Police Bhavan Kalaburagi

Police Bhavan Kalaburagi

Tuesday, June 18, 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ವಾಡಿ ಠಾಣೆ : ಶ್ರೀ ಶಿವಕುಮಾರ ತಂದೆ ಈರಣ್ಣಾ ಸರಡಗಿ ಸಾ:ಕಂದಗೋಳ ರವರ ತಮ್ಮನಾದ ಮನೋಹರ  ಆತನು ಕಲಬುರಗಿ ಎ.ಬಿ ಪಾಟೀಲ ಅಷ್ಠಗರ ರವರ ಅಡತಿದಲ್ಲಿ ಮುನಿಮ ಕೆಲಸ ಮಾಡುತ್ತಿದ್ದು ದಿನಾಲೂ ಹೋಗಿ ಬಂದು ಮಾಡುತ್ತಿದ್ದನು. ಆತನ ಕಳೆದ 02 ತಿಂಗಳ ಹಿಂದೆ ಹೊಸದಾಗಿ ಬಜಾಜ ಪ್ಲಾಟಿನಂ ಕಂಪನಿಯ ಮೊಟರ ಸೈಕಲ ಖರಿದಿ ಮಾಡಿದ್ದು ಅದಕ್ಕೆ ನಂಬರ ಬರೆಸಿರುವದಿಲ್ಲ. ಮನೋಹರ ಇತನಿಗೆ ಕಳೆದ ವರ್ಷ ಇಂಗಳಗಿ ಗ್ರಾಮದ ರಂಜಿತಾ ಎನ್ನುವವಳೊಂದಿಗೆ ಮದುವೆ ಮಾಡಿದ್ದು ಅವಳು ಹೆರಿಗೆಗಾಗಿ ಇಂಗಳಗಿ ಗ್ರಾಮಕ್ಕೆ ಹೋಗಿರುತ್ತಾಳೆ. ಹೀಗಿದ್ದು ನಿನ್ನೆ ದಿನಾಂಕ 16/06/2019 ರಂದು ಬೆಳಗ್ಗೆ 08-00 ಗಂಟೆ ಸುಮಾರು ರಂಜಿತಾ ಇವಳು ವಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು ಹೆಣ್ಣು ಮಗುವಾಗಿರುತ್ತದೆ ಅಂತಾ ಗೊತ್ತಾಗಿ ನನ್ನ ತಮ್ಮ ಬೆಳಗ್ಗೆ 11-00 ಗಂಟೆ ಸುಮಾರು ವಾಡಿ ಪಟ್ಟಣಕ್ಕೆಹೋಗಿ ಬರುತ್ತೆನೆ ಅಂತಾ ಹೇಳಿ ತನ್ನ ಮೊಟರ ಸೈಕಲ ಮೇಲೆ ಹೊರಟು ಹೋದನು. ನಂತರ ರಾತ್ರಿ 10-30 ಗಂಟೆ ಸುಮಾರು ನನ್ನ ತಮ್ಮನ ಮೊಬೈಲದಿಂದ ಗುಡುಸಾಬ ಎನ್ನುವವರು ನನಗೆ ಫೋನ ಮಾಡಿ ಇಲ್ಲಿ ಬಿದ್ದ ವ್ಯಕ್ತಿ ಮೊಟರ ಸೈಕಲ ಮೇಲೆ ವಾಡಿಯಿಂದ ರಾವೂರ ಕಡೆಗೆ ಹೊರಟಾಗ ಎದರುಗಡೆಯಿಂದ ಕ್ರೂಸರ ಜೀಪ ನಂಬರ ಎಪಿ-21 ವಿ-9653 ನೇದ್ದರ ಚಾಲಕನು ಡಿಕ್ಕಿ ಹೊಡೆದು ಅಪಘಾತ ಪಡಿಸಿ ಜೀಪ ಸಮೇತ ಓಡಿ ಹೋಗಿರುತ್ತಾನೆ ಅಂತಾ ತಿಳಿಸಿದಾಗ ನಾನು ಇಂಗಳಗಿಯಲ್ಲಿದ್ದ ನನ್ನ ಅಳಿಯ ವಿರೇಶ ಇತನಿಗೆ ಪೋನ ಮಾಡಿ ವಿಷಯ ತಿಳಿಸಿದಾಗ ಆತನು ಘಟನಾ ಸ್ಥಳಕ್ಕೆ ಹೋಗಿ ನೋಡಿ ವಿಷಯ ತಿಳಿದುಕೊಂಡು ಅಲ್ಲಿ ಹಾಜರಿದ್ದ ಗುಡುಸಾಬ ಮತ್ತು ಮರೆಯಪ್ಪ ಎನ್ನುವವರಿಗೆ ವಿಚಾರಿಸಿ  ವಿಷಯ ತಿಳಿದುಕೊಂಡು ಡಿಕ್ಕಿ ಹೊಡೆದು ಅಪಘಾತ ಪಡಿಸಿದ ವ್ಯಕ್ತಿ ಜೀಪನ್ನು ತೆಗೆದುಕೊಂಡು ಓಡಿ ಹೋಗಿದ್ದು ಈ ಘಟನೆ ನಡೆದಾಗ ರಾತ್ರಿ 10-15 ಗಂಟೆ ಆಗಿತ್ತು.ಮನೋಹರ ಇತನಿಗೆ ತಲೆಗೆ ಭಾರಿ ಒಳಪೆಟ್ಟಾಗಿದ್ದು ಕಿವಿಯಿಂದ ರಕ್ತ ಬಂದಿರುತ್ತದೆ ಅಂತಾ ತಿಳಿಸಿದಾಗ ನಾನು ವಿರೇಶ ಇತನಿಗೆ ತಮ್ಮ ಮನೋಹರ ಇತನಿಗೆ ಕಲಬುರಗಿಗೆ ತೆಗೆದುಕೊಂಡು ಬರಲು ಹೇಳಿದಾಗ ಆತನು ಗುಡುಸಾಬ ಇತನೊಂದಿಗೆ ಅಂಬುಲೇನ್ಸದಲ್ಲಿ ಹಾಕಿಕೊಂಡು ಕಲಬುಗಿಯ ಯುನೈಟೆಡ ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದು ತಮ್ಮನಿಗೆ ನೋಡಲಾಗಿ ಅವನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ನನ್ನ ತಮ್ಮನು ಉಪಚಾರ ಕಾಲಕ್ಕೆ ಇಂದು ದಿನಾಂಕ 17/06/2019 ರಂದು ಬೆಳಗ್ಗೆ 10-10 .ಎಮ್ ಕ್ಕೆ ಮೃತ ಪಟ್ಟಿದ್ದು ಇರುತ್ತದೆ.  ನನ್ನ ತಮ್ಮ ಮನೋಹರ ಇತನು ಮೊಟರ ಸೈಕಲ ಮೇಲೆ ಬರುವ ಕಾಲಕ್ಕೆ ವಾಡಿ ಪಟ್ಟಣದ ಎ.ಸಿ.ಸಿ ನ್ಯೂ ಪ್ಲಾಂಟ ಮುಂದಿನ ರೊಡಿಗೆ ಕ್ರೂಸರ ಜೀಪ ನಂಬರ ಎಪಿ-21 ವಿ-9653 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಹಾಗೂ ಆಲಕ್ಷತನದಿಂದ ಚಲಾಯಿಕೊಂಡು ಬಂದು ನನ್ನ ತಮ್ಮನ ಮೊಟರ ಸೈಕಲಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದರಿಂದ ನನ್ನ ತಮ್ಮನ ತಲೆಗೆ ಭಾರಿ ಒಳಪೆಟ್ಟಾಗಿ ಉಪಚಾರ ಕಾಲಕ್ಕೆ ಮೃತಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆ ಗುನ್ನೆ ನಂ 64/2019 ಕಲಂ 279,304(ಎ) ಐಪಿಸಿ ಸಂಗಡ 187 ಐ.ಎಮ್.ವ್ಹಿ ಕಾಯ್ದೆ. ಪ್ರಕಾರ ಪ್ರಕರಣ ದಾಖಲಿಸಲಾಗಿದೆ
ಸೇಡಂ ಠಾಣೆ : ದಿನಾಂಕ: 16-06-2019 ರಂದು ಶ್ರೀ ಭೀಮಪ್ಪ ತಂದೆ ಈಶ್ವರ ತಳವಾರ, ಸಾ|| ಕುರಕುಂಟಾ, ತಾ|| ಸೇಡಂ, ಜಿ|| ಕಲಬುರಗಿ. ರವರ ಹೆಂಡತಿಯು ಮೊಟಾರ ಸೈಕಲ್ ನಂ. ಕೆಎ32ಇಸಿ5128 ನೆದ್ದರ ಮೇಲೆ ಹಿಂದುಗಡೆ ಕುಳಿತು ಸೇಡಂ ದಿಂದ ಅಳ್ಳೊಳ್ಳಿ ಕಡೆಗೆ ಹೋಗುತ್ತಿದ್ದಾಗ ಮೊಟಾರ ಸೈಕಲ್ ಚಾಲಕನಾದ ಗೋಪಾಲ ಇತನು ತನ್ನ ಮೊಟಾರ ಸೈಕಲನ್ನು ಅತಿ ವೇಗದಿಂದ ಹಾಗು ನಿಷ್ಕಾಳಜಿತನದಿಂದ ನಡೆಯಿಸಿದ್ದರಿಂದ ಜಂಪಿನಲ್ಲಿ ಹಿಂದೆ ಕುಳಿತಿದ್ದ ಅಂಬಿಕಾ ಇವಳು ಮೊಟಾರ ಸೈಕಲ್ ಮೇಲಿಂದ ಕೆಳಗಡೆ ಬಿದ್ದು ತಲೆಗೆ ಭಾರಿ ಗಾಯಹೊಂದಿ ಇವಳಿಗೆ ಉಪಚಾರ ಕುರಿತು ಸೇಡಂ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದಿದ್ದು, ಉಪಚಾರ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ ಸದರಿ ಮೊಟಾರ ಸೈಕಲ್ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆ  ಗುನ್ನೆ ನಂ. 98/2019 ಕಲಂ 279, 304(ಎ) ಐ.ಪಿ.ಸಿ ನೆದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣಗಳು :
ಫರತಾಬಾದ ಠಾಣೆ : ದಿನಾಂಕ:17.06.2019 ರಂದು ಮುಂಜಾನೆಯ ವೇಳೆಯಲ್ಲಿ ಶ್ರೀ ಜಯದ್ರತ್ತಾ ತಂದೆ ಲಕ್ಷ್ಮಣ ಹಾಯಕವಾಡ ಸೇಂಟ್ರಲ್ ಜೇಲ ಕಾಲೂನಿ ಕಲಬುರಗಿ ರವರು ತನ್ನ ಮನೆಯ ಬಚ್ಚಲದಲ್ಲಿ ಸ್ನಾನ ಮಾಡುತ್ತಿದ್ದಾಗ ಬಚ್ಚಲು ಮೋರೆ ನಿರು ಹೋರಗೆ ಹೋಗದೆ ಬಚ್ಚಲದಲ್ಲಿ ನಿಂತಿದ್ದು. ಅದಕ್ಕೆ ನಾನು ಹೋರಗಡೆ ಬಂದು ಮುಂಜಾನೆ 06.45 ಗಂಟೆಯ ಸೂಮಾರಿಗೆ ಬಚ್ಚಲ ಮೋರಿಯ ಪೈಪ ಹತ್ತೀರ ಹೋಗಿ ಪೈಪನಲ್ಲಿ ಸಿಕ್ಕಿಬಿದ್ದ ಪ್ಲಾಸ್ಟಿಕ ಹಾಗೂ ಹೋಲಸನ್ನು ಕಟ್ಟಿಗೆಯಿಂದ ಹೋರಗೆ ತೆಗೆಯುತ್ತಿದ್ದಾಗ ನನ್ನ ತಮ್ಮ ಮೋಹನ ಗಾಯಕವಾಡ ಹಾಗೂ ಅವನ ಹೆಂಡತಿ ಉತ್ತಮಬಾಯಿ ಗಾಯಕವಾಡ ಇವರು ನನಗೆ ಈ ಕಡೆ ನಿನ್ನ ಬಾಗಿಲು ಇಲ್ಲ ನಿರು ಬಿಡಬೇಡ ಅಂತಾ ಅಂದು ತನ್ನ ಕೈಯಲ್ಲಿದ್ದ ಕೋಯಿತಾದಿಂದ ನನ್ನ ತಲೆಯ ಮೇಲೆ ಹೋಡೆದು ರಕ್ತಗಾಯ ಮಾಡಿದನು. ಉತ್ತಮಬಾಯಿ ಇವಳು ದೂರದಿಂದ ಕಲ್ಲುಗಳನ್ನು ಬಿಸಿದ್ದು ಆ ಕಲ್ಲುಗಳು ನನ್ನ ಎಡಗಡೆ ಹಣೆಗೆ ಹಾಗೂ ಎಡಗೈ ಹಸ್ತಕ್ಕೆ ಬಡಿದು ಗಾಯಗಳು ಆಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆ ಠಾಣೆಯ ಗುನ್ನೆ ನಂಬರ-86/2019 ಕಲಂ.341,323,324 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಫರತಾಬಾದ ಠಾಣೆ : ಫರತಾಬಾದ ಠಾಣೆ : ದಿನಾಂಕ:17.06.2019 ರಂದು ಮುಂಜಾನೆ ಶ್ರೀಮತಿ ಉತ್ತಮಬಾಯಿ ಗಂಡ ಮೋಹನ ಗಾಯಕವಾಡ ಸಾ : ಸೇಂಟ್ರಲ್ ಜೇಲ ಕಾಲನಿ  ಕಲಬುರಗಿ ರವರು ಹಬ್ಬ ಇದ್ದರಿಂದ ನಾನು ಮನೆಯ ಮುಂದಿನ ಕಟ್ಟೆ ತೋಳೆಯುತ್ತಿದ್ದಾಗ ಅದೇ ವೇಳೆಗೆ ನನ್ನ ಭಾವ ಜಯದ್ರತ್ತ ಗಾಯಕವಾಡ ಇವರು ಬಂದು ಬಚ್ಚಲು ಮೋರಿಗೆ ಹಚ್ಚಿದ ಅರಿಬಿಯನ್ನು ಕಬ್ಬಿಣದ ರಾಡನಿಂದ ತೆಗೆಯುತ್ತಿದ್ದಾಗ ನನ್ನ ಗಂಡ ಮೋಹನ ಇವರು ಬಂದು ಜಯದ್ರತ್ತ ಇವರಿಗೆ ಅರಬಿ ತೆಗೆಯ ಬೆಡ ಇವತ್ತು ಹಬ್ಬ ಇದೆ ಸುಮ್ಮನೆ ಕಿರಿಕಿರಿ ಬೇಡ ಅಂದಾಗ ಅದಕ್ಕೆ ಅವರು ಏ ಹಬ್ಬಾ ಅದಾ ಯಾವುದು ಹಬ್ಬಾ ಅದಾ ಅಂತಾ ಅಂದು ಕೈಹಿಡಿದು ಸೈಡಿಗೆ ಕರೆದುಕೊಂಡು ಹೋಗುತ್ತಿದ್ದಾಗ ಜಯದ್ರತ್ತ ತನ್ನ ಕೈಯಲ್ಲಿನ ರಾಡನಿಂದ ನನ್ನ ಗಂಡನ ಎಡಗೈ ಮುಂಗೈಗೆ ಹೋಡೆದನು ಆಗ ಮನೆಯ ಮುಂದಿನ ನಾಯಿಗಳು ಬೋಗಳುತ್ತ ಜಯದ್ರತ್ತನ ಎಡಗಾಲಿಗೆ ಕಚ್ಚಿರುತ್ತವೆ ಕಚ್ಚಿದಾಗ ಅವರು ತಮ್ಮ ಮನೆಯ ಕಡೆಗೆ ಹೋಗಿ ತನ್ನ ಹೆಂಡತಿ ನಿರಂಜನಾ ಗಾಯಕವಾಡ ಸಂಗಡ ಕೂಡಿಕೊಂಡು ನಮ್ಮ ಮೇಲೆ ಕಲ್ಲು ತೂರಾಟ ಮಾಡಿದಾಗ ನನಗೆ ಬೆನ್ನಿಗೆ ಬಲಕಾಲ ತೋಡೆಗೆ ಬಡೆದಿರುತ್ತವೆ. ನನ್ನ ಗಂಡನಿಗೆ ಎಡಭುಜಕ್ಕೆ ಬಡಿದು ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆ ಗುನ್ನೆ ನಂ 87/2019 ಕಲಂ.341,323,324, ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.