Police Bhavan Kalaburagi

Police Bhavan Kalaburagi

Monday, February 12, 2018

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು  :
ಆಳಂದ ಠಾಣೆ : ದಿನಾಂಕ: 11/02/2018 ರಂದು ನಾನು ನನ್ನ ಹೆಂಡತಿ ಹೊಲಕ್ಕೆ ಹೋಗಿ ಮರಳಿ ಮನೆಗೆ ಬಂದು ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ನಮ್ಮ ಮಗ ಶಶಿಧರ ಇತನು ಆಟ ಆಡುತ್ತಾ ನಮ್ಮ ಮನೆ ಮುಂದಿನ ಚಾವಡಿ ಕಟ್ಟಿಯ ಹತ್ತಿರ ರೋಡಿನ ಪಕ್ಕದಲ್ಲಿ ಆಟವಾಡುತ್ತಿದ್ದಾಗ ರುದ್ರವಾಡಿ ಗ್ರಾಮದ ವಿಜಯಕುಮಾರ ತಂದೆ ಶಿವರುದ್ರಪ್ಪಾ ಹತ್ತರಕಿ ಇತನು ಗ್ರಾಮದ ಶಾಲೆಯ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಬಂದು ನಮ್ಮ ಮಗನಿಗೆ ಡಿಕ್ಕಿಪಡಿಸಿದರಿಂದ ನಮ್ಮ ಮಗು ಮೂರ್ಛೆ ಹೋಗಿ ಬಿದ್ದಾಗ ನಾನು ಮತ್ತು ನನ್ನ ಹೆಂಡತಿ ಗಾಬರಿ ಬಿದ್ದು ಹೋಗಿ ನೋಡಿ ನಮ್ಮ ಮಗುವನ್ನು ಅದೇ ಜೀಪಿನಲ್ಲಿ ಹಾಕಿಕೊಂಡು ಸರ್ಕಾರಿ ಆಸ್ಪತ್ರೆ ಆಳಂದಕ್ಕೆ ತಂದಾಗ ಅಲ್ಲಿನ ವೈದ್ಯಾಧಿಕಾರಿಗಳು ಮಗು ಮೃತಪಟ್ಟಿದೆ ಎಂದು ತಿಳಿಸಿರುತ್ತಾರೆ. ನನ್ನ ಮಗನಿಗೆ ಡಿಕ್ಕಿಪಡಿಸಿ ಭಾರಿ ಘಾಯ ಹೊಂದಿ ಮರಣ ಹೊಂದಲು ಕಾರಣನಾದ ಜೀಪ್ ನಂಬರ್ MH:12 CK-4470 ನೇದ್ದರ ಚಾಲಕ ವಿಜಯಕುಮಾರ ಹತ್ತರಕಿ ಇತನ ಮೇಲೆ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಶ್ರೀ.ರಾಜಶೇಖರ ತಂದೆ ಮಲ್ಲೇಶಪ್ಪಾ ಜಮಾದಾರ ಸಾ|| ಜಮಗಾ(ಆರ್) ತಾ|| ಆಳಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಂಚೋಳಿ ಠಾಣೆ : ಶ್ರೀ ರಾಜೇಂದ್ರ ತಂದೆ ಅಮೃತ ಹಸುರಗುಂಡಗಿ ಸಾ || ಚಿಮ್ಮಚೋಡ ತಾ|| ಚಿಂಚೋಳಿಜಿ|| ಕಲಬುರ್ಗಿ ರವರ  ತಂದೆಯಾದ ಅಮೃತ ತಂದೆ ಯಲ್ಲಪ್ಪಾ ಹಸರಗುಂಡಗಿ ಸಾ|| ಚಿಮ್ಮನಚೋಡ ಆಗಿದ್ದು; ನನ್ನ ತಂದೆಯವರು ಇಂದು ಮದ್ಯಾನ್ಹ ಮನೆಯಿಂದ ಹೊರಗಡೆ ಹೋಗುತ್ತಿರುವಾಗ ಅವರ ಹಿಂದೆ ಬಂದ ಟ್ರ್ಯಾಕ್ಟರ ನಂ. ಕೆ..ಎ- 32 ಟಿ.ಬಿ- 3103 ನ ಟ್ರ್ಯಾಕ್ಟರ ಹಿಂದುಗಡೆಯಿಂದ ಬಂದು ನನ್ನ ತಂದೆಯವರಿಗೆ ಗುದ್ದಿದಾಗ ನನ್ನ ತಂದೆಯವರ ಎರಡು ಕಾಲುಗಳು ಪುಡಿಯಾಗಿದ್ದವು. ಇದನ್ನೂ ಕಂಡ ನನ್ನ ಓಣಿಯ ಜನರು ನನ್ನ ತಂದೆಯವರನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋದರು. ಕಲಬುರ್ಗಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮದ್ಯದಲ್ಲಿ ನನ್ನ ತಂದೆಯವರು ಸಾವನ್ನಪ್ಪಿರುತ್ತಾರೆ. ಅಪಘಾತಮಾಡಿದ ಟ್ರ್ಯಾಕ್ಟರನ ಚಾಲಕನು ಅಪಘಾತವಾದ ತಕ್ಷಣ ಓಡಿ ಹೋಗಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಪೂರ್ಣಿಮಾ ಗಂಡ ಶಿವಾನಂದ ಸಿನ್ನೂರ ಸಾ : ಕೆ.ಎಚ್.ಬಿ ಅಕ್ಕಮಾಹಾದೇವಿ ಕಾಲನಿ ಕಲಬುರಗಿ ರವರಿಗೆ 2016 ನೇ ಸಾಲಿನಲ್ಲಿ ಕೆ.ಹೆಚ.ಬಿ. ಅಕ್ಕ ಮಾಹಾದೇವಿ ಕಾಲನಿಯಲ್ಲಿ ವಾಸವಾಗಿರುವ ಶಿವಾನಂದ ತಂದೆ ಸಿದ್ಧಣ್ಣಾ ಸಿನ್ನೂರ ಇವರೊಂದಿಗೆ ಲಗ್ನದ ವಿಷಯ ಮಾತುಕತೆ ಆಡುವ ಕಾಲಕ್ಕೆ ನಮ್ಮ ತಂದೆ ಬಸವರಾಜ. ತಾಯಿ ಮಲ್ಲಮ್ಮಾ ಹಾಗೂ ನಮ್ಮ ಹಿರಿಯರಾದ ಹಿರಗಪ್ಪ ಚಂಡರಕಿ, ರಾಣಪ್ಪ ಓಗೆ, ಶಾಂತಮಲ್ಲಪ್ಪ ಶಿವಕೇರಿ  ಅವರೆಲ್ಲರೂ ಸೇರಿಕೊಂಡು ಹುಡುಗನ ಕಡೆಯವರಾದ ರಾಮಚಂದ್ರ ಎಲ್ಲರೂ ಮಾತುಕತೆ ಆಡುವಾಗ  ಹುಡುಗ ಮತ್ತು ಅವರ ತಾಯಿ, ತಮ್ಮ ಹಾಗೂ ತಂಗಿ ಇವರೆಲ್ಲರು ಕೂಡಿ ವರದಕ್ಷಿಣೆ ರೂಪದಲ್ಲಿ ಬೇಡಿಕೆಯಂತೆ ಲಗ್ನ ಕಾಲಕ್ಕೆ ಒಟ್ಟು ಎರಡು ಲಕ್ಷ  ನಗದು ಹಣ, ಐದು ತೊಲಿ ಬಂಗಾರ, ಒಂದು ಮೋಟಾರ ಸೈಕಲ ಬದಲಾಗಿ 55000/- ರೂ. ಅಲ್ಲದೇ ಹಾಂಡೆ ಬಾಂಡೆ ಮತ್ತು ಎಲ್ಲಾ ಸಾಮಾನುಗಳನ್ನು ಕೊಡುವ ಮಾತುಕತೆ ಆಡಿ, ಇದರಲ್ಲಿ 01 ಲಕ್ಷ ರೂ.ಯನ್ನು  ಮುಂದಿನ ಒಂದು ವರ್ಷದೊಳೆಗೆ ಕೊಡುವ ಮಾತುಕತೆ ಆಡಿ ಲಗ್ನ ನಿಶ್ಚಯ ಮಾಡಿ ದಿನಾಂಕ 05/12/2016 ರಂದು ಎಂ.ಎಸ್.ಕೆ.ಮಿಲ್ಲ ಹತ್ತಿರ ಇರುವ ಮೂನಸ್ಟಾರ ಫಂಕ್ಷನ ಹಾಲದಲ್ಲಿ  ಮಾತನಾಡಿದ ಈ ಮೇಲಿನ ಎಲ್ಲಾ ವಸ್ತುಗಳನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟು  ನಮ್ಮ ಹಿಂದು ಸಂಪ್ರದಾಯದಂತೆ ಲಗ್ನವನ್ನು ಸುಮಾರು 06 ಲಕ್ಷ ರೂ. ಖರ್ಚು ಮಾಡಿ ನಮ್ಮ ತಂದೆ, ತಾಯಿಯವರು ಲಗ್ನ ಮಾಡಿಕೊಟ್ಟಿರುತ್ತಾರೆ. ಮದುವೆಯಾದ ನಂತರ ನಾನು ಗಂಡನ ಮನೆಗೆ ನಡೆಯಲು ಕೆ.ಹೆಚ.ಬಿ. ಕಾಲನಿಗೆ ಹೋದಾಗ ಗಂಡ ಶಿವಾನಂದ, ಅತ್ತೆ ನಾಗಮ್ಮಾ, ಮೈದನ ಆನಂದ, ನಾದಿನಿ ಶಿಲ್ಪಾ ಇವರೆಲ್ಲರೂ 08 ದಿವಸಗಳ ವರೆಗೆ ನನಗೆ ಚನ್ನಾಗಿ ನೋಡಿಕೊಂಡು ಮುಂದೆ ಇವರೆಲ್ಲರೂ ಕೂಡಿಕೊಂಡು ನಿಮ್ಮ ತಂದೆ, ತಾಯಿಯವರು  ಮದುವೆ ಕಾಲಕ್ಕೆ ಮಾತಾಡಿದಂತೆ ಉಳಿದ ಬಾಕಿ ಒಂದು ಲಕ್ಷ ರೂ. ವರದಕ್ಷಿಣೆ ಸೇರಿಸಿ ಒಟ್ಟು 10 ಲಕ್ಷ ರೂ. ತೆಗೆದುಕೊಂಡು ಬಾ ಅಂತಾ ದಿನಾಲೂ ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ತೊಂದರೆ ಕೊಡುತ್ತಾ ಬಂದಿರುತ್ತಾರೆ. ಅಲ್ಲದೇ ದಿನಾಂಕ 16/05/17 ರಂದು ರಾತ್ರಿ 10-00 ಗಂಟೆಯಿಂದ ದಿನಾಂಕ 14/11/17 ರ ವರೆಗೆ ವರದಕ್ಷಿಣೆ ತೆಗೆದುಕೊಂಡು ಬಾ ಕಿರುಕುಳ ಕೊಡುತ್ತಿದ್ದು, ಈ ಬಗ್ಗೆ ರಾಜಿ ಪಂಚಾಯತಿ ಜೂನ್ 2017 ನೇ ತಿಂಗಳಲ್ಲಿ ಮತ್ತು ದಿನಾಂಕ 20/01/18 ರಂದು ಘಾಟಗೆ ಲೇಔಟದಲ್ಲಿ ಮಾಡಿದಾಗ ಆರೋಪಿತರು ಫಿರ್ಯಾದಿದಾರಳಿಗೆ ವರದಕ್ಷಿಣೆ ತರದೇ ಇದ್ದರೆ ಮನೆಗೆ ಕರೆದುಕೊಳ್ಳುವುದಿಲ್ಲಾ ಎಂದು ಹೇಳಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಸೇಡಂ ಠಾಣೆ  : ಶ್ರೀ ದೇವಿಂದ್ರಮ್ಮ ಗಂಡ ಶೇಖಪ್ಪ ನಿಂಗಪ್ಪೋರ ಸಾ : ಹಂದರಕಿ ತಾ : ಸೇಡಂ ರವರ ಮಗಳಾದ ಚನ್ನಮ್ಮ ತಂದೆ ಶೇಖಪ್ಪ  ಇವಳು ದಿನಾಂಕ 10-02-2018 ರಂದು ಋತುಮತಿ ಆದಾಗ ಹೊಟ್ಟೆ ಬೇನೆ ಆಗಿದ್ದರಿಂದ ಹೊಟ್ಟೆ ಬೇನೆ ತಾಳಲಾರದೆ ಮನೆಯಲ್ಲಿದ್ದ ಹತ್ತಿಬೆಳೆಗೆ ಹೊಡೆಯುವ ಎಣ್ಣೆ ಕುಡಿದು ವಾಂತಿ ಮಾಡಿಕೊಳ್ಳುತ್ತಿರುವಾಗ ನಾನು ನೋಡಿ ಮಗಳನ್ನು ಸರಕಾರಿ ಆಸ್ಪತ್ರೆ ಸೇಡಂಗೆ ತಂದು ಉಪಚಾರ ಕುರಿತು ತೋರಿಸಿದ್ದು ಹೆಚ್ಚಿನ ಉಪಚಾರ ಕುರಿತು ಕಲಬುರಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮದ್ಯದಲ್ಲಿ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.