Police Bhavan Kalaburagi

Police Bhavan Kalaburagi

Wednesday, February 26, 2020

BIDAR DISTRICT DAILY CRIME UPDATE 26-02-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 26-02-2020

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 06/2020, ಕಲಂ. 279, 304 (ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 25-02-2020 ರಂದು ಫಿರ್ಯಾದಿ ಸುರೇಖಾ ಗಂಶೇಷರಾವ ಗಾಯಕವಾಡ ವಯ: 30 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಗುರುವಾಡಿ (ಮಹಾರಾಷ್ಟ್ರ), ಸದ್ಯ: ಪರತಾಪುರ ಗ್ರಾಮ, ತಾ: ಬಸವಕಲ್ಯಾಣ ರವರು ಕಬ್ಬು ಸುಲಿಯುವ ಸಲುವಾಗಿ ಪರತಾಪುರ ಶಿವಾರದ ಹೋಲಕ್ಕೆ ಹೋಗುವಾಗ ಗಂಡ ಕೂಡ ತಳಬೋಗ ಗ್ರಾಮದ ಧನ್ನವಾನ ತಂದೆ ವೆಂಕಟರಾವ ಬನಸೂಡೆ ಇವರ ಟ್ರಾಕ್ಟರ ಮೇಲೆ ಕೆಂಪು ಮಣ್ಣು ತುಂಬುಕೊಂಡು ಬರಲು ತಮ್ಮೂರ ಆಯುಬ ತಂದೆ ಖಾಜಾಮೀಯ್ಯಾ ಪಠಾಣ ಇಬ್ಬರು ಮೊರಖಂಡಿ ಗ್ರಾಮಕ್ಕೆ ಹೋಗಿ ಟ್ರಾಕ್ಟರದಲ್ಲಿ ಕೆಂಪು ಮಣ್ಣು ತುಂಬಿ ಟ್ರಾಕ್ಟರ ಹಿಂದೆ ನಿಂತಾಗ ಟ್ರಾಕ್ಟರ ಚಾಲಕ ಆರೋಪಿ ಧನವಾನ ಬನಸೂಡೆ ಇತನು ಟ್ರಾಕ್ಟರನ್ನು ಅತೀವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿ ಒಮ್ಮೇಲೆ ಟ್ರಾಕ್ಟರ ಮುಂದಕ್ಕೆ ತೆಗೆದು ನಿಯಂತ್ರಣ ತಪ್ಪಿ ಹಿಂದೆ ಬಂದಾಗ ಟ್ರಾಕ್ಟರ ಹಿಂದೆ ನಿಂತ ಶೇಷರಾವ ಗಾಯಕವಾಡ ಇತನಿಗೆ ಟ್ರಾಕ್ಟರ ಟ್ರಾಲಿ ತಾಗಿ ಗಾಯವಾಗಿ ಕೆಳಗೆ ಬಿದ್ದಾಗ ಕೆಂಪು ಮಣ್ಣು ಆತನ ಮೇಲೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ಆರೋಪಿಯು ತನ್ನ ಟ್ರಾಕ್ಟರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಗದಲ್ ಪೊಲೀಸ್ ಠಾಣೆ ಅಪರಾಧ ಸಂ. 17/2020, ಕಲಂ. 279, 337, 338 ಐಪಿಸಿ :-
ದಿನಾಂಕ 25-02-2020 ರಂದು ಫಿರ್ಯಾದಿ ಅಕ್ಷಯಕುಮಾರ ತಂದೆ ಅಶೋಕ ಕಮಠಾಣೆ ವಯ: 19 ವರ್ಷ, ಜಾತಿ: ಕ್ರಿಶ್ಚನ, ಸಾ: ಸಿಂದೋಲ್ ಗ್ರಾಮ, ತಾ: ಬೀದರ ರವರು ತಮ್ಮೂರಿನ ಗೆಳೆಯರಾದ ಸಚಿನ ಹಾಗು ಶಾಮರಾವ ಮೂವರು ಶಾಮರಾವ ರವರ ಮೋಟಾರ ಸೈಕಲ್ ನಂ. ಕೆಎ-38/ಡಬ್ಲೂ-6415 ನೇದ್ದರ ಮೇಲೆ ಸಿಂದೋಲ್ ಗ್ರಾಮದಿಂದ ಬಿಟ್ಟು ಮೀನಕೇರಾ ಕ್ರಾಸ ಬಗದಲ ಮಾರ್ಗಾವಾಗಿ ಮನ್ನಾಎಖೇಳ್ಳಿ - ಬೀದರ ರೋಡ  ಮುಖಾಂತರ ಬರುತ್ತಿರುವಾಗ ಖಾಸೆಂಪುರ (ಪಿ) ಕ್ರಾಸ ಹತ್ತಿರ ಸದರಿ ವಾಹನವನ್ನು ಸಚಿನ ಈತನು ಅತಿವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸುತ್ತಿದ್ದು ಹಾಗೂ ಎದುರಿನಿಂದ ಅಂದರೆ ಕಮಠಾಣಾ ಕಡೆಯಿಂದ ಮತ್ತೊಬ್ಬ ಮೊಟಾರ ಸೈಕಲ್ ನಂ. ಕೆಎ-39/ಎಚ್-6157 ನೇದರ ಚಾಲಕನಾದ ಆರೋಪಿ ಅಸ್ಲಂ  ತಂದೆ ಸಾಬೇರಮಿಯ್ಯಾ ಉಪಾಶಾ ವಯ: 25 ವರ್ಷ, ಜಾತಿ: ಮುಸ್ಲಿಂ, ಸಾ: ಕಮಠಾಣಾ ಇತನು ಸಹ ತನ್ನ ಮೊಟಾರ ಸೈಕಲ್ ಅತಿವೇಗ ಹಾಗು ನಿಸ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಇಬ್ಬರು ಮೊಟಾರ ಸೈಕಲ್ ಚಾಲಕರು ಒಬ್ಬರಿಗೊಬ್ಬರು ಕಟ್ ಹೊಡೆಯಲು ಹೋಗಿ ರೋಡಿನ ಮಧ್ಯದಲ್ಲಿ ಎರಡು ವಾಹನ ಮುಖಾ ಮುಖಿಯಾಗಿ ಡಿಕ್ಕಿಯಾಗಿದ್ದು, ಸದರಿ ಅಪಘಾತದಿಂದ ಫಿರ್ಯಾದಿಯ ಹಣೆಗೆ ರಕ್ತಗಾಯ, ತುಟಿಗೆ ಬಾಯಿಗೆ ಸಾದಾ ರಕ್ತ ಗಾಯವಾಗಿರುತ್ತದೆ, ಆರೋಪಿ ಸಚೀನ ಈತನಿಗೆ ನೋಡಲು ಎಡ ಭುಜಕ್ಕೆ ತರಚಿದ ಗಾಯ, ಬಲ ತೋಡೆಗೆ ಗುಪ್ತಗಾಯವಾಗಿರುತ್ತದೆ ಮತ್ತು ಶಾಮರಾವ ಈತನಿಗೆ ಯಾವುದೇ ಗಾಯಗಳಾಗಿರುವದಿಲ್ಲಾ ಹಾಗೂ ಇನ್ನೊಬ್ಬ ಆರೋಪಿಯ ಬಲಗಣ್ಣಿಗೆ ಉಬ್ಬಿದ ಗಾಯ, ಬಲಗಾಲು ಕಪಗಂಡಕ್ಕೆ ಭಾರಿ ರಕ್ತಗಾಯವಾಗಿರುತ್ತದೆ, ಎಡ ಹಣೆಗೆ ರಕ್ತ ಗಾಯವಾಗಿರುತ್ತದೆ, ನಂತರ ಅಸ್ಲಂ ಈತನಿಗೆ ಅವರ ತಂದೆಯಾದ ಸಾಬೇರಮಿಯ್ಯಾ ರವರು ಚಿಕಿತ್ಸೆ ಕುರಿತು ಬೇರೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬೀದರ ಜಿಲ್ಲಾ ಆಸ್ಪತ್ರೆಗೆ ಹೊಗಿರುತ್ತಾರೆ, ನಂತರ ಫಿರ್ಯಾದಿಗೆ ದಾರಿ ಹೊಕರಾದ ಜಗನ್ನಾಥ ಪಾಟೀಲ್ ಸಿರಕಟನಳ್ಳಿ ರವರು ತಮ್ಮ ಕಾರಿನಲ್ಲಿ ಹಾಕಿಕೊಂಡು ಬೀದರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 30/2020, ಕಲಂ. 379, 511 ಐಪಿಸಿ :-
ದಿನಾಂಕ 24-02-2022 ರಂದು 2230 ಗಂಟೆಯಿಂದ ದಿನಾಂಕ 25-02-2020 ರಂದು 0800 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ನೌಬಾದ ಬಸವೇಶ್ವರ ವ್ರತ್ತದ ಹತ್ತಿರ ಇರುವ ಅಮನ ಕಾಂಪ್ಲೆಕ್ಸಲ್ಲಿರುವ ಕೆನರಾ ಬ್ಯಾಂಕ ಎ.ಟಿ.ಎಮ್ ಐಡಿ 0448ಇಪಿ06 ನೇದರ ಶೇಫ ಡೋರ ಮುರಿದು ಮಶಿನನಲ್ಲಿರುವ ಹಣ ಕಳ್ಳತನ ಮಾಡಲು ಪ್ರಯತ್ನ ಮಾಡಿರುತ್ತಾರೆ ಫಿರ್ಯಾದಿ ಶ್ರೀಮಂತ ತಂದೆ ನಾಗಶೆಟ್ಟಿ ವಯ: 31 ವರ್ಷ, ಜಾತಿ: ಲಿಂಗಾಯತ, ಉ: ಎ.ಟಿ.ಎಮ್ ಪ್ರಭಾರಿ, ಸಾ: ಖೇಡ, ತಾ: ಕಮಲನಗರ ರವರು ನೀಡಿದ ದೂರಿನ ಮೇರೆಗೆ ದಿನಾಂಕ 25-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲಿಸ ಠಾಣೆ ಅಪರಾಧ ಸಂ. 63/2020, ಕಲಂ. 379 ಐಪಿಸಿ :-
ದಿನಾಂಕ 19-02-2020 ರಂದು 2200 ಗಂಟೆಯಿಂದ ದಿನಾಂಕ 20-02-2020 ರಂದು 0600 ಗಂಟೆಯ ಮಧ್ಯದಲ್ಲಿ ಯಾರೋ ಕಳ್ಳರು ಫಿರ್ಯಾದಿ ಮನೋಹರ ತಂದೆ ವಾಸುರಾಮ ಆಡೆ, ವಯ: 45 ವರ್ಷ, ಜಾತಿ: ಲಂಬಾಣಿ ಸಾ: ಧಾರಜವಾಡಿ ತಾಂಡಾ ರವರ ಮನೆಯಲ್ಲಿ ಪ್ರವೇಶ ಮಾಡಿ ಯಾರೋ ಅಪರಿಚಿತ ಕಳ್ಳರು 6000/- ರೂ. ನಗದು ಹಣ, ಬಂಗಾರ ಅ.ಕಿ 15,000/- ರೂ. ಹಾಗೂ ಸ್ಯಾಮಸಂಗ ಮೊಬೈಲ ಅ.ಕಿ 2500/- ಹೀಗೆ ಒಟ್ಟು 23,500/- ರೂ. ಬೆಲೆ ಬಾಳುವುದನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 25-02-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹಳ್ಳಿಖೇಡ (ಬಿ) ಪೊಲೀಸ ಠಾಣೆ ಅಪರಾಧ ಸಂ. 23/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 25-02-2020 ರಂದು ಫಿರ್ಯಾದಿ ಮಹಾಂತೇಶ ಲಂಬಿ ಪಿ.ಎಸ್. ಹಳ್ಳಿಖೇಡ[ಬಿ] ಪೊಲೀಸ್ ಠಾಣೆ  ರವರಿಗೆ ದುಬಲಗುಂಡಿ ಗ್ರಾಮದ ಶ್ರೀ ಭವಾನಿ ಮಂದಿರದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಸೈಯದ ಜಬ್ಬಾರ ತಂದೆ ಸೈಯದ ಸಾಬ ಪಟ್ಟೇವಾಲೆ ಸಾ: ದುಬಲಗುಂಡಿ ಇತನು ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ದುಬಲಗುಂಡಿ ಗ್ರಾಮದ ಶ್ರೀ ಭವಾನಿ ಮಂದಿರದ ಹತ್ತಿರ ಸ್ವಲ್ಪ ದೂರದಲ್ಲಿ ಹೋಗಿ ಮರೆಯಾಗಿ ನಿಂತು ನೋಡಲು ಅಲ್ಲಿ ಆರೋಪಿ ಸೈಯದ ಜಬ್ಬಾರ ತಂದೆ ಸೈಯದ ಸಾಬ ಪಟ್ಟೇವಾಲೆ ಸಾ: ದುಬಲಗುಂಡಿ ಇತನು ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಡುತ್ತಿರುವ ಬಗ್ಗೆ ನೋಡಿ ಖಚಿತಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಆರೋಪಿತನ ಮೇಲೆ ದಾಳಿ ಮಾಡಲು ಮಟಕಾ ಚೀಟಿ ಬರೆಯಿಸಿಕೊಳ್ಳುತ್ತಿದ್ದ ಸಾರ್ವಜನಿಕರು ಓಡಿ ಹೋಗಿದ್ದು, ಮಟಕಾ ಬರೆದುಕೊಡುತ್ತಿದ್ದ ಸದರಿ ಆರೋಪಿಗೆ ಹಿಡಿದುಕೊಂಡು ಪಂಚರ ಸಮಕ್ಷಮ ಅವನ ಅಂಗ ಜಡ್ತಿ ಮಾಡಿ ಆತನಿಂದ 1) ನಗದು ಹಣ 780/- ರೂ., 2) 1 ಮಟಕಾ ಚೀಟಿ ಮತ್ತು 3) 1 ಪೆನ್ ಸಿಕ್ಕಿದ್ದು ಸದರಿಯವುಗಳನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 62/2020, ಕಲಂ. ಮಹಿಳೆ ಕಾಣೆ :-
ಫಿರ್ಯಾದಿ ಅಶೋಕ ತಂದೆ ಸದಾಶಿವ ನಿಂಬಾಳಕರ ವಯ: 55 ವರ್ಷ, ಜಾತಿ: ಮರಾಠಾ, ಸಾ: ಬೀರದೇವ ಗಲ್ಲಿ ಭಾಲ್ಕಿ ರವರ ಮಗಳಾದ ಮೀರಾ ಇವಳಿಗೆ ತಲಂಗಾಣಾ ರಾಜ್ಯದ ತೆರಗೋಪಾಳ ವಿಕಾರಾಬಾದ ತಾಲೂಕಿನ ರವರಾದ ಮುಕಿಂದ ರವರಿಗೆ 2017 ನೇ ಸಾಲಿನಲ್ಲಿ ಮದುವೆ ಮಾಡಿಕೊಟ್ಟಿದ್ದು, ಅವಳು 5-6 ತಿಂಗಳು ಮಾತ್ರ ಗಂಡನ ಮನೆಯಲ್ಲಿ ವಾಸವಾಗಿ ಅವಳಿಗೆ ಗಂಡನ ಜೊತೆ ಹೊಂದಾಣಿಕೆಯಾಗದೇ ಇದ್ದಕ್ಕೆ ಡೈರ್ವಸ್ ಹಾಕಿದ್ದು ಸದ್ಯ ಕಳೆದ 2 ವರ್ಷಗಳಿಂದ ಭಾಲ್ಕಿಯಲ್ಲಿ ಫಿರ್ಯಾದಿಯೊಂದಿಗೆ ವಾಸವಾಗಿರುತ್ತಾಳೆ, ಹಿಗೀರಲು ದಿನಾಂಕ 22-02-2020 ರಂದು ಫಿರ್ಯಾದಿಯವರ ಮಗ ಹರೀಶಚಂದ್ರ ಇತನು ಹೊಲದಿಂದ ಮರಳಿ ಮನೆಗೆ ಬಂದಾಗ ಮನೆಗೆ ಕೊಂಡಿ ಹಾಕಿದ್ದು ಮೀರಾ ಇವಳು ಮನೆಯಲ್ಲಿ ಕಾಣಲಿಲ್ಲಾ ಅಂತ ಮಗ ಫಿರ್ಯಾದಿಗೆ ಕರೆ ಮಾಡಿ ತಿಳಿಸಿದಾಗ ಫಿರ್ಯಾದಿಯು ಮನೆಗೆ ಬಂದು ನೋಡಲು ಮೀರಾ ಇವಳು ಮನೆಯಲ್ಲಿ ಇರಲಿಲ್ಲಾ, ಫಿರ್ಯಾದಿಯವರು ಗಾಬರಿಗೊಂಡು ಓಣಿಯಲ್ಲಿ ಸುತ್ತಮುತ್ತ ಮನೆಯವರಿಗೆ ವಿಚಾರಿಸಲಾಗಿ ಯಾವುದೆ ಮಾಹಿತಿ ಸಿಕ್ಕಿರುವದಿಲ್ಲ, ನಂತರ ಮ್ಮ ಎಲ್ಲಾ ಸಂಬಂಧಿಕರಿಗೆ ಕರೆ ಮುಖಾಂತರ ವಿಚಾರಿಸಲು ಎಲ್ಲಿಯೂ ಮಾಹಿತಿ ಸಿಕ್ಕಿರುವದಿಲ್ಲ, ಎಲ್ಲಿ ಹೋಗಿರುತ್ತಾಳೆ ಗೊತ್ತಾಗಿರುವದಿಲ್ಲ, ಅವಳು ಹುಣ್ಣೆಮೆ ಮತ್ತು ಅಮವಾಸೆ ಸಮೀಪ ಬಂದಾಗ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಳು, ಅವಳು ಮನೆಯಿಂದ ಹೋಗುವಾಗ ಅರಶಿನ ಮತ್ತು ನೀಲಿ ಮಿಶ್ರೀತ ಬಣ್ಣದ ಚುಡಿದಾರ ಬಟ್ಟೆ ಧರಿಸಿರುತ್ತಾಳೆ, ಅವಳ ಚಹರೆ ಪಟ್ಟಿ ದುಂಡು ಮುಖ, ಗೋಧಿ ಮೈಬಣ್ಣ, ದಪ್ಪ ಮೂಗು, ಸದೃಢ ಮೈಕಟ್ಟು ಎತ್ತರ 5’-4’’ ಇರುತ್ತದೆ, ಕನ್ನಡ, ಮರಾಠಿ ಹಾಗೂ ಹಿಂದಿ ಭಾಷೆ ಬಲ್ಲವಳಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 25-02-2020 ರಂದು ಪ್ರಕರಣ ದಾಖಲಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 64/2020, ಕಲಂ. 3, 7 .ಸಿ ಕಾಯ್ದೆ ಮತ್ತು 18 () ಪಿ.ಡಿ.ಎಸ್ ಕಂಟ್ರೋಲಿಂಗ್ ಆರ್ಡರ 1992 :-
ದಿನಾಂಕ 25-02-2020 ರಂದು ಫಿರ್ಯಾದಿ ಪರಮೇಶ್ವರ ಬಚ್ಚಣ್ಣಾ ಆಹಾರ ನಿರೀಕ್ಷಕರು ತಹಶೀಲ ಕಛೇರಿ ಭಾಲ್ಕಿ ರವರು ಕಛೇರಿಯಲ್ಲಿರುವಾ ಡಿ.ಎಸ್.ಪಿ ಭಾಲ್ಕಿ ರವರು ಕರೆ ಮಾಡಿ ಭಾಲ್ಕಿಯ ಹೌಸಿಂಗ ಬೋರ್ಡ ಕಾಲೋನಿಯಲ್ಲಿರುವ ಚಂದ್ರಕಾಂತ ಎಮ್ಮೆ ರವರ ಮನೆಯಲ್ಲಿ ಬಾಡಿಗೆಯಿಂದ ಇರುವ ವ್ಯಕ್ತಿ ಸರಕಾರದಿಂದ ಸಾರ್ವಜನಿಕರಿಗೆ ಮತ್ತು ವಿವಿಧ ಇಲಾಖೆಗಳಿಗೆ ಸರಬರಾಜು ಮಾಡಿರುವ ಅಕ್ಕಿಯನ್ನು ಆಕ್ರಮವಾಗಿ ದಾಸ್ತಾನು ಮಾಡಿರುತ್ತಾನೆ ಅಂತಾ ಖಚಿತ ಮಾಹಿತಿ ಬಂದಿರುತ್ತದೆ ಸ್ಥಳಕ್ಕೆ ಬಂದು ನೋಡಿ ಂಚನಾಮೆ ಮತ್ತು ವರದಿ ನೀಡಲು ತಿಳಿಸಿರುವದರಿಂದ ಇಬ್ಬರು ಪಂಚರನ್ನು ಬರಮಾಡಿಕೊಂಡು, ಮೀಲನಕುಮಾರ ಆಹಾರ ಸಿರಸ್ತೆೆದಾರರು, ಡಿ.ಎಸ್.ಪಿ ಸಾಹೇಬರು ಭಾಲ್ಕಿ, ಭಾಲ್ಕಿ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೇಕ್ಟರ ರಮೇಶಕುಮಾರ ಎಸ್. ಮೈಲೂರಕರ, ಪೊಲೀಸ್ ಸಿಬ್ಬಂದಿಯವರೊಡನೆ ಹೌಸಿಂಗ ಬೋರ್ಡ ಕಾಲೋನಿಯಲ್ಲಿರುವ ಚಂದ್ರಕಾಂತ ಎಮ್ಮೆ ರವರ ಮನೆಯಲ್ಲಿ ಬಾಡಿಗೆಯಿಂದ ಇರುವ ವ್ಯಕ್ತಿಯ ಮನೆಯ ಮೇಲೆ ದಾಳಿ ಮಾಡಿ ಅವನಿಗೆ ಹಿಡಿದುಕೊಂಡು ಅವನ ಹೆಸರು ವಿಚಾರಿಸಲು ತನ್ನ ಹೆಸರು ದೇವಿದಾಸ ತಂದೆ ವೈಜಿನಾಥರಾವ ಬಿರಾದಾರ ಸಾ: ಕೊಟಗೇರಾ ಸಧ್ಯ ಹೌಸಿಂಗ ಬೋರ್ಡ ಕಾಲೋನಿ ಭಾಲ್ಕಿ ಅಂತಾ ತಿಳಿಸಿದನು, ನಂತರ ಆತನ ಮನೆಯನ್ನು ಪರಿಶೀಲಿಸಿ ನೋಡಲು ಕೋಣೆಯಲ್ಲಿ 20 ಕೆ.ಜಿ ವುಳ್ಳ 30 ಪಾಕೇಟ, 10 ಕೆ.ಜಿ ವುಳ್ಳ 4 ಪಾಕೇಟ ಮತ್ತು 10 ಬಾಯಿ ಕಟ್ಟಿದ ಚುಂಗಡಿಗಳು ಒಂದೊಂದರಲ್ಲಿ ಅಂದಾಜು 25 ಕೆ.ಜಿ ವುಳ್ಳ ಅಕ್ಕಿ ಪಾಕೇಟ ಇದ್ದು ಇವುಗಳನ್ನು ದಾಸ್ತಾನು ಮಾಡಿದ ಬಗ್ಗೆ ಅವನಿಗೆ ಕಾಗದ ಪತ್ರಗಳು ಇದ್ದಲ್ಲಿ ಹಾಜರ ಪಡಿಸುವಂತೆ ಸೂಚಿಸಿದಾಗ ತನ್ನ ಹತ್ತಿರ ಯಾವುದೆ ಕಾಗದ ಪತ್ರಗಳು ಇರುವದಿಲ್ಲ ಅಂತಾ ತಿಳಿಸಿದನು, ಕೆಲವು ಚೀಲಗಳ ಮೇಲೆ .ಸಿ.ಡಿ.ಎಸ್ ಕರ್ನಾಟಕ ಸರ್ಕಾರ ಅಕ್ಕಿ ಉಚಿತ ಸರಬರಾಜಿಗಾಗಿ ಅಂತಾ ಬರೆದಿದ್ದು ಇರುತ್ತದೆ, ಉಳಿದ ಚೀಲಗಳು ಬೇರೆ ಬೇರೆ ಪ್ಲಾಸ್ಟೀಕ ಚೀಲಗಳಲ್ಲಿ ಹಾಕಿದ್ದು ಇರುತ್ತದೆ, ಸದರಿ ಅಕ್ಕಿ ಸರಕಾರದಿಂದ ಸಾರ್ವಜನಿಕರಿಗೆ ಹಾಗೂ ವಿವಿಧ ಇಲಾಖೆಗಳಿಗೆ ಸರಬರಾಜು ಮಾಡಿರುವ ಪಿ.ಡಿ.ಎಸ್.ಗೆ ಸಮಬಂಧಿಸಿದ ಅಕ್ಕಿ ಇದ್ದು ಅಕ್ಕಿಯನ್ನು ಹೆಚ್ಚಿನ ಬೇಲೆಗೆ ಕಾಳ ಸಂತೆಯಲ್ಲಿ ಮಾರಾಟ ಮಾಡಲು ಆಕ್ರಮವಾಗಿ ದಾಸ್ತಾನು ಮಾಡಿದ್ದು ಇರುವದರಿಂದ ಶ್ಯಾಮ ತಂದೆ ರಘುನಾಥರಾವ ಸೂರ್ಯವಂಶಿ ಸಾ: ಭಾಟಸಾಂಗವಿ ಸಧ್ಯ ಭೀಮನಗರ ಭಾಲ್ಕಿ ರವರಿಂದ ತೂಕದ ಯಂತ್ರ ತರಿಸಿ ತೂಕ ಮಾಡಿ ನೋಡಲು ಒಟ್ಟು 8 ಕ್ವೀಂಟಲ 90 ಕೇ.ಜಿ ಅಕ್ಕಿ ಇದ್ದು ಇದರ ಅ.ಕಿ 25,142 ರೂ. ಆಗುತ್ತದೆ, ನಂತರ ಸದರಿ ಆರೋಪಿ ದೇವಿದಾಸ ಇತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.