ದಿನಾಂಕ: 04-04-2015 ದು ರಾತ್ರಿ ತುರ್ವಿಹಾಳ್ ಬಸ್ ನಿಲ್ದಾಣದಲ್ಲಿ ಇರುವ ಕಾವ್ಯ ಮೊಬೈಲ್ ಅಂಗಡಿಯ ಬಾಗಿಲಿನ ಬೀಗ ಮುರಿದು ಯಾರೋ ಕಳ್ಳರು ಅಂಗಡಿಯಲ್ಲಿದ್ದ 17 ಮೊಬೈಲಗಳು ಅ.ಕಿ.ರೂ.23500/- ಬೆಲಬಾಳುವವುಗಳನ್ನು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಬಗ್ಗೆ ತುರ್ವಿಹಾಳ್ ಠಾಣಾ ಗುನ್ನೆ ನಂ.35/2015,ಕಲಂ. 457, 380 ಐಪಿಸಿ ಪ್ರಕರಣ ದಾಖಲಾಗಿತ್ತು . ಈ ಬಗ್ಗೆ ನನ್ನ ಹಾಗೂ ಶ್ರೀ ಪಾಪಯ್ಯ ಮಾನ್ಯ ಹೆಚ್ಚುವರಿ ಎಸ್.ಪಿ ರಾಯಚೂರು, ಶ್ರೀ ಎಮ್.ವಿ ಸೂರ್ಯವಂಶಿ ಮಾನ್ಯ ಡಿ.ಎಸ್.ಪಿ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಮತ್ತು ಶ್ರೀ ರಮೇಶ್ ಎಸ್.ರೊಟ್ಟಿ ಸಿಪಿಐ ಸಿಂಧನೂರು ಇವರ ನೇತೃತ್ವದಲ್ಲಿ ಶ್ರೀ ತಿಮ್ಮಣ್ಣ ಚಾಮನೂರು ಮತ್ತು ಶ್ರೀ ಎಸ್.ಎಮ್ ಪಾಟೀಲ್ , ಶ್ರೀ ಬಾಳನಗೌಡ. ಪಿ ಎಸ್ ಐ ರವರನ್ನೊಳಗೊಂಡ ಮೂರು ತಂಡಗಳನ್ನು ರಚಿಸಿ ಸಿಬ್ಬಂದಿವಯರಾದ ಶೇಟೆಪ್ಪ ಪಿಸಿ-353,ಗಂಗಪ್ಪ ಪಿಸಿ-478, ರಾಘವೇಂದ್ರ ಪಿಸಿ-113, ಮಲ್ಲಿಕಾರ್ಜುನ ಪಿಸಿ-681, ಬಸವರಾಜ್ ಪಿಸಿ-388, ರಾಜಶೇಖರ ಪಿಸಿ-454
ಹಾಗೂ
ಅಶೋಕ
ಪಿಸಿ-460
ಇವರುಗಳನ್ನು ನೇಮಕ ಮಾಡಲಾಗಿತ್ತು.
ಇಂದು ದಿನಾಂಕ: 09-04-2015 ರಂದು ಬೆಳಿಗ್ಗೆ ಶ್ರೀ ತಿಮ್ಮಣ್ಣ ಚಾಮನೂರು ಪಿ.ಎಸ್.ಐ ತುರ್ವಿಹಾಳ ಠಾಣೆ ಮತ್ತು ಅವರ ಸಿಬ್ಬಂದಿಯವರು ಪ್ರಯತ್ನ ಪೂರ್ವಕವಾಗಿ ಆರೋಪಿತರಾದ 1) ತೋಫಿಕ್ ತಂದೆ ಅಸ್ನುಜಮಾ ವ: 20, ಜಾ: ಮುಸ್ಲಿಂ, ಉ: ಕೂಲಿ, 2) ಜಿಲಾನಿ ತಂದೆ ಅನ್ವರ್ ಸಾಬ್ @ ಖಾಜಾಸಾಬ್ ವ: 19, ಜಾ ಮುಸ್ಲಿಂ: ಉ: ವೆಲ್ಡಿಂಗ್
,3) ಸಲೀಮ್ ತಂದೆ ಅಲ್ಲಾಬಕ್ಷ್ ವ: 20, ಜಾ: ಮುಸ್ಲಿಂ, ಉ: ಪೆಂಟಿಂಗ್ ಕೆಲಸ , 4)ಶರಣಬಸವ ತಂದೆ ನಾಗಪ್ಪ ವ: 20, ಜಾ: ನಾಯಕ್
ಉ:ತರಕಾರಿ ವ್ಯಾಪಾರ ಎಲ್ಲರೂ ಸಾ: ಇಂದಿರನಗರ ಸಿಂಧನೂರು ಇವರುಗಳನ್ನು ಗುಂಜಳ್ಳಿ ಕ್ಯಾಂಪ್ ಸಮೀಪದಲ್ಲಿ ವಶಕ್ಕೆ ತಗೆದುಕೊಂಡು ವಿಚಾರಣೆಗೊಳಪಡಿಸಲಾಗಿ ದಿನಾಂಕ:04-11-2014 ರ ರಾತ್ರಿ 9-30 ಗಂಟೆ ಸುಮಾರು ಸಿಂಧನೂರು ನಗರದ ಆದರ್ಶ ಕಾಲೋನಿಯಲ್ಲಿ ವೆಂಕೋಬಾರಾವ್ ತಂದೆ ವಿಠಲರಾವ್ ಕುಲ್ಕರ್ಣಿ ಇವರು ಕ್ಯಾಶ್ ಬ್ಯಾಗ್ ಹೆಗಲಿಗೆ ಹಾಕಿಕೊಂಡು ಮನೆ ಕಡೆ ಹೊರಟಾಗ ಅವರ ಕ್ಯಾಶ್ ಬ್ಯಾಗ್ ಕಳುವು ಮಾಡಿ ಅದರಲ್ಲಿದ್ದ ರೂ.16000/- ಮತ್ತು ಅದರಲ್ಲಿದ್ದ ಪಿಗ್ಮಿ ಮಿಶನ್ , ಎಟಿಎಮ್ ಕಾರ್ಡ್ ಇತರೆ ವಸ್ತುಗಳನ್ನು ಕಳುವು ಮಾಡಿದ್ದು ಈ ಬಗ್ಗೆ ಸಿಂಧನೂರು ನಗರ ಠಾಣಾ ಗುನ್ನೆ ನಂ.256/2014, ಕಲಂ.379 ಐಪಿಸಿ ದಾಖಲಾಗಿತ್ತು.
ದಿನಾಂಕ: 03-12-2014
ರಂದು ರಾತ್ರಿ ಸಿಂಧನೂರು ನಗರದ ಆದರ್ಶ ಕಾಲೋನಿಯಲ್ಲಿರುವ ಅಂಬಾದೇವಿ ದೇವಸ್ಥಾನದ ಶೆಟರ್ ಕೀಲಿ ಮುರಿದು ಒಳಗೆ ಪ್ರವೇಶಿಸಿ ದೇವರ ಹುಂಡಿಯನ್ನು ತೆಗೆದುಕೊಂಡು ಹೋಗಿ ಅದರಲ್ಲಿದ್ದ ಹಣ ಕಳುವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಶಶಿಕುಮಾರ್ ತಂದೆ ನಾರಾಯಣಸಾ ದಾನಿ ಸಾ: ಮಹೆಬೂಬ್ ಕಾಲೋನಿ ಸಿಂಧನೂರು ಇವರ ಫಿರ್ಯಾದಿ ಮೇಲಿಂದಾ ಸಿಂಧನೂರು ನಗರ ಠಾಣೆಯಲ್ಲಿ ಗುನ್ನೆ ನಂ.281/2014 ಕಲಂ. 457, 380 ಐಪಿಸಿ ದಾಖಲಾಗಿತ್ತು.
ಈ ಮೇಲ್ಕಂಡ ಮೂರು ಕಳುವಿನ ಪ್ರಕರಣಗಳನ್ನು ತಾವೆ ಮಾಡಿದ್ದಾಗಿ ಆರೋಪಿತರು ಒಪ್ಪಿಕೊಂಡು ಕಳುವು ಮಾಡಿದ 17 ಮೊಬೈಲಗಳನ್ನು ಸಹ ಬಚ್ಚಿಟ್ಟಿದ್ದು ತೋರಿಸಿ ಹಾಜರುಪಡಿಸಿರುತ್ತಾರೆ ಅಲ್ಲದೇ ಕಳ್ಳರು ಉಪಯೋಗಿಸುತ್ತಿದ್ದ ಎರಡು ಮೋಟರ್ ಸೈಕಲಗಳು ಸಹ ಕಳುವು ಮಾಡಿ ತಂದಿದ್ದಾಗಿ ತನಿಖೆಯಲ್ಲಿ ತಿಳಿದುಬಂದಿರುತ್ತದೆ. ಈ ಬಗ್ಗೆ ತುರ್ವಿಹಾಳ್ ಠಾಣೆಯಲ್ಲಿ ಗುನ್ನೆ ನಂ.37/2015,ಕಲಂ. 98 ಕೆ.ಪಿ ಕಾಯ್ದೆ ಪ್ರಕರಣ ದಾಖಲಾಗಿರುತ್ತದೆ.
ಮೇಲಿಂದ ಮೇಲೆ ಕಳ್ಳತನ ಪ್ರಕರಣಗಳು ದಾಖಲಾಗುತ್ತಿದ್ದರಿಂದ ಸಿಂಧನೂರು ಮತ್ತು ತುರ್ವಿಹಾಳ ಗ್ರಾಮಸ್ಥರು ಕಳವಳಕ್ಕೊಳಗಾಗಿದ್ದರು ಈ ಎಲ್ಲಾ ಕಳುವಿನ ಪ್ರಕರಣಗಳನ್ನು ಸಿಂಧನೂರು ಮತ್ತು ತುರ್ವಿಹಾಳ ಪೊಲೀಸರು ಬೇಧಿಸಿ ಕಳ್ಳತನ ಮಾಡಿದವರನ್ನು ಹಿಡಿದು ಕಳ್ಳತನದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರಿಂದ ಎಲ್ಲಾ ನಾಗರೀಕರು ಕಳವಳಕಾರಿ ವಾತಾವರಣದಿಂದ ಮುಕ್ತರಾಗಿರುತ್ತಾರೆ . ಸಿಂಧನೂರು ತಾಲ್ಲೂಕಿನ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಈ ಕಾರ್ಯ ಪ್ರಶಂಸನೀಯವಾಗಿರುತ್ತದೆ.