ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ಅಂಬಿಕಾ ಗಂಡ ನಾಗಪ್ಪಾ ಜಮಾದಾರ ಸಾ
: ಲಿಂಬಿತೋಟ ಅಫಜಲಪೂರ ರವರ ಗಂಡನಾದ
ನಾಗಪ್ಪಾ ಇವರು ದಿನಾಂಕ 20-06-2014 ರಂದು 5:00 ಗಂಟೆಯ ಸುಮಾರಿಗೆ ನನ್ನ ಗಂಡ
ಯಾರದೋ ಮೋಟರ ಸೈಕಲ್ ತೆಗೆದುಕೊಂಡು ಬಂದು ಅವಸರದಲ್ಲಿ ಬಟ್ಟೆ ಬದಲಾಯಿಸಿಕೊಳ್ಳುತ್ತಿದ್ದರು, ಆಗ ನಾನು ಯಾಕೆ ಇಷ್ಟು ಅವಸರ ಮಾಡುತ್ತಿದ್ದಿರಿ ಏನಾಯಿತು ಅಂತಾ ಕೇಳಿದಾಗ ಕೇಶಾಪೂರದಿಂದ
ನನ್ನ ಗೆಳೆಯ ಕಮಲಾಕರ ಎನ್ನುವವರು ಬಾ ಅಂತಾ ಫೋನ್ ಮಾಡಿದ್ದಾನೆ ಕೆಲಸ ಇದೆ ಅದಕ್ಕೆ
ಹೋಗುತ್ತಿದ್ದೇನೆ ಅಂತಾ ಹೇಳಿ ಸದರಿ ಮೋಟರ ಸೈಕಲ್ ತೆಗೆದುಕೊಂಡು ಹೋದರು, ನಂತರ 9;30 ಪಿ.ಎಂ ಸುಮಾರಿಗೆ ನನ್ನ ಗಂಡನ ಸೋದರ ಮಾವ ವಿಠ್ಠಲ ತಂದೆ
ಸಿದ್ರಾಮ ಇಂಗಳಗಿ ರವರು ನಮ್ಮ ಮನೆಗೆ ಫೋನ್ ಮಾಡಿ ಕೇಶಾಪೂರದಲ್ಲಿ ಯಾರೋ ನಾಗಪ್ಪನನ್ನು ಕೊಲೆ
ಮಾಡಿರುತ್ತಾರೆ ಅಂತಾ ಹೇಳಿದರು. ಆಗ ನಾವೆಲ್ಲರು ಗಾಬರಿಯಾಗಿ ನಾನು ಮತ್ತು ನಮ್ಮ ಅತ್ತೆ-ಮಾವ ಹಾಗು ವಿಠ್ಠಲ ಇಂಗಳಗಿ ಮತ್ತು ಇನ್ನಿತರರು ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ
ಕೇಶಾಪೂರ ಗ್ರಾಮಕ್ಕೆ ಹೋಗಿ ನೋಡಲಾಗಿ ನನ್ನ ಗಂಡನ ಶವ ಬಿದ್ದಿತ್ತು. ನನ್ನ ಗಂಡನ ಶವ ನೋಡಲು ನನ್ನ ಗಂಡ ಕೆಳಗಡೆ ಮುಖ ಮಾಡಿ ಬಿದ್ದುದ್ದು, ತಲೆಯ ಮೇಲೆ ಭಾರಿ ರಕ್ತಗಾಯ ವಾಗಿ ರಕ್ತ ಸೋರಿದ್ದು ಇತ್ತು. ಸದರಿ ನನ್ನ ಗಂಡನ ಶವ ಕಮಲಾಕರ ಕುಂಬಾರ ರವರ ಮನೆಯ ಮುಂದೆ ಬಿದ್ದಿರುತ್ತದೆ ಅಂತಾ ಜನರು
ಮಾತಾಡುತ್ತಿದ್ದರು, ನಂತರ ಅಲ್ಲೇ ಪಕ್ಕದಲ್ಲೇ ನಿಂತಿದ ಅದೇ ಗ್ರಾಮದ
ಗುರಣ್ಣಗೌಡ ಪಾಟೀಲ, ಹಣಮಂತ್ರಾಯಗೌಡ ಪಾಟೀಲ, ದೌಲಪ್ಪ ಹೊಸಮನಿ, ಸೈಫನ್ ಚೌಧರಿ ರವರಿಗೆ ಘಟನೆ ಬಗ್ಗೆ ಕೇಳಿದಾಗ ಅವರು
ಹೇಳಿದ್ದೇನೆಂದರೆ, 8;00 ಪಿ.ಎಂ ಸುಮಾರಿಗೆ ನಾಗಪ್ಪ ಇವನು ನಮ್ಮೂರ ಕಮಲಾಕರ ಕುಂಬಾರ
ರವರ ಮನೆಗೆ ಬಂದು ಕಮಲಾಕರನನ್ನು ಅವಾಚ್ಯವಾಗಿ ಬೈಯುತ್ತಿದ್ದನು, ಆಗ ಕಮಲಾಕರ ಇವನು ನಾಗಪ್ಪನಿಗೆ ನೀನು ನಮ್ಮ ಮನೆಗೆ ಯಾಕ ಬರತಿಯೋ ಮಗನಾ ನಿನಗು ನನ್ನ
ಹೆಂಡತಿಗು ಸಂಬಧ ಆದೇನಲೆ ಅಂತಾ ಅಂದನು ಆಗ ನಾಗಪ್ಪನು ನಾನು ನಿನ್ನ ಹೆಂಡತಿ ಸಂಗಡ ಇದಿನಿ, ಏನ ಮಾಡಕೋತಿಯೋ ಅಂಥಾ ಅಂದು ಇಬ್ಬರು ಒಬ್ಬರಿಗೊಬ್ಬರು ಹೊಡೆದಾಡುತ್ತಿದ್ದರು. ಆಗ ಕಮಲಾಕರ ಇವನು ರೋಷದಲ್ಲಿ ಅಲ್ಲೆ ಬಿದ್ದಿದ ಒಲೆ ಉದುವ ಉದಕೊಳಿಯಿಂದ ಮತ್ತು ಕಲ್ಲಿನಿಂದ
ನಾಗಪ್ಪನ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯ ಪಡಿಸಿದನು. ಆಗ ನಾಗಪ್ಪನು ನೆಲದ ಮೇಲೆ ಮುಖ ಕೆಳಗೆ ಮಾಡಿ ಬಿಕ್ಕುತ್ತಾ ಬಿದ್ದನು, ಆ ಸಮಯದಲ್ಲಿ ನಾವೆಲ್ಲರು ಸೇರಿ ಜಗಳ ಬಿಡಿಸಿ ನಾಗಪ್ಪನಿಗೆ ನೋಡಲಾಗಿ ಅವನ ತಲೆಯ ಮೇಲೆ ಭಾರಿ
ರಕ್ತಗಾಯ ವಾಗಿ ತಲೆಯಿಂದ ಅತೀ ರಕ್ತ ಸ್ರಾವ ವಾಗುತ್ತಿತ್ತು, ಆಗ ನಾವು ಅವನನ್ನು ನೀರು ಕುಡಿಸುತ್ತಿದಾಗ 9;00 ಪಿ.ಎಂ ಸುಮಾರಿಗೆ ಒಮ್ಮೇಲೆ ಉಸಿರು ನಿಂತು, ಮೃತ ಪಟ್ಟಿದ ಬಗ್ಗೆ ಖಚಿತಪಟ್ಟೆವು. ಸದರಿ ಕಮಲಾಕರ ತಂದೆ ಮಲ್ಕಪ್ಪ ಕುಂಬಾರ ಸಾ|| ಕೇಶಾಪೂರ ಇವನು ತನ್ನ ಹೆಂಡತಿಯೊಂದಿಗೆ ನನ್ನ ಗಂಡ ಅನೈತಿಕ ಸಂಬಂಧ ಇಟ್ಟುಕೊಂಡ ವಿಷಯವನ್ನು
ತಲೆಯಲ್ಲಿ ಇಟ್ಟುಕೊಂಡು ನನ್ನ ಗಂಡನನ್ನು ಕಲ್ಲಿನಿಂದ ಮತ್ತು ಒಲೆ ಉದುವ ಉದಕೊಳಿಯಿಂದ ತಲೆಯ ಮೇಲೆ
ಜೋರಾಗಿ ಹೊಡೆದು ಬಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶೇಖರ ತಂದೆ ರಾಣಪ್ಪಾ
ಸರಡಗಿ ಸಾ: ಮರಗಮ್ಮ ಟೆಂಪಲ ಹತ್ತಿರ ಬಾಪು ನಗರ ಗುಲಬರ್ಗಾ ರವರು ದಿನಾಂಕ 20-06-2014 ರಂದು ಸಾಯಂಕಾಲ 5-15 ಗಂಟೆ ಸುಮಾರಿಗೆ ತಾನು
ಚಲಾಯಿಸುತ್ತಿರುವ ಮೋ/ಸೈಕಲ ನಂಬರ ಎಪಿ-28 ಎಜೆ-7670 ನೇದ್ದರ ಹಿಂದುಗಡೆ ನನ್ನ
ಅಕ್ಕಳಾದ ಆರತಿ ಇವಳನ್ನು ಕೂಡಿಸಿಕೊಂಡು ಏಷಿಯನ ಮಹಲದಿಂದ ಮನೆಯ ಕಡೆಗೆ ಹೋಗುವಾಗ ಏಷಿಯನ ಮಹಲ
ಎದುರುಗಡೆ ಇರುವ ರೋಡ ಮೇಲೆ ಹಳೆ ಡಿಪಿಓ ಕ್ರಾಸ ಕಡೆಯಿಂದ ಕಾರ ನಂಬರ ಕೆಎ-32 ಬಿ-9243 ರ ಚಾಲಕ ಇನಾಯತ ಅಲಿ ತಂದೆ
ಮಕ್ಸೂದ ಅಲಿ ಇತನು ಎದುರಿನಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ
ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನಗೆ ಮತ್ತು ನನ್ನ ಅಕ್ಕ ಆರತಿ ಇವಳಿಗೆ
ಗಾಯಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ಶ್ರೀ ಬಸವರಾಜ ತಂದೆ ವೀರಭದ್ರಪ್ಪ ಮಂಠಾಳ ಸಾ: ಮುಕರಂಬಿ ಗ್ರಾಮ ತಾ:ಚಿಂಚೋಳಿ ರವರು ದಿನಾಂಕ 20-06-14 ರಂದು ಬೆಳಿಗ್ಗೆ 6-00 ಗಂಟೆ ಸುಮಾರಿ ಮುಕರಂಬಿಯಿಂದ ಟೆಂಪೋದಲ್ಲಿ ಕುಳಿತುಕೊಂಡು, ಮಾಹಾಗಾಂವ ಕ್ರಾಸಿಗೆ ಬೆಳಿಗ್ಗೆ 8-15 ಗಂಟೆ ಸುಮಾರಿಗೆ ಬಂದಾಗ, ಆಗ ಮಾಹಾಗಾಂವ ಕ್ರಾಸಿನಲ್ಲಿ ಒಬ್ಬ ಟಂಟಂ ಕೆಎ 32 ಬಿ 9915 ಚಾಲಕ ಕಮಲಾಪೂರ ಅಂತಾ ಕೂಗುತ್ತಿದ್ದರಿಂದ ನಾವೆಲ್ಲರೂ ಕಮಲಾಪೂರಕ್ಕೆ ಹೋಗುವ ಕುರಿತು ಟಂಟಂ ಕೆಎ 32 ಬಿ 9915 ರಲ್ಲಿ ಏರಿ ಕುಳಿತೇವು. ನಾನು
ಟಂಟಂ ಎಡಭಾಗದ ಬದಿಯಲ್ಲಿ ಕುಳಿತೆನು. ಟಂಟಂ ಚಾಲಕನು
ಟಂಟಂನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ಹೊರಟಿದ್ದು, ಬೆಳಿಗ್ಗೆ 8-30 ಗಂಟೆ ಸುಮಾರಿಗೆ ಮಾಹಾಗಾಂವ ಕ್ರಾಸ ದಾಟಿ ಸ್ವಲ್ಪ ಮುಂದೆ ಇರುವ ಕಾರ್ಪೋರೇಶನ
ಬ್ಯಾಂಕ ದಾಟಿ ಸ್ವಲ್ಪ ಮುಂದೆ ಎದುರಿನ ರೋಡಿನ ಮೇಲೆ ಬಂದಾಗ, ವೇಗದಲ್ಲಿ ಒಮ್ಮಿಂದ ಒಮ್ಮೇಲೆ ಎಡಕ್ಕೆ ಹೊರಳಿಸಿದ್ದರಿಂದ, ವೇಗದ ಆಯ ತಪ್ಪಿ ರೋಡಿನ ಎಡಭಾಗಕ್ಕೆ ಪಲ್ಟಿ ಮಾಡಿದ್ದರಿಂದ, ಒಳಗಿದ್ದ ಎಲ್ಲಾ ಜನರು ನನ್ನ ಮೇಲೆ ಬಿದ್ದರು. ಇದರಿಂದಾಗಿ ನನ್ನ ಬಲಗಾಲ ಮೊಳಕಾಲ ಭಾರಿ ರಕ್ತಗಾಯವಾಗಿ ಕಾಲು ಮುರಿದಂತಾಗಿದ್ದು, ಮತ್ತು ಎಡಗೈ ಮೊಳಕೈ ಮೇಲೆ ತರಚಿದ ರಕ್ತಗಾಯವಾಗಿದ್ದು, ನನ್ನ ಹೆಂಡತಿ ಗಂಗಮ್ಮಾ, ಅಪ್ಪಣ್ಣಾ, ಸಿದ್ರಾಮ, ಕಸ್ತೂರಬಾಯಿ, ಶೋಭಾ, ದಾಸಮಯ್ಯ, ಅಣವೀರಮ್ಮಾ ಮತ್ತು ಟಂಟಂ
ಚಾಲಕನಿಗೆ ಯಾವುದೇ ಗಾಯಗಳು ಆಗಿರುವುದಿಲ್ಲಾ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ಶ್ರೀಮತಿ ಪಾರ್ವತಿ ಗಂಡ ಬಾಬುರಾವ ರಾಠೋಡ, ಸಾಃ ಮರ್ತುರ ತಾಂಡ ಗುಲಬರ್ಗಾ ರವರು ದಿನಾಂಕ
21-06-2014 ರಂದು 1930 ಗಂಟೆಯ ಸುಮಾರಿ ಫಿರ್ಯಾದಿಯು ಆಳಂದ ರೋಡಿಗೆ ಇರುವ ಆರ್ಶಿವಾದ ಕಲ್ಯಾಣ
ಮಂಟಪದ ಎದರುಗಡೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿತನು ತನ್ನ ಅಟೋರಿಕ್ಷಾ ನಂ. ಕೆ.ಎ 32 8742
ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಹಿಂದಿನಿಂದ
ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಅಟೋರಿಕ್ಷಾ ಪಲ್ಟಿ ಮಾಡಿ ಫಿರ್ಯಾದಿ ಹಾಗೂ ಆರೋಪಿ
ಗಾಯಗೊಂಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ
ದೊಡ್ಡಪ್ಪ ತಂದೆ ಶರಣಬಸಪ್ಪ ನಿಷ್ಠಿ ರವರು ದಿನಾಂಕ 21-06-2014 ರಂದು ಮಧ್ಯಾಹ್ನ 12=30 ಗಂಟೆಗೆ ತನ್ನ ಕಾರ ನಂ: ಕೆಎ 32 ಎನ್ 3663 ನೆದ್ದರಲ್ಲಿ
ಎಸ್.ವಿ.ಪಿ.ಸರ್ಕಲ್ ದಿಂದ ಸುಪರ ಮಾರ್ಕೇಟ ಕಡೆಗೆ ಹೋಗುತ್ತಿದ್ದಾಗ ಮಹಾನಗರ ಪಾಲಿಕೆ ಎದುರು ರೋಡ
ಮೇಲೆ ಹಿಂದಿನಿಂದ ಮೋ/ಸೈಕಲ್ ನಂ: ಕೆಎ 32 ಎಸ್ 6408 ನೆದ್ದರ ಸವಾರ ನರೇಶ ಇತನು ತನ್ನ ಮೋ/ಸೈಕಲ್
ನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಕಾರಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಕಾರ ಜಕ್ಂ:ಮಾಡಿರುತ್ತಾನೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ
ಬಂಧನ :
ಅಫಜಲಪೂರ ಠಾಣೆ : ದಿನಾಂಕ 20-06-2014 ರಂದು 4;00 ಪಿಎಮ್ ಕ್ಕೆ ಅಫಜಲಪೂರ
ಪಟ್ಟಣದ ದೇಸಾಯಿಕಲ್ಲೂರ ರಸ್ತೆಯಲ್ಲಿರುವ ಸೋಂದುಸಾಬ ದರ್ಗಾದ ಮುಂದೆ ಸಾರ್ವಜನಿಕ ಸ್ಥಳದಲ್ಲಿ
ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ
ಆಡುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು
ಪಂಚರೊಂದಿಗೆ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ
ರವರ ಮಾರ್ಗದರ್ಶನದಂತೆ ಸೋಂದು ಸಾಬ ದರ್ಗಾಕ್ಕೆ ಹೋಗಿ ಮರೆಯಾಗಿ ನಿಂತು ನೋಡಲು ಸೋಂದು ಸಾಬ
ಸರ್ಗಾದ ಮುಂದೆ ಆಲದ ಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ 5 ಜನರು ದುಂಡಾಗಿ ಕುಳಿತುಕೊಂಡು
ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವದ ಜೂಜಾಟ ಆಡುತ್ತಿದ್ದನ್ನು
ಖಚಿತ ಪಡಿಸಿಕೊಂಡು ದಾಳಿ ಮಾಡಿ ಜುಜಾಡುತ್ತಿದ್ದ 5 ಜನರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ
ಮಾಡಲಾಗಿ 1) ಪ್ರಶಾಂತ ತಂದೆ ದತ್ತುಗೌಡ
ಪಾಟೀಲ 2) ವಿಜಯಕುಮಾರ ತಂದೆ ವಿಶ್ವನಾಥ
ಗೂಳೆದ 3) ಬಸವರಾಜ ತಂದೆ ಶಾಮರಾಯ
ಖಂಡೋಳಿ 4) ಸಂಜಯಕುಮಾರ ತಂದೆ ಗುರಣ್ಣ
ಬಟಗೇರಿ 5) ಶರಣಪ್ಪ ತಂದೆ ಮಾಂತಪ್ಪ
ಟಗೇರಿ ಸಾ|| ಎಲ್ಲರೂ ಅಫಜಲಪೂರ ಅಂತಾ
ತಿಳಿಸಿದ್ದು ಸದರಿಯವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಒಟ್ಟು 2,290/- ರೂ ನಗದು ಹಣ ಮತ್ತು ಮತ್ತು 52 ಇಸ್ಪೆಟ ಎಲೆಗಳುನ್ನು
ಜಪ್ತಮಾಡಿಕೊಂಡು ಸದರಿಯವರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಮಟಕಾ ಜೂಜಾಟ ನಿರತ ವ್ಯಕ್ತಿಯ ಬಂಧನ
:
ಅಫಜಲಪೂರ ಠಾಣೆ : ದಿನಾಂಕ 20-06-2014 ರಂದು
6:00 ಪಿ.ಎಂ ಕ್ಕೆ ಘತ್ತರಗಿ ಗ್ರಾಮದಲ್ಲಿ ಭಾಗ್ಯವಂತಿ ಕಲ್ಯಾಣ ಮಂಟಪದ ಮುಂದೆ ಸಾರ್ವಜನಿಕ
ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ
ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ
ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು
ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಶ್ರೀ
ಭಾಗ್ಯವಂತಿ ಕಲ್ಯಾಣ ಮಂಟಪದಿಂದ ಹತ್ತಿರ ಹೋಗಿ
ಮರೆಯಲ್ಲಿ ನಿಂತುಕೊಂಡು ನೋಡಲು ಇಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ
ಮಟಕಾ ಚೀಟಿಗಳು ಕೊಡುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು
ವಿಳಾಸ ವಿಚಾರಿಸಲಾಗಿ ಚಂದುಗೌಡ ತಂದೆ ಹಣಮಂತರಾಯಗೌಡ ಮಾಲಿ ಪಾಟೀಲ ಸಾ|| ಘತ್ತರಗಿ ಗ್ರಾಮ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ
ಜೂಜಾಟಕ್ಕೆ ಸಂಬಂಧ ಪಟ್ಟ 3380/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ
ಹಾಗೂ ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ
ದಾಖಲಿಸಲಾಗಿದೆ.