ದಿನಂಪ್ರತಿ ಅಪರಾಧಗಳ ಮಾಹಿತ ದಿನಾಂಕ 12-04-2021
ನೂತನ ನಗರ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ಸಂ. 09/2021, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಸುರೇಖಾ ಗಂಡ ಮಲ್ಲಿಕಾರ್ಜುನ ವಯ: 45 ವರ್ಷ, ಸಾ: ಅಷ್ಟೂರ ಗ್ರಾಮ, ತಾ: & ಜಿ: ಬೀದರ, ಸದ್ಯ: ಅಬ್ದುಲ ಫೈಜ್ ದರ್ಗಾ ಪೊಲೀಸ ವಸತಿ ಗೃಹ ಬೀದರ ರವರ ಗಂಡನಾದ ಮಲಿ್ಲಕಾರ್ಜುನ ತಂದೆ ಪ್ರಭಣ್ಣಾ ವಯ: 54 ವರ್ಷ, ಜಾತಿ: ಕುರುಬ, ಉ: ಮುಖ್ಯ ಪೊಲೀಸ ಪೇದೆ ಡಿಎಆರ್ ಬೀದರ ರವರು ದಿನಾಂಕ 11-04-2021 ರಂದು 1200 ಗಂಟೆಯ ಸುಮಾರಿಗೆ ಬೀದರ ಪ್ರತಾಪನಗರ ರೋಡ ಆರ.ಟಿ.ಓ. ಕಛೇರಿ ಎದುರಿಗೆ ತಮ್ಮ ಕಾರಿನಿಂದ ಇಳಿಯುವಾಗ ಆಕಸ್ಮಿಕವಾಗಿ ಚಕ್ಕರ ಬಂದು ಒಮ್ಮೇಲೆ ನೆಲದ ಮೇಲೆ ಬಿದ್ದು, ಹೃದಯಘಾತವಾಗಿ ಮೃತ್ತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 21/2021, ಕಲಂ. 457, 380 ಐಪಿಸಿ :-
ಯಾರೋ ಅಪರಿಚಿತ ಕಳ್ಳರು ದಿನಾಂಕ 03, 04-04-2021 ರ ರಾತ್ರಿ ವೇಳೆಯಲ್ಲಿ ಫಿರ್ಯಾದಿ ಮೀನಾಜ ತಂದೆ ಸೈಯದ ದಸ್ತಗಿರ ಚಿಮಕೋಡವಾಲೆ ವಯ: 28 ವರ್ಷ, ಜಾತಿ: ಮುಸ್ಲಿಂ, ಸಾ: ಹಮೀಲಾಪೂರ, ತಾ: & ಜಿ: ಬೀದರ ರವರ ಬಿರ್ಯಾನಿ ಹೋಟಲ ಬಾಗಿಲಿನ ಬೀಗ ಮುರಿದು ಹೋಟಲದಲ್ಲಿ ಹೋಗಿ ಕೌಂಟರದಲ್ಲಿದ್ದ ನಗದು ಹಣ 10,000/- ರೂ. ನೇದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 11-04-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಬೀದರ ನಗರ ಪೊಲೀಸ ಠಾಣೆ ಅಪರಾಧ ಸಂ. 29/2021, ಕಲಂ. 279, 337, 338 ಐಪಿಸಿ :-
ದಿನಾಂಕ 11-04-2021 ರಂದು ಫಿರ್ಯಾದಿ ಅರುಣಕುಮಾರ ತಂದೆ ಸಿದ್ರಾಮ ವಯ: 14 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಅಷ್ಟೂರ ಗ್ರಾಮ ರವರು ತನ್ನ ದೋಡ್ಡಪನ ಮಗನಾದ ಕಾಳಿದಾಸ ಇಬ್ಬರು ಮೋಟಾರ ಸೈಕಲ್ ನಂ ಕೆಎ-38/ಎಸ್-9700 ನೇದರ ಮೇಲೆ ತಾಜಲಾಪೂರ ಮಾರ್ಗವಾಗಿ ಬೀದರಗೆ ಬರುವಾಗ ತಾಜಲಾಪೂರ ಗ್ರಾಮದಲ್ಲಿ ಚಡಾವಿಗೆ ಹೋಗುವಾಗ ಅಣ್ಣ ಆರೋಪಿ ನಂ. 1 ಕಾಳಿದಾಸ ತಂದೆ ಮಾಣಿಕಪ್ಪಾ ಸಾ: ಅಷ್ಟೂರ ಗ್ರಾಮ ಇತನು ಮೋಟಾರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಕೊಂಡು ಹೋಗುತ್ತಿರುವಾಗ ಬೀದರ ಕಡೆಯಿಂದ ಮೋಟಾರ ಸೈಕಲ್ ನಂ ಕೆಎ-38/ಎಕ್ಸ್- 5146 ನೇದರ ಚಾಲಕನಾದ ಆರೋಪಿ ನಂ. 2 ಎಂ.ಡಿ ಸಮೀರ ತಂದೆ ಎಂ.ಡಿ ನಸೀರ ವಯ: 19 ವರ್ಷ, ಸಾ: ಗೋಲೆಖಾನಾ ಬೀದರ ಇತನು ತನ್ನ ಮೋಟಾರ ಸೈಕಲ ಮೇಲೆ ಶಾದಾಬ ತಂದೆ ಅಬ್ದುಲ್ ಕರೀಮ್ ಸಾ: ಗೋಲೆಖಾನಾ ಬೀದರ ಇತನಿಗೆ ಹಿಂದುಗಡೆ ಕೂಡಿಸಿಕೊಂಡು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ಮುಖಾಮುಖಿ ಡಿಕ್ಕಿಯಾಗಿರುತ್ತದೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ಬಲಗಡೆ ತಲೆಯಲ್ಲಿ ರಕ್ತಗಾಯ, ಬಲಗಡೆ ಬುಜದ ಮೇಲೆ, ಕುತ್ತಿಗೆಯ ಮೇಲೆ ತರಚಿದ ಗಾಯ ಹಾಗೂ ಬಲಗಾಲ ತೋಡೆಯ ಮೆಲೆ ಗುಪ್ತಗಾಯವಾಗಿರುತ್ತದೆ, ಅಣ್ಣನಿಗೆ ಯಾವುದೆ ಗಾಯ ಆಗಿರುವುದಿಲ್ಲಾ, ಆರೋಒಪಿ ಎಂ.ಡಿ ಸಮೀರ ಇತನಿಗೆ ಬಲಗಡೆ ಮುಖದ ಮೇಲೆ ತರಚಿದ ಗಾಯ, ಬಲಗಡೆ ಮೋಳಕಾಲ ಮೇಲೆ ಗುಪ್ತಗಾಯವಾಗಿ ಬಾವು ಬಂದಿದ್ದು, ಬಲಗಾಲ ಮೋಳಕಾಲ ಕೆಳಗಡೆ ತರಚಿದ ಗಾಯ, ಬಲಗಾಲ ಕಿರುಬೇರಳಿಗೆ ಹಾಗೂ ನಡು ಬೇರಳಿಗೆ ರಕ್ತಗಾಯವಾಗಿರುತ್ತದೆ, ಎಂ.ಡಿ ಸಮೀರ ಇತನು ತನ್ನ ವಾಹನದ ಹಿಂದುಗಡೆ ಕುಳಿತ ಶಾದಾಬ ಇತನಿಗೆ ಯಾವುದೆ ಗಾಯ ಆಗಿರುವುದಿಲ್ಲಾ, ನಂತರ ಅಲ್ಲಿಯ ಜನರು 108 ಗೆ ಕರೆ ಮಾಡಿ ಗಾಯಗೊಂಡವರಿಗೆ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 27/2021, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 11-04-2021 ರಂದು ಮರಖಲ
ಗ್ರಾಮ ಶಿವಾರದ ಸಾಯಿ ಬಾಬಾ ಮಂದಿರದ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು
ಅಂದರ-ಬಾಹರ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತ ರವಿಕುಮಾರ ಪೊಲೀಸ್ ಉಪ ನಿರೀಕ್ಷಕರು ಜನವಾಡಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ
ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡ, ಠಾಣೆಯ ಸಿಬ್ಬಂದಿವಯರೊಡನೆ ಮರಖಲ-ಬೀದರ ರೋಡಿನ ಮರಖಲ
ಗ್ರಾಮದ ಸಾಯಿ ಬಾಬಾ ಮಂದಿರದ ಹಿಂದುಗಡೆ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಆರೋಪಿತರಾದ 1) ನೀಲಕಂಟ
ತಂದೆ ಅಡೆಪ್ಪ ಭುಯ್ಯ 2) ರಮೇಶ ತಂದೆ ಸೈದಪ್ಪ ಕನ್ಹೇರಿ, 3) ಶಂಕರ ತಂದೆ ಕಾಮಶೆಟ್ಟಿ
ಝಿಳ್ಳೆ, 4)
ಶಿವಕುಮಾರ
ತಂದೆ ಲಕ್ಷ್ಮಣ ಪಾರಾ, 5) ಕಾಮಶೆಟ್ಟಿ ತಂದೆ ಮಾಣಿಕಪ್ಪ ಹಾಗೂ 6) ಸಂಗಪ್ಪ ಎಲ್ಲರೂ
ಸಾ: ಮರಖಲ ಗ್ರಾಮ ಇವರೆಲ್ಲರೂ ದುಂಡಾಗಿ ಕಳಿತು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ
ಎಂಬ ನಸೀಬಿನ ಇಸ್ಪಿಟ್ ಜೂಜಾಟ ಆಡುತ್ತಿರುವಾಗ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿಯುವಷ್ಟರಲ್ಲಿ ಆರೋಪಿ ನಂ. 3 ರಿಂದ 6 ನಾಲ್ಕು ಜನರು ಓಡಿ ಹೋಗಿರುತ್ತಾರೆ, ಉಳಿದ
ಇಬ್ಬರಿಗೆ ಹಿಡಿದು ಅವರಿಂದ ನಗದು ಹಣ 2680/- ರೂ. ಹಾಗೂ ಒಟ್ಟು 52 ಇಸ್ಪಿಟ್ ಎಲೆಗಳನ್ನು
ಜಪ್ತಿ ಮಾಡಿಕೊಂಡು ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.