Police Bhavan Kalaburagi

Police Bhavan Kalaburagi

Sunday, January 17, 2021

BIDAR DISTRICT DAILY CRIME UPDATE 17-01-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 17-01-2021

 

ಹುಲಸೂರ ಪೊಲೀಸ ಠಾಣೆ ಅಪರಾಧ ಸಂ. 04/2021, ಕಲಂ. 279, 337, 338, 304[] ಐಪಿಸಿ :-

ದಿನಾಂಕ  15-01-2021 ರಂದು ಮೋತಿರಾಮ ತಂದೆ ಬದ್ದು ರಾಠೋಡ ವಯ: 45 ವರ್ಷ, ಜಾತಿ: ಲಂಬಾಣಿ, ಸಾ: ಸೇವಾನಗರ ತಾಂಡಾ ಘಾಟಬೋರಾಳ ರವರ ತಮ್ಮನಾದ ವಾಮನ ಇತನು ಮತ್ತು ತಾಯಿ ಜಮುನಾಬಾಯಿ ಇಬ್ಬರು ಶಹಜಾನಿ ಔರಾದನಲ್ಲಿ ಕಬ್ಬು ಕಡಿಯುತ್ತಿರುವ ನ್ನ ಮಗ ದಿನೇಶ ತನಿಗೆ ಮಾತನಾಡಿಕೊಂಡು ಬರುವ ಕುರಿತು ಮೋಟಾರ್ ಸೈಕಲ್ ನಂ. ಕೆಎ-56/-0481 ನೇದರ ಮೇಲೆ ಶಹಜಾನಿಔರಾಧ-ಬಸವಕಲ್ಯಾಣ ರಸ್ತೆಯ ಮುಖಾಂತರ ಹೋಗುವಾಗ ಮಿರ್ಕಲ್ ಶಿವಾರದಲ್ಲಿ ಮೋಟಾರ್ ಸೈಕಲ್ ನಂ. ಕೆಎ-56/ಜೆ-2548 ನೇದರ ಚಾಲಕನಾದ ಆರೋಪಿ ಗುರುನಾಥ ತಂದೆ ಕಾಶಿನಾಥ ಪವಾರ ವಯ: 32 ವರ್ಷ, ಸಾ: ರಾಜೋಳಾ ತಾಂಡಾ, ತಾ: ಬಸವಕಲ್ಯಾಣ ಇತನು ತನ್ನ ಮೋಟಾರ್ ಸೈಕಲ್ನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಫಿರ್ಯಾದಿಯ ತಮ್ಮನ ಮೋಟಾರ್ ಸೈಕಲಿಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ತಾಯಿ ಜಮುನಾಬಾಯಿ ರವರ ಹಣೆಯ ಬಲಭಾಗಕ್ಕೆ ತರಚಿದ ರಕ್ತಗಾಯ, ಬಲಣ್ಣಿಗೆ ಕಂದು ಗಟ್ಟಿದಗಾಯ, ಬಲ ಕಪಾಳಕ್ಕೆ ಕಂದುಗಟ್ಟಿದ ಗಾಯ, ಬಲಗಾಲಿನ ಪಾದ ಮತ್ತು ಹಿಮ್ಮಡಿಗೆ ಭಾರಿ ರಕ್ತಗಾಯ, ಬಲಗಾಲಿನ ಮೊಳಕಾಲಿಗೆ ತರಚಿದ ರಕ್ತ &  ಗುಪ್ತಗಾಯ ಮತ್ತು ಎಡ ಮೊಳಕಾಲಿಗೆ ತರಚಿದ ಗಾಯಗಳಾಗಿರುತ್ತವೆ, ವಾಮನ ಇವನಿಗೆ ಎಡಣ್ಣಿಗೆ ತರಚಿದ ಗಾಯ, ಬಲಗೈಗೆ ಭಾರಿ ಗುಪ್ತಗಾಯ, ಬೆನ್ನಿಗೆ ತರಚಿದಗಾಯ, ಬಲಗಾಲು ಪಾದಕ್ಕೆ ಭಾರಿ ರಕ್ತಗಾಯ, ಎದೆಯಲ್ಲಿ ಗುಪ್ತಗಾಯವಾಗಿರುತ್ತದೆ ಮತ್ತು ಆರೋಪಿಯ ಹೆಂಡತಿ ಸಂಗೀತಾ ಇವರಿಗೂ ಸಹ ಗಾಯಗಳಾಗಿರುತ್ತವೆ, ನಂತರ ತಮ್ಮನ ಮಗ ದಿನೇಶ ಇವನು ಬಂದು ನಾಲ್ಕು ಜನರಿಗೆ ಅಂಬುಲೇನ್ಸನಲ್ಲಿ ಶಹಜಾನಿ ಔರಾಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಮಾಡಿಸಿ ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ನಿಲಂಗಾ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ಅಲ್ಲಿನ ವೈದ್ಯಾಧಿಕಾರಿಗಳು ಲಾತೂರಿಗೆ ತೆಗದುಕೊಂಡು ಹೋಗುವಂತೆ ತಿಳಿಸಿದಾಗ ನಾವು ಬಸವಕಲ್ಯಾಣದಲ್ಲಿ ಚಿಕಿತ್ಸೆ ಮಾಡಿಸೋಣ ಅಂತ ತನ್ನ ತಾಯಿಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಸವಕಲ್ಯಾಣಕ್ಕೆ ಬರುವಾಗ ಗೌರ ಗ್ರಾಮದ ಹತ್ತಿರ ದಿನಾಂಕ 16-01-2021 ರಂದು ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂ. 07/2021, ಕಲಂ. 498(), 323, 324, 504 ಜೊತೆ 34 ಐಪಿಸಿ :-

ಫಿರ್ಯಾದಿ ಮೈಪಾಲ ರೆಡ್ಡಿ ತಂದೆ ಸಂಗಾರೆಡ್ಡಿ ಅದ್ದೇಪ್ಪನವರ ವಯ: 41 ವರ್ಷ, ಜಾತಿ: ರೆಡ್ಡಿ, ಸಾ: ಟ್ನಳ್ಳಿ, ತಾ: ಬೀದರ ರವರ ತಂಗಿಯಾದ ಅರುಣಾ ಗಂಡ ಮಲ್ಲರೆಡ್ಡಿ ಮಾಲಿ ಪಾಟೀಲ ವಯ: 36 ವರ್ಷ, ಜಾತಿ: ರೆಡ್ಡಿ, ಸಾ: ದಲಾಪುರ ಇಕೆಗೆ 17 ವರ್ಷಗಳ ಹಿಂದೆ ಬಸವಕಲ್ಯಾಣ ತಾಲೂಕಿನ ದಲಾಪುರ ಗ್ರಾಮದ ಮ್ಮ ಸಂಬಂಧಿಕನಾದ ಮಲ್ಲಾರೆಡ್ಡಿ ತಂದೆ ಮಾಧವರೆಡ್ಡಿ ಮಾಲಿ ಪಾಟೀಲ ರವರಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ, ಭಾವ ಮಲ್ಲಾರೆಡ್ಡಿ ರವರು ಇಬ್ಬರು ಅಣ್ಣ-ತಮ್ಮಂದಿರು ಇದ್ದು ಇಬ್ಬರು ಒಂದು ಕಡೆ ಇರುತ್ತಾರೆ, ಭಾವ ಮಲ್ಲರೆಡ್ಡಿ ರವರ ತಮ್ಮ ಗೋವಿಂದರೆಡ್ಡಿ ಇವರ ಹೆಂಡತಿ ಈಗ 4 ವರ್ಷಗಳ ಹಿಂದೆ ಮೃತಪಟ್ಟಿರುತ್ತಾರೆ, ಭಾವ ಮಲ್ಲರಡ್ಡಿ ಮತ್ತು ಗೋವಿಂದರೆಡ್ಡಿ ಇಬ್ಬರು ಅರುಣಾ ಇಕೆಗೆ ನೀನು ನಿಮ್ಮ ತಂದೆ-ತಾಯಿಗೆ ಯಾಕೆ ಕರೆ ಮಾಡಿ ಮಾತಾಡುತ್ತಿ, ನೀನು ಹೊರಗಡೆ ಬೇರೆ ಗಂಡಸರ ಜೊತೆ ಸಂಬಂಧ ಹೋದಿರುತ್ತಿ ಅಂತಾ ಇಬ್ಬರು ತಂಗಿಯ ಮೇಲೆ ಸಂಶಯಪಟ್ಟು ಹೊಡೆಬಡೆ ಮಾಡಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ 16-01-2021 ರಂದು ತಂಗಿಯ ಮಗಳಾದ ಅಕ್ಷತಾ ರೆಡ್ಡಿ (ಸೋದರಸೊಸೆ) ಇವಳು ಕರೆ ಮಾಡಿ ತಿಳಿಸಿದ್ದೆನೆಂದರೆ ಮಾಮಾ ಇಂದು ಸಾಯಂಕಾಲ 1700 ಗಂಟೆಗೆ ಮಮ್ಮಿಗೆ ಕಾಕಾ ಮತ್ತು ಪಪ್ಪಾ ಇಬ್ಬರು ಕೂಡಿ ಬಡಿಗೆಯಿಂದ ತಲೆಯಲ್ಲಿ, ಬೆನ್ನಿನ ಮೇಲೆ, ಕೈಯಿಂದ ಗಲ್ಲದ ಮೇಲೆ, ತುಟಿಯ ಮೇಲೆ, ಹೊಡೆದು ಗಾಯಪಡಿಸಿದ್ದರಿಂದ ಮಮ್ಮಿ ಮಾತಾಡುತ್ತಿಲ್ಲಾ ನೀವು ಕೂಡಲೇ ಬನ್ನಿರಿ ಅಂತಾ ತಿಳಿಸಿದಾಗ ಫಿರ್ಯಾದಿಯು ತನ್ನ ತಾಯಿ ಸುಶೀ¯ಮ್ಮಾ, ಸೋದರಮಾವ ಪೆಂಟಾರೆಡ್ಡಿ ತಂದೆ ರಾಮರೆಡ್ಡಿ ರವರು ಕೂಡಿಕೊಂಡು ಒಂದು ಖಾಸಗಿ ವಾಹನ ಮಾಡಿಕೊಂಡು ದಲಾಪುರ ಗ್ರಾಮಕ್ಕೆ ಹೋಗಿ ನೋಡಲು ವಿಷಯ ನೀಜ ಇದ್ದು ನ್ನ ಸೋದರಸೊಸೆ ಅಕ್ಷತಾರೆಡ್ಡಿ ಇವಳಿಗೆ ವಿಚಾರಿಸಲು ಕಾಕಾ ಗೋವಿಂದರೆಡ್ಡಿ ರವರಿಗೆ ಇಂದು ರಾತ್ರಿ ಊಟ ಮಾಡಲು ಮನೆಗೆ ಬರಲು ತಿಳಿಸಿದಾಗ ಮನೆಗೆ ಬಂದು ನೀನು ನನಗೆ ಊಟ ಮಾಡಲು ಬಾ ಅಂತಾ ಯಾಕೆ ಕರೆ ಮಾಡುತ್ತಿ ಅಂತಾ ಅಂದು ಬಡಿಗೆಯಿಂದ ತಲೆಯಲ್ಲಿ, ಬೆನ್ನಿನ ಮೇಲೆ ಹಾಗೂ ಪಪ್ಪಾ ಮಲ್ಲರೆಡ್ಡಿ ರವರು ತನ್ನ ಕೈಯಿಂದ ಗಲ್ಲದ ಮೇಲೆ, ತುಟಿಯ ಮೇಲೆ, ಹೊಡೆದು ಗಾಯ ಪಡಿಸಿರುತ್ತಾರೆ ಅಂತಾ ತಿಳಿಸಿದಾಗ ತನ್ನ ತಂಗಿಗೆ ಕೂಡಲೇ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

 

ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 04/2021, ಕಲಂ. 498(), 324, 504, 506 ಜೊತೆ 34 ಐಪಿಸಿ :-

ಫಿರ್ಯಾದಿ ನೇಹಾ ಮರಿಯಾ ಗಂಡ ಸೈಯದ ಶಾಹ ಇಸ್ಮಾಯಿಲ್ ಖಾದ್ರಿ @ ಫೈಜಲ್ ಖಾದ್ರಿ ವಯ: 25 ವರ್ಷ, ಸಾ: ಮನೆ ನಂ. 1-6-158 ಸಿಂಗಾರಬಾಗ ಬೀದರ ರವರಿಗೆ ಗಂಡನಾದ 1) ಸೈಯದ ಶಾಹ ಇಸ್ಮಾಯಿಲ್ ಖಾದ್ರಿ ಹಾಗು ಗಂಡನ ಮನೆಯವರಾದ 2) ಸೈಯದ ಶಾಹ ಸವೂದ್ ಅಹೆಮದ್ ಖಾದ್ರಿ ತಂದೆ ಸೈಯದ ಶಾಹ ಇಬ್ರಾಹಿಂ ಖಾದ್ರಿ, 3) ಆಸಿಯಾ ಪರವೀನ್ ಗಂಡ ಸೈಯದ್ ಶಾಹ ಸವೂದ್ ಅಹೆಮದ್ ಖಾದ್ರಿ, 4) ಸೈಯದ ಶಾಹ ಫಾರೂಖ್ ಖಾದ್ರಿ ತಂದೆ ಸೈಯದ್ ಶಾಹ ಸವೂದ್ ಅಹೆಮದ್ ಖಾದ್ರಿ, 5) ಹುಮಾ ಸರವರ್ ಗಂಡ ಇಶಾಕ ಅಲಿ ಸಾ: ಎಲ್ಲರೂ ಗೊಲೇಖಾನಾ ಬೀದರ, 6) ಹೀನಾ ಕೌಸರ್ ಗಂಡ ಎಂ.. ಬಾರಿ ಸಾ: ಬಾರೂದ ಗಲ್ಲಿ ದುಲ್ಹನ ದರ್ವಾಜ ರೋಡ ಬೀದರ ರವರೆಲ್ಲರೂ ಕೂಡಿ ಅವಾಚ್ಯ ಶಬ್ದಗಳಿಂದ ಬೈದು, ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ನೀಡುತ್ತಾ ಬಂದಿರುತ್ತಾರೆ, ಅಲ್ಲದೇ ದಿನಾಂಕ 13-12-2020 ರಂದು ರಂದು ಸದರಿ ಆರೋಪಿತರೆಲ್ಲರೂ ಕೂಡಿ ಅವಾಚ್ಯ ಶಬ್ದಗಳಿಂದ ಮಾತನಾಡಿ ಮಾನಸಿಕ ಹಾಗು ದೈಹಿಕವಾಗಿ ಕಿರುಕುಳ ನೀಡಿ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 16-01-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 08/2021, ಕಲಂ. ಮಹಿಳೆ ಕಾಣೆ :-

ದಿನಾಂಕ 01-01-2021 ರಂದು 2020 ಗಂಟೆಯ ಸುಮಾರಿಗೆ ಫಿರ್ಯಾದಿ ಸತೀಷ ತಂದೆ ಸ್ವಾಮಿದಾಸ್ ಮೇತ್ರೆ ಸಾ: ಅಲಿಯಂಬರ ಗ್ರಾಮ, ತಾ: ಜಿ: ಬೀದರ ರವರ ಹೆಂಡತಿ ರಂಜಿತಾ ಇವಳು ಅಲಿಯಂಬರ ಗ್ರಾಮದ ಮ್ಮ ಮನೆಯಿಂದ ಶೌಚಾಲಯಕ್ಕೆ ಹೊಗಿ ಬರುತ್ತೆನೆ ಅಂತಾ ಹೇಳಿ ಮನೆಯಿಂದ ಹೊದವಳು ವಾಪಸ್ಸು ಮನೆಗೆ ಬಂದಿರುವುದಿಲ್ಲ, ಕಾಣೆಯಾಗಿರುತ್ತಾಳೆ, ರಂಜೀತಾ ಇವಳ ಚಹರೆ ಗುರುತು 1) ಹೆಸರು : ರಂಜಿತಾ ಗಂಡ ಸತೀಷ ಮೇತ್ರೆ, 2) ವಯ: 25 ವರ್ಷ, ಜಾತಿ: ಎಸ್.ಟಿ ಗೊಂಡ, 3) ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾಳೆ, 4) ಸುಮಾರು 4’ 5” ಎತ್ತರ ಇರುತ್ತಾಳೆ, 5) ಧರಿಸಿದ ಬಟ್ಟೆಗಳ ವಿವರ: ಬಿಳಿ ಬಣ್ಣದ ಪ್ಯಾಂಟ್ ಹಳದಿ ಬಣ್ಣದ ಚೂಡಿದಾರ (ಟಾಪ್), 6) ಮಾತನಾಡುವ ಭಾಷೆ : ಕನ್ನಡ, ತೆಲಗು ಮತ್ತು ಹಿಂದಿ ಭಾಷೆ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ 16-01-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ಸಂಚಾರ ಪೊಲೀಸ್ ಠಾಣೆ ಅಪರಾಧ ಸಂ. 09/2021, ಕಲಂ. 279, 338 ಐಪಿಸಿ :-

ದಿನಾಂಕ 16-01-2021 ರಂದು ಫಿರ್ಯಾದಿ ಚಿದಾನಂದ ತಂದೆ ಭೀಮಶ್ಯಾ ಸಿತಾಳಗೇರಾ ವಯ: 26 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ:  ಬುತ್ತಿ ಬಸವಣ್ಣ ಹತ್ತಿರ ಚಿದ್ರಿ ಬೀದರ ರವರ ಅಣ್ಣನಾದ ಬಸವರಾಜ ತಂದೆ ಭೀಮಶ್ಯಾ ಸಿತಾಳಗೇರಾ ವಯ: 33 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಬುತ್ತಿ ಬಸವಣ್ಣ ಹತ್ತಿರ ಚಿದ್ರಿ ಬೀದರ ಮತ್ತು ದಯಾನಂದ ತಂದೆ ರಘುನಾಥರಾವ ಮಡಿವಾಳ ವಯ: 36 ವರ್ಷ, ಜಾತಿ: ಧೋಬಿ ಸಾ: ಸಿಂದೋಲ್, ಬೀದರ, ಸದ್ಯ: ಬಿದ್ರಿ ಕಾಲೋನಿ ಬೀದರ ಇವರಿಬ್ಬರು ಕೂಡಿಕೊಂಡು ಮೋಟಾರ ಸೈಕಲ ನಂ. ಕೆಎ-38/ಹೆಚ್-3980 ನೇದರ ಮೇಲೆ ಮೈಲೂರದಿಂದ-ಚಿದ್ರಿ ಕಡೆಗೆ ಹೋಗುತ್ತಿರುವಾಗ ದಯಾನಂದ ಇತನು ಶಾಹೀನ ಬಾಯ್ಸ ಹಾಸ್ಟೇಲ್ ಸಿದ್ರಾಮಯ್ಯಾ ಲೇ ಔಟ ಹತ್ತಿರ ಸದರಿ ಮೋಟರ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ವೇಗ ಹತೋಟಿಯಲ್ಲಿಟ್ಟುಕೊಳ್ಳದೇ ಸ್ಕೀಡ್ ಮಾಡಿರುತ್ತಾನೆ, ಪರಿಣಾಮ  ಫಿರ್ಯಾದಿಯವರ ಅಣ್ಣ ಬಸವರಾಜ ಇತನಿಗೆ ತಲೆ ಹಿಂದೆ ಎಡಭಾಗದಲ್ಲಿ ಭಾರಿ ರಕ್ತಗಾಯ, ಎಡಗೈ ಮೊಳಕೈ ಹತ್ತಿರ ರಕ್ತಗಾಯ, ಎಡಗಡೆ ಸೊಂಟಕ್ಕೆ ಗುಪ್ತಗಾಯವಾಗಿರುತ್ತದೆ, ದಯಾನಂದ ಇತನಿಗೆ ತರಚಿದ ಗಾಯಗಳಾಗಿರುತ್ತವೆ, ನಂತರ 108 ಅಂಬುಲೇನ್ಸನಲ್ಲಿ ಬಸವರಾಜ ರವರಿಗೆ ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರ್ಕಾರಿ ಆಸ್ಪತ್ರೇಗೆ ತಂದು ದಾಖಲಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಜನವಾಡಾ ಪೊಲೀಸ್ ಠಾಣೆ ಅಪರಾಧ ಸಂ. 09/2021, ಕಲಂ. 279, 337, 338 .ಪಿ.ಸಿ :-

ದಿನಾಂಕ 16-01-2021 ರಂದು ಫಿರ್ಯಾದಿ ಮನೋಹರ ತಂದೆ ಸಿದ್ರಾಮ ಕಾಂಬಳೆ ವಯ: 49 ವರ್ಷ, ಜಾತಿ: ಎಸ್.ಸಿ (ಹೊಲಿಯ), ಸಾ: ಜೈ ಭೀಮ ನಗರ ನೌಬಾದ ಬೀದರ ರವರು ತನ್ನ ಕೆಲಸದ ಕುರಿತು ಕಪಲಾಪುರ () ಗ್ರಾಮದ ದಿಗಂಬರ ಪಂಚಾಳ ರವರ ಅಂಗಡಿಗೆ ಹೋದಾಗ ದಿಗಂಬರ ಪಂಚಳಾರವರು ಹಜನಾಳ ಗ್ರಾಮದಲ್ಲಿ ಕವಿತಾ ಗಂಡ ರಘು ಮೇತ್ರೆ ರವರ ಮನೆಗೆ ಬಾಗಿಲು ಕೂಡಿಸುವುದು ಇದ್ದು ಹೋಗಿ ಬರೋಣ ಅಂತ ಹೇಳಿ ಇಬ್ಬರು ಅವರ ಅಪ್ಪಿ ಪ್ಯಾಗೋ ಗೂಡ್ಸ್ಟೋ ನಂ. ಕೆಎ-38/2991 ನೇದರಲ್ಲಿ ಬಾಗಿಲು ಹಾಕಿಕೊಂಡು ಕಪಲಾಪುರದಿಂದ ಹಜನಾಳ ಗ್ರಾಮಕ್ಕೆ ಹೋಗುವಾಗ ಸದರಿ ವಾಹನದಲ್ಲಿಯೇ ಕವಿತಾ ಗಂಡ ರಘು ಮೇತ್ರೆ, ಅವರ ಮಗಳಾದ ಶ್ವೇತಾ ಮೇತ್ರೆ, ಶಾಂತಮ್ಮ ಗಂಡ ಅನೀಲ ವಾಘಮಾರೆ ಹಜನಾಳ ಗ್ರಾಮ, ಅವರ ಮಗ ಸುಮಿತ ವಾಘಮಾರೆ ಹಾಗೂ ಸರಳ ತಂದೆ ಸೀಮನ್ ಕಪಲಾಪುರ ಗ್ರಾಮ ರವರು ಸಹ ಗೂಡ್ಸ್ವಾಹನದಲ್ಲಿಯೇ ಹಜನಾಳ ಗ್ರಾಮಕ್ಕೆ ಬರುತ್ತಿದ್ದು, ಕಪಲಾಪುರ () ಗ್ರಾಮದಿಂದ ಬಿಟ್ಟು ಹೊನ್ನೀಕೇರಿ ಮಾರ್ಗವಾಗಿ ಹೋಗುತ್ತಿರುವಾಗ ಗೂಡ್ಸ್ವಾಹನ ದಿಗಂಬರ ಪಂಚಾಳ ರವರು ಚಲಾಯಿಸುತ್ತಿದ್ದು ಅವರು ತಮ್ಮ ವಾಹನವನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಹೊನ್ನೀಕೇರಿ-ವಿಳಾಸಪುರ ರೋಡಿನ ವಿಳಾಸಪುರ ಧರಿಯಲ್ಲಿ ಬಂದಾಗ ದಿಗಂಬರ ಪಂಚಾಳ ರವರು ವೇಗದಲ್ಲಿದ್ದ ತಮ್ಮ ಗೂಡ್ಸ್ವಾಹನಕ್ಕೆ ಒಮ್ಮೇಲೆ ಬ್ರೇಕ್ಕಹಾಕಿದ್ದರಿಂದ ಗೂಡ್ ವಾಹನ ರೋಡಿನ ಮೇಲೆ ಪಲ್ಟಿಯಾಗಿರುತ್ತದೆ, ಸದರಿ ವಾಹನ ಪಲ್ಟಿಯಿಂದ ಫಿರ್ಯಾದಿಯ ತಲೆಗೆ, ಮುಖದ ಮೇಲೆ ರಕ್ತಗಾಯ, ಎಡಗೈಗೆ ಭಾರಿ ಗುಪ್ತಗಾಯ ಮತ್ತು ಸೊಂಟದ ಮೇಲೆ ಗುಪ್ತಗಾಯಗಳಾಗಿದ್ದು, ದಿಗಂಬರ ಪಂಚಾಳ ರವಗಟಾಯಿಗೆ ರಕ್ತಗಾಯ, ಎಡಗೈ ಮತ್ತು ಸೊಂಟದ ಮೇಲೆ ಗುಪ್ತಗಾಯ, ಶಾಂತಮ್ಮ ವಾಘಮಾರೆ ರವರಿಗೆ ಎಡಗೈ ಮತ್ತು ಸೊಂಟ ಮೇಲೆ ಗುಪ್ತಗಾಯವಾಗಿದ್ದು, ಕವಿತಾ ಮೇತ್ರೆ ರವರಿಗೆ ತಲೆಗೆ ರಕ್ತಗಾಯ, ಬಲಗೈಗೆ ಗುಪ್ತಗಾಯಶ್ವೇತಾ ಮೇತ್ರೆ ರವರಿಗೆ ಬಲಗೈ ಮತ್ತು ಬಲಗಾಲಿಗೆ ಭಾರಿ ಗುಪ್ತಗಾಯ, ಸರಳಾ ಇವಳಿಗೆ ಸೊಂಟದ ಮೇಲೆ ಮತ್ತು ಎಡಗೈಗೆ ಗುಪ್ತಗಾಯ ಮತ್ತು ಸುಮೀತ ವಾಘಮಾರೆ ಈತನಿಗೆ ಎಡಗೈ ಭುಜಕ್ಕೆ ಗುಪ್ತಗಾಯವಾಗಿರುತ್ತದೆ, ಅಷ್ಟರಲ್ಲಿ  ಹಿಂದೆ ಬರುತ್ತಿದ್ದ ಶಾಂತಮ್ಮ ವಾಘಮಾರೆ ರವರ ಗಂಡ ಅನೀಲ ತಂದೆ ಹಣಮಂತ ವಾಘಮಾರೆ ರವರು ತಕ್ಷಣ 108 ಅಂಬುಲೇನ್ಸ್ವಾಹನಕ್ಕೆ ಕರೆ ಮಾಡಿ ಗಾಯಗೊಂಡ ಎಲ್ಲರಿಗೂ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಅಪರಾಧ ಸಂ. 08/2021, ಕಲಂ. 153(ಬಿ) ಜೊತೆ 34 .ಪಿ.ಸಿ :-

ಡಿಸೆಂಬರ ತಿಂಗಳಲ್ಲಿ ಜರುಗಿದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಚಿಟ್ಟಾ ಗ್ರಾಮ ಪಂಚಾಯತ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ ಅಭ್ಯರ್ಥಿಯಾದ ಎಮ್.ಡಿ ಮುಜಾಹಿದ ತಂದೆ ಎಂ.ಡಿ ಮಕಬುಲ್ ಅಹ್ಮದ ವಯ: 39 ವರ್ಷ, ಜಾತಿ: ಮುಸ್ಲಿಂ, ವ್ರತ್ತಿ ಗ್ರಾಮ ಪಂಚಾಯತ ಸದಸ್ಯ, ಸಾ: ಚಿಟ್ಟಾ, ತಾ: & ಜಿ: ಬೀದರ ಈತನ ಭಾವಚಿತ್ರ ಇರುವ ಒಂದು ವಿಡಿಯೋ ತುಣುಕನ್ನು ಅಮೀರಖಾನ ತಂದೆ ಸತ್ತಾರಖಾನ ಸಾ: ಚಿಟ್ಟಾ ಇತನು ಸೃಷ್ಠಸಿದ ವಾಟ್ಸ ಆಪ್ ಗ್ರೂಪ್ ಮುಸ್ಲಿಂ ಗ್ರೂಪ್ನೇದರಲ್ಲಿ ಹರಿಬಿಟ್ಟ ವಿಡಿಯೋ ನೇದನ್ನು ಆರೋಪಿತರಾದ 1) ಎಂ.ಡಿ ಫಸಿಯೋದ್ದಿನ ತಂದೆ ಎಂ.ಡಿ ಮಕಬುಲ್ ಅಹ್ಮದ ಹಾಗೂ 2) ಸೋಹೀಲ್ ತಂದೆ ಹಿದಾಯತ್ ಮಿಯಾ ಇರಿಬ್ಬರು ಜೊತೆಗೂಡಿ ಎಡಿಟ್ ಮಾಡಿ ಸದರಿ ವಿಡಿಯೋದಲ್ಲಿಹಮ್ ಪಾಕಿಸ್ತಾನ ಮುಜಾಹೀದ ಹೈ ಉಸ್ ಧರ್ತಿಕೇ ರಖವಾಲೆ ಹೈ ಹಮ್, ಕೋಯಿ ಹಮೆ ಲಲಕಾಯ ತೊ ಉಸೆ ಹಮ್ ಕಾಟ್ ದಾಲಿಂಗೇಎಂಬ ಹಾಡು ಇದ್ದು, ಇದು ದೇಶದ ಐಕ್ಯತೆ ಮತ್ತು ಸೌರ್ಹಾದತೆ ಹಾಗು ಸಮಾಜಿಕ ಸಾಮರಸ್ಯಕ್ಕೆ ಭಂಗ ತರುವ ಅಂಶವನ್ನು ಹೊಂದಿದ್ದು, ಕಾರಣ ಇದನ್ನು ಸೃಷ್ಠಿಸಿ ಸಮಾಜಿಕ ಜಾಲತಾಣವಾದ ವಾಟ್ಸ್ಅಪ್ನಲ್ಲಿ ಹರಿ ಬಿಟ್ಟವರ ಮೇಲೆ ಸೂಕ್ತ ಕಾನೂನ ಕ್ರಮ ಜರುಗಿಸಲು ಕೋರಿದೆ ಅಂತ ಫಿರ್ಯಾದಿ ಅಮರಪ್ಪಾ ತಂದೆ ಸಂಗಪ್ಪಾ ಶಿವಬಲ್ ಪೊಲೀಸ ನಿರೀಕ್ಷಕರು ಆಂತರಿಕ ಭದ್ರತಾ ಘಟಕ ಬೀದರ ರವರು ನೀಡಿದ ದೂರಿನ ಸಾರಾಂಶದ ಮೇರೆಗೆ ದಿನಾಂಕ 16-01-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.