ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 14-05-2020
ಮಾರ್ಕೇಟ ಪೊಲೀಸ ಠಾಣೆ ಅಪರಾಧ
ಸಂಖ್ಯೆ 32/2020 ಕಲಂ 3 & 7 ಇ.ಸಿ. ಕಾಯ್ದೆ :-
ದಿನಾಂಕ;13-05-2020 ರಂದು 1030 ಗಂಟೆಯ ಸುಮಾರಿಗೆ 1.ಸೈಯದ್ ಅಲ್ತಾಫ ತಂದೆ
ಸೈಯದ ಪಾಶಾ ವಯ:30 ಉ:ವಾಹನ ಚಾಲಕ ಸಾ:ಮಿನಯಾರ ತಾಲೀಮ ಬೀದರ2.ಎಮಡಿ.ಖಾಲೇದ ತಂದೆ ಎಮಡಿ
ಜಬ್ಬಾರ ಸಾ:ಬೀದರ ಇವರುಗಳು ಉಚಿತ ಪಡಿತರ ಆಹಾರ
ಅಕ್ಕಿ ಅಕ್ರಮವಾಗಿ ಕಾಳಸಂತೆಯಲ್ಲಿ ವಾಹನ ಸಂ:ಎಪಿ-21 ಟಿಡಬ್ಲು-8801 ನೇದ್ದರಲ್ಲಿ ಮಾರಾಟ
ಮಾಡುವ ಸಲುವಾಗಿ ತೆಗೆದುಕೊಂಡು ಹೋಗುತ್ತಿರುವಾಗ ದಾಳಿ ಮಾಡಿ ಸದರಿಯವರಿಂದ 48 ಕೆ.ಜಿ ತೂಕ ಉಳ್ಳದ್ದು
ಇದ್ದು 53 ಪ್ಲಾಸ್ಟಿಕ ಮತ್ತು ಗೋಣಿ ಚೀಲಗಳು ಇದ್ದು ಅದರಲ್ಲಿ ಒಟ್ಟು 25 ಕ್ವೀಂಟಲ್ 44 ಕೆಜಿ ಇರುತ್ತದೆ ಇದರ
ಅಂದಾಜು ಕೀಮತ್ತು 200000/-ರೂಪಾಯಿಗಳ ಬೆಲೆಬಾಳುವದನ್ನು ಜಪ್ತಿ ಮಾಡಿಕೊಂಡು ಫಿರ್ಯಾದಿ ಶ್ರೀಮತಿ.ಶೋಭಾ ಆಹಾರ
ನಿರೀಕ್ಷಕರು ಅನೌಪಚಾರಿಕ ಪಡಿತರ ಪ್ರದೇಶ ಉಪನಿರ್ದೇಶಕರ ಕಛೇರಿ ಬೀದರ ರವರು
ನೀಡಿರುವ ದೂರಿನ ಮೇರೆಗೆ ಸದರಿ ಆರೋಪಿತರ ವಿರುಧ್ಧ
ಪ್ರಕರಣ ದಾಖಲಿಸಿ ತನಿಖೆ ಕೈಗೋಳ್ಳಲಾಗಿದೆ.
ಬಗದಲ
ಪೊಲೀಸ್ ಠಾಣೆ ಅಪರಾಧ ಸಂಖ್ಯೆ 30/2020 ಕಲಂ 379 ಐಪಿಸಿ :-
ದಿನಾಂಕ 13-05-2020
ರಂದು 14.00 ಗಂಟೆಗೆ ಫಿರ್ಯಾದಿ
ಶ್ರೀ ಮಹಿಪಾಲರೆಡ್ಡಿ ತಂದೆ ರಾಮರೆಡ್ಡಿ ಗಂಗ್ವಾರ ವಯಃ 43 ವರ್ಷ ಜಾಃ ರೆಡ್ಡಿ ಉಃ ಒಕ್ಕಲುತನ ಸಾಃ ಔರದ (ಎಸ್)
ತಾಃ ಜಿಃ ಬೀದರ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೆಂದರೆ ವರ ಹತ್ತಿರ
ಒಂದು ರಾಯಲ ಎನ್ಫಿಲ್ಡ ಮೊಟರ ಸೈಕಲ ನಂ ಕೆ.ಎ-38-ಎಸ್-0868
ದಿನಾಂಕ 12-05-2020
ರಂದು ರಾತ್ರಿ 9.00 ಗಂಟೆಗೆ ಮನೆಯ ಮುಂದೆ ನಿಲ್ಲಿಸಿ ಮನೆಯಲ್ಲಿ ಹೋಗಿ ಊಟ ಮಾಡಿ ಮಲಗಿಕೊಂಡಿರುತತ್ತಾರೆ.
ನಂತರ ದಿನಾಂಕ 13-05-2020
ರಂದು ಮುಂಜಾನೆ 05.30 ಗಂಟೆಗೆ ಮನೆಯ ಹೊರಗೆ ಬಂದು ನೋಡಿದಾಗ ಮನೆಯ ಮುಂದೆ ಇಟ್ಟ ನನ್ನ ರಾಯಲ ಎನ್ಫಿಲ್ಡ ಮೊಟರ ಸೈಕಲ ನಂ ಕೆ.ಎ-38-ಎಸ್-0868
ಕಾಣಲಿಲ್ಲಾ ಮನೆಯ ಅಕ್ಕ ಪಕ್ಕದಲ್ಲಿ ಹುಡುಕಾಡಿದ್ದು ಎಲ್ಲಿಯು ಕಾಣಿಸಿಲ್ಲಾ,
ಯಾರೋ ಅಪರಿಚಿತ ಕಳ್ಳರು ದಿನಾಂಕ 13-05-2020 ರಂದು
ರಾತ್ರಿ 01.00 ಗಂಟೆಯಿಂದ
04.00 ಗಂಟೆಯ ವೇಳೆಯಲ್ಲಿ ಮನೆಯ
ಮುಂದೆ ನಿಲ್ಲಿಸಿದ ರಾಯಲ ಎನ್ಫಿಲ್ಡ ಮೊಟರ ಸೈಕಲ ನಂ ಕೆ.ಎ-38-ಎಸ್-0868
ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಮೊಟರ ಸೈಕಲ ನಂ ಕೆ.ಎ-38-ಎಸ್-0868
ಅಂದಾಜು ಕಿಮ್ಮತ್ತು 45,000/-
ರೂಪಾಯಿದು ಇರುತ್ತದೆ. ಅಂತಾ ನೀಡಿದ ದೂರಿನ
ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಭಾಲ್ಕಿ ಗ್ರಾಮೀಣ ಠಾಣೆ ಯು.ಡಿ.ಆರ್. ಸಂಖ್ಯೆ 4/2020
ಕಲಂ 174 ಸಿಆರ್.ಪಿ.ಸಿ :-
ದಿನಾಂಕ 13/05/2020
ರಂದು 1915 ಗಂಟೆಗೆ ಬೀದರ ಸರಕಾರಿ ಆಸ್ಪತ್ರೆಯಲಿದ್ದ
ಫಿರ್ಯಾದಿ ಶ್ರೀ ನೀಲಕಂಠ ತಂದೆ ಕೊಂಡಿಬಾರಾವ ವಯ 29 ವರ್ಷ ಜಾತಿ ಮರಾಠಾ ಉ, ಬಟ್ಟೆಅಂಗಡಿಯಲ್ಲಿಕೆಲಸ ಸಾ/ ಭಗವಾನವಾಡಿರವರು ನೀಡಿರುವ ಫೀರ್ಯಾದಿನ ಸಾರಾಂಶವೆನೆಂದರೆ ಫಿರ್ಯಾದಿಯ ಅಣ್ಣ
ದೇವಿದಾಸ ತಂದೆ ಕೊಂಡಿಬಾ ವಯ 40
ವರ್ಷ ಇತನು ಸರಾಯಿ
ಕುಡಿಯುವ ಚಟದವನಾಗಿದ್ದು ದಿನಾಲು ಸರಾಯಿ ಕುಡಿಯುತಿದ್ದನು ದಿನಾಂಕ 13/05/2020 ರಂದು ಮುಂಜಾನೆ ತನ್ನ ಮನೆಯಿಂದ ಹೊಲಕ್ಕೆ ಹೋಗಿ ಸರಾಯಿ ಕುಡಿದ
ನಶೇಯಲ್ಲಿ ಸರಾಯಿ ಬಾಟಲ ಅಂತ ತಿಳಿದು ಕ್ರೀಮಿನಾಶಕ ಔಷಧಿ ಸೇವನೆ ಮಾಡಿದ್ದು ಬಾಯಿಯಿಂದ ವಾಸನೆ
ಬರುವದನ್ನು ಕಂಡು ಚಿಕಿತ್ಸೆ ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆ ಕುರಿತು ಬೀದರ
ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚಿಕಿತ್ಸೆಫಲಕಾರಿಯಾಗದೆ ದೇವಿದಾಸ ವಯ: 40 ವರ್ಷ ಇತನು ದಿನಾಂಕ 13/05/2020 ರಂದು 1755 ಗಂಟೆಗೆ ಬೀದರ ಸರಕಾರಿ ಆಸ್ಪತ್ರೆಯಲ್ಲಿ
ಮ್ರತಪಟ್ಟಿರುತ್ತಾನೆ ಅಂತಾ ನೀಡಿದ ಫಿರ್ಯಾದಿನ ಮೇಲೆ ಯು.ಡಿ.ಆರ್.
ಪ್ರಕರಣ ದಾಖಲಿಸಿಕೊಳ್ಳಲಾಗಿದೆ.