ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ :
31-05-2020
ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 42/2020 ಕಲಂ 279, 337,
304 (ಎ) ಐಪಿಸಿ ಜೊತೆ 187 ಐಎಮ್.ವಿ. ಕಾಯ್ದೆ :-
ದಿನಾಂಕ 30.05.2020 ರಂದು ಫಿರ್ಯಾದಿ ಶ್ರೀ ಕರಬಸಪ್ಪಾ ತಂದೆ ಗೋಪಾಲರಾವ ಸಿಂಧೆ, ವಯ 35
ವರ್ಷ, ಉ: ಕೂಲಿಕೆಲಸ ಸಾ: ನೌಬಾದ ಬೀದರ ಇವರು ಮತ್ತು ಗಣಪತಿ
ತಂದೆ ಶಾಮಾನಾಯಕ ರಾಠೋಡ, ವಯ 49 ವರ್ಷ, ಉ: ಕೂಲಿ ಕೆಲಸ ಸಾ: ಮೈನಳ್ಳಿ ತಾ: ನಾರಾಯಣಖೇಡ ಜಿ:
ಸಂಗಾರೆಡ್ಡಿ ಸದ್ಯ ಹೌಸಿಂಗ್ ಬೊರ್ಡ ಕಾಲೋನಿ ಪ್ರತಾಪ ನಗರ ಬೀದರ ಇಬ್ಬರೂ ಕೂಡಿಕೊಂಡು ಮೊಟಾರ
ಸೈಕಲ ನಂ. ಕೆಎ-38-ಕೆ-3659 ನೇದ್ದರ ಮೇಲೆ ಕೂಲಿ ಕೆಲಸ ಕುರಿತು ನೌಬಾದದಿಂದ ಅಲಿಯಾಬಾಕ್ಕೆ ಹೋಗಿದ್ದು ಫಿರ್ಯಾದಿ
ಮೋಟಾರ ಸೈಕಲ ಚಲಾಯಿಸುತ್ತಿದ್ದು, ಗಣಪತಿ ಹಿಂದೆ ಕುಳಿತಿದ್ದನು. ಮುಂಜಾನೆ ಸುಮಾರು 06:30
ಗಂಟೆಗೆ ನೌಬಾದ ಕೆ.ಎಸ್.ಆರ.ಪಿ ಗ್ರೌಂಡ ಅಂಬೇಡ್ಕರ ವೃತ್ತದ ಹತ್ತಿರ ಬಂದಾಗ ಎದುರುನಿಂದ ಅಂದರೆ
ಅಲಿಯಾಬಾದ ಕಡೆಯಿಂದ ನೌಬಾದ ಕಡೆಗೆ ಒಂದು ಟ್ಯಾಂಕರ ನಂ. ಎಮ್.ಎಚ್.6ಬಿಇ5835
ನೇದ್ದರ ಚಾಲಕ ಅತೀ ವೇಗ ಹಾಗು ನಿಸ್ಕಾಳಜಿತನದಿಂದ
ಚಲಾಯಿಸಿಕೊಂಡು ಬಂದು ಎದುರುನಿಂದ ಡಿಕ್ಕಿ ಮಾಡಿ ಟ್ಯಾಂಕರ ಸ್ಥಳದಲ್ಲಿಯೇ ಬಿಟ್ಟು ಓಡಿ
ಹೋಗಿರುತ್ತಾನೆ. ಪರಿಣಾಮ ಇಬ್ಬರು ಮೊಟಾರ ಸೈಕಲ ಸಮೇತ ಕೆಳಗೆ ಬಿದ್ದಾಗ ಫಿರ್ಯಾದಿಗೆ ಬಲಕಾಲ ತೊಡೆಯ
ಮೇಲೆ, ತಲೆಯಲ್ಲಿ, ಬಲಕೈ ರಟ್ಟಯ ಹತ್ತಿರ, ಬಲಕಣ್ಣಿನ ಮೇಲೆ ಗುಪ್ತಗಾಯ, ಎಡ ಮೊಳಕಾಲ ಕೆಳಗೆ
ತರಚಿದ ರಕ್ತಗಾಯವಾಗಿರುತ್ತದೆ. ಮೊಟಾರ ಸೈಕಲ ಹಿಂದೆ ಕುಳಿತ ಗಣಪತಿ ರಾಠೋಡ ಈತನ ತಲೆಯ ಹಿಂಬಾಗ
ಭಾರಿ ರಕ್ತಗುಪ್ತ ಗಾಯವಾಗಿ ಬಲಕಣ್ಣಿನ ಮೇಲೆ,
ಎಡಕಾಲೊನ ಹೆಬ್ಬೆರಳ ಹತ್ತಿರ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಅಂತಾ ನೀಡಿದ ದೂರಿನ
ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 24/2020 ಕಲಂ 32, 34 ಕೆ.ಇ. ಕಾಯ್ದೆ :-
ದಿನಾಂಕ 30-05-2020 ರಂದು 1015 ಗಂಟೆಗೆ ಮರಖಲ ಗ್ರಾಮದ ಚರ್ಚಿನ ಕಂಪೌಂಡ್ ಗೋಡೆಯ
ಮಗ್ಗಲಲ್ಲಿ ಒಬ್ಬ ಮಹಿಳೆ ತನ್ನ ಹತ್ತಿರ ಸರಾಯಿ ಬಾಟಲಗಳು ಇಟ್ಟಿಕೊಂಡು ಮಾರಾಟ ಮಾಡುತ್ತಿದ್ದಾಳೆ
ಅಂತಾ ಖಚೀತ ಬಾತ್ಮಿ ಮೇರೆಗೆ ನಾನು, ಪಿ.ಎಸ್.ಐ ರವರು ಸಿಬ್ಬಂಧಿಯೊಂದಿಗೆ ಹೋಗಿ ದಾಳಿ ಮಾಡಿ.
ಸರಾಯಿ ಮಾರಾಟ ಮಾಡುತ್ತಿದ್ದ ಪೋಚಮ್ಮ ಗಂಡ ಈಶ್ವರ್ ಕಲಾಲ ವಯ|| 70 ವರ್ಷ ಉ|| ಕೂಲಿ ಕೆಲಸ ಜ್ಯಾ|| ಕಲಾಲ ಸಾ|| ಮರಖಲ ಗ್ರಾಮ
ಇವಳಿಗೆ ದಸ್ತಗಿರಿ ಮಾಡಿ, ಅವಳ ಹತ್ತಿರದಿಂದ 90 ಎಮ್.ಎಲ್. ನ
ಒಟ್ಟು 60 ಓರಿಜಿನಲ್ ಚಾಯ್ಸ್ ಡೀಲಕ್ಸ್ ವಿಸ್ಕೀಯ ಸರಾಯಿ ತುಂಬಿದ ಪಾಕೇಟಗಳು. ಇವುಗಳ ಅಂದಾಜು
ಕಿಮ್ಮತ್ತು 2160/-ರೂ. ನೇದ್ದನ್ನು ಜಪ್ತಿ ಮಾಡಿಕೊಂಡು
ಆರೋಪಿತಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಹುಲಸೂರ ಠಾಣೆ ಅಪರಾಧ
ಸಂಖ್ಯೆ 35/2020 ಕಲಂ 279, 337, 338,
304 [ಎ] ಐಪಿಸಿ :-
ದಿನಾಂಕ 30/05/2020 ರಂದು ಬೆಳ್ಳಿಗೆ
0400 ಗಂಟೆಗೆ ಫಿರ್ಯಾದಿ ಶ್ರೀ ಸಂಗಮೇಶ ತಂದೆ ಸಂಜುಕುಮಾರ ಹಂಚೆ ವಯ 24 ವರ್ಷ, ಜಾತಿ: ಲಿಂಗಾಯತ, ಸಾ: ಮುಚ್ಚಳಂಬ
ರವರು ಠಾಣೆಯಲ್ಲಿ ಹಾಜರಾಗಿ ಲಿಖಿತ ದೂರನ್ನು ನೀಡಿದ್ದು ಅದರ ಸಾರಾಂಶವೆನೆಂದರೆ, ಫಿರ್ಯಾದಿಯು ಪೂನಾದ ಖಾಸಗಿ ಕಂಪನಿಯಲ್ಲಿ ಕೆಲಸ
ಮಾಡಿಕೊಂಡಿರುತ್ತಾರೆ ಇವರ ತಮ್ಮ ಸಚಿನ್ ಸಹ
ಪೂನಾದಲ್ಲಿ ಕಾರ ಡ್ರೈವರ ಕೆಲಸ ಮಾಡಿಕೊಂಡಿರುತ್ತಾನೆ. ಒಂದು ವರ್ಷದ ಹಿಂದೆ ಪೂನಾದಲ್ಲಿ ಜೋರಿ
ನಾರಾಯಣ ದೋಂಡಿಬಾ ಎಂಬುವವರ ಹತ್ತಿರ ಟಾಟಾ ಮಾಂಜಾ ಕಾರ ನಂ ಎಮ್ಎಚ್-12, ಕೆಎನ್- 4784 ಖರಿದಿ
ಮಾಡಿರುತ್ತಾರೆ ಫೀರ್ಯಾದ ಮತ್ತು ಅವರ ತಮ್ಮ ಯುಗಾದಿ ಹಬ್ಬಕ್ಕೆ ಬಂದಿದ್ದು ಲಾಕಡೌನ ಪ್ರಯುಕ್ತ
ಉರಲ್ಲಿಯೆ ಉಳಿದುಕೊಂಡಿರುತ್ತಾರೆ ಹೀಗಿರುವಾಗ ದಿನಾಂಕ 29/05/2020 ರಂದು ಸಾಯಂಕಾಲ 5-00 ಗಂಟೆಯ
ಸುಮಾರಿಗೆ ಸಚ್ಚಿನ ಮತ್ತು ಮಾಣಿಕಪ್ರಭು ತಂದೆ
ರಾಮಲಿಂಗ ಹೂಗಾರ ಇಬ್ಬರು ಬೇಲೂರಕ್ಕೆ ತಮ್ಮ ಗೆಳೆಯರ ಹತ್ತಿರ ಹೋಗಿ ಬರುತ್ತೆನೆಂದು ಕಾರ ನಂ ಎಮ್ಎಚ್-12, ಕೆಎನ್- 4784 ನೇದನ್ನು
ತೆಗೆದುಕೊಂಡು ಹೋದನು. ನಂತರ ದಿನಾಂಕ 30/05/2020 ರಂದು ರಾತ್ರಿ
ಅಂದಾಜು 1230 ಗಂಟೆಯ ಸುಮಾರಿಗೆ ಸಚಿನ್ ಜೊತೆಯಲ್ಲಿ ಹೋದ ಮಾಣಿಕಪ್ರಭು ಈತನು ನನಗೆ ಫೋನ್ ಮಾಡಿ
ತಿಳಿಸಿದ್ದೆನೆಂದರೆ, ನಾನು ಮತ್ತು ಸಚ್ಚಿನ ಇಬ್ಬರು ಕಾರಿನಲ್ಲಿ ಬರುವಾಗ ಕಾರ ಪಲ್ಟಿಯಾಗಿ ಸಚ್ಚಿನನಿಗೆ ಭಾರಿ
ರಕ್ತಗಾಯಗಳು ಆಗಿರುತ್ತವೆ. ಆದರಿಂದ ಬೇಲೂರ ಕೂಡಲೆ ಬೇಲೂರ -ಮುಚ್ಚಳಂಬ ರಸ್ತೆಯ ಮೇಲೆ ಬೇಲೂರ
ಗ್ರಾಮದ ಹತ್ತಿರ ಬೇಗನೆ ಬನ್ನಿ ಅಂತ ತಿಳಿಸಿದ
ಮೇರೆಗೆ ಘಟನಾ ಸ್ಥಳಕ್ಕೆ ಹೋಗಿ ನೋಡಲು
ಸಚ್ಚಿನ ಇವನಿಗೆ ತಲೆಗೆ ಹಾಗು ಶರಿರದ ಇತರೆ ಭಾಗಕ್ಕೆ ಭಾರಿ ಆಗಿರುತ್ತವೆ. ಮಾಣಿಕಪ್ರಭು
ಈತನಿಗೂ ಸಹ ತಲೆಗೆ ಮತ್ತು ಎದೆಗೆ ಗುಪ್ತಗಾಯಗಳಾಗಿರುತ್ತವೆ. ನಂತರ ನಾನು 108 ಅಂಬುಲೇನ್ಸ
ಮೂಲಕ ಬಸವಕಲ್ಯಾಣ ಸರಕಾರಿ ಆಸ್ಪತ್ರೆಯಲ್ಲಿ
ಸೇರಿಕ ಮಾಡಿದಾಗ ಸಚಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ರಾತ್ರಿ ಸುಮಾರು 02-15 ಗಂಟೆಗೆ
ಮೃತಪಟ್ಟಿರುತ್ತಾನೆ. ನಾನು ಘಟನೆಯ ಬಗ್ಗೆ ಮಾಣಿಕ ಪ್ರಭು ಈತನಿಗೆ ವಿಚಾರಿಸಲು ಅವನು
ತಿಳಿಸಿದ್ದೆನೆಂದರೆ, ನಾನು ಮತ್ತು ಸಚ್ಚಿನ ಇಬ್ಬರು ಬೇಲೂರ ಗ್ರಾಮಕ್ಕೆ ಹೋಗಿ ಅವನ ಗೆಳೆಯರೊಂದಿಗೆ ಮಾತನಾಡಿ
ಮತ್ತು ಅವರೊಂದಿಗೆ ಊಟ ಮಾಡಿ ಮರಳಿ ಮುಚ್ಚಳಂಬ ಗ್ರಾಮಕ್ಕೆ ಟಾಟಾ ಮಾಂಜಾ ಕಾರ ನಂ ಎಮ್ಎಚ್-12, ಕೆಎನ್- 4784 ನೇದರಲ್ಲಿ
ಬೇಲೂರ ಮುಚ್ಚಳಂಬ ರಸ್ತೆಯ ಮುಖಾಂತರ ಬರುವಾಗ ದಿನಾಂಕ 30/05/2020 ರಂದು ರಾತ್ರಿ 1215 ಗಂಟೆಯ
ಸುಮಾರಿಗೆ ಸಚ್ಚಿನ ಇವನು ತನ್ನ ಕಾರನ್ನು ಅತಿವೇಗ ಮತ್ತು
ನಿಷ್ಕಾಳಜಿತನದಿಂದ ರಸ್ತೆಯ ಮೇಲೆ ಚಲಾಯಿಸುತ್ತಿದ್ದು, ನಾನು ಅವನಿಗೆ
ರಸ್ತೆ ಕಚ್ಚಾ ಇದೆ ಮತ್ತು ಅಂಕು-ಡೊಂಕು ಇದೆ ನಿಧಾನವಾಗಿ ಚಲಾಯಿಸು ಅಂತ ತಿಳಿಸಿದರೂ ಸಹ ಸಚ್ಚಿನ
ಇವನು ಅದೇ ರೀತಿ ಅತಿವೇಗ ಮತ್ತು ನಿಷ್ಕಾಳಜಿಯಿಂದ ಚಲಾಯಿಸಿ ಬೇಲೂರ ಶಿವಾರದ ಅಶೋಕ ಚೆನ್ನಕೋಟೆ
ಇವರ ಹೊಲದ ಹತ್ತಿರ ತನ್ನ ಕಾರಿನ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಪಕ್ಕದ ಮೇಲಿರುವ ದೊಡ್ಡ
ಬಂಡೆಗೆ ತೊರಚಿದರಿಂದ ಕಾರ ರಸ್ತೆಯ ಪಕ್ಕದ ತಂಗಿನಲ್ಲಿ ಪಲ್ಟಿಯಾಗಿರುತ್ತದೆ. ಅಂತಾ ನೀಡಿದ ದೂರಿನ
ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 69/2020 ಕಲಂ 3,4,5 ವೆಶ್ಯಾ ವಾಟಿಕೆ
ನಿಷೇಧ ಕಾಯ್ದೆ ಜೊತೆ 370 ಐಪಿಸಿ :-
ದಿನಾಂಕ 30.05.2020 ರಂದು 13-30 ಗಂಟೆಗೆ ಸಿಪಿಐ ರವರು ವೃತ್ತ ಕಛೇರಿಯಲ್ಲಿದ್ದಾಗ
ಫೋನ್ ಮುಖಾಂತರ ಖಚಿತ ಭಾತ್ಮಿ ಬಂದಿದ್ದೇನೆಂದರೆ, ಬಸವಕಲ್ಯಾಣ ನಗರದಲ್ಲಿರುವ
ಜೈಭವಾನಿ ಭವಾನಿ ಲಾಡ್ಜ್ನಲ್ಲಿ ಗಣ ಗಳಿಸುವ ಗೋಸ್ಕರ ವೈಶ್ಯಾವಾಟಿಕೆ ನಡೆಸುತ್ತಿದ್ದಾರೆ ಅಂತ ಖಚಿತ
ಭಾತ್ಮಿ ಮೇರೆಗೆ ಪಂಚರು ಮತ್ತು ಸಿಬ್ಬಂದಿಯೊಂದಿಗೆ ಎರಡನೇ ಮಹಡಿಯಲ್ಲಿರುವ ಜೈಭವಾನಿ ಲಾಡ್ಜ್ನಲ್ಲಿ ಹೋಗಿ ದಿನಾಂಕ 30.05.2020 ರಂದು ಮಧ್ಯಾಹ್ನ 14-30 ಗಂಟೆಗೆ ದಾಳಿ ಮಾಡಿದಾಗ
ಲಾಡ್ಜ್ನ ಕೌಂಟರ್ ಮೇಲೆ ಕುಳಿತ ಒಬ್ಬ ವ್ಯಕ್ತಿ ಪೊಲೀಸರಿಂತ ತಪ್ಪಿಸಿಕೊಂಡು ಓಡಿ ಹೋದನು. ನಂತರ ಲಾಡ್ಜ್ನ ರೂಮ್
ನಂ 1 ರ ಬಾಗಿಲು ಬಡೆದು ತೆರೆಯಲು ಹೇಳಿದಾಗ ಸದರಿ ಕೋಣೆಯ ಬಾಗಿಲು ಒಬ್ಬ ಹೆಣ್ಣು ಮಗಳು ಬಾಗಿಲು ತೆಗೆದಾಗ
ಕೋಣೆಯಲ್ಲಿ ಹೋಗಿ ನೋಡಲು ಅದರಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ವಿಚಾರಿಸಿದಾಗ
ಅವರು ಶ್ರೀನಿವಾಸ ತ್ರಿಮುಖೆ ಮತ್ತು ಅಂಬಾಜಿ ತ್ರಿಮುಖೆ ಇವರು ಕೆಲವು ವಾರಗಳ ಹಿಂದೆ ಬೀದರನಲ್ಲಿ ಒಬ್ಬ
ವ್ಯಕ್ತಿಗೆ ಹಣಕೊಟ್ಟು ಕರೆದುಕೊಂಡು ಬಂದಿದ್ದು ಅವರು ಹೇಳಿದ ವ್ಯಕ್ತಿಯೊಂದಿಗೆ ಲೈಂಗಿಕ ಸಂಭೋಗದಲ್ಲಿ
ತೊಡಗಿದರೆ ಅದರಿಂದ ಬಂದ ಹಣದಲ್ಲಿ ಸ್ವಲ್ಪ ಹಣ ನಮಗೆ ಕೊಡುವುದಾಗಿ ಹೇಳಿ ಕರೆದುಕೊಂಡು ಬಂದಿದ್ದು ಅದರಂತೆ
ಅವರು ಕರೆದುಕೊಂಡ ಬಂದ ವ್ಯಕ್ತಿಗಳೊಂದಿಗೆ ನಾವು ಲೈಂಗಿಕ ಸಂಭೋಗ ಮಾಡಿರುತ್ತೇವೆ. ಇದರಿಂದ ಅವರು ನಮಗೆ
ಹಣ ಕೊಡುತ್ತಿದ್ದಾರೆ ಅಂತಾ ತಿಳಿಸಿದ ಮೇರೆಗೆ ಮಹಿಳಾ ಪಿಎಸ್ಐ ಮತ್ತು ಮಹಿಳಾ ಪೊಲೀಸ್ ಕಾನ್ಸ್ಟೇಬಲ್
ಅವರ ಅಂಗ ಜಡತಿ ಮಾಡಿ ಒಟ್ಟು 500 ರೂಪಾಯಿ ಮತ್ತು ಇನ್ನೋಬ್ಬಳ ಪರ್ಸನಿಂದ ಒಟ್ಟು 500/- ರೂಪಾಯಿ ಹಣ ದೊರೆತಿದ್ದು
ಜಪ್ತಿ ಮಾಡಿಕೊಳ್ಳಲಾಯಿತು. ನಂತರ ಲಾಡ್ಜನ ರೂಮ್ ನಂ 11 ಇಬ್ಬರು ಮಹಿಳೆಯರು
ಅವರನ್ನು ವಿಚಾರಿಸಲಾಗಿ ಅವರುಗಳು ತಿಳಿಸಿದ್ದೇನೆಂದರೆ ಶ್ರೀನಿವಾಸ ತ್ರಿಮುಖೆ ಮತ್ತು ಅಂಬಾಜಿ
ತ್ರಿಮುಖೆ ಇವರು ಕೆಲವು ವಾರಗಳ ಹಿಂದೆ ಉಮರ್ಗಾದಲ್ಲಿ ಒಬ್ಬ ವ್ಯಕ್ತಿಗೆ
ಹಣಕೊಟ್ಟು ಕರೆದುಕೊಂಡು ಬಂದಿದ್ದು ಅವರು ಹೇಳಿದ ವ್ಯಕ್ತಿಯೊಂದಿಗೆ ಲೈಂಗಿಕ ಸಂಭೋಗದಲ್ಲಿ ತೊಡಗಿದರೆ
ಅದರಿಂದ ಬಂದ ಹಣದಿಂದ ನಮಗೆ ಕೊಡುವುದಾಗಿ ಹೇಳಿ ಕರೆದುಕೊಂಡು ಬಂದಿದ್ದು ಅದರಂತೆ ಅವರು ಕರೆದುಕೊಂಡ
ಬಂದ ವ್ಯಕ್ತಿಗಳೊಂದಿಗೆ ನಾವು ಲೈಂಗಿಕ ಸಂಭೋಗ ಮಾಡಿರುತ್ತೇವೆ. ಇದರಿಂದ ಅವರು ನಮಗೆ
ಹಣ ಕೊಟ್ಟಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ಅವಳಿಂದ ನೋಟುಗಳು ಒಟ್ಟು 1000/- ರೂಪಾಯಿ ಮತ್ತು ನ್ನೋಬ್ಬಳ ಪಪರ್ಸನಿಂದ ಹೀಗೆ ಒಟ್ಟು 1000/- ರೂಪಾಯಿ ಜಪ್ತಿ ಮಾಡಿಕೊಳ್ಳಲಾಯಿತು. ನಂತರ ಕೋಣೆ ಸಂ 12 ರ ಬಾಗಿಲು ಬಡೆದು
ತೆರೆಯಲು ಹೇಳಿದಾಗ ಅದರಲ್ಲಿನ ಒಬ್ಬ ವ್ಯಕ್ತಿ ಬಾಗಿಲು ತೆರೆದಿದ್ದು ಆ ಕೋಣೆಯಲ್ಲಿ ಮೂವರು
ವ್ಯಕ್ತಿಗಳಿದ್ದು ಅವರಿಗೆ ವಿಚಾರಿಸಲು ಅವರು ತಮ್ಮ ತಮ್ಮ ಹೆಸರು 1) ಅರುಣಕುಮಾರ ತಂದೆ
ಸಿದ್ರಾಮಪ್ಪಾ ಮಸಗಲ್ಲೆ ವಯಸ್ಸು 41 ವರ್ಷ, ಜಾತಿಲಿಂಗಾಯತ, ಸಾ|| ಕಾಂಟೇಕ್ಟರ್ 2) ರಮೇಶ ತಂದೆ ಬಾಬುರಾವ
ಮಾಹಾಗಾಂವ ವಯಸ್ಸು 42 ವರ್ಷ, ಜಾತಿ-ಲಿಂಗಾಯತ ಸಾ|| ದುಬಲ್ ಗುಂಡಿ ಅಂತ ತಿಳಿಸಿ ಅವರು ಗಿರಾಕಿಗಳನ್ನು ಕರೆದುಕೊಂಡು ಬಂದು ಒಬ್ಬ ವ್ಯ್ಕತಿಗೆ ಒಂದು
ದಿನಕ್ಕೆ ಒಂದು ಸಾವಿರ ರೂಪಾಯಿಯಂತೆ ಮಾತನಾಡಿ ಕರೆದುಕೊಂಡು ಬಂದು ಶ್ರೀನಿವಾಸ ಇವನ ಲಾಡ್ಜ್ನಲ್ಲಿ
ಬಿಡುತ್ತೇವೆ ಅದರಿಂದ ಅವರು ನಮಗೆ ಕಮಿಶನ್ ಕೊಡುತ್ತಾರೆ ಅಂತ ತಿಳಿಸಿದರು. ಮತ್ತು ಇನ್ನೊಬ್ಬನಿಗೆ
ವಿಚಾರಿಸಲು ಅವನು ತನ್ನ ಹೆಸರು 3) ಶ್ರೀನಿವಾಸ ತಂದೆ ಅಂಬಾಜಿ ತ್ರಿಮುಖೆ
ವಯಸ್ಸು 39 ವರ್ಷ, ಜಾತಿ-ಡೋರ್, ಸಾ|| ಮಂಠಾಳಾ ಅಂತ ತಿಳಿಸಿ ತಾನು ಮತ್ತು ತನ್ನ ತಂದೆಯಾದ ಅಂಬಾಜಿ ತಂದೆ ರಾಣೋಜಿ
ತ್ರಿಮುಖೆ ಇಬ್ಬರು ಉಮರ್ಗಾ ಮತ್ತು ಬೀದರದಿಂದ ಒಬ್ಬ ವ್ಯಕ್ತಿಗೆ ಹಣ ಕೊಟ್ಟು ವೈಶ್ಯಾವಾಟಿಕೆ ಮಾಡಿ ಹಣ ಗಳಿಸಲು ಹೆಣ್ಣು ಮಕ್ಕಳನ್ನು
ಕರೆದುಕೊಂಡು ಬಂದು ನಮ್ಮ ಲಾಡ್ಜ್ನಲ್ಲಿ ಇಟ್ಟಿದ್ದು ಅರುಣ ಮತ್ತು ರಮೇಶ ಇವರು ಕರೆದುಕೊಂಡ ಬಂದ ಗಿರಾಕಿಗಳಿಂದ
ನಾನು ಹಣ ಪಡೆದುಕೊಂಡು ನಾವು ಕರೆದುಕೊಂಡ ಬಂದ ಹೆಣ್ಣು ಮಕ್ಕಳೊಂದಿಗೆ ಲೈಂಗಿಕ ಸಂಭೋಗ ಮಾಡಲು ಅನುವು
ಮಾಡಿಕೊಟ್ಟಿರುತ್ತೇನೆ. ಗಿರಾಕಿಗಳಿಂದ ಪಡೆದುಕೊಂಡ ಹಣದಿಂದ ನಾನು ಮತ್ತು ನಮ್ಮ ಮ್ಯಾನೇಜರ್ ಅಭಿ ದೇಗಲೂರೆ ಸಾ|| ಬಸವಕಲ್ಯಾಣ ಅರ್ಧ
ಪಾಲು ಹೆಣ್ಣು ಮಕ್ಕಳಿಗೆ ಕೊಟ್ಟಿರುತ್ತೇವೆ ಉಳಿದ ಹಣ ಕೌಂಟರ್ ಗಲ್ಲಾದಲ್ಲಿರುತ್ತವೆ ಅಂತ ತಿಳಿಸಿ
ಗಲ್ಲಾದಲ್ಲಿ ಕೈಹಾಕಿ ಹಣ ತೆಗೆದು ಕೌಂಟರ್ ಮೇಲೆ ಹಾಜರು ಪಡಿಸಿದ್ದು ಸಿಪಿಐ ರವರು ಸದರಿ ಹಣ ಏಣಿಸಿ ನೋಡಲು 500 ಮುಖ ಬೆಲೆಯ ನಾಲ್ಕು
ನೋಟುಗಳು ಹೀಗೆ ಒಟ್ಟು 2000/-ರೂಪಾಯಿ ನಗದು ಹಣ ಸಿಕ್ಕಿದ್ದು ಅವುಗಳನ್ನು ಪ್ರತ್ಯಕವಾಗಿ
ಜಪ್ತಿ ಮಾಡಿಕೊಳ್ಳಲಾಯಿತು. ನಂತರ ಸದರಿ ಶ್ರೀನಿವಾಸ ಇವನಿಗೆ ಕೌಂಟರ್ ಮೇಲಿಂದ ಓಡಿ ಹೋದ
ವ್ಯಕ್ತಿಯ ಹೆಸರು ವಿಚಾರಿಸಲು ಅವನ ಹೆಸರು ಅಭಿ ದೆಗಲೂರೆ ಸಾ|| ಬಸವಕಲ್ಯಾಣ ಅಂತ ತಿಳಿಸಿದನು. ಪ್ರಕರಣದ ಪುರಾವೆ ಕುರಿತು ಜಪ್ತಿ ಮಾಡಿದ 4000/- ರೂಪಾಯಿ ನಗದು ಹಣ
ತಮಗೆ ಒಪ್ಪಿಸುತ್ತಿದ್ದು ಸದರಿ ವಶಕ್ಕೆ ತೆಗೆದುಕೊಂಡ ಆರೋಪಿತರಾದ 1) ಅರುಣಕುಮಾರ ತಂದೆ
ಸಿದ್ರಾಮಪ್ಪಾ ಮಸಗಲ್ಲೆ ವಯಸ್ಸು 41 ವರ್ಷ,ಜಾತಿಲಿಂಗಾಯತ, ಸಾ|| ಮಂಠಾಳ
2) ಶ್ರೀನಿವಾಸ ತಂದೆ ಅಂಬಾಜಿ ತ್ರಿಮುಖೆ ವಯಸ್ಸು 29 ವರ್ಷ, ಜಾತಿ-ಡೋರ್ ಸಾ|| ಮಂಠಾಳ 3) ರಮೇಶ ತಂದೆ ಬಾಬುರಾವ
ಮಾಹಾಗಾಂವ ವಯಸ್ಸು 42 ವರ್ಷ, ಜಾತಿ-ಲಿಂಗಾಯತ ಸಾ|| ದುಬಲ್ ಗುಂಡಿ ಮತ್ತು ಲಾಡ್ಜ್ ಮಾಲಿಕರಾದ 4) ಅಂಬಾಜಿ ತಂದೆ ರಾಣೋಜಿ
ತ್ರಿಮುಖೆ ಸಾ|| ಮಂಠಾಳಾ ತಲೆ ಮರೆಸಿಕೊಂಡ 5) ಅಭಿ ದೆಗಲೂರೆ ಸಾ|| ಬಸವಕಲ್ಯಾಣ ಸದರಿ ಈ ಐದು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೋಳ್ಳಲಾಗಿದೆ.