Police Bhavan Kalaburagi

Police Bhavan Kalaburagi

Sunday, January 15, 2017

BIDAR DISTRICT DAILY CRIME UPDATE 15-01-2017


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 15-01-2017


ºÀ½îSÉÃqÀ (©) ¥ÉưøÀ oÁuÉ AiÀÄÄ.r.Dgï £ÀA. 01/2017, PÀ®A 174 ¹.Dgï.¦.¹ :-
ಈ ವರ್ಷ ಹೊಲದಲ್ಲಿ ಹಾಕಿದ ಬೆಳೆ ಸರಿಯಾಗಿ ಬೆಳೆದಿರುವುದಿಲ್ಲ, ಹೋದ ವರ್ಷ ಹೊಲದ ಲಾಗೋಡಿ ಸಲುವಾಗಿ ಮತ್ತು ಮನೆಯ ಖರ್ಚಿಗಾಗಿ ದುಬಲಗುಂಡಿ ಗ್ರಾಮದ ಡಿಸಿಸಿ ಬ್ಯಾಂಕನಲ್ಲಿ ಮತ್ತು ಇತರೆ ಕಡೆ ಸಾಲ ಮಾಡಿದ್ದು, ಬೆಳೆ ಸರಿಯಾಗಿ ಬೆಳೆಯದ ಕಾರಣ ಮಾಡಿದ ಸಾಲ ತೀರಿಸುವುದು ಹೇಗೆ ಅಂತ ಫಿರ್ಯಾದಿ ರಾಜಪ್ಪಾ ತಂದೆ ಮಾಣಿಕಪ್ಪಾ ಬಮ್ಮಣಿ ವಯ: 37 ವರ್ಷ, ಜಾತಿ: ಕೋಳಿ, ಸಾ: ದುಬುಲಗುಂಡಿ ಗ್ರಾಮ ರವರ ತಮ್ಮನಾದ ZÀAzÀæPÁAvÀ vÀAzÉ ªÀiÁtÂPÀ¥Áà ¨ÉƪÀÄät ªÀAiÀÄ: 30 ªÀµÀð, ತಿ: PÉÆý, ¸Á: zÀħ®UÀÄAr ಇತನು ಆವಾಗ ಆವಾಗ ತಂದೆ ಮತ್ತು ಫಿರ್ಯಾದಿಯ ಮುಂದೆ ಬಹಳ ನೊಂದುಕೊಂಡು ಹೇಳುತ್ತಿದ್ದನು ಮತ್ತು ಒಂದೊಂದು ಸಾರಿ ನನಗೆ ಜೀವನವೆ ಸಾಕಾಗಿದೆ ಹಾಗೆ ಹೀಗೆ ಅಂತ ಹೇಳುತ್ತಿದ್ದನು, ಹೀಗಿರಲು ದಿನಾಂಕ 14-01-2017 ರಂದು ತಮ್ಮನು ಎಂದಿನಂತೆ ಹೊಲಕ್ಕೆ ಹೋಗಿ ಮನೆಗೆ ಕರೆ ಮಾಡಿ ತಿಳಿಸಿದ್ದೇನೆಂದರೆ ನಾನು ಮಾಡಿದ ಸಾಲ ತೀರಿಸುವುದು ಹೇಗೆ ಅಂತ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಹೊಲದಲ್ಲಿ ಬೆಳೆಗೆ ಹೊಡೆಯುವ ಕ್ರಿಮಿನಾಷಕ ಔಷಧ ಸೇವನೆ ಮಾಡಿರುತ್ತೇನೆ ಅಂತ ತಿಳಿಸಿದ ಮೇರೆಗೆ ಫಿರ್ಯಾದಿ ಮತ್ತು ಮನೆಯ ಅಕ್ಕ ಪಕ್ಕದ ಜನರು ಹೊಲಕ್ಕೆ ಹೋಗಿ ನೋಡಲು ತಮ್ಮನು ಹೊಲದಲ್ಲಿ ಮಲಗಿಕೊಂಡಿದ್ದು ಅವನ ಹತ್ತಿರ ಹೋಗಿ ನೋಡಲು ಬಾಯಿಯಿಂದ ವಾಸನೆ ಬರುತ್ತಿದ್ದು ಅವನು ಸ್ವಲ್ಪ ಪ್ರಜ್ಞೆ ತಪ್ಪಿದಂತಾಗಿದ್ದು, ನಂತರ ಅವನಿಗೆ ಚಿಕಿತ್ಸೆ ಕುರಿತು ದುಬಲಗುಂಡಿ ಪ್ರಾಥಮೀಕ ಆರೋಗ್ಯ ಕೇಂದ್ರಕ್ಕೆ ತಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಹುಮನಾಬಾದ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಹುಮನಾಬಾದ ಸಮೀಪ ದಾರಿಯಲ್ಲಿ ಮ್ರತಪಟ್ಟಿರುತ್ತಾನೆ, ಫಿರ್ಯಾದಿಯ ತಮ್ಮ ಚಂದ್ರಕಾಂತ ಇವನು ಹೊಲದ ಲಾಗೋಡಿ ಸಲುವಾಗಿ ಮತ್ತು ಮನೆ ಖರ್ಚಿಗಾಗಿ ಮಾಡಿದ ಸಾಲ ತೀರಿಸುವುದು ಹೇಗೆ ಅಂತ ಮನಸ್ಸಿನ ಮೆಲೆ ಪರಿಣಾಮ ಮಾಡಿಕೊಂಡು ಬೆಳೆಗೆ ಹೊಡೆಯುವ ಕ್ರಿಮಿನಾಶಕ ಔಷಧ ಸೇವನೆ ಮಾಡಿ ಮ್ರತಪಟ್ಟಿರುತ್ತಾನೆ, ತಮ್ಮನ ಸಾವಿನ ಬಗ್ಗೆ ಯಾರ ಮೇಲೆ ಯಾವುದೆ ಸಂಶಯ ಇರುವುದಿಲ್ಲ ಅಂತ ನೀಡಿದ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 09/2017, ಕಲಂ 279, 338 ಐಪಿಸಿ :-
ದಿನಾಂಕ 14-01-2017 ರಂದು ಫಿರ್ಯಾದಿ ಸಿದ್ದಲಿಂಗ ತಂದೆ ನರಸಿಂಗ ಜಮಾದರ್ ವಯ: 25 ವರ್ಷ, ಜಾತಿ: ಕಬ್ಬಲಿಗ, ಸಾ: ಗೋಧಿಹಿಪ್ಪರ್ಗಾ, ತಾ: ಭಾಲ್ಕಿ ರವರು ಮತ್ತು ತಮ್ಮೂರಿನ ಅಜಯಕುಮಾರ ಬೆಲ್ದಾಳೆ ಇಬ್ಬರೂ ತಮ್ಮ ಖಾಸಗಿ ಕೆಲಸದ ನಿಮಿತ್ಯ ಬೀದರಗೆ ಬಂದಿದ್ದು ಬೀದರದಲ್ಲಿ ತಮ್ಮ ಕೆಲಸ ಮುಗಿಸಿಕೊಂಡು ಮರಳಿ ತಮ್ಮೂರಿಗೆ ಹೋಗುತ್ತಿರುವಾಗ ನೌಬಾದ ಗ್ರಾಮದಲ್ಲಿ ಚಹಾ ಕುಡಿಯುತ್ತಿರುವಾಗ ಶ್ರೀಮಂತ ತಂದೆ ಪಂಡರಿನಾಥ ಬೆಲ್ದಾಳೆ ವಯ: 36 ವರ್ಷ, ಜಾತಿ: ಮರಾಠ, ಸಾ: ಗೋಧಿಹಿಪ್ಪರ್ಗಾ, ತಾ: ಭಾಲ್ಕಿ  ಇವನು ಭೇಟಿಯಾಗಿದ್ದು ಮೂವರು ಚಹಾ ಕುಡಿದು ನಂತರ ಶ್ರೀಮಂತ ಬೆಲ್ದಾಳೆ ಇವನು ತನ್ನ ಮೋಟಾರ್ ಸೈಕಲ ನಂ. ಕೆಎ-39/ಎಲ್-9608 ನೇದರ ಮೇಲೆ ತಮ್ಮ ಗ್ರಾಮಕ್ಕೆ ಹೊರಟಿದ್ದು ಫಿರ್ಯಾದಿಮತ್ತು ಅಜಯಕುಮಾರ ಇಬ್ಬರು ತಮ್ಮ ಮೋಟಾರ್ ಸೈಕಲ ಮೇಲೆ ಆತನೊಂದಿಗೆ ತಮ್ಮೂರಿಗೆ ಹೊಗುತ್ತಿರುವಾಗ ಬೀದರ ಭಾಲ್ಕಿ ರೋಡ ಹಲಬರ್ಗಾ ಶಿವಾರದಲ್ಲಿ ಸಿದ್ದೇಶ್ವರ ಪೆಟ್ರೋಲ ಪಂಪ ಹತ್ತಿರ ರೋಡಿನ ಮೇಲೆ ಹಲಬರ್ಗಾ ಗ್ರಾಮದ ಕಡೆಯಿಂದ ಟೆಂಪೊ ವಾಹನ ಸಂ. ಎಮ್.ಹೆಚ್-17/ಟಿ.3476 ನೇದರ ಚಾಲಕನಾದ ಆರೋಪಿ ನಿಸಾರ್  ತಂದೆ ಜಲೀಲ ಪಠಾಣ್ ಸಾ: ದೇವಣಿ (ಎಮ್.ಎಚ್) ಇತನು ತನ್ನ ವಾಹನವನ್ನು ಅತೀವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದವನೆ ಶ್ರೀಮಂತ ಬಲ್ದಾಳೆ ಇವನಿಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಅಪಾಘತದಿಂದ ಶ್ರೀಮಂತ ಬೆಲ್ಲಾಳೆ ಇತನ ಬಲಗೈ ಮೊಳಕೈ ಕೆಳಗೆ ಭಾರಿ ರಕ್ತಗಾಯ, ಎಡಕಾಲು ಮತ್ತು ಬಲಕಾಲು ಪಾದಕ್ಕೆ ರಕ್ತಗಾಯ, ಗಟಾಯಿಗೆ ತರಚಿದ ರಕ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿಯು ಶ್ರೀಮಂತ ಬೆಲ್ಲಾಳೆ  ಈತನಿಗೆ ಅಂಬ್ಯುಲೆನ್ಸನಲ್ಲಿ ಬೀದರ ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕುರಿತು ದಾಖಲಿಸಿದ್ದು ಇರುತ್ತದೆ ಅಂತ ನಿಡಿದ ಫಿರ್ಯಾದಿಯವರ ಮೌಖಿಕ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ರೋಜಾ ಠಾಣೆ :ದಿನಾಂಕ: 14-01-2017 ರಂದು ಕಲಬುರಗಿ ನಗರದ ಬ್ಯಾಂಕ ಕಾಲೋನಿಯ ಬಸವಣ್ಣದೇವರ ಗುಡಿಯ ಹತ್ತಿರ ಇರುವ ನೀರಿನ ಟಾಕಿಯ ಕೆಳಗೆ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೆಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವಲೀಲೆಯ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಚಂದ್ರಕಾಂತ ಎ.ಎಸ್.ಐ ರೋಜಾ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ  ಸ್ವಲ್ಪ ದೂರದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಬ್ಯಾಂಕ ಕಾಲೋನಿಯ ಬಸವಣ್ಣದೇವರ ಗುಡಿಯ ಹತ್ತಿರ ಇರುವ ನೀರಿನ ಟಾಕಿಯ ಕೆಳಗೆ ಕೆಲವು ಜನರು ದುಂಡಾಗಿ ಕುಳಿತುಕೊಂಡು ನನ್ನದು ರಾಣಿಗೆ ಅಂದರ 50 ರೂಪಾಯಿ , ಬಾಹರ 50 ರೂಪಾಯಿ ಅನ್ನುತ್ತಾ ಒಬ್ಬರ ಮೇಲೆ ಒಬ್ಬರು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೆಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವಲೀಲೆಯ ಆಟದಲ್ಲಿ ತೊಡಗಿರುವದನ್ನು ಖಚಿತಪಡೆಸಿಕೊಂಡು ದಾಳಿಮಾಡಿ 07 ಜನ ಜೂಜುಕೋರರಿಗೆ ಹಿಡಿದುಕೊಂಡು ಅವರ ಹೆಸರು ಮತ್ತು ವಿಳಾಸ ವಿಚಾರಿಸಲು  1] ಬಸವರಾಜ ತಂದೆ ನಾಗೇಂದ್ರಪ್ಪ ಅಣಕಲ್ 2] ವಿಶಾಲ ತಂದೆ ರಾಜಶೇಖರ ಪಾಟಿಲ 3] ರಾಕೇಶ ತಂದೆ ನೇಮಚಂದ್ ಮೇತ್ರೆ 4] ವಿಜಯಸಿಂಗ್ ತಂದೆ ಜಯಸಿಂಗ್ ಹಜಾರೆ  5] ಸೌರಭ ತಂದೆ ಸುಧೀರ ಹೆಬ್ಬಾಳಕರ್ 6] ಶಿವಶರಣಪ್ಪ ತಂದೆ ಶರಣಪ್ಪ ಭಾಗೋಡಿ 7] ಚಂದ್ರಶೇಖರ ತಂದೆ ಮಲ್ಲಣ್ಣ ಕೋಟನೂರ ಸಾ || ಎಲ್ಲರು ಬ್ಯಾಂಕ ಕಾಲೋನಿ  ಕಲಬುರಗಿ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 4320/-ರೂಪಾಯಿ ಮತ್ತು ಜೂಜಾಟಕ್ಕೆ ಉಪಯೋಗಿಸಿದ 52 ಇಸ್ಪಟ್ ಎಲೆಗಳನ್ನು ಪಂಚರ ಸಮಕ್ಷಮ  ವಶಪಡಿಸಿಕೊಂಡು ಸದರಿಯವರೊಂದಿಗೆ ರೋಜಾ ಠಾಣೆಗೆ  ಬಂದು ಪ್ರಕರಣ ದಾಖಲಿಸಲಾಗಿದೆ.
ಪಡಿತರ ಆಹಾರ ಪದಾರ್ಥಗಳನ್ನು ದುರುಪಯೋಗ ಪಡಿಸಿಕೊಂಡ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಖಾಜಾಬಾಯಿ ತಂದೆ ನಭಿಲಾಲ ಚೌಧರಿ ಸಾ: ಕರಜಗಿ ಮಾಲಿಕರು ಎಸ್.ಎಚ್.ಎಲ್ ಕಮುನಿಕೇಶನ ಕರಜಗಿ ಇವರು ಒಟ್ಟು 18 ಪಡಿತರಚೀಟಿಗಳಿಗೆ ಮತ್ತು ಶ್ರೀ ಮಲ್ಲಿಕಾರ್ಜುನ ತಂದೆ ಸಿದ್ದಲಿಂಗ ಮರಾಠಾ ಸಾ: ಕರಜಗಿ ಮಾಲಿಕರು ಜೈ ಮಲಹಾರ ಕಂಪ್ಯೂಟರ ಸೆಂಟರ ಕರಜಗಿ  ಇವರು ಒಟ್ಟು 12 ಪಡಿತರ ಚೀಟಿಗಳಿಗೆ ಭೋಗಸ್ ಕೊಪನ್ ನೀಡಿ ಸಾರ್ವಜನಿಕ ವಿತರಣೆಗೆ ಬಿಡುಗಡೆ ಮಾಡಿರುವ ಪಡಿತರ ಪದಾರ್ಥಗಳನ್ನು ದುರುಪಯೋಗಪಡೆಸಿಕೊಂಡಿರುವುದು ಸಾಭೀತಾಗಿರುವು ದರಿಂದ ಸದರಿ ಸೇವಾ ಕೇಂದ್ರಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಶ್ರೀಮತಿ ಶಶೀಕಲಾ ಪಾದಗಟ್ಟಿ ತಹಶೀಲ್ದಾರರು ಮತ್ತು ತಾಲೂಕಾ ದಂಡಾಧಿಕಾರಿಗಳು ಅಫಜಲಪೂರ ರವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು
ರಾಘವೇಂದ್ರ ನಗರ ಠಾಣೆ : ಶ್ರೀ ಗೋವಿಂದ ತಂದೆ ಹಣಮಂತ ಮೇಳಕುಂದಿ ಸಾ:ಕೃಷ್ಣಾನಗರ ಬ್ರಹ್ಮಪೂರ ಕಲಬುರಗಿ ಇವರು ದಿನಾಂಕ: 13-01-2017 ರಂದು ಸಾಯಂಕಾಲ ಬಸವರಾಜ ಗುತ್ತೇದಾರ ಈತನ ರೋಡಿನ ಕೆಲಸ ಕಲಬುರಗಿ ನಗರದ ಸಂಗಮೇಶ್ವರ ಕಾಲೋನಿಯ ಮಹಿಳಾ ಮಂಡಳ ಮುಂದುಗಡೆ ರೋಡಿನ ಕೆಲಸಗೋಸ್ಕರ ಕಂಕ್ರೇಟ್‌‌ ಮತ್ತು ಉಸುಕು ಹಾಕಿ ನಾನು ರೋಡಿನ ಕೆಲಸ ಮಾಡುತ್ತಿರುವಾಗ ಸಾಯಂಕಾಲ ಬಸವನಗರ ಕಾಲೋನಿಯ ಹತ್ತಿ ಅಂಬ್ರ್ಯಾ ಈತನು ತನ್ನ ಮೋಟಾರ ಸೈಕಲ ವೇಗವಾಗಿ ತಂದು ನಾವು ಕೆಲಸ ಮಾಡುತ್ತಿರುವ ರೋಡಿನ ಮೇಲೆ  ಒಮ್ಮೆಲೆ ಬಿದ್ದು ಎದ್ದು ಏ ಭೋಸಡಿ ಮಕ್ಕಳೆ ಇಲ್ಲಿ ಏಕೆ ಉಸುಕು ಕಂಕ್ರೇಟ್‌ ಹಾಕಿದ್ದಿರಿ ಅಂತಾ ಬೈಯುತ್ತಾ ನಾನು ಕೆಲಸಗೋಸ್ಕರ ಇಟ್ಟಿದ್ದ ಸಲಕೆಯನ್ನು ತೆಗೆದುಕೊಂಡು ಅದರಿಂದ ನನ್ನ ಬಲಗಡೆ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಮತ್ತೆ ಹೊಡೆಯಲು ಬಂದಾಗ ನನ್ನ ಜೊತೆ ಕೆಲಸ ಮಾಡುತ್ತಿರುವ ಜಯರಾಮ ಮತ್ತು ನಮ್ಮ ಗುತ್ತೇದಾರ ಬಸವರಾಜ ಇವರು ಜಗಳ ಬಿಡಿಸಿರುತ್ತಾರೆ ಇಲ್ಲದಿದ್ದರೆ ಅವರು ಇನ್ನೂ ಬಹಳ ಹೊಡೆಬಡೆ ಮಾಡುತ್ತಿದ್ದನು ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಶಾಹಾಬಾದ ನಗರ ಠಾಣೆ : ಶ್ರೀ ಅಲ್ಲಾವುದ್ದಿನ ತಂದೆ ಯುಸುಫ ಜಜ್ಜಲಬಾರ ಸಾಃ ಮರತೂರ  ಇವರು ದಿನಾಂಕಃ 12.01.17 ರಂದು  ರಾತ್ರಿ ತನ್ನ  ಮನೆಗೆ ನಡೆದುಕೊಂಡು  ಹೋಗುವಾಗ ರುಕ್ಮೋದ್ದಿನ ಇತನಿಗೆ  ಮುಂಡಿ ಹತ್ತಿದ್ದರಿಂದ  ದಿನಾಂಕ 13-01-2017 ರಂದು ಬೆಳಿಗ್ಗೆ 6.30 ಎ.ಎಮ್.ಕ್ಕೆ  ಮನೆ ಹೊರೆಗೆ  ಫಿರ್ಯಾದಿ ನಡೆದಾಗ ಆರೋಪಿತರು  ಜಗಳ ತೆಗೆದು ಅವಾಚ್ಯ  ಬೈಯ್ದು  ತಡೆದುನಿಲ್ಲಿಸಿ  ಕಟ್ಟಿಗೆಯಿಂದ  ಹೊಡೆದು  ರಕ್ತಗಾಯ ,  ಕೈಯಿಂದ ಹೊಡೆದು  ಗುಪ್ತಗಾಯ ಮಾಡಿ  ಜೀವ  ಬೆದರಿಕೆ  ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.