Police Bhavan Kalaburagi

Police Bhavan Kalaburagi

Monday, September 7, 2015

BIDAR DISTRICT DAILY CRIME UPDATE 07-09-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 07-09-2015

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 128/2015, ಕಲಂ 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 06-09-2015 ರಂದು ಫಿರ್ಯಾದಿ ಹಣಮಂತಪ್ಪಾ ತಂದೆ ಭೀಮಪ್ಪಾ ಹೊಸಕೇರೆ, ವಯ: 54 ವರ್ಷ, ಜಾತಿ: ಲಿಂಗಾಯತ, ಸಾ: ಎಸ್‌.ಎಂ.ಕೃಷ್ಣ ನಗರ, ಹಂಬಲ ರೋಡ, ಗದಗ ರವರ ಹೆಂಡತಿ ನಾಗಮ್ಮಾ ವಯ: 45 ವರ್ಷ, ಇಕೆಯು ನೀರು ತರಲು ಕೌಡಾಳ(ಎಸ್‌) ಗ್ರಾಮದ ರೋಡ ದಾಟುತ್ತಿರುವಾಗ ಅವರ ಹಿಂದೆ ಮೊಮ್ಮಗನಾದ ಪ್ರಜ್ವಲ ವಯ: 8 ವರ್ಷ ಇತನು ಬರುತ್ತಿದ್ದು, ಹುಮನಾಬಾದ ಕಡೆಯಿಂದ ಬಂಗ್ಲಾ ಕಡೆಗೆ ಹೋಗುತ್ತಿರುವ ಒಂದು ಲಾರಿ ನಂ. ಎಂಎಚ್‌-12/ಎಲ್‌ಟಿ-9241 ನೇದರ ಚಾಲಕನಾದ ಆರೋಪಿಯು ತನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಫಿರ್ಯಾದಿಯವರ ಮೊಮ್ಮಗನಿಗೆ ಡಿಕ್ಕಿ ಮಾಡಿದ್ದರಿಂದ ಮೊಮ್ಮಗನ ಮುಖ, ತಲೆ, ಹೊಟ್ಟೆ, ಕೈಕಾಲುಗಳು ಪೂರ್ತಿ ಜಜ್ಜಿ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ, ಡಿಕ್ಕಿ ಪಡಿಸಿ ಆರೋಪಿಯು ತನ್ನ ಲಾರಿಯನ್ನು ಬಿಟ್ಟು ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 195/2015, PÀ®A 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 06-09-2015 ರಂದು ಫಿರ್ಯಾದಿ ಬಾಲಾಜಿ ತಂದೆ ಬಾಬುರಾವ ಅದೇಪ್ಪಾ ಸಾ: ಹುಲಸೂರು ರವರ ಅಕ್ಕ ಮತ್ತು ಭಾವ ಇವರು ತಮ್ಮ ಮೋಟಾರ ಸೈಕಲ ನಂ ಕೆಎ-39/ಎಚ್-1344 ನೇದರ ಮೇಲೆ ಬೀದರ ಭಾಲ್ಕಿ ರೋಡಿನ ಮೇಲಿಂದ ಕರಡಿಯಾಳ ಗುರುಕುಲದ ಹತ್ತಿರ ಕುಳಿತು ಬರುತ್ತಿರುವಾಗ ಭಾಲ್ಕಿ ಕಡೆದಿಂದ ಮೋಟಾರ ಸೈಕಲ ನಂ. ಕೆಎ-39/ಕೆ-2030 ನೇದರ ಚಾಲಕನಾದ ಆರೋಪಿಯು ತನ್ನ ಮೋಟಾರ ಸೈಕಲನ್ನು ಅತೀ ವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸಿಕೊಂಡು ಅವರು ಕುಳಿತು ಬರುತ್ತಿದ್ದ ಮೋಟಾರ ಸೈಕಲಗೆ ಡಿಕ್ಕಿ ಮಾಡಿದ್ದರಿಂದ ಫಿರ್ಯಾದಿಯವರ ಭಾವನ ಮೋಟಾರ ಸೈಕಲ ಹಿಂದೆ ಕುಳಿತ ಅಕ್ಕ ರೇಖಾ ಇವರು ಕೆಳಗೆ ಬಿದ್ದಿದ್ದು, ಸದರಿ ಡಿಕ್ಕಿಯಿಂದ ಅಕ್ಕಳ ತಲೆಯ ಹಿಂದೆ ಭಾರಿ ರಕ್ತಗಾಯವಾಗಿರುತ್ತದೆ, ಡಿಕ್ಕಿ ಮಾಡಿದ ಆರೋಪಿಯು ತನ್ನ ಮೋಟಾರ್ ಸೈಕಲ ನಿಲ್ಲಿಸದೇ ಓಡಿಸಿಕೊಂಡು ಹೋಗಿರುತ್ತಾನೆ, ಗಾಯಗೊಂಡ ಅಕ್ಕಳಿಗೆ ಫಿರ್ಯಾದಿ ಮತ್ತು ಭಾವ, ಗೆಳೆಯ ದಿಲೀಪ 3 ಜನರು ಸೇರಿ ಕಾರಿನಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಗ ತಂದು ದಾಖಲಿಸಿದಾಗ ಭಾಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಅಕ್ಕಳಿಗೆ ಚಿಕಿತ್ಸೆ ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಬೀದರಗೆ ಕರೆದುಕೊಂಡು ಹೋಗಲು ತಿಳಿಸಿದ್ದು, ಅದರಂತೆ ಬೀದರ ಗುರುಪಾದಪ್ಪಾ ನಾಗಮಾರಪಳ್ಳಿ ಸುಪರ್ ಸ್ಪ್ಯಾಶಾಲಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದಿಗೆ ಕಳುಹಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Kalaburagi District Reported Crimes.

ಅಶೋಕ ನಗರ ಠಾಣೆ :ದಿನಾಂಕ 06/09/2015 ರಂದು ಸಂಜೆ 5-30 ಪಿಎಂಕ್ಕೆ ಶ್ರೀ. ಡಿ.ವೆಂಕಟರಾವ ತಂದೆ ಕೊಪ್ರೇಶರಾವ ದೇಸಾಯಿ ಸಾ: ವಡಗೇರಾ ತಾ: ಶಾಹಪೂರ  ಹಾ.ವ: ಪ್ಲಾಟ ನಂ. 133 ಶ್ರೀ ಕೃಷ್ಣ ನಿವಾಸ ಎನ್‌.ಜಿ.ಒ ಕಾಲೋನಿ ಜೇವರ್ಗಿ ರಸ್ತೆ ಕಲಬುರಗಿ ರವರು ಠಾಣೆಗೆ ಬಂದು ಲಿಖಿತ ಅರ್ಜಿ ಸಲ್ಲಿಸಿದ್ದು ಅದರ ಸಾರಾಂಶವೆನೆಂದರೆ ನನ್ನ ಅಜ್ಜನವರ ವಾರ್ಷಿಕ ಶೃದ್ದದ ಪ್ರಯುಕ್ತ ದಿನಾಂಕ 04/09/2015 ರಂದು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸದಸ್ಯರೆಲ್ಲರೂ ಯಾದಗೀರಗೆ ಹೊಗಿರುತ್ತಾರೆ. ದಿನಾಂಕ 06/09/2015 ರಂದು ಬೆಳಿಗ್ಗೆ ವೇಳೆಗೆ  ನಮ್ಮ ಮನೆಯ ಮಾಲಿಕರಾದ  ರಂಗನಾಥ ಬೊರ್ಗಿಕರ ರವರು ದೂರವಾಣಿ ಮೂಲಕ  ಮನೆಗಳ್ಳತನವಾದ ವಿಷಯವನ್ನು ತಿಳಿಸಿದ ಮೇಲೆ ನಮ್ಮ ತಂದೆ ತಾಯಿಯವರು ಶ್ರದ್ಧಕರ್ಮದಲ್ಲಿ ಇರಬೇಕಾಗಿದ್ದರಿಂದ ನಾನು ಒಬ್ಬನೇ ಕಲಬುರಗಿಗೆ ಬಂದು ನೊಡಲು ಮನೆ ಬಾಗಿಲು ಕೊಂಡಿ ಹಾಗು ಬೀಗ ಮುರಿದಿತ್ತು  ನಂತರ ಒಳಗಡೆ ಹೊಗಿ ನೊಡಲು ಬೇಡರೂಮಿನಲ್ಲಿದ್ದ ಅಲಮಾರ  ತೆರೆದಿದ್ದು ಬಟ್ಟೆ ಬರೆಗಳು ಚಲ್ಲಾಪಿಲ್ಲಿಯಾಗಿದ್ದವು. ದೇವರಮನೆಯಲ್ಲಿ ಪೂಜಾ ಹಾಗು ಸಹ ಸಾಮಗ್ರಿಗಳು ಚಲ್ಲಾಪಿಲ್ಲಿಯಾಗಿದ್ದವು. ದಿನಾಂಕ 05-06/09/2015 ರ ರಾತ್ರಿ ವೇಳೆಯಲ್ಲಿ ಅಪರಿಚಿತ ಕಳ್ಳರು ನಮ್ಮ ಮನೆಯ ಬಾಗಿಲಿನ ಬೀಗ ಹಾಗು ಕೊಂಡಿ ಮುರಿದು  ಅತಿಕ್ರಮ ಪ್ರವೇಶ ಮಾಡಿ ಈ ಕೆಳಗೆ ನಮೂದಿಸಿದ ಬೆಳ್ಳಿ ಬಂಗಾರದ ವಸ್ತುಗಳು ಹಾಗು ನಗದನ್ನು ಕಳವು ಮಾಡಿಕೊಂಡು ಹೊಗಿರುತ್ತಾರೆ.  1)ಬೆಳ್ಳಿಯ ತಾಟು ಸಣ್ಣದ್ದು-1  2) ಬೆಳ್ಳಿಯ ತಾಟು ದೊಡ್ಡದ್ದು-1 3)ಬೆಳ್ಳಿಯ ಬಟ್ಟಲುಗಳು-6, 4)ಬೆಳ್ಳಿಯ ಲೋಟಗಳು-17, 5) ಬೆಳ್ಳಿಯ ಆರತಿ ತಟ್ಟೆ-1, 6)ಬೆಳ್ಳಿಯ ಅತ್ತರದಾನ-1, 7)ಬೆಳ್ಳಿಯ ಅರ್ಘ್ಯ ಪಾತ್ರೆ-1, 8)ಬೆಳ್ಳಿಯ ನಿಲಾಂಜನ ಒಂದು ಜೊತೆ-2 9) ಚಿನ್ನದ ತುಳಸಿ ಮಾಂಗಲ್ಯ-1 10) ಚಿನ್ನದ ನಕಲೇಸ 6 ಗ್ರಾಂ, 11) ಚಿನ್ನದ ಕಿವಿ ಬೆಂಡೊಲಿ ಒಂದು ಜೊತೆ 12) ನಗದು ಹಣ 5000/- ರೂ.  ಹೀಗೆ ಒಟ್ಟು 2 ಕೆ.ಜಿ ಬೆಳ್ಳಿಯ ಪೂಜಾ ಹಾಗು ಸಹಸಾಮಗ್ರಿಗಳು ಮತ್ತು 10 ಗ್ರಾಂ ಬಂಗಾರದ ಆಭರಣದ ಸಾಮಾನುಗಳು ಜೊತೆಗೆ ನಗದು ಸೇರಿದಂತೆ ಅಂದಾಜು 90,000/- ರೂ ಮೊತ್ತದ ಸಾಮಗ್ರಿಗಳು ಕಳ್ಳತನವಾಗಿದ್ದು  ನಾವು ತಮಗೆ ಪತ್ತೆ ಹಚ್ಚಿಕೊಡಬೇಕೇಂದು ಅರ್ಜಿಯ ಸಾರಾಂಶದ ಮೇಲಿಂದ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.