UÁæ«ÄÃt oÁuÉ : ದಿನಾಂಕ
06/01/2018 ರಂದು ಬೆಳಿಗ್ಗೆ 09-00 ಗಂಟೆ ಸುಮಾರಿಗೆ
ನಿನ್ನೆ ರಾತ್ರಿ ನನಗೆ ಹೊಡೆ ಬಡೆ ಮಾಡಿದ ವಿಷಯ ನನ್ನ ತಂದೆ, ತಾಯಿ ಅಣ್ಣಂದಿರರಿಗೆ ಪೋನ
ಮಾಡಿ ತಿಳಿಸಿದಾಗ, ಇಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ನನ್ನ ಅಣ್ಣ ಹಬೀಬ, ಮಹೆಬೂಬ, ಅವರ
ಗೆಳೆಯ ನವೀದ ತಂದೆ ಸಾಲಾರ ಪಟೇಲ ಇವರೊಂದಿಗೆ ನಮ್ಮ ಮನೆಗೆ ಬಂದು ನನ್ನ ಗಂಡನಿಗೆ ಯಾಕೇ ನಮ್ಮ
ತಂಗಿ ವರದಕ್ಷಿಣೆ ರೂಪದಲ್ಲಿ ಹಣ ತೆಗೆದುಕೊಂಡು ಬಾ ಅಂತಾ ಪದೇ, ಪದೇ ಯಾಕೇ ಹೊಡೆಯುತ್ತೀದ್ದಿ ಅಂತಾ ಕೇಳಲು ಆಗ ನನ್ನ ಗಂಡ ಸಿಟ್ಟಿಗೆ ಬಂದು ನನಗೆ
ಹೊಡೆಯಲು ಮೈ ಮೇಲೆ ಬಂದಾಗ ಇದನ್ನು ನೋಡಿ ನನ್ನ ಅಣ್ಣ ಹಬೀಬ ಮತ್ತು ಮಹೆಬೂಬ ಇವರು ನನಗೆ
ಹೊಡೆಯುವುದನ್ನು ತಡೆಯಲು ಬಂದಾಗ ಆಗ ನನ್ನ ಗಂಡ ವಾಜೀದ ಅಲಿ ಇತನು ಮನೆಯಲ್ಲಿದ್ದ ಯಾವುದೋ ಒಂದು
ಹರಿತವಾದ ಕಬ್ಬಿಣದಿಂದ ನನ್ನ ಬಲಗೈ ಮುಂಗೈಯ ಮೇಲೆ ಹೊಡೆದು ರಕ್ತಗಾಯಗೊಳಿಸಿದನು. ಅದರಂತೆ ಮತ್ತು
ತಮ್ಮ ಮಹೆಬೂಬನಿಗೂ ಕೂಡಾ ಕೈಯಲ್ಲಿದ್ದ ಕಬ್ಬಿಣದಿಂದ
ಎಡಗೈ ಮುಂಗೈಯ ಮೇಲೆ ಹೊಡೆದು ರಕ್ತಗಾಯಗೊಳಿಸಿದನು. ನನ್ನ ಜೊತೆಯಲ್ಲಿ ಬಂದಿದ್ದ ಗೆಳೆಯ
ನವೀದ ಇತನು ಮಧ್ಯೆ ಬಂದು ಜಗಳಾ ಬಿಡಿಸಿಕೊಂಡೆನು. ನಂತರ ನನಗೆ ತವರು ಮನೆಯಿಂದ ವರದಕ್ಷಿಣೆ
ರೂಪದಲ್ಲಿ ಹಣ ತರದೇ ಇದ್ದರೆ ಮೈಮೇಲೆ ಸೀಮೆ ಎಣ್ಣೆ ಹಾಕಿ ಸುಟ್ಟು ಖಲಾಷ ಮಾಡುತ್ತೇನೆ ಎಂದು ಜೀವ
ಭಯ ಹಾಕಿದನು. ಆಗ ನನ್ನ ಅಣ್ಣ ಹಬೀಬ, ಮತ್ತು ಮಹೆಬೂಬ ಇವರು ನನಗೆ ತವರು ಮನೆಗೆ ಕರೆದುಕೊಂಡು
ಬಂದರು. ನಂತರ ನನ್ನ ಅಣ್ಣ ಹಬೀಬ ಮತ್ತು ಮಹೆಬೂಬ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ
ಕಲಬುರಗಿಗೆ ಹೋಗಿ ತೋರಿಸಿಕೊಂಡು ನಂತರ ಮನೆಗೆ ಬಂದರು. ಈ ವಿಷಯದ ಬಗ್ಗೆ ಮನೆಯಲ್ಲಿ
ಚರ್ಚಿಸಿಕೊಂಡು ಸಂಜೆ ಸಮಯದಲ್ಲಿ ಠಾಣೆಗೆ ಬಂದು ದೂರು ಕೊಟ್ಟಿದ್ದು ಈ ಕಾರಣದಿಂದ ದೂರು ಕೊಡಲು
ತಡವಾಗಿರುತ್ತದೆ. ತನ್ನ ಗಂಡನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಇತ್ಯಾದಿ ಫಿರ್ಯಾದು
ಅರ್ಜಿ ಮೇಲಿಂದ ಠಾಣೆ ಗುನ್ನೆ ನಂ. ನಂ.08/2018 ಕಲಂ 498(ಎ),323,324, 504, 506 ಐಪಿಸಿ
ಮತ್ತು ಕಲಂ 3 ಮತ್ತು 4 ಡಿ.ಪಿ.ಎಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡ ಬಗ್ಗೆ ವರದಿ.
gÁWÀªÉÃAzÀæ £ÀUÀgÀ oÁuÉ : ದಿನಾಂಕ:06/01/2018 ರಂದು ರಾತ್ರಿ 8.45 ಪಿ.ಎಂಕ್ಕೆ ಪಿ.ಎಸ್.ಐ ಸಾಹೇಬರು 4 ಜನ ಆರೋಪಿತರೊಂದಿಗೆ ಜ್ಞಾಪನ ಪತ್ರ ಹಾಜರ ಪಡಿಸಿದ್ದು ಸದರಿ ಜ್ಞಾಪನ
ಪತ್ರದ ಸಾರಾಂಶವೆನೆಂದರೆ, ಇಂದು
ದಿನಾಂಕ 06.01.2018 ರಂದು ಸಾಯಂಕಾಲ 5 ಗಂಟೆಯಿಂದ ನಾನು ನಮ್ಮ ಠಾಣೆಯ ಶ್ರೀ ಶಿವಲಿಂಗಪ್ಪ
ಹೆಚ್.ಸಿ 06, ಶ್ರೀ ಚನ್ನಮಲ್ಲಪ್ಪ 190,
ಶ್ರೀ ಬಂದೇನವಾಜ ಹೆಚ್.ಸಿ 546 ಮತ್ತು ಶ್ರೀ ಶಿವಲಿಂಗ ಪಿಸಿ 1241 ರವರನ್ನು ಸಂಗಡ ಕರೆದುಕೊಂಡು ಠಾಣಾ ವ್ಯಾಪ್ತಿಯಲ್ಲಿ
ಪೇಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತಾ ಸಾಯಂಕಾಲ 6:30 ಗಂಟೆಗೆ ಡಬರಗಾಬಾದ ಕ್ರಾಸ ಹತ್ತಿರ ಇರುವ ದೇವರ ದಾಸಿಮಯ್ಯ
ಬಡಾವಣೆಯಲ್ಲಿ ಇದ್ದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ, ಠಾಣಾ ವ್ಯಾಪ್ತಿಯ ರಿಂಗ್ ರೋಡ ಪಕ್ಕದಲ್ಲಿರುವ ಚೊರ ಗುಂಬಜ್
ಹತ್ತಿರ ತಗ್ಗಿನಲ್ಲಿ ಕೆಲವು ಜನರು ದರೋಡೆ ಮಾಡಲು ಹೊಂಚ್ಚು ಹಾಕಿ ಕೂಳಿತಿರುವ ಬಗ್ಗೆ ಖಚಿತ
ಬಾತ್ಮಿ ಬಂದಿದ್ದು ಬಾತ್ಮಿಯಂತೆ ದಾಳಿ ಮಾಡಿ ಕ್ರಮ ಕೈಕೊಳ್ಳುವ ಕುರಿತು ಇಬ್ಬರು ಪಂಚರನ್ನು ದಾಳಿ
ಕಾಲಕ್ಕೆ ಹಾಜರಿದ್ದು ಜಪ್ತಿ ಪಂಚನಾಮೆಯನ್ನು ಬರೆಯಿಸಿ ಕೂಡಲು ಕೇಳಿಕೊಂಡಿದ್ದು. ಅದಕ್ಕೆ ಉಭಯರು
ಒಪ್ಪಿಕೊಂಡಿದ್ದು ನಂತರ ನಾನು, ಪಂಚರು
ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಚೋರ ಗುಬಂಜ ಪಕ್ಕದಲ್ಲಿ ಇರುವ ತಗ್ಗಿನ ಹತ್ತಿರ
ಹೊಗುತ್ತಿದ್ದಂತೆ ತಗ್ಗಿನಲ್ಲಿ ಮಾತನಾಡುವ ಶಬ್ದ ಕೇಳಿ ಬರುತ್ತಿದ್ದು ನಂತರ ನಾವು ತಗ್ಗಿನ ಹತ್ತಿರ
ಹೋಗಿ ನೋಡಲು ತಗ್ಗಿನಲ್ಲಿ 6 ಜನರು
ಗುಂಪಾಗಿ ಕುಳಿತುಕೊಂಡು ದರೋಡೆ ಮಾಡುವ ಕುರಿತು ತಮ್ಮ ತಮ್ಮಲ್ಲಿ ಮಾತನಾಡುತ್ತಿದ್ದು ಕತ್ತಲಲ್ಲಿ
ಸದರಿಯವರ ಮುಖ ಚೆಹರೆ ಹೊತ್ತಾಗದಕ್ಕೆ ನಾನು ಮತ್ತು ಸಿಬ್ಬಂದಿಯವರು ನಮ್ಮ ಹತ್ತಿರ ಇದ್ದ ಬ್ಯಾಟರಿ
ಬೇಳಕು ತಗ್ಗಿನಲ್ಲಿ ಕುಳಿತವರ ಮೇಲೆ ಹಾಕಿದ್ದು ಅವರ ಮೇಲೆ ಬೇಳಕು ಬಿದ್ದಾಗ ಸದರಿಯವರು
ಗಾಬರಿಗೊಂಡು ಓಡಿ ಹೋಗುತ್ತಿದ್ದು ಆಗ ನಾನು ಮತ್ತು ಸಿಬ್ಬಂದಿಯವರು ಸದರಿಯವರ ಮೇಲೆ ದಾಳಿ ಮಾಡಿ
ಅವರಲ್ಲಿ ನಾಲ್ಕು ಜನರಿಗೆ ಹಿಡಿದುಕೊಂಡಿದ್ದು ಇನ್ನೂ ಇಬ್ಬರು ಕತ್ತಲಲ್ಲಿ ಓಡಿ ಹೋಗಿದ್ದು
ಹಿಡಿದುಕೊಂಡವರಿಗೆ ವಿಚಾರಣೆಗೊಳಪಡಿಸಿದಾಗ ಸದರಿಯವರು ತಮ್ಮ ಹೆಸರು 1. ಹಣಮಂತ ತಂದೆ ರಾಮಲು ಮೇಕ್ಯಾನಿಕ ವಯ: 26 ವರ್ಷ ಉ: ಟೈರ ಪಂಚರ ಅಂಗಡಿ ಜಾತಿ: ಕಬ್ಬಲಿಗೇರ ಸಾ:
ದೊಡ್ಡ ಅಗಸಿ ಕೊಳಿವಾಡ ಸೇಡಂ ಅಂತ ಹೇಳಿದ್ದು. ಸದರಿಯವನ ಅಂಗಶೋಧನೆ ಮಾಡಲು ಸದರಿಯವನ ಹತ್ತಿರ
ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕಪ್ಪು ಬಟ್ಟೆ ಮತ್ತು ಒಂದು ಬತಾಯಿ ನಮೂನೆಯ ಚಾಕು ದೊರೆತಿದ್ದು. 2.
ಪಾಶ್ಯಾ @ ಅಬ್ದಲು ಪಾಶ್ಯಾ
ತಂದೆ ಮಹೀಬೂಬಸಾಬ ಶೇಖ ವಯ: 26
ವರ್ಷ ಉ: ಚಾಲಕ ಜಾತಿ: ಮುಸ್ಲಿಂ ಸಾ: ಕುಕುಂದಾ ತಾ: ಸೇಡಂ ಜಿ: ಕಲಬುರಗಿ ಇತನ ಹತ್ತಿರ ಸುಮಾರ 20 ಫೀಟ್ ಪ್ಲಾಸ್ಟಿಕ ಹಗ್ಗ ಮತ್ತು ಮುಖಕ್ಕೆ
ಕಟ್ಟಿಕೊಳ್ಳುವ ಒಂದು ಕಪ್ಪು ಬಟ್ಟೆ ದೊರೆತಿದ್ದು 3. ಪ್ರಕಾಶ ತಂದೆ ಸುಭಾಷ ಪವಾರ ವಯ: 23 ವರ್ಷ ಉ: ಚಾಲಕ ಜಾತಿ: ಮರಾಠಾ(ಕಂಬಾರ) ಸಾ: ಕುಕುಂದಾ ತಾ:ಸೇಡಂ
ಹಾ:ವ: ಈಶ್ವರ ನಗರ ಗಂಜ ಏರಿಯಾ ಸೇಡಂ ಇತನ ಹತ್ತಿರ ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕಪ್ಪು ಬಟ್ಟೆ
ಮತ್ತು ಅಂದಾಜ 200 ಗ್ರಾಂ ಕಾರದ ಪೂಡಿ
ದೊರೆತಿದ್ದು ಮತ್ತು 4. ಶರಣು @
ಶರಣಪ್ಪ ತಂದೆ ರೇವಣಸಿದ್ದಪ್ಪ ಮಿನ ಹಾಬಾಳ ವಯ: 23 ವರ್ಷ ಉ: ಒಕ್ಕಲತನ ಜಾತಿ: ಕಬ್ಬಲಿಗೇರ ಸಾ: ಅಗ್ಗಿ
ಬಸವೇಶ್ವರ ಕಾಲೋನಿ ಚಿಂಚೋಳ್ಳಿ ರೋಡ ಸೇಡಂ ಇತನ ಹತ್ತಿರ ಮುಖಕ್ಕೆ ಕಟ್ಟಿಕೊಳ್ಳುವ ಒಂದು ಕಪ್ಪು
ಬಟ್ಟೆ ಮತ್ತು ಒಂದು ಕಬ್ಬಿಣದ ತಲವಾರ ದೊರೆತಿದ್ದು ಸದರಿಯವರಿಗೆ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ
ಸದರಿಯವರು ತಿಳಿಸಿದ್ದೆನೆಂದರೆ, ರಾತ್ರಿ
ವೇಳೆಯಲ್ಲಿ ರಿಂಗ್ ರೋಡ ಮೇಲೆ ಸಂಚರಿಸುವ ವಾಹನ ಸವಾರರಿಗೆ ಹೆದರಿಸಿ ಅವರಿಂದ ಹಣ ಮತ್ತು ಬೆಲೆಬಾಳುವ
ವಸ್ತುಗಳನ್ನು ಕಿತ್ತಿಕೊಳ್ಳು ಸಂಬಂದ ಹೊಂಚ್ಚುಹಾಕಿ ಕುಳಿತಿರುವ ಬಗ್ಗೆ ಮತ್ತು ಓಡಿ ಹೊದವರ
ಹೆಸರು ತಮಗೆ ಗೊತ್ತಿರುವದಿಲ್ಲ ಅಂತ ತಮ್ಮ ಸ್ವ-ಖುಷಿ ಹೇಳಿಕೆ ನೀಡಿದ್ದು ಇರುತ್ತದೆ ಸದರಿಯವರ
ಹತ್ತಿರ ಇದ್ದ ವಸ್ತುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಪಂಚರ ಸಹಿ ಮಾಡಿದ ಚೀಟಿಯನ್ನು
ಅಂಟಿಸಿ ನನ್ನ ತಾಬಾಕ್ಕೆ ತೆಗದುಕೊಂಡು ಜಪ್ತಿ ಪಂಚನಾಮೆಯನ್ನು ಕೈಕೊಂಡು ಸದರಿ ನಾಲ್ಕು ಜನ
ಆರೋಪಿತರಿಗೆ ದಸ್ತಗಿರ ಮಾಡಿಕೊಂಡು ರಾತ್ರಿ 8:45 ಗಂಟೆಗೆ ಠಾಣೆಗೆ ಹಾಜರಾಗಿದ್ದು ಸದರಿಯವರ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡ
ಬಗ್ಗೆ ವರದಿ.
C¥sÀd®¥ÀÆgÀ oÁuÉ : ದಿನಾಂಕ 06-01-2018 ರಂದು 8:15 ಪಿ ಎಮ್ ಕ್ಕೆ ಹೋನ್ನಪ್ಪ ತಂದೆ ಧರೇಪ್ಪ
ಚಾಂದಕವಟೆ ಸಾ|| ಭೋಸಗಾ ಹಾ|| ವ|| ಅಫಜಲಪೂರ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದನ್ನು ನಿಡಿದ್ದು, ಸದರ ದೂರಿನ ಸಾರಾಂಶವೇನೆಂದರೆ ನಾನು ಮೇಲೆ ಹೇಳಿದ ವಿಳಾಸದವನಿದ್ದು ಒಕ್ಕಲುತನದ ಕೆಲಸ
ಮಾಡಿಕೊಂಡು ಅಫಜಲಪೂರದ ಹೂಗಾರ ಪ್ಲಾಟನಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ದಿನಾಂಕ 01-01-2018 ರಂದು ಸಾಯಂಕಾಲ 5:00 ಗಂಟೆ ಸುಮಾರಿಗೆ ನಾನು ವಾಕಿಂಗ್
ಕುರಿತು ಅಫಜಲಪೂರ ಪಟ್ಟಣದ ನ್ಯಾಶನಲ್ ಪಂಕ್ಷನ್ ಹಾಲ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ,
1) ಹಣಮಂತ ಜಮಾದಾರ ಸಾ|| ಬನ್ನೇಟ್ಟಿ 2) ಶಿವಪ್ಪ ಜಮಾದಾರ ಸಾ|| ಬನ್ನೇಟ್ಟಿ 3) ರಾಮಣ್ಣ ಜಮಾದಾರ ಸಾ|| ಶಿವಪೂರ ಮೂರು ಜನರು ಕೂಡಿ ನನ್ನ
ಹತ್ತಿರ ಬಂದ ನನ್ನ ಮೈ ಮೇಲೆ ಏರಿ ಬಂದರು, ಆಗ ನಾನು ಸದರಿಯವರಿಗೆ ದಾರು
ಕುಡಿದು ಈ ರೀತಿ ಮೈ ಮೇಲೆ ಬಿದ್ದರೆ ಹೇಗೆ ನೋಡಿಕೊಂಡು ಹೋಗಿ ಅಂತಾ ಹೇಳಿದೆನು, ಆಗ ಸದರಿ ಮೂರು ಜನರು ಬೋಸಡಿ ಮಗನೆ ನಮಗೆ ನೋಡಿಕೊಂಡು ಹೋಗು ಅಂತಾ ಹೇಳ್ತಿ ಎಂದು
ಅವಾಚ್ಯ ಶಬ್ದಗಳಿಂದ ಬೈದರು, ಆಗ ನಾನು ಸದರಿಯವರಿಗೆ ವಿನಾಕಾರಣ ಯಾಕೆ
ಬೈತಿರಿ ಅಂತಾ ಕೇಳಿದಾಗ ಮೂರು ಜನರು ಕೂಡಿ ನನ್ನ ಏದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಹೊಡೆದರು,
ನಂತರ ಶಿವಪ್ಪ ಮತ್ತು ರಾಮಣ್ಣ ಇಬ್ಬರು ಹಿಡಿದುಕೊಂಡಾಗ ಹಣಮಂತ ಜಮಾದಾರ ಈತನು
ಚಪ್ಪಲಿಯಿಂದ ನನ್ನ ತಲೆಯ ಮೇಲೆ ಹೊಡೆದನು, ಮೂರು ಜನರು ಕೂಡಿ ನನಗೆ
ಬೈಯುವುದು ಹೊಡೆಯುವುದು ಮಾಡುತ್ತಿದ್ದಾಗ, ಅದೆ ಸಮಯಕ್ಕೆ ಬಂದ ಸಂಗಪ್ಪ
ಅಂಜುಟಗಿ ಸಾ|| ಶಿರವಾಳ ಮತ್ತು ರಾಜು ಸಾಲುಟಗಿ ಸಾ|| ಕುರುಬತಳ್ಳಿ ಇಬ್ಬರು ಕೂಡಿ ನನಗೆ ಹೊಡೆಯುವುದನ್ನು ಬಿಡಿಸಿರುತ್ತಾರೆ, ಆಗ ಸದರಿ ಮೂರು ಜನರು ನನಗೆ ರಂಡಿ ಮಗನೆ ನಿನಗೆ ಜೀವ ಸಹಿತ ಬಿಡುವುದಿಲ್ಲ ಮುಂದೆ
ನೋಡಿಕೊಳ್ಳುತ್ತೇವೆ ಎಂದು ಜೀವ ಬೇದರಿಕೆ ಹಾಕಿ ಹೋಗಿರುತ್ತಾರೆ. ಸದರಿಯವರು ಹೊಡೆದರಿಂದ ನನ್ನ ಏಡ
ಕಿವಿಯ ಹತ್ತಿರ, ತಲೆಯ ಮೇಲೆ, ಹಾಗೂ
ಕುತ್ತಿಗೆಗೆ ಗುಪ್ತಗಾಯಗಳು ಮತ್ತು ಬಲಗೈ ಮಣಿಕಟ್ಟಿನ ಹತ್ತಿರ ತರಚಿದ ಗಾಯವಾಗಿರುತ್ತದೆ. ಸದರಿ
ವಿಷಯದ ಬಗ್ಗೆ ನಾನು ನಮ್ಮ ಮನೆಯಲ್ಲಿ ವಿಚಾರಿಸಿಕೊಂಡು ಈಗ ತಡವಾಗಿ ದೂರು ನೀಡಲು ಬಂದಿರುತ್ತೇನೆ.
ನನಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹಾಗೂ ಚಪ್ಪಲಿಯಿಂದ ಹೊಡೆದು
ಗುಪ್ತಗಾಯ ಮತ್ತು ತರಚಿದ ಗಾಯ ಪಡಿಸಿ ಜೀವ ಬೇದರಿಕೆ ಹಾಕಿದ 1) ಹಣಮಂತ
ಜಮಾದಾರ ಸಾ|| ಬನ್ನೇಟ್ಟಿ 2) ಶಿವಪ್ಪ
ಜಮಾದಾರ ಸಾ|| ಬನ್ನೇಟ್ಟಿ 3) ರಾಮಣ್ಣ
ಜಮಾದಾರ ಸಾ|| ಶಿವಪೂರ ಮೂರು ಜನರ ಮೇಲೆ ಕಾನೂನು ಕ್ರಮ ಜರೂಗಿಸಬೇಕು
ಮತ್ತು ನನ್ನನ್ನು ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಬೇಕು ಎಂದು ಹೇಳಿಕೆ ನೀಡಿದ್ದರ ಮೇರೆಗೆ ಪ್ರಕಾರ
ಪ್ರಕರಣ ದಾಖಲಿಸಿಕೊಂಡು ಬಗ್ಗ ವರದಿ.