ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 14-04-2021.
ಮಾರ್ಕೇಟ ಪೊಲೀಸ್ ಠಾಣೆ ಯು.ಡಿ.ಆರ್. ಸಂಖ್ಯೆ 4/2021 ಕಲಂ 174(ಸಿ) ಸಿಆರ್.ಪಿ.ಸಿ :-
ದಿನಾಂಕ: 12/4/2021 ರಂದು 0900 ಗಂಟೆಯಿಂದ 1000 ಗಂಟೆಯ ಅವಧಿಯಲ್ಲಿ
ರೇಲ್ವೇ ಸ್ಟೇಷನ್ ಹತ್ತಿರ ಯಾವುದೋ ರೋಗದಿಂದ ಬಳಲುತ್ತಾ ಮಲಗಿದ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಮೃತನ ಹೆಸರು ಪ್ರಕಾಶ, ಅಂದಾಜು 55 ವರ್ಷದ ಗಂಡು
ವ್ಯಕ್ತಿ ಬೀದರ ಇವನ ಮರಣದ ಬಗ್ಗೆ ನನಗೆ ಯಾರ
ಮೇಲೆ ಯಾವುದೇ ಸಂಶಯ ಇರುವದಿಲ್ಲಾ ಅಂತಾ ಫಿರ್ಯಾದಿ ಶ್ರೀ. ತಾಜೊದ್ದಿನ್ ತಂದೆ ಸೈಯದ ಖಾಜಾಮಿಯ್ಯಾ
ಸಾ: ಚಿಂತಲಗೆರಾ ರವರು ನೀಡಿದ ಫಿರ್ಯಾದಿ ಮೆರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 40/2021 ಕಲಂ 379 ಐಪಿಸಿ :-
ದಿನಾಂಕ 12/04/2021
ರಂದು 1945 ಗಂಟೆಗೆ ಫಿರ್ಯಾದಿ ಶ್ರೀ. ಪ್ರಕಾಶ ತಂದೆ ಶರಣಪ್ಪ ಶಿಂಧೆ ವಯ:46 ವರ್ಷ ಉ:ಎಫ್.ಡಿ.ಸಿ. ಸಾ/ಚೆನ್ನಬಸವ ನಗರ ಕುಂಬಾರವಾಡಾ ರೋಡ
ಬೀದರ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು
ಸಲ್ಲಿಸಿದರ ಸಾರಾಂಶವೆನೆಂದರೆ ಫಿರ್ಯಾದಿಯ ಒಂದು
ಹೀರೊ ಹೊಂಡಾ ಸ್ಪ್ಲೆಂಡರ ಮೊಟರ
ಸೈಕಲ ನಂ ಕೆಎ38ಎಚ್8607 ನೇದನ್ನು
2003 ನೇ ಸಾಲಿನಲ್ಲಿ ಖರಿದಿಸಿದ್ದು ಇರುತ್ತದೆ. ಪ್ರತಿದಿನದಂತೆ ದಿನಾಂಕ 26/03/2021 ರಂದು ಮುಂಜಾನೆ 9:15 ಗಂಟೆಗೆ ದೇವಿ ಕಾಲೋನಿಯಲ್ಲಿರುವ ಭವಾನಿ ದೇವಿ ಮಂದಿರದ
ಪಕ್ಕದಲ್ಲಿ ಮೊಟಾರ ಸೈಕಲನ್ನು ನಿಲ್ಲಿಸಿ, ಕೆಲಸಕ್ಕಾಗಿ ಹುಮನಾಬಾದ ನ್ಯಾಯಾಲಯಕ್ಕೆ
ಹೋಗಿದ್ದು ಇರುತ್ತದೆ. ಸಾಯಂಕಾಲ 9:00 ಪಿ.ಎಮ್. ಗಂಟೆಗೆ
ಮರಳಿ ಬಂದು ನೋಡಿದಾಗ ಮೊಟರ ಸೈಕಲ
ನಾನು ಇಟ್ಟಿದ್ದ ಜಾಗದಲ್ಲಿ ಇದ್ದಿರುವದಿಲ್ಲ. ಮೊಟರ ಸೈಕಲ ಕಳುವಾದ ಬಗ್ಗೆ ನಮ್ಮ ಶಿವರಾಜ ಸಾ/ಮಂಗಲಪೇಟ ಬೀದರ ಹಾಗು ದಿಲಿಪ
ಸಾ/ಗೊರನಳ್ಳಿ ಇವರಿಗೆ ತಿಳಿಸಿದೆನು.
ನಾನು ಮತ್ತು ಅವರು ಕೂಡಿಕೊಂಡು ನಮ್ಮ
ಕಳುವಾದ ಮೊಟರ ಸೈಕಲನ್ನು ಎಲ್ಲಾ ಕಡೆಗೆ ಹುಡುಕಾಡಿದೆವು ಎಲ್ಲಿಯೂ ಪತ್ತೆ
ಯಾಗಿರುವದಿಲ್ಲ. ನಾನು ಕಳುವಾದ ಮೊಟರ ಸೈಕಲನ್ನು ಎಲ್ಲಾ ಕಡೆಗೆ ಹುಡುಕಾಡಿ
ಸಿಗದಿದ್ದಾಗ ಠಾಣೆಗೆ ಬಂದು ದೂರು ನೀಡಲು ತಡವಾಗಿರುತ್ತದೆ. ಕಳ್ಳತನವಾದ ಮೋಟಾರ್ ಸೈಕಲ್ ವಿವರ ಹೀರೊ ಹೊಂಡಾ
ಸ್ಪ್ಲೆಂಡರ ಮೊಟರ ಸೈಕಲ ನಂ ಕೆಎ38ಎಚ್8607 ಚಾ.ನಂ. 03ಎಚ್20ಸಿ02201 ಇಂ. ನಂ. 03ಎಚ್18ಎಮ್11932 ಮಾಡಲ್: 2003, ಬಣ್ಣ:
ಕಪ್ಪು ಬಣ್ಣ ಇದ್ದು ಅಂದಾಜು ಕಿಮ್ಮತ್ತು
ರೂ- 15,000/-ರೂ ಆಗಿರುತ್ತದೆ
ಕಾರಣ ದಿನಾಂಕ 26/03/2021 ರಂದು ಮುಂಜಾನೆ 9:15 ಎಎಮ್. ಗಂಟೆಯಿಂದ 9:00 ಪಿ.ಎಮ. ಗಂಟೆಯ
ಅವಧಿಯಲಿ ದೇವಿ ಕಾಲೋನಿಯಲ್ಲಿ ಇರುವ ಭವಾನಿದೇವಿ
ಮಂದಿರದ ಹತ್ತೀರ ನಿಲ್ಲಿಸಿದ ಹೀರೊ ಹೊಂಡಾ ಸ್ಪ್ಲೆಂಡರ ಮೊಟರ ಸೈಕಲ
ನಂ ಕೆಎ38ಎಚ್8607 ನೇದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.
ಬಸವ ಕಲ್ಯಾಣ ಸಂಚಾರ
ಪೊಲೀಸ್ ಠಾಣೆ ಅಪರಾಧ ಸಂಖ್ಯೆ 35/2021 ಕಲಂ 279, 304 (ಎ) ಐಪಿಸಿ :-
ದಿನಾಂಕ 12/04/2021 ರಂದು ಮಧ್ಯಾಹ್ನ 1445 ಗಂಟೆಗೆ
ಫಿರ್ಯಾದಿ ಶ್ರೀ ರಾಜಕುಮಾರ ತಂದೆ ಚಂದರ ಜಾಧವ ವಯ:
26 ವರ್ಷ, ಜಾತಿ,: ಲಮಾಣಿ, ಉ: ವಿದ್ಯಾರ್ಥಿ, ಸಾ; ಖಿಂಡಿತಾಂಡಾ ತಾ; ಕಾಳಗಿ, ಜಿ: ಕಲಬುರ್ಗಿ
ಈತನ ಹೇಳಿಕೆಯನ್ನು ಪಡೆದುಕೊಂಡು ಅದರ ಸಾರಾಂಶವೆನೆಂದರೆ,
ಇವರ ತಂದೆಯಾದ
ಚಂದರ ತಂದೆ ಪ್ರೇಮಸಿಂಗ್ ಜಾಧವ ವಯ: 46 ವರ್ಷ, ರವರು
ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಹಿಗಿರುವಾಗ ದಿನಾಂಕ 12/04/2021 ರಂದು 07:00 ಎ.ಎಮ್
ಗಂಟೆಗೆ ತಂದೆಯಾದ ಚಂದರ
ರವರು ಖಾಸಗಿ ಕೆಲಸ ಕುರಿತು ಬಸವಕಲ್ಯಾಣಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ತನ್ನ
ಮೋಟಾರ ಸೈಕಲ ನಂ ಕೆಎ32ಇಆರ್2320 ನೇದರ ಮೇಲೆ
ಹೋಗಿರುತ್ತಾರೆ. ರಾ.ಹೇ.ನಂ-65 ರೋಡಿನ
ಮೇಲೆ ಅತಲಾಪುರ ಕ್ರಾಸ್ ಹತ್ತಿರ ರಸ್ತೆ ಅಪಘಾತವಾಗಿ ತೆಲೆಗೆ ಭಾರಿ ರಕ್ತಗಾಯವಾಗಿ ಸಂಪೂರ್ಣ ತಲೆ ಒಡೆದು ಚಿದಿಯಾಗಿರುತ್ತದೆ
ಮತ್ತು ಎಡಗೈ ಮುಂಗೈಗೆ ಭಾರಿ ರಕ್ತಗಾಯ ಮತ್ತು ಬಲಗೈ ಮೊಳಕೈ,
ರಟ್ಟೆಗೆ
ಭಾರಿ ರಕ್ತಗಾಯ ಮತ್ತು ತರಚಿದ ರಕ್ತಗಾಯವಾಗಿ ಮೃತಟ್ಟಿದ್ದರು.
ನಂತರ
ಅಲ್ಲಿಯೇ ಹಾಜರಿದ್ದ
ನಮ್ಮೂರ ಅಜಯ ಈತನಿಗೆ ವಿಚಾರಿಸಲು ತಿಳಿಸಿದ್ದೆನಂದರೆ,
ನಿಮ್ಮ
ತಂದೆಯವರಾದ ಚಂದರ ರವರು ತನ್ನ ಮೋಟರ ಸೈಕಲ ನಂ ಕೆಎ32ಇಆರ್2320 ನೇದ್ದನ್ನು
ಅತಲಾಪೂರ ಕ್ರಾಸ್ ಹತ್ತಿರವಿರುವ ರಿಲಾಯನ್ಸ್ ಪೆಟ್ರೊಲ್ ಬಂಕ್ ಪಕ್ಕದಲ್ಲಿರುವ ಕಚ್ಚಾ ರೋಡಿನ
ಕಡೆಯಿಂದ ಚಲಾಯಿಸಿಕೊಂಡು ರಾ.ಹೇ.ನಂ-65 ರೋಡಿಗೆ
ಬಂದು ಬಂಗ್ಲಾ ಕಡೆಗೆ ಹೋಗಲು ತನ್ನ ಮೋಟರ ಸೈಕಲನ ಎಡಭಾಗದ ಇಂಡಿಕೇಟರ್ ಹಾಕಿ ಎಡಕ್ಕೆ
ತಿರುಗಿಸಿಕೊಳ್ಳುತ್ತಿರುವಾಗ ಸಮಯ 02:15 ಪಿ.ಎಮ್. ಗಂಟೆಗೆ
ಉಮರ್ಗಾ ಕಡೆಯಿಂದ ಒಂದು ಲಾರಿ ಚಾಲಕನು ತನ್ನ ಲಾರಿಯನ್ನು ಅತೀ ವೇಗ ಮತ್ತು ನಿಷ್ಕಾಳಜಿತನದಿಂದ
ಚಲಾಯಿಸಿಕೊಂಡು ಬಂದು ಮೋಟರ ಸೈಕಲಗೆ ಡಿಕ್ಕಿ ಮಾಡಿರುತ್ತಾನೆ. ಪರಿಣಾಮ ಭಾರಿ
ರಕ್ತಗಾಯ ಮತ್ತು ರಟ್ಟೆಗೆ ತರಚಿದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.