಲಿ ಮತ್ತು ಅವನ
ಸ್ನೇಹಿತರಲ್ಲಿ ವಿಚಾರಿಸಲಾಗಿ ನಮ್ಮ ಮಗನ ಬಗ್ಗೆ ಯಾವುದೇ ಸುಳಿವು ಸಿಕ್ಕಿರುವುದಿಲ್ಲ. ನಮ್ಮ ಮಗ
ನಾಗಸೇನ್ ಇತನು ಮನೆಯಿಂದ ಹೋಗುವಾಗ ನೀಲಿ ಕಲರ ಲೈನಿಂಗ್ ಶರ್ಟ ಮತ್ತು ಕಪ್ಪು ಬಣ್ಣದ ಪ್ಯಾಂಟ
ಧರಿಸಿರುತ್ತಾನೆ. ನನ್ನ ಮಗನು ಸದೃಡ ಮೈ ಕಟ್ಟು, ಕೆಂಪು ಮೈ ಬಣ್ಣ
ಹೊಂದಿದ್ದು, ಕನ್ನಡ ಮತ್ತು ಹಿಂದಿ ಭಾಷೆಗಳನ್ನು ಮಾತನಾಡುತ್ತಾನೆ.
ಕಾರಣ ದಿನಾಂಕ:12.12.2017 ರಂದು ಮನೆ ಬಿಟ್ಟು ಹೋಗಿ ಇಲ್ಲಿಯ ವರೆಗೆ ಮರಳಿ ಮನೆಗೆ ಬಂದಿರುವುದಿಲ್ಲಾ
ಅಂತಾ ಶ್ರೀಮತಿ ಸರೋಜಾ ಗಂಡ ತುಕಾರಾಮ ವರ್ಮಾ ಸಾ||
ಅರುಣ ಕಿಣ್ಣಿ ವಕೀಲರು ಇವರ ಮನೆಯಲ್ಲಿ ಬಾಡಿಗೆ ಸಿ.ಐ.ಬಿ. ಕಾಲೋನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು
ಪ್ರಕರಣ :
ಮಾಡಬೂಳ ಠಾಣೆ : ಶ್ರೀಮತಿ ಶಾಂತಬಾಯಿ ಗಂಡ ಮಲ್ಲಿಕಾರ್ಜುನ ಶಿವಗೋಳೆ ಸಾ:ಹೊಸ ಹೆಬ್ಬಾಳ ತಾ:ಚಿತ್ತಾಪೂರ ರವರು ದಿನಾಂಕ:-08/12/2017 ರಂದು ರಾತ್ರಿ 8.030 ಪಿ.ಎಮ್. ಸುಮಾರಿಗೆ ನಾನು ಮನೆಯಲ್ಲಿ ಒಬ್ಬಳೆ ಊಟ ಮಾಡಿಕೊಂಡು ಮನೆಯ ಒಂದು ಕೋಣೆಗೆ ಭೀಗ
ಹಾಕಿ ಅದಕ್ಕೆ ಹೊಂದಿಕೊಂಡಿರುವ ಕೋಣೆಯಲ್ಲಿ ನಾನು ಹೋಗಿ ಮಲಗಿಕೊಂಡೇನು. ಎಂದಿನಂತೆ ಬೆಳ್ಳಿಗೆ 6:00 ಗಂಟೆ ಸುಮಾರಿಗೆ ಕೋಣೆಯಿಂದ ಎದ್ದು ಬೀಗ
ಹಾಕಿದ ಕೋಣೆಯ ಹತ್ತಿರ ಹೋಗಿ ನೋಡಲು ಕೋಣೆಯ ಬಾಗೀಲು ತೆರೆದಿದ್ದು. ಕೋಣೆಯ ಒಳಗಡೆ ಹೋಗಿ ನೋಡಲು ಅಲಮಾರಿ
ತೇರಿದ್ದಿದ್ದು ಅಲಮಾರಿಯಲಿಟ್ಟ ಎಲ್ಲ ಬಟ್ಟೆಗಳನ್ನು ಚಿಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ.ಇದನ್ನು
ಕಂಡು ಗಾಬರಿಯಾಗಿ ನಾನು ನಮ್ಮ ಮನೆಯ ಅಕ್ಕ ಪಕ್ಕದಲ್ಲಿ ವಾಸವಾಗಿರುವ 1] ಬಸಮ್ಮ ಗಂಡ ವೈಜನಾಥ ಮೆಂಚಾನೊರ 2] ಸಿದ್ದಮ್ಮ ಗಂಡ ರಾಮಲಿಂಗ ಇವರ ಮನೆಗೆ
ಓಡಿ ಹೋಗಿ ವಿಷಯ ತಿಳಿಸಿ ಇವರಿಬ್ಬರಿಗೆ ಕರೆದುಕೊಂಡು
ನನ್ನ ಮನೆಯ ಒಳಗಡೆ ಹೋಗಿ ಅಲಮಾರಿಯನ್ನು ಪರಿಶೀಲಿಸಿ ನೋಡಲಾಗಿ ಅಲಮಾರಿಯ ಲಾಕರನಲ್ಲಿಟ್ಟ ಈ
ಕೆಳಕಂಡ ನಮೂದು ಮಾಡಿದ ಬಂಗಾರ ಮತ್ತು ಬೆಳ್ಳಿ ಆಭರಣ
ಹಾಗೂ ನಗದು ಹಣ ಹೀಗೆ ಒಟ್ಟು ಅ:ಕಿ:18500/-
ರೂ ಬೆಲೆಬಾಳುವ ಬಂಗಾರ ಮತ್ತು ಬೆಳ್ಳಿ ಆಭರಣಗಳು ಹಾಗೂ ನಗದು ಹಣ ಇರಲಿಲ್ಲ ದಿನಾಂಕ:08/12/2017 ರಂದು ರಾತ್ರಿ 8.30 ಪಿ.ಎಮ್ ದಿಂದ ದಿನಾಂಕ:09/12/2017 ರಂದು ಬೆಳಿಗ್ಗೆ 6.00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು
ನನ್ನ ಮನೆಯ ಕೋಣೆಯ ಬಾಗಿಲ ಕೀಲಿ ಮುರಿದು ಒಳಗಡೆ ಹೋಗಿ ಅಲಮಾರಿಯ ಲಾಕರನಲ್ಲಿಟ್ಟ ಬಂಗಾರ ಮತ್ತು ಬೆಳ್ಳಿ
ಆಭರಣಗಳು ಹಾಗೂ ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ
ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಶಾರುಖ
ತಂದೆ ಮೌಲಾಸಾಬ @ ಮೌಲಾಶೇಖ ಶೇಖ ಸಾ: ಮದಿನಾ ಕಾಲೋನಿ ಕಲಬುರಗಿ ರವರು ಈ ಹಿಂದೆ ಲಾಲಗೇರಿ ಬಡಾವಣೆಯಲ್ಲಿ
ವಾಸವಾಗಿದ್ದು ಈಗ ಕೆಲವು ದಿವಸಗಳಿಂದ ನಾವು ಮದಿನಾ ಕಾಲೋನಿಗೆ ಬಂದಿದ್ದು ಇರುತ್ತದೆ. ಲಾಲಗೇರಿ
ಬಡಾವಣೆಯಲ್ಲಿ ಇರುವ ಸಮಯದಲ್ಲಿ ಲಾಲಗೇರಿ ಬಡಾವಣೆಯಲ್ಲಿರುವ ನಾನಾ ಹಜರತ ದರ್ಗಾದ ಪ್ರತಿ ವರ್ಷ
ದೀಪ (ಚಿರಾಗ) ಕಾರ್ಯಕ್ರಮ ನಡೆಯುತ್ತಿದ್ದು. ಅದರಂತೆ ನಿನ್ನೆ ದಿನಾಂಕ 15.12.2017 ರಂದು ರಾತ್ರಿ 11:00 ಗಂಟೆಯ ಸುಮಾರಿಗೆ ನಾನಾ ಹರಜತ ದರ್ಗಾದ
ದೀಪ ಇದ್ದ ಪ್ರಯುಕ್ತ ಸದರಿ ದೀಪದ ಕಾರ್ಯಕ್ರಮದಲ್ಲಿ ಭಾಗ ವಹಿಸುವ ಸಂಬಂದ ನಾನು ನನ್ನ ತಮ್ಮ
ಸೊಹೇಲ ಕೂಡಿಕೊಂಡು ದರ್ಗಾಕ್ಕೆ ಹೋಗಿದ್ದು ಮೇರವಣಿಗೆ ಕಾಲದಲ್ಲಿ ಡ್ಯಾನ್ಸ ಮಾಡುತ್ತಿದ್ದು. ಇಂದು
ದಿನಾಂಕ 16.12.2017 ರಂದು ಬೆಳ್ಳಿಗ್ಗೆ 00:30 ಗಂಟೆಯ ಸುಮಾರಿಗೆ ಹರಜತ ದರ್ಗಾದ ದೀಪ ನಾನಾ ಚೌಕ ಹತ್ತಿರ ಬಂದಿದ್ದು, ಆಗ ನನ್ನ ತಮ್ಮ ಸೊಹೇಲ ಇತನು ಡ್ಯಾನ್ಸ ಮಾಡುತ್ತಿದ್ದ ಕಾಲಕ್ಕೆ ಸದರಿ ಬಡವಾಣೆಯ ಮಹೀಬ
ತಂದೆ ಗಫೂರ ಇತನ ಕಾಲು ತುಳಿಸಿದ್ದು ಆಗ ಸದರಿ ಮಹೀಬ ಇತನು ನನ್ನ ತಮ್ಮನಿಗೆ ಎ ರಂಡಿ ಮಗನೆ ನೀನು
ನನ್ನ ಕಾಲು ತುಳಿಯುತ್ತಿ ಅಂತ ಬೈಯುತ್ತಿದ್ದು ಆಗ ನಾನು ಸದರಿ ಮಹೀಬ ಇತನಿಗೆ ಡ್ಯಾನ್ಸ ಮಾಡುವ
ಕಾಲಕ್ಕೆ ಆಕಸ್ಮಿಕವಾಗಿ ಕಾಲು ತಗುಲಿದೆ ಅದಕ್ಕೆ ಏಕೆ ಬೈಯುತ್ತಿ ಅಂತ ಕೇಳಿದ್ದು ಆಗ ಅಲ್ಲೆ ಇದ್ದ
ಅದೆ ಬಡಾವಣೆಯ 1. ಅಖೀಲ ಬಾಗವಾನ, 2. ಮೂನಿರ
ತಂದೆ ಅಬ್ದಲ ರಸೀದ 3. ಮುಜ್ಜಿದ ತಂದೆ ಅಬ್ದುಲ ರಸೀದ 4. ಸದ್ದಾಂ ತಂದೆ ಅಬ್ದುಲ ರಸೀದ 5. ಸಾಧಿಕ 6. ಕಲಿಂ ತಂದೆ ಅಬ್ದುಲ ರಹಿಂಸಾಬ, 7. ರಬ್ಬು ತಂದೆ ಅಬ್ದುಲ
ರಸೀದ ಮತ್ತು ಅವರ ಸಂಗಡ 8. ಮೊಹೀಬ ತಂದೆ ಗಫೂರ ಕೂಡಿಕೊಂಡು ಬಂದವರೆ ಏ ರಂಡಿ ಮಕ್ಕಳೆ ನಿಮ್ಮ ಸೊಕ್ಕು ಬಹಳ ಆಗಿದೆ
ನೀವು ಇಲ್ಲಿಂದ ಬೇರೆ ಕಡೆಗೆ ಹೋದರು ಕೂಡ ಮತ್ತೆ ನಮ್ಮ ಬಡಾವಣೆ ಬಂದು ಸೊಕ್ಕು ತೋರಿಸುತ್ತಿರು
ಸೂಳಿ ಮಕ್ಕಳೆ ಅಂತ ಬೈಯುತ್ತಾ ಎಲ್ಲರು ಕೂಡಿಕೊಂಡು ನನಗೆ ಮತ್ತು ನನ್ನ ತಮ್ಮನಿಗೆ ಹಿಡಿದುಕೊಂಡು
ನೇಲದ ಮೇಲೆ ಹಾಕಿ ತಮ್ಮ ಕೈಗಳಿಂದ ಮತ್ತು ಕಾಲಿನಿಂದ ನನ್ನ ಎರಡು ಮಳಕಾಲ ಮೇಲೆ ಹೊಟ್ಟೆಗೆ,
ಟೊಂಕಿಗೆ, ಗುಪ್ತಗಾಯ ಪಡಿಸಿದ್ದು ಮತ್ತು ನನ್ನ ಎಡಗೈ
ಹೆಬ್ಬೆರಳಿಗೆ ರಕ್ತಗಾಯ ಪಡಿಸಿದ್ದು ಇರುತ್ತದೆ. ನನ್ನ ತಮ್ಮನಿಗೆ ಬಲ ಕಪಾಳ ಮೇಲೆ ಗುಪ್ತಗಾಯ
ಪಡಿಸಿದ್ದು ಮತ್ತು ದೇಹದ ಮೇಲೆ ಅಲಲ್ಲಿ ಗುಪ್ತಗಾಯ ಪಡಿಸಿದ್ದು ಇರುತ್ತದೆ. ಅಂಥಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ
ಪ್ರಕರಣ :
ಮಾಹಾಗಾಂವ ಠಾಣೆ : ದಿನಾಂಕ: 14/12/17 ರಂದು ಶ್ರೀ ಶೇಖ ಖಾಜಾಮಿಯ್ಯ ತಂದೆ ಶೇಖ ಮೌಲಾಮಿಯ್ಯ ಶೇಖ ಸಾ: ಬಿಕ್ಲಿ ಮಂಡಲ್|| ಮಾಕಲೂರ ಜಿ|| ನಿಜಾಮಬಾದ (ತೆಲಂಗಾಣಾ) ಮತ್ತು ಮಲಬಿಂದ್ರ ಸಿಂಗ್ ಇಬ್ಬರು ಕೂಡಿಕೊಂಡು ಅಗ್ರಿಕಲ್ಚರ
ಆರವೆಷ್ಟರ ಮಶಿನ್ (ರಾಶಿ ಮಾಡುವ ಮಶಿನ್) ಟಿ.ಎಸ್.- 16 ಇಇ-1258 ಮತ್ತು ಟಿ.ಎಸ್.- 16 ಇಕೆ-4573 ನೇದ್ದವುಗಳನ್ನು ಹುಮನಾಬಾದ ಕಡೆಯಿಂದ ಕಲಬುರಗಿ ಕಡೆಗೆ ಬರುತ್ತಿದ್ದಾಗ ಕಗ್ಗನಮಡ್ಡಿ ಕ್ರಾಸ ಹತ್ತಿರ
ಎದುರುಗಡೆಯಿಂದ ಅಪಾದಿತನು ತನ್ನ ಟ್ಯಾಂಕರ ನಂ ಎಂ.ಹೆಚ್- 45 ಟಿ-6210 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು
ಬಂದು ಡಿಕ್ಕಿ ಹೊಡೆದ ಪ್ರಯುಕ್ತ ಎರಡು ವಾಹನಗಳು ಜಖಂಗೊಂಡಿದ್ದು ಅಲ್ಲದೇ ಮಲಬಿಂದ್ರ ಸಿಂಗ್ ಈತನಿಗೆ
ಗಾಯಗೋಳಿಸಿ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.