Police Bhavan Kalaburagi

Police Bhavan Kalaburagi

Friday, November 8, 2019

BIDAR DISTRICT DAILY CRIME UPDATE 08-11-2019


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 08-11-2019

ಮಂಠಾಳ ಪೊಲೀಸ್ ಠಾಣೆ ಯು.ಡಿ.ಆರ್ ನಂ. 05/2019, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ರೇಣುಕಾ ಗಂಡ ಶಿವಾಜಿ ಶಿಂಧೆ ವಯ: 22 ವರ್ಷ, ಜಾತಿ: ಮರಾಠಾ, ಸಾ: ಲಾಡವಂತಿ ಗ್ರಾಮ, ತಾ: ಬಸವಕಲ್ಯಾಣ ರವರ ತಂದೆಯವರಿಗೆ 19 ಗುಂಟೆ ಜಮೀನು ಇದ್ದು ಅವರು ಒಕ್ಕಲುತನ ಮಾಡಿಕೊಂಡಿರುತ್ತಾರೆ ಮತ್ತು ಇತ್ತಿಚೇಗೆ ಸದರಿ ಜಮೀನಿನ ಮೇಲೆ ತಂದೆಯವರು ಎಸ್.ಬಿ. ಬ್ಯಾಂಕ್ ಮತ್ತು ಡಿ.ಸಿ.ಸಿ ಬ್ಯಾಂಕಗಳಿಂದ ಒಟ್ಟು ಸುಮಾರು 1,00,000/-ರೂ. ಸಾಲ ಪಡೆದಿದ್ದು, ಅದೇ ವಿಷಯವಾಗಿ ತಮ್ಮ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಕೊರಗುತ್ತಿದ್ದರು, ಹೀಗಿರುವಲ್ಲಿ ದಿನಾಂಕ 07-11-2019 ರಂದು ಫಿರ್ಯಾದಿಯ ತಂದೆಯವರು ತಮಗಾದ ಸಾಲವನ್ನು ಮರಳಿ ಹೇಗೆ ತೀರಿಸಬೇಕೆಂಬ ಚಿಂತೆಯಲ್ಲಿ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಮನೆಯಲ್ಲಿನ ತಗಡದ ಕೇಳಗೆ ಹಾಕಿರುವ ಕಬ್ಬಿಣದ ದಂಟಕ್ಕೆ ಹಗ್ಗದಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬೀದರ ಗರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 06/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 06-11-2019 ರಂದು 1930 ಗಂಟೆ ಸುಮಾರಿಗೆ ಫಿರ್ಯಾದಿ ಸೈಯದ ಸುಮೇರ ಅಲಿ ತಂದೆ ಸೈಯದ ಮಕ್ಸೂದ ಅಲಿ ವಯ: 24 ವರ್ಷ, ಜಾತಿ: ಮುಸ್ಲಿಂ, ಸಾ: ಮನೆ ನಂ. 6-2-175 ಮನಿಯಾರ ತಾಲೀಮ ಬೀದರ ರವರ ಮನೆಯ ಅಂಗಳದಲ್ಲಿದ್ದ ಮರದ ಮೇಲೆ ಬಾವುಲಿಗಳು ಬಂದಿದ್ದು ಜಾಸ್ತಿ ಶಬ್ದ ಮಾಡುತ್ತಿದ್ದರಿಂದ ಬೌಲಿ ಹೊಡೆಯಲು ಅಂಗಳದಲ್ಲಿದ್ದ ಬಾತರೂಂಗೆ ಕಟ್ಟಿಗೆ ಏಣಿ ಹಚ್ಚಿ ಮೇಲೆ ಹತ್ತಿ ಹೊಡೆಯುವಾಗ ಕರೆಂಟ ಹೋಯಿತು ಆಗ ಫಿರ್ಯಾದಿಯವರ ತಂದೆಯವರು ಏನಿಯಿಂದ ಕೆಳಗಡೆ ಇಳಿಯುವಾಗ ಒಮ್ಮೆಲೆ ಕಾಲು ಜಾರಿ ಕೆಳಗಡೆ ಇದ್ದ ಪ್ಲಾಸ್ಟಿಕ ಚೇರಿನ ಮೇಲೆ ಬಿದ್ದ ಪರಿಣಾಮ ತಲೆಯ ಹಿಂಭಾಗದಲ್ಲಿ ಮತ್ತು ಬೆನ್ನಲ್ಲಿ ಭಾರಿ ಗಾಯವಾಗಿ ಮುರ್ಚ್ಛೆ ಹೋದಾಗ ಕೂಡಲೆ ಅವರಿಗೆ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಜಿಲ್ಲಾ ಆಸ್ಪತ್ರೆಯಲ್ಲಿ ತಾತ್ಕಾಲಿಕ ಚಿಕಿತ್ಸೆ ಮಾಡಿಸಿ ವೈದ್ಯರ ಸಲಹೆ ಮೇರೆಗೆ ಬೀದರ ಜಿಲ್ಲಾ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದ ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ಅಲ್ಲಿನ ವೈದ್ಯರು ನೋಡಿ ನಿಮ್ಮ ತಂದೆಯವರು ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 07-11-2019 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಯು.ಡಿ.ಆರ್ ಅಪರಾಧ ಸಂ. 20/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 07-11-2019 ರಂದು ಪಿüರ್ಯಾದಿ ಶಂಕರರಾವ ತಂದೆ ಬಾಬುರಾವ ಡಪದ, ವಯ: 45 ರ್ಷ, ಜಾತಿ: ಡಪದ(ನಾವಿ), ಸಾ: ಬಸವನಗರ ಭಾಲ್ಕಿ ರವರು ರವರ ಮಗಳಾದ ಸಾಧನಾ 2018-19 ನೇ ಸಾಲಿನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಸತಿ ಶಾಲಾ ಭಾಲ್ಕಿಯಲ್ಲಿ ಆಯ್ಕೆಯಾಗಿ ಅಲ್ಲಿಯೇ ಅಭ್ಯಾಸ ಮಾಡುತ್ತಿರುತ್ತಾಳೆ, ಸಾಧನಾಳಿಗೆ ತಲೆ ಬೇನೆ ಇದ್ದು ಉಪಚಾರ ಮಾಡಿಸುತ್ತಿದ್ದು, ಹೀಗಿರುವಾಗ ದಿನಾಂಕ 07-11-2019 ರಂದು ಭಾಲ್ಕಿಯ ಕಿತ್ತೂರು ರಾಣಿ ಚೆನ್ನಮ್ಮಾ ಸತಿ ಶಾಲೆಯ ಕೆಲಸ ಮಾಡುವ ಹೆಣ್ಣು ಮಗಳು ತನ್ನ ಮೋಬೈಲನಿಂದ ಕರೆ ಮಾಡಿ ನಿಮ್ಮ ಮಗಳು ಸಾಧನಾ ಇವಳು ವಾಂತಿ ಮಾಡುತ್ತಿದ್ದಾಳೆ ನೀವು ಬನ್ನಿರಿ ಅಂತ ತಿಳಿಸಿದ ಕೂಡಲೆ ಪಿüರ್ಯಾದಿಯು ಶಾಲೆಗೆ ಹೋಗಿ ಮಗಳು ಸಾಧನಾಳಿಗೆ ಕರೆದುಕೊಂಡು ಭಾಲ್ಕಿಯ ರಕಾರಿ ಆಸ್ಪತ್ರೆಗೆ ತಂದು ಉಪಚಾರ ಮಾಡಿಸಿದ್ದು ವಾಂತಿ ಮಾಡುವದು ಕಡಿಮೆಯಾಗಿದ್ದು, ನಂತರ ಮಗಳನ್ನು ಕರೆದುಕೊಂಡು ಮನೆಗೆ ಹೋದಾಗ ಸಾಧನಾ ಇಕೆಯು ತನಗೆ ತಲೆ ಬೇನೆ ಹೆಚ್ಚಾಗುತ್ತಿದೆ ಅಂತ ತಿಳಿಸಿದಳು, ಪಿüರ್ಯಾದಿಯು ಪುನಃ ಗಾಬರಿಗೊಂಡು ಮಗಳು ಸಾಧನಾಳಿಗೆ ಭಾಲ್ಕಿ ರಕಾರಿ ಆಸ್ಪತ್ರೆಗೆ ಕರೆದು ತಂದು ವೈದ್ಯರಿಗೆ ತೋರಿಸಿದಾಗ ವೈದ್ಯರು ನೋಡಿ ನಿಮ್ಮ ಮಗಳು ಮೃತಪಟ್ಟಿರುತ್ತಾಳೆಂದು ತಿಳಿಸಿದರು, ಕಾರಣ ಮಗಳು ಕು.ಸಾಧನಾ ಇವಳು ಆರಾಮ ಇಲ್ಲದರಿಂದ ಮ್ರತಪಟ್ಟಿದ್ದು ಯಾರ ಮೇಲೆಯೂ ಯಾವುದೆ ಸಂಶಯ ಇರುವದಿಲ್ಲ ಅಂತ ಕೊಟ್ಟ ಪಿüರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಜನವಾಡಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 26/2019, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಬಸವರಾಜ ತಂದೆ ಶಂಕರೆಪ್ಪಾ ಹಮಜೆ ಸಾ: ಕಂಗಟಿ ಗ್ರಾಮ, ತಾ: & ಜಿ: ಬೀದರ ರವರ ಮಗನಾದ ಕಾಶಿನಾಥ  ತಂದೆ ಬಸವರಾಜ ಹಮಜೆ ವಯ: 18 ವರ್ಷ ಈತನು ದಿನಾಂಕ 06-11-2019 ರಂದ 0700 ಗಂಟೆಯಿಂದ ದಿನಾಂಕ 07-11-2019 ರಂದು 0945 ಗಂಟೆಯ ಮದ್ಯದ ಅವಧಿಯಲ್ಲಿ ಮ್ಮೂರ ಬಸವರಾಜ ಭಾಲ್ಕೆ ರವರ ಹೊಲ ಸರ್ವೆ ನಂ. 32/*/1 ನೇದರ ಜಮೀನಿನಲ್ಲಿರುವ ಬಾವಿಯಲ್ಲಿ ಜೀಗಿದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುತ್ತಾನೆ, ಆತನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 


ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 129/2019, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 07-11-2019 ರಂದು ಫಿರ್ಯಾದಿ  ಭೀಮಾಶಂಕರ ತಂದೆ ಪ್ರಭಾಕರ ಗಜರೆ ಸಾ: ಕಾಡವಾದ, ತಾ & ಜಿಲ್ಲೆ: ಬೀದರ ರವರು ನನ್ನ ಹೆಂಡತಿ, ಮಗಳು ಹಾಗೂ ಸಂಬಂಧಿಕರಾದ ಶಂಕರ ತಂದೆ ಬಾಲಾಜಿ ಕಾವಳೆ, ಲಕ್ಷ್ಮೀಬಾಯಿ ಗಂಡ ಶಂಕರ ಕಾವಳೆ ಇಬ್ಬರು ಸಾ: ಸಂತಪೂರ, ಕಮಳಾಬಾಯಿ ಗಂಡ ಮಾಣಿಕರಾವ ಪೋಳ ಸಾ: ಅಮಲಾಪೂರ ರವರೆಲ್ಲರೂ ಕೂಡಿಕೊಂಡು ಮ್ಮೂರ ಮಹಮ್ಮದ ಇಸ್ಮಾಯಿಲ್ ತಂದೆ ಮಹಮ್ಮದಮ ಹಾಜಿಸಾಬ ರವರು ಚಲಾಯಿಸುತ್ತಿದ್ದ ಕ್ರೂಸರ್ ಜೀಪ್ ಸಂ. ಕೆಎ-24/ಎಮ್-1568 ನೇದನ್ನು ಬಾಡಿಗೆ ಮಾಡಿಕೊಂಡು ಎಲ್ಲರೂ ಅದರಲ್ಲಿ ಇಸ್ಮಾಯಿಲ್ ಖಾದ್ರಿಯ ದೇವರ ದರ್ಶನದ ಪ್ರಯುಕ್ತ ಮ್ಮೂರಿಂದ ಭಾಲ್ಕಿ ಮಾರ್ಗವಾಗಿ ಘೋಡವಾಡಿಯ ಇಸ್ಮಾಯಿಲ ಖಾದ್ರಿಯ ದರ್ಗಾಕ್ಕೆ ಬಂದು ದರ್ಶನ ಮಾಡಿಕೊಂಡು ಮರಳಿ ಕಾಡವಾದಕ್ಕೆ ಹೋಗುತ್ತಿದ್ದಾಗ ಮಹಮ್ಮದ ಇಸ್ಮಾಯಿಲ್ ಇವನು ತನ್ನ ಕ್ರೂಸರ್ ಜೀಪನ್ನು ನಿಧಾನವಾಗಿ ಚಲಾಯಿಸಿಕೊಂಡು ಘೋಡವಾಡಿ ಗ್ರಾಮದ ಹೊರ ವಲಯದ ಗಾಂಧಿ ಚೌಕ ಹತ್ತಿರ ಬಂದಾಗ ಅದೇ ಸಮಯಕ್ಕೆ ಘೋಡವಾಡಿ - ಭಾಲ್ಕಿ ರೋಡಿನ ಮೇಲೆ ಭಾಲ್ಕಿ ಕಡೆಯಿಂದ ಮಹೀಂದ್ರಾ ಸ್ಕಾರಪಿಯೋ ನಂ. ಕೆಎ-03/ಎಮ್.ಜಿ-3762 ನೇದರ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ರೋಡಿನ ಮೇಲೆ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರೆಲ್ಲರೂ ಕುಳಿತ್ತಿದ್ದ ಕ್ರೂಸರ್ ಜೀಪಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ವಾಹನದಿಂದ ಕೆಳಗಡೆ ಇಳಿದು ತನ್ನ ವಾಹನವನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ತಲೆಗೆ ಗುಪ್ತಗಾಯ, ಮಗಳು ಪ್ರಭಾ ಇವಳಿಗೆ ಮೂಗಿಗೆ ಗುಪ್ತಗಾಯ, ಸಂಬಂಧಿಕರಾದ ಶಂಕರ ಇವರಿಗೆ ಕುತ್ತಿಗೆಗೆ ತೀವ್ರ ಗುಪ್ತಗಾಯ, ಬೆನ್ನಿಗೆ,  ಎಡಗೈ ರಟ್ಟೆಗೆ ಗುಪ್ತಗಾಯ ಹಾಗು ಮೂಗಿಗೆ ರಕ್ತಗಾಯಗಳು ಆಗಿರುತ್ತವೆ, ಲಕ್ಷ್ಮೀಬಾಯಿ ಇವರಿಗೆ ಹಣೆಗೆ ಮತ್ತು ಗಟಾಯಿಗೆ ಗುಪ್ತಗಾಯ ಹಾಗು ಬಲಗಡೆ ಕಣ್ಣಿನ ಮೇಲೆ ರಕ್ತಗಾಯಗಳು ಆಗಿರುತ್ತವೆ, ಕಮಳಾಬಾಯಿ ಇವರಿಗೆ ತಲೆಗೆ ತೀವ್ರ ಗುಪ್ತಗಾಯ, ಎಡಗಡೆ ಕೈಗೆ,  ಎಡಗಾಲ ತೊಡೆಯಿಂದ ಪಾದದವರೆಗೆ ತರಚಿದ ಗಾಯಗಳು ಆಗಿರುತ್ತವೆ, ಕ್ರೂಸರ್ ಜೀಪ ಚಾಲಕ ಮಹಮ್ಮದ ಇಸ್ಮಾಯಿಲ್ ಇವನಿಗೆ ಬಲಗೈ ಅಂಗೈಗೆ ತರಚಿದ ಗಾಯ ಆಗಿರುತ್ತದೆ, ಹೆಂಡತಿ ರಾಧಾಬಾಯಿ ಇವಳಿಗೆ  ಯಾವುದೇ ರೀತಿಯ ಗಾಯಗಳು ಆಗಿರುವುದಿಲ್ಲಾ, ನಂತರ ಎಲ್ಲರೂ ಚಿಕಿತ್ಸೆ ಕುರಿತು 108 ಅಂಬುಲೆನ್ಸದಲ್ಲಿ ಕುಳಿತುಕೊಂಡು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 


ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 183/2019, ಕಲಂ. 379 ಐಪಿಸಿ :-
ದಿನಾಂಕ 15-10-2019 ರಂದು 2030 ಗಂಟೆಯ ಸುಮಾರಿಗೆ ಫಿರ್ಯಾದಿ ವಿಶಾಲ ತಂದೆ ಗೋಪಾಲ ದೊಡ್ಡಿ : 25 ರ್ಷ, ಜಾತಿ: ಎಸ.ಸಿ ಮಾದಿಗ, ಸಾ: ಘೋಡಂಪಳ್ಳಿ, ದ್ಯ: ಬಸವನಗರ ಬೀದರ ರವರು ತನ್ನ ಬಜಾಜ್ ಲ್ಸರ್ 150 ಸಿಸಿ ಮೋಟಾರ ಸೈಕಲ ನಂ. ಕೆಎ-38/ಯು-2220, ಚಾಸಿಸ್ ನಂ. ಎಮ್.ಡಿ.2..11.ಸಿ.ಝಡ್.ಎಕ್ಸ್‌.ಹೆಚ್.ಡಬ್ಲು.ಕೆ.22260, ಇಂಜಿನ್ ನಂ. ಡಿ.ಹೆಚ್.ಝಡ್.ಡಬ್ಲು.ಹೆಚ್.ಕೆ.23299, .ಕಿ 49,000/- ರೂ., ನೇದನ್ನು ತಮ್ಮ ನೆಯ ಮುಂದೆ ನಿಲ್ಲಿಸಿ ನೆಯಲ್ಲಿ ಊಟ ಮಾಡಿ ಲಗಿಕೊಂಡು ನಂತರ ದಿನಾಂಕ 16-10-2019 ರಂದು 0600 ಗಂಟೆಯ ಸುಮಾರಿಗೆ ಎದ್ದು ಹೊರಗೆ ಬಂದಾಗ ಪಿüರ್ಯಾದಿಯು ನಿಲ್ಲಿಸಿದ ಮೋಟಾ ಸೈಕಲ ಇರಲಿಲ್ಲ, ನಂತರ ಫಿüರ್ಯಾದಿಯು ತನ್ನ ಗೆಳೆಯರೊಂದಿಗೆ ಎಲ್ಲಾ ಕಡೆ ಹುಡುಕಾಡಿದರೂ ಸಹ ದರಿ ಮೋಟಾರ ಸೈಕಲ ಇಲ್ಲಿಯವರೆಗೆ ಸಿಕ್ಕಿರುವುದಿಲ್ಲ, ಕಾರಣ ಪಿüರ್ಯಾದಿಯವರ ದರಿ ಮೋಟಾರ ಸೈಕಲನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಪಿüರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 07-11-2019 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.