Police Bhavan Kalaburagi

Police Bhavan Kalaburagi

Saturday, January 30, 2021

BIDAR DISTRICT DAILY CRIME UPDATE 30-01-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 30-01-2021

 

ಬೀದರ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 01/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಶರಣಮ್ಮ ಗಂಡ ಸುಭಾಸ ಮೈಲುರೆ ವಯ: 75 ವರ್ಷ, ಜಾತಿ: ಕುರುಬ, ಸಾ: ಮೈಲಾರ ಖಾನಾಪೂರ, ಸದ್ಯ: ಅಷ್ಟೂರ ರವರ ಮಗಳಾದ ಜಗದೇವಿ 45 ವರ್ಷ ಇಕೆಯ ಗಂಡ ಪ್ರಭು ರವರು ಈಗ ಸುಮಾರು 5 ವರ್ಷದ ಹಿಂದೆ ತೀರಿಕೊಂಡಿದ್ದು ಮತ್ತು ಜಗದೇವಿ ರವರಿಗೆ ಶಿವಕುಮಾರ ಅಂತ 20 ವರ್ಷದ ಮಗನಿದ್ದು  ಎರಡು ವರ್ಷದ ಹಿಂದೆ ಹೃದಯ ಘಾತದಿಂದ ಮೃತ್ತಪಟ್ಟಿದ್ದು ಇರುತ್ತದೆ, ಜಗದೇವಿ ಇವಳು ತನ್ನ ಮಗ ತೀರಿಕೊಂಡಿದ್ದರಿಂದ ನಾನು ಸಾಯುತ್ತೇನೆ ನನಗೆ ಗಂಡ ಇಲ್ಲಾ ಮತ್ತು ಮಗನಿಲ್ಲಾ ಇದ್ದು ಏನು ಪ್ರಯೋಜನ ಅಂತ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು, ಜೀವನದಲ್ಲಿ ಜಿಗುಪ್ಸೆಗೊಂಡು ನೀರಿನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ, ಈ ಬಗ್ಗೆ ನನ್ನದು ಯಾರ ಮೇಲೆ ಯಾವುದೇ ದೂರು ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕಯ ಸಾರಾಂಶದ ಮೇರೆಗೆ ದಿನಾಂಕ 29-01-2021 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 01/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ಜನಾಬಾಯಿ ಗಂಡ ಅಂಕುಶ ನನ್ನೂರೆ ವಯ: 40 ವರ್ಷ, ಜಾತಿ: ಮರಾಠಾ, ಸಾ: ಚಿಕ್ಕಲಚಂದಾ, ಸದ್ಯ: ಬಳತೆ ಹೊಲದಲ್ಲಿ ಭಾಲ್ಕಿ ರವರ ಗಂಡ ಸುಮಾರ ವರ್ಷಗಳಿಂದ ಸರಾಯಿ ಕುಡಿಯುವ ಚಟ್ಟವುಳ್ಳವನಾಗಿದ್ದು, ಹೀಗಿರುವಾಗ  ದಿನಾಂಕ 28-01-2021 ರಿಂದ 29-01-2021 ರಂದು 0300 ಅವಧಿಯಲ್ಲಿ ಫಿರ್ಯಾದಿಯು ಪಾಲದಿಂದ ಮಾಡಿದ ಬಳತೆ ರವರ ಹೊಲದಲ್ಲಿಇರುವ ಬೇವಿನ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ, ತನ್ನ ಗಂಡ ಅಂಕುಶನ ಸಾವಿನಲ್ಲಿ ನನಗೆ ಯಾರ ಮೇಲೆ ಯಾವದೆ ತರಹದ ದೂರು ಅಥವಾ ಸಂಶಯ ಇರುವದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 11/2021, ಕಲಂ. ಮಹಿಳೆ ಕಾಣೆ :-

ಫಿರ್ಯಾದಿ ಸುಕೇಶ ತಂದೆ ರಾವಣ ಕಾಂಬಳೆ ವಯ: 32 ವರ್ಷ, ಜಾತಿ: ಎಸ್.ಸಿ, ಸಾ: ಖಾನಾಪುರ(ಕೆ), ತಾ: ಬಸವಕಲ್ಯಾಣ ರವರ ಹೆಂಡತಿ ಮಾಹಿ ಕಾಂಬಳೆ ರವರು ದಿನಾಂಕ 28-01-2021 ರಂದು 1830 ಗಂಟೆಯಿಂದ 1900 ಗಂಟೆಯ ಮಧ್ಯದ ಅವಧಿಯಲ್ಲಿ ಮನೆಯಿಂದ ಹೋದವಳು ಮರಳಿ ಮನೆಗೆ ಬಂದಿರುವುದಿಲ್ಲ, ಕಾಣೆಯಾಗಿರುತ್ತಾಳೆ, ಅವಳ ಚಹರೆ ಪಟ್ಟಿ 1) ಉದ್ದ ಮುಖ, 2) ನೇರ ಮೂಗು, 3) ಗೋಧಿ ಮೈಬಣ್ಣ, 4) ದಪ್ಪನೆ ಮೈಕಟ್ಟು 5) 5 ಅಡಿ ಎತ್ತರ ಇರುತ್ತಾಳೆ, 6) ಅವಳ ಮೈ ಮೇಲೆ ಒಂದು ಬಿಳಿ ಬಣ್ಣದ ಟಾಪ ಮತ್ತು ಹಳದಿ ಬಣ್ಣದ ಲೆಗ್ಗಿನ್ಸ ಇರುತ್ತದೆ, 7) ಅವಳು ಮರಾಠಿ, ಹಿಂದಿ ಮಾತನಾಡುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 29-01-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 12/2021, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 29-01-2020 ರಂದು ಫಿರ್ಯಾದಿ ಸದ್ದಾಮ ತಂದೆ ಶೇಖ್ ಇಸಾಕ ಸಾ: ಧರ್ಮಪೇಟಗಲ್ಲಿ ಮಂಠಾಳ, ತಾ: ಬಸವಕಲ್ಯಾಣ ರವರು ಬಸವಕಲ್ಯಾಣ ನಗರದ ತ್ರೀಪೂರಾಂತ ಓಣಿಯಲ್ಲಿದ್ದ ಮ್ಮ ಸಂಬಂಧಿಕರಿಗೆ ಅಕ್ಕಿ ಕೊಡಲು ನ್ನ ಹಿರೋ ಡಿಲಕ್ಸ ದ್ವಿ-ಚಕ್ರ ವಾಹನ ಸಂ. ಕೆಎ-56/ಜೆ-1080 ನೇದರ ಮೇಲೆ ನ್ನ ಹಿಂದೆ ಸಮದ ತಂದೆ ಉಸ್ಮಾನಸಾಬ ಖಿಂಡಿವಾಲೆ ವಯ: 55 ವರ್ಷ, ಸಾ: ಧರ್ಮಪೇಟಗಲ್ಲಿ ಮಂಠಾಳ ರವರಿಗೆ ಕೂಡಿಸಿಕೊಂಡು ಬಸವಕಲ್ಯಾಣ- ಖಾನಾಪೂರ ಮಾರ್ಗವಾಗಿ ಬರುವಾಗ ಖಾನಾಪೂರ ಶಿವಾರದಲ್ಲಿ ಎದುರಿನಿಂದ ಒಂದು ಅಪ್ಪಿ ಆಟೋ ರಿಕ್ಷಾ ನಂ. ಕೆಎ-39/5106 ನೇದರ ಚಾಲಕನಾದ ಆರೋಪಿಯು ತನ್ನ ಆಟೋವನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನೀಲಕಂಠ ಕ್ರಾಸ್ ಹತ್ತಿರ ಫಿರ್ಯಾದಿಯವರ ದ್ವಿ-ಚಕ್ರ ವಾಹನಕ್ಕೆ ಡಿಕ್ಕಿ ಮಾಡಿದ್ದರಿಂದ ಫಿರ್ಯಾದಿಯ ಬಲಗಾಲಿನ ಮೊಳಕಾಲು ಹತ್ತಿರ ತರಚಿದ ರಕ್ತಗಾಯ ಮತ್ತು ಪಾದದ ಮೇಲೆ ತರಚಿದ ರಕ್ತಗಾಯವಾಗಿರುತ್ತದೆ ಹಾಗೂ ಸಮದ ಇತನಿಗೆ ತಲೆಗೆ ರಕ್ತಗಾಯ ಮತ್ತು ಬಲಗಾಲಿನ ಮೊಳಕಾಲು ಹತ್ತಿರ ಭಾರಿ ರಕ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿಯು ಬಸವಕಲ್ಯಾಣ ಕಡೆಗೆ ಹೊಗುವ ಒಂದು ಆಟೋ ರಿಕ್ಷಾಕ್ಕೆ ಕೈ ಮಾಡಿ ಅದರಲ್ಲಿ ಗಾಯಗೊಂಡ ಇಬ್ಬರು ಆಟೋದಲ್ಲಿ ಕುಳಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದು, ನಂತರ ಸಮದ ಇತನು  ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಕುರಿತು ಉಮರ್ಗಾಕ್ಕೆ ಹೋಗಿರುತ್ತಾನೆ,  ಆರೋಪಿಯು ತನ್ನ ಆಟೋ ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.