Police Bhavan Kalaburagi

Police Bhavan Kalaburagi

Monday, July 13, 2020

BIDAR DISTRICT DAILY CRIME UPDATE 13-07-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 13-07-2020

ಸಂತಪುರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 09/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 12-07-2020 ರಂದು ಫಿರ್ಯಾದಿ ಮಾಹಾದೇವ ತಂದೆ ಶರಣಪ್ಪಾ ಯಲ್ಲಶೇಟ್ಟೆ ವಯ: 36 ವಷರ್, ಜಾತಿ: ಲಿಂಗಾಯತ, ಸಾ: ಬಲೂರ(ಜೆ) ರವರಿಗೆ ಗೋತ್ತಾಗಿದ್ದೆನೆಂದರೆ ಕೌಠಾ(ಬಿ) ಗ್ರಾಮದ ಮಾಂಜ್ರಾ ನದಿಯಲ್ಲಿ ಒಬ್ಬಳ ಅಪರಿಚಿತ ಹೆಣ್ಣು ಮಗಳ ಶವವನ್ನು ಕೌಠಾ(ಬಿ) ಗ್ರಾಮದ ವಿಜಯಕುಮಾರ ಬೆಳ್ಳುರೆ ಇವರ ಹೊಲದ ಮಾಂಜ್ರಾ ನದಿಯ ದಂಡಿಯ ಹತ್ತಿರ ಬಂದು ನೀರಿನಲ್ಲಿ ಬಾಳು ಬಿದ್ದಿರುತ್ತದೆ ಅಂತ ಗೋತ್ತಾದ ತಕ್ಷಣ ಫಿರ್ಯಾದಿಯು ತಮ್ಮೂರ ಮಾರುತಿ ತಂದೆ ಶಿವಾಜಿ ನಂದಗಾಂವೆ ಜೊತೆಯಲ್ಲಿ ತಮ್ಮ ಮೋಟಾರ ಸೈಕಲ ಮೇಲೆ ಹೋಗಿ ವಿಜಯಕುಮಾರ ಇವರ ಹೋಲದ ಹತ್ತಿರ ಇರುವ ಮಾಂಜ್ರಾ ನದಿಯ ದಂಡಿಗೆ ಹೋಗಿ ನೋಡಲಾಗಿ ಒಬ್ಬ ಹೆಣ್ಣು ಮಗಳ ಶವವನ್ನು ನೀರಿನಲ್ಲಿ ಬಾಳು ಬಿದ್ದಿದ್ದು ಅದನ್ನು ನೋಡಿ ಫಿರ್ಯಾದಿ ಮತ್ತು ಮಾರುತಿ ನಂದಗಾಂವೆ ಬಲ್ಲೂರ (ಜೆ) ಹಾಗೂ ವಿಜಯಕುಮಾರ ತಂದೆ ಗುಂಡಪ್ಪ ದಿನೆ ಸಾ: ಕೌಠಾ(ಬಿ), ವಿಜಯಕುಮಾರ ತಂದೆ ಗುಂಡಪ್ಪಾ ಬೆಳೂರೆ ಸಾ: ಕೌಠಾ(ಬಿ), ನಾಗಶೆಟ್ಟಿ ತಂದೆ ರಾಮಶೆಟ್ಟಿ ಬಿರಾದಾರ, ಸಾ: ಕೌಠಾ(ಬಿ) ರವರೆಲ್ಲರೂ ಕೂಡಿ ಅಪರಿಚಿತ ಮಹಿಳೆಯ ಶವವನ್ನು ನದಿಯಿಂದ ದಂಡಿಯ ಮೇಲೆ ತೆಗದು ಅವಳಿಗೆ ನೋಡಲು ಅವಳ ವಯಸ್ಸು ಸುಮಾರು 50 ರಿಂದ 55 ವರ್ಷ ಇರುತ್ತದೆ ಮತ್ತು ಕಪ್ಪು ಮೈಬಣ್ಣ ಇದ್ದು, ದುಂಡು ಮುಖ, ನೀಟಾದ ಮೂಗು, ಕಣ್ಣು ಬಾಯಿ ಮುಚ್ಚಿದ್ದು ಕೆಂಪು ಚೀಟಿನ ಸೀರೆ ಅದರ ಒಳಗೆ ಹಳದಿ ಬಣ್ಣದ ಗೇರೆಗಳು ಮತ್ತು ಹೂಗಳು ಇರುತ್ತವೆ, ಕೆಂಪು ಬಣ್ಣದ ಬ್ಲೌಜ್ ಇದ್ದು ಮತ್ತು ಚಾಕ್ಲೆಟ್ ಬಣ್ಣದ ಲಂಗಾ ಇರುತ್ತದೆ, ಅವಳ ಎತ್ತರ ಸುಮಾರು 5 ಫೀಟ್ 3 ಇಂಚು ಇರುತ್ತದೆ, ಅವಳು ದಿನಾಂಕ 12-07-2020 ರಂದು ಮಧ್ಯರಾತ್ರಿ 0100 ಗಂಟೆಯಿಂದ 1130 ಗಂಟೆಯವರಗೆ ಮಾಂಜ್ರಾ ನದಿಯಲ್ಲಿ ಬಿದ್ದು ಮೃತಪಟ್ಟಿರಬಹುದು, ಅವಳ ಮೇಲೆ ಯಾವುದೆ ರೀತಿಯ ಗಾಯಗಳು ಕಂಡು ಬಂದಿರುವದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ಸಂ. 15/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 12-07-2020 ರಂದು ಫಿರ್ಯಾದಿ ರಘುನಾಥ ತಂದೆ ವಿಠಲರಾವ ಗೌಳಿ ಸಾ: ನ್ಯೂ ಆದರ್ಶ ಕಾಲೋನಿ, ಬೀದರ ರವರ ಮಗನಾದ ಕೋಡಿಬಾ ಈತನಿಗೆ ಜ್ಯೋತಿ ಇವಳೊಂದಿಗೆ ಮದುವೆ ಮಾಡಿಕೊಳ್ಳುವುದು ಇಷ್ಟ ಇಲ್ಲದೆ ಇದ್ದ ಕಾರಣ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಹಾಕಿಕೊಂಡಿದ್ದು ಚಿಕಿತ್ಸೆ ಕುರಿತು ಆಸ್ಪತ್ರೆಗೆ ತರುವಾಗ ಮಾರ್ಗ ಮದ್ಯದಲ್ಲಿ ಮೃತಪಟ್ಟಿರುತ್ತಾನೆ, ಕೋಡಿಬಾ ಈತನ ಸಾವಿನಲ್ಲಿ ಯಾರ ಮೇಲೂ ಯಾವುದೇ ತರಹದ ಸಂಶಯ ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 92/2020, ಕಲಂ. 457, 380 ಐಪಿಸಿ :-
ದಿನಾಂಕ 03-07-2020 ರಂದು 2000 ಗಂಟೆಯಿಂದ ದಿನಾಂಕ 04-07-2020 ರಂದು 0630 ಗಂಟೆಯ ಮಧ್ಯದ ಅವದಿಯಲ್ಲಿ ಫಿರ್ಯಾದಿ ಕೇದರನಾಥ ತಂದೆ ಮಲ್ಲಿಕಾರ್ಜುನ ಪಸಾರೆ ಸಾ: ಆದರ್ಶ ಕಾಲೋನಿ ಬಸವಕಲ್ಯಾಣ ರವರ ಮನೆಯಲ್ಲಿ ಯಾರೋ ಅಪರಿಚಿತ ಕಳ್ಳರು ಮನೆಯ ಕೀಲಿ ಮುರಿದು ಒಳಗಡೆ ಪ್ರವೇಶ ಮಾಡಿ ಮನೆಯಲ್ಲಿದ್ದ ಬೆಳ್ಳಿಯ ಸಾಮಾನುಗಳು .ಕಿ 72,000/- ರೂ. ಹಾಗೂ ನಗದು ಹಣ 20,000/- ರೂ. ಹೀಗೆ ಒಟ್ಟು 92,000/- ರೂ. ಬೆಲೆ ಬಾವಳುವುದನ್ನು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರು ಅರ್ಜಿ ಸಾರಾಂಶದ ಮೇರೆಗೆ ದಿನಾಂಕ 12-07-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 57/2020, ಕಲಂ. 15(ಎ), 32(3) ಕೆ.ಇ ಕಾಯ್ದೆ :-
ದಿನಾಂಕ 12-07-2020 ರಂದು ತೊಗಲೂರ ಕ್ರಾಸ ಹತ್ತಿರ ಬಸವಕಲ್ಯಾಣ ಗೋರ್ಟಾ(ಬಿ) ರೋಡಿನ ಹತ್ತಿರ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಅನಧಿಕೃತವಾಗಿ ಸರಾಯಿವುಳ್ಳ ಬಾಟಲಗಳನ್ನು ಮಾರಾಟ ಮಾಡುವ ಕುರಿತು ತನ್ನ ಹತ್ತಿರ ಸರಾಯಿವುಳ್ಳ ಬಾಟಲಿಗಳನ್ನು ಇಟ್ಟುಕೊಂಡು ಕುಳಿತ್ತಿದ್ದಾನೆ ಮತ್ತು ಅದೆ ಸ್ಥಳದಲ್ಲಿ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅನುವು ಮಾಡಿಕೊಡುತ್ತಿದ್ದಾನೆಂದು ವಸೀಮ್ ಪಟೇಲ್ ಪಿಎಸ್ಐ (ಕಾ&ಸು) ಬಸವಕಲ್ಯಾಣ  ಗ್ರಾಮೀಣ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ತೊಗಲೂರ ಕ್ರಾಸ ಹತ್ತಿರ ಹೋಗಿ ನೋಡಲು ಆರೋಪಿ ಪ್ರದೀಪ ತಂದೆ ಧರ್ಮಾಜಿ ತೇಲಂಗ ವಯ: 28 ವರ್ಷ, ಜಾತಿ: ಇಡಗಾರ, ಸಾ: ಗೋರ್ಟಾ(ಬಿ)  ಇತನು ಒಂದು ಚೀಲದಲ್ಲಿ ಸರಾಯಿ ಇಟ್ಟಿಕೊಂಡು ಅನಧಿಕೃತವಾಗಿ ಸರಾಯಿವುಳ್ಳ ಬಾಟಲಗಳನ್ನು ಮಾರಾಟ ಮಾಡುವ ಕುರಿತು ತನ್ನ ಹತ್ತಿರ ಸರಾಯಿವುಳ್ಳ ಬಾಟಲಿಗಳನ್ನು ಇಟ್ಟುಕೊಂಡು ಕುಳಿತ್ತಿದ್ದಾನೆ ಮತ್ತು ಅದೆ ಸ್ಥಳದಲ್ಲಿ ಸಾರ್ವಜನಿಕರಿಗೆ ಸರಾಯಿ ಕುಡಿಯಲು ಅನುವು ಮಾಡಿಕೋಡುತ್ತಿರುವದನ್ನು ನೊಡಿ ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ಎಲ್ಲರೂ ಪಂಚರ ಸಮಕ್ಷಮ ದಾಳಿ ಮಾಡಿದಾಗ ಅಲ್ಲಿ  ಸರಾಯಿ ಖರೀದಿ ಮಾಡುತ್ತಿದ್ದ ಜನರು ಓಡಿ ಹೋಗಿರುತ್ತಾರೆ, ನಂತರ ಸದರಿ ಆರೋಪಿಗೆ ಚೀಲದಲ್ಲಿ ಎನಿದೆ ಅಂತಾ ವಿಚಾರಿಸಿದಾಗ ಇದರಲ್ಲಿ ಸರಾಯಿ ಬಾಟಲಗಳು ಇವೆ ಅಂತಾ ತಿಳಿಸಿದನು, ಪುನಃ ಆತನಿಗೆ ನಿನ್ನ ಹತ್ತಿರ ಸರಾಯಿ ಮಾರಾಟ ಮಾಡಲು ಸರಕಾರದಿಂದ ಯಾವುದೇ ರೀತಿಯ ಪರವಾನಗಿ ಇದೆಯಾ ಅಂತಾ ವಿಚಾರಿಸಿದಾಗ ಆತನು ತಿಳಿಸಿದೇನೆಂದರೆ ತನ್ನ ಹತ್ತಿರ ಯಾವುದೇ ರೀತಿಯ ಸರಕಾರದಿಂದ ಪರವಾನಗಿ ಇಲ್ಲಾ ಆದರೂ ಕೂಡ ನಾನು ಒಂದು ಚೀಲದಲ್ಲಿ ಸರಾಯಿ ಇಟ್ಟುಕೊಂಡು ಅನಧಿಕೃತವಾಗಿ ಸರಾಯಿವುಳ್ಳ ಬಾಟಲಗಳನ್ನು ಮಾರಾಟ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದೆನೆಂದು ತಿಳಿಸಿದನು, ನಂತರ ಸದಸರಿ ಚೀಲವನ್ನು ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು ಅದರಲ್ಲಿ 1) ಓಲ್ಡ ಟಾವರ್ನ ವಿಸ್ಕಿ 180 ಎಂ.ಎಲ್ 3 ಪೌಚಗಳು 258/- ರೂ., 2) ಕಿಂಗಫೀಶರ ಸ್ಟ್ರಾಂಗ ಪ್ರಿಮಿಯಂ ಬೀರ್ 650 ಎಂಎಎಲ್ 7 ಬಾಟಲಗಳು ಅ.ಕಿ 1050/- ರೂಪಾಯಿ ಇರುತ್ತದೆ, ನಂತರ ಸದರಿ ಸರಾಯಿ ಬಾಟಲಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಅಪರಾಧ ಸಂ. 95/2020, ಕಲಂ. 79, 80 ಕೆ.ಪಿ ಕಾಯ್ದೆ :-
ದಿನಾಂಕ 12-07-2020 ರಂದು ಭಾಲ್ಕಿ-ಭಾತಂಬ್ರಾ ರೋಡಿಗೆ ಇರುವ ಸಾಯಿ ಹೋಟಲ ಮಾಲಿಕನಾದ ಮಲ್ಲಿಕಾರ್ಜುನ ತಂದೆ ಪ್ರಭಣ್ಣಾ ವಾಲೆ ಸಾ: ಭಾಲ್ಕಿ ಇತನು ತನ್ನ ಹತ್ತಿರ ಸರಕಾರದಿಂದ ಯಾವುದೇ ಅನುಮತಿ ಪತ್ರ ಇಲ್ಲದೇ ತನ್ನ ಹೋಟೆಲಲ್ಲಿ ಒಂದು ಕೊಣೆಯಲ್ಲಿ ಕೆಲವು ಜನರಿಗೆ ದುಂಡಾಗಿ ಕೂಡಿಸಿ ಹಣ ಹಚ್ಚಿ ಪಣ ತೊಟ್ಟು ಪರೇಲ್ ಎಂಬ ನಸೀಬಿನ ಜೂಜಾ ಆಡುವುದಕ್ಕೆ ಅನುವು ಮಾಡಿ ಇಸ್ಪೀಟ ಜೂಜಾಟಾ ಆಡಿಸುತ್ತಿದ್ದಾನೆಂದು ಡಾ. ದೇವರಾಜ ಬಿ ಡಿ.ಎಸ್.ಪಿ. ಭಾಲ್ಕಿ ರವರಿಗೆ ಚಿತ ಬಾತ್ಮಿ ಬಂದ ಮೇರೆಗೆ ಡಿಎಸ್ಪಿ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಸಾಯಿ ಹೋಟೆಲ್ ಸಮೀಪ ಇರುವ ಪೆಟ್ರೊಲ ಬಂಕ ಹತ್ತಿರ ಹೋಗಿ ಮರೆಯಾಗಿ ನೋಡಲು ಸದರಿ ಹೋಟೆಲಲ್ಲಿ ಮೊದಲನೆ ಮಹಡಿಗೆ ಹೋಗಿ ಕೊಣೆ ಸಂಖ್ಯೆ 109 ನೇದ್ದರಲ್ಲಿ 8 ಜನರು ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಪರೇಲ ಎಂಬ ನಸಿಬಿನ ಜೂಜಾಟಾ ಆಡುತ್ತಿರುವುದನ್ನು ನೋಡಿ ಖಾತ್ರಿ ಪಡಿಸಿಕೊಂಡು ಸದರಿಯವರ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಅವರ ಹೆಸರು ವಿಚಾರಿಸಲು 1) ಸಂತೋಷ ತಂದೆ ಬಸವಣಪ್ಪಾ ವಯ: 42 ವರ್ಷ, ಜಾತಿ: ಲಿಂಗಾಯತ, ಸಾ: ಗೊರಚಿಂಚೋಳಿ, 2) ಮಹೇಶ ತಂದೆ ರಾಜೆಣ್ಣಾ ವಯ 45 ವರ್ಷ ಜಾತಿ: ಲಿಂಗಾಯತ, ಸಾ: ಹಳೆ ಭಾಲ್ಕಿ, 3) ಶಿವಾನಂದ ತಂದೆ ಹಣಮಂತರಾವ ಖಾಶೇಂಪೂರೆ ವಯ: 40 ವರ್ಷ, ಜಾತಿ: ಮರಾಠಾ, ಸಾ: ಚಿಕ್ಕಲಚಾಂದಾ, 4) ಶಿವಕುಮಾರ @ ಚುವಾ ತಂದೆ ಗುರಪ್ಪಾ ವಯ: 25 ವರ್ಷ, ಜಾತಿ: ವಡ್ಡರ, ಸಾ: ಭಾಲ್ಕಿ, 5) ಮೇಘರಾಜ ತಂದೆ ಅಶೋಕ ಪಾಟೀಲ್ ವಯ: 28 ವರ್ಷ, ಜಾತಿ: ಲಿಂಗಾಯತ, ಸಾ: ಬೀರಿ(ಬಿ), 6) ಚಂದ್ರಕಾಂತ ತಂದೆ ಬಾಬುರಾವ ವಯ: 40 ವರ್ಷ, ಜಾತಿ: ಲಿಂಗಾಯತ, ಸಾ: ಬೀರಿ(ಬಿ), 7) ದಿಗಂಬರ ತಂದೆ ಬಸಪ್ಪಾ ವಯ: 39 ವರ್ಷ, ಜಾತಿ: ಕುರುಬ, ಸಾ: ಕಲವಾಡಿ, 8) ಸತೀಷ ತಂದೆ ಪಾಂಡುರಂಗ ಪಾಟೀಲ್ ವಯ: 40 ವರ್ಷ, ಜಾತಿ: ಮರಾಠಾ, ಸಾ: ತೆಲಗಾಂವ ಅಂತ ತಿಳಿಸಿದ್ದು, ನಂತರ ಅವರಿಂದ ನಗದು ಹಣ 5500/- ಹಾಗೂ 52 ಇಸ್ಪಿಟ್ ಲೆಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಹುಮನಾಬಾದ ಪೊಲೀಸ್ ಠಾಣೆ ಅಪರಾಧ ಸಂ. 101/2020, ಕಲಂ. 32, 34 ಕೆ. ಕಾಯ್ದೆ :-
ದಿನಾಂಕ 12-07-2020 ರಂದು ರವಿಕುಮಾರಪಿಎಸಐ (ಕಾ.ಸು) ಹುಮನಾಬಾದ ಪೊಲೀಸ ಠಾಣೆ ರವರಿಗೆ ಬಂದ ಖಚಿತ ಬಾತ್ಮಿ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಅಕ್ರಮವಾಗಿ ಸರಾಯಿ ಬಾಟಲಗಳನ್ನು ತೆಗೆದುಕೊಂಡು ಹೊಗುತ್ತಿದ್ದವರ ಮೇಲೆ ದಾಳಿ ಮಾಡಿ ಆರೋಪಿತರಾದ ಗೋಕುಲ ಪ್ರಸಾದ ತಂದೆ ಭೊಪಾಲ ಪ್ರಸಾದ ದುಬೆ, ವಯ: 46 ವರ್ಷ, ಜಾತಿ: ರಜಾಪುತ, ಸಾ: ನಾಗರೇಶ್ವರ ಮಂದಿರ ಹತ್ತಿರ ಜವಾಹರ ರೋಡ ಹುಮನಾಬಾದ ಇತನ ಮೇಲೆ ದಾಳಿ ಮಾಡಿ ಹಿಡಿದುಕೊಂಡು ಅವನಿಂದ 1) ಓರಿಜೀನಲ್ ಚ್ವಾಯಿಸ್ 90 ಎಮ.ಎಲ 22 ಸರಾಯಿ ಪಾಕೇಟಗಳು .ಕಿ 772.86 ರೂಪಾಯಿಗಳು, 2) ಓಲ್ಡ ಟಾವರ್ನ 180 ಎಂ.ಎಲದ 08 ಪಾಕೇಟಗಳು .ಕಿ  694.00 ರೂಪಾಯಿಗಳು ಹಾಗೂ 3) ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ .ಕಿ 00=00 ರೂ. ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 153/2020, ಕಲಂ. 32, 34 ಕೆ. ಕಾಯ್ದೆ :-
ದಿನಾಂಕ 12-07-2020 ರಂದು ಭಾಲ್ಕಿಯ ಫೂಲೆ ಚೌಕ ಹತ್ತಿರ ಗ್ರೀನ್ ಪಾರ್ಕ ಬಾರ ಎದುರಿಗೆ ಇಬ್ಬರು ವ್ಯಕ್ತಿಗಳು ಸರಾಯಿ ಮಾರಾಟ ಮಾಡುತ್ತಿದ್ದಾರೆಂದು ಅಮರ ಕುಲರ್ಣಿ ಪಿ.ಎಸ್.-1 (ಕಾಸೂ) ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ತರಕಾರಿ ಮಾರ್ಕೆಟ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಗ್ರೀನ್ ಪಾರ್ಕ ಎದುರಿಗೆ ಆರೋಪಿತರಾದ 1) ಶರಣಪ್ಪಾ ತಂz ಈರಪ್ಪಾ ಗೋಧಮಪಳ್ಳೆ ವಯ: 67 ವರ್ಷ, ಜಾತಿ: ಲಿಂಗಾಯತ, ಸಾ: ಬುದೇರಾ, ತಾ: ಬೀದರ ಹಾಗೂ 2) ರವಿ ತಂದೆ ಹೀರು ಜಾಧವ ವಯ: 22 ವರ್ಷ, ಜಾತಿ: ಲಮಾಣಿ, ಸಾ: ನಾವದಗಿ ತಾಂಡಾ, ತಾ: ಭಾಲ್ಕಿ ಇವರಿಬ್ಬರು ತಮ್ಮ ವಶದಲ್ಲಿ ಒಂದು ಕ್ಯಾರಿ ಬ್ಯಾಗನ್ನು ಇಟ್ಟುಕೊಂಡು ಕುಳಿತಿವುದನ್ನು ನೋಡಿ ಪಂಚರ ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿ ಹಿಡಿದು ಅವರ ವಶದಲ್ಲಿದ್ದ ಚೀಲದ ಕ್ಯಾರಿ ಬ್ಯಾಗನ್ನು ಪರಿಶೀಲಿಸಿ ನೋಡಲು ಅದರಲ್ಲಿ 90 ಎಂ.ಎಲ್ ವುಳ್ಳ 32 ಯು.ಎಸ್ ವಿಸ್ಕಿಯ ಪ್ಲಾಸ್ಟೀಕ ಬಾಟಲಿಗಳು .ಕಿ 1124/- ರೂ. ಇದ್ದು, ಸದರಿ ಸರಾಯಿಯನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.