Police Bhavan Kalaburagi

Police Bhavan Kalaburagi

Saturday, June 20, 2020

BIDAR DISTRICT DAILY CRIME UPDATE 20--06-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 20-06-2020

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 81/2020, ಕಲಂ. 363 ಐಪಿಸಿ :-
ಶಿವರಾಜ ತಂದೆ ಬಸವರಾಜ ಬಿರಾದಾರ ವಯ: 34 ವರ್ಷ, ಜಾತಿ: ಲಿಂಗಾಯತ, ಸಾ: ಮುಡಬಿ, ತಾ: ಬಸವಕಲ್ಯಾಣ ರವರ ಚಿಕ್ಕಪ್ಪ ಚಂದ್ರಶೇಖರ ಬಿರಾದಾರ ರವರ ಮಗಳಾದ ಕುಮಾರಿ ರಾಧಿಕಾ ವಯ: 17 ವರ್ಷ ಮೊಬೈಲ್ ನಂ. 9980140240 ಇವಳು ಪಿಯುಸಿ ದ್ವೀತಿಯ ವರ್ಷದ ಇಂಗ್ಲಿಷ ಪೇಪರ ಬಸವಕಲ್ಯಾಣ ನಗರದ ಎಸ್.ಎಸ್.ಖೂಬಾ ಕಾಲೇಜದಲ್ಲಿ ಪರೀಕ್ಷೆ ಇದ್ದುದರಿಂದ ದಿನಾಂಕ 18-06-2020 ರಂದು 0845 ಗಂಟೆಗೆ ಫಿರ್ಯಾದಿಯು ತನ್ನ ದ್ವಿ-ಚಕ್ರ ವಾಹನದ ಮೇಲೆ ಕೂಡಿಸಿಕೊಂಡು 0930 ಗಂಟೆಗೆ ಎಸ್.ಎಸ್.ಖೂಬಾ ಕಾಲೇಜ್ ಗೇಟ್ ಹತ್ತಿರ ಬಿಟ್ಟು ಅಲ್ಲಿಂದ ಹೋಗಿ ನಂತರ 1330 ಗಂಟೆಗೆ ಕಾಲೇಜ್ ಹತ್ತಿರ ಹೋಗಿ ನೋಡಲು ಕುಮಾರಿ ರಾಧಿಕಾ ಬಿರಾದಾರ ಇವಳು ಇರಲಿಲ್ಲಾ, ರಾಧಿಕಾ ಇವಳು ಬಸ್ಸು ಹತ್ತಿಕೊಂಡು ಮುಡಬಿಗೆ ಹೋಗಿರಬೇಕೆಂದು ತಿಳಿದುಕೊಂಡಿದ್ದು, ನಂತರ ಚಿಕ್ಕಮ್ಮ ಶರಣಮ್ಮಾ ಗಂಡ ಚಂದ್ರಶೇಖರ ಬಿರಾದಾರ ಇವರು ಕರೆ ಮಾಡಿ ತಿಳಿಸಿದ್ದೆನೆಂದರೆ ಮಗಳು ರಾಧಿಕಾ ಇನ್ನೂ ಮನೆಗೆ ಬಂದಿರುವುದಿಲ್ಲಾ ಎಂದು ತಿಳಿಸಿದಾಗ ಫಿರ್ಯಾದಿಯು ಅವಳಿಗೆ ಅವಳ ಗೆಳತಿಯರ ಮನೆಯಲ್ಲಿ ಕುಳಿತಿರಬೇಕು ಮನೆಗೆ ಬರುತ್ತಾಳೆ ಎಂದು ತಿಳಿಸಿದ್ದು ಇರುತ್ತದೆ, ನಂತರ ರಾಧಿಕಾ ಇವಳ ಸ್ವಂತ ಅಣ್ಣನಾದ ಮಹಾದೇವ ತಂದೆ ಚಂದ್ರಶೇಖರ್ ಬಿರಾದಾರ ಮತ್ತು ಫಿರ್ಯಾದಿ ಇಬ್ಬರು ಕೂಡಿಕೊಂಡು ಎಸ್.ಎಸ್.ಖೂಬಾ ಕಾಲೇಗೆ ಹೊದಾಗ ಕಾಲೇಜ್ ಮುಚ್ಚಿದ್ದು ಸದರಿ ಕಾಲೇಜಿನಲ್ಲಿ ಗುಮಾಸ್ತ(ಕ್ಲರ್ಕ) ಕೆಲಸ ಮಾಡುವ ಮಾಲಿ ಪಾಟೀಲ್ ರವರಿಗೆ ಮೋಬೈಲ್ ಮುಖಾಂತರ ಮಾತನಾಡಿದಾಗ ನಿಮ್ಮ ತಂಗಿ ರಾಧಿಕಾ ಇವಳು ಪರೀಕ್ಷೆ ಬರೆಯಲು ಬಂದಿರುವುದಿಲ್ಲಾ ಪರೀಕ್ಷೆಗೆ ಗೈರು ಹಾಜರಾಗಿರುತ್ತಾಳೆ ಎಂದು ತಿಳಿಸಿರುತ್ತಾರೆ, ರಾಧೀಕಾ ಇವಳ ಚಹರೆ ಪಟ್ಟಿ ಉದ್ದ ಮುಖ, ನೇರ ಮೂಗು, ಗೋಧಿ ಮೈಬಣ್ಣ , ಎತ್ತರ ಅಂದಾಜು 5 ಅಡಿ ಇದ್ದು, ಮೈಮೇಲೆ ಕಪ್ಪು ಬಣ್ಣದ ನುರಿ ಡ್ರೇಸ್ ಇರುತ್ತದೆ, ಅವಳಿಗೆ ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡಲು ಬರುತ್ತದೆ, ಕಾರಣ ರಾಧಿಕಾ ತಂದೆ ಚಂದ್ರಶೇಖರ ಬಿರಾದಾರ ಸಾ: ಮುಡಬಿ ಇವಲೂ 1000 ಗಂಟೆಯಿಂದ 1330 ಗಂಟೆಯ ಮಧ್ಯದ ಅವಧಿಯಲ್ಲಿ ಕಾಣೆಯಾಗಿರುತ್ತಾಳೆ, ರಾಧಿಕಾ ಇವಳ ಕಾಣೆ ಬಗ್ಗೆ ನಿತೀಶಕುಮಾರ ತಂದೆ ವೀರಶೇಟ್ಟಿ ಬಿರಾದಾರ ವಯ: 18 ವರ್ಷ, ಸಾ: ಬೊಳೆಗಾಂವ, ತಾ: ಭಾಲ್ಕಿ ಮೊಬೈಲ್ ನಂ. 6361357374 ಇತನ ಮೇಲೆ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 19-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 138/2020, ಕಲಂ. 420, 468, 471 ಐಪಿಸಿ ಮತ್ತು ಕಲಂ. 3 & 7 ಇ.ಸಿ ಕಾಯ್ದೆ :-
ದಿನಾಂಕ 17-06-2020 ರಂದು ಭಾಲ್ಕಿಯ ಗುರುರಾಜ ಸೋನಾಳೆ ಎಸ.ಎನ ಶ್ರೀ ಟ್ರೇಡರ್ಸ ಮತ್ತು ಕಮೀಶನ ಏಜೆಂಟರು ಭಾಲ್ಕಿ ರವರು ಕ್ರಮವಾಗಿ ಡಿ..ಪಿ ರಸಗೊಬ್ಬರವನ್ನು ಎಂ.ಸಿ.ಎಫ ಸಂಸ್ಥೆಯ ಹೆಸರಿನಲ್ಲಿ ಬ್ಯಾಗ ತಯಾರಿಸಿ ಅದರಲ್ಲಿ ನಕಲಿ ರಸಗೊಬ್ಬರ ತುಂಬಿ ರೈತರಿಗೆ ಮಾರಾಟ ಮಾಡಿ ರೈತರಿಗೆ ಮತ್ತು ಸರಕಾರಕ್ಕೆ ಮೋಸ ಮಾಡುತ್ತಿದ್ದಾರೆ ಅಂತ ಫಿರ್ಯಾದಿ ರಮೇಶ ತಂದೆ ಬಾಪುರಾವ ಮಸ್ಕಲೆ, ಸಹಾಯಕ ಕೃಷಿ ನಿರ್ದೇಶಕರು ಭಾಲ್ಕಿ ರವರಿಗೆ ಬಂದ ಮಾಹಿತಿ ಬಂದ ಮೇರೆಗೆ ಫಿರ್ಯಾದಿಯವರು ತಮ್ಮ ಜೊತೆಯಲ್ಲಿ ಸಿ.ವಿದ್ಯಾನಂದ ಜಂಟಿ ಕೃಷಿ ನಿರ್ದೆಶಕರು ಬೀದರ, ಸೂರ್ಯಕಾಂತ ಬಿರಾದಾರ ಉಪ-ಕೃಷಿ ನಿರ್ದೆಶಕರು ಬಸವಕಲ್ಯಾಣ, ಶತ್ರುಘನ ತಾಂತ್ರಿಕ ಅಧಿಕಾರಿ ಭಾಲ್ಕಿ, ಚಂದ್ರಕಾಂತ ತಂದೆ ಶ್ರೀಪತರಾವ ಉಡಬಾಳೆ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ಭಾಲ್ಕಿ ಹಾಗೂ ಪಂಚರೊಂದಿಗೆ ಕೃಷಿ ಉತ್ಪನ್ನ ಮಾರುಕ್ಟೆ ಸಮಿತಿ ಪ್ರಾಂಗಣದಲ್ಲಿರುವ ಎಸ.ಎನ ಶ್ರೀ ಟ್ರೇಡರ್ಸ ಭಾಲ್ಕಿ ಮತ್ತು ಕಮೀಶನ ಏಜೆಂಟ ಭಾಲ್ಕಿ ರವರ ಅಂಗಡಿಯಲ್ಲಿ ಹೋಗಿ ಪರಿಶೀಲಿಸಿ ನೋಡಲು ಅಂಗಡಿಯ ಮಾಲೀಕನಾದ ಗುರುರಾಜ ಸೋನಾಳೆ ಇವನು ಎಂ.ಸಿ.ಎಫ ಎಂಬ ಹೆಸರಿನಲ್ಲಿ ನಕಲಿ ಬ್ಯಾಗಗಳನ್ನು ತಯಾರಿಸಿ ಅವುಗಳಲ್ಲಿ ಯೋಗ್ಯವಲ್ಲದ ನಕಲಿ ರಸಗೊಬ್ಬರವನ್ನು ತುಂಬಿ ರೈತರಿಗೆ ಮಾರಟ ಮಾಡಿ ರೈತರಿಗೆ ಮೋಸ ಮಾಡಿದ್ದಲ್ಲದೆ ಸರಕಾರಕ್ಕೆ ಯಾವುದೆ ರಾಜಧನ(ಕರ) ಕಟ್ಟದೆ ಸರಕಾರಕ್ಕೂ ಮೋಸ ಮಾಡಿದ್ದು ಇರುತ್ತದೆ, ವಿವರವಾಗಿ ಪರಿಶೀಲಿಸಿ ನೋಡಲು ಎಂ.ಸಿ.ಎಫ ಕಂಪನಿ ಲಿಮಿಟೆಡ ಎಂಬ ಹೆಸರಿನ 50 ಕಿಲೊ ತೂಕದ 28 ಬ್ಯಾಗಗಳು, ಇಫ್ಕೋ ಲಿಮಿಟೆಡ ಎಂಬ ಹೆಸರುಳ್ಳ 50 ಕಿಲೊ ತೂಕದ ಬ್ಯಾಗ, ನ್ಯಾಚುರಲ ಪಾವರ(ನ್ಯಾಚುರಲ ಆಗ್ರೊ ಇಂಡಸ್ಟ್ರೀಸ) ಎಂಬ ಹೆಸರಿನ 50 ಕಿಲೊ ತೂಕದ 325 ಬ್ಯಾಗಗಳು, ಆರ್ಗೊ ಶ್ರೀ (ಆರ್ಗನಿಕ ಸ್ವಾಯಿಲ ಕಂಡಿಶನ) ಹೆಸರಿನ 50 ಕಿಲೊ ತೂಕದ 55 ಬ್ಯಾಗಗಳು, 750 ಕಿಲೊ ರಸಗೊಬ್ಬರ ಖುಲ್ಲಾ, ಆಸಿಫೆಟ ವಿಟ್ರೊ ಆಗ್ರೊ ಕೆಮಿಕಲ್ಸ ಹೆಸರಿನ 250 ಗ್ರಾಂ ತೂಕವುಳ್ಳ ಪಾಕೆಟಗಳು ಒಟ್ಟು 165 ಕಿಲೊ, ಆಸಿಫೆಟ ಅಂಜಲಿ ಆಗ್ರೊ ಕೆಲಮಿಕಲ್ಸ ಹೆಸರಿನ 500 ಗ್ರಾಂ ತೂಕವುಳ್ಳ ಪಾಕೇಟಗಳು ಒಟ್ಟು 96 ಕಿಲೊ, ಆಗ್ರೊಜಿಮ ಹೆಸರಿನ 1 ಲೀಟರಿನ 9 ಬಾಟಲಗಳು, ಕನ್ಸಿಡರ-999 ಹೆಸರಿನ 500 ಗ್ರಾಂ ತೂಕವುಳ್ಳ 18 ಬಾಟಲಗಳು, ಮೋನೊಕಿಂಗ ಎಂಬ ಹೆಸರಿನ 1 ಲೀಟರನ 2 ಬಾಟಲಗಳು, ತೀವ್ರಾ ಕ್ಲೋರೊಫೈರಿಫಾಸ ಎಂಬ ಹೆಸರಿನ 250 ಎಂ.ಎಲ ವುಳ್ಳ 40 ಬಾಟಲಗಳು ಕಂಡುಬಂದಿದ್ದು ಇವುಗಳೆಲ್ಲ ಕ್ರಮವಾಗಿ ಸಂಬಂಧಪಟ್ಟ ಇಲಾಖೆಯಿಂದ ಯಾವುದೆ ಅನುಮತಿ ಪಡೆಯದೆ ಮಾರಾಟ ಮಾಡುತ್ತಿದ್ದು ಇರುತ್ತದೆ, ಎಲ್ಲಾ ರಸ್ಗೊಬ್ಬರ ಹಾಗೂ ನಗದು ಹಣ 55,500/- ರೂ, ಒಂದು ಮೊಬೈಲ ಪಂಚರ ಸಮಕ್ಷಮ ಜಪ್ತಿ ಮಾಡಿದ್ದು ಇರುತ್ತದೆ ಅಂತ ಕೊಟ್ಟ ದೂರಿನ ಮೇರೆಗೆ ಆರೋಪಿ ಗುರುರಾಜ ಸೋನಾಳೆ ಎಸ.ಎನ ಶ್ರೀ ಟ್ರೇಡರ್ಸ ಮತ್ತು ಕಮೀಶನ ಏಜೆಂಟರು ಭಾಲ್ಕಿ ಇತನ ವಿರುದ್ಧ ದಿನಾಂಕ 19-06-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕುಶನೂರ ಪೊಲೀಸ ಠಾಣೆ ಅಪರಾಧ ಸಂ. 47/2020, ಕಲಂ. 498(ಎ), 306 ಐಪಿಸಿ :-
ಫಿರ್ಯಾದಿ ರುಕ್ಷ್ಮೀಣಿಬಾಯಿ ಗಂಡ ವಿಠಲ ಜಾಧವ ರವರ ಮಗಳಾದ ಚಾಂದನಿಬಾಯಿ @ ಅರುಣಾಬಾಯಿ ಇವಳಿಗೆ ಸುಮಾರು 17 ವರ್ಷಗಳ ಹಿಂದೆ ಡೊಣಗಾಪುರ ಗ್ರಾಮದ ಸಂಜುಕುಮಾರ ತಂದೆ ನಾರಾಯಣ ರಾಠೋಡ ಇವನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಮಗಳಿಗೆ ಇಬ್ಬರು ಗಂಡು ಮಕ್ಕಳಿರುತ್ತಾರೆ, ಅಳಿಯ ಸಂಜುಕುಮಾರ ಮದುವೆಯಾದಾಗಿನಿಂದ ದಿನಾಲು ಸರಾಯಿ ಕುಡಿದು ಮಗಳಿಗೆ ವಿನಾ: ಕಾರಣ ಹೊಡೆಬಡೆ ಮಾಡುವುದು ಮಾಡುತ್ತಿದ್ದನು, ಸದರಿ ವಿಷಯ ಮಗಳು ಫಿರ್ಯಾದಿಗೆ ತಿಳಿಸಿದ್ದರಿಂದ ಫಿರ್ಯಾದಿಯು ಡೊಣಗಾಪುರಕ್ಕೆ ಹೋಗಿ ವಿಚಾರ ಮಾಡಿ ಅಳಿಯ ಮತ್ತು ಅಳಿಯನ ಮನೆಯವರಿಗೆ ಸಮಧಾನ ಹೇಳಿ ಬಂದಿದ್ದು, ಆದರೂ ಅವನು ಸರಾಯಿ ಕುಡಿದು ಹೊಡೆ ಬಡೆ ಮಾಡುವುದು ನಿಲ್ಲಿಸಿಲ್ಲ, ನಂತರ ದಿನಾಂಕ 09-06-2020 ರಂದು ಫಿರ್ಯಾದಿಯು ತನ್ನ ಗಂಡನ ಜೊತೆ ಡೊಣಗಾಪುರಕ್ಕೆ ಹೋಗಿ ಅಳಿಯ ಮತ್ತು ಅಳಿಯನ ಮನೆಯವರಿಗೆ ಸಮಧಾನ ಹೇಳಿ ಮರು ದಿವಸ ಮರಳಿ ಬಂದಿದ್ದು, ನಂತರ ಈಗ 5 ದಿವಸಗಳ ಹಿಂದೆ ಮಗಳು ಅರುಣಬಾಯಿ ಇವಳು ತನ್ನ ಕ್ಕಳಾದ ರೋಷನ್ ಮತ್ತು ರೋಹಿತ್ ಇವರೊಂದಿಗೆ ಮುಧೋ(ಬಿ) ಗ್ರಾಮಕ್ಕೆ ಬಂದಿರುತ್ತಾಳೆ, ಹೀಗಿರುವಾಗ ದಿನಾಂಕ 19-06-2020 ರಂದು ಫಿರ್ಯಾದಿಯು ತನ್ನ  ಗಂಡನ ಜೊತೆಯಲ್ಲಿ ಹೊ¯ಕ್ಕೆ ಬಿತ್ತನೆ ಮಾಡಲು ಹೋದಾಗ ಫಿರ್ಯಾದಿಯವರ ಮಗಳು ಚಾಂದನಿಬಾಯಿ ಇಕೆಯು ತನ್ನ ಗಂಡ ಸಂಜುಕುಮಾರ ಇತನು ದಿನಾಲು ರಾಯಿ ಕುಡಿದು ಹೊಡೆ ಬಡೆ ಮಾಡುತ್ತಿದ್ದರಿಂದ ಅದನ್ನು ಬೆಸತ್ತು ಮಗಳು ರೂಮಿನಲ್ಲಿ ಹಗ್ಗದಿಂದ ನೇಣು ಹಾಕಿಕೊಂಡು ಮ್ರತಪಟ್ಟಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.