Police Bhavan Kalaburagi

Police Bhavan Kalaburagi

Thursday, June 18, 2020

BIDAR DISTRICT DAILY CRIME UPDATE 18-06-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 18-06-2020

ಮಹಿಳಾ ಪೊಲೀಸ ಠಾಣೆ ಬೀದರ ಅಪರಾಧ ಸಂ. 23/2020, ಕಲಂ. 317 ಐಪಿಸಿ :-
ದಿನಾಂಕ 13-06-2020 ರಂದು ಫಿರ್ಯಾದಿ ಸುರೇಖಾ ಗಂಡ ಪ್ರದೀಪಕುಮಾರ ವಯ: 31 ವರ್ಷ, : ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ಆಪ್ತ ಸಮಾಲೋಚರು, ಜಾತಿ: ಸ್ವಾಮಿ, ಸಾ: ಬಸವಕಲ್ಯಾಣ, ಸದ್ಯ: ಕೈಲಾಶ ನಗರ ಗುಂಪಾ ಬೀದರ ರವರು ಹೊನ್ನಿಕೇರಿ ದೇವಸ್ಥಾನಕ್ಕೆ ಹೋಗಿ ಬರುವಾಗ ಲಾಲಬಾಗ ಹತ್ತಿರ ಒಬ್ಬ ಹುಡುಗನು 4 ವರ್ಷದ ಚಿಕ್ಕ ಮಗುವಿನೊಂದಿಗೆ ನಿಂತಿದ್ದು ಮಗು ಅಳುತ್ತಾ ಇದ್ದು, ಆತನಿಗೆ ವಿಚಾರಿಸಲಾಗಿ ಮಗು ತನ್ನ ತಂದೆ, ತಾಯಿಯ ಹೆಸರು ಹೇಳುತಿಲ್ಲ ಯಾರ ಮಗು ಇದೆಯೋ, ಯಾರು ಬಿಟ್ಟು ಹೋಗಿರುತ್ತಾರೋ ಅಥವಾ ದಾರಿ ತಪ್ಪಿ ಬಂದಿರುತ್ತಯೋ ಅಂತ ತಿಳಿಸಿರುತ್ತಾನೆ, ಆಗ ಫಿರ್ಯಾದಿಯು ಸದರಿ ಮಗುವಿನ ಹೆಸರು ವಿಚಾರಿಸಲಾಗಿ ಮಗು ತನ್ನ ಹೆಸರು ಆಯೇಶಾ ತಂದೆ ರಸೂಲ್ ಅಂತ ತಿಳಿಸಿದ್ದು, ನಂತರ ಸದರಿ ಹುಡುಗನ ಹೆಸರು ವಿಚಾರಿಸಲಾಗಿ ಆತನು ತನ್ನ ಹೆಸರು ಶೇಖರ ತಂದೆ ಬಾಬುರಾವ ಕುದರೆ ವಯ: 27 ವರ್ಷ, ಸಾ: ಸಿದ್ದೇಶ್ವರ ಅಂತ ತಿಳಿಸಿರುತ್ತಾನೆ, ಮಗುವಿನ ತಂದೆ, ತಾಯಿಯವರು ಯಾರು ಎಲ್ಲಿ ಇರುತ್ತಾರೆ ಎಂಬುವದರ ಬಗ್ಗೆ ಯಾವುದೆ ಮಾಹಿತಿ ಸಿಕ್ಕಿರುವದಿಲ್ಲ, ನಂತರ ಮಗುವಿಗೆ ಮಾತನಾಡಿಸಿದಾಗ ಮಗು ನಮ್ಮ ತಂದೆ, ತಾಯಿಯ ಊರು ಚಾಂಡೇಶ್ವರ ಎಂದು ತಿಳಿಸಿದ ಬಳಿಕ ಆತನ ಸಹಾಯದಿಂದಲೆ ಫಿರ್ಯಾದಿಯು ಮಗುವಿನ ಜೊತೆಯಲ್ಲಿ ಠಾಣೆಗೆ ಬಂದು ಮಾಹಿತಿ ತಿಳಿಸಿದ್ದು, ಮಗುವಿನ ಪಾಲಕರ/ಪೊಷಕರ ಪತ್ತೆ ಆಗಬಹುದೆಂದು ಮಗುವಿನ ಪಾಲಕರ ಪತ್ತೆ ಆಗುವವರೆಗೆ ಮಗುವಿನ ಪೋಷಣೆ ರಕ್ಷಣೆಗಾಗಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ದತ್ತು ಕೇಂದ್ರ ಕಡ್ಯಾಳ ತಾ: ಭಾಲ್ಕಿ ರವರಲ್ಲಿ ಇಡಲಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಸಾರಾಂಶದ ಮೇರೆಗೆ ದಿನಾಂಕ 17-06-2020 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 79/2020, ಕಲಂ. 3 & 7 .ಸಿ ಕಾಯ್ದೆ :- 
ದಿನಾಂಕ 17-06-2020 ರಂದು ಹುಮನಾಬಾದ ಕಡೆಯಿಂದ ಒಂದು ಅಶೋಕ ಲೇಲ್ಯಾಂಡ್ ಲಾರಿ ನಂ. ಕೆ.-56/3682 ನೇದರಲ್ಲಿ ಅನಧೀಕೃತವಾಗಿ ಪಿ.ಡಿ.ಎಸ್ ಅಕ್ಕಿವುಳ್ಳ ಚೀಲಗಳನ್ನು ಲೋಡ ಮಾಡಿಕೊಂಡು ಮಹಾರಾಷ್ಟ್ರ ರಾಜ್ಯದ ಗೊಂದಿಯಾ (ಎಂ.ಎಸ್) ಪಟ್ಟಣಕ್ಕೆ ಸಾಗಾಟ ಮಾಡುತ್ತಿದ್ದಾರೆಂದು ಫಿರ್ಯಾದಿ ನೀಲಮ್ಮಾ ಗಂಡ ಅಣ್ಣೇಪ್ಪಾ ಗಾಯಕವಾಡ ಆಹಾರ ಸಿರಸ್ತೆದಾರರು ತಹಸೀಲ್ ಕಛೇರಿ ಬಸವಕಲ್ಯಾಣ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಫಿರ್ಯಾದಿಯವರು ಆಹಾರ ನಿರೀಕ್ಷಕರಾದ ರಾಮರತನ ದೇಗಲೆ ತಹಸೀಲ್ ಕಛೇರಿ ಬಸವಕಲ್ಯಾಣ ಇಬ್ಬರು ಕೂಡಿಕೊಂಡು ಪೊಲೀಸರ ಸಹಾಯ ಕುರಿತು ಬಸವಕಲ್ಯಾಣ ನಗರ ಪೊಲೀಸ್ ಠಾಣೆಗೆ ಬಂದು ಪೊಲೀಸ್ ಠಾಣೆಯಲ್ಲಿ ಇಬ್ಬರು ಸಿಬ್ಬಂದಿ ಹಾಗೂ ಇಬ್ಬರು ಪಂಚರನ್ನು ಬರಮಾಡಿಕೊಂಡು ಒಂದು ಖಾಸಗಿ ವಾಹನದಲ್ಲಿ ಎಲ್ಲರೂ ಬಸವಕಲ್ಯಾಣ ನಗರದ ಗಾಂಧಿ ಚೌಕದಿಂದ ಹೊರಟು ಬಸವಕಲ್ಯಾಣ ವ್ಯಾಪ್ತಿಯಲ್ಲಿ ಬರುವ ಮುಡಬಿ ಕ್ರಾಸ ಹತ್ತಿರ ರಸ್ತೆಯ ಬದಿಯಲ್ಲಿ ನಿಂತಿರುವಾಗ ಹುಮನಾಬಾದ ಕಡೆಯಿಂದ ಅಶೋಕ ಲೇಲ್ಯಾಂಡ ಲಾರಿ ನಂ. ಕೆಎ-56/3682 ನೇದರ ಚಾಲಕನಾದ ಆರೋಪಿ ಅವಿನಾಶ ತಂದೆ ವಿಲಾಸ ಧೂಳೆ ವಯ: 26 ವರ್ಷ, ಜಾತಿ: ಎಸ್.ಸಿ ದಲಿತ, ಸಾ: ತಡೋಳಾ, ತಾ: ಬಸವಕಲ್ಯಾಣ ಇತನು ಚಲಾಯಿಸಿಕೊಂಡು ಬರುವಾಗ ಕೈ ಸನ್ನೆ ಮಾಡಿ ಲಾರಿ ನಿಲ್ಲಿಸಿದಾಗ ಫಿರ್ಯಾದಿಯು ಲಾರಿ ಚಾಲಕನಿಗೆ ಲಾರಿಯಲ್ಲಿ ಏನಿದೆ? ಎಂದು ವಿಚಾರಿಸಿದಾಗ ಅವನು ಅಕ್ಕಿ ತುಂಬಿದ ಚೀಲಗಳ ಲೋಡ ಇದೆ ಎಂದು ತಿಳಿಸಿದಾಗ ಸದರಿ ಲೋಡಿಗೆ ಸಂಬಂಧಿಸಿದ ದಾಖಲಾತಿಳನ್ನು ಹಾಜರಪಡಿಸಲು ಸೂಚಿಸಿದಾಗ ಚಾಲಕ ದಾಖಲಾತಿಗಳನ್ನು ಹಾಜರ ಪಡಿಸಿದ್ದು ಸೂಕ್ತ ದಾಖಲೆಗಳು ಇರಲಿಲ್ಲ, ಲಾರಿಯಲ್ಲಿದ್ದ ಅಕ್ಕಿ ಲೋಡ ಪಂಚರ ಸಮಕ್ಷಮ ಪರಿಶೀಲಿಸಿ ನೋಡಲು ಅಂದಾಜು 50 ಕೆ.ಜಿ ತೂಕದ ಒಟ್ಟು 500 ಪ್ಲಾಸ್ಟಿಕ್ ಚೀಲಗಳು ಇದ್ದು, ಅಕ್ಕಿ ಪರೀಶಿಲಿಸಿ ನೋಡಲು ಪಿ.ಡಿ.ಎಸ್ ಅಕ್ಕಿಗೆ ಹೋಲುವ ಅಕ್ಕಿ ಇರುವುದರಿಂದ ಒಟ್ಟು 7,50,000/- ರೂ. ಬೆಲೆಯ ಅಕ್ಕಿ ಲೋಡ್ ಮತ್ತು 12 ಲಕ್ಷ ಬೆಲೆಯ ಲಾರಿ ಜಪ್ತಿ ಮಾಡಿಕೊಂಡು ಸದರಿ ಲಾರಿ ಚಾಲಕನಿಗೆ ಸದರಿ ಅಕ್ಕಿ ಲೋಡ್ ಯಾರಿಗೆ ಸಂಬಂಧಿಸಿದ್ದು ಎಂದು ವಿಚಾರಿಸಿದಾಗ ಅವನು ಗುರುಮಿಠಕಲ ಮಣಿಕಂಠ ರಾಠೋಡ ರವರಿಗೆ ಸಂಬಂಧಿಸಿದ್ದು ಎಂದು ತಿಳಿಸಿದನು, ಕಾರಣ ಅನಧೀಕೃತವಾಗಿ ಪಿ.ಡಿ.ಎಸ್ ಅಕ್ಕಿಗೆ ಹೋಲುವ ಅಕ್ಕಿ ಸಾಗಾಟ ಮಾಡುತ್ತಿದ್ದ ಆರೋಪಿ ಅವಿನಾಶ ತಂದೆ ವಿಲಾಸ ಧೂಳೆ ವಯ: 26 ವರ್ಷ, ಸಾ: ತಡೋಳಾ ಮತ್ತು ಮಣಿಕಂಠ ರಾಠೋಡ ಇವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.